ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 25-1-2021
ಕಮಲನಗರ ಪೊಲೀಸ್ ಠಾಣೆ ಯು.ಡಿ.ಆರ್.
ಸಂಖ್ಯೆ 01/2021 ಕಲಂ 174 ಸಿಆರ್.ಪಿ.ಸಿ:-
ದಿನಾಂಕ 24/1/2021 ರಂದು
1515 ಗಂಟೆಗೆ
ತೊರಣಾ ಗ್ರಾಮದ ಅಚುತರಾವ ತಂದೆ ವೇಂಕಟರಾವ ಗೌಳಿ ಇವರು ನೇಣು ಹಾಕಿಕೊಂಡು ಮ್ರತ ಪಟ್ಟಿದ್ದಾರೆ
ಅಂತ ಫೊನ ಮುಖಾಂತರ ಮಾಹಿತಿ
ಮೆರೆಗೆ ತೋರಣಾ ಗ್ರಾಮಕ್ಕೆ ಹೋಗಿ ಫಿರ್ಯಾದಿ
ಶ್ರೀಮತಿ ರಾಧಾ
ಗಂಡ ಅಚುತರಾವ ಗೌಳಿ ವಯ// 35 ವರ್ಷ
ಜಾ// ಗೌಳಿ ಉ// ಮನೆ ಕೆಲಸ
ಸಾ// ತೋರಣಾ ರವರು
ನೀಡಿದ ಲಿಖಿತ
ದೂರು ಹಾಜರ
ಪಡಿಸಿದ್ದು ಅದರ
ಸಾರಾಂಶವೆನೆಂದರೆ
ಫೀರ್ಯಾದಿಗೆ ಮೂರು
ಜನ ಮಕ್ಕಳಿರುತ್ತಾರೆ
1] ಅರ್ಚನಾ 11 ವರ್ಷ 2] ಪೂಜಾ 9 ವರ್ಷ 3]ಬಾಲಾಜಿ 6 ವರ್ಷ
ಮಕ್ಕಳಿದ್ದು
ಸರಕಾರಿ ಮನೆ
ಬಂದಿದ್ದು ಮನೆ
ಕಟ್ಟುತಿದ್ದು ಸಂಸಾರ
ನಡೆಸಲು ಹಾಗೂ
ಮನೆ ನಡೆಸುವ ಸಲುವಾಗಿ
ಸಾಲವಾಗಿರುತ್ತದೆ.
ಇದನ್ನು ನಿರ್ವಹಣೆಯಲ್ಲಿ ಅಡಚಣೆಯಾಗಿ
ಇವರ ಗಂಡ ಅಚುತರಾವ ತಂದೆ ವೆಂಕಟರಾವ ರವರು ನೀಲಕಂಠರಾವ ಧಮನಸೂರೆ ರವರ ಬಾರತೊಂಡಿ
ಎಂಬ ಗಿಡಕ್ಕೆ ನೇಣು ಹಾಕಿಕೋಂಡು ಮೃತ
ಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮೇಹಕರ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 06/2021 ಕಲಂ 279, 338, 304 (ಎ) ಐಪಿಸಿ187 ಐ.ಎಮ್.ವಿ ಎಕ್ಟ :-
ದಿನಾಂಕ: 24/01/2021 ರಂದು 1245 ಗಂಟೆಗೆ ಭಾಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಹಾಜರಿದ್ದ ಫಿರ್ಯಾದಿ ಶ್ರೀ ಮಧುಕರ ತಂದೆ ಗೋವಿಂದರಾವ ದೇಶಪಾಂಡೆ ವಯ: 53 ವರ್ಷ ಜಾ: ಬ್ರಾಹ್ಮಣ ಉ: ಬಿ.ಎಸ.ಲ್ ಕಾಖಾನೆಯಲ್ಲಿ ನೌಕರ ಸಾ: ದೇಶಪಾಂಡೆಗಲ್ಲಿ ಭಾಲ್ಕಿ ರವರು ನೀಡಿದ ದೂರಿನ ಸಾರಾಂಶವೆನೆಂದ್ದರೆ ಇವರ ಅಣ್ಣ ಸುಧಾಕರ ರವರಿಗೆ 1) ಸುರೇಖಾ 2) ಯೋಗೇಶ 3) ಸುಷ್ಮಾ ಹೀಗೆ ಮೂರು ಜನ ಮಕ್ಕಳು ಇರುತ್ತಾರೆ. ದಿನಾಂಕ: 22/01/2021 ರಂದು ನನ್ನ ಹಿರಿಯ ಅಣ್ಣನಾದ ದತ್ತಾತ್ರಿ ದೇಶಪಾಂಡೆ ರವರ ಹೆಂಡತಿಯಾದ ಶ್ರೀಮತಿ ಶಾರದಾಬಾಯಿ ರವರು ಮೃತಪಟ್ಟಿರುತ್ತಾರೆ. ಆದ್ದರಿಂದ ದಿನಾಂಕ: 24/01/2021 ರಂದು 1045 ಗಂಟೆಗೆ ಅಣ್ಣ ಸುಧಾಕರ ದೇಶಪಾಂಡೆ ಮತ್ತು ಮಗ ಅಶ್ವಿನಕುಮಾರ ರವರು ಕೂಡಿಕೊಂಡು ಇವರ ಅತ್ತಿಗೆ ಶಾರದಾಬಾಯಿ ರವರ ಅಸ್ತಿ ವಿಸರ್ಜನೆ ಮಾಡಲು ಟಿವಿಎಸ ಎಕ್ಸ ಎಲ್ ಸುಪರ ನಂಬರ ಕೆಎ 39 ಕೆ 1103 ರ ಮೇಲೆ ಹೋಗಿರುತ್ತಾರೆ. ಭಾಲ್ಕಿ ಲಾತೂರ ರಸ್ತೆಯ ಮೇಲೆ ಗೋರ ಚಿಂಚೋಳಿ ಕ್ರಾಸ ಹತ್ತಿರ 1145 ಗಂಟೆಗೆ ಹಿಂದಿನಿಂದ ಅಂದರೆ ಭಾಲ್ಕಿ ಕಡೆಯಿಂದ ಮಹಾರಾಷ್ಟ್ರ ರಾಜ್ಯದ ಸಾರಿಗೆ ಸಂಸ್ಥೆಯ ಬಸ ನಂಬರ ಎಮ್.ಹೆಚ್ 13 ಸಿಯು 9352 ರ ಚಾಲಕ ತನ್ನ ಬಸ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಮಾಡಿರುತ್ತಾನೆ. ಸದರಿ ಚಾಲಕ ಡಿಕ್ಕಿಮಾಡಿ ಬಸ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಸದರಿ ಡಿಕ್ಕಿಯಿಂದ ಅಣ್ಣ ಸುಧಾಕರ ರವರು ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಹಾಗೂ ಮಗನ ಬಲಗಾಲು ಮುರಿದಿರುತ್ತದೆ. ಸದರಿ ಘಟನೆ ವೇಳೆ ಟಿ.ವಿ.ಎಸ ಎಕ್ಸ ಎಲ್ ಸುಧಾಕರ ದೇಶಪಾಂಡೆ ರವರು ಚಲಾಯಿಸುತ್ತಿದ್ದರು. ಆದ್ದರಿಂದ ಡಿಕ್ಕಿ ಮಾಡಿ ಓಡಿ ಹೋದ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಬಸ ನಂಬರ ಎಮ್.ಹೆಚ್ 13 ಸಿಯು 9352 ರ ಚಾಲಕನ ವಿರುದ್ದ ಕ್ರಮ ಜರುಗಸಲು ವಿನಂತಿ ಅಂತ ಕೊಟ್ಟ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 05/2021 ಕಲಂ 457, 380 ಐಪಿಸಿ ಜೊತೆ 34 ಐಪಿಸಿ:-
ದಿನಾಂಕ 24/01/2021
ರಂದು 07-00 ಗಂಟೆಗೆ ಫಿಯರ್ಾದಿ ಶ್ರೀ ಖಾಜಾಮಿಯ್ಯಾ ತಂದೆ
ಇಸ್ಮಾಯಿಲಸಾಬ ಜಾಗಿರದಾರ ವಯಸ್ಸು 30
ವರ್ಷ ಸಾ: ಬೇಲೂರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 22/01/2021
ರಂದು ಸಾಯಂಕಾಲ 6-30 ರಿಂದ ರಾತ್ರಿ 9-00
ಗಂಟೆಯ ಅವಧಿಯಲ್ಲಿ ಮಹ್ಮದ ರಫೀಕ ತಂದೆ ಅಬ್ದುಲ ರಸೀದ ಚಿಂಚೋಳಿ ಹಾಗು ಇನ್ನು ಒಬ್ಬ ವ್ಯಕ್ತಿ
ನಮ್ಮೂರ ಜೈನೋದ್ದಿನ ಬಾಬಾ ದಗರ್ಾದಲ್ಲಿನ ಕೋಣೆಯ ಬಾಗಿಲು ಮುರಿದು ಅಲಮಾರಿಯ ಲಾಕರ ಮುರಿದು
ಅದರಲ್ಲಿದ್ದ ನಗದು ಹಣ 22000/- ರೂಪಾಯಿಗಳು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕೋಣೆಯ ಮುರಿದ ಬಾಗಿಲು ಕೂಡಿಸಿರುತ್ತೇವೆ. ಕಳ್ಳತನವಾದ
ವಿಷಯ ನಮ್ಮ ಸಮಾಜದ ಭಾಂದವರೊಂದಿಗೆ ಚರ್ಚಿಸಿ
ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.