ಕೊಲೆ
ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಗೌಸಿಯಾಬೇಗಂ ಗಂಡ ಅಹೇಮದ ಲಾಲಕೋಟೆ ಸಾ : ಗುಲಾಬ ನಬಿ ಕಾಲೂನಿ ಮಿಜನಾ ನಗರ ಕಲಬುರಗಿ ರವರ ಮನೆಯ
ಎದರುಗಡೆ ರಾಜುಕುಮಾರ ತಂದೆ ಗಂಗಣ್ಣಾ ಬಾಸಗಿ ಇವರ
ಮನೆ ಇರುತ್ತದೆ. ನಮ್ಮ ಮತ್ತು ಅವರ ಮನೆ ಮದ್ಯದಲ್ಲಿ 20 ಫೀಟನ ರಸ್ತೆ ಇರುತ್ತದೆ. ಈ ರಸ್ತೆ ಹೊಡ್ಡಾ ತಗ್ಗು ಇರುತ್ತದೆ. , ಸದರಿ ರಾಜಕುಮಾರ ಬಾಸಗಿ
ಇವರು ತಮ್ಮ ಮನೆಯ ಎದರುಗಡೆ ಆಗಾಗ ಕಟಕನ್ನು ಹಾಕುತಿದ್ದರಿಂದ ನಮ್ಮ ಮನೆಯ ಎದರುಗಡೆ ಇಳಿಜಾರು
ಆಗಿದ್ದು ಮಳೆ ಬಂದಾಗ ನೀರು ನಮ್ಮ ಮನೆಯ ಅಂಗಳದಲ್ಲಿ ಬರುತ್ತಿದ್ದರಿಂದ ನಮಗೆ ತುಂಬಾ
ತೊಂದರೆಯಾಗುತಿದ್ದಾಗ ನನ್ನ ಮೈದುನಾ ಆಶೀಫ್
ಮತ್ತು ನನ್ನ ಗಂಡ ಅಹೇಮದ ಇವರೊಂದಿಗೆ ರಾಜಕುಮಾರ
ಭಾಸಗಿ ಇವರೊಂದಿಗೆ ಜಗಳವಾಗಿರುತ್ತದೆ. ದಿನಾಂಕ. 10-3-2019 ರಂದು ಸಂಜೆ. 6-00 ಗಂಟೆಯ ಸುಮಾರಿಗೆ ನಾನು
ಮತ್ತು ನಾದನಿ ಶಬನಾ , ಅವಳ ಗಂಡ ಮಹಿಬೂಬ ತಂದೆ
ಮದರಸಾಬ ಹಾಗೂ ನನ್ನ ಗಂಡ ಅಹೇಮದ
ಮನೆಯಲ್ಲಿದ್ದಾಗ ಸದರಿ ನಮ್ಮ ಮನೆಯ ಎದರುಗಡೆ
ಇರುವ ರಾಜಕುಮಾರ ಭಾಸಗಿ ಇವರು ಕಟಕನ್ನು ಹಾಕುತಿದ್ದು
ನಮ ಮನೆಯ ಎದರುಗಡೆ ಇಳಿಜಾರು ಮಾಡಿ ಸದರಿ ರಾಜುಕುಮಾರ ಮತ್ತು ಇತನ ತಮ್ಮಂದಿರಾದ ಬಾಲಾಜಿ ,
ಅಂಬರೀಷ ಇವರೆಲ್ಲರೂ ಕಟ್ಟಕ್ಕನ್ನು ಎಳೆದು ಸರಿ ಮಾಡುತಿದ್ದಾಗ ಸಂಜೆ. 7-00 ಗಂಟೆಯ ಸುಮಾರಿಗೆ ನನ್ನ ಮೈದುನ ಆಶೀಪ ಇತನು ಕೆಲಸ ಮುಗಿಸಿಕೊಂಡು ಮನೆಗೆ
ಬಂದಿದ್ದು ಆಗ ನನ್ನ ಮೈದುನ ಮತ್ತು ನನ್ನ ಗಂಡ
ಅಹೇಮದ ಕೂಡಿಕೊಂಡು ಅವರಿಗೆ ನಮ್ಮ ಮನೆಯ ಎದರುಗಡೆ
ಇಷ್ಟು ಎತ್ತರ ಮತ್ತು ಇಳಿಜಾರಿ ಏಕೆ ಮಾಡಿದ್ದಿರಿ
ಇದರಿಂದ ನಮ್ಮ ಮನೆಯ ಅಂಗಳ ಒಳಗೆ ರಸ್ತೆ ನೀರು ಬರುತ್ತವೆ ಅಂತಾ ಕೇಳಲು ಹೋದಾಗ ನನ್ನ ಗಂಡನೊಂದಿಗೆ ಅವರ ತಂದೆ ಗಂಗಣ್ಣ ಭಾಸಗಿ ತಕರಾರು
ಮಾಡುತಿದ್ದರು, ಅದೇ ವೇಳೆಗೆ ನನ್ನ ಮೈದುನಾ ರಾಜಕುಮಾರನಿಗೆ ಕೇಳಲು ಹೋದಾಗ ಅಷರಲ್ಲಿ ಆತನ ತಮ್ಮಂದಿರಾದ ಬಾಲಾಜಿ ಬಾಸಗಿ, ಅಂಬರೀಷ @ ದಶರಥ ಬಾಸಗಿ ಇವರು ಮೂರು
ಜನರು ಬಂದು ನನ್ನ ಮೈದುನಾ ಆಶೀಪನಿಗೆ ಸೂಳೆ
ಮಕ್ಕಳೆ ಪದೆ ಪದೆ ರಸ್ತೆ ಬಗ್ಗೆ ನಮ್ಮೊಂದಿಗೆ ತಕರಾರು ಮಾಡುತಿದ್ದಿರಿ ನಿಮಗೆ ಇವತ್ತು ಒಂದು
ಗತಿಕಾಣಿಸುತ್ತೇವೆ ಅಂತಾ ಮೂರು ಜನರು ಕೂಡಿಕೊಂಡು, ಆಶೀಪನಿಗೆ ರಾಜಕುಮಾರನು
ಒತ್ತಿ ಹಿಡಿದಿದ್ದು , ಬಾಲಾಜಿ , ಅಂಬರೀಷ@ದಶರಥ ಕೈಯಿಂದ ಮುಷ್ಟಿ ಮಾಡಿ ಹೊಟ್ಟೆಯಲ್ಲಿ , ಎದೆಗೆ ಜೋರಾಗಿ ಹೊಡೆದಿರುವದರಿಂದ ಅವನು ಕೆಳಗೆ ಬಿದ್ದಾಗ ಮೂರುಜನರು ಆಗನಿಗೆ
ಕಾಲಿನಿಂದ ಎದೆಗೆ ಹೊಟ್ಟೆಯಲ್ಲಿ ಒದೆಯುತ್ತಿದ್ದಾಗ
ಅವರ ತಂದೆ ಗಂಗಣ್ಣಾ ಭಾಸಗಿ ಇತನು ಆಶೀಪನಿಗೆ ಬಿಡಬ್ಭೆಡಿರಿ ಖಲಾಸ ಮಾಡ್ರೀ ಅಂತಾ
ಬೈಯುತಿದ್ದನು , ಆಗ ನಾನು ಆಶೀಫನಿಗೆ ಹೊಡೆಯುವದನ್ನು ನೋಡಿ
ಚೀರಾಡುವಾಗ ನನ್ನ ಜೊತೆಯಲ್ಲಿದ್ದ ನನ್ನ ನಾದನಿ ಶಬನಾ ಅವಳ ಗಂಡ ಮಹಿಬೂಬ ,
ಹಾಗೂ ನನ್ನ ಗಂಡ ಅಹೇಮದ ಎಲ್ಲರೂ ಕೂಡಿಕೊಂಡು ಆಶೀಫನಿಗೆ
ಬಿಡಿಸಿಕೊಳ್ಳುವಾಗೆ ಓಣಿಯಲ್ಲಿನ ಆಶೀಪ ತಂದೆ ಅಬ್ದುಲ ಕರೀಮ , ಜಾಂಗೀರ ತಂದೆ ಸೈಯದ ಲಾಲ
ಹಾಗೂ ಇತರರು ಸಹಾ ಬಂದು ಜಗಳ ಬಿಡಿಸಿಕೊಂಡೇವು ನಂತರ ನನ್ನ ಮೈದುನ ಆಶೀಫನಿಗೆ ನೋಡಲು ಭೇ ಹೋಶಾಗಿ
ಬಿದ್ದಿದನು ಅಷರಲ್ಲಿ ಮಹಿಬೂಬ , ಆಶೀಪ ತಂದೆ ಅಬ್ದುಲ ಕರೀಮ , ಜಾಂಗೀರ ತಂದೆ ಸೈಯದ ಲಾಲ ಇವರು ಒಂದು
ಆಟೋದಲ್ಲಿ ಕೂಡಿಸಿಕೊಂಡು ಮೊದಲು
ಕ್ಯೂ.ಪಿ. ಆಸ್ಪತ್ರೆಗೆ ಕರೆದುಕೊಂಡು ಬಂದು 9-00 ಪಿ.ಎಂ.ಕ್ಕೆ. ತೋರಿಸಿದಾಗ ಅಲ್ಲಿನ ವ್ಶೆದ್ಯರು ಮೃತ ಪಟ್ಟಿರುವದಾಗಿ ತಿಳಿಸಿದ್ದು ನಂತರ ಜಿಲ್ಲಾ
ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಮನೆಯ ಎದರುಗಡೆಯ ರಸ್ತೆ ಮೇಲೆ ಕಟಕ
ಹಾಕುವ ವಿಷಯದಲ್ಲಿ ಆಗಾಗ ಜಗಳವಾಗಿದ್ದು ಅದೇ ವೈಮನಸಿನಿಂದ 1) ರಾಜಕುಮಾರ ತಂದೆ ಗಂಗಣ್ಣಾ ಭಾಸಗಿ 2)
ಬಾಲಾಜಿ ತಂದೆ ಗಂಗಣ್ಣಾ ಭಾಸಗಿ 3) ಅಂಬರೀಷ @ ದಶರಥ ತಂದೆ ಗಂಗಣ್ಣಾ ಭಾಸಗಿ 4) ಗಂಗಣ್ಣಾ ತಂದೆ ಭೀಮಶ್ಯಾ ಭಾಸಗಿ ಸಾ; ಎಲ್ಲರು ಗುಲಾಬನಬಿ
ಕಾಲೂನಿ ಮಿಜಬಾನಗರ ಕಲಬುರಗಿ. ಇವರು ನಾಲ್ಕು
ಜನರು ಕೂಡಿಕೊಂಡು ನನ್ನ ಮೈದುನ ಆಶೀಫ್ ವಯ;24 ವರ್ಷ ಇತನಿಗೆ ಕೈಯಿಂದ
ಹೊಟ್ಟೆಯಲ್ಲಿ ಎದೆಯ ಮೇಲಿ ಗುದ್ದಿದ್ದು ಮತ್ತು ಕೇಳಗೆ ಹಾಕಿ ಕಾಲಿನಿಂದ ಹೊಟ್ಟೆಯಲ್ಲಿ ,ಎದೆಯಲ್ಲಿ ಒದ್ದು ಕೊಲೆ
ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಿದ್ದಣ್ಣ ತಂದೆ ಮಲ್ಲಪ್ಪ
ಪೂಜಾರಿ ಸಾ|| ಸಾಸಾಬಾಳ
ತಾ|| ಸಿಂದಗಿ ರವರು ಈ ವರ್ಷ ತಮ್ಮ ಹೊಲದಲ್ಲಿ ಬೆಳೆದ ಕಬ್ಬನ್ನು ಮಳ್ಳಿ
ಶೂಗರ ಫ್ಯಾಕ್ಟ್ರಿಗೆ ಮಾರಾಟ ಮಾಡಿದ್ದು, ನಮ್ಮ ಕಬ್ಬಿನ ಚೆಕ್ ಬಂದಿರುತ್ತದೆ
ಅಂತಾ ತಿಳಿದು ಕೇಳಲು ದಿನಾಂಕ 10-03-2019 ರಂದು ಬೆಳಿಗ್ಗೆ ಸಾಸಾಬಾಳದಿಂದ
ಮಳ್ಳಿ ಶೂಗರ ಫ್ಯಾಕ್ಟ್ರಿಗೆ ಹೋಗಿರುತ್ತೇನೆ, ನನ್ನ ಕೆಲಸ ಮುಗಿಸಿಕೊಂಡು
ನಂತರ 2;00 ಪಿ.ಎಂ ಸುಮಾರಿಗೆ ನಾಗರಳ್ಳಿಯಿಂದ
ಸಾಸಾಬಾಳಿಗೆ ಹೋಗಲು ನಮ್ಮೂರಿನ ಸುರೇಶ ತಂದೆ ಗೊಲ್ಲಾಳಪ್ಪ ಕಾರಗೊಂಡ ಇವರ ಮ್ಯಾಕ್ಸಿಕ್ಯಾಬ ವಾಹನ ನಂ ಕೆ.ಎ-24/2124 ನೇದ್ದರಲ್ಲಿ ಕುಳಿತು ಪ್ರಯಾಣ ಮಾಡಿಕೊಂಡು ಹುಗುತ್ತಿದ್ದೇ,
ಸದರಿ ವಾಹನವನ್ನು ವಡಗೇರಾ ಗ್ರಾಮದ ಮಲ್ಲಪ್ಪ ತಂದೆ ಮರೆಪ್ಪ ಚಲವಾದಿ ಎಂಬುವನು ಚಲಾಯಿಸುತ್ತಿದ್ದನು,
ನನ್ನೊಂದಿಗೆ ಸದರಿ ವಾಹನದಲ್ಲಿ ಅದರ ಮಾಲಿಕ ಸುರೇಶ ಹಾಗು ಬೇರೆ ಬೇರೆ ಊರಿನ ಇತರೆ
ಪ್ರಯಾಣಿಕರು ಸೇರಿದಂತೆ 4-5 ಜನ ಹೆಣ್ಣು ಮಕ್ಕಳಿದ್ದರು, ಮ್ಯಾಕ್ಸಿಕ್ಯಾಬ ವಾಹನ ಚಾಲಕನಾದ ಮಲ್ಲಪ್ಪ ಈತನು ವಾಹನವನ್ನು ಅತೀವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ
ನಡೆಸುತ್ತಿದ್ದನು, ಚಾಲಕ ನನಗೆ ಪರಿಚಯದವನಾಗಿದ್ದರಿಂದ ಅವನಿಗೆ ವಾಹನವನ್ನು
ನೋಡಿಕೊಂಡು ನಿಧಾನವಾಗಿ ಚಲಾಯಿಸು ಅಂತಾ ಹೇಳುತ್ತಿದ್ದೇ, ಆದರೂ ವಾಹನವನ್ನು
ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದನು, ವಾಹನವು ಹೊನ್ನಳ್ಳಿ
ಕ್ರಾಸ್ ದಾಟಿ ಸುಮಾರು 2 ಕೀ.ಮಿ ದೂರದಲ್ಲಿ ಹೋಗುತ್ತಿದ್ದಾಗ
ಸುಮಾರು 2;30 ಪಿ.ಎಂ ಗಂಟೆಗೆ ಸಿಂದಗಿ ಕಡೆಯಿಂದ
ಒಂದು ಕಾರು ಅತಿವೇಗವಾಗಿ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಬರುತ್ತಿತ್ತು, ಮ್ಯಾಕ್ಸಿಕ್ಯಾಬ ವಾಹನದ ಚಾಲಕನು ಸಹ ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ
ಹೊಗುತ್ತಿರುವಾಗ ಒಮ್ಮಿಂದ ಒಮ್ಮೇಲೆ ಎರಡು ವಾಹನಗಳು ಮುಖಾ ಮುಖಿ ಡಿಕ್ಕಿ ಹೊಡೆದವು, ಆಗ ನಮ್ಮ ವಾಹನ ಎರಡು ಪಲ್ಟಿಯಾಗಿ ಬಿದ್ದಿತು, ನಾನು ಗಾಬರಿಗೊಂಡು
ನೋಡಲಾಗಿ ನಮ್ಮ ವಾಹನದಲ್ಲಿ ಕುಳಿತ ಹೆಣ್ಣುಮಕ್ಕಳಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದವು,
ನಮ್ಮ ವಾಹನದ ಚಾಲಕನಿಗೆ ತಲೆಗೆ ರಕ್ತಗಾಯವಾಗಿ ಅಲ್ಲಲ್ಲಿ ಒಳಪೆಟ್ಟಾಗಿದ್ದವು,
ಅದರಂತೆ ಸುರೇಶನ ಎದೆಗೆ ಒಳಪೆಟ್ಟಾಗಿ ಅಲ್ಲಲ್ಲಿ ರಕ್ತಗಾಯಗಳಾಗಿದ್ದವು,
ನನಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಬೆನ್ನಿಗೆ
ಒಳಪೆಟ್ಟಾಗಿತ್ತು, ಮ್ಯಾಕ್ಸಿಕ್ಯಾಬು ಡಿಕ್ಕಿ ಹೊಡೆದ ಪರಿಣಾಮವಾಗಿ ಮುಂದಿನ
ಎರಡು ಗಾಲಿಗಳು ಕಿತ್ತಿ ಹೊರಗೆ ಬಿದ್ದಿದ್ದು, ಜಖಂಗೊಂಡಿರುತ್ತದೆ,
ನಂತರ ಅಲ್ಲಿಯೇ ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಮಾರುತಿ ಸುಜಕಿ ಅಲ್ಟ್ ಕಾರನ್ನು
ನೋಡಲಾಗಿ ಸಂಪೂರ್ಣ ಜಖಂಗೊಂಡಿದ್ದು ಅದರ ನಂ ಎಪಿ-22/ಎಮ್-4677
ನೇದ್ದು ಇತ್ತು, ಅದರಲ್ಲಿ ಚಾಲಕ ಸಮೇತ 5 ಜನರಿದ್ದರು, ಚಾಲಕನಿಗೆ ಬಲ ಹಣೆಗೆ ಮತ್ತು ಬಲ ಮೂಗಿನ ಹತ್ತಿರ
ಭಾರಿ ರಕ್ತಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದನು, ಅಲ್ಲಲ್ಲಿ ತರಚಿದಗಾಯಗಳಾಗಿದ್ದವು,
ಅಲ್ಲದೇ ಇನ್ನುಳಿದ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಹ ಕೈಗೆ ಕಾಲುಗಳಿಗೆ ಸಾದಾ ಮತ್ತು
ಭಾರಿಗಾಯಗಳಾಗಿದ್ದವು, ನಂತರ ಕಾರನಲ್ಲಿದ್ದವರು ತೀವರ ಗಾಯಗೊಂಡಿದ್ದ ಕಾರ
ಚಾಲಕನನ್ನು 108 ಅಂಬುಲೆನ್ಸನಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ಆಸ್ಪತ್ರೆಗೆ
ತೆಗೆದುಕೊಂಡು ಹೋದರು, ಸ್ಥಳದಲ್ಲಿ
ಸೇರಿದ್ದ ಜನರು ಕೂಡಿಕೊಂಡು ನಮ್ಮ ವಾಹದಲ್ಲಿದ್ದವರಿಗೆ ಬೇರೆ ಇನ್ನೊಂದು ಅಂಬೂಲೆನ್ಸನಲ್ಲಿ ಹಾಕಿ ಚಿಕಿತ್ಸೆ
ಕುರಿತು ಸಿಂದಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು, ನನ್ನ ಬೆನ್ನಿಗೆ ಸ್ವಲ್ಪ
ಪೆಟ್ಟಾಗಿದ್ದು ನಾನು ದವಾಖಾನೆಗೆ ಹೋಗಿರುವುದಿಲ್ಲಾ, ನಂತರ ನಾನು ಠಾಣೆಗೆ
ದೂರು ಸಲ್ಲಿಸಲು ಬರುವುದರೊಳಗಾಗಿಯೇ ಮಾರುತಿ ಸುಜಕಿ ಅಲ್ಟ್ ಕಾರಿನ ಚಾಲಕನು ಚಿಕಿತ್ಸೆ ಫಲಕಾರಿಯಾಗದೆ
ಸುಮಾರು 3;30 ಪಿ.ಎಂ ಗಂಟೆಗೆ ಯಡ್ರಾಮಿ ಸರಕಾರಿ
ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ವಿಷಯ ತಿಳಿದಿರುತ್ತದೆ, ಮೇಲ್ಕಂಡ ಮ್ಯಾಕ್ಸಿಕ್ಯಾಬ ಚಾಲಕ ಮಲ್ಲಪ್ಪ ತಂದೆ
ಮರೆಪ್ಪ ಚಲವಾದಿ ಮತ್ತು ಮಾರುತಿ ಸುಜಕಿ ಅಲ್ಟ್ ಕಾರಿನ ಚಾಲಕ ಇಬ್ಬರು ತಮ್ಮ ವಾಹನಗಳನ್ನು ಅತಿವೇಗವಾಗಿ
ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಮುಖಾ ಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಇರುತ್ತದೆ,
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಕೌಸರ್ ಸುಲ್ತಾನಾ ಗಂಡ
ಬಶೀರ ಖಾನ ವ:48 ಉ:ಮುಖ್ಯಗುರುಗಳು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ರವರ ಶಾಲೆ ಮದಿನಾ ಕಾಲೋನಿಯ ಮುಖ್ಯ ರಸ್ತೆಯ ಮೇಲಿದ್ದು ಪ್ರತಿದಿನದಂತೆ
ದಿನಾಂಕ; 26/02/2019 ರಂದು ಸಾಯಂಕಾಲ 5;30 ಪಿ.ಎಂ ಸುಮಾರಿಗೆ ಶಾಲೆಯ
ಎಲ್ಲಾ ಕೊಣೆಯ ಬಾಗಿಲುಗಳಿಗೆ ಕೀಲಿ ಹಾಕಿದ್ದು ಹಾಗು ನಾನು ಕೂಡುವ ಹೆಚ್ಎಮ್ ಆಫಿಸ್ ರೂಂ ಕ್ಕೆ ಸಹ ಕೀಲಿ ಹಾಕಿ ಮನೆಗೆ ಹೊಗಿರುತ್ತೇನೆ. ಹಾಗು ನನ್ನ ಜೊತೆಗೆ ಶಾಲೆಯ ಎಲ್ಲಾ ಸಹ ಶಿಕ್ಷಕಿಯರು ಸಹ
ಸಾಯಂಕಾಲ ಮನೆಗೆ ಹೊಗಿರುತ್ತಾರೆ. ದಿನಾಂಕ; 27/02/2019 ರಂದು
ಬೆಳಿಗ್ಗೆ 9;00 ಗಂಟೆಗೆ ನಾನು
ಶಾಲೆಗೆ ಬಂದು ನೋಡಲಾಗಿ ಯಾರೋ ಕಳ್ಳರು ದಿನಾಂಕ; 26/02/2019 ಹಾಗು
27/02/2019 ರ ರಾತ್ರಿ ನನ್ನ ಕಾರ್ಯಾಲಯದ ಬಾಗಿಲು
ಕೀಲಿ ಮುರಿದು ಒಳಗೆ ಪ್ರವೇಶಮಾಡಿ ನನ್ನ
ಡ್ರಾದಲ್ಲಿ ಇದ್ದ ಕೀಲಿಕೈಗಳು ತೆಗೆದುಕೊಂಡು ಆಲಮಾರಿ
ತೆಗೆದು ಶಾಲೆಯ 10 ವರ್ಷಗಳ
ದಾಖಲಾತಿಗಳು, ರಜಿಸ್ಟರ್ಗಳು ಹಾಗು
ಪುಸ್ತಕಗಳು ಈ ಕಳುವು ಮಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಚಿದಾನಂದ ಅಲ್ಲನ್ ಸಾ|| ಮನೆ ನಂ; 11-582 ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ರವರು ದಿನಾಂಕ; 25/01/2019 ರಂದು ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರದಲ್ಲಿ
ನನ್ನ ಹೊಂಡಾ ಡಿಯೋ ದ್ವಿಚಕ್ರ ವಾಹನ ನಂ; ಕೆಎ 32 ಇಪಿ 5673 ಚೆಸ್ಸಿ ನಂ;
ಎಮ್ಇ4ಜೆ39ಡಿಡಿಹೆಚ್7006360 ಇಂಜಿನ ನಂ; ಜೆಎಫ್39ಇ72008184 ಅ||ಕಿ|| 35,000/- ರೂ ನೇದ್ದು ನಿಲುಗಡೆಮಾಡಿ ದೇವರ
ದರ್ಶನಪಡೆದುಕೊಂಡು ಮರಳಿ ಬಂದು ನೋಡಲಾಗಿ ಸದರಿ ನನ್ನ ದ್ವಿಚಕ್ರವಾಹನ ಇರಲಿಲ್ಲ ಯಾರೋ ಕಳ್ಳರು
ಕಳ್ಳತನಮಾಡಿಕೊಂಡು ಹೊಗಿರುತ್ತಾರೆ. ನಾನು ಇಲ್ಲಿಯವರೆ ಕಲಬುರಗಿ ನಗರದಲ್ಲಿ ಹುಡುಕಾಡಿದರೂ ನನ್ನ
ದ್ವಿಚಕ್ರ ವಾಹನ ಸಿಕ್ಕಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಗೈಹಿಣಿಗೆ ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀಮತಿಸಂಗೀತಾ ಗಂಡ ರಾಜಶೇಖರ ವಾಗ್ಮೋರೆ, ಸಾ:ಬಸವಣ್ಣಾ ನಗರ ಕಲಬುರಗಿ ರವರಿಗೆ ಸುಮಾರು 12 ವರ್ಷಗಳ ಹಿಂದೆ ಮದುವೆ ಆಗಿದ್ದು ನನ್ನ ತವರು ಮನೆ ಗೋಳಾ(ಬಿ) ಗ್ರಾಮ ಇರುತ್ತದೆ.
ನನ್ನ ಗಂಡನಾದ ರಾಜಶೇಖರ ತಂದೆ ರಾಮಚಂದ್ರ ವಾಗ್ಮೋರೆ ಇವನು ಸಾರಾಯಿ ಕುಡಿಯುವ ಚಟ ಉಳ್ಳವನಿದ್ದು
ಮದುವೆಯಾದ ಸುಮಾರು 2-3 ವರ್ಷಗಳ ವರೆಗೆ ನನ್ನೊಂದಿಗೆ ಚನ್ನಾಗಿ ಇದ್ದನು. ಆನಂತರ ದಿನಾಲು ಸರಾಯಿ ಕುಡಿದು
ಮನೆಗೆ ಬಂದು ನನಗೆ ಅವಾಚ್ಯವಾಗಿ ಬೈಯುತ್ತಾ ಕ್ಷುಲಕ್ಕ ಕಾರಣಗಳಿಗಾಗಿ ಜಗಳ ಮಾಡುತ್ತಾ ಹೊಡೆಬಡೆ
ಮಾಡುತ್ತಾ ದೈಹಿಕ ಮತ್ತು ಮಾನಸಿಕ ಕಿರಕುಳ ಕೊಡುತ್ತಾ ಬಂದಿರುತ್ತಾನೆ. ನಮ್ಮ ಅತ್ತೆಯಾದ
ಲಲಿತಾಬಾಯಿ ಮಾವನಾದ ರಾಮಚಂದ್ರ ತಂದೆ ಲಕ್ಷ್ಮಣರಾವ ವಾಗ್ಮೋರೆ, ನಾದನಿಯಾದ ಸಂತೋಷಿ ಗಂಡ
ಮಾರುತಿ ಸಾ:ಗೌರ, ಮೈದುನನಾದ ರಾಘವೇಂದ್ರ ಇವರು ಕೂಡ ನನ್ನ ಗಂಡನಿಗೆ ನನ್ನ ಬಗ್ಗೆ ಇಲ್ಲಸಲ್ಲದ
ಸುಳ್ಳು ಹೇಳಿ ತಲೆತುಂಬಿ ಕಿರಕುಳ ನೀಡುವಂತೆ
ಪ್ರೇರೆಪಿಸುತ್ತಾ ಬಂದಿರುತ್ತಾರೆ, ಇಷ್ಟಾದರು ಸಹ ನಾನು ಇಲ್ಲಿಯ ತನಕ ಸಹನೆ ಮಾಡಿಕೊಳ್ಳತ್ತಾ ಬಂದಿರುತ್ತೇನೆ. ನನಗೆ
ಮೂರುಜನ ಗಂಡು ಮಕ್ಕಳಿದ್ದು ಸುಮಾರು ಒಂದುವಾರದ ಹಿಂದೆ ಈ ಮೇಲೆ ನಮೂದಿಸಿದ ಜನರು ನನ್ನ ಸಂಗಡ
ಮನೆಯಲ್ಲಿ ಜಗಳ ಮಾಡಿ ನನಗೆ ಮನೆಯಿಂದ ಹೊರೆಗೆ ಹಾಕಿರುತ್ತಾರೆ. ಆಗ ನಾನು ನನ್ನ ಮಕ್ಕಳನ್ನು
ಬಿಟ್ಟು ನನ್ನ ತವರು ಮನೆಯಾದ ಗೋಳಾ(ಬಿ) ಗ್ರಾಮಕ್ಕೆ ಬಂದು ನನ್ನ ತಾಯಿ ಮತ್ತು ಅಣ್ಣನೊಂದಿಗೆ
ಮನೆಯಲ್ಲಿ ವಾಸಿಸುತ್ತಿದ್ದಾಗ ದಿನಾಂಕ:07/03/2019 ರಂದು ರಾತ್ರಿ 11-00 ಗಂಟೆಗೆ ನನ್ನ ಗಂಡನಾದ ರಾಜಶೇಖರನು ತನ್ನ ಸಂಗಡ ರಾಘವೇಂದ್ರ ತಂದೆ ರಾಮಚಂದ್ರ
ವಾಗ್ಮೋರೆ, ರಾಜು ತಂದೆ ಮರೆಪ್ಪಾ ಪೂಜಾರಿ, ವಿಜಯಕುಮಾರ ತಂದೆ ನಾಗಪ್ಪಾ ಭಜಂತ್ರಿ,
ಆಕಾಶ ತಂದೆ ಅನೀಲ ಕಲಶೆಟ್ಟಿ, ಅಕ್ಷಯ ತಂದೆ ಪಾಂಡುರಂಗ ವಾಗ್ಮೋರೆ,
ಅವಿನಾಶ ತಂದೆ ಪಾಂಡುರಂಗ ವಾಗ್ಮೋರೆ,
ಅನೀಕೆತ ತಂದೆ ಪಾಂಡುರಂಗ ವಾಗ್ಮೋರೆ ಇನ್ನ ಕೆಲವು ಜನರನ್ನು ತಮ್ಮ ಸಂಗಡ
ಕರೆದುಕೊಂಡು ನಮ್ಮೂರಿಗೆ ಬಂದು ನಮ್ಮ ಮನೆಯ ಮುಂದೆ ನಿಂತು ನಮ್ಮ ಮನೆಯ ಗೇಟಿಗೆ ಒದ್ದು ಏ
ರಂಡಿಮಕ್ಕಳ್ಯಾ ಹೊರೆಗೆ ಬನ್ನರಿ ನಿಮಗೆ ಒಂದು ಕೈ ನೋಡಿಕೊಳ್ಳುತ್ತೇವೆ ಅಂತಾ ಬೈಯುತ್ತಿದ್ದಾಗ
ಸಪ್ಪಳ ಕೇಳಿ ನಾನು ನನ್ನ ತಾಯಿಯಾದ ಮಂಡೋಧರಿ, ಅಣ್ಣನಾದ ರೇವಣಸಿದ್ದ ನಮ್ಮ ಕಾಕಾನ ಮಗನಾದ ಶಂಕರ ತಂದೆ ವಸಂತ ಪವಾರ, ಅಕ್ಕಳಾದ ಅನೀತಾ ಎಲ್ಲರೂ
ಮನೆಯಿಂದ ಹೊರಗೆ ಬಂದು ನೋಡಿದಾಗ ಎಲ್ಲರೂ ನಮಗೆ ಜಗಳ ಮಾಡುವ ಉದ್ದೇಶದಿಂದ ಬಂದು ನನಗೆ ನನ್ನ
ಗಂಡನು ರಂಡಿ ನಾ ಬೇರೆ ಮದುವೆ ಮಾಡಿಕೊಳ್ಳುತ್ತೇನೆ ನೀನು ನನಗೆ ಬಿಡು ಅಂತಾ ಬೈದು ನನ್ನ ತಲೆಯ
ಮೇಲಿನ ಕೂದಲು ಹಿಡಿದು ಎಳೆದಾಡಿ ಒಂದು ಬಡಿಗೆಯಿಂದ ಬೆನ್ನಮೇಲೆ ಹೊಡೆದು ಕೈಯಿಂದ ಎಡಕೀವಿಗೆ ಗುದ್ದಿ ನೂಕಿಸಿಕೊಟ್ಟನು
ಬಿಡಿಸಲು ಬಂದ ನನ್ನ ತಮ್ಮನಾದ ಶಂಕರನಿಗೆ ರಾಜಶೇಖರ,
ರಾಘವೇಂದ್ರ ಇಬ್ಬರು ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಯಿಂದ ಮುಖ ಮತ್ತು
ಹೊಟ್ಟೆಗೆ ಗುದ್ದಿ ನೆಲಕ್ಕೆ ಹಾಕಿದಾಗ ರಾಘವೇಂದ್ರನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ
ತಲೆಯ ಮೇಲೆ ಹೊಡೆದು ಭಾರಿರಕ್ತಗಾಯ ಪಡಿಸಿರುತ್ತಾನೆ. ಅನೀತಾಳಿಗೆ ರಾಜು ತಂದೆ ಮರೇಪ್ಪಾ, ವಿಜಯಕುಮಾರ ತಂದೆ
ನಾಗಪ್ಪಾ ಭಜಂತ್ರಿ ಇವರು ಕೈಹಿಡಿದು ಎಳೆದಾಡಿ ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾರೆ. ಆಕಾಶ
ಮತ್ತು ಅಕ್ಷಯ ಇಬ್ಬರು ನನಗೆ ಹೊಟ್ಟೆಯ ಮೇಲೆ ಒದ್ದಿರುತ್ತಾರೆ. ಅವಿನಾಶ ಮತ್ತು ಅನೀಕೆತ ಇಬ್ಬರು
ರೇವಣಸಿದ್ದನಿಗೆ ಕೈಹಿಡಿದು ಎಳೆದಾಡಿ ನೆಲಕ್ಕೆಹಾಕಿ ಕಾಲಿನಿಂದ ಹೊಟ್ಟೆಗೆ ಬೆನ್ನಿಗೆ
ಒದ್ದಿರುತ್ತಾರೆ. ಉಳಿದವರು ಎಲ್ಲರೂ ಈ ರಂಡಿ ಮಕ್ಕಳಿಗೆ ಬಿಡಬ್ಯಾಡರಿ ಅಂತಾ ಜೀವ ಭಯಹಾಕಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.