ಆಕ್ರಮವಾಗಿ ಮರಳು
ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 17/11/2017 ರಂದು ಮುತ್ತಾಗಾ ಸೀಮಾಂತರದ
ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ
ಮಾಹಿತಿ ಬಂದ ಮೇರೆಗೆ ಪಿ ಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾರಿಯಲ್ಲಿ ಹೋಗುತ್ತಿರುವಾಗ
ಅನುಸೂಬಾಯಿ ಇವರ ಹೊಲದ ಹತ್ತಿರ ರೋಡಿನಲ್ಲಿ
ಮುತ್ತಾಗಾ ಕಡೆಯಿಂದ ಮರಳು ತುಂಬಿದ ನಂಬರ ಇಲ್ಲದ ಟ್ರಾಕ್ಟರ ಬರುತ್ತಿದ್ದು ಅದರ ಟ್ರಾಕ್ಟರ ಚಾಲಕ
ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಟ್ರಾಕ್ಟರ ಪರೀಶಿಲಿಸಿ ನೋಡಲಾಗಿ ಅದು ಮಶಿ ಫರಗೂಷನ
ಕಂಪನಿಯ ಟ್ರಾಕ್ಟರ ಇರುತ್ತದೆ. ಅದರಲ್ಲಿ ಮರಳು ತುಂಬಿದ್ದು ಮರಳು ತುಂಬಿದ ಟ್ರಾಕ್ಟರ ಪಂಚರ
ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದಿದ್ದು ಟ್ರಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಸೇರಿ
ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಟ್ರಾಕ್ಟರನಲ್ಲಿ ಮರಳು ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ
ಶಾಹಾಬಾದ ನಗರ
ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ
ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ
17-11-2017 ರಂದು, ಸುಧಾರಿತ ಗಸ್ತು ಸಂ 26 ಉಡಚಣ ಗ್ರಾಮದ ಬೀಟ್ ಸಿಬ್ಬಂದಿಯಾದ
ಪಂಡಿತ ಸಿಪಿಸಿ-1119 ರವರು
ಮಾಹಿತಿ ತಿಳಿಸಿದ್ದೆನೆಂದರೆ ಉಡಚಣ ಗ್ರಾಮದ ಬಸವಣ್ಣ ದೇವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಮಟಕಾ
ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ
ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಉಡಚಣ ಗ್ರಾಮದ ಬಸವಣ್ಣ ದೇವರ ಗುಡಿಯ
ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸವಣ್ಣ
ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ
ಸಾರ್ವಜನಿಕರಿಗೆ 1 ರೂಪಾಯಿಗೆ
80 ರೂಪಾಯಿ
ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ
ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ
ವಿಚಾರಿಸಲಾಗಿ ಫೈಗಂಬರ ತಂದೆ ಶೇಖಬಾಬು ಮುಲ್ಲಾ ಸಾ||ಉಡಚಣ
ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2590/- ರೂಪಾಯಿ
ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು
ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ
ಅಸ್ಲಾಂ ತಂದೆ ಅಬ್ದುಲರಸೀದ್ ಕಸಾಬ ಸಾ|| ಶಿವಪೂರಗಲ್ಲಿ ಹುಮನಾಬಾದ ಜಿ|| ಬಿದರ
ಇವರು ಕುರಿ ವ್ಯಾಪಾರ ಮಾಡುತ್ತಿದ್ದು. ನಾವು ಕುರಿಗಳನ್ನು ವಿಜಯಪೂರ ಜಿಲ್ಲೆಯ ಆಲಮೇಲ್
ಸಂತೆಯಲ್ಲಿ ಖರೀದಿ ಮಾಡಿ ಹುಮನಾಬಾದಕ್ಕೆ ತಗೆದುಕೊಂಡು ಹೋಗಿ ಮಾರಾಟ ಮಾಡುವ ವ್ಯಾಪಾರ
ಮಾಡುತ್ತಿರುತ್ತೇವೆ. ದಿನಾಂಕ 17-11-2017 ರಂದು ಆಲಮೇಲ್ ಸಂತೆಯಲ್ಲಿ ಕುರಿಗಳನ್ನು
ಖರಿದಿ ಮಾಡಿಕೊಂಡು ಬರಬೆಕೆಂದು ನಾನು ಮತ್ತು ನನ್ನ ಅಣ್ಣನಾದ ಅಲ್ತಾಫ ತಂದೆ ಅಬ್ದುಲರಸೀದ್ ಕಸಾಬ ಇಬ್ಬರು
ಕೂಡಿ ನಿನ್ನ ದಿನಾಂಕ 16-11-2017 ರಂದು ರಾತ್ರಿ ಹುಮನಾಬಾದದಿಂದ ಕಲಬುರಗಿಗೆ
ಬಂದು, ಕಲಬುರಗಿಯಲ್ಲಿ
ನಾವು ಪ್ರತಿ ಸಲ ಬಾಡಿಗೆ ತಗೆದುಕೊಂಡು ಹೊಗುವ ಅಬುಬಕರ್ ರವರ ಪಿಕಪ್ ನಂಬರ ಕೆಎ-32
ಬಿ-2528
ನೇದ್ದನ್ನು ಬಾಡಿಗೆ ತಗೆದುಕೊಂಡು, ಸದರಿ ಪಿಕಪ್ ವಾಹನದಲ್ಲಿ ನಾನು ಮತ್ತು
ನನ್ನ ಅಣ್ಣ ಹಾಗೂ ಪೀಕಪ್ ಚಾಲಕನಾದ ಸೈಯದ ಖಾಸಿಂ ಅಲಿ ತಂದೆ ಸೈಯದ್ ಹುಸೇನಸಾಬ ಮೂರು ಜನರು ಕೂಡಿ
ಕಲಬುರಗಿಯಿಂದ ಅಫಜಲಪೂರ ಮಾರ್ಗವಾಗಿ ಆಲಮೇಲಕ್ಕೆ ಹೋರಟಿದ್ದು. ಸದರಿ ಪೀಕಪ ವಾಹನದಲ್ಲಿ ಮುಂದೆ
ಕಿನ್ನರ ಸೈಡಿನಲ್ಲಿ ನನ್ನ ಅಣ್ಣ ಅಲ್ತಾಫ ಕುಳಿತಿದ್ದನು, ನಾನು
ಅವನ ಪಕ್ಕದಲ್ಲಿ ಕುಳಿತಿದ್ದೆನು, ಮದ್ಯ ರಾತ್ರಿ 01:30
ಗಂಟೆ ಸುಮಾರಿಗೆ ಅಫಜಲಪೂರ ಇನ್ನು ಅಂದಾಜು 3-4 ಕೀ ಮಿ ದೂರವಿದ್ದಾಗ, ಸದರಿ
ಪೀಕಪ್ ವಾಹನದ ಚಾಲಕ ತನ್ನ ಪಿಕಪ್ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು, ರೋಡಿನ ಪಕ್ಕದಲ್ಲಿ ನಿಂತಿದ್ದ ಕಬ್ಬು ತುಂಬಿದ ಲಾರಿಗೆ ಪೀಕಪನ ಎಡಭಾಗ ಡಿಕ್ಕಿ ಪಡಿಸಿದನು.
ಸದರಿ ಡಿಕ್ಕಿಯಿಂದ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಅಣ್ಣ ಅಲ್ತಾಫನ ತಲೆಗೆ ಹಾಗೂ
ಕುತ್ತಿಗೆಗೆ ಭಾರಿ ರಕ್ತಗಾಯ ಹಾಗೂ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಸದರಿ
ಘಟನೆಯಲ್ಲಿ ನನಗೂ ಸಹ ಮುಖಕ್ಕೆ ಗದ್ದಕ್ಕೆ ರಕ್ತಗಾಯಗಳು ಹಾಗೂ ಮೈ ಕೈಗೆ ಗುಪ್ತಗಾಯಗಳು
ಆಗಿರುತ್ತವೆ. ಘಟನೆ ಆದ ನಂತರ ಪೀಕಪ್ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ
ಹೊಗಿರುತ್ತಾನೆ. ರೋಡಿನ ಸೈಡಿನಲ್ಲಿ ನಿಂತಿದ್ದ ಲಾರಿ ನಂಬರ ನೊಡಿದ್ದು ಅದರ ನಂಬರ ಎಮ್.ಹೆಚ್-31
ಎಪಿ-7402
ಇರುತ್ತದೆ. ಘಟನೆ ಆದ ಸ್ವಲ್ಪ ಸಮಯಕ್ಕೆ ರೋಡಿಗೆ ಹೋಗಿ ಬರುವ ವಾಹನದವರು ಪೊಲೀಸರಿಗೆ ಮಾಹಿತಿ
ನೀಡಿದ್ದರಿಂದ ಪೊಲೀಸರು ಬಂದು ನನ್ನ ಅಣ್ಣನ ಶವವನ್ನು ಅಫಜಲಪೂರ ಸರ್ಕಾರಿ ಆಸ್ಪತ್ರೆ ಅಫಜಲಪೂರದ
ಶವಗಾರದಲ್ಲಿ ಹಾಕಿ ನನಗೆ ಚಿಕಿತ್ಸೆ ಕೊಡಿಸಿರುತ್ತಾರೆ.ಪೀಕಪ್ದ ನಂಬರ ಕೆಎ-32 ಬಿ-2528 ನೇದ್ದರ
ಚಾಲಕನಾದ ಸೈಯದ ಖಾಸಿಂ ಅಲಿ ತಂದೆ ಸೈಯದ್ ಹುಸೇನಸಾಬ ಸಾ|| ಜೋಶಿ
ಗಲ್ಲಿ ಹುಮನಾಬಾದ ಜಿ|| ಬಿದರ ಈತನು ತನ್ನ ಪೀಕಪ್ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಾಲಾಯಿಸಿಕೊಂಡು
ಹೋಗಿ, ರೋಡಿನ
ಪಕ್ಕದಲ್ಲಿ ನಿಲ್ಲಿಸಿದ ಲಾರಿ ನಂಬರ ಎಮ್.ಹೆಚ್-31 ಎಪಿ-7402 ನೇದ್ದರ
ಹಿಂದೆ ಡಿಕ್ಕಿ ಪಡಿಸಿದ್ದರಿಂದ, ನನ್ನ ಅಣ್ಣ ಅಲ್ತಾಫನ ತಲೆಗೆ ಹಾಗೂ
ಕುತ್ತಿಗೆಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳು ಆಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ವೈಜನಾಥ ತಂದೆ ಭೂತಾಳಿಸಿದ್ದ ನರಸಕ್ಕಿ ಸಾ|| ನೆಲೋಗಿ ರವರು ತಮ್ಮ ಮನೆಯ ಮುಂದೆ ಕಟ್ಟಿ ಕಟ್ಟಿದ್ದೇವೆ ನಮ್ಮತಾಯಿಯವರು
ಮುಂಜಾನೆ ಎದ್ದು ಮನೆಯ ಕಸ ತಗೆಯುತ್ತಿರುವಾಗ ನಮ್ಮ ಮನೆಯ ಮುಂದೆ ಬಸಪ್ಪ ತಂದೆ ಭೀಮರಾಯ ಇವನು KA32EH-2959 ನೇದ್ದರ ಗಾಡಿ ತಗೆದುಕೊಂಡು ಬಂದು ಜೋರಾಗಿ ಅವಾಚ್ಯ
ಶಬ್ದಗಳಿಂದ ಬೈವಾಗ ನಾನು ಮನೆಯಿಂದ ಹೋರಗೆ ಬಂದು ನಮ್ಮತಾಯಿಗೆ ಏಕೆ ಬೈಯುತ್ತಿ ಎಂದು ಕೇಳಿದಾಗ
ಬಾಬು ತಂದೆ ಭೀಮರಾಯ ನರಸಕ್ಕಿ, ಬಸವರಾಜ ತಂದೆ ಭೀಮರಾಯ ನರಸಕ್ಕಿ ಇವರು ಅಲ್ಲೆ ಬಿದ್ದ ಬಡಿಗೆ
ತಗೆದುಕೊಂಡು ನನ್ನ ತಲೆಗೆ ಮತ್ತು ಬೆನ್ನಿಗೆ ಹೋಡೆದು ರಕ್ತಗಾಯ ಮಾಡಿದ್ದಾರೆ ಮತ್ತು ಶರಣು ತಂದೆ
ಭೀಮರಾಯ ನರಸಕ್ಕಿ, ಮಲ್ಲು ತಂದೆ ಭೀಮರಾಯ ನರಸಕ್ಕಿ, ಸಂಗಮ್ಮಾ ಗಂಡ ಸೋಮನಾಥ ಇವರೆಲ್ಲರೂ ಈ ಭೋಸಡಿ
ಮಕ್ಕಳದು ಬಹಳ ಆಗಿದೆ ಇವರಿಗೆ ಖಲಾಸ ಮಾಡಿರಿ ಎಂದು ನನಗೆ ನನ್ನ ತಾಯಿಗೆ ಕಾಲಿನಿಂದ ಒದ್ದರು ಆಗ
ಅಲ್ಲೇ ಇದ್ದ ಭೂತಣ್ಣ ತಂದೆ ಲಕ್ಕಣ್ಣ ಮುದ್ದಾ, ಭೀಮ ತಂದೆ ದೇವಪ್ಪ ನರಸಕ್ಕಿ ಇವರು ಬಂದು ಜಗಳ
ಬಿಡಿಸಿರುತ್ತಾರೆ ಅಂಥಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment