ಕೊಲೆ
ಪ್ರಕರಣ :
ಮಾಡಬೂಳ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಅಂತಪ್ಪ
ವಡ್ಡೆಕಾರ ಸಾ|| ಕೊಡಂಬಲ್ ತಾ|| ಚಿಟಗುಪ್ಪಾ ಜಿ|| ಬೀದರ ರವರ ಹಿರಿಯ ಮಗಳಾದ ಅಂಬಿಕಾ
ಇವಳಿಗೆ ಈಗ ಸುಮಾರು 7 ವರ್ಷ 6 ತಿಂಗಳ ಹಿಂದೆ ಹೊಸ ಹೆಬ್ಬಾಳ ಗ್ರಾಮದ ಯಲ್ಲಪ್ಪ ತಂದೆ ಕಾಶಿರಾಮ
ಮುದಗಲ್ ಇತನೊಂದಿಗೆ ಗುರು ಹಿರಿಯರ ಸಮಕ್ಷಮದಲ್ಲಿ ನಮ್ಮ ಊರಿನಲ್ಲಿ ಮದುವೆ ಮಾಡಿಕೊಟ್ಟಿರುತ್ತೆವೆ.
ಮದುವೆಯಾದ ನಂತರ ನನ್ನ ಮಗಳು ತನ್ನ ಗಂಡ ಯಲ್ಲಪ್ಪ, ಅತ್ತೆ ಕಮಲಾಬಾಯಿ,
ಭಾವ ನಾಗೇಶ ಹಾಗೂ ನಾದನಿ ಪದ್ಮಾ ಇವರೊಂದಿಗೆ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದು,
ನನ್ನ ಮಗಳಿಗೆ 1) ಭಾಗ್ಯ ಲಕ್ಷ್ಮಿ 2) ಆರತಿ 3) ನಂದಿನಿ ಎಂಬ 3 ಜನ ಹೆಣ್ಣು
ಮಕ್ಕಳಿರುತ್ತಾರೆ.ಮದುವೆಯಾದ 2 ವರ್ಷಗಳ ನಂತರ ಮಗಳಿಗೆ ಆಕೆಯ ತನ್ನ ಗಂಡ ಯಲ್ಲಪ್ಪ, ಅತ್ತೆ ಕಮಲಾಬಾಯಿ, ಭಾವ ನಾಗೇಶ ಹಾಗೂ ನಾದನಿ ಪದ್ಮಾ ರವರೂ
ಕೂಡಿ ಹೊಲ ಮನೆ ಕೆಲಸ ಸಂಬಂಧ ತ್ರಾಸ ಕೊಟ್ಟು ಹೊಡೆ ಬಡೆ ಮಾಡುತ್ತಿದ್ದರು. ಈ ವಿಷಯ ತಿಳಿದು ನಾವು
ಮತ್ತು ನಮ್ಮ ಸಮಾಜದ ದೊಡ್ಡವರು ಅವರ ಊರಿಗೆ ಹೋಗಿ ಬುದ್ದಿ ಹೇಳಿ ಬಂದಿರುತ್ತೆವೆ. ನನ್ನ ಮಗಳಿಗೆ
ಅವಳ ಭಾವ ನಾಗೇಶ ಮತ್ತು ನಾದಿನಿ ಪದ್ಮಾ ಇವರೂ ಹೊಡೆದಿದ್ದರಿಂದ ಈ ರೀತಿ ನೀವು ಹೊಡೆಯುವದು
ಸರಿಯಲ್ಲ ಎಂದು ತಿಳುವಳಿಕೆ ಹೇಳಿ ಬಂದಿರುತ್ತೆವೆ, ಇದೇ ರೀತಿ 3-4 ಭಾರಿ
ಆಗಿರುತ್ತದೆ. ನನ್ನ ಅಳಿಯ ನನ್ನ ಮಗಳಿಗೆ ಒಂದಲ್ಲ ಒಂದು ದಿನ ಕೊಲೆ ಮಾಡುತ್ತೆನೆ ಅಂತ
ಹೇಳಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ 10/10/2019 ರಂದು ಬೆಳಿಗ್ಗೆ 08-30 ಘಂಟೆ
ಸುಮಾರಿಗೆ ನನ್ನ ಮಗ ಸಾಯಿನಾಥ ಇತನು ಅಂಬಿಕಾಳ ಜೊತೆ ಮಾತಾಡಿ ಚೆನ್ನಾಗಿದ್ದೆನೆಂದು ತಿಳಿಸಿದಳು,
ನಾನು ಹೊಲದಿಂದ ಮನೆಗೆ ಸಾಯಂಕಾಲ 05-00 ಘಂಟೆಗೆ ಮನೆಗೆ ಬಂದಾಗ ನನ್ನ ಪೋನಿಗೆ
ಹೆಬ್ಬಾಳ ಗ್ರಾಮದಿಂದ ಯಲ್ಲಪ್ಪನ ಸೋದರ ಮಗನಿದ್ದಿನಿ ನಿಮ್ಮ ಮಗಳು ಫಾಸಿ ಹಾಕಿಕೊಂಡು
ತೀರಿಕೊಂಡಿದ್ದಾಳೆ ಬೇಗ ಬನ್ನಿ ಎಂದು ಹೇಳಿದಾಗ ಆಗ ನಾನು ಮಗಳು ಫಾಸಿ ಹಾಕಿಕೊಂಡು ಸಾಯೋದಿಲ್ಲ
ಅವಳಿಗೆ ಎಷ್ಟೆ ಕಷ್ಟ ಕೊಟ್ಟರು ಸಾಯಲ್ಲ ಅಂತ ಹೇಳಿದ್ದಾಳೆ ಈಗ ಹೇಗೆ ಸತ್ತಳು ಅಂತ ಹೇಳಿ ಪೋನ ಕಟ್
ಮಾಡಿದೆನು. ಈ ವಿಷಯ ತಿಳಿದು ನಾನು ಮತ್ತು ಮಕ್ಕಳಾದ ಸಾಯಿನಾಥ ಮತ್ತು ನನ್ನ ತಾಯಿ ಭೋರಮ್ಮ,
ನನ್ನ ಗಂಡನ ತಂಗಿ ಚಂದ್ರಮ್ಮ ಹಾಗೂ ನನ್ನ ಮೈದುನ ಸುರೇಶ, ದಶರಥ ಮತ್ತು ಸಂಬಂಧಿಕರೆಲ್ಲರೂ ಕೂಡಿ ಒಂದು ಕ್ರೂಸರ ಬಾಡಿಗೆ ಮಾಡಿಕೊಂಡು ನಿನ್ನೆ
ದಿನಾಂಕ 10/10/2019 ರಂದು ರಾತ್ರಿ 10-30 ಘಂಟೆ ಸುಮಾರಿಗೆ ಹೆಬ್ಬಾಳ ಗ್ರಾಮದ ನನ್ನ ಮಗಳ ಮನೆಗೆ
ಹೋಗಿ ನೋಡಲು ನನ್ನ ಮಗಳು ಅಂಬಿಕಾ ಇವಳಿಗೆ ಮನೆಯ ಪಡಸಾಲೆಯಲ್ಲಿ ಅಂಗಾತವಾಗಿ ಹಾಕಿದ್ದಾರೆ ಮೈ,
ಕೈ ಮುಟ್ಟಿ ನೋಡಲು ಸತ್ತಿರುತ್ತಾಳೆ. ಮನೆಯಲ್ಲಿ ಲೈಟಿನ ಬೆಳಕಿನಲ್ಲಿ ನನ್ನ
ಮಗಳಿಗೆ ಚೆಕ್ ಮಾಡಿ ನೋಡಿದಾಗ ಕುತ್ತಿಗೆ ಸುತ್ತಲು ಕಂದುಗಟ್ಟಿದ ಗಾಯವಾಗಿರುತ್ತದೆ. ಈ ಎಲ್ಲ
ನೋಡಿದರೇ ನನ್ನ ಮಗಳಿಗೆ ಕೈಯಿಂದ ಹೊಡೆ ಬಡೆ ಮಾಡಿ ಉಸಿರುಗಟ್ಟಿಸಿ ಸಾಯಿಸಿ ನಂತರ ಉರುಲು
ಹಾಕಿದ್ದಾರೆ ಅಂತ ಅನಿಸಿದೆ. ಸಾಯಿಸಿ ಉರುಲು ಹಾಕಿಕೊಂಡಿರುತ್ತಾಳೆ ಎಂದು ಸುಳ್ಳು ನಾಟಕ
ಮಾಡಿರುತ್ತಾರೆ. ಕಾರಣ ನನ್ನ ಮಗಳು ಅಂಬಿಕಾಳಿಗೆ ಅವಳ ಗಂಡ
