ಅಪಘಾತ
ಪ್ರಕರಣ :
ಜೇವರಗಿ
ಠಾಣೆ : ಶ್ರೀ ಬಾಗಣ್ಣಾ ತಂದೆ ಹಣಮಂತರಾಯ ಕಾಖಂಡಕಿ ಸಾಃ ನರಿಬೊಳ
ಗ್ರಾಮ ತಾಃ ಜೇವರಗಿ ಇವರ ಮಗನಾದ ನಾಗರಾಜ ಈತನು ಎರಡು ದಿನಗಳ ಹಿಂದೆ ಗೋಗಿ ಗ್ರಾಮದಲ್ಲಿರುವ ನನ್ನ
ಹಿರಿಯ ಮಗಳಾದ ದೇವಕ್ಕೆಮ್ಮ ಇವಳ ಹತ್ತಿರ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದನು.ದಿನಾಂಕ
16/11/2017 ರಂದು ಬೆಳಗ್ಗೆ 10-00 ಘಂಟೆಯ ಸುಮಾರಿಗೆ ನಾನು ನಮ್ಮ ಊರಲ್ಲಿದ್ದಾಗ ನನಗೆ ಪರಿಚಯದ ಮುಡಬೂಳ
ಗ್ರಾಮದ ಮಲ್ಲಿಕಾರ್ಜುನ್ ಈತನು ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿಮ್ಮ ಮಗ ನಾಗರಾಜ ಈತನು
ಮುದಬಾಳ (ಕೆ) ಕ್ರಾಸ ದಾಟಿ ಜೇವರ್ಗಿ – ಶಹಾಪೂರ ರೋಡಿನ ಪಕ್ಕದಲ್ಲಿ ಸತ್ತು ಬಿದ್ದಿರುತ್ತಾನೆ ಎಂದು
ತಿಳಿಸಿದನು. ನಂತರ ನಾನು ಗಾಬರಿಬಿದ್ದು ವಿಷಯ ಗೊತ್ತಾದ ಕೂಡಲೆ ನಾನು ಮತ್ತು ನಮ್ಮೂರ ನಿಂಗಣ್ಣ ತಂದೆ
ಅಂತಪ್ಪಾ ರಾವೂರ, ಬಸವರಾಜ ತಂದೆ ಬೀಮರಾಯ ಮುದ್ದಾ, ಇವರು ಕೂಡಿ ಕೊಂಡು ನನ್ನ ಮಗ ಸತ್ತು ಬಿದ್ದ ಸ್ಥಳಕ್ಕೆ
ಹೋಗಿ ನೋಡಲು ಜೇವರ್ಗಿ ಶಹಾಪೂರ ರೋಡ ಗುರಣ್ಣಗೌಡ ಮುದುಬಾಳ (ಕೆ) ಇವರ ಹೊಲದ ಹತ್ತಿರ ರೋಡಿನ ಪಕ್ಕದಲ್ಲಿ
ನನ್ನ ಮಗ ನಾಗರಾಜ ಈತನು ಸತ್ತು ಬಿದ್ದಿದ್ದನು. ನಾನು ನೋಡಲಾಗಿ ಅವನ ಮೂಗಿನಿಂದ ರಕ್ತಸ್ರಾವವಾಗಿದ್ದು
ಬಲಗಾಲಿನ ಮೊಳಕಾಲಿನ ಹತ್ತಿರ ಮುರಿದ ಭಾರಿ ರಕ್ತ ಘಾಯವಾಗಿದ್ದು, ಮತ್ತು ಬಲಗಾಲಿನ ತೊಡೆಗೆ ರಕ್ತ ಘಾಯವಾಗಿದ್ದು
ಇದೆ. ಅಲ್ಲಿ ರೋಡಿನ ತಗ್ಗಿನಲ್ಲಿ ಒಂದು ಕಪ್ಪು ಬಣ್ಣದ ಪ್ಯಾಶನ್ ಮೋಟಾರ ಸೈಕಲ್ ನಂಬರ ಕೆ.ಎ-37-ಜೆ-4571
ನೇದ್ದು ಬಿದ್ದಿದ್ದು, ಇದನ್ನು ನೋಡಿದರೆ ನನ್ನ ಮಗ ನಾಗರಾಜ ಈತನು ದಿನಾಂಕ; 15/11/2017 ರಂದು ರಾತ್ರಿ
11-00 ಘಂಟೆಯಿಂದ ದಿನಾಂಕ; 16/11/2017 ರಂದು ಬೆಳಗಿನ ಜಾವ 06-00 ಘಂಟೆಯ ಮದ್ಯದ ಅವಧಿಯಲ್ಲಿ ಶಹಾಪೂರ
ಕಡೆಯಿಂದ ಮೇಲೆ ನಮೂದಿಸಿದ ಮೋಟಾರ ಸೈಕಲ್ ಮೇಲೆ ಕುಳಿತುಕೊಂಡು ಜೇವರ್ಗಿ ಕಡೆಗೆ ಬರುವಾಗ ಯಾವುದೋ
ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ
ಮಗ ಕುಳಿತು ಬರುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮಗನಿಗೆ ಭಾರಿ ರಕ್ತಘಾಯವಾಗಿ
ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ
ಕಿರುಕಳ ಪ್ರಕರಣ :
ಫರತಾಬಾದ
ಠಾಣೆ : ಶ್ರೀಮತಿ
ಸಾವಿತ್ರಿ ಗಂಡ ಸಿದ್ದು ಉದನೂರ ವ:20 ವರ್ಷ ಜಾ:ಲಿಂಗಾಯತ ಉ:ಮನೆಗೆಲಸ
ಮು:ಹಡಗಿಲ ಹಾರುತಿ ತಾ:ಜಿ: ಕಲಬುರಗಿ ರವರು ಕೊಟ್ಟ ಲಿಖಿತ ದೂರಿನ ಸಾರಾಂ ಶ ವೆನೆಂದರೆ. ನನ್ನ
ತವರೂ ಮನೆ ಹತಗುಂದಾ ಗ್ರಾಮವಿದ್ದು, ನಮ್ಮ ತಂದೆ ಬಾಬು ಸಲಗರ
ತಾಯಿ ಪುತಳಾಬಾಯಿ ಇವರು ಗಳು ನನಗೆ ದಿನಾಂಕ 15/03/2016
ರಂದು ಹಡಗಿಲ ಹಾರುತಿ ಗ್ರಾಮದ ಸಿದ್ದು ತಂದೆ ಧರ್ಮಣ್ಣಾ ಉದನೂರ ಇವರೊಂದಿಗೆ ಧಾರ್ಮಿಕ ಪದ್ಧತಿಯಂತೆ ಹಡಗಿಲ ಹಾರುತಿ ಗ್ರಾಮದ ಬಸವಣ್ಣ ದೇವರ ಗುಡಿಯಲ್ಲಿ
ಲಗ್ನ ಮಾಡಿಕೊಟ್ಟಿರುತ್ತಾರೆ. ಮದುವೆಯ ಕಾಲಕ್ಕೆ ನನ್ನ ತಂದೆ ವರೋಪಚಾರವಾಗಿ ನನ್ನ ಗಂಡನಿಗೆ ಮೂರು
ತೋಲೆ ಬಂಗಾರ,
51 ಸಾವಿರ ರೂಪಾಯಿ ಹಣ ಕೊಟ್ಟು ಮದುವೆ
ಮಾಡಿರುತ್ತಾರೆ. ಲಗ್ನವಾದ ಬಳಿಕ ಮೂರು ತಿಂಗಳು ನನ್ನ ಗಂಡ ಮಾವ ಧರ್ಮಣ್ಣಾ, ಅತ್ತೆ ಬಸಮ್ಮ ಇವರುಗಳು ನನಗೆ ಸರಿಯಾಗಿ ಇಟ್ಟುಕೊಂಡು ಬರಬರುತ್ತಾ ನನ್ನೊಂದಿಗೆ
ನಿನಗೆ ಅಡುಗೆ ಸರಿಯಾಗಿ ಬರುವುದಿಲ್ಲಾ ನೀನು ಅವರ ಇವರಿಗೆ ನೋಡುತ್ತಾ ಸೂಳೇಗಾರಿಕೆ ಮಾಡಿ
ಬಂದಿದ್ದಿ ರಂಡಿ ಅಂತಾ ಬೈಯುವದು ಮಾಡುತ್ತಿರುವದರಿಂದ ಈ ವಿಷಯ ನಮ್ಮ ತಂದೆ ತಾಯಿಗೆ ತವರೂ
ಮನೆಯವರಿಗೆ ತಿಳಿಸಿರುತ್ತೇನೆ. ನನ್ನ ತವರೂ ಮನೆಯವರು ಬಡವರಾಗಿದ್ದು, ತವರೂ ಮನೆಯಲ್ಲಿ ಇರುವುದು ಸರಿಯಲ್ಲಾ ಎಷ್ಟೆ ಕಷ್ಟ ಕೊಟ್ಟರು ಗಂಡನ ಮನೆಯಲ್ಲಿ
ಬಾಳಬೇಕು ಅಂತಾ ನಾನು ನಿರ್ಧಾರ ಮಾಡಿಕೊಂಡಿರುತ್ತೇನೆ. ಈ ವಿಷಯದಲ್ಲಿ ನನ್ನ ತಂದೆ ತಾಯಿ ಗಂಡನ
ಮನೆಗೆ ಬಂದು ಗಂಡ,
ಅತ್ತೆ ಮಾವ ಇವರಿಗೆ ಸರಿಯಾಗಿ ಇಟ್ಟುಕೊಳ್ಳು ವಂತೆ
ಬುದ್ದಿಮಾತು ಹೇಳಿ ಹೋಗಿರುತ್ತಾರೆ. ಕೆಲವು ದಿವಸ
ಸರಿಯಾಗಿ ಇಟ್ಟುಕೊಂಡು ನಂತರ ಈ ಮೇಲಿನ ಮೂರು ಜನರು ನನ್ನ ಶೀಲವನ್ನು ಶಂಕಿಸಿ ನೀನು
ಅವರಿವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅಂತಾ ಹೊಡೆ ಬಡೆ ಮಾಡುತ್ತಿದ್ದ ರಿಂದ ನಮ್ಮ ತಂದೆ
ತಾಯಿಗೆ ತಿಳಿಸಿದಾಗ ನನ್ನ ತವರೂ ಮನೆಯ ಕಡೆಯಿಂದ
ಪಂಚಾಯತಿ ಸಲುವಾಗಿ ನಮ್ಮ ತಂದೆ,
ತಾಯಿ ಹಾಗು ಶಾಂತಯ್ಯ ಗುತ್ತೇದಾರ, ಸುಭಾಷ ಕುಂಬಾರ,
ನಮ್ಮ ಕಾಕ ಶಾಂತಪ್ಪಾ ಭತ್ತನಾಳ, ಚಿಕ್ಕಮ್ಮ ಸಿದ್ದಮ್ಮ ಬತ್ತನಾಳ ಇವರು ಗಳ ಬಂದು ನನ್ನದೇನಾದರು ತಪ್ಪು ಇದ್ದರೆ
ಹೈದ್ರಿ ಖಾಜಾ ದರ್ಗಾಕ್ಕೆ ಹೋಗಿ ಪ್ರಮಾಣ ಮಾಡು ತ್ತೇನೆ ಇಲ್ಲದಿದ್ದರೇ ನೀವು ಮಾಡಿರಿ ಅಂತಾ
ಹೇಳಿದಾಗ ನಡೆಯಿರಿ ಎಂದು ಅಲ್ಲಿಗೆ ನಾನು ಹಾಗೂ ನನ್ನ ತಂದೆ ತಾಯಿಯೊಂದಿಗೆ ಬಂದವರು ನನ್ನ ಗಂಡ, ಅತ್ತೆ,
ಮಾವ ರವರೊಂದಿಗೆ ಹೋಗಿ ಅಲ್ಲಿ ನನ್ನದು ಯಾವುದೇ
ದೋಷ ಇರುವುದಿಲ್ಲಾ ಅಂತಾ ಪ್ರಮಾಣ ಮಾಡಿ ದಾಗ 15
ದಿವಸ ಸರಿ ಇಟ್ಟುಕೊಂಡು ಮತ್ತೆ ನನಗೆ ನಮ್ಮ ಮಾವ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇನೆ
ಬೇಕಾದಷ್ಟು ವರದಕ್ಷಿಣೆ ಕೊಡುತ್ತಾರೆ ನೀನು ಹೋಗು ರಂಡಿ ಅಂತಾ ಬೈದು ಇಲ್ಲಿದ್ದರಿ ಜೀವ
ಹೊಡೆಯುತ್ತೇವೆ ಅಂತಾ ನನ್ನ ಅಂತಾ ಭಯ ಹಾಕುತ್ತಿದ್ದು, ನಿಮ್ಮ
ತಂದೆ ಹೊಲ ಮಾರಿದ್ದಾರೆ ಎರಡು ಲಕ್ಷ ರೂಪಾಯಿ 10
ತೋಲಿ ಬಂಗಾರ ನನಗೆ ಕೊಟ್ಟರೇ ಸರಿ, ಇಲ್ಲದಿದ್ದರೇ ನಿನಗೆ
ಡೈವೂರ್ಸ ಮಾಡುತ್ತೇನೆ ಅಂತಾ ಕಿರುಕುಳ ನೀಡುತ್ತಿದ್ದಾಗ ನಮ್ಮ ತಂದೆಯವರು ಈವಾಗಲೇ ಬೇಕಾದಷ್ಟು ಖರ್ಚು
ಮಾಡಿದ್ದಾರೆ ಅವರು ಎಲ್ಲಿಂದ ತರಬೇಕು ಅಂತಾ ಅಂದಿದ್ದಕ್ಕೆ ಮೂರು ಜನರು ನನಗೆ ಹೊಡೆ ಬಡೆ ಮಾಡಿ, ದಿನಾಂಕ 15/10/2017 ರಂದು ರಾತ್ರಿ ನನ್ನ ಗಂಡನು ನನ್ನ
ಎದೆಯ ಮೇಲೆ ಕುಳಿತು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ನಂತರ ನಾನು
ದೀಪಾಳಿ ಹಬ್ಬಕ್ಕೆ ತವರೂ ಮನೆಗೆ ಬಂದಾಗ ಈ ವಿಷಯ ನನ್ನ ತಂದೆ ತಾಯಿಗೆ ಹಬ್ಬಕ್ಕೆ ಬಂದಾಗ
ತಿಳಿಸಿರುತ್ತೇನೆ. ಕಾರಣ ನನ್ನ ಗಂಡ, ಅತ್ತೆ, ಮಾವ ರವರುಗಳು ವರದಕ್ಷಿಣೆ ತರುವಂತೆ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕ
ಕಿರುಕುಳ ನೀಡಿ ಜೀವ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ನೆಲೋಗಿ
ಠಾಣೆ : ಶ್ರೀ ಶಿವಶರಣ ಹಡಪದ ಇವರಿಗು ನಮ್ಮ ಅಣ್ಣತಮ್ಮಕಿಯ ಶ್ರೀಮಂತ ಹಡಪದ ಇವರಿಗೂ ಬಾಂದಾರಿಯ
ಬಗ್ಗೆ ನೀರಿನ ಬಗ್ಗೆ ತಕರಾರು ಇದ್ದು ಆಗಾಗ ನಮ್ಮ ಸಂಗಡ ಜಗಳ ಮಾಡುತ್ತಾ ಬಂದಿರುತ್ತಾರೆ. ನಿನ್ನೆ
ದಿನಾ ನಮ್ಮ ಭಾವಿಯ ನೀರು ಬೇರೆಯವರಿಗೆ ಕೋಟ್ಟಿದ್ದು ಇಂದು ದಿನಾಂಕ:16/11/2017 ರಂದು 8:00
ಎ.ಎಂಕ್ಕೆ ನಾನು ನನ್ನ ಮನೆಯ ಮುಂದೆ ಕುಳಿತ್ತಿದ್ದೆ ಆಗ ಶ್ರೀಮಂತನು ನಮ್ಮ ಮನೆಯ ಹತ್ತಿರ ಬಂದಾಗ
ನೀನು ಭಾವಿ ನೀರು ಬೇರೆಯವರಿಗೆ ಕೊಟ್ಟಿದ್ದಿ ನಾವು ಏನು ಮಾಡಬೇಕು ಅಂತ ಅಂದೇ ಆಗ ಅವನು ನನ್ನ
ಪಾಲಿನ ನೀರು ಯಾರಿಗಾದರೂ ಕೋಡುತ್ತೇನೆ ನೀನು ಯಾವ ಕೇಳವಾ ಅಂದು ತನ್ನ ಕಾಲಲ್ಲಿಯ ಚಪ್ಪಲ
ತಗೆದುಕೊಂಡು ನನ್ನ ಹಣೆಯ ಮೇಲೆ ಹೋಡೆದನು ಆಗ ಭಾಗಮ್ಮಾ ಗಂಡ ಶ್ರೀಮಂತ, ಶಿವಯೋಗಪ್ಪ ತಂದೆ
ದತ್ತಪ್ಪ, ಈರಪ್ಪ ತಂದೆ ದತ್ತಪ್ಪ, ಭಾಗಪ್ಪ ತಂದೆ ದತ್ತಪ್ಪ ಇವರು ಕೈಯಲ್ಲಿ ಬಡಿಗೆ ಹಿಡಿದುಕೊಂಡು
ಬಂದು ಭೋಸಡಿ ಮಗನೆ ನಮ್ಮ ನೀರು ಕೇಳವಾ ಯಾರು ಅಂದವರೇ ಶಿವಯೋಗಪ್ಪನು ತನ್ನ ಕೈಯಲ್ಲಿದ್ದ
ಬಡಿಗೆಯಿಂದ ಬೇನ್ನ ಮೇಲೆ ಹೋಡೆದನು ಆಗ ನನ್ನ ಹೆಂಡತಿ ಸಾಂಬಾಯಿ ಇವಳು ಜಗಳ ಬಿಡಿಸಲು ಬಂದಳು ಆಗ
ಅವಳಿಗೆ ಭಾಗಮ್ಮಾ ಇವಳು ಕೈಮುಷ್ಠಿ ಮಾಡಿ ಕೈಯಿಂದ ಬಾಯಿ ಮೇಲೆ ಹೋಡೆದಳು ಆಗ ಕೆಳಗಿನ ಎರಡು
ಹಲ್ಲುಗಳು ಮುರಿದು ಬಿದ್ದವು ಆಗ ಶಿವಯೋಗಪ್ಪ ಈರಪ್ಪ ಭಾಗಪ್ಪ ಇವರು ನೀಮಗೆ ಇಷ್ಟಕ್ಕೆ
ಬಿಡುವದಿಲ್ಲಾ ಇನ್ನೋಮ್ಮೆ ಹೋಲಕ್ಕೆ ಬಂದರೆ ನಿಮಗೆ ಖಲಾಸ ಮಾಡಿ ಬಿಡುತ್ತೇವೆ ಅಂತ ಜೀವ ಬೇದರಿಕೆ
ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು
ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀ ಜೈನೊದಿನ್ ಪಟೇಲ ತಂದೆ ಮೀರಾ ಪಟೇಲ ಸಾ: ಅಂಬೆವಾಡ ತಾ: ಆಳಂದ ಜಿ: ಕಲಬುರಗಿ ಹಾ:ವ:
ಮದೀನಾ ಕಾಲೋನಿ ಶಹಾ ಜೀಲಾನ ದರ್ಗಾ ಹತ್ತಿರ ಕಲಬುರಗಿ ಇವರ ಮಗನಾದ ದಾದಾ ಪಟೇಲ ಇತನು ಕಲಬುರಗಿ
ನಗರದ ಮದೀನಾ ಕಾಲೋನಿ ಶಹಾ ಜೀಲಾನ ದರ್ಗಾ ಹತ್ತಿರ ಸ್ವಂತ ಮನೆ ಮಾಡಿಕೊಂಡು ಉಳಿದಿದ್ದು. ನನ್ನ ಮಗ
ದಾದಾ ಪಟೇಲ ಇತನು ಸೌದಿ ದೇಶಕ್ಕೆ ಹೋಗಿದ್ದು ಅವನ ಹೆಂಡತಿಯಾದ ಸಕೀನಾ ಪಟೇಲ ಇವಳು ರಾಜಕಾರಣದಲ್ಲಿ
ಒಡಾಡುತ್ತಾ ಬಂದಿದ್ದು ಇರುತ್ತದೆ. ನಾನು ಆಗಾ ನನ್ನ ಸೊಸೆಯ ಹತ್ತಿರ ಮದೀನಾ ಕಾಲೋನಿಯಲ್ಲಿ
ಉಳಿದುಕೊಳ್ಳುತ್ತಾ ಬಂದಿದ್ದು ಇರುತ್ತದೆ. ಅದರಂತೆ ಈಗ ಕೆಲವು ದಿವಸಗಳ ಹಿಂದೆ ಸಕೀನಾ ಪಟೇಲ ಇವಳ
ಮಗಳಾದ ಸುಮೇರಾ ಇವಳಿಗೆ ಆರಾಮ ಇಲ್ಲದಕ್ಕೆ ಅವಳಿಗೆ ಉಪಚಾರ ಕೊಡಿಸಿದ್ದು ಅವಳನ್ನು ನೋಡಿಕೊಳ್ಳು
ನಾನು ಕಲಬುರಗಿಗೆ ಬಂದಿದ್ದು ಇರುತ್ತದೆ. ಈಗ ಸುಮಾರು ಒಂದು ತಿಂಗಳ ಹಿಂದ ಸುಮೇರಾ ಇವಳಿಗೆ ಆರಾಮ
ಇಲ್ಲದಕ್ಕೆ ಸಕೀನಾ ಇವಳು ಸುಮೇರಾ ಇವಳನ್ನು ಕರೆದುಕೊಂಡು ಉಪಚಾರ ಕುರಿತು ಬೆಂಗಳೂರಕ್ಕೆ
ಕರೆದುಕೊಂಡು ಹೋಗಿ ಉಪಚಾರ ಕುರಿತು ಆಸ್ಪತ್ರೇಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಈಗ 15-20 ದಿವಸಗಳ ಹಿಂದೆ ನಮ್ಮ ಗ್ರಾಮದಲ್ಲಿ ಕೆಲಸ ಇದ್ದ ಪ್ರಯುಕ್ತ ಕಲಬುರಗಿಯಲ್ಲಿದ್ದ
ಸಕೀನಾಳ ಮನೆಗೆ ಕೀಲಿ ಹಾಕಿಕೊಂಡು ನಾನು ಕಲಬುರಗಿಯಿಂದ ಅಂಬೇವಾಡಕ್ಕೆ ಹೋಗಿದ್ದು ನಂತರ ಬಾಂಬೆಯಲ್ಲಿ
ಇರುವ ನಮ್ಮ ಸಂಬಂದಿಕರಿಗೆ ಆರಾಮ ಇಲ್ಲ ಅಂತ ಗೊತ್ತಾಗಿ ನಾನು ಬಾಂಬೆಕ್ಕೆ ಹೋಗಿದ್ದು ಇರುತ್ತದೆ.
ಮೊನ್ನೆ ದಿನಾಂಕ 14.11.2017 ರಂದು ನನ್ನ ಸೊಸೆ ಸಕೀನಾ ಇವಳು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ
ಕಲಬುರಗಿಯಲ್ಲಿರು ತನ್ನ ಮನೆ ಕಳ್ಳತನವಾಗಿದೆ ಅಂತ ಮನೆ ಪಕ್ಕದವನು ಪೋನ ಮಾಡಿ ತಿಳಿಸಿದ್ದಾರೆ
ಕಲಬುರಗಿಗೆ ಹೋಗಿ ಮನೆ ನೋಡಲು ತಿಳಿಸಿದ್ದು. ಮತ್ತು ಮನೆಯಲ್ಲಿ ಬಂಗಾರ ಮತ್ತು ಹಣ ಇಟ್ಟಿದ್ದು
ಕಳ್ಳತನವಾಗಿದೆ ಹೇಗೆ ಎಂದು ನೋಡಲು ಹೇಳಿದ್ದು ಅದರಂತೆ ನಾನು ಬಾಂಬೆಯಿಂದ ನಿನ್ನೆ ದಿನಾಂಕ 15.11.2017 ರಂದು ರಾತ್ರಿ ಕಲಬುರಗಿಗೆ ಬಂದು ಮನೆಗೆ ಹೋಗಿ ನೋಡಲು ಮನೆಯ ಬಾಗಿಲು ತೆರೆದಿದ್ದು, ಮನೆಯಲ್ಲಿ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು. ಮನೆಯಲ್ಲಿ ಯಾವುದೆ
ಬಂಗಾರ ಮತ್ತು ಹಣ ಇದ್ದಿರುವದಿಲ್ಲ ನಂತರ ನಾನು ಸಕೀನಾ ಪಟೇಲ ಇವಳಿಗೆ ಪೋನ ಮಾಡಿದ್ದು ಪೋನನಲ್ಲಿ
ಯಾವುದೆ ಮಾಹಿತಿ ಸರಿಯಾಗಿ ತಿಳಿಸಿರುವದಿಲ್ಲ. ಸದರಿಯವಳ ಮನೆಯಲ್ಲಿದ್ದ ಬಂಗಾರ ಮತ್ತು ಹಣ ಕಳ್ಳತನ
ವಾಗಿದ್ದು ಇರುತ್ತದೆ. ಎಷ್ಟು ಬಂಗಾರ ಮತ್ತು ಹಣ ಕಳ್ಳತನವಾಗಿದೆ ಎನ್ನುವ ಬಗ್ಗೆ ಸಧ್ಯ ನನಗೆ
ಗೊತ್ತಾಗುತ್ತಿಲ್ಲ. ಸುಮಾರು 20 ದಿವಸಗಳಿಂದ ನಿನ್ನೆ ದಿನಾಂಕ 14.11.2017 ರ
ಮಧ್ಯದಲ್ಲಿ ಯಾರೊ ಕಳ್ಳರು ನನ್ನ ಸೊಸೆ ಸಕೀನಾ ಪಟೇಲ ಇವರ ಮನೆಗೆ ಪ್ರವೇಶ ಮಾಡಿ ಅವಳ
ಮನೆಯಲ್ಲಿದ್ದ ಹಣ ಮತ್ತು ಬಂಗಾರ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀ ದಯಾನಂದ ತಂದೆ
ದೇವಿಂದ್ರಪ್ಪ ಗೌಳಿ ಸಾ: ಸಮತಾ ಕಾಲೊನಿ ಕಲಬುರಗಿ ಇವರು ದಿನಾಂಕ 13.11.2017 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ನನ್ನ ಕೆಲಸ ಸಂಬಂದ ಖಾದ್ರಿ ಚೌಕ ಹತ್ತಿರ ಹೋಗಿದ್ದು
ಅಲ್ಲಿ ನನ್ನ ಗೆಳೆಯನಾದ ಉಮೇಶ ಮತ್ತು ಚನ್ನಮಲ್ಲಪ್ಪ ಯಂಪಳ್ಳಿ ಇವರು ಇದ್ದು ಅವರ ಸಂಗಡ ಮಾತನಾಡಿ
ನಂತರು ನಾನು ಅವರಿಗೆ ಜೆ. ಆರ್ ನಗರದಲ್ಲಿ ಬಿಟ್ಟು ಬರುವ ಸಂಬಂದ ನಾನು ನನ್ನ ಮೋಟಾರ ಸೈಕಲ ಮೇಲೆ
ಇಬ್ಬರಿಗು ಕೂಡಿಸೊಂಡು ರಾತ್ರಿ 11:00 ಗಂಟೆಯ ಸುಮಾರಿಗೆ
ಜೆ.ಆರ್. ನಗರದ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ನನ್ನ ಮೊಟಾರ ಸೈಕಲನ್ನು ಹನುಮಾನ ಗುಡಿಯ
ಹತ್ತಿರ ನಿಲ್ಲಿಸಿ ನಾನು ಅವರು ಕೂಡಿಕೊಂಡು ಅವರ ಮನೆಗೆ ಹೋಗಿ ಸ್ವಲ್ಪ ಸಮಯದ ನಂತರ ಅಂದರೆ
ರಾತ್ರಿ 11:30 ಗಂಟೆಯ ಸುಮಾರಿಗೆ ಹನುಮಾನ ದೇವರ ಗುಡಿಯ ಹತ್ತಿರ ಬಂದು ನೋಡಲು ನನ್ನ ಮೋಟಾರ ಸೈಕಲ
ಇರಲಿಲ್ಲ ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಸದರಿ ನನ್ನ
ಮೋಟಾರ ಸೈಕಲ ಟ್ಯಾಂಕಿನ ಕವರದಲ್ಲಿ ನನ್ನ ಶಾಮಸಂಗ ಮೊಬೈಲ ಸಿಮ್ ನಂ 9880823653 ನೇದ್ದು ಮತ್ತು ನಗದು ಹಣ 3
ಸಾವೀರ ರೂಪಾಯಿ ಇಟ್ಟಿದ್ದು ಯಾರೊ ಕಳ್ಳರು ನನ್ನ ಮೋಟಾರ ಸೈಕಲ ನಂ ಕೆಎ 32 ಎಸ್.0370 ನೇದ್ದು ಅ:ಕಿ: 25,000/-ರೂ
ಮತ್ತು ಶಾಮಸಂಗ ಮೊಬೈಲ ಅ:ಕಿ: 500/-
ರೂ ಮತ್ತು 3
ಸಾವೀರ ರೂಪಾಯಿ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಫರತಾಬಾದ
ಠಾಣೆ : ಶ್ರೀಮತಿ ಜಗದೇವಿ ಗಂಡ ನಾಗೇಂದ್ರಪ್ಪಾ
ಸಂಕುನ ಸಾ: ಮೇಳಕುಂದಾ (ಬಿ) ತಾ: ಜಿ: ಕಲಬುರಗಿ ಇವರ ಮಗಳಾದ ಶಶಿಕಲಾ ಇವಳಿಗೆ 5 ವರ್ಷದ ಹಿಂದೆ ಮಾಡ್ಯಾಳ ಗ್ರಾಮದ ಜಗನ್ನಾಥ ತಂದೆ ಪಂಚಪ್ಪ
ಮುಂದಿನಕೇರಿ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇದೆ. ಇನ್ನೂ ಮಕ್ಕಳಾಗಿರುವುದಿಲ್ಲಾ.
ಹೀಗಿದ್ದು ದಿನಾಂಕ 24/10/2017 ರಂದು ನಮ್ಮೂರಾದ ಮೇಳ ಕುಂದಾ(ಬಿ) ಗ್ರಾಮದ ಸಿದ್ದೇಶ್ವರ
ದೀಪೋತ್ಸ್ ವ ಕಾರ್ಯಕ್ರಮ ಹಾಗೂ ಜಾತ್ರೆ ಪ್ರಯುಕ್ತ ಮಗಳಾದ ಶಶಿಕಲಾ ಇವಳಿಗೆ ನಾನು
ಮಾಡ್ಯಾಳದಿಂದ ನಮ್ಮೂರಿಗೆ ಕರೆದುಕೊಂಡು ಬಂದಿರುತ್ತೇನೆ. ಮದ್ಯಾಹ್ನ 2 ಗಂಟೆಗೆ
ಮನೆಗೆ ಬಂದು ನಮ್ಮ ತಂಗಿಯ ಮನೆಯಾದ ಶಾಮಬಾಯಿ ಗಂಡ ಶರಣಪ್ಪ ಕ್ಯಾಸನ್ ರವರ ಮನೆಯಲ್ಲಿ
ಊಟ ಮಾಡಿ ಮನೆಗೆ ಬಂದಳು ನಂತರ ರಾತ್ರಿ 10-00 ಗಂಟೆ ಸುಮಾರಿಗೆ ಮನೆಯಿಂದ ದೀಪೊತ್ಸ್‌ವ ಕಾರ್ಯಕ್ರಮ ನೋಡಲು ಹೋಗಿ ಮರಳ ಮನೆಗೆ ಬಂದಿರುವುದಿಲ್ಲಾ
ರಾತ್ರಿ ವೇಳೆ ಮತ್ತು ದಿನಾಂಕ 25/10/17 ರಂದು ಎಲ್ಲಾ ಕಡೆಗೆ ಹುಡುಕಾಡಿದರು ಅವಳ ಸುಳಿವು
ಸಿಕ್ಕಿಲ್ಲಾ ಆಕೆಯ ಹತ್ತಿರ ಇದ್ದ ಮೋಬೈಲದ
ಸಂಖ್ಯೆ 7760852372 ನೇದ್ದರಿಂದ ನಮ್ಮ
ಮನೆಯಲ್ಲಿದ ಮೋಬಾಯಿಲ ನಂಬರ 9902201320 ನೇದ್ದಕ್ಕೆ
ಕರೆ ಮಾಡಿ ನಾನು
ಬೆಂಗಳೂರಿನಲ್ಲಿದೆನೆಂದು ಹೇಳಿ ನನಗೆ ಹುಡುಕ ಬೇಡಿರಿ ಎಂದು ಹೇಳಿ ಸ್ವೀಚ್ ಆಪ್
ಮಾಡಿರುತ್ತಾಳೆ ನಾವು ಎಲ್ಲರೂ ಎಲ್ಲಾ ಕಡೆ
ಹುಡುಕಾಡಿ ಬೆಂಗಳೂರಿಗೆ ಹೋಗಿ ಈ ಮೊದಲು ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ವಿಚಾರಿಸಿದರು ನನ್ನ ಮಗಳ ಪತ್ತೆಯಾಗಿಲ್ಲ ಸದರಿ
ನನ್ನ ಮಗಳ ಚಹರಾ ಪಟ್ಟಿ ಈ ರೀತಿ ಇರುತ್ತದೆ.
ಕೋಲು ಮುಖ, ಸಾದಾ ಗೋಧಿ ಬಣ್ಣ, ವ: 21 ವರ್ಷ ಎತ್ತರ 5 ಪೀಟ ಸದೃಡ ಶರೀರ, 5 ನೇ ತರಗತಿವರೆಗೆ
ವಿದ್ಯಾ ಬ್ಯಾಸ ಮಾಡಿದ್ದು, ಕನ್ನಡ, ಹಿಂದಿ ಮಾತಾಡುತ್ತಾಳೆ ನೀಲಿ ಹಸಿರು ಹೂವುಳ್ಳ ನೈಟಿ
ಹಾಕಿದ್ದು. ಕಪ್ಪು ಬಣ್ಣದ ಶರ್ಟ ಧರಿಸಿರುತ್ತಾಳೆ ಕಪ್ಪು ಕೂದಲು ಹೊಂದಿದ್ದು ಇದೆ ಕಾರಣ ಸದರಿ
ನನ್ನ ಮಗಳು ಕಾಣೆಯಾಗಿದ್ದು ಪತ್ತೆ ಮಾಡಿ ಕೊಡಬೇಕೆಂದು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