Police Bhavan Kalaburagi

Police Bhavan Kalaburagi

Thursday, January 28, 2021

BIDAR DISTRICT DAILY CRIME UPDATE 28-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-01-2021

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. 379 ಐಪಿಸಿ :-

ದಿನಾಂಕ 23-10-2020 ರಂದು 2000 ಗಂಟೆಯಿಂದ ದಿನಾಂಕ 26-01-2021 ರಂದು 1430 ಗಂಟೆಯ ಅವಧಿಯಲ್ಲಿ  ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ಗ್ರೀನ ನೇಚರ ಆಯಿನ್ಸ್ಕಂಪನಿಯಲ್ಲಿನ 1) 5 ಹೆಚ.ಪಿ 3 ಮೋಟಾರಗಳು .ಕಿ. 12,000/- ರೂ., 2) 7 ಹೆಚ.ಪಿ 4 ಮೊಟಾಗಳು .ಕಿ. 20,000/- ರೂ., 3) ಪೆನಾಲ ಬಾಕ್ಸ್ಮತ್ತು ಸ್ಟಾರ್ಟರ .ಕಿ 5,000/- ರೂ., 4) ಕಾಪರ ವೈರ .ಕಿ 5,000/- ರೂ., 5) ಕೇಬಲ ಪೈಪುಗಳು 5 ಬಂಡಲ .ಕಿ 15,000/- ರೂ., 6) ತಗಡಗಳು(ಟಿನ) 15 .ಕಿ 6,000/- ರೂ. ಹಾಗು 7) ಕಛೇರಿಯ ಟೇಬಲ ಮತ್ತು ಕುರ್ಚಿಗಳು .ಕಿ. 2000/- ರೂ. ಹೀಗೆ ಒಟ್ಟು 65,000/- ರೂ. ಮೌಲ್ಯದ ಸಾಮಾನುಗಳನ್ನು ಆರೋಪಿತರಾದ 1) ಗಣಪತಿ ತಂದೆ ದಿಗಂಬರ ಕಪಲಾಪುರ, 2) ರಾಜು ತಂದೆ ನಾಗಪ್ಪ ನೌಬಾದ, 3) ಅಬ್ರಾಹಮ ತಂದೆ ಶಿರೊಮಣಿ ನೌಬಾದ ಹಾಗೂ 4) ರಾಜಕುಮಾರ ತಂದೆ ಶರಣಪ್ಪ ಇವರೆಲ್ಲರೂ ಕೂಡಿ ಕಳ್ಳತನ ಮಾಡಿರುತ್ತಾರೆಂದು ಫಿರ್ಯಾದಿ ಬಸವರಾಜ ತಂದೆ ನಾಗಶೆಟ್ಟಿ ಬಿರಾದಾರ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಬಕಚೌಡಿ, ತಾ: ಬೀದರ ರವರು ನೀಡಿದ ದೂರಿನ ಸಾರಾಂಶದ ಮೇರೆಗೆ ದಿನಾಂಕ 27-01-2021 ರಂದು ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 16/2020, ಕಲಂ. 279, 338 ಐಪಿಸಿ :-

ದಿನಾಂಕ 27-01-2021 ರಂದು ಫಿರ್ಯಾದಿ ಶೇಖ ಜಾವೀದ ತಂದೆ ಶೇಖ ದಸ್ತಗಿರ ವಯ: 44 ವರ್ಷ, ಜಾತಿ: ಮುಸ್ಲಿಂ, ಸಾ: ಹಮೀಲಾಪೂರ, ತಾ: ಜಿ: ಬೀದರ ರವರ ಸಂಬಂಧಿಕ ಎಮ್.ಡಿ ಆಬೇದ ತಂದೆ ಎಮ್.ಡಿ ಫಕ್ರುಸಾಬ್ ಪಟೇಲ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಚಾಳಕಿ, ತಾ: ನಾರಾಯಣಖೇಡ, ಸದ್ಯ: ಆಸೀಫ ನಗರ ಝೀರಾ ಹೈದ್ರಾಬಾದ ರವರು ಖಾನ ಚಾಚಾ ಹೊಟೇಲ ಮುಂದಿನಿಂದ ರೋಡ ದಾಟಿಕೊಂಡು ವಾಸಲಗಾ ದರ್ಗಾ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಮಹಾವೀರ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಆರ್-7317 ನೇದರ ಚಾಲಕನಾದ ಆರೋಪಿ ಉಮೇಶ ತಂದೆ ಶಿವರಾಜ ನಾಸಿಗೇರ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಚೊಂಡಿ ಗಲ್ಲಿ ಸಿದ್ದಿಕ್ ತಾಲೀಮ ಹತ್ತಿರ ಬೀದರ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎಮ್.ಡಿ ಆಬೇದ ಇವರಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಎಂ.ಡಿ ಆಬೇದ ರವರ ತಲೆಯ ಹಿಂದೆ ಭಾರಿ ಗುಪ್ತಗಾಯ, ಎಡಗಾಲ ತೊಡೆಗೆ ಗುಪ್ತಗಾಯ, ಬಲಗೈ ಮೊಳಕೈಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಎಮ್.ಡಿ ಆಬೇದ ಇವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೇಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.