ಮದುವೆ ಮಾಡಿಕೊಳ್ಳುತ್ತೆನೆಂದು ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ವಾಡಿ ಠಾಣೆ : ಕುಮಾರಿ ರವರು ವಿದ್ಯಾಬ್ಯಾಸ ಮಾಡುವ ಕಾಲಕ್ಕೆ ನಮ್ಮ ಮನೆಯ ಪಕ್ಕದಲ್ಲಿರುವ ರಾಮು ಚವ್ಹಾಣ ಎನ್ನುವರ ಮಗ ವಿಶಾಲ ಇತನು ಸೆಂಟ್ ಅಂಬ್ರೋಸ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಇಬ್ಬರ ಮನೆ ಅಕ್ಕ ಪಕ್ಕದಲ್ಲಿ ಇರುವದರಿಂದ ಒಬ್ಬರಿಗೊಬ್ಬರು ಮಾತನಾಡುವದು ಮಾಡುತ್ತಿದ್ದೆವು. ನಂತರ ಶಹಾಬಾದದಲ್ಲಿ ಪಿ.ಯು.ಸಿ ಕಾಮರ್ಸ ಓದುತ್ತಿದ್ದೆ ವಿಶಾಲ ಇತನು ಗುಲಬರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಆಗಲು ಸಹ ಇಬ್ಬರೂ ರೇಲ್ವೇದಲ್ಲಿ ಹೋಗಿ ಬರುವಾಗ ಮಾತನಾಡುವದು ಅಲ್ಲದೇ ಇಬ್ಬರಿಗೆ ಸ್ನೇಹ ಬೆಳೆದು ಸಲಿಗೆಯಿಂದ ಮಾತನಾಡುತ್ತಿದ್ದೆವು. ನಂತರ ನಾನು ಗುಲಬರ್ಗಾದ ಗೋದುತಾಯಿ ಕಾಲೇಜದಲ್ಲಿ ಬಿ.ಕಾಮ್ ಓದುತ್ತಿದ್ದು ವಿಶಾಲ ಇತನು ಎಸ್.ಬಿ.ಅರ ಕಾಲೇಜದಲ್ಲಿ ಬಿಬಿಎಮ್ ಓದುತ್ತಿದ್ದನು. ಅಲ್ಲಿಂದ ನಾನು ಬೆಂಗಳೂರಿನ ಬಿಎಮಎಸಐಟಿ ಕಾಲೇಜದಲ್ಲಿ ಎಮ್.ಬಿ.ಎ ಪದವಿ ಯನ್ನು 2013 ನೇ ಸಾಲಿನಲ್ಲಿ ಓದುತ್ತಿದ್ದೆನು. ಆಗ 2012 ನೇ ಸಾಲಿನಿಂದ 2014 ನೇ ಸಾಲಿನ ವರೆಗೆ ವಿಶಾಲ ತಂದೆ ರಾಮು ಚವ್ಹಾಣ ಇತನು ಬೆಂಗಳೂರಿನ ಆರ್.ವಿ ಕಾಲೇಜದಲ್ಲಿ ಎಮ್.ಬಿ.ಎ ಪದವಿ ಓದುತ್ತಿದ್ದನು. ನಾವಿಬ್ಬರೂ ಬೆಂಗಳೂರದಲ್ಲಿ ರಜೆ ಇದ್ದಾಗ ಆಗಾಗ ಒಬ್ಬರಿಗೊಬ್ಬರು ಬೇಟಿ ಆಗುತ್ತಿದ್ದೆವು. ಆಗ ವಿಶಾಲ ಇತನು ನಿನಗೆ ಪ್ರೀತಿ ಮಾಡುತ್ತೆನೆ ಅಲ್ಲದೇ ಮದುವೆ ಸಹ ಮಾಡಿಕೊಳ್ಳುತ್ತೆನೆ ಅಂತಾ ಅನ್ನುತ್ತಿದ್ದನು. ನಂತರ 2018 ನೇ ವರ್ಷದಲ್ಲಿ ದಸರಾ ಹಬ್ಬಕ್ಕೆ ನಾನು ನಮ್ಮೂರಿಗೆ ಬಂದ್ದಿದ್ದೆ ವಿಶಾಲ ಇತನು ಸಹ ಊರಿಗೆ ಬಂದಿದ್ದನು. ದಿನಾಂಕ 08/10/2018 ರಂದು ವಿಶಾಲ ಇತನು ದಸರಾ ಹಬ್ಬದ ದಿವಸ ನನಗೆ ನಮ್ಮ ಮನೆಗೆ ಬಾ ಅಂತಾ ಹೇಳಿದಾಗ ನಾನು ಅವರ ಮನೆಗೆ ಹೋದೆನು. ಆಗ ಅವರ ಮನೆಯವರು ದೇವಿಯ ಮೆರವಣಿಗೆಯನ್ನು ನೋಡಲು ಹೋಗಿದ್ದರು. ಆಗ ವಿಶಾಲ ಇತನು ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡು ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳಿ ನನ್ನ ಇಷ್ಟಕ್ಕೆ ವಿರುದ್ದವಾಗಿ ಜಬರಿ ಸಂಭೋಗ ಮಾಡಿ ಈ ವಿಷಯ ಯಾರಿಗೆ ಹೇಳಬೇಡಾ ಅಂತಾ ನನಗೆ ಬೆದರಿಕೆ ಹಾಕಿದನು. ನಂತರ ನಾನು ಈ ವಿಷಯ ನಮ್ಮ ಮನೆಯವರಿಗೆ ಹೇಳಲಿಲ್ಲ. ನಂತರ ನಾನು ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ದಿನಾಂಕ 05/01/2019 ರಂದು ವಿಶಾಲ ಇತನು ಕಲಬುರಗಿದಿಂದ ಬೆಂಗಳೂರಿಗೆ ಬಂದು ನನಗೆ ಬೇಟಿಯಾಗಿ ಬೆಂಗಳೂರ ಸುತ್ತಾಡಿಕೊಂಡು ಬರೋಣ ಅಂತಾ ಹೇಳಿ ಕೊರಮಂಗಲ ಏರಿಯಾದಲ್ಲಿ ಕರೆದುಕೊಂಡು ಹೋಗಿ ಸಾಯಂಕಾಲ ಕೊರಮಂಗಲದಲ್ಲಿರುವ ಎಂಪೈರ್ ಎಂಬ ಹೊಟೇಲಗೆ ಕರೆದುಕೊಂಡು ಹೋಗಿ ಆತನು ತನ್ನ ಹೆಸರಿನಲ್ಲಿ ಮುಂಚೆನೆ ರೂಮ್ ಬುಕ್ ಮಾಡಿದ್ದನು. ರಾತ್ರಿಯಾಗಿದ್ದರಿಂದ ನಾವು ಅಲ್ಲೇ ಉಳಿದುಕೊಂಡಿದ್ದು ಮತ್ತೆ ವಿಶಾಲ ಇತನು ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ನಂಬಿಸಿ ಮೋಸ ಮಾಡಿ ಅಲ್ಲಿಯು ಸಹ ನನ್ನ ಇಷ್ಟಕ್ಕೆ ವಿರುದ್ದವಾಗಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ದಿನಾಂಕ 06/01/2019 ರಂದು ಹೊಟೇಲದಿಂದ ಹೊರಟು ಬಂದಿರುತ್ತೆವೆ. ಹೀಗೆ ಆತನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನನಗೆ ಮನೆಗೆ ಕರೆಸಿ ಅನೇಕ ಸಲ ನಾನು ಬೇಡ ಅಂದರು ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿರುತ್ತಾನೆ. ನಂತರ ನಾನು ಪುನಾಕ್ಕೆ ಹೋಗಿ ನೌಕರಿ ಮಾಡಿಕೊಂಡಿದ್ದು ವಿಶಾಲ ಇತನು ಗುಲಬರ್ಗಾದಲ್ಲಿ ನೌಕರಿ ಮಾಡುತ್ತಿದ್ದು ಆಗಾಗ ನನ್ನೊಂದಿಗೆ ಪೋನದಲ್ಲಿ ಮಾತನಾಡುತ್ತಿದ್ದನು. ನಾನು ಮದುವೆ ಮಾಡಿಕೊಳ್ಳುವ ವಿಷಯ ಕೇಳಿದಾಗ ಸ್ವಲ್ಪ ದಿನ ಹೋಗಲಿ ನಮ್ಮ ತಂದೆ ತಾಯಿಗೆ ತಿಳಿಸಿ ಮದುವೆ ಮಾಡಿಕೊಳ್ಳುತ್ತೆನೆ ಹೇಳುತ್ತ ಬಂದಿದ್ದು ಅಲ್ಲದೇ ಕಳೆದ ಜುಲೈ ತಿಂಗಳ 19 ನೇ ತಾರಿಖದಂದು ನಾನು ನಮ್ಮೂರಿಗೆ ಬಂದು ವಿಶಾಲ ಇತನಿಗೆ ಫೋನ ಮಾಡಿ ನಮ್ಮ ಮದುವೆಯ ವಿಷಯದ ಬಗ್ಗೆ ಕೇಳಿದಾಗ ಆತನು ನಾನು ನಿನಗೆ ಮದುವೆ ಮಾಡಿಕೊಳ್ಳುವದಿಲ್ಲ , ಕೇವಲ ನಿನ್ನೊಂದಿಗೆ ಎಂಜೋಯ್ ಮಾಡಿರುತ್ತೆನೆ ಮುಂದೆ ನನಗೆ ಫೋನ ಮಾಡಬೇಡಾ ಅಂತಾ ಪೋನ ಕಟ್ ಮಾಡಿದನು. ನಂತರ ನನ್ನ ಮನಸ್ಸಿಗೆ ನೋವಾಗಿ ನಾನು ನಮ್ಮ ತಮ್ಮನೊಂದಿಗೆ ದಿನಾಂಕ 28/08/2018 ರಂದು 12-30 ಪಿ.ಎಮ್ ಸುಮಾರಿಗೆ ಬಲರಾಮಚೌಕದಲ್ಲಿರುವ ವಿಶಾಲ ಇತನ ಮನೆಗೆ ಹೋದಾಗ ವಿಶಾಲ ಮತ್ತು ಆತನ ತಂದೆ ರಾಮು ಮತ್ತು ತಾಯಿ ಸುನೀತಾ ಮನೆಯಲ್ಲಿದ್ದರು. ವಿಶಾಲ ಇತನಿಗೆ ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತ ಬಂದಿದ್ದು ಈಗ ಏಕೆ ನಿರಾಕರಿಸುತ್ತಿದ್ದಿ ಅಂತಾ ಕೇಳಿದಾಗ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿರುವದಿಲ್ಲ ಅಂತಾ ಅಂದನು ಹಾಗೂ ಅವರ ತಂದೆ ತಾಯಿ ನೀನು ಯಾರು ನನಗೆ ಗೊತ್ತಿಲ್ಲ ವಿನಾಕಾರಣ ನನ್ನ ಮಗನಿಗೆ ತ್ರಾಸ ಕೊಡುತ್ತಿ ರಂಡಿ ನನ್ನ ಮಗನು ಗಂಡಸು ಇದ್ದಾನೆ ನಿನ್ನ ಜೊತೆ ಮಲಗಿದ್ದಾನೆ ಅದಕ್ಕೆ ನಾವೆನು ಮಡಬೇಕು ನೀನು ಏನು ಮಾಡಕೋತಿ ಮಾಡಕೋ ನಾವು ಮದುವೆ ಮಾಡಿಕೊಳ್ಳಲು ಬಿಡುವದಿಲ್ಲ ಅಂತಾ ಹೆದರಿಸಿ ಇನ್ನೊಮ್ಮೆ ನನ್ನ ಮಗನ ತಂಟೆಗೆ ಬಂದರೆ ಅಥವಾ ನಮ್ಮ ಮನೆಗೆ ಬಂದರೆ ನಿನಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ವಿಶಾಲ ಇತನಿಗೆ ಇವಳ ತಂಟೆಗೆ ಹೋಗಬೇಡಾ ಮತ್ತು ಅವಳನ್ನು ಮದುವೆ ಮಾಡಿಕೊಳ್ಳುವದು ಬೇಡ ಅಂತಾ ಪ್ರಚೋದನೆ ನೀಡಿದ್ದು ಇರುತ್ತದೆ. ನಂತರ ನಾನು ನಮ್ಮ ಮನೆಗೆ ಬಂದೆನು. ವಿಶಾಲ ಇತನು ಬೇರೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತಿದ್ದ ಬಗ್ಗೆ ನನಗೆ ಗೊತ್ತಾಗಿರುತ್ತದೆ. ಕಾರಣ ವಿಶಾಲ ಇತನು ನನಗೆ ನಂಬಿಸಿ ಮೋಸ ಮಾಡಿ ನನ್ನ ಇಷ್ಟಕ್ಕೆ ವಿರುದ್ದವಾಗಿ ದೈಹಿಕ ಸಂಬಂಧ ಬೆಳೆಸಿದ್ದು ಅಲ್ಲದೇ ಆತನ ಮನೆಗೆ ಹೋಗಿ ವಿಚಾರಿಸಿದ್ದಕ್ಕೆ ಅವರ ತಂದೆ ತಾಯಿ ನನಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 06-02-19
ರಂದು ಶ್ರೀ ಯಲ್ಲಪ್ಪ ತಂದೆ ಸಾತಪ್ಪ ಸಿಂಘೆ ಸಾ||ಉಡಚಾಣ ಮತ್ತು ನಮ್ಮ ಗ್ರಾಮದ ಯೋಗಿರಾಜ ತಂದೆ ಸಿದ್ದಪ್ಪ ಗಿರಣಿ ರವರು ಕೂಡಿಕೊಂಡು ಯೋಗಿರಾಜ ರವರ ಮೋಟಾರ ಸೈಕಲ ನಂ ಎಮೆ.ಹೆಚ್.14-ಎವೈ-9747 ನೇದ್ದರ ಮೇಲೆ ಅಫಜಲಪೂರ ದಿಂದ ಉಡಚಾಣಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶೀರವಾಳ ಕ್ರಾಸ್ ಹತ್ತಿರ ಎದುರುಗಡೆಯಿಂದ ಅಶೋಕ ಲೈಲಾಂಡ ಕಂಪನಿಯ ವಾಹನ ಚಾಲಕ ಕೆ.ಎ-28-ಸಿ-3033 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡೆಸಿದ್ದು ಇದರಿಂದ ಯೋಗಿರಾಜ ಗೆ ತಲೆಗೆ ಭಾರಿ ರಕ್ತಗಾಯ ಮತ್ತು ಬಲಗೈ ಮುರಿದಂತತಾಗಿದೆ
ಮತ್ತು ಬಲಗಾಲ ಮತ್ತು ಎಡಗಾಲು ಮುರಿದ್ದು ಇರುತ್ತದೆ. ನನಗೆ ಎಡಗಾಲಿಗೆ ಪೆಟ್ಟು ಮತ್ತು ಬಲಗೈ ಮುರಿದಿರುತ್ತದೆ. ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಯೋಗಿರಾಜ ತಂದೆ ಸಿದ್ದಪ್ಪ ಗಿರನಿ ಸಾ||ಉಡಚಾಣ ಈತನು ಅಪಘಾತದಲ್ಲಿ ಆದ ಗಾಯದಿಂದ ಸೆಪ್ಟಿಕ್ ಆಗಿ ಉಪಚಾರ ಕುರಿತು pios ಆಸ್ಪತ್ರೇ ಜಯಸಿಂಗಪೂರದಲ್ಲಿ
ದಿನಾಂಕ:16/07/19 ರಂದು ದಾಕಲಾಗಿ ಉಪಚಾರ ಪಡೆಯುತ್ತಾ ಉಪಚಾರ ಫಲಿಸದೆ ದಿನಾಂಕ:19/07/19
ರಂದು ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.