Police Bhavan Kalaburagi

Police Bhavan Kalaburagi

Saturday, August 22, 2020

BIDAR DISTRICT DAILY CRIME UPDATE 22-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-08-2020

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 175/2020, ಕಲಂ. 279, 337, 338, 304() ಐಪಿಸಿ :-

ಫಿರ್ಯಾದಿ ಅಜಯ ತಂದೆ ರಾಜಕುಮಾರ ಮಡಿವಾಳ ವಯ: 25 ವರ್ಷ, ಜಾತಿ: ಅಗಸ (ಧೋಬಿ), ಸಾ: ಭಾತಂಬ್ರಾ ರವರ ತಂದೆಯಾದ ರಾಜಕುಮಾರ ತಂದೆ ಬಾಬುರಾವ ಮಡಿವಾಳ ವಯ: 54 ವರ್ಷ ರವರು ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಭಾಲ್ಕಿ ಘಟಕದಲ್ಲಿ ಬಸ್ಸ್ಚಾಲಕ ಅಂತಾ ಸೇವೆ ಸಲ್ಲಿಸುತ್ತಿದ್ದರು, ಹೀಗಿರುವಾಗ ದಿನಾಂಕ 21-08-2020 ರಂದು ರವರು ಫಿರ್ಯಾದಿಯವರ ತಂದೆ ಕರ್ತವ್ಯಕ್ಕೆ ಹೋಗುತ್ತೆನೆಂದು ತಾಯಿಗೆ ತಿಳಿಸಿ ಭಾತಂಬ್ರಾ ಗ್ರಾಮದಿಂದ ಭಾಲ್ಕಿಗೆ ಬಂದು ಭಾಲ್ಕಿ ಬಸ್ಸ್ನಿಲ್ದಾಣದ ಎದುರಿನಿಂದ ಬಸ್ಸ್ನಿಲ್ದಾಣದಲ್ಲಿ ಹೋಗಲು ರೋಡ ದಾಟುವಾಗ ಭಾಲ್ಕಿ ಫೂಲೆ ಚೌಕ ಕಡೆಯಿಂದ ಮೋಟಾರ ಸೈಕಲ ನಂ. ಕೆ.-16/.ಎಲ್-7092 ನೇದರ ಚಾಲಕನಾದ ಆರೋಪಿ ವಿರೇಶ ತಂದೆ ಶಿವಪುತ್ರಪ್ಪಾ ಬುಳ್ಳಾ ವಯ: 17 ವರ್ಷ, ಸಾ: ಲೊಖಂಡೆ ಗಲ್ಲಿ ಭಾಲ್ಕಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಡಿಕ್ಕಿ ಮಾಡಿ ಅವನು ಕೂಡಾ ರೋಡಿನ ಮೇಲೆ ಬಿದ್ದಿರುವದರಿಂದ ಕೂಡಲೇ ಅವರಿಬ್ಬರಿಗೂ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ದವಾಖಾನೆಗೆ ತಂದು ದಾಖಲು ಮಾಡಿದಾಗ ವೈದ್ಯರು ಫಿರ್ಯಾದಿಯ ತಂದೆಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ ಹಾಗೂ ಆರೋಪಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.