ಯಲ್ಲಪ್ಪ, ಅತ್ತೆ ಕಮಲಾಬಾಯಿ, ಭಾವ ನಾಗೇಶ
ಹಾಗೂ ನಾದಿನಿ ಪದ್ಮಾವತಿ ರವರೆಲ್ಲರೂ ಕೂಡಿ ಈಗ ಕೆಲವು ದಿನಗಳಿಂದ ಹೊಲ ಮನೆ ಕೆಲಸ ಮಾಡುವ ಸಂಬಂಧ
ಮತ್ತು 3 ಜನ ಹೆಣ್ಣು ಮಕ್ಕಳು ಹಡೆದಿದ್ದಾಳೆ ಎಂಬ ವಿಚಾರದಲ್ಲಿ ತ್ರಾಸ ಕೊಟ್ಟು ಹೊಡೆ ಬಡೆ ಮಾಡಿ ನಿನ್ನೆ
ದಿನಾಂಕ 10/10/2019 ರಂದು ಸಾಯಂಕಾಲ 05-00 ಘಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಎಲ್ಲರೂ ಕೂಡಿ
ಕೈಯಿಂದ ಹೊಡೆ ಬಡೆ ಮಾಡಿ ಉಸಿರುಗಟ್ಟಿಸಿ ಸಾಯಿಸಿ ಉರುಲು ಹಾಕಿ ಕೊಂಡಿರುತ್ತಾಳೆ ಎಂದು ಸುಳ್ಳು
ನಾಟಕ ಮಾಡಿ ಉರುಲು ಹಾಕಿಕೊಂಡಿರುತ್ತಾಳೆ ಅಂತ ಸುಳ್ಳು ಹೇಳಿ ಸಾಯಿಸಿರುತ್ತಾರೆ ಅವರ ಮೇಲೆ
ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಶಾಲ @ ಅಮುಲ ತಂದೆ ಬಾಪುರಾವ ಮೋರೆ ಸಾ|| ಮಣುರ ರವರಿಗೆ ದಿನಾಂಕ:11/10/2019 ರಂದು ತಾವು ನನಗೆ ಪೊಲೀಸ್ ಠಾಣೆಗೆ ಬರಲು ಹೇಳಿದ ಮೇರಗೆ ನಾನು ಇಂದು ಅಫಜಲಪೂರ ಪೊಲೀಸ್ ಠಾಣೆಗೆ ಬಂದು ಹಾಜರಾಗಿದ್ದು ತಾವು ನನಗೆ ಸದರ ಬಜಾರ ಪೊಲೀಸ್ ಠಾಣೆ ಸೋಲಾಪೂರದಿಂದ ಬಂದ ಕಾಗದ ಪತ್ರಗಳನ್ನು ತೋರಿಸಿ ಅದರ ಬಗ್ಗೆ ವಿಚಾರಿಸಿದ್ದು ಸದರಿ ವಿಷದ ಬಗ್ಗೆ ನನ್ನ ಪಿರ್ಯಾದಿ ಏನಂದರೆ ನನ್ನ ತಮ್ಮ ಅನೀಲ ಈತನು ಕೂಲಿ ಕೆಲಸಮಾಡಿಕೊಂಡಿದ್ದು ಪ್ರತಿ ದಿನದಂತೆ ನನ್ನ ತಮ್ಮ ದಿನಾಂಕ: 28/09/2019 ರಂದು ಬೆಳಿಗ್ಗೆ ನಮ್ಮ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋಗಿರುತ್ತಾನೆ ನಂತರ ರಾತ್ರಿ
07-45 ಪಿ,ಎಮ್,ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನನ್ನ ತಮ್ಮನ ಗೆಳೆಯನಾದ ಶಿವರಾಜ ತಂದೆ ಪರಮೇಶ್ವ/ರ ಪೂಜಾರಿ ಈತನು ನನ್ನ ಮೊಬೈಲಗೆ ಕರೆಮಾಡಿ ತಿಳಿಸಿದ್ದೆನಂದರೆ ನಾನು ಮತ್ತು ನಿಮ್ಮ ತಮ್ಮ ಅನೀಲ ಇಬ್ಬರು ಕೂಡಿ ಹೊಸುರು ಊರಿನಲ್ಲಿ ಸೆಂಟ್ರಿಂಗ ಕೆಲಸ ಮುಗಿಸಿಕೊಂಡು ಮೊ,ಸೈಕಲ ನಂ:ಕೆ,ಎ-28
ಇಎಮ್-1045 ನೇದ್ದರ ಮೇಲೆ ಬರುತ್ತಿದ್ದಾಗ ಮೊಟಾರ ಸೈಕಲ ನಾನೆ ನಡೆಸುತ್ತಿದ್ದೆನು ಮಣ್ಣೂರ ಗ್ರಾಮ ಇನ್ನು 2 ಕಿ.ಮಿ ಇದ್ದಂತೆ
7-30 ಪಿ,ಎಮ್,ಸುಮಾರಿಗೆ ಮೋಟಾರ ಸೈಕಲ ಸ್ಲೀಪ್ ಆಗಿ ಜಾರಿ ಬಿದ್ದಿರುತ್ತೇವೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಸಂಭಂದಿಕರು ಮತ್ತು ನನ್ನ ಕಾಕಾನ ಮಗನಾದ ಕಾಶಿನಾಥ @ ಅನಿಕೇತ ಮನೋಹರ ಮೋರೆ ಇವರಿಗೆ ವಿಷಯ ತಿಳಿಸಿ ಒಂದು ಖಾಸಗಿ ವಾಹನ ತಗೆದುಕೊಂಡು ಸದರಿ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮನಿಗೆ ತಲೆಗೆ ,ಹಣೆಗೆ ಮತ್ತು ಕೈಕಾಲುಗಳಿಗೆ ಬಲವಾದ ಪೆಟ್ಟು ಹತ್ತಿ ರಕ್ತಸ್ರಾವವಾಗಿ ಗಂಭೀರಗಾಯಗೊಂಡು ರಸ್ತೆಯ ಬದಿ ಬಿದ್ದಿದ್ದನು ಶಿವರಾಜ ಪೂಜಾರಿ ಈತನಿಗೆ ಸಣ್ಣ-ಪುಟ್ಟಗಾಯಗಳಾಗಿರುವದು ಕಂಡು ಬಂತು ನಂತರ ನನ್ನ ತಮ್ಮನಿಗೆ ನಾನು ಮತ್ತು ನನ್ನ ಸಂಗಡ ಬಂದವರು ಕೂಡಿಕೊಂಡು ಅದೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೊಲಾಪೂರದ ಸಿಟಿ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿದೆವು ನನ್ನ ತಮ್ಮ ಚಿಕಿತ್ಸೆ ಫಲಕಾರಿ ಆಗದೆ ಅಂದೆ ದಿನಾಂಕ:28/09/2019
ರಂದು 9-30 ಪಿ,ಎಮ್,ಸುಮಾರಿಗೆ ಸಿಟಿ ಆಸ್ಪತ್ರೇ ಸೊಲಾಪೂರದಲ್ಲಿ ಮೃತಪಟ್ಟಿರುತ್ತಾನೆ. ಕಾರಣ ನಮ್ಮ ಗ್ರಾಮದ ಶಿವರಾಜ ತಂದೆ ಪರಮೇಶ್ವುರ ಪೂಜಾರಿ ಈತನು ನನ್ನ ತಮ್ಮನ ಗೆಳೆಯನ ಮೊ,ಸೈಕಲ ನಂಬರ ಕೆ,ಎ-28
ಇಎಮ-1045 ನೇದ್ದನ್ನು ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ಮೋಟಾರ ಸೈಕಲ ಸ್ಲೀಪ್ ಆಗಿ ಬಿದ್ದು ಸದರಿ ಅಫಘಾತದಿಂದ ನನ್ನ ತಮ್ಮ ಅನೀಲ ಈತನು ಮೃತಪಟ್ಟಿರುತ್ತಾನೆ ಆದ್ದರಿಂದ ಸದರಿ ಶಿವರಾಜ ತಂದೆ ಪರಮೇಶ್ವ್ರ ಪೂಜಾರಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣಗಳು :
ವಾಡಿ ಠಾಣೆ : ಶ್ರೀ ಸೀತಾರಾಮ
ತಂದೆ ಜಗನ್ನಾಥ ರಾಠೋಡ ಸಾ:ಸೇವಾಲಾಲನಗರ ತಾಂಡಾ ವಾಡಿ ರವರು ಮತ್ತು ನನ್ನ ತಮ್ಮ ರಾಮು ಪರ್ಶಿ ವ್ಯಾಪಾರ
ಮಾಡಿಕೊಂಡು ಉಪ ಜೀವಿಸುತ್ತೆನೆ. ನಾನು ಹುಟ್ಟಿದಾಗಿನಿಂದ ಅಂಗವಿಕಲನಾಗಿದ್ದು ನಡೆಯಲು ಬರುವದಿಲ್ಲ.
ಈಗ ಸುಮಾರು 15 ದಿವಸಗಳ ಹಿಂದೆ ಕಡಬುರ ಗ್ರಾಮದ ಸಂತೋಷ ತಂದೆ ದೀಪ್ಲಾ ಚವ್ಹಾಣ ಇವರ ಖಣಿಯಿಂದ
ಪರ್ಶಿಯನ್ನು ತೆಗೆದುಕೊಂಡು ಹಲಕಟ್ಟಾ ಗ್ರಾಮದ ಭೀಮಾ ಎನ್ನುವರಿಗೆ 22 ಸಾವಿರ ರೂಪಾಯಿಗೆ
ಮಾರಾಟ ಮಾಡಿದ್ದು ಅದರಲ್ಲಿ 21 ಸಾವಿರ ರೂಪಾಯಿ ನಗದು ಹಣ ಸಂತೋಷಗೆ ಕೊಟ್ಟಿದ್ದು ಇನ್ನು 01 ಸಾವಿರ ರೂಪಾಯಿ
ಕೊಡುವದು ಬಾಕಿ ಇರುತ್ತದೆ. ಸಂತೋಷ ಇತನು ನಾನು ಕೊಡಬೇಕಾದ 01 ಸಾವಿರ ರೂಪಾಯಿ
ಹಣವನ್ನು ಕೇಳಿ ಜಗಳ ಮಾಡುತ್ತಿದ್ದನು. ನಾನು 2-3 ದಿನಗಳಲ್ಲಿ
ನಿನಗೆ ಕೊಡಬೇಕಾದ 01 ಸಾವಿರ ರೂಪಾಯಿ ಕೊಡುತ್ತೆನೆ ಅಂತಾ ಹೇಳಿದೆನು. ನಂತರ ದಿನಾಂಕ 10/10/2019 ರಂದು ಬೆಳಗ್ಗೆ
11-30 ಗಂಟೆ ಸುಮಾರು ನಾನು ಮತ್ತು ಮಿಥುನ ತಂದೆ ಪಾಂಡು ಚವ್ಹಾಣ ಕೂಡಿಕೊಂಡು ಮೊಟರ
ಸೈಕಲ ಮೇಲೆ ಕಡಬುರ ಗ್ರಾಮದಲ್ಲಿರುವ ಸೋಮು ಇತನ ಖಣಿಗೆ ಹೊರಟಿದ್ದೆವು. ಆಗ ಬಳವಡಗಿ ಬ್ರೀಡ್ಜ್ ದಾಟುತ್ತಿದ್ದಂತೆ
ಸಂತೋಷ ತಂದೆ ದೀಪ್ಲಾ ಚವ್ಹಾಣ ಇತನು ನನ್ನ ಮೊಟರ ಸೈಕಲ
ಮುಂದುಗಡೆ ಬಂದು ತಡೆದು ನಿಲ್ಲಿಸಿದನು. ಆಗ ನಾನು ಯಾಕೇ ತಡೆದು ನಿಲ್ಲಿಸಿದಿ ಅಂತಾ ಕೇಳಿದ್ದಕ್ಕೆ
ಆತನು ‘’ಬೋಸಡಿ ಮಗನೇ ನನಗೆ ಕೊಡಬೇಕಾದ 01 ಸಾವಿರ ರೂಪಾಯಿ
ಕೊಡು ಅಂತಾ ಹೇಳಿದರೆ ಇಂದು ನಾಳೆ ಅಂತಾ ಸುಳ್ಳು ಹೇಳುತ್ತಿದ್ದಿ ನಿನ್ನ ಸೊಕ್ಕು ಹೆಚ್ಚಾಗಿದೆ’’ ಅಂತಾ ಅಂಗವಿಕಲ
ಇದ್ದ ನನಗೆ ಎತ್ತಿ ಕೆಳಗಡೆ ಬಿಸಾಕಿ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿ ಕಾಲಿನಿಂದ ಒದೆಯ ಹತ್ತಿದನು.
ಆಗ ನನ್ನ ಸಂಗಡ ಇದ್ದ ಮಿಥುನ ತಂದೆ ಪಾಂಡು ಹಾಗೂ ಹೊಟೇಲದಲ್ಲಿ ಕುಳಿತ ಬಾದಲ ತಂದೆ ಹೀರಾಸಿಂಗ ರವರು
ಕೂಡಿ ನನಗೆ ಹೊಡೆಯುವದನ್ನು ಬಿಡಿಸಿದರು. ಆಗ ಸಂತೋಷ ಇತನು ‘’ಬೋಸಡಿ ಮಗನೇ
ಇವರು ಬಂದು ಜಗಳ ಬಿಡಿಸಿದ್ದರಿಂದ ನೀನು ಉಳಿದಿ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತಿದ್ದೆ ಅಂತಾ’’ ಜೀವದ ಬೆದರಿಕೆ
ಹಾಕುತ್ತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ರಾಜಕುಮಾರ@ ಕುಮಾರ ತಂದೆ ಸಿದ್ದಪ್ಪ ತಳವಾರ ಸಾ|| ಕೆರಕನಳ್ಳಿ ತಾ||ಅಫಜಲಪೂರ ರವರು ತಮ್ಮ ಗ್ರಾಮದಲ್ಲಿ ನಮ್ಮ ಮನೆಯ ಎದುರುಗಡೆ ನಮ್ಮ ಗ್ರಾಮದ ಮಲಕಣ್ಣ ತಂದೆ ಬುದ್ದಣ್ಣ ಹೂಗಾರ ಈವರ ಮನೆ ಇರುತ್ತದೆ ಸದರಿ ಮಲಕಣ್ಣನ ಮನೆಯ ಪಕ್ಕ 4 ಫೀಟ ಸರ್ಕಾರಿ ಶಾಲೆಯ ಜಾಗ ಇರುತ್ತದೆ ಸದರಿ ಜಾಗದಲ್ಲಿ (ಸಂಧಿ) ನಾವು ಹಾದು ಹೋಗುತ್ತಿರುತ್ತೇವೆ ನಾವು ಅಲ್ಲಿಂದ ಹಾದು ಹೋಗಬಾರದೆಂದು ಮಲಕಣ್ಣನು 3 ವರ್ಷಗಳಿಂದ ನಮ್ಮ ತಂದೆಯವರೊಂದಿಗೆ ಈ ಮೋದಲು ತಕರಾರು ಮಾಡುತ್ತಾ ಬಂದಿರುತ್ತಾನೆ.