ದಿನಂಪ್ರತಿ ಅಪರಾಧಳ ಮಾಹಿತಿ ದಿನಾಂಕ 04-03-2021
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 13/2021, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಹಿದಾಯತ ಉಲ್ಲಾ ತಂದೆ ಮಾನಿಖಾನ ವಯ: 40 ವರ್ಷ, ಸಾ: ಮನೆ ನಂ. 3-1-52 ಪನ್ಸಾಲ್ ತಾಲೀಮ ಬೀದರ ರವರು ದಿನಾಂಕ 02-03-2021 ರಂದು 1000 ಗಂಟೆಗೆ ತನ್ನ ಮನೆಯಿಂದ ತನ್ನ ಕರ್ತವ್ಯಕ್ಕೆ ಮೆ. ರಾಯಲ್ ಫಾರ್ಮಾ ಬೀದರಗೆ ಹೋಗಿ 1700 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲಿಗೆ ಕೀಲಿ ಹಾಕಿದ್ದು ಇರುತ್ತದೆ, ನಂತರ ಫಿರ್ಯಾದಿಯು ತನ್ನ ಹತ್ತಿರವಿರುವ ಕೀಲಿಯಿಂದ ಕೀಲಿ ತೆಗೆದು ಮನೆಯಲ್ಲಿ ಹೋಗಿ ಊಟ ಮಾಡಿ ತಮ್ಮ ಕರ್ತವ್ಯಕ್ಕೆ ಹೋಗಿ 2030 ಬಂದಾಗ ಸಹ ಮನೆಗೆ ಕೀಲಿ ಇರುತ್ತದೆ. ಆಗ ಫಿರ್ಯಾದಿಯು ತನ್ನ ಹೆಂಡತಿಗೆ ಕರೆ ಮಾಡಲು ಅದು ಸ್ವಿಚ್ಡ ಆಪ್ ಇರುತ್ತದೆ. ನಂತರ ಫಿರ್ಯಾದಿಯು ತನ್ನ ಹೆಂಡತಿಯ ತಮ್ಮ ಹಾಗೂ ಸಂಬಂದಿಕರಿಗೆ ಕರೆ ಮಾಡಲು ಅವಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಮತ್ತು ದಿನಾಂಕ 03-03-2021 ರಂದು ಫಿರ್ಯಾದಿಯು ಹೆಂಡಿತಯ ತಂಗಿಗೆ ಕರೆ ಮಾಡಿದರೂ ಸಹ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ತನ್ನ ಹೆಂಡತಿಯು ಕಾಣೆಯಾಗಿರುತ್ತಾಳೆ ಹಾಗೂ ಮನೆಯಲ್ಲಿದ್ದ 10 ಗ್ರಾಂ ಬಂಗಾರ ಹಾಗೂ 40,000/- ರೂ. ನಗದು ಹಣ ಇರಲಿಲ್ಲ, ಹೆಂಡತಿಯ ವಿವರ 1) ಹೆಸರು: ಮೈಮೋನಾ ಬೇಗಂ, ಗಂಡನ ಹೆಸರು: ಬಾಬು ಮಿಯಾ, ಸಾ: ಹಮಿಲಾಪೂರ, ತಾ & ಜಿ: ಬೀದರ, 2) ಬಣ್ಣ ಬಿಳಿ ಮೈಬಣ್ಣ, ಎತ್ತರ: 5.3, 3) ವಯ 32 ವರ್ಷ, 4) ಮೋಬೈಲ್ ನಂ. 7204903663/8105352685 ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. 279, 337, 338 ಐಪಿಸಿ :-
ದಿನಾಂಕ 03-03-2021 ರಂದು ಫಿರ್ಯಾದಿ ಶಿವಶಂಕರ ತಂದೆ ಚಂದ್ರಕಾಂತ ರಾಜೊಳೆ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಬನಶಂಕರಿ ಗಲ್ಲಿ ಬಸವಕಲ್ಯಾಣ ರವರು ತಮ್ಮ ಗೆಳೆಯರಾದ 1) ಸಿದ್ದು ತಂದೆ ಮಹಾದೇವ ಗೌಡೇ ವಯ: 21 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬನಶಂಕರಿ ಗಲ್ಲಿ ಬಸವಕಲ್ಯಾಣ, 2) ಆಕಾಶ ತಂದೆ ಸಂಗಪ್ಪಾ ಸೋನಾರ ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಬುಧವಾರ ಪೇಟ ಬಸವಕಲ್ಯಾಣ, 3) ಮಹಾದೇವ ತಂದೆ ಶಿವಕಾಂತ ಶಾವಶೆಟ್ಟಿ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಬನಶಂಕರಿ ಗಲ್ಲಿ ಬಸವಕಲ್ಯಾಣ, 4) ಪ್ರಿಯತಂ ತಂದೆ ತಾನಾಜಿ ಬೊಯಿಲೆ ವಯ: 22 ವರ್ಷ, ಜಾತಿ: ಕಬ್ಬಲಿಗ, ಸಾ: ಗೌರಮೆಂಟ ಕಾಲೊನಿ ಲಾತೂರ, ಸದ್ಯ: ಬಸವಕಲ್ಯಾಣ ರವರೆಲ್ಲರೂ ಕೂಡಿಕೊಂಡು ಸಿದ್ದು ಮತ್ತು ಮಹಾದೇವ ಇವರು ಹೊರ ದೇಶಕ್ಕೆ ಹೊಗುವ ಪ್ರಯುಕ್ತ ಇವರಿಗೆ ಹೈದ್ರಾಬಾದಗೆ ಬಿಡಲು ಕಾರ ನಂ ಕೆಎ-32/ಎನ್-3685 ನೇದರಲ್ಲಿ ಕುಳಿತುಕೊಂಡು ಬಸವಕಲ್ಯಾಣದಿಂದ ಬಿಟ್ಟು ಹೈದ್ರಾಬಾದಗೆ ಹೋಗುವಾಗ ಮಾರ್ಗ ಮದ್ಯ ರಾ.ಹೆದ್ದಾರಿ ನಂ. 65 ರ ರೋಡಿನ ಮೇಲೆ ಮರಕುಂದಾ ಗ್ರಾಮದ ಓವರ ಬ್ರಿಡ್ಜನ ಮೇಲೆ ಕಾರ ಚಾಲಕನಾದ ಪ್ರಿಯತಂ ತಂದೆ ತಾನಾಜಿ ಬೊಯಿಲೆ ವಯ: 22 ವರ್ಷ, ಜಾತಿ: ಕಬ್ಬಲಿಗ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಾ.ಹೆದ್ದಾರಿ ನಂ. 65 ರ ರೋಡಿನ ಡಿವಾಡರಗೆ ಡಿಕ್ಕಿ ಮಾಡಿದ್ದರಿಂದ ಕಾರಿನಲ್ಲಿದ್ದ ಫಿರ್ಯಾದಿಯ ಮೂಗಿನ ಹತ್ತಿರ ಕಟ್ಟಾದ ರಕ್ತಗಾಯ ಮತ್ತು ಬಲಭುಜಕ್ಕೆ ಗುಪ್ತಗಾಯ, ಸಿದ್ದು ಇತನಿಗೆ ಬಲಗಾಲಿನ ಮೊಳಕಾಲ ಕೆಳಗೆ ಭಾರಿ ರಕ್ತಗಾಯ ಮತ್ತು ಆಕಾಶ ಇತನಿಗೆ ಎಡಗೈ ರಟ್ಟೆಯ ಮೇಲೆ ಭಾರಿ ಗುಪ್ತಗಾಯ ಮತ್ತು ಮಹಾದೇವ ಇತನಿಗೆ ಮತ್ತು ಕಾರ ಚಾಲಕ ಪ್ರಿಯತಂ ಇತನಿಗೆ ಯಾವುದೆ ಗಾಯಗಳಾಗಿರುವುದಿಲ್ಲ, ನಂತರ ಗಾಯಗೊಂಡವರಗೆ ಪ್ರಿಯತಂ ಮತ್ತು ಮಹಾದೇವ ಇವರು 108 ಅಂಬುಲೆನ್ಸನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.