Police Bhavan Kalaburagi

Police Bhavan Kalaburagi

Monday, March 15, 2021

BIDAR DISTRICT DAILY CRIME UPDATE 15-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-03-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 174 ಸಿ.ಆರ್.ಪಿ.ಸಿ :-

ದಿನಾಂಕ 13-3-2021 ರಂದು 1400 ಗಂಟೆಯಿಂದ 14-03-2021 ರಂದು 0045 ಗಂಟೆಯ ಮದ್ಯದ ಅವಧಿಯಲ್ಲಿ ಬೀದರ ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ವೆಂಕಟೇಶ್ವರ ಲಾಡ್ಜ ಹತ್ತಿರ ಇರುವ ಹಳೆಯ ಖಂದಕದ ಅಂದರೆ ಬಚ್ಚಲು ನೀರು ಹೋಗುವ ನಾಲಿಯಲ್ಲಿ ಎಮ್.ಡಿ ಮೆಹಬೂಬ ತಂದೆ ಎಮ್.ಡಿ ಗಫೂರ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಅಫಜಲಪುರಾ ಹೊರ ಶಾಹಗಂಜ ಬೀದರ ರವರು ಬಿದ್ದು ಮೃತಪಟ್ಟಿರುತ್ತಾನೆಂದು ಫಿರ್ಯಾದಿ ಎಮ್.ಡಿ ಗಫೂರ ತಂದೆ ಎಮ್.ಡಿ ಮೌಲಾನಾ ಸಾಬ ವಯ: 65 ವರ್ಷ, ಜಾತಿ: ಮುಸ್ಲಿಂ, ಸಾ: ಅಫಜಲಪುರಾ ಬೀದರ ಹೊರ ಶಾಹಗಂಜ ಬೀದರ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 09/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 14-03-2021 ರಂದು ಫಿರ್ಯಾದಿ ಬಲರಾಮ ತಂದೆ ಖೀರು ರಾಠೋಡ ವಯ: 31 ವರ್ಷ, ಜಾತಿ: ಲಂಬಾಣಿ, ಸಾ: ಅಲ್ಲಿಪೂರ ತಾಂಡಾ ರವರು ತನ್ನ ಮಗಳಾದ ಮಾಯಾ ವಯ: 7 ವರ್ಷ ಇಬ್ಬರು ಕೂಡಿಕೊಂಡು ಮ್ಮ ಸೇವಾಲಾಲ ಮಂದಿರಕ್ಕೆ ಹೋಗುವ ಸಲುವಾಗಿ ಮ್ಮೂರಿನ ರೂಪ್ಲಾ ರಾಠೋಡ ಇವರ ಮನೆಗೆ ಹೋಗಿ ಹೂ  ಪಡೆದುಕೊಂಡು ಅಗರ ಬತ್ತಿ ಮತ್ತು ಹೂವಿನೊಂದಿಗೆ ಅಲ್ಲಿಪೂರ ತಾಂಡಾ-ಬಸಿಲಾಪೂರ ರೋಡಿನ ಎಡಗಡೆಯಿಂದ ನಡೆದುಕೊಂಡು ಸೇವಾಲಾಲ ದೇವಸ್ಥಾನಕ್ಕೆ ಹೋಗುವಾಗ ಹಿಂದಿನಿಂದ ಅಂದರೆ ಬಸಿರಾಪೂರ ಕಡೆಯಿಂದ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. ಕೆಎ-39/ಎಸ್-1959 ನೇದರ ಚಾಲಕನಾದ ಆರೋಪಿ ವೀರಕುಮಾರ ತಂದೆ ಕಲ್ಲಪ್ಪಾ ತಾಳಮಡಗಿ ಸಾ: ನಿರ್ಣಾ ವಾಡಿ ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿಯವರ ಮಗಳಿಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಮಗಳ ಎಡಗಣ್ಣಿನ ಕೆಳಗೆ ರಕ್ತಗಾಯ, ತುಟಿಗೆ ಗಾಯ, ಎಡ ಮೊಳಕೈ ಹತ್ತಿರ ತರಚಿದ ಗಾಯ, ಎಡಗಾಲು ಮಣಿಕಟ್ಟಿನ ಹತ್ತಿರ ಭಾರಿ ರಕ್ತಗಾಯ ಗುಪ್ತಗಾಯವಾಗಿ ಎಲುಬು ಮುರಿದಿರುತ್ತದೆ, ನಂತರ ಫಿರ್ಯಾದಿಯು ಖಾಸಗಿ ವಾಹನದಲ್ಲಿ ಹಾಕಿಕೊಂಡು  ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರ ಸಲಹೆ ಮೇರೆಗೆ ಅಲ್ಲಿಂದ ಇನ್ನು ಹೆಚ್ಚಿನ ಚಿಕಿತ್ಸೆ ಕುರಿತು ಬೀದರನ ಅಫೆಕ್ಸ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 23/2021, ಕಲಂ. 498(), 326, 504 ಐಪಿಸಿ :-  

ದಿನಾಂಕ 14-03-2021 ರಂದು ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ನರಸಿಂಗ ಸುರ್ಯವಂಶಿ ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹೊಳ ಸಮುದ್ರ, ತಾ: ಕಮಲನಗರ ರವರಿಗೆ 20 ವರ್ಷಗಳಿಂದ ಗಂಡ ನರಸಿಂಗ ತಂದೆ ಶ್ರೀಪತಿ ಸುರ್ಯವಂಶಿ ಇತನು ಅಕ್ಕ ಪಕ್ಕದವರಿಗೆ ಏಕೆ? ಮಾತನಾಡುತ್ತಿ ಹಾಗೂ ಮನೆಗೆ ಬಂದು ಊಟ ಎಲ್ಲಿದೇ? ಊಟ ಎಲ್ಲಿದೇ? ಅಂತ ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 14-03-2021 ರಂದು ಫಿರ್ಯಾದಿಯವರ ಅಕ್ಕ ಜಯಶಿರಾಬಾಯಿ ಇವಳು ಕರೆ ಮಾಡಿದಾಗ ಫಿರ್ಯಾದಿಯು ಅವಳಿಗೆ ತನ್ನ ಗಂಡ ತೊಂದೆರೆ ಕೊಡುತ್ತಿದ್ದಾನೆ, ನಾನು ಸಾಯುತ್ತೆನೆ ಅಂತ ಹೇಳುವಾಗ ಗಂಡ ಫಿರ್ಯಾದಿಗೆ ನೀನು ನನ್ನ ನಿಂದೆ ಹೆಳುತ್ತಿ ಅಂತಾ ಅಂದು ಅಲ್ಲೆ ಇದ್ದ ನೀರು ಕುಡಿಯುವ ಗಾಜಿನ ಗ್ಲಾಸದಿಂದ ತಲೆಯ ಬಲಭಾಗಕ್ಕೆ ಹಣೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ, ಸದರಿ ಜಗಳ ಮನೆಯ ಮುಂದೆ ಆಗಿದ್ದು ಇದನ್ನು ಮಗಳು ಜಯಶಿರಾ ಹಾಗು ಮದನ ತಂದೆ ಜ್ಞಾನೋಬಾ ಸುರ್ಯವಂಶಿ ಇವರು ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.