¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-02-2017
zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 03/2017, PÀ®A 174
¹.Dgï.¦.¹ :-
ಫಿರ್ಯಾದಿ
ಸುವರ್ಣಾ ಗಂಡ ಮಾರುತಿ ವಯ: 35 ವರ್ಷ, ಜಾತಿ: ಕ್ರಿಶ್ಚನ, ಸಾ: ಜನಾವಾಡಾ ರವರ ಗಂಡ ಮಾರುತಿ ತಂದೆ
ಮಾಣಿಕ ವಯ: 40 ವರ್ಷ, ಜಾತಿ: ಕ್ರಿಶ್ಚನ, ಉ:ಜೆ.ಸಿ.ಬಿ ಚಾಲಕ, ಸಾ: ಜನವಾಡಾ ಇವರು ಕುಡುಕ
ಸ್ವಭಾವದವರಾಗಿದ್ದು, ಸ್ವಲ್ಪ ಮಾನಸಿಕ ಅಸ್ವಸ್ಥ ಸಹ ಹೊಂದಿರುತ್ತಾರೆ, ಗಂಡ ಸುಮಾರು ದಿವಸಗಳಿಂದ ಮನೆಗೆ ಅವಶ್ಯಕವಾದ ವಸ್ತುಗಳು ತಂದು ಕೊಡದೇ
ಇದ್ದರಿಂದ, ಮನೆ ನಡೆಸುವುದು ಕಷ್ಟವಾಗಿ ಫಿರ್ಯಾದಿಯು ತನ್ನ ತವರು ಮನೆ ಕರಕ್ಯಾಳ ಗ್ರಾಮದಲ್ಲಿ
ಬಂದು ಪ್ರತೀಕವಾಗಿ ವಾಸವಾಗಿದ್ದು, ಗಂಡ ಜೆ.ಸಿ.ಬಿ ಚಾಲಕ ಅಂತಾ ಕೆಲಸ ಮಾಡಿಕೊಂಡು ಬೇರೆ ಕಡೆ
ಇರುತ್ತಾರೆ, ಹಿಗಿರುವಾಗ ದಿನಾಂಕ 14-02-2017 ರಂದು ಫಿರ್ಯಾದಿಯವರ
ಭಾವ ರಾಜು ತಂದೆ ಮಾಣಿಕ ಇವರು ಕರೆ ಮಾಡಿ ಫಿರ್ಯಾದಿಗೆ ಮಾಹಿತಿ ತಿಳಿಸಿದೆನೆಂದರೆ ನಿನ್ನ ಗಂಡ
ಮಾರುತಿ ಜೊಳದಾಪಕಾ ಗ್ರಾಮದ ಜಟಿಂಗ್ ಜಾಧವ ಇವರ ಹೊಲದಲ್ಲಿ ಬೆವಿನ ಗಿಡಕ್ಕೆ 0600 ಗಂಟೆಯಿಂದ
1000 ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡು ಸತ್ತಿರುತ್ತಾರೆ ಅಂತಾ ತಿಳಿಸಿದ ಕೂಡಲೇ ಫಿರ್ಯಾದಿಯು
ಗ್ರಾಮದ ಸಿದ್ರಾಮ ಗುರುನಾಥರಾವ ಬಾರೋಳೆ ಸಾ: ಕರಕ್ಯಾಳ
ರವರು ಬಂದು ಭಾಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಗಂಡನ ಶವವು ನೋಡಲು ಅವರ ಕುತ್ತಿಗೆ ಹಗ್ಗ ಇದ್ದು
ಸತ್ತಿದ್ದು ಇರುತ್ತದೆ, ಗಂಡ ಮಾನಸಿಕ ಅಸ್ವಸ್ಥನಾಗಿ ಕುಡುಕನಾಗಿದ್ದು, ತನ್ನ ತಾನಾಗಿಯೇ ನೇಣು
ಹಾಕಿಕೊಂಡು ಮ್ರತಪಟ್ಟಿರುತ್ತಾನೆ, ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಸಂಶಯ ಇರುವುದಿಲ್ಲಾ
ಅಂತ ನೀಡಿದ ಸದರಿ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 16/2017, ಕಲಂ 279, 337, 338 ಐಪಿಸಿ :-
ದಿನಾಂಕ 14-02-2017 ರಂದು ಫಿರ್ಯಾದಿ ರೇವಣಸಿದ್ಧ
ತಂದೆ ಗುರುಶಾಂತಪ್ಪಾ ಧುಳ್ಳೆ ಬ್ಯಾಚ ನಂ. 1355 ಎನ್.ಇ.ಕೆ.ಎಸ್.ಆರ್.ಟಿ.ಸಿ ಬಸ್ಸ ಚಾಲಕ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ:
ದಾಡಗಿ, ಸದ್ಯ: ಎನ್.ಇ.ಕೆ.ಎಸ್.ಆರ್.ಟಿ.ಸಿ
ಘಟಕ
ಭಾಲ್ಕಿ ರವರು ತನ್ನ ಕರ್ತವ್ಯಕ್ಕೆ ಹಾಜರಾದಾಗ ಬಸ್ ನಂ. ಕೆಎ-28/ಎಫ್-1854 ನೇದನ್ನು ಕಲಬುರ್ಗಿ
ಮಾರ್ಗವಾಗಿ ಗುಡಾಪೂರ ಗ್ರಾಮದಲ್ಲಿ ವಸತಿ ಮಾಡಿ ಮರಳಿ ಬರಲು ಹಣಮಪ್ಪಾ ಟ್ರಾಪಿಕ ಕಂಟ್ರೋಲರ ರವರು
ತಿಳಿಸಿ ಹಾಗೇ ಫಿರ್ಯಾದಿಯ ಜೊತೆ ಸದರಿ ಬಸ್ಸಿನ ಕಾರ್ಯನಿರ್ವಹಕ ಮಾದಪ್ಪಾ ತಂದೆ ಭೀಮಣ್ಣಾ
ಚಳಕಾಪೂರೆ ಬ್ಯಾಚ ನಂ. 1075 ರವರಿಗೆ ನೀಡಿದ್ದು ಇರುತ್ತದೆ, ಇಬ್ಬರು ಸದರಿ ಬಸ್ಸನ್ನು ಭಾಲ್ಕಿಯಿಂದ
ಹುಮನಾಬಾದ ಮಾರ್ಗವಾಗಿ ಗುಡಾಪೂರಕ್ಕೆ ಹೋಗುವಾಗ ಕಲಬುರ್ಗಿ-ಹುಮನಾಬಾದ ರಾಜ್ಯ ಹೆದ್ದಾರಿ
ಹಳ್ಳಿಖೇಡ(ಕೆ) ವಾಡಿ ಸಿವಾರದ ಪ್ರಭುರಾವ ಸದ್ಲಾಪೂರ ಸಾ: ಹಳ್ಳಿಖೇಡ(ಕೆ) ವಾಡಿ ರವರ ಹೊಲದ
ಹತ್ತಿರ ಎದುರಗಡೆಯಿಂದ ಹಿರೋ ಹೊಂಡಾ ಸಿಡಿ ಡಿಲೆಕ್ಸ ಮೋಟರ ಸೈಕಲ್ ನಂ. ಕೆಎ-39/ಕೆ-1552 ನೇದರ ಚಾಲಕನಾದ ಆರೋಪಿ ರಾಜಶೇಖರ@ ರಾಜಕುಮಾರ ತಂದೆ ಭೀಮಶಾ
ಕೊರೆನೊರ ವಯ: 25 ವರ್ಷ, ಜಾತಿ: ಮರಾಠಾ, ಸಾ: ಖಾನಾಪೂರ, ಸದ್ಯ: ಸೂಪರ ಮಾರ್ಕೆಟ ಕಲಬುರ್ಗಿ ಇತನು
ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಕಲಬುರ್ಗಿ ಕಡೆಯಿಂದ ಚಲಾಯಿಸಿಕೊಂಡು
ಬರುವುದನ್ನು ನೋಡಿ ಫಿರ್ಯಾದಿಯು ತಮ್ಮ ಬಸ್ಸನ್ನು ತಮ್ಮ ಸೈಡಿನಿಂದ ಹೋಗುವಾಗ ಬ್ರೇಕ ಮಾಡಲು ಸದರಿ
ಆರೋಪಿಯು ಫಿರ್ಯಾದಿಯ ಬಸ್ಸಿನ ಮುಂದೆ ಬಲಗಡೆ ಸೈಡಿಗೆ ಬಂದು ಡಿಕ್ಕಿ ಮಾಡಿ ರೋಡಿನ ಮೇಲೆ ಬಿದ್ದಾಗ
ಫಿರ್ಯಾದಿ ಮತ್ತು ನಿರ್ವಾಹಕ ಇಬ್ಬರೂ ಬಂದು ನೋಡಲು ಅವನ ಬಲಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯ, ಬಲಗೈ ಕಿರುಬೆರಳಿಗೆ
ರಕ್ತಗಾಯ,
ಬಲಗಡೆ
ಕಣ್ಣಿಗೆ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಯ ವಾಹನದ ಹಿಂದೆ ಕುಳಿತ ಬಸವರಾಜ ತಂದೆ ಶಂಕರರಾವ
ಮಾಲಿ ಪಾಟೀಲ ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಖಾನಾಪೂರ, ಸದ್ಯ: ಸೂಪರ ಮಾರ್ಕೆಟ ಕಲಬುರ್ಗಿ ಇತನ
ಬಲಗಡೆ ತಲೆಗೆ ರಕ್ತಗಾಯ, ಬಲಕೈ ಮುಂಗೈಗೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯ, ಎಡಗೈ ಮುಂಗೈಗೆ
ತರಚಿದ ಗಾಯವಾಗಿರುತ್ತದೆ, ಫಿರ್ಯಾದಿಯ ಬಸ್ಸಿನಲ್ಲಿದವರಿಗೆ ಯಾವುದೇ ಗಾಯ ಆಗಿರುವುದಿಲ್ಲಾ, ನಂತರ
108 ಅಂಬುಲೆನ್ಸಗೆ ಕರೆ ಮಾಡಿ
ಸದರಿ ಗಾಯಗೊಂಡವರನ್ನು ಅದರಲ್ಲಿ ಹಾಕಿ ಚಿಕಿತ್ಸೆ ಕುರಿತು ಕಲಬುರ್ಗಿ ಸರಕಾರಿ ಆಸ್ಪತ್ರೆಗೆ
ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.