ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-05-2021
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 47/2021, ಕಲಂ. ಮಹಿಳೆ ಕಾಣೆ :-
ದಿನಾಂಕ 14-05-2021 ರಂದು 1730 ಗಂಟೆಗೆ ಫಿರ್ಯಾದಿ ಸಂಜುಕುಮಾರ ತಂದೆ ಶರಣಪ್ಪಾ ಕಪ್ಪಿಕೆರೆ ವಯ: 40 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹುಪಳಾ, ತಾ: ಭಾಲ್ಕಿ ರವರ ಮಗಳಾದ ಶ್ವೇತಾ ವಯ: 20 ವರ್ಷ ಇವಳು ಶೌಚಾಲಯಕ್ಕೆ ಹೋಗಿ ಬರತ್ತೆನೆಂದು ಹೇಳಿ ಮನೆಯಿಂದ ಹೊಗಿ ಮರಳಿ ಮನೆಗೆ ಬಂದಿರುವುದಿಲ್ಲ, ನಂತರ ಫಿರ್ಯಾದಿಯು ತನ್ನ ಹೆಂಡತಿ ಹಾಗೂ ಸಂಬಂಧಿಕರು ಕೂಡಿಕೊಂಡು ತಮ್ಮೂರಿನಲ್ಲಿ ಹುಡುಕಾಡಿದರು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ನಂತರ ತಮ್ಮ ಸಂಬಂಧಿಕರ ಗ್ರಾಮಗಳಿಗೆ ಮತ್ತು ಭಾಲ್ಕಿ, ಅಂಬೇಸಾಂವಿ, ಗಣೇಶಪೂರವಾಡಿ, ಅಳಂದಿ, ಹಲಬರ್ಗಾ, ಅಮದಾಬಾದ, ತೆಗಂಪೂರ ಹಾಗು ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ಹುಡುಕಾಡಲು ಮತ್ತು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಣೆ ಮಾಡಲು ಮಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಅವಳು ಕಾಣೆಯಾಗಿರುತ್ತಾಳೆ, ಕಾಣೆಯಾದ ಮಗಳ ಚಹರೆ ಪಟ್ಟಿ 1) 5 ಫೀಟ್ 4 ಇಂಚು ಎತ್ತರ, ಗೊಧಿ ಮೈ ಬಣ್ಣ, ದುಂಡು ಮುಖ, ಧಾರಣ ಮೈಕಟ್ಟು, ಎರಡು ಗಲ್ಲದ ಮೆಲೆ ಕುಪ್ಪ ಮಚ್ಚಿಗಳು, ಬಲಗಣ್ಣಿನ ಹತ್ತಿರ ಕೆಳಗೆ ಹಳೆ ಗಾಯದ ಗುರುತು ಇರುತ್ತದೆ, 2) ಮನೆಯಿಂದ ಹೋಗುವಾಗ ಅವಳು ಗುಲಾಬಿ ಬಣ್ಣದ ಶಾರ್ಟ ಅಂಗಿ ಮತ್ತು ಕಪ್ಪು ಬಣ್ಣದ ಪ್ಲಾಜಾ ಪ್ಯಾಂಟ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 60/2021, ಕಲಂ. ಹುಡುಗ ಕಾಣೆ :-
ಫಿರ್ಯಾದಿ ಜಾನಿಮೀಯಾ ತಂದೆ ಇಸ್ಮಾಯಿಲಸಾಬ ಮಚಕೂರಿ ವಯ: 60 ವರ್ಷ, ಜಾತಿ: ಮುಸ್ಲಿಂ, ಸಾ: ಶಕ್ಕರಗಂಜವಾಡಿ ರವರ ಮಗನಾದ ಮಗನಾದ ಹುಸೇನಸಾಬ ಇವನು ಈಗ 5-6 ವರ್ಷಗಳಿಂದ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥನಾಗಿರುತ್ತಾನೆ, ಆತನಿಗೆ ಆಸ್ಪತ್ರೆಗೆ ತೋರಿಸಿದರೂ ಸಹ ಕಡಿಮೆಯಾಗಿರುವುದಿಲ್ಲಾ, ಹುಸೇನಸಾಬ ಇವನು 2-3 ಬಾರಿ ಹೀಗೆ ಮನೆ ಬಿಟ್ಟು ಹೋಗಿದ್ದು, ನಂತರ 5-6 ದಿವಸಗಳಾದ ಮೇಲೆ ಪುನಃ ಮನೆಗೆ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 11-05-2021 ರಂದು ಮಗ ಹುಸೇನಸಾಬ ಇವನು ಮೂತ್ರವಿಸರ್ಜನೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದವನು ಇನ್ನೂ ಮನೆಗೆ ಬಂದಿರುವುದಿಲ್ಲಾ, ನಂತರ ದಿನಾಂಕ 12-05-2021 ರಂದು ಮಗ ಮನೆಗೆ ಬರದ ಕಾರಣ ಎಲ್ಲಿಗೆ ಹೋಗಿರಬಹುದು ಅಂತ ಮಗನನ್ನು ತಮ್ಮ ಮನೆಯ ಸುತ್ತಾಮುತ್ತಾ ಮತ್ತು ಶಕ್ಕರಗಂಜವಾಡಿ ಗ್ರಾಮದಲ್ಲಿ ಎಲ್ಲಾ ಕಡೆ ಹುಡುಕಾಡಲು ಮಗ ಎಲ್ಲಿಗೆ ಹೋಗಿರುತ್ತಾನೆ ಅಂತ ಗೊತ್ತಾಗಿರುವುದಿಲ್ಲಾ, ನಂತರ ತಮ್ಮ ಸಂಬಂಧಿಕರ ಮನೆಗಳಿಗೆ ಕರೆ ಮಾಡಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ತನ್ನ ಮಗನ ಬಗ್ಗೆ ತಮ್ಮ ಎಲ್ಲಾ ಸಂಬಂಧಿಕರಿಗೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹಾಗೂ ಮಸಿದಿ, ದರ್ಗಾಗಳಲ್ಲಿ ಎಲ್ಲಾ ಕಡೆ ಹುಡುಕಾಡಲು ಮಗನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ಆತನ ಚಹರೆ ಪಟ್ಟಿ 1) ಹುಸೇನಸಾಬ ತಂದೆ ಜಾನಿಮೀಯಾ ಮಚಕೂರಿ ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಶಕ್ಕರಗಂಜವಾಡಿ, 2) ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕೆಂಪು ಬಣ್ಣದ ಫುಲ್ಶರ್ಟ ಧರಿಸಿರುತ್ತಾನೆ, 3) ತೆಳ್ಳನೆಯ ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ನೇರವಾದ ಮೂಗು, ತಲೆಯ ಮೇಲೆ ಕಪ್ಪು ಕೂದಲು, ಎತ್ತರ 5’’6” ಇದ್ದು, 4) ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 21-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 43/2021, ಕಲಂ. 409, 418 ಐಪಿಸಿ :-
ದಿನಾಂಕ 05-10-2015 ರಿಂದ ದಿನಾಂಕ 15-09-2018 ರವರೆಗೆ ಗಜ್ಜಾ ಕೋಟೇಶ ಅಸಿಸಟೆಂಟ ಮ್ಯಾನೆಂಜರ ಕಮಲನಗರ ಶಾಖೆಯಲ್ಲಿದ್ದಾಗ ಸತೀಷ ತಂದೆ ದಿಂಗಬರ ಎನ್ನುವವರ ಖಾತೆ ನಂ. 62034067771 ನೇದರಲ್ಲಿನ 2,47,000/- ರೂಪಾಯಿ ನೇದನ್ನು ಖಾತೆದಾರರ ಅನುಮತಿ ಇಲ್ಲದೇ ದಿನಾಂಕ 14-06-2018 ರಂದು ಮತ್ತು ದಿನಾಂಕ 15-06-2018 ರಂದು ನಂದಿನಿ ಗುಡಿಮೆಟ್ಟಾ ಎನ್ನುವವರಿಗೆ ಹಾಗು ಜಹಾಂಗೀರ ಇನ್ನುವವರಿಗೆ ಹಾಕಿದ್ದು ಇರುತ್ತದೆ, ಈ ವಿಚಾರವಾಗಿ ಸತೀಷ ತಂದೆ ದಿಗಂಬರ ಎನ್ನುವವರು ದೂರು ನಿಡಿದ್ದು ಇಲಾಖಾ ವಿಚಾರಣೆ ಮಾಡಿದಾಗ ಆರೋಪಿ ಗಜ್ಜಾ ಕೋಟೇಶ ಖಾತೆದಾರನ ಅನುಮತಿ ಇಲ್ಲದೇ 2,47,000/- ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿರುತ್ತಾನೆ, ನಂತರ ಬ್ಯಾಂಕ ಕಡೆಯಿಂದ ಸತಿಶ ತಂದೆ ದಿಗಂಬರ ರವರಿಗೆ ದಿನಾಂಕ 03-11-2020 ರಂದು ಹಣ ಹಿಂದುಗಿಸಿದ್ದು ಇರುತ್ತದೆ ಅಂತ ದಿನಾಂಕ 21-05-2021 ರಂದು ಫಿರ್ಯಾದಿ ಕಿರಣಕುಮಾರ ಬೋತ್ಲಾ ತಂದೆ ಭದ್ರಯ್ಯಾ ವಯ: 36 ವರ್ಷ, ಉ: ಬ್ರಾಂಚ ಮ್ಯಾನೆಂಜರ ಕಮಲನಗರ, ಸಾ: ಹೈದ್ರಾಬಾದ ಮಧುರಾನಗರ ಕಾಲೋನಿ ಅಪೋಜಿಟ್ ಜಿಎಸ್ಐ ಬುದ್ದಲಗುಡಾ ನೊಗೊಲ ರಂಗಾರಡ್ಡಿ, ರವರು ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 59/2021, ಕಲಂ. 379 ಐಪಿಸಿ :-
ಫಿರ್ಯಾದಿ ನಾಸೀರ ತಂದೆ ಪಾಶ್ಯಾಮಿಯ್ಯಾ ಮೋಮಿನ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಮೋಮಿನ ಗಲ್ಲಿ ರಾಜೇಶ್ವರ, ತಾ: ಬಸವಕಲ್ಯಾಣ ರವರು ತನ್ನ ಸೋದರ ಮಾವನಾದ ಶುಕುರಪಟೇಲ ತಂದೆ ಖಾಜಾಪಟೇಲ ರವರ ಹತ್ತಿರ ಲಾರಿ ನಂ. ಕೆಎ-56/4123 ನೇದನ್ನು 15 ಲಕ್ಷ ರೂಪಾಯಿಗೆ ಖರೀದಿ ಮಾಡಿ ಲಾರಿಯನ್ನು ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡಿರುವುದಿಲ್ಲ, ಈಗ 2-3 ತಿಂಗಳಿಂದ ಔರಂಗಾಬಾದ ಸಾಯಿಬಾಬಾ ಟ್ರಾನ್ಸಪೊರ್ಟನಲ್ಲಿ ಲಾರಿಗೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಿದ್ದು, ಹೀಗಿರುವಾಗ ದಿನಾಂಕ 19-05-2021 ರಂದು ಫಿರ್ಯಾದಿಗೆ ಔರಂಗಾಬಾದನ ಸಾಯಿಬಾಬಾ ಟ್ರಾನ್ಸಪೊರ್ಟದಿಂದ ಕರೆ ಮಾಡಿ ಮಹಾರಾಷ್ಟ್ರದ ಔರಂಗಾಬಾದ ಜಿಲ್ಲೆಯ ಕನ್ನಡ ಗ್ರಾಮದಿಂದ ಉಳ್ಳಾಗಡ್ಡಿ ಲೋಡ ಮಾಡಿಕೊಂಡು ರಾಜಮುಡ್ರಿಗೆ ಹೋಗುವುದು ಇದೆ ಅಂತಾ ತಿಳಿಸಿದಾಗ ಫಿರ್ಯಾದಿಯು ಸದರಿ ಲಾರಿಯನ್ನು ತೆಗೆದುಕೊಂಡು ಹೋಗಿ ಔರಂಗಾಬಾದ ಜಿಲ್ಲೆಯ ಕನ್ನಡ ಗ್ರಾಮದಲ್ಲಿ ಉಳ್ಳಾಗಡ್ಡಿ ಲೋಡ ಮಾಡಿಕೊಂಡು ಉಸ್ಮಾನಾಬಾದ ಮಾರ್ಗವಾಗಿ ಬರುವಾಗ ದಿನಾಂಕ 20-05-2021 ರಂದು ಉಮರ್ಗಾದ ಚೌರಸ್ತೆಯ ಹತ್ತಿರ ಉಳ್ಳಾಗಡ್ಡಿ ಲೋಡಿನ ಹಗ್ಗ ಲೂಜ ಆಗಿರುವುದರಿಂದ ವಾಹನ ನಿಲ್ಲಿಸಿ ಸದರಿ ಹಗ್ಗವನ್ನು ಸುಧಾರಿಸುತ್ತಿರುವಾಗ ಅಲ್ಲೇ ಪಕ್ಕದಲ್ಲಿ ನಿಂತ ಒಬ್ಬ ವ್ಯಕ್ತಿ ಬಂದು ಸಹಾಯ ಮಾಡಿದನು, ನಂತರ ಸದರಿ ವ್ಯಕ್ತಿ ನಾನು ನಿಮ್ಮ ಲಾರಿ ಮೇಲೆ ಬರುತ್ತೇನೆ, ನನಗೆ ಕೆಲಸಕ್ಕೆ ಇಟ್ಟುಕೊಳ್ಳಿ ಅಂತಾ ಅಂದಾಗ ಫಿರ್ಯಾದಿಯು ಆತನ ಹೆಸರು ವಿಚಾರಿಸಲು ಜೀವನ ತಂದೆ ಶ್ರಾವಣ ಬುಗ್ಗೆ ಸಾ: ಕಣ್ಣೂರ ಅಂತಾ ತಿಳಿಸಿದನು, ನಂತರ ಇಬ್ಬರು ಲಾರಿಯಲ್ಲಿ ಕುಳಿತುಕೊಂಡು ಬಂದು 1430 ಗಂಟೆ ಸುಮಾರಿಗೆ ಲಾರಿಯನ್ನು ಮೋಮಿನ ದಾಭಾದ ಹತ್ತಿರ ನಿಲ್ಲಿಸಿ ಫಿರ್ಯಾದಿಗೆ ಆತನಿಗೆ ಸ್ನಾನ ಮಾಡಿ ಬರುತ್ತೇನೆ ನೀನು ಧಾಬಾದಲ್ಲಿ ಕುಳಿತುಕೋ ಅಂತಾ ಅಂದಾಗ ಆತನು ಇಲ್ಲಾ ದಾಭಾದಲ್ಲಿ ಕೂಡಲು ಬಿಡುವುದಿಲ್ಲಾ, ನಾನು ಲಾರಿಯಲ್ಲಿಯೇ ಕುಳಿತುಕೊಳ್ಳುತ್ತೇನೆ ನೀವು ಮನೆಗೆ ಹೋಗಿ ಸ್ನಾನ ಮಾಡಿಕೊಂಡು ಬನ್ನಿ ಅಂದನು ಕೂಡಲೇ ಫಿರ್ಯಾದಿಯು ಮನೆಗೆ ಬಂದು ಸ್ನಾನ ಮಾಡಿಕೊಂಡು ಮರಳಿ 1830 ಗಂಟೆಗೆ ಹೋಗಿ ನೋಡಲು ಫಿರ್ಯಾದಿಯು ನಿಲ್ಲಿಸಿ ಬಂದ ಸದರಿ ಲಾರಿ ಮತ್ತು ಸದರಿ ಜೀವನ ಇತನು ಸಹ ಇರಲಿಲ್ಲಾ, ಆಗ ಫಿರ್ಯಾದಿಯು ದಾಭಾದಲ್ಲಿ ಕೆಲಸ ಮಾಡುತ್ತಿದ್ದ ಅಹೇಮದಸಾಬ ತಂದೆ ರಜಾಕಮಿಯ್ಯಾ ಮೋಮಿನ ಮತ್ತು ಇಜಾಜಮಿಯ್ಯಾ ತಂದೆ ಅಹೇಮದಸಾಬ ರವರಿಗೆ ವಿಚಾರಣೆ ಮಾಡಲು ಅವರು ತಿಳಿಸಿದ್ದೆನೆಂದರೆ ನೀವು ನಿಲ್ಲಿಸಿದ ಲಾರಿಯನ್ನು ನೀವು ಲಾರಿಯಲ್ಲಿ ಕೂಡಿಸಿ ಹೋದ ವ್ಯಕ್ತಿ ಯಾರಿಗೂ ಹೇಳದೆ ಕೇಳದೆ ಲಾರಿಯನ್ನು ತೆಗೆದುಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದರು, ಲಾರಿ ನಂ. ಕೆಎ-56/4123 ಅ.ಕಿ 12 ಲಕ್ಷ ರೂಪಾಯಿ ಬೆಲವುಳ್ಳದು ಮತ್ತು ಅದರಲ್ಲಿ ಲೋಡ ಮಾಡಿದ ಉಳ್ಳಾಗಡ್ಡಿ ಅ.ಕಿ 3 ಲಕ್ಷ ರೂಪಾಯಿ ಹೀಗೆ ಒಟ್ಟು 15 ಲಕ್ಷ ರೂಪಾಯಿ ಬೆಲೆಬಾಳುವ ಲಾರಿ ಮತ್ತು ಉಳ್ಳಾಗಡಿಯನ್ನು ಸದರಿ ಆರೋಪಿ ಜೀವನ ತಂದೆ ಶ್ರಾವಣ ಬುಗ್ಗೆ ಸಾ: ಕಣ್ಣೂರ ಇತನು ಕಳವು ಮಾಡಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-05-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.