Police Bhavan Kalaburagi

Police Bhavan Kalaburagi

Monday, October 16, 2017

Yadgir District Reported Crimes Updated on 16-10-2017


                                    Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 180/2017 ಕಲಂ 147,148,326,307,504  ಸಹಿತ 149 ಐಪಿಸಿ;- ದಿನಾಂಕ-15-10-2017 ರಂದು ರಾತ್ರಿ 12-30 ಗಂಟೆಗೆ ನಮ್ಮ ಠಾಣೆಯ ಹೆಚ್,ಸಿ-95 ರವರು ರಾಯಚೂರ ರೀಮ್ಸ ಆಸ್ಪತ್ರೆ ರಾಯಚೂರ ದಿಂದ ಗಾಯಾಳುವಾದ ತಾಯಪ್ಪ ತಂದೆ ನರಸಿಂಹಲು ಇತನ ತಂದೆಯಾದ ನರಸಿಂಹಲು ತಂದೆ ನಾಗಪ್ಪ ಪಸಲೊರ ಸಾ|| ಅಜಲಾಪೂರ ಇವರ ಹೇಳಿಕೆ ಪಡೆದುಕೊಂಡು ಬಂದ ಸಾರಂಶವೆನೆಂದರೆ ಇಂದು ನಾನು ನನ್ನ ಮಗ ತಾಯಪ್ಪ ಮತ್ತು ನಮ್ಮ ಅಣ್ಣನ ಮಗ ವಿಶ್ವನಾಥ 3 ಜನರು ಕೂಡಿ ಹೊಲದ ಕೆಲಸಕ್ಕೆ ಹೋದಾಗ ಸುಮಾರು 4 ಪಿಎಮ್ ಕ್ಕೆ ನನ್ನ ಮಗ ಎತ್ತುಗಳಿಗೆ ಮೇವು ಮಾಡುವ ಕಾಲಕ್ಕೆ ನಮ್ಮ ಹೊಲದಲ್ಲಿ ಆರೋಪಿತರು ಬಂದು ನನ್ನ ಮಗನಿಗೆ ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಕೊಯದು ಹೋಗಿರುತಾರೆ ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-180/2017 ಕಲಂ 147,148,326,307,504,ಸಂಗಡ 149 ಐಪಿಸಿ ನೆದ್ದರಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 256/2017 ಕಲಂ: 379 ಐ.ಪಿ.ಸಿ;- ದಿನಾಂಕ 15.10.2017 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಪಿರ್ಯಾಧಿ ವಿಶ್ರಾಂತಿಯಲ್ಲಿದ್ದಾಗ ಕೊಂಕಲ ಕಡೆಯಿಂದ ಗುರುಮಠಕಲ ಕಡೆಗೆ ಒಬ್ಬ ವ್ಯಕ್ತಿ ತನ್ನ ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಬಗ್ಗೆ  ಖಚಿತ ಭಾತ್ಮೀ ಬಂದ ಮೇರೆಗೆ ಠಾಣೆಗೆ ಬಂದು ಸಿಬ್ಬಂದಿಯನ್ನು ಮತ್ತು ಇಬ್ಬರೂ ಪಂಚರನ್ನು ಠಾಣೆಗೆ ಬರಮಾಡಿಕೊಂಡು ದಾಳಿಯ ಬಗ್ಗೆ ವಿವರಸಿ ಸಮಯ ಬೆಳಿಗ್ಗೆ 5.30 ಎ.ಎಂ ಕ್ಕೆ ಠಾಣೆಯಿಂದ ಬೋರಬಂಡ ಗ್ರಾಮದ ಕಡೆಗೆ ಹೊರಟು ಸಮಯ 5.45 ಎ.ಎಂಕ್ಕೆ ಬೂದುರ ಕ್ರಾಸನಲ್ಲಿ ಬೋರಬಂಡ ಕಡೆಯಿಂದ ಗುರುಮಠಕಲ ಕಡೆಗೆ ಒಂದು ಟ್ರ್ಯಾಕ್ಟರ ಬರುತ್ತಿರುವದನ್ನು ಕಂಡು ಜೀಪಿನಿಂದ ಕೆಳಗೆ ಇಳಿದು ನೋಡಲು ಸದರಿ ಟ್ರ್ಯಾಕ್ಟರ ಚಾಲಕ ಪಿರ್ಯಾಧಿ ಮತ್ತು ಸಿಬ್ಬಂದಿಯನ್ನು ನೋಡಿ ತನ್ನ ಟ್ರ್ಯಾಕ್ಟರನ್ನು 100-150 ಮೀಟರ ಅಂತರ ದೂರದಲ್ಲಿ ನಿಲ್ಲಿಸಿ ಓಡಿ ಹೋಗಿದ್ದು ಆತನು ಬೆನ್ನು ಹತ್ತಿ ಹಿಡಿಯಲು ಯತ್ನಿಸಿದರು ಸಹ ಸಿಕ್ಕಿರುವುದಿಲ್ಲ. ಸದರಿ  ಟ್ರ್ಯಾಕ್ಟರ ಇಂಜೀನ್ ನಂ. ಎಪಿ-26-ಎಎ-9329 ಟ್ರ್ಯಾಲಿ ನಂ. ಎಪಿ-37-ಎವಾಯ್-6270 ಅಂತಾ ಇದ್ದು, ಚಾಲಕನು ಸಂಬಂಧಪಟ್ಟ ಇಲಾಖೆಯಿಂದ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸಕರ್ಾರಕ್ಕೆ ಯಾವುದೇ ರಾಜಧನ ತುಂಬಿದ ಮತ್ತು ರಾಯಲಿಟಿ ಪಡೆದುಕೊಳ್ಳದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತನ್ನ ಸ್ವಂತ ಲಾಭಗೋಸ್ಕರ ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ಅಪರಾಧ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 396/2017.ಕಲಂ 279, 338 ಐ.ಪಿ.ಸಿ.;- ದಿನಾಂಕ: 15/10/2017 ರಂದು 8.30 ಪಿ.ಎಂಕ್ಕೆ ಫಿರ್ಯಾದಿ ಶ್ರೀ ಶರಣಪ್ಪ ತಂ/ ಚಂದ್ರಾಮಪ್ಪ ಶಹಾಪುರ ವ|| 42 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೇವಿನಹಳ್ಳಿ ತಾ|| ಶಹಾಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 15/10/2017 ರಂದು ಬೆಳಿಗ್ಗೆ 6.00 ಗಂಟೆಗೆ ನಾನು ಮತ್ತು ನನ್ನ ಅಣ್ಣತಮಕೀಯ ಕುಮಾರ ತಂ/ ದೇವಿಂದ್ರಪ್ಪ ಶಹಾಪುರ, ತಿಪ್ಪಣ್ಣ ತಂ/ ಸಿದ್ದಲಿಂಗಪ್ಪ ಶಹಾಪುರ ಮತ್ತು ನಮ್ಮ ಓಣಿಯ ಶೇಖರ ತಂ/ ಬಸಣ್ಣ ದೊಡ್ಡಸಗರ 4 ಜನರು ಕೂಡಿಕೊಂಡು ಕುಮಾರ ಈತನ ಕಿರಾಣಿ ಅಂಗಡಿ ಬಾಕಿ ವಸೂಲ ಮಾಡಲು ಕನ್ಯಾಕೊಳ್ಳೂರ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ನಾನು ಮತ್ತು ಶೇಖರ ಇಬ್ಬರು ಒಂದು ಮೋಟರ ಸೈಕಲದಲ್ಲಿ ಹಾಗೂ ಇನ್ನೊಂದು ಮೋಟರ ಸೈಕಲದಲ್ಲಿ ತಿಪ್ಪಣ್ಣ ಮತ್ತು ಕುಮಾರ ಇಬ್ಬರು ಕುಳಿತುಕೊಂಡಿದ್ದರು. ತಿಪ್ಪಣ್ಣನು ಮೋಟರ ಸೈಕಲ ನಡೆಸುತ್ತಿದ್ದನು. 8.30 ಎ.ಎಂ ಸುಮಾರಿಗೆ ಕನ್ಯಾಕೊಳ್ಳೂರ-ಹಳಿಸಗರ ಮೇನ್ ರೋಡ್ನಲ್ಲಿರುವ ಫಾರೆಸ್ಟ ಆಫೀಸ್ ದಾಟಿ ಮುಂದೆ ಇರುವ ಬ್ರಿಜ್ ಹತ್ತಿರ ಹೊರಟಿದ್ದಾಗ ತಿಪ್ಪಣ್ಣನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ರೋಡಿನಲ್ಲಿ ಒಂದು ನಾಯಿ ಅಡ್ಡ ಬಂದಿದ್ದರಿಂದ ಮೋಟರ ಸೈಕಲ್ ನಿಯಂತ್ರಣ ತಪ್ಪಿದ್ದರಿಂದ ಒಮ್ಮೆಲೆ ಮೋಟರ ಸೈಕಲನ್ನು ರೋಡಿನ ಎಡ ಸೈಡಿಗೆ ಕಟ್ ಮಾಡಿದನು ಆಗ ಮೋಟರ ಸೈಕಲ್ ಸ್ಕಿಡ್ಡಾಗಿ ರೋಡಿನ ಎಡ ಸೈಡಿನಲ್ಲಿ ಮೋಟರ ಸೈಕಲ್ ಬಿದ್ದಿತು. ಹಿಂದೆ ಬರುತ್ತಿದ್ದ ನಾನು ಮತ್ತು ಶೇಖರ ಇಬ್ಬರು ಹತ್ತಿರ ಹೋಗಿ ನೋಡಲಾಗಿ ಮೊಟರ ಸೈಕಲ್ ಹಿಂದೆ ಕುಳಿತಿದ್ದ ಕುಮಾರನಿಗೆ ಎಡಗಣ್ಣಿನ ಹತ್ತಿರ ತರಚಿದ ಗಾಯ, ಎಡ ಬುಜಕ್ಕೆ ಭಾರೀ ಒಳಪೆಟ್ಟಾಗಿತ್ತು, ಮೋಟರ ಸೈಕಲ್ ನಡೆಸುತ್ತಿದ್ದ ತಿಪ್ಪಣ್ಣನಿಗೆ ಯಾವುದೇ ಗಾಯವಗೈರೆ ಆಗಿರಲಿಲ್ಲ. ತಿಪ್ಪಣ್ಣನು ನಡೆಸುತ್ತಿದ್ದ ಮೋಟರ ಸೈಕಲ್ ನಂ. ಕೆಎ-33 ಯು-9744 ಅಂತಾ ಇರುತ್ತದೆ.
    ನಂತರ ಗಾಯಾಳು ಕುಮಾರನಿಗೆ ಉಪಚಾರ ಕುರಿತು ಅದೆ ಮೋಟರ ಸೈಕಲದಲ್ಲಿ ಕೂಡಿಸಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಕುಮಾರನಿಗೆ ಕಲಬುಗರ್ಿಯ ಕಾಮರಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು 8.30 ಪಿ.ಎಂ.ಕ್ಕೆ ಠಾಣೆಗೆ ತಡವಾಗಿ ಬಂದಿರುತ್ತೇನೆ.
 ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ಮೋಟರ ಸೈಕಲ್ ನಂ. ಕೆಎ-33 ಯು-9744 ನೇದ್ದರ ಚಾಲಕ ತಿಪ್ಪಣ್ಣ ತಂ/ ಸಿದ್ದಲಿಂಗಪ್ಪ ಶಹಾಪುರ ವ|| 38 ವರ್ಷ ಸಾ|| ಬೇವಿನಳ್ಳಿ ತಾ|| ಶಹಾಪುರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 396/2017 ಕಲಂ 279. 338 ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
 

BIDAR DISTRICT DAILY CRIME UPDATE 16-10-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-10-2017

ಮುಡಬಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 115/17 ಕಲಂ 379 ಐಪಿಸಿ :-

ದಿನಾಂಕ:-15-10-2017 ರಂದು 1700 ಗಂಟೆಗೆ ಫಿರ್ಯಾದಿ ಶ್ರೀಮತಿ ಇಂದುಬಾಯಿ ಗಂಡ ಶಾಂತಪ್ಪಾ ಜಮಾದಾರ ವಯ: 40 ವರ್ಷ ಜಾ: ಬ್ಯಾಡರ್ ಸಾ: ಯಳವಂತಗಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೆನೆಂದರೆ  ಫಿರ್ಯಾದಿಯು ಕೂಲಿಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದು    ಮನೆಯಲ್ಲಿ ಎರಡು ಹೋರಿ, ಒಂದು ಕೆಂಪು ಬಣ್ಣದ ಆಕಳು ಮತ್ತು ಆಕಳದ ಕರು ಇರುತ್ತವೆ. ಇವುಗಳನ್ನು ದಿನಾಲು ರಾತ್ರಿ ವೇಳೆಯಲ್ಲಿ ದನಕರುಗಳು ಕಟ್ಟಲು 09 ತಗಡಾ ಹಾಕಿ ತಯಾರಿಸಿದ ಕೊಟ್ಟಿಗೆಯ ಹೋರಗೆ ಖೂಲ್ಲಾ ಜಾಗದಲ್ಲಿ ಕಟ್ಟುತಿದ್ದು ದಿನಾಲು ರಾತ್ರಿ ಫಿರ್ಯಾದಿ ಗಂಡ ಅಲ್ಲಿಯೇ ಮಲಗುತ್ತಿದ್ದು, ದಿನಾಂಕ;-28/09/2017 ರಂದು  ಪ್ರತಿ ನಿತ್ಯದಂತೆ ಹೋರಿ ಆಕಳು-ಕರು   ಕೊಟ್ಟಿಗೆಯ ಹೋರಗೆ ಖೂಲ್ಲಾ ಜಾಗದಲ್ಲಿ ಕಟ್ಟಿ ರಾತ್ರಿ ಸುಮಾರು 2200 ಗಂಟೆಯವರೆಗೆ ಫಿರ್ಯಾದಿ ಗಂಡ ಕೊಟ್ಟಿಗೆಯಲ್ಲಿ ಇದ್ದು.   ಫಿರ್ಯಾದಿ ಅತ್ತೆಯವರಗೆ ಆರಾಮ ಇಲ್ಲದ ಕಾರಣ ಅವರನ್ನು ನೋಡಿಕೊಂಡು ಬರಲು ಮನೆಗೆ ಬಂದಿರುತ್ತಾರೆ ದಿನಾಂಕ:-29/09/2017 ರಂದು ಮುಂಜಾನೆ 0600 ಗಂಟೆಗೆ ಆಕಳು ಹಾಲು ಹಿಂಡಲು ಕೊಟ್ಟಿಗೆಗೆ ಹೋಗಿ ನೋಡಲು ಕೊಟ್ಟಿಗೆಯಲ್ಲಿ ಎರಡು ಹೋರಿಗಳು ಮಾತ್ರ ಇರುತ್ತವೆ ಆದರೆ ಆಕಳು ಮತ್ತು ಆಕಳ ಕರು ಇರಲಿಲ್ಲಾ ತಕ್ಷಣ  ಎಲ್ಲ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ  ದಿನಾಂಕ:-29-09-2017 ರಂದು ನಸುಕಿನ ಜಾವ ಸುಮಾರು 0200 ಗಂಟೆಯ ಸುಮಾರಿಗೆ ಯಾರೊ ಅಪರಿಚಿತ ಕಳ್ಳರು ಕೊಟ್ಟಿಗೆಯ ಹೋರಗೆ  ಕಟ್ಟಿದ ಒಂದು ಕೆಂಪು 08 ವರ್ಷದ ಆಕಳು ಅಂದಾಜು  ಕಿಮ್ಮತ್ತ 20000/- ಹಾಗೂ ಒಂದು ಕೆಂಪು ಬಣ್ಣದ ಆಕಳು ಕರು 04 ತಿಂಗಳನದ್ದು ಅಂದಾಜು ಕಿಮ್ಮತ್ತ -4000/- ಹೀಗಿ ಒಟ್ಟು 24000/- ಬಲೆಬಾಳುವ ನನ್ನ ಆಕಳು ಮತ್ತು ಆಕಳು ಕರುವನ್ನು  ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬೀದರ ಸಂಚಾರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 111/17 ಕಲಂ 279, 337 ಐಪಿಸಿ ಜೊತೆ 187 ಮೋ.ವಾಹನ ಕಾಯ್ದೆ :-

ದಿನಾಂಕ: 15/10/2017  ಫಿರ್ಯಾದಿ   ತನ್ನ ಹಿರೊ ಹೊಂಡಾ ಫ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ47/ಹೆಚ್4723 ನೇದ್ದರ ಮೇಲೆ ತನ್ನ ಅತ್ತಿಗೆಯಾದ ತುಳಜಮ್ಮಾ ಗಂಡ ಅಂಜಪ್ಪಾ, ವಯ 35 ವರ್ಷ, ಸಾ: ವಡ್ಡರ ಕಾಲೋನಿ ಬೀದರ ರವರಿಗೆ ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ಖಾಸಗಿ ಕೆಲಸ ಕುರಿತು ಬೀದರ ನಗರದಲ್ಲಿ ಹೋಗಿ ಮರಳಿ ಮೈಲೂರ ಚಿದ್ರಿ ರಿಂಗ ರೋಡ ಮುಖಾಂತರ ಗೊಯೆಲ್ ಲೇ ಔಟ ರಿಂಗ ರೋಡ ಪಕ್ಕದಲ್ಲಿರುವ ವಡ್ಡರ ಕಾಲೋನಿ ಕಡೆಗೆ ಹೊಗುತ್ತಿರುವಾಗ ಗೊಯೆಲ್ ಲೇ ಔಟ್ ಹತ್ತಿರ ಇರುವ ಯು ಟರ್ನ್ ನಲ್ಲಿ ತನ್ನ ಮೊಟಾರ ಸೈಕಲ ತಿರುಗಿಸಿಕೊಳ್ಳುತ್ತಿರುವಾಗ ಸಮಯ ಅಂಧಾಜು 1930 ಗಂಟೆಗೆ ಚಿದ್ರಿ ಕಡೆಯಿಂದ ಒಂದು ಮೊಟಾರ ಸೈಕಲ ನಂ. ಕೆಎ38ಯು5251 ನೇದ್ದರ ಚಾಲಕನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು   ಡಿಕ್ಕಿ ಮಾಡಿ, ತನ್ನ ಮೊಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಪರಿಣಾಮ   ತುಳಜಮ್ಮಾ ಇವಳಿಗೆ ಬಲಕಾಲ ಮೊಳಕಾಲ ಕೆಳಗೆ ಗುಪ್ತಗಾಯ, ಹೊಟ್ಟೆಯಲ್ಲಿ ಗುಪ್ತಗಾಯ, ತಲೆಯಲ್ಲಿ ಗುಪ್ತಯವಾಗಿರುತ್ತದೆ. ಫಿರ್ಯಾದಿಗೆ ಯಾವುದೇ ರೀತಿಯ ಗಾಯವಾಗಿರುವದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡಾ ಪೋಲಿಸ್ ಠಾಣೆ ಗುನ್ನೆ ನಂ 137/2017 ಕಲಂ, 341, 504, 376, ,ಪಿ,ಸಿ ಜೊತೆ 3, 2, (v) ಎಸ್.ಸಿ/ಎಸ್.ಟಿ. ಕಾಯ್ದೆ 1989 :-
ದಿನಾಂಕ 16-10-2017 ರಂದು 0015 ಗಂಟೆಗೆ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ.ಎಲ್.ಸಿ ಮಾಹಿತಿ ಮೇರೆಗ ಆಸ್ಪತ್ರಗೆ 0100 ಗಂಟೆಗೆ ಭೇಟ್ಟಿ ನೀಡಿ  ನಂದಗಾವ ಗ್ರಾಮದ ಗಾಯಾಳು ಫಿರ್ಯಾದಿ ವಯ :21 ವರ್ಷ ಮಹಿಳೆ ರವರು ನೀಡಿದ ದೂರಿನ ಸಾರಾಂಶವನೆಂದರೆ ದಿನಾಂಕ 15-10-2017 ರಂದು ಮಧ್ಯಾಹ್ನ 1400 ಗಂಟೆಯ ಸುಮಾರಿಗೆ ಫಿರ್ಯಾದಿಯು ಮಲವಿಸರ್ಜನೆಗೆ  ಹೋಲದ ಕಡೆಗೆ ಹೋದಾಗ ಆರೋಪಿ ಸೀರಾಜ ತಂದೆ ನವಾಬಸಾಬ ಮಚಕುರಿ ಈತನು ಫಿರ್ಯಾಧಿಗೆ ಅವಾಚ್ಯ ಶಬ್ದಗಳೊಂದಿಗೆ ಬೈದು ಅವಳೊಂದಿಗೆ ಒತ್ತಾಯಪೂರ್ವಕವಾಗಿ ಜಬರಿ ಸಂಭೋಗ ಮಾಡಿರುತ್ತಾನೆ  ನಂತರ ಫಿರ್ಯಾದಿಗೆ ಚಿಕತ್ಸೆಗೊಸ್ಕರ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಇರುತ್ತದೆ ಆರೋಪಿತನ ವಿರುದ್ದ ಪ್ರಕರಣ ಜನವಾಡಾ ಪೋಲಿಸ್ ಠಾಣೆ ಗುನ್ನೆ ನಂ 137/2017 ಕಲಂ, 341, 504, 376, ,ಪಿ,ಸಿ ಜೊತೆ 3, 2, (v) ಎಸ್.ಸಿ/ಎಸ್.ಟಿ. ಕಾಯ್ದೆ 1989 ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

KALABURAGI DISTRICT REPORTED CRIMES

ಶಹಾಬಾದ ನಗರ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ: 15/10/2017 ರಂದು ದೇವಕ್ಕಿ ಗಂಡ ಜೇಮಸಿಂಗ ಸಾ: ಶಹಾಬಾದ ರವರು ಪಿರ್ಯಾದಿ ಸಲ್ಲಿಸಿದ್ದೆನೇಂದರೆ  ತಮ್ಮ  ಮನೆಯ ಆಸ್ತಿ ಸಂಬಂದ ಮೈದುನ ರವಿ ಜಾಧವ ಆತನ ಹೆಂಡತಿ ಹಾಗೂ  ನಾದನಿ ಎಲ್ಲರೊ ಸೇರೆ ತಮ್ಮ ಮನೆಯಲ್ಲಿ ಬಂದು ಅವಾಚ್ಯವಾಗಿ ಬೈಯ್ದು ಕೈಯಿಂದ ಬಡಿಗೆಯಿಂದ ಹೊಡೆದು ಖಾರದ ಪುಡಿ ಎರಚಿ ಹಾಕಿ ಜೀವದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಚೌಕ್ ಪೊಲೀಸ್ ಠಾಣೆ:

ಕರ್ತವ್ಯಕ್ಕೆ ಅಡೆಪಡೆ ಪ್ರಕರಣ: ದಿನಾಂಕ: 15.10.2017 ರಂದು ಶ್ರೀ ಬಾಬು.ಎ.ಪಾಟೀಲ ಪಿಸಿ 506 ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ತಾನು ಮತ್ತು  ಪಿ.ಎಸ್.ಐ (1) ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರೊಂದಿಗೆ ಜೀಪ್ ನಲ್ಲಿ  ಚೌಕ ವೃತ್ತದಿಂದ  ಗಂಜ್ ಕಡೆಗೆ ಹೋಗುವ ಮಾರ್ಗದಲ್ಲಿ KA32 EH 7624 ನೇದ್ದರ ಚಾಲಕ ಒನ್ ವೇ ಇಂದ ಬಂದು ಜಾಜಿ ಅಂಗಡಿಯವರ ಏದುರು ರೋಡಿನ ಮಧ್ಯದಲ್ಲಿ ವಾಹನ ನಿಲ್ಲಿಸಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡೆತಡೆ ಮಾಡಿದ್ದು ನಾನು ಸದರಿಯವನ ವಾಹನ ತೆಗೆಯಲು ಹೇಳಿದ್ದಕ್ಕೆ ನನಗೆ ಅವಾಚ್ಯ ಶಬಗ್ದಗಳಿಂಧ ಬಯ್ದು ಸುಗಮ ಸಂಚಾರ ಕುರಿತು ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಕರ್ತವ್ಯಕ್ಕೆ ಅಡ್ಡಿ  ಪಡಿಸಿದ್ದು . ಆತನನ್ನು ಚೌಕ ಪೊಲೀಸ್ ಠಾಣೆಗೆ ಕರೆತಂದು ಸದರಿಯವನ ವಿರುದ್ದ ನಮ್ಮ ಕೆಲಸದಲ್ಲಿ ಅಡೆತಡೆ ಮಾಡಿ ನಮಗೆ ಕರ್ತವ್ಯನಿರ್ವಹಿಸಲು ಕಷ್ಟವಾಗಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .