ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-11-2020
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 75/2020 ಕಲಂ 457, 380 ಐಪಿಸಿ :-
ದಿನಾಂಕ 26/11/2020 ರಂದು 0900 ಗಂಟೆಗೆ ಶ್ರೀ ಚನ್ನಮಲ್ಲಯ್ಯಾ ತಂದೆ ಬಸಯ್ಯಾ ಸ್ವಾಮಿ ಸಾ|| ಜನವಾಡಾ ಗ್ರಾಮ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 25/11/2020 ರಂದು ರಾತ್ರಿ ಇವರ ಮಗ ಬಸಯ್ಯಾ ಊಟ ಮಾಡಿ ರಾತ್ರಿ ಕೆಲಸಕ್ಕೆ ಹೊಗಿದ್ದು, ಮನೆಯಲ್ಲಿ ಫೀರ್ಯಾದಿ ಮತ್ತು ಇವರ ಹೆಂಡತಿ ಲಕ್ಷ್ಮೀಬಾಯಿ ಮತ್ತು ಸೋಸೆ ಆಶಾ ರಾತ್ರಿ ಊಟ ಮಾಡಿ ಅಂದಾಜು ರಾತ್ರಿ 11:30 ಗಂಟೆಯ ಸುಮಾರಿಗೆ ಇವರುಗಳು ತಮ್ಮ ಬಾಗಿಲು ಮುಚ್ಚಿ ಕೊಂಡಿ ಹಾಕಿಕೊಂಡಿರುವುದಿಲ್ಲ ಹಾಗು ಅಲಮಾರಿಗೆ ಕೀಲಿ ಹಾಕಿರುವುದಿಲ್ಲ ದಿನಾಂಕ 26/11/2020 ರಂದು ನಸುಕಿನ ವೇಳೆಯಲ್ಲಿ ಅಂದಾಜು 04:45 ಗಂಟೆಯ ಸುಮಾರಿಗೆ ಎಚ್ಚರವಾದಾಗ ನಮ್ಮ ಮನೆಯ ಹಿಂದಿನ ಬಾಗೀಲು ತೆರೆದಿದ್ದು ನೋಡಿ ಗಾಬರಿಗೊಂಡು ಬಾಗಿಲಿನ ಹತ್ತಿರ ಹೋಗಿ ನೋಡಲು ಮನೆಯ ಹಿಂದಿನ ಬಾಗಿಲಿನ ತಟ್ಟಿ ಮುರಿದು ಅಲಮಾರಿಯಲ್ಲಿ ಇಟ್ಟಿದ್ದ 1) 2 ಬಂಗಾರದ ಬಳೆಗಳು ಒಟ್ಟು ಅಂದಾಜು 40 ಗ್ರಾಂ, 2) ಬಂಗಾರದ ಗುಂಡುಸರ ಅಂದಾಜು 15 ಗ್ರಾಂ. 3) ಬಂಗಾರದ ಪಾಟಲಿ ಅಂದಾಜು 1 ಗ್ರಾಂ. 4) ಬಂಗಾರದ ಲಾಕೀಟ್ ಅಂದಾಜು 5 ಗ್ರಾಂ, 5) ಬಂಗಾರದ ಝುಮಕಾ 5 ಗ್ರಾಂ 6) ಬಂಗಾರದ ಕಿವಿಯ ಹೂ ಅಂದಾಜು 5 ಗ್ರಾಂ, 7) ಬಂಗಾರದ ಮಂಗಳ ಸೂತ್ರದ ಗುಂಡುಗಳು ಅಂದಾಜು 5 ಗ್ರಾಂ, ಮತ್ತು 1) 60 ಗ್ರಾಂ. ಬೆಳ್ಳಿಯ ಚೌಕ (ಲಿಂಗದ ಕಾಯಿ) 2) 40 ಗ್ರಾಮ ಬೆಳ್ಳಿಯ ಕಡಗ 3) 50 ಗ್ರಾಮ ಬೆಳ್ಳಿಯ ಚೈನುಗಳು ಒಂದು ರೆಡ್ ಮೀ 7 ಮೋಬೈಲ್ ಇದ್ದಿಲ್ಲ. ಹಿಗೆ ಎಲ್ಲಾ ಸೇರಿ ಒಟ್ಟು ಅಂದಾಜು 85 ಗ್ರಾಂ. ಬಂಗಾರದ ಆಭರಣಗಳು ಇವುಗಳ ಅ. ಕೀ, 3, 40,000/- ರೂ ದಷ್ಟು ಹಾಗು 150 ಗ್ರಾಂ. ಬೆಳ್ಳಿಯ ಆಭರಣಗಳು ಇವುಗಳ ಅ.ಕೀ. 7,000/- ರೂ ದಷ್ಟು ಮನೆಯ ಅಲಮಾರಿಯಲ್ಲಿ ಇದ್ದಿಲ್ಲ. ಹಾಗು ನನ್ನ ಸೋಸೆ ಆಶಾ ಇವಳು ಮಲಗಿದ್ದ ಬೇಡ್ ರೂಮಿನ ಒಳಗೆ ರೂಮಿನಲ್ಲಿ ಖುಲ್ಲಾ ಸ್ಥಳದಲ್ಲಿ ಇಟ್ಟಿದ್ದ ಮೋಬೈಲ್ 6,000/- ರೂ. ದಷ್ಟು. ಇವುಗಳು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 76/2020 ಕಲಂ 457, 380 ಐಪಿಸಿ :-
ದಿನಾಂಕ 26/11/2020 ರಂದು 1700 ಗಂಟೆಗೆ ಶ್ರೀ ರವಿಕಾಂತ ತಂದೆ ಅಂಬಾದಾಸ್ ಗಡದೆ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ
ಫಿರ್ಯಾದಿಯು ಡ್ರೈವರ ಕೆಲಸ
ಮಾಡಿಕೊಂಡಿದ್ದು
ದಿನಾಂಕ 25/11/2020 ರಂದು ಸಾಯಂಕಾಲ 1800 ಗಂಟೆಯ ಸುಮಾರಿಗೆ ತೆಲಂಗಾಣಾದ ಗಂಗಾವರ ಗ್ರಾಮಕ್ಕೆ
ಹೊಗಿದ್ದು, ದಿನಾಂಕ 26/11/2020 ರಂದು ರಾತ್ರಿ ಫಿರ್ಯಾದಿಯ ತಂದೆ ತಾಯಿ ಹಾಗೂ ಹಿರಿಯ ಮಗ ಗೋವಿಂದ ರವರು ರಾತ್ರಿ 12:10 ಗಂಟೆಯ ಸುಮಾರಿಗೆ ಮನೆಯ
ಎರಡು ಕೊಣೆಗಳಿಗೆ ಬೀಗ ಹಾಕಿ ಪಡಸಾಲೆಯಲ್ಲಿ ಮಲಗಿಕೊಂಡಿದ್ದು, ಅಂದಾಜು 2:00 ಗಂಟೆಯ ಸುಮಾರಿಗೆ ನನಗೆ ಎಚ್ಚರವಾದಾಗ ಮನೆಯ ಕೊಣೆಯ ಬಾಗೀಲು ತೆಗೆದಿದ್ದು, ನೋಡಿ ಗಾಬರಿಗೊಂಡು ಒಳಗೆ ಹೋಗಿ ನೋಡಿದಾಗ ಮನೆಯಲ್ಲಿ ಇಟ್ಟಿದ ಸೂಟಕೇಸ ತೆಗೆದು ಸೂಟಕೇಸನಲ್ಲಿ ಇಟ್ಟಿದ್ದ 1) 5 ಗ್ರಾಂ ಬಂಗಾರದ ಉಂಗುರು 2) ಬೆಳ್ಳಿಯ ಎರಡು ಚೈನುಗಳು ಅಂದಾಜು 150 ಗ್ರಾಂ, 3) ನಗದು ಹಣ
21, 000/- ರೂ ಗಳನ್ನು ದಿನಾಂಕ 26/11/2020 ರಂದು ರಾತ್ರಿ 12:10 ಗಂಟೆಯಿಂದ 02:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು
ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಗದಲ ಪೊಲೀಸ್ ಠಾಣೆ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 75/2020 ಕಲಂ
279, 337. 304(ಎ) ಐಪಿಸಿ
:-
ದಿನಾಂಕ:26-11-2020
ರಂದು
1930 ಗಂಟೆಗೆ ಸರಕಾರಿ
ಆಸ್ಪತ್ರೆ
ಮನ್ನಾಏಖೇಳ್ಳಿಯಿಂದ
ವಾಹನ
ಅಪಘಾತದ
ಬಗ್ಗೆ
ಎಂ.ಎಲ್.ಸಿ
ಮಾಹಿತಿ
ಬಂದ
ಮೇರೆಗೆ
ಆಸ್ಪತ್ರೆಯಲ್ಲಿ
ಹಾಜರಿದ್ದ
ಮೃತ
ಪ್ರಹ್ಲಾದ
ಇವರ
ಹೆಂಡತಿಯಾದ
ಫಿರ್ಯಾದಿ
ಶ್ರೀಮತಿ
ವಿನೋದಕುಮಾರಿ
ಗಂಡ
ಪ್ರಹ್ಲಾದ
ಮದರಗಾಂವ
ವಯ:
43 ವರ್ಷ ಜಾ:
ಎಸ್.ಸಿ
ಮಾದಿಗ
ಉ:ಮನೆಗೆಲಸ
ಸಾ:
ಯರಬಾಗ
ಸದ್ಯ
ಲಾಡಗೇರಿ
ಬೀದರ
ರವರು
ಕೊಟ್ಟ
ಹೇಳಿಕೆ
ಸಾರಾಂಶವೆನೇಂದರೆ
ಫಿರ್ಯಾದಿರವರ
ಪತಿ ಪ್ರಹ್ಲಾದ ತಂದೆ
ಲಾಲಪ್ಪಾ
ಮದರಗಾಂವ
ವಯ:49
ವರ್ಷ
ಇವರು
ಚಿಟಗುಪ್ಪಾ
ಪುರಸಭೆಯಲ್ಲಿ
ಸಮುದಾಯ
ಸಂಘಟಕ
ಅಂತಾ
ಕೆಲಸ
ಮಾಡಿಕೊಂಡಿರುತ್ತಾರೆ. ದಿನಾಲೂ
ಬೀದರದಿಂದ
ಚಿಟಗುಪ್ಪಾಕ್ಕೆ
ಕರ್ತವ್ಯ
ನಿಮಿತ್ಯ
ಮೊಟರ
ಸೈಕ
ನಂ.
ಕೆಎ-38
ಜೆ-7774
ನೇದ್ದರ
ಮೇಲೆ
ಹೋಗಿ
ಬರುತ್ತಿದ್ದರು,
ಹೀಗಿದ್ದು,
ದಿನಾಂಕ:26-11-2020
ರಂದು
ಬೆಳ್ಳಗೆ
ಬೀದರದಿಂದ
ಚಿಟಗುಪ್ಪಾಕ್ಕೆ
ಕರ್ತವ್ಯದ
ಕುರಿತು
ತನ್ನ
ಮೊಟರ
ಸೈಕಲ್
ನಂ.
ಕೆಎ-38
ಜೆ-7774
ನೇದ್ದರ
ಮೇಲೆ
ಕುಳಿತು
ಮೊಟರ
ಸೈಕಲ್
ಮೇಲೆ
ಮನ್ನಾಏಖೇಳ್ಳಿಯಿಂದ
ಬಗದಲ
ಕಡೆ
ಹೊಗುತ್ತಿರುವಾಗ
ಸಾಯಂಕಾಲ
6:30 ಪಿಎಂ ಗಂಟೆಗೆ
ಬಗದಲ
ಬ್ರೀಡ್ಜ್
ಹತ್ತಿರ
ಎದುರಿನಿಂದ
ಒಬ್ಬ
ಮೊಟರ
ಸೈಕಲ್
ಚಾಲಕ
ತನ್ನ
ವಾಹನ
ಅತೀ
ವೇಗ
ಹಾಗೂ
ನಿಷ್ಕಾಳಜಿತನದಿಂದ
ಮಾನವ
ಜೀವಕ್ಕೆ
ಅಪಾಯವಾಗುವಂತೆ
ಚಲಾಯಿಸುತ್ತಾ
ಬಂದು
ಮನ್ನಾಏಖೇಳ್ಳಿಯಿಂದ
ಬೀದರಕಡೆಗೆ
ಹೊಗುತ್ತಿರುವ
ಮೊಟರ
ಸೈಕಲಗೆ
ಡಿಕ್ಕಿ
ಮಾಡಿದ
ಪರಿಣಾಮ
ಭಾರಿಗಾಯಗೊಂಡು ಸ್ಥಳದಲ್ಲಿಯೆ ಮೃತ ಪಟ್ಟಿದ್ದು
ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ 146/2020 ಕಲಂ
78(3) ಕೆಪಿ ಕಾಯ್ದೆ :-
ದಿನಾಂಕ:26/11/2020
ರಂದು 13:30 ಗಂಟೆಗೆ ಜಿ.ಎಂ.ಪಾಟೀಲ್ ಪಿ.ಎಸ.ಐ [ಕಾ&ಸು]
ಪೊಲೀಸ್ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ
ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ
ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಬಸವಕಲ್ಯಾಣ ನಗರದ
ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣ ದಿಂದ 50
ಅಡಿ ಅಂತರದಲ್ಲಿ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾತ್ಮಿಯಂತೆ ಕೆ.ಎಸ್.ಆರ್.ಟಿ.ಸಿ
ಬಸ್ಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1
ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ
ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ದಾಳಿ ಮಾಡಿ ವಿಚಾರಿಸಲು ಅವನು ತನ್ನ ಹೆಸರು
ಆಕಾಶ ತಂದೆ ಸುಭಾಷ ಬಿರಾದಾರ ವಯಸ್ಸು// 29
ವರ್ಷ ಜಾತಿ// ಲಿಂಗಾಯತ ಉ// ಕಿರಾಣಿ ವ್ಯಾಪಾರ ಸಾ// ಧನ್ನೂರಾ(ಕೆ) ತಾ// ಬಸವಕಲ್ಯಾಣ. ಎಂದು
ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 5,250/-ರೂ,ಮತ್ತು
02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್
ಸಿಕ್ಕಿರುತ್ತದೆ ನೇದ್ದವುಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಬಸವಕಲ್ಯಾಣ
ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 98/2020 ಕಲಂ
87 ಕೆಪಿ ಕಾಯ್ದೆ :-
ದಿನಾಂಕ: 26/11/2020 ರಂದು 13;30 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ರಾಜೇಶ್ವರ ಗ್ರಾಮದ ಹನುಮಾನ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರಭಾಹರ್ ಇಸ್ಪೇಟ ಜೂಜಾಟ ಆಡುತಿದ್ದಾರೆ ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ 1] ಜಗನ್ನಾಥ ತಂದೆ ಭೀಮಣ್ಣಾ ಮದರಗಿಕರ ವಯ: 36 ವರ್ಷ ಇವನ ಹತ್ತಿರ 2,500 ರೂ ಇದ್ದವು 2] ವಿಕ್ರಮ ತಂದೆ ಯೆಶವಂತರಾವ ಪೊಸ್ತಾರ ವಯ: 38 ವರ್ಷ ಇವನ ಹತ್ತಿರ 5,100 ರೂ ಇದ್ದವು 3] ವಿಶ್ವನಾಥ ತಂದೆ ಕಾಶೆಪ್ಪಾ ರಂಜೇರಿ ವಯ: 47 ವರ್ಷ ತಿಳಿಸಿದ್ದು ಸದರಿಯವನ ಹತ್ತಿರ 1,800 ರೂ ಇದ್ದವು 4] ಇಸ್ಮಾಯಿಲ ತಂದೆ ರಹಿಮೋದ್ದಿನ ಟಪ್ಪೆ ವಯ: 60 ವರ್ಷ ಜಾತಿ: ಮುಸ್ಲಿಂ ಉ: ಲಾರಿ ಚಾಲಕ ಸಾ: ರಾಜೇಶ್ವರ ಅಂತಾ ತಿಳಿಸಿದ್ದು ಇವನ ಹತ್ತಿರ 3,300 ರೂ ಇದ್ದವು 5] ತಿಳವಂತ ತಂದೆ ಲಾಲಪ್ಪಾ ಪೋಸ್ತಾರ ವಯ; 50 ವರ್ಷ ಜಾತಿ: ಎಸ,ಸಿ ಹೋಲಿಯಾ ಉ: ವಟರಮ್ಯಾನ ಸಾ: ರಾಜೇಶ್ವರ ಅಂತಾ ತಿಳಿಸಿದ್ದು ಇವನ ಹತ್ತಿರ 3,700 ರೂ ಇದ್ದವು 6] ಮಾಣಿಕ ತಂದೆ ಗಿರೇಪ್ಪಾ ಘಾಂಗ್ರೆ ವಯ: 