Police Bhavan Kalaburagi

Police Bhavan Kalaburagi

Wednesday, October 21, 2020

BIDAR DISTRICT DAILY CRIME UPDATE 21-10-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 21-10-2020

ಬೀದರ ಗ್ರಾಮೀಣ ಠಾಣೆ ಅಪರಾಥ ಸಂಖ್ಯೆ 45/2020 ಕಲಂ 427 ಐಪಿಸಿ ಮತ್ತು ಕಲಂ 3 ಪ್ರಿವೆನ್ಷನ್ ಆಫ್ ಡ್ಯಾಮೆಜ್ ಟೂ ಪಬ್ಲಿಕ್ ಪ್ರಾಪರ್ಟಿ ಕಾಯ್ದೆ 1984 :-

ದಿನಾಂಕ  20/10/2020   ರಂದು 1900  ಗಂಟೆಗೆ ಶ್ರೀ  ಜಾನ ತಂದೆ ಸೈಮನ ವಯ-41|| ಮಲ್ಟಿ ಟಾಸ್ಕಿಂಗ ಸ್ಟಾಪ ಸಾ||  ಭಾರತೀಯ ಪುರಾತತ್ವ ಸರ್ವೆಕ್ಷಣಾ  ಇಲಾಖೆ ಬೀದರ ರವರು ಠಾಣೆಗೆ ಹಾಜರಾಗಿ   ಲಿಖಿತ  ದೂರು ನೀಡಿದರ ಸಾರಾಂಶವೆನೆಂದರೆ.  ಬೀದರ  ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಯಲ್ಲಿ ಈಗ ಎಡು ವರ್ಷದಿಂದ ಮಲ್ಟಿ ಟಾಸ್ಕಿಂಗ ಸ್ಟಾಪ ಅಂತ ಕೆಲಸ ಮಾಡಿಕೊಂಡಿದ್ದು   ಇಲಾಖೆಯ ವ್ಯಾಪ್ತಿಯಲ್ಲಿ ಅಷ್ಟುರದ ಚೌಖಂಡಿ ಹಜರತ್ ಖಲೀಲ್ ಉಲ್ ಶಾ ಮತ್ತು ಅಹ್ಮದ ಶಾ ವಲಿ ಸ್ಮಾರಕಗಳು  ಇರುತ್ತವೆ. ಫೀರ್ಯಾದಿಯು ದಿನಾಲು ಸ್ಮಾರಕಗಳನ್ನು ಮುಂಜಾನೆ 9 ಗಂಟೆಗೆ ಹೋಗಿ  ಬಾಗಿಲು ತೆರೆದು ಪ್ರವಾಸಿಗರ ಭೆಟ್ಟಿಗೆ ಅವಕಾಶ ನೀಡಿ ಸಾಯಾಂಕಾಲ 6 ಗಂಟೆಗೆ ಬಾಗಲಿಗಳಿಗೆ ಬೀಗ ಹಾಕಿ ಹೋಗಿದ್ದು ದಿನಾಂಕ 20/10/2020 ರಂದು ಮುಂಜಾನೆ 9 ಗಂಟೆಗೆ ನಾನು ಅಷ್ಟುರದ ಚೌಖಂಡಿ ಹಜರತ್ ಖಲೀಲ್ ಉಲ್ ಶಾ ಮತ್ತು ಅಹ್ಮದ ಶಾ ವಲಿ ಸ್ಮಾರಕಕ್ಕೆ ಹೋಗಿ ನೋಡಲಾಗಿ ಅಲ್ಲಿನ ಮುಖ್ಯ ದ್ವಾರದ ಬೀಗ ಮತ್ತು ಬಾಗಿಲನ್ನು ಮುರಿದು ಹಾನಿ ಮಾಡಿದ್ದು ಕಂಡು ಬಂದಿರುತ್ತದೆ. ದಿನಾಂಕ 19,20/10/2020 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ಸ್ಮಾರಕದ ಮುಖ್ಯ ದ್ವಾರದ ಬೀಗ ಮತ್ತು ಬಾಗಿಲನ್ನು ಮುರಿದು ಹಾನಿ ಮಾಡಿರುತ್ತಾರೆ, ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 71/2020 ಕಲಂ 379 ಐಪಿಸಿ :-

20/10/20 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ.ದುರ್ಗೆಶ ತಂದೆ ನರಸಿಂಗ ಠಾಕೂರ ವಯ:36 ವರ್ಷ ಉ:ವ್ಯಾಪಾರ ಸಾ:ಲಾಡಗೇರಿ ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 17-10-2020 ರಂದು ಮಧ್ಯಾನ್ಹ 1300 ಗಂಟೆಯ ಸುಮಾರಿಗೆ ಫಿರ್ಯಾದಿಯು  ಬೀದರ ನಗರದ ಅಶೋಕಾ ಹೋಟಲ ಹತ್ತಿರ ಹೂ ಖರೀದಿಸಲು ಹೋದಾಗ ಅಲ್ಲಿ  ಪ್ಯಾಂಟಿನ ಜೇಬನಲ್ಲಿರುವ ಅ.ಕಿ.12000/-ರೂ ನ ಮೋಬೈಲ ಫೋನ್ ಐಎಮ್.ಇ.ಐ. ನಂ. 860657043935978  & 860657043935960 ನೇದ್ದು  ಯಾರೂ ಅಪರಿಚಿತ ಕಳ್ಳರು ದಿನಾಂಕ 17-10-2020 ರಂದು 1300 ಗಂಟೆಯಿಂದ 1400 ಗಂಟೆಯ ಅವಧಿಯಲ್ಲಿ ನನಗೆ ಗೊತ್ತಿಲದಂತೆ ನನ್ನ ಪ್ಯಾಂಟಿನ ಜೇಬಿನಲ್ಲಿಂದ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 94/2020 ಕಲಂ 420, 468, 471 ಐಪಿಸಿ :-

ದಿನಾಂಕ 20/10/2020 ರಂದು 1700 ಗಂಟೆಗೆ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲುಕಾ ಪಂಚಾಯತ ಕಮಲನಗರ ತಾಲುಕುರವರು ಸಲ್ಲಿಸಿದ ದೂರು ರವಾನೆ ಗುಮಾಸ್ತ ತಾಲುಕಾ ಪಂಚಾಯತ ಕಮಲನಗರ ಪಿಟರ ಪೌಲ ಎಸ್‌ಡಿಎ ರವರು ಹಾಜರು ಪಡಿಸಿದ ದೂರು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಶ್ರೀ ಪ್ರಶಾಂತ ತಂದೆ ಲಲ್ಲೆಶಪ್ಪಾ ಪ್ರಸ್ತುತ ತಾಲೂಕ ಯೋಜನಾಧಿಕಾರಿಗಳು ತಾಲೂಕ  ಪಂಚಾಯತ ಕಮಲನಗರ ಹಿಂದಿನ ಸಹಾಯಕ ಸಾಂಖ್ಯಿಕ  ಅಧಿಕಾರಿ ಬೀದರ ಇವರು ಅನುಕಂಪದ ಆಧಾರದ ಮೇರೆಗೆ ಆರ್ಥಿಕ ಮತ್ತು ಸಾಂಖ್ಯಿಕ  ನಿರ್ದೆಶನಾಲಯದಲ್ಲಿ ಗಣತಿದಾರರ ವೃಂದದಲ್ಲಿ ದಿನಾಂಕ 31/07/2001 ರಂದು ನೇಮಕಾತಿ ಹೊಂದಿ ಸಾಂಖ್ಯಿಕ  ನಿರೀಕ್ಷಕರು /ಸಹಾಯಕ ಸಾಂಖ್ಯಿಕ ಅಧಿಕಾರಿ /ಸಯಾಯಕ ನಿರ್ದೆಶಕ ವೃಂದಕ್ಕೆ ಮುಂಬಡ್ತಿ ಹೊಂದು ಪ್ರಸ್ತುತ ತಾಲೂಕು ಯೋಜನಾಧಿಕಾರಿ ತಾಲೂಕ ಪಂಚಾಯತ ಕಮಲನಗರ ಜಿಲ್ಲೆ ಬೀದರ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಸದರಿ ನೌಕರರರಿಗೆ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದೆ ಸಹಾಯಕ ನಿರ್ದೆಶಕರು ಹುದ್ದೆಗೆ ಮುಂಬಡ್ತಿಗಾಗಿ ಪರಿಶೀಲಿಸಲು ಅವರ ಸೇವಾ ವಿವರಗೊಂದಿಗೆ ಪದವಿಯಲ್ಲಿ ತೆರ್ಗಡೆ ಹೊಂದಿದ ಬಗ್ಗೆ ಹಾಗು ಇತ್ಯಾದಿ ದಾಖಲೆಗಳನ್ನು ಸಲ್ಲಿಸುವಂತೆ  ಸೂಚಿಸಲಾಗಿದ್ದರ  ಮೇರೆಗೆ ಸದರಿಯವರು  Eastern Institute for Integrated Learning in  Management University Sikkim ವಿಶ್ವವಿದ್ಯಾನಿಲದಿಂದ ಪದವಿ ಪಡೆದಿರುವುದಾಗಿ ಧೃಡಿಕೃತ ಅಂಕಪಟ್ಟಿ ಹಾಗು ಪದವಿ ಪ್ರಮಾಣ ಪತ್ರವನ್ನು ಕಛೇರಿ ಮುಖ್ಯಸ್ಥರ  ಮೂಲಕ ನಿರ್ದೆಶನಾಲಯಕ್ಕೆ  ಸಲ್ಲಿಸಿದ್ದರು.   ಇಲಾಖಾ ಮುಂಬಡ್ತಿ ಸಮೀತಿ ಸಭೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದ ಪದವಿ ಅಂಕಪಟ್ಟಿ ಹಾಗು ರಾಜ್ಯದ ಹೊರಗಿನ ವಿವಿಧ ವಿಶ್ವವಿದ್ಯಾನಿಲಯಗಳಿಂದ ದೂರ ಶಿಕ್ಷಣದ ಮೂಲಕ ಪಡೆದಿರುವ ಅಂಕಪಟ್ಟಿಗಳ  ನೈಜತೆ ಪರಿಶಿಲಿಸಲು  ತಿರ್ಮಾನಿಸಿದಂತೆ ಸದರಿಯವರು ಸಲ್ಲಿಸಿರುವರು Eastern Institute for Integrated Learning in  Management University Sikkim ವಿಶ್ವವಿದ್ಯಾನಿಲಯದ ಪದವಿ ಅಂಕಪಟ್ಟಿ ನೈಜತೆ ಕುರಿತ ಪರಿಶೀಲನಗೆ ಸಂಭಂಧಿಸಿದ ವಿಶ್ವವಿದ್ಯಾನಿಲಯಕ್ಕೆ  ಪತ್ರ ವ್ಯವಹಾರ ಮಾಡಲಾಗಿತ್ತು. Deputy Director/APIO, Higher Education Human Resource Development Department Government of  Sikkim  ಇವರ ಪತ್ರ ಸಂಖ್ಯೆ 224/DIR/HE/ HRDD, Dated 03/09/2020 03/09/2020 ರಲ್ಲಿ ಈ ಕೆಳಕಂಡಂತೆ ತಿಳಿಸಿರುತ್ತಾರೆ. AS Such the EIILUM related documents of Ashok bearing enrolment no EIIlUM/10/S2158659 for BA (Economics) is not valid and genuine   There is no UGC// DEC  recognition for these aforementioned degree courses since inception of university till its closure”  (ಪ್ರತಿ ಲಗತ್ತಿಸಿದೆ) ಮೇಲಿನ ಅಂಶನಗಳನ್ನು ಪರಿಶೀಲಿಸಲಾಗಿ ಸದರಿಯವರು ನಿರ್ದೆಶನಾಲಯಕ್ಕೆ ನಕಲಿ (Fake) ಪದವಿ ಪ್ರಮಾಣ ಪತ್ರ ಸಲ್ಲಿಸಿ ಮುಂಬಡ್ತಿ ಪಡೆದಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಹಾಗು ಸರಕಾರಕ್ಕೆ/ ಇಲಾಖೆಗೆ ವಂಚನೆ ಮಾಡಿ ಕಾನೂನು ಬಾಹಿರವಾಗಿ ಕರ್ತವ್ಯಲೋಪವೆಸಗಿ ಸರಕಾರಿ ನೌಕರನೊಬ್ಬನಿಗೆ ಸಲ್ಲದ ರೀತಿಯಲ್ಲಿ ವರ್ತಿಸಿರುತ್ತಾರೆ. ಆದ್ದರಿಂದ ಉಲ್ಲೇಖದನ್ವಯ ಮಾನ್ಯ ನಿರ್ದೆಶಕರು  ಆರ್ಥಿಕ ಮತ್ತು ಸಾಂಖ್ಯಿಕ  ನಿರ್ದೆಶನಾಲಯ ಬಹುಮಹಡಿ ಕಟ್ಟಡ ಬೆಂಗಳೂರು ರವರು ಇದೊಂದು ಕ್ರಿಮಿನಲ್ ಪ್ರಕರಣವೆಂದು   ಪರಿಗಣಿಸಿ ಇವರ ವಿರುಧ್ಧ  ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆ ಕೈಗೋಳ್ಳಲಾಗಿದೆ.