ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-02-2020
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020, ಕಲಂ. 174
ಸಿ.ಆರ್.ಪಿ.ಸಿ :-
ಫಿರ್ಯಾದಿ
ಸಂಜಿವಕುಮಾರ ತಂದೆ ವೀರಶೇಟ್ಟಿ ಸಾ: ಸಿದ್ದಾಪುರವಾಡಿ ರವರ ಮಗಳಾದ ಸ್ನೆಹಾ ವಯ: 18 ವರ್ಷ ಇವಳಿಗೆ ಸುಮಾರು 6 ತಿಂಗಳಿಂದ ಹೊಟ್ಟೆ ಬೆನೆ ಇತ್ತು ಅವಳಿಗೆ ಆಸ್ಪತ್ರೆಗೆ ಹಾಗೂ ಖಾಸಗಿ ಔಷಧಿ ಕೊಡಿಸಿದರೂ
ಸಹ ಕಡಿಮೆ
ಆಗಲಿಲ್ಲ,
ಹೀಗಿರುವಾಗ ದಿನಾಂಕ
01-02-2020
ಫಿರ್ಯಾದಿಯು ತನ್ನ ಹೆಂಡತಿಯೊಂದಿಗೆ ಹೊಲದಲ್ಲಿ ತೊಗರೆ ಬೆಳೆ ರಾಶಿ ಮಾಡಲು ಹೊಲಕ್ಕೆ ಹೊಗಿ ಮರಳಿ ಮನೆಗೆ
ಬರುವಷ್ಟರಲ್ಲಿ ಒಂದು ಕೊಣೆಯಲ್ಲಿ ಸ್ನೇಹಾ ಇವಳು ಅವಳಿಗೆ ಇರುವ ಹೊಟ್ಟೆ ಬೆನೆ ಕಡಿಮೆ ಆಗಲಾರದ ಕಾರಣ
ತನ್ನ ಮನಸ್ಸಿನ
ಮೇಲೆ ಪರಿಣಾಮ ಮಾಡಿಕೊಂಡು ಛತ್ತಿಗೆ ಇರುವ ಕಬ್ಬಿಣದ ಕೊಂಡಿಗೆ ಓಡನಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು
ಇರುತ್ತದೆ, ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹದ ಸಂಶಯ, ದೂರು, ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ.
02/2020, ಕಲಂ. 66(ಸಿ), 67(ಡಿ) ಐ.ಟಿ ಕಾಯ್ದೆ ಮತ್ತು 419, 420 ಐಪಿಸಿ :-
ದಿನಾಂಕ 04-01-2020
ರಂದು ಪಿüರ್ಯಾದಿ ಸಂತೋಷಕÄಮಾರಸಿಂಗ ತಂದೆ ಮಹಾವೀರಸಿಂಗ, ಸಾ: ಪೂರೆಲಾಲಶಾ (ಉತ್ತರಪ್ರದೇಶ), ಸದ್ಯ: ವಾಯುಸೇನೆ ಬೀದರ ರವರಿಗೆ ಮೋಬೈಲ್ ಸಂ. 9836871152 ನೇದರಿಂದ ಅಪರಿಚಿತ ವ್ಯಕ್ತಿಯು ಕರೆ ಮಾಡಿ
ಅಮೇಜಾನನಲ್ಲಿ ನೀವು 5000/- ರೂಪಾಯಿಯ ವಸ್ತು ಖರೀಸಿದರೇ ನಿಮಗೆ 40,000/- ರೂಪಾಯಿಯ ಉಡುಗರೆ ಸಿಗುತ್ತದೆ ಅಂತಾ ಸುಳ್ಳು ಹೇಳಿ ನಂಬಿಸಿ, ವಸ್ತುವಿನ ಮೊತ್ತ
ಮತ್ತು ಜಿ.ಎಸ್.ಟಿ ಅಂತಾ ಹೇಳಿ
ಪಿüರ್ಯಾದಿಯಿಂದ ಅವನ ಪೆಟಿಎಂ
ಖಾತೆಗೆ 15,499/- ರೂಪಾಯಿ ಹಾಕಿಸಿಕೊಂಡಿದ್ದು, ನಂತರ
ಪಿüರ್ಯಾದಿಗೆ 10,000/- ರೂಪಾಯಿ ಮರಳಿ ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತೇನೆ ಅಂತಾ ಹೇಳಿ ಪಿüರ್ಯಾದಿ ಮತ್ತು
ಪಿüರ್ಯಾದಿಯವರ ಹೆಂಡತಿಯ
ಬ್ಯಾಂಕ್ ಖಾತೆಯ ಎಟಿಎಂ ಕಾರ್ಡನ ಸಂ. ಎಕ್ಸಪೈರಿ ದಿನಾಂಕ ಹಾಗು ಸಿವಿವಿ ಸಂ. ಪಡೆದುಕೊಂಡು ಮತ್ತು
ಪಿüರ್ಯಾದಿಯ ಮೋಬೈಲ್
ನಂಬರಗೆ ಬಂದ
ಓಟಿಪಿ ಸಂಖ್ಯೆಗಳು ಪಡೆದು 79,000/- ರೂಪಾಯಿ ತೆಗೆದುಕೊಂಡಿರುತ್ತಾನೆ, ಹೀಗೆ ಪಿüರ್ಯಾದಿಯಿಂದ ಒಟ್ಟು 94,499/- ರೂ¥Áಯಿ ಲಪಟಾಯಿಸಿರುತ್ತಾನೆಂದು ಕೊಟ್ಟ ಪಿüರ್ಯಾದಿಯವರ ದೂರಿನ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 01-02-2020 ರಂದು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 11/2020, ಕಲಂ.
457, 380 ಐಪಿಸಿ :-
ದಿನಾಂಕ 31-01-2020 ರಂದು ಫಿರ್ಯಾದಿ ಪ್ರಭು ತಂದೆ
ಅಣೇಪ್ಪಾ ಬಿರಾದಾರ ಸಾ: ಕರಡ್ಯಾಳ, ರವರ ಭಾವನ ಮನೆಯಾದ ತಳವಾಡ (ಕೆ) ಗ್ರಾಮದ ನಾಗಶೇಟ್ಟಿ ರಾಚಣ್ಣಾ ರವರ ಮನೆಯ
ಮುಂಭಾಗದ ಬಾಗಿಲು ಕೀಲಿಯನ್ನು ಯಾರೋ ಅಪರಿಚಿತ ಕಳ್ಳರು ಮುರಿದು ಮನೆಯಲ್ಲಿ ದೇವರ ಕೋಣೆಯಲ್ಲಿಟ್ಟ
ಕಬ್ಬಿಣದ ಅಲಮಾರಿ ಲಾಕರನಲ್ಲಿ 20 ಗ್ರಾಮ ಬಂಗಾರದ ಅವಲಕ್ಕಿ ಸರ ಅ.ಕಿ 50,000/- ರೂ. 2) 10 ಗ್ರಾಂ. ಬಂಗಾರದ ಸುತ್ತು ಊಂಗೂರ ಅ.ಕಿ 20,000/- ರೂ., 3) 10 ಗ್ರಾಂ. ಬಂಗಾರದ ಗುಂಡಿನ ಸರ ಅ.ಕಿ 20,000/- ರೂ., 4) 2 ಗ್ರಾಂ. ಬಂಗಾರದ ಮಂಗಳಸೂತ್ರ ಅ.ಕಿ 6,000/- ರೂ., 5) 2 ಗ್ರಾಂ ಬಂಗಾರದ ಗುಂಡಾ ಅ.ಕಿ 5000/- ರೂ ಮತ್ತು 6) ನಗದು ಹಣ 1,70,000/- ರೂ. ಹೀಗೆ ಓಟ್ಟು 2,71,000/- ರೂ. ಬೆಲೆ ಬಾಳುವ ಬಂಗಾರ ಮತ್ತು ನಗದು ಹಣ
ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಲಿಖಿತ ಸಾರಾಂಶದ ಮೇರೆಗೆ
ದಿನಾಂಕ 01-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.