Police Bhavan Kalaburagi

Police Bhavan Kalaburagi

Monday, October 16, 2017

KALABURAGI DISTRICT REPORTED CRIMES

ಶಹಾಬಾದ ನಗರ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ: 15/10/2017 ರಂದು ದೇವಕ್ಕಿ ಗಂಡ ಜೇಮಸಿಂಗ ಸಾ: ಶಹಾಬಾದ ರವರು ಪಿರ್ಯಾದಿ ಸಲ್ಲಿಸಿದ್ದೆನೇಂದರೆ  ತಮ್ಮ  ಮನೆಯ ಆಸ್ತಿ ಸಂಬಂದ ಮೈದುನ ರವಿ ಜಾಧವ ಆತನ ಹೆಂಡತಿ ಹಾಗೂ  ನಾದನಿ ಎಲ್ಲರೊ ಸೇರೆ ತಮ್ಮ ಮನೆಯಲ್ಲಿ ಬಂದು ಅವಾಚ್ಯವಾಗಿ ಬೈಯ್ದು ಕೈಯಿಂದ ಬಡಿಗೆಯಿಂದ ಹೊಡೆದು ಖಾರದ ಪುಡಿ ಎರಚಿ ಹಾಕಿ ಜೀವದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಚೌಕ್ ಪೊಲೀಸ್ ಠಾಣೆ:

ಕರ್ತವ್ಯಕ್ಕೆ ಅಡೆಪಡೆ ಪ್ರಕರಣ: ದಿನಾಂಕ: 15.10.2017 ರಂದು ಶ್ರೀ ಬಾಬು.ಎ.ಪಾಟೀಲ ಪಿಸಿ 506 ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ತಾನು ಮತ್ತು  ಪಿ.ಎಸ್.ಐ (1) ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರೊಂದಿಗೆ ಜೀಪ್ ನಲ್ಲಿ  ಚೌಕ ವೃತ್ತದಿಂದ  ಗಂಜ್ ಕಡೆಗೆ ಹೋಗುವ ಮಾರ್ಗದಲ್ಲಿ KA32 EH 7624 ನೇದ್ದರ ಚಾಲಕ ಒನ್ ವೇ ಇಂದ ಬಂದು ಜಾಜಿ ಅಂಗಡಿಯವರ ಏದುರು ರೋಡಿನ ಮಧ್ಯದಲ್ಲಿ ವಾಹನ ನಿಲ್ಲಿಸಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡೆತಡೆ ಮಾಡಿದ್ದು ನಾನು ಸದರಿಯವನ ವಾಹನ ತೆಗೆಯಲು ಹೇಳಿದ್ದಕ್ಕೆ ನನಗೆ ಅವಾಚ್ಯ ಶಬಗ್ದಗಳಿಂಧ ಬಯ್ದು ಸುಗಮ ಸಂಚಾರ ಕುರಿತು ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಕರ್ತವ್ಯಕ್ಕೆ ಅಡ್ಡಿ  ಪಡಿಸಿದ್ದು . ಆತನನ್ನು ಚೌಕ ಪೊಲೀಸ್ ಠಾಣೆಗೆ ಕರೆತಂದು ಸದರಿಯವನ ವಿರುದ್ದ ನಮ್ಮ ಕೆಲಸದಲ್ಲಿ ಅಡೆತಡೆ ಮಾಡಿ ನಮಗೆ ಕರ್ತವ್ಯನಿರ್ವಹಿಸಲು ಕಷ್ಟವಾಗಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .

No comments: