ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
17-11-2017
ಚಿಟಗುಪ್ಪಾ
ಪೊಲೀಸ ಠಾಣೆ ಪ್ರಕರಣ ಸಂಖ್ಯೆ 217/17 ಕಲಂ 279,304 (ಎ)
ಐಪಿಸಿ
ದಿನಾಂಕ: 16-11-2017 ರಂದು 09:00 ಗಂಟೆಗೆ
ಫಿರ್ಯಾದಿ ಮಹಾದೇವಿ ಗಂಡ ರಾಜೇಂದ್ರ ಮಾಳಗೆ ವಯ 30 ವರ್ಷ ಸಾ|| ಮಾಡಗೂಳ ರವರು
ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಂಶವೆನೆಂದರೆಪ ಫೀರ್ಯಾದಿ ಗಂಡ ರಾಜೇಂದ್ರ ರವರು
ಚಿಟಗುಪ್ಪಾ ಪಟ್ಟಣದ ಶಿವಶರಣಪ್ಪಾ ತಂದೆ ವಾಸುದೇವರಾವ ಚಿಟನಳ್ಳಿ ರವರಲ್ಲಿ ಬುಲೇರೊ ಪಿಕಪ್ ವಾಹನ
ಚಲಾಯಿಸಿಕೊಂಡಿರುತ್ತಾರೆ. ಪ್ರತಿ ನಿತ್ಯ ಮಾಡಗೂಳ ಗ್ರಾಮದಿಂದ ಚಿಟಗುಪ್ಪಾಕ್ಕೆ ಬುಲೇರೊ ಪಿಕಪ್
ವಾಹನ ನಡೆಸಿ ರಾತ್ರಿ ಮನೆಗೆ ಬರುವುದು ಮಾಡಿಕೊಂಡಿರುತ್ತಾರೆ. ಹೀಗಿರುವಾಗ ಚಿಟಗುಪ್ಪಾ-ಬೆಳಕೇರಾ
ರೋಡ ಚಿಟಗುಪ್ಪಾ ಶಿವಾರದ ಮದರಬಾಯಿ ಹುಮನಾಬಾದವಾಲೆ ರವರ ಹೊಲದ ಹತ್ತಿರ ರೋಡಿನ ಬಲಗಡೆ ಬಿದ್ದು
ಮೃತಪಟ್ಟಿರುತ್ತಾರೆ. ದಿನಾಂಕ 15-11-2017 ರಂದು ರಾತ್ರಿ 11:00 ಗಂಟೆಯ
ಸುಮಾರಿಗೆ ಚಿಟಗುಪ್ಪಾ- ಬೆಳಕೇರಾ ರೋಡ ಮಾರ್ಗವಾಗಿ ಬಜಾಜ ಸಿಟಿ 100 ಮೋಟರ ಸೈಕಲ
ನಂಬರ AP
13 J 4300
ನೇದನ್ನು ಚಲಾಯಿಸಿಕೊಂಡು ಮಾಡಗೂಳಕ್ಕೆ ಬರುವಾಗ ಸದರಿ ಮೋಟರ ಸೈಕಲನ್ನು ಅತೀ ವೇಗ ಹಾಗೂ
ಅಜಾಗರುಕತೆಯಿಂದ ಚಲಾಯಿಸಿಕೊಂಡು ಚಿಟಗುಪ್ಪಾ ಶಿವಾರದ ಮದರಬಾಯಿ ಹುಮನಾಬಾದವಾಲೆ ರವರ ಹೊಲದ
ಹತ್ತಿರ ರೋಡಿನ ಬಲಗಡೆ ಬಿದ್ದು ಮೃತಪಟ್ಟಿರುತ್ತಾರೆ. ಅಂತಾ ದಿ: 16-11-2017 ರಂದು
ಫಿರ್ಯಾದಿರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ 06/2017 ಕಲಂ 174 ಸಿ.ಆರ್.ಪಿ.ಸಿ :-
ದಿನಾಂಕ 16-11-2017 ರಂದು ಫಿರ್ಯಾದಿ ತುಳಜಪ್ಪಾ
ತಂದೆ
ಹುಲ್ಲೆಪ್ಪಾ ಮೇತ್ರೆ ವಯಃ 60 ವರ್ಷ ಜಾತಿಃ ಎಸ್.ಸಿ
ಮಾದಿಗ ಉಃ ಒಕ್ಕಲುತನ ಸಾಃ ಚಾಂಗಲೇರಾ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೇಂದರೆ ಫಿರ್ಯಾದಿಗೆ ಇಬ್ಬರು ಹೆಣ್ಣು ಮಕ್ಕೆಳು ಇಬ್ಬರು
ಗಂಡು ಮಕ್ಕಳು ಇರುತ್ತಾರೆ.
ಇವರೆಲ್ಲರ ಮದುವೆ
ಆಗಿರುತ್ತದೆ ಮಗಳಾದ ಸುಕಿರ್ಕಾ ಇವಳಿಗೆ 20 ವರ್ಷಗಳಿಂದ ಹಿಂದೆ ಕೃಷ್ಣ ನಾರಾಯಣಖೇಡ ರವರ
ಜೊತೆಯಲ್ಲಿ ಮದುವೆ ಮಾಡಿಕೊಟ್ಟಿದ್ದು
ಈಗ ಫಿರ್ಯಾದಿಗೆ ಮಗಳಿಗೆ ಕ್ರಪಾ, ಕರುಣಾ, ಕಾಲೇಬ್ ಅಂತ ಮೂರು ಜನ ಮಕ್ಕಳಿರುತ್ತಾರೆ ಸುಕಿರ್ಕಾ ಇವಳು ಒಂದು ವರ್ಷದಿಂದ
ಹುಚ್ಚು ಹುಚ್ಚಾಗಿ ವರ್ತಿಸುತ್ತಾ ಒದರುತ್ತಾ ಮಾಡುತ್ತಿದ್ದರಿಂದ ಇವಳಿಗೆ ಎಲ್ಲಾ ಕಡೆ ಚಿಕಿತ್ಸೆ ಕೊಡಿಸಿದ್ದರು ಕೂಡಾ ಕಡಿಮೇ ಆಗಿರಲಿಲ್ಲ ಇದೆ ಚಿಂತೆಯಲ್ಲಿ ಕರುಣಾ ವಯ: 16 ವರ್ಷ ಇವಳು ಮನೆಯಲ್ಲಿ ನೇಣು ಹಾಕಿಕೊಂಡು ಮೃತ್ತಪಟ್ಟಿರುತ್ತಾಳೆ ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment