Police Bhavan Kalaburagi

Police Bhavan Kalaburagi

Wednesday, March 17, 2021

BIDAR DISTRICT DAILY CRIME UPDATE 17-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-03-2021

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. 279, 337, 304(ಎ) ಐಪಿಸಿ :-

ದಿನಾಂಕ 16-03-2021 ರಂದು ಫಿರ್ಯಾದಿ ಶೌಕತ ಅಲಿ ತಂದೆ ಶೇಖ ಅಹೆಮದ ಪಿಂಜಾರ ವಯ: 43 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನಳ್ಳಿ ಗ್ರಾಮ ರವರು ಮನ್ನಳ್ಳಿಯಿಂದ ಕೆಂಪು ರೆಜಾ ಕಲ್ಲು ತುಂಬಿದ ಟ್ರಾಕ್ಟರ ನಂ. ಎಪಿ-24/ಡಬ್ಲು-5839 ನೇದನ್ನು ರಾಜಕುಮಾರ ಇತನು ಚಲಾಯಿಸುತ್ತಿದ್ದು ಟ್ರಾಲಿಯಲ್ಲಿ ಫಿರ್ಯಾದಿಯು ಹಿಂದೆ ಕುಳಿತಿದ್ದು ಇರುತ್ತದೆ, ಗೌಸ ಈತನು ಸದರಿ ಟ್ರಾಕ್ಟರ ಹಿಂದೆ ಮೊಟಾರ ಸೈಕಲ ಮೇಲೆ ಬರುತ್ತಿದ್ದು, ಟ್ರಾಕ್ಟರ ಚೀಂತಲಗೇರಾ - ಬರೂರ ರೋಡಿನ ಮೇಲೆ ವೆಂಕಟರೆಡ್ಡಿ ಬಾಗಾ ಇವರ ಹೋಲದ ಹತ್ತಿರ ಬಂದಾಗ ಟ್ರಾಕ್ಟರ ಇಂಜಿನಿನ ಮುಂದಿನ ಚಕ್ರ ಒಮ್ಮೆಲೆ ಪಂಕ್ಚರ ಆಗಿದ್ದು ಮುಂದೆ ರೋಡ ಇಳಿಜಾರು ಇದ್ದು ರಾಜಕುಮಾರ ಇವನು ಚಲಾಯಿಸುತಿದ್ದ ಟ್ರಾಕ್ಟರ ಒಮ್ಮೇಲೆ ನಿಯಂತ್ರಣ ಕಳೆದುಕೊಂಡು ರೋಡಿನ ಮೇಲೆ ಅಡ್ಡಾ ದಿಡ್ಡಿ ಚಲಾಯಿಸಿ ಒಮ್ಮ್ಮೆಲೆ ಬಲ ರೋಡಿನ ಕಡೆ ಎಳೆದುಕೊಂಡು ಹೋಗಿ ಪಲ್ಟಿ ಮಾಡಿರುತ್ತಾನೆ, ನಂತರ ಫಿರ್ಯಾದಿ ಮತ್ತು ರಾಜಕುಮಾರ ಕೇಳಗೆ ಬಿದಿದ್ದು ಫಿರ್ಯಾದಿಯ ಬಲಗೈಗೆ ಮತ್ತು ಬಲಗಾಲಿಗೆ ಗಾಯವಾಗಿರುತ್ತದೆ ಮತ್ತು ರಾಜಕುಮಾರ ಇವನಿಗೆ ಬಲ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಬಲಣ್ಣಿನ ಹತ್ತಿರ ಸಿಳಿ ಭಾರಿ ರಕ್ತಗಾಯವಾಗಿರುತ್ತದೆ, ಅಷ್ಟರಲ್ಲಿ ಹಿಂದೆ ಬರುತ್ತಿದ್ದ ಗೌಸ ಇವನು 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ರಾಜಕುಮಾರ ಇವನಿಗೆ ಪರಿಕ್ಷೆ ಮಾಡಿ ನೋಡಲು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 29/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 16-03-2021 ರಂದು ಹಳ್ಳಿಖೇಡ (ಬಿ) ಪೊಲೀಸ ಠಾಣೆಯ ವ್ಯಾಪ್ತಿಯ ಹಳ್ಳಿಖೇಡ[ಬಿ] ಪಟ್ಟಣದ ಶಿವಾರ ಶಂಕರ ತಂದೆ ಬಸವಣಪ್ಪಾ ಸಜ್ಜನಶೆಟ್ಟಿ ಸಾ-ಹಳ್ಳಿಖೇಡ[ಬಿ] ರವರ ಹೊಲದ ಹತ್ತಿರ ಖುಲ್ಲಾ ಜಾಗದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಫಿರ್ಯಾದಿ ನಿಂಗಪ್ಪಾ ಮಣ್ಣೂರ ಪಿ.ಎಸ್.(ಕಾಸು) ಹಳ್ಳಿಖೇಡ(ಬಿ) ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳ್ಳಿಖೇಡ (ಬಿ) ಶಿವಾರ ಶಂಕರ ಸಜ್ಜನಶೆಟ್ಟಿ ರವರ ಹೊಲದ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಶಂಕರ ಸಜ್ಜನಶೆಟ್ಟಿ ರವರ ಹೊಲದ ಹತ್ತಿರ ಖುಲ್ಲಾ ಜಾಗದಲ್ಲಿ ಆರೋಪಿತರಾದ 1) ಗೋಪಾಲ ತಂದೆ ಮಾಣಿಕಪ್ಪಾ ಆಣದೂರೆ ವಯ: 38 ವರ್ಷ, ಜಾತಿ: ರಡ್ಡಿ, ಸಾ: ಸಿಂದಬಂದಗಿ, 2) ಎಮ್.ಡಿ ರಿಯಾಜ ತಂದೆ ಖಾಸೀಮ ಸಾಬ ಭಾಗವಾನ ವಯ: 42 ವರ್ಷ, ಜಾತಿ: ಮುಸ್ಲಿಂ, 3) ಎಮ್.ಡಿ ಸಿದ್ದಿಕ ತಂದೆ ಮಸ್ತಾನಸಾಬ ಉಸ್ತಾದ ವಯ: 62 ವರ್ಷ, ಜಾತಿ: ಮುಸ್ಲಿಂ, 4) ಶರಣಪ್ಪಾ ತಂದೆ ಬೀರಪ್ಪಾ ಜೈನಾಪುರೆ ವಯ: 54 ವರ್ಷ, ಜಾತಿ: ಲಿಂಗಾಯತ, ಸಾ: ಹಾಗೂ 5) ಸಿದ್ದಿಕಮೀಯಾ ತಂದೆ ಹುಸೇನಸಾಬ ಬೇಳಕೇರಿ ವಯ: 59 ವರ್ಷ, ಜಾತಿ: ಮುಸ್ಲಿಂ, 3 ಜನ ಎಲ್ಲರೂ ಸಾ: ಹಳ್ಳಿಖೇಡ[ಬಿ] ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಸ್ಪಿಟ್ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಜೂಜಾಟಕ್ಕೆ ಸಂಬಂಧಪಟ್ಟ ಒಟ್ಟು 5040/- ರೂ. ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 33/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 16-03-2021 ರಂದು ಬಸವಕಲ್ಯಾಣ ನಗರದ ಹರಳಯ್ಯಾ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಜಿ.ಎಮ್.ಪಾಟೀಲ್ ಪಿಎಸ್ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಹರಳಯ್ಯಾ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಹರಳಯ್ಯಾ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಲಕ್ಷ್ಮಣ @ ಚಿನ್ನು ತಂದೆ ಮಾಣಿಕ ಗೋಣೆ ವಯ: 32 ವರ್ಷ, ಜಾತಿ: ಕಬ್ಬಲಿಗ, ಸಾ: ಕೌಡಿಯಾಳ[ಎಸ್], ತಾ: ಬಸವಕಲ್ಯಾಣ ಹಾಗೂ 2) ಮೋಹನ @ಪಿಂಟು ತಂದೆ ಮಧುಕರ ಸೂರ್ಯವಂಶಿ ವಯ: 24 ವರ್ಷ, ಜಾತಿ: ಸಮಗಾರ, ಸಾ: ತ್ರಿಪುರಾಂತ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಮ್ಮೆಲೆ ದಾಳಿ ಮಾಡಿ ಆರೋಪಿ ಲಕ್ಷ್ಮಣ ಇತನಿಗೆ ಹಿಡಿದಾಗ ಆರೋಪಿ ಮೋಹನ ಇತನು ಪೊಲೀಸರ ಕಣ್ಣು ತಪ್ಪಿಸಿ ಡಿ ಹೋಗಿರುತ್ತಾನೆ, ನಂತರ ಸದರಿ ಲಕ್ಷ್ಣ ಇತನಿಂದ 1) ನಗದು ಹಣ 2250/- ರೂ., ಮತ್ತು 2) 02 ಮಟಕಾ ಚೀಟಿ ಹಾಗು 3) ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 50/2021, ಕಲಂ. 20(ಬಿ) ಎನ್.ಡಿ.ಪಿ.ಎಸ್ ಕಾಯ್ದೆ :-

ದಿನಾಂಕ 16-03-2021 ರಂದು ಹುಮನಾಬಾದ ಬಸ ನಿಲ್ದಾಣ ಗೇಟ ನಂ. 1 ಹತ್ತಿರ ಇರುವ ಬಾಳೆ ಹಣ್ಣಿನ ಅಂಗಡಿ ಹತ್ತಿರ ಒಬ್ಬ ವ್ಯಕ್ತಿ ಕ್ರಮವಾಗಿ ಒಂದು ಬಿಳಿ ಚೀಲದಲ್ಲಿ ಗಾಂಜಾ ತೆಗೆದುಕೊಂಡು ನಿಂತಿರುತ್ತಾನೆ ಅಂತಾ ರವಿಕುಮಾರ ಪಿಎಸಐ ಹುಮನಾಬಾದ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು, ಗೇಜೇಟೆಡ ಅಧಿಕಾರಿ ಹಾಗೂ ತಹಸೀಲ್ದಾರರು ಹಾಗೂ ತೂಕ ಮಾಡುವ ವ್ಯಕ್ತಿ ರವರಿಗೆ ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹುಮನಾಬಾದ ಬಸ ನಿಲ್ದಾಣದ ಗೇಟ ನಂ. 2 ನೇದರ ಹತ್ತಿರ ಹೋಗಿ ಗೇಟ ನಂ. 1 ಕಡೆಗೆ ಹೋಗಿ ನೋಡಲು ಹುಮನಾಬಾದ ಬಸ ನಿಲ್ದಾಣದ ಗೇಟ ನಂ. 1 ಹತ್ತಿರ ಇರುವ ಒಂದು ಬಾಳೆ ಹಣ್ಣಿನ ಬಂಡಿಯ ಹತ್ತಿರ ಆರೋಪಿ ಶರೀಫ್ ತಂದೆ ಯುಸುಫಮಿಯ್ಯಾ ನಾಂದೇಡಿ, ವಯ: 37 ವರ್ಷ, ಜಾತಿ: ಮುಸ್ಲಿಂ, ಸಾ: ಘೊಡವಾಡಿ ಇತನು ಒಂದು ಬಿಳಿ ಬಣ್ಣದ ಕೈಚೀಲ ಹಿಡಿದುಕೊಂಡು ನಿಂತಿದ್ದು ಅವನ ಹತ್ತಿರ ಚೀಲದಲ್ಲಿ ಗಾಂಜಾ ಇರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರವಿದ್ದ ಒಂದು ಬಿಳಿ ಬಣ್ಣದ ಬ್ಯಾಗ ಚೇಕ ಮಾಡಿ ನೋಡಲು ಅದರಲ್ಲಿ ಗಾಂಜಾ ಇದ್ದು ಅವನಿಗೆ ವಿಚಾರಣೆ ಮಾಡಲು ನಮ್ಮೂರ ಇಸ್ಮಾಯಿಲ ಖದರಿ ದೇವರ ದರ್ಶನಕ್ಕೆ ಬರುವ ಜನರಿಗೆ ಮಾರಾಟ ಮಾಡುತ್ತೇನೆ ನಾನು ಸಣ್ಣ ಗಾಂಜಾದ ಪ್ಯಾಕೇಟಗಳು ನನ್ನ ಜೇಬಿನಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದಾಗ ಸದರಿ ಗಂಜಾ ತೂಕ ಮಾಡಲು 1.5 ಕೆ.ಜಿ ಗಾಂಜಾ ಇದ್ದು ಅ.ಕಿ 12,000/- ರೂ. ಇದ್ದು, ನಂತರ ಶರೀಫ ಇವನಿಗೆ ಮಾದಕ ವಸ್ತು ಗಾಂಜವನ್ನು ವಶದಲ್ಲಿಟ್ಟುಕೊಳ್ಳುವುದು ಥವಾ ಸಾಗಾಣಿಕೆ ಮಾಡುವುದು ಕಾನೂನು ರೀತ್ಯ ಅಪರಾಧ ಎಂದು ಹೇಳಿ ಗಾಂಜವನ್ನು ಎಲ್ಲಿಂದ ತಂದಿದ್ದಿಯ ಎಂದು ವಿಚಾರಿಸಲು ಅದಕ್ಕೆ ಆವನು ಭಂಗೂರ ಬಾರ್ಡರ ಹತ್ತಿರ ಒಬ್ಬ ವ್ಯಕ್ತಿ ತೆಂಗಾಣ ರಾಜ್ಯದಿಂದ ಗಾಂಜಾ ತಂದು ಕೊಡುತ್ತಾನೆ ಅಂತಾ ನನಗೆ ಗೊತ್ತಾಗಿ ನಾನು ಹೋಗಿ ಅವನ ಹತ್ತಿರ ತೆಗೆದುಕೊಂಡು ನಾನು ಅವನಿಗೆ ಹೆಸರು ವಿಳಾಸ ವಿಚಾರಿಸಿದರೆ ಅವನು ನನಗೆ ನಿನಗೆ ಅದೆಲ್ಲಾ ಯಾಕೆ ಬೇಕು ಸುಮ್ನೆ ತೆಗೆದುಕೊಂಡು ಹೋಗು ಅಂತಾ ಹೇಳಿ ಅವನ ಹೆಸರು ವಗೈರೆ ತಿಳಿಸಿರುವುದಿಲ್ಲ ಅಂತಾ ತಿಳಿಸಿರುತ್ತಾನೆಂದು ಪಿಎಸ್ಐ ರವರು ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.