59 ವರ್ಷ ಜಾತಿ: ಎಸ,ಸಿ ಹೋಲಿಯಾ ಉ:ಒಕ್ಕಲುತನ ಸಾ: ರಾಜೇಶ್ವರ ಅಂತಾ ತಿಳಿಸಿದ್ದು ಇವನ ಹತ್ತಿರ 2,200 ರೂ ಇದ್ದವು 7) ಶ್ರೀನಿವಾಸ ತಂದೆ ಮಲ್ಲಪ್ಪಾ ಹುಮನಾಬಾದೆ ವಯ: 45 ವರ್ಷ ಜಾತಿ: ಎಸ,ಸಿ ಹೋಲಿಯಾ ಉ: ಕೂಲಿಕೆಲಸ ಸಾ: ರಾಜೇಶ್ವರ ಅಂತಾ ತಿಳಿಸಿದ್ದು ಇವನ ಹತ್ತಿರ 2,300 ರೂ ಇದ್ದವು 8) ಬಂಡೆಪ್ಪಾ ತಂದೆ ಹುಸೇನಪ್ಪಾ ಶಮರ್ಾ ವಯ:54 ವರ್ಷ ಜಾತಿ: ಎಸ,ಸಿ ಹೋಲಿಯಾ ಉ: ಕೂಲಿಕೆಲಸ ಸಾ: ರಾಜೇಶ್ವರ ಅಂತಾ ತಿಳಿಸಿದ್ದು ಇವನ ಹತ್ತಿರ 2,900 ರೂ ಇದ್ದವು ಮತ್ತು ಎಲ್ಲರ ಮಧ್ಯದಲ್ಲಿ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 11,600/- ರೂಪಾಯಿಗಳು ಇದ್ದು ಸದರಿಯವರಿಗೆ ಪುನಃ ವಿಚಾರಣೆ ಮಾಡಲು ತಾವೆಲ್ಲರೂ ಸೆರಿ ಹಣವನ್ನು ಪಣಕ್ಕೆ ಇಟ್ಟು ಅಂದರಭಾಹರ್ ಎಂಬ ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದ ಬಗ್ಗೆ ಒಪ್ಪಿಕೊಂಡಿದರಿಂದ ಸದರಿಯವರು ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 35,400/- ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಸಂತಪೂರ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 81/2020 ಕಲಂ
87 ಕೆಪಿ ಕಾಯ್ದೆ ;-
ದಿನಾಂಕ 22-11-2020 ರಂದು 2230 ಗಂಟೆಗೆ ಸಿಪಿಐ ರಾಘವೇಂದ್ರರವರು ಸಂತಪೂರ ಠಾಣೆಯಲ್ಲಿದ್ದಾಗ ಚಟನಾಳ ಗ್ರಾಮದಲ್ಲಿ ಸಾರ್ವಜನಿಕ ರೋಡಿನ ಪಕ್ಕದಲ್ಲಿ ಕೆಲವು ಜನರು ಸೇರಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ರೋಡಿನ ಬದಿಗೆ ಸಾರ್ವಜನಿಕ ಕರೆಂಟ ಕಂಬದ ಬೆಳಕಿನಲ್ಲಿ 16 ಜನರು ಗೊಲಾಗಿ ಕುಳಿತು ಇಸ್ಪೇಟ ಎಲೆಗಳಿಂದ ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಅನ್ನುವ ಜೂಜಾಟ ಆಡುತ್ತಿದ್ದನ್ನು ನೋಡಿ ಖಚೀತ ಪಡಿಸಿಕೊಂಡು ಆವರುಗಳ ಮೇಲೆ ದಾಳಿ ಮಾಡಿ ಅವರುಗಳನ್ನು ವಿಚಾರಿಸಲು 1] ಅಂಬದಾಸ ತಂದೆ ಕಾಶೇಪ್ಪಾ ಪಾಂಚಾಳ ವಯ 40 ವರ್ಷ ಈತನ ಹತ್ತಿರ ನಗದು ಹಣ 300/-ರೂ ಇದ್ದವು 2] ಹಣಮಂತ ತಂದೆ ಪ್ರಕಾಶ ಮೂಲಗೆ ವಯ 33 ವರ್ಷ ಈತನ ಹತ್ತಿರ ನಗದು ಹಣ 250/-ರೂ ಇದ್ದವು 3] ದೇವಿದಾಸ ತಂದೆ ಶಾಮರಾವ ಪಾಟೀಲ್ ವಯ 54 ವರ್ಷ ಈತನ ಹತ್ತಿರ ನಗದು ಹಣ 310/-ರೂ ಇದ್ದವು 4] ಚಂದ್ರಕಾಂತ ತಂದೆ ಗಣಪತರಾವ ತೊಗರಿಗೆ ವಯ 32 ವರ್ಷ ಈತನ ಹತ್ತಿರ ನಗದು ಹಣ 400/-ರೂ 5] ನಾಗೇಶ ತಂದೆ ಗುಂಡಪ್ಪಾ ಕತ್ತೆ ವಯ 30 ವರ್ಷ ಜಾತಿ ಲಿಂಗಾಯತ ಈತನ ಹತ್ತಿರ ನಗದು ಹಣ 350/-ರೂ ಇದ್ದವು 6] ಅಫ್ಜಲ್ ತಂದೆ ಜಾನಿಮಿಯ್ಯಾ ಶೇಖ ವಯ 40 ವರ್ಷ ಈತನ ಹತ್ತಿರ ನಗದು ಹಣ 210/-ರೂ ಇದ್ದವು 7] ಬೀರಪ್ಪಾ ತಂದೆ ಮಾರುತಿ ಧನಗರ ವಯ 30 ವರ್ಷ ಈತನ ಹತ್ತಿರ ನಗದು ಹಣ 300/-ರೂ ಇದ್ದವು 8] ಪ್ರಭಾಕರ ತಂದೆ ಸಂಜು ಪಾಟೀಲ್ ವಯ 27 ವರ್ಷ ಈತನ ಹತ್ತಿರ ನಗದು ಹಣ 280/-ರೂ ಇದ್ದವು 9] ಸಿದ್ರಾಮೇಶ್ವರ ತಂದೆ ವಿಜಯಕುಮಾರ ಮೂಲಗೆ ವಯ 27 ವರ್ಷ ಈತನ ಹತ್ತಿರ ನಗದು ಹಣ 240/-ರೂ ಇದ್ದವು 10] ಅಮೃತಯ್ಯಾ ತಂದೆ ಮನ್ಮಥಯ್ಯಾ ಸ್ವಾಮಿ ವಯ 55 ವರ್ಷ ಈತನ ಹತ್ತಿರ ನಗದು ಹಣ 230/-ರೂ ಇದ್ದವು 11] ಗುರುನಾಥ ತಂದೆ ಶಿವರಾಜ ಮೂಲಗೆ ವಯ 28 ವರ್ಷ ಈತನ ಹತ್ತಿರ ನಗದು ಹಣ 260/-ರೂ ಇದ್ದವು 12] ವೀರಯ್ಯಾ ತಮದೆ ಮಾದಯ್ಯಾ ಸ್ವಾಮಿ ವಯ 30 ವರ್ಷ ಈತನ ಹತ್ತಿರ ನಗದು ಹಣ 220/-ರೂ ಇದ್ದವು 13] ಸಂಜುಕುಮಾರ ತಂದೆ ಮಾರುತಯ್ಯಾ ಸ್ವಾಮಿ ವಯ 46 ಚಟನಾಳ ಅಂತ ತಿಳಿಸಿದ್ದು ಈತನ ಹತ್ತಿರ ನಗದು ಹಣ 360/-ರೂ ಇದ್ದವು 14) ಕಂಟೆಪ್ಪಾ ತಂದೆ ಗುರಪ್ಪಾ ಮೂಲಗೆ ವಯ 55 ವರ್ಷ ಜಾತಿ ಲಿಂಗಾಯತ ಉದ್ಯೋಗ ಒಕ್ಕಲುತನ ಹತ್ತಿರ ನಗದು ಹಣ 200/-ರೂ ಇದ್ದವು 15]ನವಾಬೊದ್ದಿನ ತಂದೆ ಪ್ಯಾರುಸಾಬ ಪಾಟೀಲ್ ವಯ 40 ಹತ್ತಿರ ನಗದು ಹಣ 180/-ರೂ ಇದ್ದವು 16] ನಾಗಯ್ಯಾ ತಂದೆ ಶಂಕ್ರಯ್ಯಾ ಸ್ವಾಮಿ ವಯ 42 ವರ್ಷ ಜಾತಿ ಜಂಗಮ ಈತನ ಹತ್ತಿರ ನಗದು ಹಣ 250/- ಹೀಗೆ ಒಟ್ಟು 52 ಇಸ್ಪೇಟ ಎಲೆಗಳು ಹಾಗೂ ನಗದು ಹಣ 660/-ರೂ ಇದ್ದವು ಹೀಗೆ ಒಟ್ಟು ನಗದು ಹಣ 5000/-ರೂ ಹಾಗೂ 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.