Police Bhavan Kalaburagi

Police Bhavan Kalaburagi

Saturday, January 9, 2021

BIDAR DISTRICT DAILY CRIME UPDATE 09-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-01-2021

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 02/2021, ಕಲಂ. 379 ಐಪಿಸಿ :-   

ದಿನಾಂಕ 20-12-2020 ರಂದು 2300 ಗಂಟೆಯಿಂದ ದಿನಾಂಕ 21-12-2020 ರಂದು 0230 ಗಂಟೆಯ ಧ್ಯ ಅವಧಿಯಲ್ಲಿ ಫಿರ್ಯಾದಿ ಅವಿನಾಶ ತಂದೆ ಚಂದ್ರಕಾಂತ ದುಬೆ ವಯ: 31 ವರ್ಷ, ಜಾತಿ: ರಜಪುತ, ಸಾ: ವೈಷ್ಣವಿ ಲೇಔಟ್ ಬಸವಕಲ್ಯಾಣ ರವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ಪಲ್ಸರ್ 150 ಎಬಿಎಸ್ ಮೋಟಾರ ಸೈಕಲ್ ನಂ. ಕೆಎ-56/ಜೆ-6120, ಚಾಸಿಸ್ ನಂ. ಎಮ್.ಡಿ.2.ಎ.11.ಸಿ.ವಾಯ್.ಕೆ.ಸಿ.ಡಿ.22561, ಇಂಜಿನ್ ನಂ. ಡಿ.ಹೆಚ್.ವಾಯ್.ಸಿ.ಕೆ.ಡಿ.82362, ಮಾಡಲ್ 2019 ಹಾಗೂ ಅ.ಕಿ 25,000/- ರೂಪಾಯಿ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 02/2021, ಕಲಂ. 363 ಐಪಿಸಿ ಜೊತೆ 34 ಐಪಿಸಿ :-

ದಿನಾಂಕ 08-01-2021 ರಂದು ಫಿರ್ಯಾದಿ ಅಬ್ಬನ ಸಾಬ ತಂದೆ ಜಾಫರ್ ಸಾಬ ಸಾ: ಸಿಂಧನಕೇರಾ ತಾ: ಹುಮನಾಬಾದ, ಜಿ: ಬೀದರ ರವರ ತಾಯಿಯಾದ ಮದಿನಾ ಬೀ ಗಂಡ ಜಾಫರ ಸಾಬ ವಯ: 67 ವರ್ಷ ಇವರು ವರ್ಷ ಗ್ರಾಮ ಪಂಚಾಯತ ಚುನಾವಣೆಯಲ್ಲಿ ವಾರ್ಡ ನಂ. 2 ರಲ್ಲಿ ವಿಜಯಸಾಧಿಸಿದ್ದು ಹಾಗೂ ತಮ್ಮೂರ ಸಂಗೀತಾ ಗಂಡ ಚೆನ್ನಬಸಪ್ಪಾ ಮಾಲಿ ಪಾಟೀಲ ವಾರ್ಡ ನಂ. 1 ರಲ್ಲಿ ವಿಜಯಸಾಧಿಸಿರುತ್ತಾರೆ, ಹೀಗಿರುವಾಗ ಸಂಗೀತಾ ತಾವೇ ಸಿಂಧನಕೇರಾ ಗ್ರಾಮ ಪಂಚಾಯತ ಅಧ್ಯಕ್ಷರಾಗಬೇಕೆಂದು ಫಿರ್ಯಾದಿಯವರ ತಾಯಿಯು ಹೊಲದಲ್ಲಿರುವಾಗ ಅವರ ಜೊತೆ ಯಾರು ಇಲ್ಲದ ಕಾರಣ ಫಿರ್ಯಾದಿಯವರ ತಾಯಿಯನ್ನು ದಿನಾಂಕ 03-01-2021 ರಂದು 1300 ಗಂಟೆಗೆ ಗುರುಪ್ರಸಾದ ತಂದೆ ಚೆನ್ನಬಸಪ್ಪಾ ಮಾಲಿಪಾಟೀಲ ಇವರು ಫಿರ್ಯಾದಿಯವರ ತಾಯಿಗೆ ನಿಮ್ಮ ಮಗ ಕರೆಯುತ್ತಿದ್ದಾನೆಂದು ಸುಳ್ಳು ಹೇಳಿ ಅವರನ್ನು ದ್ವಿಚಕ್ರ ವಾಹನದ ಮೇಲೆ ಕೂಡಿಸಿಕೊಂಡು ಸಿಂಧನಕೇರಾ ಅಂಬೇಡ್ಕರ ವ್ರತ್ತದ ಹತ್ತಿರ ಬಂದು ಕಾರು ತರಿಸಿ ಸಂಗೀತಾ ಪಾಟೀಲ್ ರವರು ತಾಯಿಯವರನ್ನು ಕೂಡಿಸಿಕೊಂಡು ಹೋಗಿರುತ್ತಾರೆ, ಫಿರ್ಯಾದಿಯವರ ತಾಯಿಯನ್ನು ಕರೆದುಕೊಂಡು ಹೋಗುವುದನ್ನು ಅಂಬೇಡ್ಕರ ಚೌಕನಲ್ಲಿದ್ದಮ್ಮೂರ ವೈಜಿನಾಥ ತಂದೆ ರಾಮಯ್ಯಾ ಮಠಪತಿ ಹಾಗು ಮೊಹಮ್ಮದ ಜಮೀರ ತಂದೆ ಅಬ್ದುಲ ಹಮೀದ ರವರು ನೋಡಿ ಫಿರ್ಯಾದಿಗೆ ತಿಳಿಸಿರುತ್ತಾರೆ, ಅದಾದ ನಂತರ ಫಿರ್ಯಾದಿಯು ತನ್ನ ತಾಯಿಯನ್ನು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 03/2021, ಕಲಂ. 457, 380 ಐಪಿಸಿ :-

ದಿನಾಂಕ 08-01-2021 ರಂದು ರಾತ್ರಿ 0100 ಗಂಟೆಯಿಂದ 0200 ಗಂಟೆಯ ಅವಧಿಯಲ್ಲಿ ಮುಸ್ತಾಪೂರ ಕ್ರಾಸ್ ಹತ್ತಿರ ಇರುವ ಫಿರ್ಯಾದಿ ಸಂಜುಕುಮಾರ ತಂದೆ ಅಂಬಣ್ಣಾ ಹಿರನಾಗಂವ ವಯ: 38 ವರ್ಷ, ಸಾ: ಮುಸ್ತಾಪೂರ ಕ್ರಾಸ್ ರವರ ಹಾಗೂ ಫಿರ್ಯಾದಿಯವರ ಪಕ್ಕದ ಎರಡು ಮನೆಗಳಲ್ಲಿ ಯಾರೋ ಅಪರಿಚಿತ ಕಳ್ಳರು ಕೀಲಿ ಮುರಿದು ಒಟ್ಟು 13 ಗ್ರಾಂ ಬಂಗಾರದಡವೆಗಳು .ಕಿ 36,400/- ರೂ., ನಗದು ಹಣ ಒಟ್ಟು 56,000/- ರೂ. ಹಾಗು ಒಂದು ಕಾರ್ಬನ ಮೋಬೈಲ್ ಅ.ಕಿ 800/- ರೂ. ಹೀಗೆ ಎಲ್ಲಾ ಸೇರಿ 93,200/- ಬೆಲೆ ಬಾಳುವದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 02/2021, ಕಲಂ. 279, 338 ಐಪಿಸಿ :-

ದಿನಾಂಕ 08-01-2021 ರಂದು ಸುಲ್ತಾನ ತಂದೆ ಗಣೀಮಿಯ್ಯ ದಿಗ್ವಾಲವಾಲೆ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಬುದೇರಾ ರವರು ತನ್ನ ಮೋಟಾರ ಸೈಕಲ ನಂ. ಕೆ.ಎ-38/ಯು-3713 ನೇದರ ಮೇಲೆ ಬೀದರದಿಂದ ತಮ್ಮೂರಿಗೆ ಹೋಗುತ್ತಿರುವಾಗ ಯದಲಾಪೂರ ಕ್ರಾಸ ಸಮೀಪ ಹಿಂದಿನಿಂದ  ಕಾರ ನಂ. ಟಿ.ಎಸ್-09/ಎಫ್.ಎಮ್-9846 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಿಗೆ ಅಪಘಾತ ಪಡಿಸಿದರಿಂದ ಫಿರ್ಯಾದಿಯ ಬಲಗಣ್ಣಿನ ಹತ್ತಿರ, ಬಲಕಪಾಳ ಮೇಲೆ, ಬಲಗೈ ಮುಂಗೈ ಮೇಲೆ, ಎರಡು ಪಾದಗಳಿಗೆ ರಕ್ತಗಾಯ ಮತ್ತು ಎಡಗೈ ಮಧ್ಯದ ಉಂಗುರು ಬೆರಳಿಗೆ ಭಾರಿ ರಕ್ತಗಾಯ ಹಾಗೂ ಬಲಕಿವಿಯಿಂದ ರಕ್ತ ಸಹ ಬಂದಿರುತ್ತದೆ, ಅಪಘಾತದ ನಂತರ ಸದರಿ ಕಾರ ಚಾಲಕನು ತನ್ನ ಕಾರ ನಿಲ್ಲಿಸಿ ಓಡಿ ಹೋಗಿರುತ್ತಾನೆ, ನಂತರ ರಸ್ತೆಯಲ್ಲಿ ಹೋಗುತ್ತಿದ್ದ ತಮ್ಮೂರ ಪ್ರಭಾಕರ ತಂದೆ ಹಣಮಂತ ಹತ್ತಿ ರವರು ನೋಡಿ 108 ಅಂಬುಲೆನ್ಸನಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಅಸ್ಪತ್ರಗೆ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 03/2021, ಕಲಂ. 279, 337, 338 ಐಪಿಸಿ :-

ದಿನಾಂಕ 07-01-2021 ರಂದು ಫಿರ್ಯದಿ ಮಸ್ತಾನಸಾಬ ತಂದೆ ಖಾಜಾಸಾಬ ಸೈಯದ್ ವಯ: 65 ವರ್ಷ, ಜಾತಿ: ಮುಸ್ಲಿಂ, ಸಾ: ಡೋಣಗಾಂವ(ಎಮ್) ರವರು ಮ್ಮ ಸಂಬಂಧಿಕರ ಮನೆಗೆ ಮುಧೋಳಗೆ ಮನೆಶಾಂತಿ ಕಾರ್ಯಕ್ರಮಕ್ಕೆ ಹೋಗಿ ಮನೆಶಾಂತಿ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ 08-01-2021 ರಂದು ಮುಧೋಳದಿಂದ ಬಸ್ಸ ನಂ. ಕೆಎ-36/ಎಫ್-1178 ನೇದರಲ್ಲಿ ಬರುತ್ತಿರುವಾಗ ತೋರಣಾವಾಡಿಗೆ ಹೋಗಿ ಮುಂದೆ ಬ್ರಿಜ್ ಕೆಲಸ ನಡೆಯುತ್ತಿದ್ದು ಅಲ್ಲಿ ಲಾರಿ ಸಿಲುಕಿ ಬಿದ್ದ ಪ್ರಯುಕ್ತ ಸದರಿ ಬಸ್ಸ ತರುಗಿಸಿಕೊಂಡು ವಾಯಾ ಡೋಣಗಾಂವ ಮುಖಾಂತರ ಹೊಗುತ್ತಿರುವಾಗ ಡೋಣಗಾಂವ ಶಿವಾರದ ತಗ್ಗಿನ ಹತ್ತಿರ ಸದರಿ ಬಸ್ಸ ಚಾಲಕನಾದ ಆರೋಪಿ ಮುಕುಂದ ತಂದೆ ಪ್ರೇಮಾ ಚೌಹಾಣ ಸಾ: ಭವಾನಿನಗರ ತಾಂಡಾ, ಔರಾದ ಬಸ್ಸ ಚಾಲಕ ಇತನು ತನ್ನ ಬಸ್ಸನ್ನು ಅತೀವೇಗ ಹಾಗು ನಿಷ್ಕಾಳಜಿಯಿಂದ ಚಾಲಾಯಿಸಿ ಬಸ್ಸ ರೋಡಿನ ಬದಿಯಲ್ಲಿನ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಪಲ್ಟಿಯಿಂದ 1) ಫಿರ್ಯದಿಗೆ ಎಡಗೈ ಮೊಳಕೈಗೆ ರಕ್ತಗಾಯ, ಬಲಮೊಳಕಾಲಿಗೆ ಗುಪ್ತಗಾಯವಾಗಿರುತ್ತದೆ, ಬಸ್ಸನಲ್ಲಿದ್ದ ನಿರ್ವಾಹಕ 2) ಅಜಿಂಪಾಶ್ಯಾ ತಂದೆ ಖಾಜಾಸಾಬ ಶೇಖ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಮುಧೋಳ ಇವರಿಗೆ ಬಲಗಡೆ ಭಕಾಳಿಯಲ್ಲಿ ಗುಪ್ತಗಾಯ, 3) ಮಾರುತಿ ತಂದೆ ಮಹಾಲಿಂಗಪ್ಪಾ ದೇಶಮುಖ ಕಮಲನಗರ ಲೈನ ಮ್ಯಾನ ರವರಿಗೆ ಬಲಗೈ ಹೆಬ್ಬೆಟ್ಟಿನಲ್ಲಿ ಕಟ್ಟಾದ ರಕ್ತಗಾಯ, ಎಡಭಕಾಳಿಯಲ್ಲಿ ಗುಪ್ತಗಾಯ, ಬಲರಟ್ಟೆಗೆ ಗುಪ್ತಗಾಯ, 4) ಗಣೇಶ ತಂದೆ ರಾಮಜಿ ಹೊಂಡೆಕರ ವಯ: 07 ವರ್ಷ, ಜಾತಿ: ಗೌಳಿ, ಸಾ: ರಾವಣಕೊಳ ಇತನಿಗೆ ಬಲಗಣ್ಣಿನ ಮೇಲೆ ರಕ್ತಗಾಯ, 5) ವಂದನಾ ಗಂಡ ರಾಮಜಿ ಹೊಂಡೆಕರ ವಯ: 25 ವರ್ಷ, ಜಾತಿ: ಗೌಳಿ, ಸಾ: ರಾವಣಕೊಳ ಇವಳಿಗೆ ಬಲಮೊಳಕಾಲಿಗೆ ರಕ್ತಗಾಯ, ಎಡಗಡೆ ವಸಡಿಗೆ ರಕ್ತಗಾಯ, 6) ಪಾಯಲ ತಂದೆ ರಾಜಕುಮಾರ ಪಾಟೀಲ ವಯ: 13 ವರ್ಷ, ಸಾ: ತೋರಣಾ ಇವರ ಗಟಾಯಿಗೆ ಗುಪ್ತಗಾಯ, 7) ರೋಹಿಣಿ ತಂದೆ ನಾರಾಯಣ ಜಾಧವ ವಯ: 18 ವರ್ಷ, ಜಾತಿ: ಮರಾಠಾ, ಸಾ: ತೋರಣಾವಾಡಿ ಇವಳಿಗೆ ಎಡಗಡೆ ಮೊಳಕಾಲಿಗೆ ರಕ್ತಗಾಯ, 8) ತಮಿಜಾಬಿ  ಗಂಡ ಬಾಬುಮಿಯ್ಯಾ ಶೇಖ ವಯ: 40 ವರ್ಷ, ಸಾ: ಕಮಲನಗರ ಇವಳಿಗೆ ಎಡಗಡೆ ತುಟಿಗೆ ರಕ್ತಗಾಯ, ಎರಡು ಹಲ್ಲುಗಳು ಬಿದ್ದಿರುತ್ತವೆ, ಬಲಗಾಲ ಮೊಳಕಾಲಿಗೆ ಗುಪ್ತಗಾಯ, 9) ಅನುಷಯಾ ಗಂಡ ಉತ್ತಮ ಕಾಂಬಳೆ ವಯ: 36 ವರ್ಷ, ಸಾ: ತೋರಣಾ ಇವಳಿಗೆ ಮೇಲ್ತುಟಿಗೆ ಗುಪ್ತಗಾಯ, ಎರಡು ಮೊಳಕಾಲಗೆ ಗುಪ್ತಗಾಯ, 10) ಪ್ರತೀಕ್ಷಾ ತಂದೆ ರಾಮ ಗಡದೆ ಇವಳಿಗೆ ಎಡತೊಡೆಗೆ, ಹಿಂಭಾಗಕ್ಕೆ ರಕ್ತಗಾಯ, ಕೆಳತುಟಿಗೆ ಸ್ವಲ್ಪ ರಕ್ತಗಾಯ, 11) ಅಲಿಕಾ ಗಂಡ ಮನೋಹರ ಗಾಯಕವಾಡ ತೋರಣಾ ಇವಳಿಗೆ ಕುತ್ತಿಗೆಗೆ ಗುಪ್ತಗಾಯ, ಎಡ ಮೊಳಕಾಲಿಗೆ ಗುಪ್ತಗಾಯ, 12) ಅನೀಲ ತಂದೆ ಧನಾಜಿ ಗಾಯಕವಾಡ ತೋರಣಾ ಇತನಿಗೆ ಎರಡು ಮೊಳಕಾಲ ಕೆಳಗೆ ಗುಪ್ತಗಾಯ, 13) ರುಪೇಶ ತಂದೆ ಸಂಜಯ ಗಿರಿ ವಯ: 28 ವರ್ಷ, ಜಾತಿ: ಗೊಸಾಯಿ, ಸಾ: ತೊರಣಾ ಇತನಿಗೆ ಬಲಗಣ್ಣಿನ ಮೇಲೆ ರಕ್ತಗಾಯ, 14) ಚಾಂದಪಾಶ್ಯಾ ತಂದೆ ಉಸ್ಮಾನಸಾಬ ಶೇಖ ಕಮಲನಗರ ಇವರಿಗೆ ಎದೆಗೆ ಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 04/2021, ಕಲಂ. 279, 337, 338 .ಪಿ.ಸಿ :- 

ದಿನಾಂಕ 08-01-2021 ರಂದು ಫಿರ್ಯಾದಿ ಸಂಜುಕುಮಾರ ತಂದೆ ಭಿಮರಾವ ಕುಂಬಾರೆ ವಯ: 52 ವರ್ಷ, ಜಾತಿ: ಕೋಳಿ, ಸಾ: ಕೌಡಿಯಾಳ (ಎಸ್), ತಾ: ಬಸವಕಲ್ಯಾಣ ರವರು ತಮ್ಮೂರ ದತ್ತು ತಂದೆ ಬಾಬುರಾವ ಬಿರಾದಾರ ಇಬ್ಬರು ಮಾತನಾಡುತ್ತ ತಮ್ಮೂರ ಹೊಟೆಲ ಹತ್ತಿರ ನಿಂತಿರುವಾಗ ಫಿರ್ಯಾದಿಯವರ ದೊಡ್ಡಮ್ಮ ಚಂದ್ರಮ್ಮಾ ಗಂಡ ಬಾಬುರಾವ ಕುಂಬಾರೆ ವಯ: 60 ವರ್ಷ ಇವರು ನಡೆದುಕೊಂಡು ರಾ.ಹೆ ನಂ. 65 ಯು-ಟರ್ನ ಸ್ಥಳದಲ್ಲಿ ಮನೆ ಕಡೆಗೆ ಬರುತ್ತಿರುವಾಗ ಹುಮನಾಬಾದ ಕಡೆಯಿಂದ ಮೋಟರ ಸೈಕಲ್ ನಂ. ಕೆಎ-56/ಹೆಚ್-4763 ನೇದರ ಚಾಲಕನಾದ ಆರೋಪಿ ಸಂದೀಪ ತಂದೆ ಖೂಬಾ ಪವಾರ ವಯ: 21 ವರ್ಷ, ಜಾತಿ: ಲಂಬಾಣಿ, ಸಾ: ಪರ್ತಾಪೂರ ತಾಂಡಾ ಇತನು ತನ್ನ ವಾಹನದ ಮೇಲೆ ಲಕ್ಷ್ಮಣ ತಂದೆ ರತನ ರಾಠೋಡ ವಯ: 26 ವರ್ಷ, ಸಾ: ಪರ್ತಾಪೂರ ತಾಂಡಾ ರವರನ್ನು ಕೂಡಿಸಿಕೊಂಡು ತನ್ನ ಮೋಟರ ಸೈಕಲನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ದೊಡ್ಡಮ್ಮ ಚಂದ್ರಮ್ಮಾ ರವರಿಗೆ ಡಿಕ್ಕಿ ಮಾಡಿ ಮೋಟರ ಸೈಕಲ್ ಸಮೇತ ಬಿದ್ದಿರುತ್ತಾರೆ, ಸದರಿ ಅಪಘಾತದಿಂದ ದೊಡ್ಡಮ್ಮನಿಗೆ ಬಲಗಾಲು ಮೊಣಕಾಲಿನ ಕೆಳಗೆ ಭಾರಿ ರಕ್ತಗಾಯ, ತಲೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಹಾಗೂ ಆರೋಪಿಗೆ ಎಡಗಾಲು ಮೊಣಕಾಲಿಗೆ ತರಚಿದ ಗಾಯ, ಎಡಗೈ ಮುಂಗೈ ಹತ್ತಿರ ತರಚಿದ ಗಾಯವಾಗಿರುತ್ತದೆ, ಆತನ ಹಿಂಭಾಗ ಕುಳಿತ ಲಕ್ಷ್ಮಣ ರವರಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ, ಅಷ್ಟರಲ್ಲೆ ದತ್ತು ಬಿರಾದಾರ ಈತನು 108 ಅಂಬುಲೆನ್ಸ ಕರೆಯಿಸಿ ಗಾಯಗೊಂಡ ಮೂವರಿಗೂ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 04/2021, ಕಲಂ. 498 (), 324, 504 ಐಪಿಸಿ :-

ಫಿರ್ಯಾದಿ ಸಂಗೀತಾ ಗಂಡ ರವಿ ಚಿನ್ನಾ ರಾಠೋಡ ವಯ: 39 ವರ್ಷ, ಜಾತಿ: ಲಮಾಣಿ, ಸಾ: ಗೋವಿಂದ ತಾಂಡಾ ರವರ ಗಂಡನಾದ ರವಿ ತಂದೆ ಶೆಟ್ಟಿ ವಯ: 40 ವರ್ಷ ಸಾ: ಗೋವಿಂದ ತಾಂಡಾ ಈತನು ಕಳೆದ 6 ತಿಂಗಳಿನಿಂದ ಸರಾಯಿ ಕುಡಿದು ಬಂದು ಬೈಯುವುದು, ಹೊಡೆಬಡೆ ಮಾಡುತ್ತಿದ್ದು, ಹೀಗಿರುವಾಗ 06-01-2021 ರಂದು ಫಿರ್ಯಾದಿಯು ಕಬ್ಬು ಕಡಿದು ಮನೆಗೆ ಬಂದಾಗ ಗಂಡ ಮನೆಯಲ್ಲಿಟ್ಟ 1200/- ಹಣ ತೆಗೆದುಕೊಂಡು ಹೋಗಿ ಸರಾಯಿ ಕುಡಿದು ಬಂದಿದ್ದು ಅದನ್ನು ಕೇಳಿದಕ್ಕೆ ನನಗೇನು ಕೇಳುತ್ತಿ ಅಂತಾ ಅವಾಚ್ಯವಾಗಿ ಬೈದು ಬಡಿಗೆ ತೆಗೆದುಕೊಂಡು ಬೆನ್ನಲ್ಲಿ, ಭುಜಕ್ಕೆ, ಬಲಗೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಜಗಳ ನೋಡಿದ ತಾಂಡಾದ ಜನರಾದ ಉಮೇಶ ಸಿ ರಾಠೋಡ ಹಾಗೂ ನಂದು ಸಿ ರಾಠೋಡ ರವರು ಬಿಡಿಸಿಕೊಂಡಿರುತ್ತಾರೆ, ನಂತರ ಮರುದಿವಸ ಫಿರ್ಯಾದಿಯವರ ತಾಯಿ ಮಂಗಲಿಬಾಯಿ ಹಾಗೂ ಚಿಕ್ಕಮ್ಮ ಯಮುನಾ ಬಂದು ತವರೂರಾದ ಭಾದ್ಲಾಪೂರಕ್ಕೆ ಕರೆದುಕೊಂಡು ಹೋಗಿರುತ್ತಾರೆಂದು, ನಂತರ ದಿನಾಂಕ 08-01-2021 ರಂದು ಚಿಕಿತ್ಸೆಗಾಗಿ ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತೋರಿಸಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.