ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ
ಠಾಣೆ : ದಿನಾಂಕ:18/06/2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಮಣ್ಣೂರ ಗ್ರಾಮದ ಐ.ಬಿ ಹಿಂದುಗಡೆ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೀಟ-ಜೂಜಾಟ ನಡೆಯುತ್ತೀದೆ ಅಂತ ಮಾಹಿತಿ ಬಂದ ಮೇರಗೆ ಪಿಎಸ್ಐ ಅಫಜಲಪೂರ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಜೀಪನ್ನು ಐ.ಬಿ ಹತ್ತೀರ ನಿಲ್ಲಿಸಿ
ಕಾಲು ನಡಿಗೆ ಮುಖಾಂತರ ಹೋಗಿ ಐಬಿ ಹಿಂದುಗಡೆ ನೋಡಲಾಗಿ ಐಬಿ ಹಿಂದೆ 05 ಜನರು ದುಂಡಾಗಿ
ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ ದಾಳಿ ಮಾಡಿ ಜೂಜಾಡುತ್ತಿದ್ದ 05 ಜನರನ್ನು ಹಿಡಿದು
ಹೆಸರು ವಿಳಾಸ ವಿಚಾರಿಸಲಾಗಿ 1) ಬಸವರಾಜ ತಂದೆ ಭಿಮಶಾ ರಾಮಶೇಟ್ಟಿ ಸಾ:ಮಣ್ಣುರ 2) ದುಂಡಪ್ಪ ತಂದೆ
ಮಹಾದೇವಪ್ಪ ಅಲ್ಲಾಪೂರ ಸಾ:ಮಣ್ಣೂರ 3) ಅರವಿಂದ ತಂದೆ ಸಂಗಪ್ಪ ಹಡಲಗಿ ಸಾ:ಮಣ್ಣೂರ 4)ಸಿದ್ದು ತಂದೆ ಗಡ್ಡೆಪ್ಪ ವಡಗೆರಿ ಸಾ:ಮಣ್ಣೂರ 5)ಮಹಾದೇವ ತಂದೆ ಮಹಾನಿಂಗಪ್ಪ ಅಲ್ಲಾಪೂರ ಸಾ:ಮಣ್ಣುರ ಅಂತಾ ತಿಳಿಸಿದ್ದು
ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ಒಟ್ಟು 3460/-ರೂ ಮತ್ತು 52 ಇಸೀಟ ಎಲೆಗಳನ್ನು
ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 92/2019 ಕಲಂ 87 ಕೆ.ಪಿ ಆಕ್ಟ ನೇದ್ದರ
ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಚೌಕ ಠಾಣೆ : ದಿನಾಂಕ 18.06.2019 ರಂದು ಸಾಯಂಕಾಲ ಚೌಕ ಠಾಣಾ ವ್ಯಾಪ್ತಿಯ ಶಿವಾಜಿನಗರದ ಕೆ.ಇ.ಬಿ ಖಜಾನೆ ಹತ್ತಿರದ
ಕನ್ಹಯ್ಯಾ ಚಹಾ ಹೋಟೆಲ ಹತ್ತಿರದ ಮುಂದಿನ
ರಸ್ತೆಯ
ಮೇಲೆ ಒಬ್ಬ
ವ್ಯಕ್ತಿಯು ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದುಕೊಂಡು 01 ರೂಪಾಯಿಗೆ 80 ರೂಪಾಯಿ
ಕೊಡುವುದಾಗಿ ಹೇಳಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ
ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ರಾಜಣ್ಣ ಎ.ಎಸ್.ಐ ಚೌಕ ಪೊಲೀಸ್
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿವಾಜಿನಗರದ ಕೆ.ಇ.ಬಿ ಪಾವರ ಹೌಸ ಹತ್ತಿರ ಸ್ವಲ್ಪ
ದೂರದಲ್ಲಿ ನಮ್ಮ ವಾಹನಗಳನ್ನು ನಿಲ್ಲಿಸಿ,
ನಾವೇಲ್ಲರೂ ವಾಹನಗಳಿಂದ ಕೆಳಗೆ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ
ವ್ಯಕ್ತಿಯು ಶಿವಾಜಿನಗರದ ಕೆ.ಇ.ಬಿ ಖಜಾನೆ ಹತ್ತಿರದ
ಕನ್ಹಯ್ಯಾ ಚಹಾ ಹೋಟೆಲ ಹತ್ತಿರದ ಮುಂದೆ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 01 ರೂಪಾಯಿಗೆ 80 ರೂಪಾಯಿ
ಕೊಡುವುದಾಗಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಗಳನ್ನು ಬರೆದುಕೊಳ್ಳುವುದನ್ನು ನೋಡಿ ಖಚಿತ
ಪಡಿಸಿಕೊಂಡು ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು
ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಗಂಗಾಧರ ತಂದೆ ಕಾಶಿನಾಥ ಬುಯ್ಯೇ ಸಾ: ರಾಜೀವ ಗಾಂಧಿನಗರ
ಕಲಬುರಗಿ ಅಂತಾ ತಿಳಿಸಿದ್ದು ಈತನ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ
ಸಂಬಂದಿಸಿದ 1230/- ರೂ ನಗದು ಹಣ, ಒಂದು ಮಟಕಾ ಚೀಟಿ, ಒಂದು
ಬಾಲಪೆನ್ನು ದೊರೆತಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ
ಚೌಕ ಠಾಣೆಗೆ ಬಂದು ಠಾಣೆ ಗುನ್ನೆ ನಂ 70/2019 ಕಲಂ 78 (III) ಕೆ.ಪಿ.ಆಕ್ಟ
ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ
ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 18-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಹಿಂಚಗೇರಾ ಗ್ರಾಮದ ಭೀಮಾ ನದಿಯಲ್ಲಿ
ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.
ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ನೊಡಲಾಗಿ
ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ
ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿಹೊದನು. ನಾವು ಟ್ಯಾಕ್ಟರ
ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ನಂತರ ನಾವು ಪಂಚರ
ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ
ಹಾಕಿರುವುದಿಲ್ಲ. ಸದರಿ ಟ್ಯಾಕ್ಟರ CH NO :-
WACA51910051192 ENG NO:- 47.3029/SPN11547 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಹಾಕಿರುವುದಿಲ್ಲ. ಸದರಿ ಟ್ರ್ಯಾಕ್ಟರ
ಅ.ಕಿ 5,00,000/-ರೂ ಇರಬಹುದು. ನಂತರ ಸದರಿ ಟ್ರ್ಯಾಕ್ಟರನ್ನು
ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 93/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್
ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 18-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಸೊನ್ನ ಗ್ರಾಮದ ಭೀಮಾ ನದಿಯಲ್ಲಿ
ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.
ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ನೊಡಲಾಗಿ
ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ
ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿಹೊದನು. ನಾವು ಟ್ಯಾಕ್ಟರ
ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ಸದರಿ ಚಾಲಕನನ್ನು
ಹಿಡಿಯಲು ನಾನು ಮತ್ತು ಸಿಬ್ಬಂದಿಯವರು ಬೆನ್ನಟ್ಟಿ ಓಡಿ ಹೋದರು ಸಿಕ್ಕಿರುವದಿಲ್ಲ ನಂತರ ನಾವು ಪಂಚರ
ಸಮಕ್ಷಮ ಸದರಿ ಟ್ರ್ಯಾಕ್ಟರನ ನಂಬರ ಚೆಕ್ಕ ಮಾಡಲು ಕೆ.ಎ-32 ಟಿ.ಎ-9896 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ
ಟ್ರೈಲಿಗೆ ಎಲ್ಲಿಯು ನಂಬರ ಹಾಕಿರುವುದಿಲ್ಲ. ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ ಇರಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ
ಠಾಣೆಗೆ ಬಂದು ಠಾಣೆಯ ಗುನ್ನೆ ನಂ 94/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಅಡಿಯಲ್ಲಿ
ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಜೇವರಗಿ
ಠಾಣೆ : ದಿನಾಂಕ; 18/06/2019 ರಂದು ಸಾಯಂಕಾಲ ಶ್ರೀಮತಿ ಮಾಣಿಕಮ್ಮ @ ವೈಷ್ಣವಿ ಗಂಡ ಪ್ರವೀಣಕುಮಾರ ಗೋಗಿ ಸಾ; ಗೋಗಿ ತಾ;
ಶಹಾಪೂರ ಜಿ; ಯಾದಗೀರ ರವರಿಗೆ ಜೇವರಗಿ ಪಟ್ಟಣದ ದೇವಿಂದ್ರಪ್ಪ ಗೋಗಿ ಇವರ ಮಗನಾದ ಪ್ರವೀಣಕುಮಾರ ಗೋಗಿ ಈತನೊಂದಿಗೆ ಮತ್ತು ನಮ್ಮ ಅಕ್ಕಳಾದ ನಿರ್ಮುಲಾ ಇವಳಿಗೆ ನಿರಂಜನ್ ಗೋಗಿ ಈತನೊಂದಿಗೆ ದಿನಾಂಕ;
29/01/2017 ರಂದು ಜೇವರಗಿ ತಾಲೂಕಿನ ಭೂತಪೂರ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿರುತ್ತದೆ. ನನಗೆ ಮತ್ತು ನನ್ನ ಅಕ್ಕಳಾದ ನಿರ್ಮಲಾ @ ಸಹನಾ ಇಬ್ಬರಿಗೆ ಒಂದೆ ಮನೆಗೆ ಕೊಟ್ಟು ಮದುವೆ ಮಾಡಿರುತ್ತಾರೆ.
ಮದುವೆಯ ನಿಶ್ಚಯದ ಸಮಯದಲ್ಲಿ ಇಬ್ಬರಿಗೆ ತಲಾ 6
ತೊಲೆ ಬಂಗಾರ, ಮತ್ತು 50,000/- ರೂ ಕೊಡಬೇಕು ಎಂದು ಹಿರಿಯರಾದ ಬಸವರಾಜ ಅಲ್ಲೂರ, ಅಂಬರೇಷಗೌಡ ತಂದೆ ಶಾಂತಪ್ಪಗೌಡ
ಹಾರಣಗೇರಾ, ಸೈಬಣ್ಣ ಚೂರಿ, ಚಂದ್ರಶೇಖರ್
ಭೇವಿನಹಳ್ಳಿ, ಮಲ್ಲಿಕಾರ್ಜುನ್ ಕಾಯಿ, ಈರಣ್ಣಗೌಡ
ಕಲಾಲ್ ರವರ ಸಮಕ್ಷಮದಲ್ಲಿ ಮಾತುಕತೆ ಆಗಿದ್ದು ಅದರಂತೆ ನಮ್ಮ ತಂದೆಯವರು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ಆ ಸಮಯದಲ್ಲಿ ನಮ್ಮ ತಂದೆಯವರ ಹತ್ತಿರ ಹಣ ಇರದೆ ಇದ್ದುದ್ದರಿಂದ ಅವರು ನಂತರ ಕೊಡುತ್ತೇನೆ ಎಂದು ಹೇಳಿದ್ದಕ್ಕೆ ಅವರು ವರದಕ್ಷಿಣೆ ಹಣ ಮತ್ತು ಬಂಗಾರ ಕೊಟ್ಟರೆ ಮಾತ್ರ ತಾಳಿ ಕಟ್ಟುತ್ತೇವೆ. ಎಂದು ಹಟ ಹಿಡಿದಾಗ ನಮ್ಮ ಮಾವನವರಾದ ನಿಂಗಣ್ಣ ಇವರು ತನ್ನ ಹೆಂಡತಿಯ ಕೊರಳಲ್ಲಿದ್ದ ಬಂಗಾರ ಮತ್ತು ವರದಕ್ಷಿಣೆ ಹಣ ತಂದು ಕೊಟ್ಟಾಗ ನಮಗೆ ತಾಳಿ ಕಟ್ಟಿರುತ್ತಾರೆ.ಅದಲ್ಲದೆ ಮದುವೆ ಸಮಯದಲ್ಲಿ ವರೋಪಚಾರವಾಗಿ ಬಾಂಡೆಸಾಮಾನುಗಳು ಮನೆಯ ಸಾಮಾನುಗಳು, ಮಂಚ, ಗಾದಿ,
ಪ್ರಿಡ್ಜ್ ಡಿ.ವಿ ಪ್ಯಾನ್ ಮತ್ತು ಮನೆಯಲ್ಲಿ ದಿನ ಬಳಕೆಯ ಸಾಮನಾಗಳು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ನಂತರ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಿ ನನ್ನ ಗಂಡನ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಪ್ರವೀಣಕುಮಾರ ತಂದೆ ದೇವಿಂದ್ರಪ್ಪ ಗೋಗಿ,
ನನ್ನ ಅಕ್ಕ ನಿರ್ಮಲಾ ಮತ್ತು ಇವಳ ಗಂಡ ನಿರಂಜನ್ ತಂದೆ ದೇವಿಂದ್ರಪ್ಪ ಗೋಗಿ,
ನಮ್ಮ ಅತ್ತೆ ಮಹಾನಂದ ಗಂಡ ದೇವಿಂದ್ರಪ್ಪ ಗೋಗಿ ಮಾವನಾದ ದೇವಿಂದ್ರಪ್ಪ ತಂದೆ ಶರಣಪ್ಪ ಗೋಗಿ ನಾದನಿ ಪ್ರಿಯಾಂಕಾ ಗಂಡ ಮುರುಗೇಶ ಕಿರಣಗಿ ಹಾಗು ಭಾವನಾದ ನಾಗರಾಜ ತಂದೆ ದೇವಿಂದ್ರಪ್ಪ ಗೋಗಿ ಸಾ; ಎಲ್ಲರು ಜೇವರಗಿ ಕೂಡಿಕೊಂಡು ಒಂದೆ ಮನೆಯಲ್ಲಿ ವಾಸವಾಗಿರುತಿದ್ದೇವು. ಕೆಲವು ದಿನಗಳು ಮಾತ್ರ ಮನೆಯವರೆಲ್ಲರು ನಮ್ಮೊಂದಿಗೆ ಚನ್ನಾಗಿ ಇದ್ದರು.
ನಂತರ ನನ್ನ ಗಂಡ ಪ್ರವೀಣಕುಮಾರ ಈತನು ಮದುವೆಯಾದ 5 ನೇ ದಿನಕ್ಕೆ ನನಗೆ,
ನೀನು ನೋಡಲು ಚನ್ನಾಗಿ ಇಲ್ಲ.
ನೀನು ನಮ್ಮ ಮನೆಗೆ ಹೊಂದಿಕೆ ಆಗಲ್ಲ,
ನೀನೆಂದರೆ ನನಗೆ ಇಷ್ಟ ಇಲ್ಲ. ನಮ್ಮ ತಂದೆ ತಾಯಿಯವರ ಒತ್ತಾಯಕ್ಕೆ ನಿನಗೆ ಮದುವೆ ಆಗಿದ್ದೇನೆ.
ನೀನು ನಮ್ಮ ಮನೆಗೆ ಹೊಂದಿಕೆ ಆಗುವದಿಲ್ಲ ಎಂದು ನಮ್ಮ ಅಕ್ಕ ಪ್ರಿಯಾಂಕಾ ಇವಳ ಮೈಯಲ್ಲಿ ಲಕ್ಷ್ಮೀ ದೇವರು ಬಂದು ಹೇಳಿದ್ದಾಳೆ. ಅದಕ್ಕೆ ನೀನು ನನ್ನೊಂದಿಗೆ ಇರಬೇಡ,
ರಂಡಿ ಭೋಸಡಿ ಎಂದು ಬೈದಿರುತ್ತಾನೆ. ಮತ್ತು ನನಗೆ ಹೊಲಸು ಹೊಲಸಾಗಿ ಬೈದು ಕೈಯಿಂದ
ಹೊಡೆ ಬಡೆ ಮಾಡಿ ದೈಹಿಕ ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ. ಮತ್ತು ನಾನು ಮನೆಯಲ್ಲಿ ಭಾವ ಮೈದುನರೊಂದಿಗೆ ಮಾತನಾಡಿದರೆ ಮತ್ತು ನಾನು ನಮ್ಮ ತಂದೆ ತಾಯಿ ಅಣ್ಣ-ತಮ್ಮರೊಂದಿಗೆ ಪೋನಿನಲ್ಲಿ ಮಾತನಾಡಿದರೆ ಅವರು ನನ್ನ ಮೇಲೆ ವಿನಾಕಾರಣ ಸಂಶಯ ಮಾಡಿಕೊಂಡು ನನ್ನ ಗಂಡ ಮತ್ತು ಮನೆಯವರು ನನಗೆ ಕಿರುಕುಳ ಕೊಟ್ಟಿರುತ್ತಾರೆ.ಅತ್ತ ನಮ್ಮ ಅಕ್ಕಳಾದ ನಿರ್ಮಲಾ ಇವಳಿಗೆ ವಿಷಯ ತಿಳಿಸಿದಾಗ ಅವಳು ನನ್ನ ಗಂಡ ನನಗೆ ನೀನು ಬೇರೆಯವರೊಂದಿಗೆ ಸಂಬಂದ ಹೊಂದಿರುತ್ತಿ ಏನು?,
ನಿನಗೆ ಯಾರದಾದರು ಬಾಯ್ ಪ್ರೆಂಡ್ ಇದ್ದಾರೇನು.
ಎಂದು ಕೇಳಿ ನನಗೆ ಮೊದಲನೆ ರಾತ್ರಿಯೇ ಈ ರೀತಿಯಾಗಿ ನಡೆದುಕೊಂಡಿರುತ್ತಾನೆ. ಮತ್ತು ನನ್ನೊಂದಿಗೆ ಸರಿಯಾಗಿ ಸಂಸಾರ ಮಾಡದೆ ನೀನು ನಮ್ಮ ಮನೆಯಲ್ಲಿ ಇರಬೇಡ ನನ್ನ ಸ್ನೇಹಿತ ಕರೆದಿದ್ದಾನೆ ನೀ ಅವನ ಹತ್ತಿರ ಹೋಗು ಎಂದು ನನಗೆ ರಾತ್ರೋ ರಾತ್ರಿ ಮನೆಯಿಂದ ಹೊರಗೆ ಹಾಕಿ ಒಳಗಿನ ಕೊಂಡಿ ಹಾಕಿಕೊಂಡು ಬಿಡುತ್ತಿದ್ದಾನೆ. ಒಂದು ರೀತಿಯಲ್ಲಿ ನನ್ನ ಕಂಡರೆ ಹುಚ್ಚನಂತೆ ಆಡುತ್ತಿದ್ದಾನೆ. ಮತ್ತು ನನಗೆ ವಿನಾಕಾರಣ ಮನೆಯಲ್ಲಿ ಕೈಯಿಂದ ಹೊಡೆದು ಕಿರುಕುಳ ನೀಡಿರುತ್ತಾನೆ.
ಎಂದು ವಿಷಯ ತಿಳಿಸಿರುತ್ತಾಳೆ. ಈ ವಿಷಯ ನಾವು ಮನೆಯಲ್ಲಿ ಅತ್ತೆ,
ಮಾವ, ಭಾವನವರಿಗೆ ತಿಳಿಸಿದಾಗ ಅವರು ಕೂಡ ರಂಡೇರೆ,
ಅವರು ಇರೋದೆ ಹೀಗೆ ಬೇಕಾದರೆ ಇರ್ರಿ ಇಲ್ಲ,
ಇಲ್ಲಿಂದ ಹೊರಟು ಹೋಗರಿ ಎಂದು ಎಲ್ಲರು ಕೂಡಿ ರಾತ್ರೋ ರಾತ್ರಿ ನಮಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ.
ಆದರು ಕೂಡ ನಾವು ಗಂಡನ ಮನೆಯಲ್ಲಿ ಅವರು ಇಟ್ಟಂತೆ ಇರಬೇಕು ಎಂದು ಅವರು ನೀಡಿದ ಹಿಂಸೆ ತಾಳಿಕೊಂಡು ಅವರೊಂದಿಗೆ ಇದ್ದೇವು.
ಮತ್ತು ನಾವು ನಮ್ಮ ಮನೆಯವರೊಂದಿಗೆ ಮಾತನಾಡಲು ಬಿಡುತ್ತಿರಲಿಲ್ಲ. ಮನೆಯಲ್ಲಿ ಜೈಲಿನಲ್ಲಿ ಇಟ್ಟಂತೆ ನಮಗೆ ಇಡುತ್ತಿದ್ದರು. ಅವರು ಮನೆಯಲ್ಲಿ ಹೆಚ್ಚಿಗೆ ಊಟ ಮಾಡಲು ಬಿಡುತ್ತಿರಲಿಲ್ಲ, ಎರಡೆ ಊಟ ಮಾಡಬೇಕು ಎಂದು ಮನೆಯಲ್ಲಿ ಊಟ ನೀಡದೆ ಕಿರುಕುಳ ನೀಡಿರುತ್ತಾರೆ.
ಮತ್ತು ನಾಗರಾಜ ತಂದೆ ದೇವಿಂದ್ರಪ್ಪ ಗೋಗಿ ಈತನು ನಮ್ಮ ಮನೆಯ ವಿಷಯ ಯಾರಿಗಾದರು ಹೇಳಿದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಎಂದು ಭೆದರಿಕೆ ಹಾಕಿರುತ್ತಾರೆ.
ನಂತರ ನಾವು ಹಬ್ಬಕ್ಕೆಂದು ನಮ್ಮ ಊರು ಗೋಗಿ ಗ್ರಾಮಕ್ಕೆ ಹೋಗಿ ಗಂಡನ ಮನೆಯಲ್ಲಿ ನಡೆದ ವಿಷಯ ತಿಳಿಸಿದಾಗ ನಮ್ಮ ಮನೆಯಲ್ಲಿ ಹಿರಿಯರಾದ ಬಸವರಾಜ ಕೊಡೆಕಲ್,
ಶಿವು ಮಲ್ಲಾಡ, ನಮ್ಮ ತಂದೆ ಮಹಾದೇವಪ್ಪ ತಂದೆ ದೇವಿಂದ್ರಪ್ಪ, ಬಸವರಾಜ ಅಲ್ಲೂರ,
ಹಾಗು ಚಂದ್ರಯ್ಯ ಸ್ವಾಮಿ ಹಾಗು ನಮ್ಮ ಭಾವ,
ನಾಗರಾಜ, ಮಾವನಾದ ದೇವಿಂದ್ರಪ್ಪ,
ಮಹಾನಂದ. ನಮ್ಮ ಮಾವನ ಕಡೆಯವರು ಬಂದು ಪಂಚಾಯತಿ ಮಾಡಿ ತಿಳಿಸಿ ಹೇಳಿದ್ದರಿಂದ ನನ್ನ ಗಂಡ ಮತ್ತು ಗಂಡನ ಮನೆಯವರು ಇನ್ನು ಮುಂದೆ ಸರಿಯಾಗಿ ನಡೆಸಿಕೊಳ್ಳುತ್ತೇವೆ. ಎಂದು ಹೇಳಿರುತ್ತಾರೆ.
ನಂತರ ನಾವು ನಮ್ಮ ಗಂಡನ ಮನೆಗೆ ಬಂದು ಸಂಸಾರ ಮಾಡಿರುತ್ತೇವೆ.
ಕೆಲವು ದಿನಗಳವರೆಗೆ ಚನ್ನಾಗಿ ಇದ್ದು,
ನಂತರ ನಮಗೆ ಇಬ್ಬರಿಗೆ ನೀವು ನಿಮ್ಮ ತವರು ಮನೆಯಿಂದ ವರದಕ್ಷಿಣೆ ಕಡಿಮೆ ಕೊಟ್ಟಿದ್ದಾರೆ ಇನ್ನು ಒಂದು ಲಕ್ಷ ರೂಪಾಯಿ ಹಣ ಮತ್ತು ಬಂಗಾರ ತರಬೇಕು ಎಂದು ನಮಗೆ ಮನೆಯಲ್ಲಿ ಅವಾಚ್ಯವಾಗಿ ಬೈಯುವದು ಹೊಡೆಯುವದು ಮಾಡಿರುತ್ತಾರೆ.
ಮತ್ತು ಮನೆಯಲ್ಲಿ ನಮಗೆ ಊಟ ಕೊಡದೆ ಮನೆಯಿಂದ ಹೊರಗೆ ಹಾಕಿರುತ್ತಾರೆ.
ನಂತರ ಮನೆ ಪ್ರವೇಶದ ಸಮಯದಲ್ಲಿ ನಮ್ಮ ತಂದೆ ತಾಯಿಯವರು ಅವರಿಗೆ ಬೆಳ್ಳಿ ತಟ್ಟೆ ನೀಡಿ ತಲಾ ಒಂದೊಂದು ತೊಲೆ ಬಂಗಾರ ಹಾಕಿರುತ್ತಾರೆ.
ಆದರು ಕೂಡ ಅವರು ಇನ್ನು ತವರು ಮನೆಯಿಂದ ಹಣ ತರಬೇಕು ಎಂದು ವರದಕ್ಷಿಣೆ ಕಿರುಕುಳ ಕೊಟ್ಟು ನಮಗೆ ಹೊಡೆದು ಮನೆಯಿಂದ ಹೊರಗೆ ಹಾಕಿರುತ್ತಾರೆ.
ನಂತರ ನಾವು ಇಬ್ಬರು ಕೂಡಿ ನಮ್ಮ ತವರು ಮನಗೆ ಹೋಗಿ ಕೆಲವು ದಿನಗಳವರೆಗೆ ಅಲ್ಲಿಯೇ ಇದ್ದಿರುತ್ತೇವೆ.ನಂತರ ಅವರು ನಮಗೆ ಪೂರ್ತಿಯಾಗಿ ಬಿಟ್ಟು ಡೈವರ್ಸ್ ಕೊಟ್ಟು ನಿಮ್ಮ ಪಾಡಿಗೆ ನೀವು ಇರಿ ಎಂದು ಹೇಳಿರುತ್ತಾರೆ. ನಾವು ಈ ವಿಷಯ ರಾಜ್ಯ ಮಹಿಳಾ ಆಯೋಗ ಬೆಂಗಳೂರ
ರವರಿಗೆ ಭೆಟಿಯಾಗಿ ಅವರ ಮುಂದೆ ನಮ್ಮ ಅಳಲು ತೋಡಿಕೊಂಡಾಗ ಅವರು ನಮ್ಮ ಗಂಡಂದಿರಿಗೆ ಮತ್ತು ಮಾವ,
ಅತ್ತೆಮ ಭಾವನವರಿಗೆ ಕರೆಯಿಸಿ ಹೇಳುತ್ತೇವೆ.
ಎಂದು ಬರಲು ತಿಳಿಸಿದಾಗ ನನ್ನ ಗಂಡ, ಮತ್ತು ಮನೆಯವರೆಲ್ಲರು ಬಂದಾಗ ಅಲ್ಲಿಯು ಕೂಡ ಅವರ ಮಾತಿಗು ಬೆಲೆ ಕೊಡದೆ ನಮಗೆ ಕಿರುಕುಳ ನೀಡಿರುತ್ತಾರೆ.
ನಂತರ ಮತ್ತೆ 3-4 ಬಾರಿ ಅವರಿಗೆ ಬರಲು ತಿಳಿಸಿದಾಗ ಅವರು ಅಲ್ಲಿಗೆ ಬಂದಿರುವದಿಲ್ಲ.
ನಾವು ಕೌನ್ಸಿಲಿಂಗ್ ಮಾಡಿದರೆ ಸರಿ ಹೋಗಬಹುದು ಎಂದು ಮಹಿಳಾ ಆಯೋಗದವರ ಹತ್ತಿರ ಹೋಗಿ ತಿರುಗಾಡಿ ಇಂದು ದಿನಾಂಕ; 13/06/2019 ರಂದು ತಡಮಾಡಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ನಮಗೆ ಕಿರುಕುಳ ನೀಡಿದ್ದು ದಿನಾಂಕ;
29/01/2017 ರಿಂದ ಇಲ್ಲಿಯವರೆಗೆ ನಮಗೆ ತೊದರೆ ನೀಡಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ.
ಮತ್ತು ವರದಕ್ಷಿಣೆ ಹಣ ತರದೆ ಇದ್ದರೆ ನಿಮಗೆ ಸೀಮೆ ಎಣ್ಣೆ ಹಾಕಿ ಸುಟ್ಟು ಬಿಡುತ್ತೇವೆ ಎಂದು ಜೀವದ ಭಯ ಹಾಕಿರುತ್ತಾರೆ. ನಾದನಿಯಾದ ಪ್ರಿಯಾಂಕಾ ಇವಳು ಮೈಯಲ್ಲಿ ದೇವರು ಬಂದಂತೆ ಮಾಡಿ ನಮಗೆ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾಳೆ. ಹಾಗು ನೀವು ಬಡವರು, ನಮ್ಮ ದುಡ್ಡಿನಲ್ಲಿ ಮಜಾ ಮಾಡುತ್ತೀರಿ ರಂಡೇರೆ ನಿಮಗೆ ಕಟ್ಟಿಕೊಂಡು ನಮ್ಮ ಅಣ್ಣ ತಮ್ಮಂದಿರ ಬಾಳು ಹಾಳಾಯಿತು ನೀವು ಮನ ಬಿಟ್ಟು ಹೋಗಿರಿ ನಮ್ಮ ಅಣ್ಣ ತಮ್ಮರಿಗೆ ಬೇರೆ ಮದುವೆ ಮಾಡುತ್ತೇವೆ.
ಎಂದು ಕೇವಲವಾಗಿ ಮಾತನಾಡಿ ನಮಗೆ ಮನಸ್ಸಿಗೆ ಚುಚ್ಚುವಂತೆ ಯಾಸಿದೀಡಿಯಾಗಿ ಮಾತನಾಡಿ ತಿವಿಯುವದು.
ಮಾಡುತ್ತಾ ತವರು ಮನೆಯಿಂದ ವರದಕ್ಷಿ ತಗೊಂಡು ಬಂದರೆ ನಮ್ಮ ಮನೆಯಲ್ಲಿ ಇರಿ,
ಇಲ್ಲ ಇಲ್ಲಿಂದ ಹೋಗಿರಿ ಎಂದು ನಮಗೆ ದೈಹಿಕ ಮಾನಸಿಕ ಕಿರುಕುಳ ನೀಡಿರುತ್ತಾಳೆ.
ಮತ್ತು ಈಗ ರಡು ತಿಂಗಳ ಹಿಂದೆ ನನ್ನ ಗಂಡ ಪ್ರವೀಣ ಈತನು ನಾನು ಯಾದಗಿರಿ ಅರಿಕೇರಿಯಲ್ಲಿ ಇದ್ದಾಗ ನನ್ನ ಗಂಡನು ಅಲ್ಲಿಗೆ ಬಂದು ಮಹಿಳಾ ಆಯೋಗಕ್ಕೆ ಹೋಗಿ ನಮ್ಮ ವಿರುದ್ದ ದೂರು ನೀಡುತ್ತೀರಿ ರಂಡಿ ನೀನು ಹೇಗೆ ನೌಕರಿ ಮಾಡುತ್ತಿ ನಿನಗೆ ನೋಡಿಕೊಳ್ಳುತ್ತೇನೆ ಎಂದು ಜೀವದ ಭೆದರಿಕೆ ಹಾಕಿ ಹೋಗಿರುತ್ತಾನೆ. ಮತ್ತು ನಮ್ಮ ಅತ್ತೆ ಮಹಾನಂದ ಇವಳು ನನ್ನ ಮಗನ ಹತ್ತಿರ ಗಂಡಸತನ ಇಲ್ಲ ನೀನು ಬೇಕಾದರೆ ಬೇರೆಯವರ ಹತ್ತಿರ ಹೋಗಿ ಮಗು ಮಾಡಿಕೊ ಈ ವಿಷಯ ಯಾರಿಗೂ ಹೇಳಬೇಡ ಎಂದು ಹೇಳಿ ನನಗೆ ಕಿರುಕುಳ ನೀಡಿರುತ್ತಾಳೆ.
ನಂತರ ನಾವು ಈ ಕುರಿತು ಮಹಿಳಾ ಆಯೋಗಕ್ಕೆ ಹೋಗಿ ವಿಚಾರಣೆ ಮಾಡಿ ಇಂದಿಲ್ಲ ನಾಳೆ ಸರಿ ಹೋಗಬಹುದು ಎಂದು ಸುಮ್ಮನಿದ್ದು ಕಾರಣ 01)
ಪ್ರವೀಣಕುಮಾರ ತಂದೆ ದೇವಿಂದ್ರಪ್ಪ ಗೋಗಿ 02)
ನಿರಂಜನ್ ತಂದೆ ದೇವಿಂದ್ರಪ್ಪ ಗೋಗಿ 03)
ಮಹಾನಂದ ಗಂಡ ದೇವಿಂದ್ರಪ್ಪ ಗೋಗಿ 04)
ಪ್ರಿಯಾಂಕಾ ಗಂಡ ಮುರುಗೇಶ ಕಿರಣಗಿ 05) ದೇವಿಂದ್ರಪ್ಪ ತಂದೆ ಶರಣಪ್ಪ ಗೋಗಿ 06)
ನಾಗರಾಜ ತಂದೆ ದೇವಿಂದ್ರಪ್ಪ ಗೋಗಿ ಸಾ; ಲಕ್ಷ್ಮೀಚೌಕ್ ಜೇವರಗಿ ಇವರು ಮನೆಯವರೆಲ್ಲರು ಕೂಡಿ ನಮಗೆ ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ಪೀಡಿಸಿ ದೈಹಿಕ ಮಾನಸಿಕ ಕಿರುಕುಳ ನೀಡಿ ನಮಗೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಜೀವದ ಭೇದರಿಕೆ ಹಾಕಿರುತ್ತಾರೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಪೊಲೀಸ್ ಠಾಣೆ ಗುನ್ನೆ ನಂ:
128/2019 ಕಲಂ: 323, 498 (ಎ), 504, 506,
ಸಂ: 149 ಐಪಿಸಿ ಮತ್ತು ಕಲಂ;
3 & 4 ವರದಕ್ಷಿಣೆ ನಿಷೇಧ ಕಾಯ್ದೆ 1961
ನೇದ್ದರ ಪ್ರಕಾರ ಪ್ರಕರಣ ಧಾಖಲಿಸಲಾಗಿದೆ,
ಅಸ್ವಾಭಾವಿಕ ಸಾವು ಪ್ರಕರಣ :
ವಾಡಿ ಠಾಣೆ : ದಿನಾಂಕ 18/06/2019 ರಂದು ಮದ್ಯಾಹ್ನ 01-30 ಗಂಟೆ ಸುಮಾರು ನಮ್ಮ ತಾಯಿಯವರು
ನಮ್ಮ ಮನೆಯ ಅಂಗಳದಲ್ಲಿ ಬಟ್ಟೆಗಳನ್ನು ತೊಳೆದು ಮನೆಯ ಮುಂದಿನ ಪತ್ರಾದ ಕೆಳಗಡೆ ಇದ್ದ ತಂತಿಯ
ಮೇಲೆ ಬಟ್ಟೆಗಳನ್ನು ಹಾಕುತ್ತಿದ್ದಾಗ ಒಮ್ಮೇಲೆ ಚೀರಾಡುವದು ಮಾಡುತ್ತಿದ್ದು ಕಂಡು ನಾನು,
ನನ್ನ ಹೆಂಡತಿ, ನಮ್ಮ ಪಕ್ಕದ ಮನೆಯ ಮಹ್ಮದ ಫಾರುಕ
ಮನೆಯ ಹೊರಗಡೆ ಬಂದು ನೋಡಲಾಗಿ ಬಟ್ಟೆ ಕೈಯಲ್ಲಿ
ಹಿಡಿದು ಅಲುಗಾಡುತ್ತಿದ್ದು ಕರೆಂಟ ಹತ್ತಿರಬಹುದು ಅಂತಾ ತಿಳಿದು ನಾನು ಬಡಿಗೆ ತೆಗೆದುಕೊಂಡು
ವಾಯರಗೆ ಹೊಡೆಯಬೇಕೆನ್ನುವಷ್ಟರಲ್ಲಿ ನಮ್ಮ ತಾಯಿ ಬಟ್ಟೆ ಸಮೇತ ಕೆಳಗಡೆ ಬಿದ್ದಳು. ನಮ್ಮ ತಾಯಿಯ
ಕಾಲಿನ ಕೆಳಗಡೆ ವಾಯರ ಇದ್ದು ನಂತರ ನಾನು ಬಡಿಗೆಯಿಂದ ವಾಯರಗೆ ಹೊಡೆದು ಬಿಡಿಸಿದೆನು. ನೋಡಲಾಗಿ
ಮುಖ್ಯ ರಸ್ತೆಗೆ ಇರುವ ಕಂಬದಿಂದ ವಿದ್ಯೂತ ವಾಯರ ನಮ್ಮ ಮನೆಯ ಮೇಲಗಡೆ ಕಂಬದಿಂದ ಕೆಳಗಡೆ ಮೀಟರಗೆ
ವಾಯರ ಅಳವಡಿಸಿದ್ದು ವಾಯರ ಹಳೆಯದಾಗಿ ಅದರ ಮೇಲಿನ ತೊಗಟೆ ಕಟ್ ಆಗಿದ್ದು ವಾಯರ ಪತ್ರಾಕ್ಕೆ
ಹತ್ತಿದ್ದರಿಂದ ಪತ್ರಾದಲ್ಲಿ ಕರೆಂಟ ಬಂದು ಅದಕ್ಕೆ ಹೊಂದಿಕೊಂಡು ತಂತಿ ಹಾಕಿದ್ದು ತಂತಿಯಲ್ಲಿ ಸಹ
ಕರೆಂಟ ಬಂದು ನಮ್ಮ ತಾಯಿ ಬಟ್ಟೆ ಹಾಕುವ ಕಾಲಕ್ಕೆ ಬಟ್ಟೆಗೆ ವಿದ್ಯೂತ ತಗುಲಿ ನಮ್ಮ ತಾಯಿಗೆ
ವಿದ್ಯೂತ್ ತಗುಲಿದ್ದು ಇರುತ್ತದೆ. ನಂತರ ನಮ್ಮ ತಾಯಿಯನ್ನು ಉಪಚಾರ ಕುರಿತು ಖಾಸಗಿ ವೈದ್ಯರಾದ
ಡಾ: ಮಜರ ರವರ ಹತ್ತಿರ ತೆಗೆದಕೊಂಡು ಹೋಗಿ ತೋರಿಸಲಾಗಿ ವೈದ್ಯರು ಪರೀಕ್ಷೆ ಮಾಡಿ ನೋಡಿ ಮರಣ
ಹೊಂದಿರುತ್ತಾಳೆ ಅಂತಾ ತಿಳಿಸಿದರು. ನಂತರ ನಮ್ಮ ತಾಯಿಯ ಶವವನ್ನು ನಮ್ಮ ಮನೆಗೆ ತೆಗೆದುಕೊಂಡು
ಬಂದಿರುತ್ತೆವೆ. ನಮ್ಮ
ತಾಯಿ ಬಟ್ಟೆಗಳನ್ನು ತೊಳೆದು ಮನೆಯ ಮುಂದಿನ ಪತ್ರಾದ ಕೆಳಗಡೆ ಇರುವ ತಂತಿಯ ಮೇಲೆ ಹಾಕುವ ಕಾಲಕ್ಕೆ
ಪತ್ರಾದಲ್ಲಿಂದ ತಂತಿಗೆ ವಿದ್ಯೂತ ಬಂದು ಅದು ಬಟ್ಟೆಗೆ ಹಾಗೂ ನಮ್ಮತಾಯಿಗೆ ವಿದ್ಯೂತ
ತಗುಲಿದ್ದರಿಂದ ಮರಣ ಹೊಂದ್ದಿದ್ದು ಇರುತ್ತದೆ. ಈ
ಘಟನೆ ಅಕಸ್ಮಿಕವಾಗಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ಮಹ್ಮದ
ಸೋಹೆಲ ತಂದೆ ಅಫಜಲ ಶೇಖ ಮು:ಮರಾಠಿ ಗಲ್ಲಿ ಜಾಮೀಯಾ ಮಸೀದ ಹತ್ತಿರ ವಾಡಿ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ವಾಡಿ ಠಾಣೆ ಯು.ಡಿ.ಅರ ನಂಬರ 09/2019 ಕಲಂ 174 ಸಿ.ಅರ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಮಾಡಿ ಲೈಂಗಿಕ ದೌರ್ಜನ್ಯ ವೆಸಗಿ ಜಾತಿ ನಿಂದನೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ದವರ ಮನೆಯ ಹತ್ತಿರ ಕಲಬುರಗಿ ರವರು
ವಿದ್ಯಾನಗರ ಬಡಾವಣೆಯಲ್ಲಿ ಮನೆಯ ಕೆಲಸ ಸಂಬಂಧ ಅಂಗಡಿಗೆ ಮತ್ತು ಇತರೆ ಕಡೆ ನೀರು ತರಲು ಹೋದಾಗ
ಸಾಗರ ತಂದೆ ಧನರಾಜ ತಳವಾರ ಎಂಬುವನು ನನಗೆ ಆಗಾಗ ನೋಡುವದು, ಮಾತಾಡುವದು ಮಾಡುತ್ತಿದ್ದನು. ಒಂದು ಸಲ
ನಾನು ವಿದ್ಯಾನಗರದ ಹಾಲಕಮಿಟಿಯ ಹತ್ತಿರ ನೀರು ತರಲು ಹೊದಾಗ ನನಗೆ ಕೈ ಹಿಡಿದು ನನಗೆ ಪ್ರೀತಿಸು
ಎಂದು ಒತ್ತಾಯಮಾಡಿದಾಗ ನಾನು ಮಾಡುವದಿಲ್ಲ ಎಂದು ಹೇಳಿ ನೀರು ತಗೆದುಕೊಂಡು ಮನೆಗೆ ಬಂದಿರುತ್ತೇನೆ
ಮತ್ತು ನಾನು ಯಾವುದೆ ದೇವರ ಗುಡಿಗೆ ಹೋದಾಗ ನನ್ನ ಬೆನ್ನು ಹತ್ತಿ ಬಂದು ನನಗೆ ಮಾತಾಡಿಸುವದು,
ಪ್ರೀತಿ ಮಾಡು
ಅಂತ ಒತ್ತಾಯ ಮಾಡಿರುತ್ತಾನೆ. ದಿನಾಂಕ 09/05/2019 ರಂದು ನನ್ನ ನೆಂಟಸ್ತನಗಾಗಿ ಒಬ್ಬ ಹುಡುಗ
ನನಗೆ ನೋಡಲು ಬಂದಿದ್ದು, ಈ
ವಿಷಯ ಅವನಿಗೆ ಗೊತ್ತಾಗಿ ನಮ್ಮ ತಂದೆಯವರ ಜೊತೆ ಜಗಳ ಮಾಡಿ ಹೋಗಿದ್ದು ಮತ್ತು ಜೇವರಗಿ ಕ್ರಾಸ
ಹತ್ತಿರ ಟೆಲರಿಂಗ ಅಂಗಡಿಯಲ್ಲಿ ಕೆಲಸ ಕೇಳಲು ಹೋಗಬೆಕೆಂದು ಜೇವರಗಿ ಕ್ರಾಸ ಹತ್ತಿರ ನಿಂತಾಗ
ಸಾಯಂಕಾಲ 7-00 ಗಂಟೆಯ ಸುಮಾರಿಗೆ ಸಾಗರ ತಳಾವರ ಈತನು ದ್ವಿಚಕ್ರವಾಹನದ ಮೇಲೆ ಬಂದು ನನಗೆ ನೀನು
ನನ್ನ ಸಂಗಡ ಬರಬೇಕು ಅಂತ ಕೇಳಿದನು. ನಾನು ಬರುವದಿಲ್ಲ ಎಂದು ಹೇಳಿದಾಗ ಬರದೆ ಇದ್ದರೆ ಆಸಿಡ್
ಹಾಕಿ ಕೊಲೆ ಮಾಡುತ್ತೇನೆ ಅಂತ ಜೀವದ ಭಯಹಾಕಿ ಹೆದರಿಸಿ ಒತ್ತಾಯಪೂರ್ವಕವಾಗಿ ಅವನ ದ್ವಿಚಕ್ರವಾಹನದ
ಮೇಲೆ ಕೂಡಿಸಿಕೊಂಡು ಸಿ.ಐ.ಬಿ ಕಾಲೋನಿಯಲ್ಲಿ
ಬರುವ ಒಂದು ಮನೆಯ ಪಕ್ಕದ ಹತ್ತಿರ ಇರುವ ಗಿಡ ಗಂಟೆಯಲ್ಲಿ ಇಳಿಸಿ ನನ್ನ ಮೇಲೆ ಲೈಂಗಿಕ ಹಲ್ಲೆ
(ಜಬರಿಸಂಭೋಗ) ಮಾಡಲು ಪ್ರಯತ್ನಿಸಿದ್ದು ನಾನು ಬೇಡವೆಂದರು ಬಿಡದೆ ಒತ್ತಾಯಪೂರ್ವಕವಾಗಿ ಒಂದು ಸಲ
ಜಬರಿ ಸಂಭೋಗ ಮಾಡಿದನು. ನಂತರ ಅವನು ಈ ವಿಷಯ ಯಾರಿಗೂ ಹೇಳಿದರೆ ಜೀವದಿಂದ ಖಲಾಸ ಮಾಡುತ್ತೇನೆ ಅಂತ
ಜೀವದ ಬೇದರಿಕೆ ಹಾಕಿರುವದರಿಂದ ನಾನು ಅವನಿಗೆ ಅಂಜಿ ಈ ವಿಷಯ ಮನೆಯಲ್ಲಿ ತಿಳಿಸಿರುವದಿಲ್ಲ.
ದಿನಾಂಕ 15/06/2019 ರಂದು ನಾನು ಅಜ್ಜಿಯ ಮನೆಗೆ ಹೋದಾಗ ನಮ್ಮ ಕಾಕ ನನಗೆ ನಮ್ಮ ಮನೆಗೆ ಬೀಟ್ಟು
ಮನೆಗೆ ಹೋಗುವಾಗ ರಾತ್ರಿ 10-30 ಗಂಟೆಯ ಸುಮಾರಿಗೆ ಸಾಗರ ತಳವಾರ ಈತನು ಬಂದು ನಮ್ಮ ಕಾಕನ ಮೇಲೆ
ಕಲ್ಲುಗಳನ್ನು ಬಿಸಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆ ಗುನ್ನೆ
ನಂ 82/2019 ಕಲಂ 354,
354(ಎ),
354(ಡಿ),
336,
366(ಎ),376,506 ಐ.ಪಿ.ಸಿ ಮತ್ತು ಕಲಂ 3,4 Protection of
children from Sexual offences act 2012 ಮತ್ತು ಕಲಂ 3(1)() ಎಸ್.ಸಿ/ಎಸ್.ಟಿ ಪಿ.ಎ
ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕಳ ಪ್ರಕರಣ :
ಸೇಡಂ ಠಾಣೆ : ದಿನಾಂಕ: 16-06-2019 ರಂದು ಮಧ್ಯಾಹ್ನ ಶ್ರೀಮತಿ ರವರ ಮಗಳಾದ ಕುಮಾರಿ ಇವಳಿಗೆ ನಮ್ಮೂರ ಮಲ್ಲಪ್ಪ ತಂದೆ ಶರಣಪ್ಪ ಇತನು ಹೊಲಕ್ಕೆ ಬರುವಾಗ ದಾರಿಯಲ್ಲಿ ನಂಬಿಸಿ ತನ್ನ ಜೋತೆ ಹಣಾದಿಯಲ್ಲಿ ಕರೆದುಕೊಂಡು ಹೋಗಿ ಇವಳಿಗೆ ಲೈಂಗಿಕ ಕಿರುಕುಳ ನೀಡಿ ತನ್ನ ಲಿಂಗವನ್ನು ತೋರಿಸಿ ನನ್ನ ಮಗಳಿಗೆ ಬಾಯಿಯಲ್ಲಿ ಇಟ್ಟಿಕೊಂಡು ಚೀಪು ಅಂತಾ ಒತ್ತಾಯಿಸಿದ್ದು ಈ ಬಗ್ಗೆ ಮಲ್ಲಪ್ಪ ಇತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ. 99/2019 ಕಲಂ 354(ಎ) ಐ.ಪಿ.ಸಿ &
ಕಲಂ 12 ಪೊಕ್ಸೊ ಕಾಯ್ದೆ-2012 ನೆದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಶೋಕ
ನಗರ ಠಾಣೆ : ದಿನಾಂಕ:18.06.2019 ರಂದು 08:30 ಶ್ರೀ ಅಲ್ತಾಫ್ ತಂದೆ ಇಬ್ರಾಹಿಂ ಶೇಕ್ ಉ: ಎಂ.ಎಸ್.ಆರ್.ಟಿ.ಸಿ ಯಲ್ಲಿ ಕಂಡಕ್ಟರ ಕಂ ಡ್ರೈವರ ಕೆಲಸ ಸ್ವಾರಗೇಟ್ ಡಿಪೋ ಪೂನಾ ಡಿವಿಜನ್ ಸಾ|| ಎಟ್ ಪೊಸ್ಟ ಡೋರ ಲೇವಡಿ ತಾ|| ಬಾರಾಮತಿ ಜಿ|| ಪೂನಾ ರವರು
ಕಳೆದ ನಾಲ್ಕು ವರ್ಷಗಳಿಂದ ಮಹಾರಾಷ್ಟ್ರ ರಾಜ್ಯದ ಸ್ವಾರಗೇಟ್ ಡಿಪೋ ಪೂನಾ ಡಿವಿಜನ್ ದಲ್ಲಿ ಕಂಡಕ್ಟರ ಕೆಲಸ ಮಾಡಿಕೊಂಡು ಇರುತ್ತೇನೆ, ನನ್ನಂತೆ ಸುಭಾಷ ಗಾಯಕವಾಡ ಇವರು ಡ್ರೈವರ ಕೆಲಸ ಮಾಡಿಕೊಂಡು ಇರುತ್ತಾರೆ. ಹೀಗಿದ್ದು ದಿನಾಂಕ:17.06.2019 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಾನು ಮತ್ತು ಸುಭಾಷ ಗಾಯಕವಾಡ ಇಬ್ಬರು ಕೂಡಿಕೊಂಡು ಸ್ವಾರಗೇಟ್ ಡಿಪೋ ಪೂನಾ ಡಿವಿಜನದಿಂದ ಬಸ್ ನಂ. ಎಂ.ಹೆಚ್-14 ಬಿ.ಟಿ-3831 ನೇದ್ದನ್ನು ತೆಗೆದುಕೊಂಡು ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ರಾತ್ರಿ 09:00 ಗಂಟೆಬೆ ಬಂದಿರುತ್ತೇವೆ. ರಾತ್ರಿ 10:30 ಗಂಟೆ ಸುಮಾರಿಗೆ ಇಬ್ಬರು ಕೂಡಿ ಊಟ ಮುಗಿಸಿಕೊಂಡು ಟಿಕೇಟ್ ಮಾರಾಟದಿಂದ ಬಂದ ಒಟ್ಟು ಹಣ ರೂ. 13,245/- ನನ್ನ ಹತ್ತಿರ ಇರುವ ಟಿಕೇಟ್ ಬಾಕ್ಸನಲ್ಲಿ ಇಟ್ಟು ಕೀಲಿ ಹಾಕಿ ಸದರಿ ಬಾಕ್ಸನ್ನು ಬಸ್ಸಿನಲ್ಲಿಟ್ಟು ಇಬ್ಬರು ಬಸ್ಸಿನ ಮೇಲೆ ಮಲಗಿಕೊಂಡಿರುತ್ತೇವೆ. ನಂತರ ದಿನಾಂಕ:18.06.2019 ರಂದು ಬೆಳಿಗ್ಗೆ 05:30 ಗಂಟೆಗೆ ನಾನು ಮತ್ತು ಸುಭಾಷ ಗಾಯಕವಾಡ ಇಬ್ಬರು ಎದ್ದು ಕೆಳಗೆ ಬಂದು ಬಸ್ಸಿನ ಒಳಗೆ ಹೋಗಿ ನೋಡಲಾಗಿ, ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಬಸ್ಸಿನ ಒಳಗೆ ಪ್ರವೇಶಮಾಡಿ ಬಸ್ಸಿನಲ್ಲಿಟ್ಟ ಟಿಕೇಟ ಬಾಕ್ಸ ಬೀಗ ಮುರಿದು ಅದರಲ್ಲಿ ಇಟ್ಟಿದ್ದ ನಗದು ಹಣ 13,245/- ಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾವಿಬ್ಬರು ಗಾಬರಿಯಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಕೂಡ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ನಂತರ ಈ ವಿಷಯವಾಗಿ ನಾವಿಬ್ಬರು ಚರ್ಚೆಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ನಾವು ಬಸ್ ಟಿಕೇಟ್ ಮಾರಾಟ ಮಾಡಿದ ನಗದು ಹಣ 13,245/- ರೂ ಗಳನ್ನು ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ಬಸ್ಸಿನ ಒಳಗೆ ಪ್ರವೇಶಮಾಡಿ ಟಿಕೇಟ್ ಬಾಕ್ಸ ಬೀಗ ಮುರಿದು ಹಣ ಕಳ್ಳತನ ಮಾಡಿದ್ದು ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆ ಗುನ್ನೆ ನಂ. 47/2019 ಕಲಂ 457, 380 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಗಳ ಕಳವು ಪ್ರಕರಣಗಳು :
ಚೌಕ ಠಾಣೆ : ಶ್ರೀ
ಭೀಮಾಶಂಕರ ತಂದೆ ಶಿವಣ್ಣ ಮುಗಳಿ ಸಾ: ಮನೆ ನಂ 189 ಪಲ್ಲವಿ ನಿವಾಸ ಜಾಧವ ಲೇಔಟ ಬಿದ್ದಾಪೂರ ಕಾಲೋನಿ ಕಲಬುರಗಿ ರವರು 2017 ರಲ್ಲಿ ನನ್ನ ಸ್ವಂತ ಕೆಲಸಕ್ಕಾಗಿ ಹೀರೋ ಸ್ಲೆಂಡರ ಪ್ಲಸ್ ಮೊಟಾರ ಸೈಕಲ ನಂ
KA32 EQ0837 ನೇದ್ದನ್ನು ಖರೀದಿ ಮಾಡಿದ್ದು ಆ ಮೋಟಾರ
ಸೈಕಲನ್ನು ನಾನು ಮತ್ತು ನನ್ನ ಮಗ ರವಿಚಂದ್ರ ಇಬ್ಬರೂ
ನಮ್ಮ - ನಮ್ಮ ಕೆಲಸವಿದ್ದಾಗ ಇಲ್ಲಿಯವರೆಗೂ ಉಪಯೋಗ ಮಾಡುತ್ತಾ ಬಂದಿರುತ್ತೇವೆ.
ಹೀಗಿದ್ದು ದಿನಾಂಕಃ 12.06.2019 ರಂದು ನಮ್ಮ ಮನೆಯ ಶಾಂತಿ
ಮಾಡುವ ಕಾರ್ಯಕ್ರಮ ಇದ್ದ ಪ್ರಯುಕ್ತ ನಮ್ಮ ಮಗನಾದ ರವಿಚಂದ್ರ ಇವನು ದಿನಾಂಕಃ
11.06.2019 ರಂದು ನಮ್ಮ ಮೋಟರ ಸೈಕಲ ನಂ KA32 EQ0837 ನೇದ್ದನ್ನು ತೆಗೆದುಕೊಂಡು ತೆಂಗಿನಕಾಯಿಗಳನ್ನು ತರುವ ಪ್ರಯುಕ್ತ ಮಾರ್ಕೇಟಕ್ಕೆ ಬಂದಿದ್ದು
ವಾಹನ ನಿಲ್ಲಿಸಲು ಮಾರ್ಕೇಟದಲ್ಲಿ ಸ್ಥಳ ಸಿಗದೇ ಇದ್ದುದ್ದರಿಂದ ಮೋಟರ ಸೈಕಲನ್ನು ಕಿರಾಣಾ ಬಜಾರದ ತೆಂಗಳಿರವರ
ಅಂಗಡಿಯ ಪಕ್ಕದಲ್ಲಿ ಇರುವ ಸಂದಿಯಲ್ಲಿ ಮೋಟರ ಸೈಕಲನ್ನು ಮದ್ಯಾಹ್ನ 12-45 ಗಂಟೆಗೆ ನಿಲ್ಲಿಸಿ ತೆಂಗಿನಕಾಯಿಗಳನ್ನು ತರಲು ಹೋಗಿ ತೆಂಗಿನಕಾಯಿಗಳನ್ನು ಖರೀಧಿಸಿಕೊಂಡು ಮರಳಿ ಮದ್ಯಾಹ್ನ
13.05 ಗಂಟೆಗೆ ನಮ್ಮ ಮೋಟರ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಅಲ್ಲಿ
ನಮ್ಮ ಮೋಟರ ಸೈಕಲ ಇಲ್ಲದಿರುವುದನ್ನು ಕಂಡು ಗಾಬರಿಗೊಂಡು ನನಗೆ ಫೋನಮಾಡಿ ನಮ್ಮ ಮೋಟರ ಸೈಕಲನ್ನು ಯಾರೋ
ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮೇಲ್ಕಂಡ ಎಲ್ಲ ವಿಷಯವನ್ನು ನನಗೆ ಫೋನ ಮಾಡಿ ತಿಳಿಸಿದ್ದು
ಇರುತ್ತದೆ. ಆಗ ನಾನು ನಮ್ಮಲ್ಲಿ ಕೆಲಸ ಮಾಡುವ ಶ್ರೀ ಪ್ರಕಾಶ ರವರನ್ನು ನನ್ನ
ಸಂಗಡ ಕರೆದುಕೊಂಡು ಮಾರ್ಕೇಟಕ್ಕೆ ಬಂದು ನಮ್ಮ ಮಗ ರವಿಚಂದ್ರನು ಮೋಟರ ಸೈಕಲ ನಿಲ್ಲಿಸಿದ್ದನೆಂದು ಹೇಳುತ್ತಿರುವ
ಸ್ಥಳದಲ್ಲಿ ಮತ್ತು ಅದರ ಸುತ್ತ-ಮುತ್ತಲೂ ಎಲ್ಲ ಕಡೆಗೆ ಹುಡುಕಾಡಲಾಗಿ ಎಲ್ಲಿಯೂ
ನಮ್ಮ ಮೋಟರ ಸೈಕಲ ಕಾಣಲಿಲ್ಲ. ನಂತರ ನಾನು, ನನ್ನಮಗ
ರವಿಚಂದ್ರ ಹಾಗೂ ನಮ್ಮಲ್ಲಿ ಕೆಲಸ ಮಾಡುವ ಶ್ರೀ ಪ್ರಕಾಶ ಮೂವರೂ ಕೂಡಿಕೊಂಡು ಅಂದಿನಿಂದ ಇಲ್ಲಿಯವರೆಗೆ
ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡ ನನ್ನ ಮೋಟರ ಸೈಕಲ ಸಿಕ್ಕಿರುವುದಿಲ್ಲ ನನ್ನ ಕಳುವಾದ ಮೋಟಾರ ಸೈಕಲ
ವಿವರ ಈ ಕೆಳಗಿನಂತಿದೆ.ಮೋಟಾರ ಸೈಕಲ ವಿವರ : HERO SPLENDAR
PLUS ಮೋಟಾರ ಸೈಕಲ ನಂ: KA32EQ0837, ಮೋಟಾರ ಸೈಕಲ ಚೆಸ್ಸಿ
ನಂ : MBLHAR084HHF05212, ಮೋಟಾರ ಸೈಕಲ ಇಂಜನ ನಂ:
HA10AGHHFA4600, ಮೋಟಾರ ಸೈಕಲ ಮಾದರಿ: 2017, ಮೋಟಾರ ಸೈಕಲ ಬಣ್ಣ: SILVER,
ಅಂದಾಜ ಕಿಮ್ಮತ್ತು: 35000/- ರೂಪಾಯಿ. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯ ಗುನ್ನೆ ನಂ
67/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚೌಕ
ಠಾಣೆ : ಶ್ರೀ ಮಲ್ಲಿನಾಥ ತಂದೆ ಕುಪೇಂದ್ರಪ್ಪಾ ಚಿಕ್ಕಳ್ಳಿ, ಸಾ: ಮನೆ ನಂ.04, ಆಶಿರ್ವಾಧ
ಕಲ್ಯಾಣ ಮಂಟಪ ಪಕ್ಕದಲ್ಲಿ ಸಿದ್ರಾಮೇಶ್ವರನಗರ ಕಲಬುರಗಿ ರವರು 2017 ನೇ
ಸಾಲ್ಲಿನಲ್ಲಿ ನನ್ನ ಉಪಯೋಗ ಸಲುವಾಗಿ ಒಂದು ಹೊಂಡಾ ಶೈನ್ ಮೊಟಾರ ಸೈಕಲ ನಂ ಕೆಎ-32 ಇಕ್ಯೂ 0678 ನೇದ್ದು
ಖರೀದಿ ಮಾಡಿದ್ದು ಆ ಮೋಟಾರ ಸೈಕಿಲನ್ನು ನಾನು ಉಪಯೋಗ ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು
ದಿನಾಂಕಃ 28.05.2019 ರಂದು ನಾನು ಮತ್ತು ನನ್ನ ಗೆಳೆಯನಾದ ಶರಣು ಕೊನೆಕ್ ಕೂಡಿಕೊಂಡು ಮದ್ಯಾಹ್ನ 1.45 ಗಂಟೆ
ಸುಮಾರಿಗೆ ನನ್ನ ಮೇಲ್ಕಂಡ ಮೊಟಾರ ಸೈಕಲನ್ನು ಅನರೂಪ ಶಹಾ ಮಕ್ಕಳ ಆಸ್ಪತ್ರೆ ಪಕ್ಕದಲ್ಲಿ
ನಿಲ್ಲಿಸಿ ಚಹಾ ಕುಡಿಯಲು ಹೊಟೇಲಿಗೆ ಹೋಗಿ ಚಹಾ ಕುಡಿದು ಮದ್ಯಾಹ್ನ 2.00 ಗಂಟೆ
ಸುಮಾರಿಗೆ ಮರಳಿ ಬಂದು ನೋಡಿದಾಗ ನಾನು ನಿಲ್ಲಿಸಿರುವ ಹೊಂಡಾ ಶೈನ್ ಮೊಟಾರ ಸೈಕಲ ನಂ ಕೆಎ-32 ಇಕ್ಯೂ 0678 ನೇದ್ದು
ಇರಲ್ಲಿಲ. ನಂತರ ನಾನು ಮತ್ತು ನನ್ನ ಸ್ನೇಹಿತ ಶರಣು ಕೊನೆಕ್ ಕೊಡಿಕೊಂಡು ಎಲ್ಲಾ ಕಡೆ
ಹುಡುಕಾಡಿದ್ದು ಪತ್ತೆಯಾಗಿರುವದಿಲ್ಲ. ನನ್ನ ಕಳುವಾದ ಮೋಟಾರ ಸೈಕಲ ವಿವರ ಈ ಕೆಳಗಿನಂತಿದೆ.ಮೋಟಾರ
ಸೈಕಲ ವಿವರ :- HONDA SHINE, ಮೋಟಾರ ಸೈಕಲ ನಂ :- KA-32
EQ 0678, ಮೋಟಾರ ಸೈಕಲ ಚೆಸ್ಸಿ ನಂ :- ME4JC654FHT053595,
ಮೋಟಾರ ಸೈಕಲ ಇಂಜನ ನಂ :- JC65ET1087580, ಮೋಟಾರ ಸೈಕಲ
ಮಾದರಿ:- 2017, ಮೋಟಾರ ಸೈಕಲ ಬಣ್ಣ :- GREY, ಅಂದಾಜ ಕಿಮ್ಮತ್ತು :- 40,000/- ರೂಪಾಯಿ ಇರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆ ಗುನ್ನೆ ನಂ.68/2019, ಕಲಂ.379 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಲಾಗಿದೆ.
ಚೌಕ ಠಾಣೆ : ಶ್ರೀ ಸಾತಲಿಂಗಪ್ಪ ತಂದೆ ಕಲ್ಯಾಣರಾವ ಪಾಟೀಲ ಸಾ: ಕುಲಾಲಿ ಗ್ರಾಮ
ತಾ: ಅಫಜಲಪೂರ ಹಾಲಿವಾಸ: ಕಡಗಂಚಿ ಮಠದ ಹತ್ತಿರ ಸಿದ್ರಾಮಪ್ಪ ವಾಲಿ ರವರ ಮನೆಯಲ್ಲಿ ಬಾಡಿಗೆ ವಾಸ
ಶೇಖರೋಜಾ ಶಹಾಬಜಾರ ಕಲಬುರಗಿ ರವರ ತಮ್ಮನಾದ ಶಿವುಕುಮಾರ ತಂದೆ ಕಲ್ಯಾಣರಾವ ಪಾಟೀಲ ಇವರು ತಮ್ಮ ಹೆಸರಿನಲ್ಲಿ
ಒಂದು ಹೀರೋ ಸ್ಲೆಂಡರ ಪ್ಲಸ್ ಮೊಟಾರ ಸೈಕಲ ನಂ KA32W1695 ನೇದ್ದನ್ನು ಖರೀದಿ ಮಾಡಿದ್ದು ಇರುತ್ತದೆ ಅವರು ಕುಲಾಲಿ ಗ್ರಾಮದಲ್ಲಿ
ವಾಸವಾಗಿರುವುದರಿಂದ ಅವರ ಹೆಸರಿನಲ್ಲಿ ಇದ್ದ ಮೋಟಾರ ಸೈಕಿಲನ್ನು ಈಗ ನನ್ನ ಕೆಲಸಕ್ಕೆ ಹೋಗಿಬರಲು ನಾನೇ
ಉಪಯೋಸುತ್ತಾ ಇರುತ್ತೇನೆ. ದಿನಾಂಕಃ 30.05.2019 ರಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಉಪಹಾರ ಮಾಡಲೆಂದು ನಮ್ಮ ಮೋಟರ ಸೈಕಲ
ನಂ KA32W1695 ನೇದ್ದನ್ನು ತೆಗೆದುಕೊಂಡು ಮಾರ್ಕೇಟದಲ್ಲಿ
ಇರುವ ಅಂಭಾಭವನ ಹೋಟೇಲಗೆ ಬಂದಿದ್ದು ವಾಹನ ನಿಲ್ಲಿಸಲು ಮಾರ್ಕೇಟದಲ್ಲಿ ಸ್ಥಳ ಸಿಗದೇ ಇದ್ದುದ್ದರಿಂದ
ಮೋಟರ ಸೈಕಲನ್ನು ಅಂಬಾಭವನ ಹೋಟೇಲ ಪಕ್ಕದಲ್ಲಿ ಇರುವ ಬಳಿಸಾವಿತ್ರಿ ಮಂದಿರದ ಪಕ್ಕದಲ್ಲಿ ನಮ್ಮ ಮೋಟರ
ಸೈಕಲನ್ನು ನಿಲ್ಲಿಸಿ
ಹೋಟೇಲದಲ್ಲಿ ಉಪಹಾರ ಮಾಡಿಕೊಂಡು ಮತ್ತು ನನ್ನ ಕೆಲಸವಿದ್ದ ಕಾರಣ
ಬರೋಡಾ ಬ್ಯಾಂಕಿಗೆ ಹೋಗಿ ಮರಳಿ ಮದ್ಯಾಹ್ನ 14.00 ಗಂಟೆಗೆ ನಮ್ಮ ಮೋಟರ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಅಲ್ಲಿ ನಮ್ಮ ಮೋಟರ ಸೈಕಲ
ಇರಲಿಲ್ಲ ಅಲ್ಲಿಯೇ ಅಕ್ಕ-ಪಕ್ಕದಲ್ಲಿ ಹುಡುಕಾಡಲಾಗಿ
ಎಲ್ಲಿಯೂ ಸಹ ಕಾಣಲಿಲ್ಲ
ಆಗ ನಾನು ನಮ್ಮ ಊರಲ್ಲಿ ಇರುವ ನಮ್ಮ ತಮ್ಮನಾದ ಶಿವುಕುಮಾರ ರವರಿಗೆ
ಹಾಗೂ ಇಲ್ಲಿಯೇ ಇರುವ ನನ್ನ ಗೆಳೆಯರಾದ ಶ್ರೀ ಲಕ್ಷ್ಮಿಕಾಂತ ಜಮಾದಾರ ಮತ್ತು ಶ್ರೀ ಸುರೇಶ ಅಕ್ಕಾ ರವರಿಗೆ
ತಿಳಿಸಿದ್ದು ಇರುತ್ತದೆ. ನಂತರ 14.30 ಗಂಟೆಯ ಸುಮಾರಿಗೆ ನನ್ನ ಗೆಳೆಯರಾದ ಶ್ರೀ ಲಕ್ಷ್ಮಿಕಾಂತ
ಜಮಾದಾರ ಮತ್ತು ಶ್ರೀ ಸುರೇಶ ಅಕ್ಕಾ ಇವರು ನಾನಿರುವಲ್ಲಿಗೆ ಬಳಿಸಾವಿತ್ರಿಗುಡಿಯ ಹತ್ತಿರ ಬಂದು ಅಲ್ಲಿ
ನಮ್ಮ ಮೋಟರ ಸೈಕಲ ಇಲ್ಲದಿರುವುದನ್ನು ಕಂಡು ಅವರೂ ಕೂಡಾ ಅಲ್ಲಿಯೇ ಅಕ್ಕ-ಪಕ್ಕದಲ್ಲಿ ಹುಡುಕಾಡಿದ್ದು ಎಲ್ಲಿಯೂ ಸಹ ಸಿಕ್ಕಿರುವುದಿಲ್ಲ
ನಂತರ ನಾವು ಮೂವರೂ ಕೂಡಿಕೊಂಡು ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡ ನಮ್ಮ
ಮೋಟರ ಸೈಕಲ ಸಿಕ್ಕಿರುವುದಿಲ್ಲ ನಮ್ಮ ಮೋಟರ ಸೈಕಲ ಎಲ್ಲಿಯಾದರೂ ಸಿಗಬಹುದು
ಅಂತಾ ನಾನು ಇಲ್ಲಿಯವರೆಗೆ ದೂರು ನೀಡಿರುವುದಿಲ್ಲ ನಮ್ಮ ಮೋಟರ ಸೈಕಲ ಎಲ್ಲಿಯೂ ಇಲ್ಲಿಯವರೆಗೆ ಪತ್ತೆ
ಆಗಿರುವುದಿಲ್ಲಾ ಸದರಿ ಕಳುವಾದ ಮೋಟಾರ ಸೈಕಲ ವಿವರ ಈ ಕೆಳಗಿನಂತಿದೆ.ಮೋಟಾರ ಸೈಕಲ ವಿವರ: HERO
SPLENDAR PLUS, ಮೋಟಾರ ಸೈಕಲ ನಂ: KA32W1695, ಮೋಟಾರ ಸೈಕಲ ಚೆಸ್ಸಿ
ನಂ: MBLHA10EE9HL30584, ಮೋಟಾರ ಸೈಕಲ ಇಂಜನ
ನಂ: HA10EA9HL20040, ಮೋಟಾರ ಸೈಕಲ ಮಾದರಿ: 2009, ಮೋಟಾರ ಸೈಕಲ ಬಣ್ಣ: BLACK, ಅಂದಾಜ ಕಿಮ್ಮತ್ತು : 20000/- ರೂಪಾಯಿ. ಇರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆ ಗುನ್ನೆ ನಂ 69/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.