ಹಿಗಿದ್ದು ಈಗ 15 ದಿನಗಳ ಹಿಂದೆ ಮಲಕಣ್ಣ ಈತನು ಕಟ್ಟಿಗೆಯನ್ನು ಕಡಿದುತಂದು ತನ್ನ ಮನೆಯ ಮುಂದಿನ ಕಟ್ಟೆಯ ಮೇಲೆಹಾಕಿದ್ದು ಸದರಿಯವನು ಕಟ್ಟಿಗೆ ಹಾಕಿದರಿಂದ ಆತನ ಮನೆಯ ಪಕ್ಕದಲ್ಲಿದ್ದ ಸರಕಾರಿ ಶಾಲೆಗೆ ಸಂಭಂಧಿಸಿದ ಸಂಧಿಯಲ್ಲಿಂದ ನಮಗೆ ಹಾದು ಹೋಗದಂತೆ ಆಗಿರುತ್ತದೆ.ಆದ್ದರಿಂದ ದಿನಾಂಕ:07/10/2019 ರಂದು 6-00 ಪಿ,ಎಮ್,ಸುಮಾರಿಗೆ ಮಲಕಣ್ಣ ಮತ್ತು ಅವನ ಮಗನಾದ ಬುದ್ದಣ್ಣ ಹಾಗೂ ಮಲಕಣ್ಣನ ಹೆಂಡತಿಯಾದ ಶಶಿಕಲಾ ಮೂರು ಜನರು ತಮ್ಮ ಮನೆಯ ಮುಂದಿನ ಸಿ,ಸಿ ರಸ್ತೆ ಮೇಲೆ ನಿಂತಾಗ ನಾನು ಮತ್ತು ನನ್ನ ತಂದೆ ಇಬ್ಬರು ಕೂಡಿಕೊಂಡು ಅವರ ಹತ್ತೀರ ಹೋದೆವು ಆಗ ನಮ್ಮ ತಂದೆಯವರು ಸದರಿ ಮಲಕಣ್ಣನಿಗೆ ನೀವು ಹಾಕಿದ ಕಟ್ಟಿಗೆಯನ್ನು ತಗೆಯಿರಿ ಇದರಿಂದ ನಮಗೆ ಹಾದು ಹೋಗಲು ತೊಂದರೆ ಆಗುತ್ತಿದೆ ಅಂತ ಅಂದಾಗ ಬುದ್ದಣ್ಣನು ಏ ಬೋಸಡಿ ಮಗನೆ ನಮ್ಮ ಜಾಗದಲ್ಲಿ ನಾವು ಕಟ್ಟಿಗೆ ಹಾಕಿದ್ದಿವಿ ಅದನ್ನು ನಿವ್ಯಾರು ತಗಿ ಅನ್ಯಾಕ ಅಂತ ಅಂದು ನನ್ನ ತಂದೆಗೆ ಎದೆಯ ಮೇಲಿನ ಅಂಗಿ ಹಿಡಿದನು ನಾನು ಬಿಡಿಸಲು ಹೊದಾಗ ಬುದ್ದಣ್ಣನು ನನಗೆ ನೂಕಿದನು ಆಗ ಮಲಕಣ್ಣನು ಇವತ್ತು ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಅಂದು
ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ತಂದೆಗೆ ತೆಲೆಗೆ ಜೋರಾಗಿ ಹೊಡೆದನು ಆಗ ನನ್ನ ತಂದೆ ತಲೆಯ ಮೇಲೆ ಕೈ ಇಟ್ಟುಕೊಂಡಾಗ ಶಶಿಕಲಾ ಇವಳು ನನ್ನ ತಂದೆಯ ರಟ್ಟೆಗೆ ಕಚ್ಚಿರುತ್ತಾಳೆ ಆಗ ನಾನು ಮತ್ತು ಶಿವರಾಯ ತಂದೆ ಗುರಪ್ಪ ಚಿಂಚೊಳಿ ಮತ್ತು ಭಾಗಣ್ಣ ತಂದೆ ದತ್ತಪ್ಪ ಜಮಾದಾರ ಮೂರು ಜನ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರಕ್ಕೆ ತಂದು ಸರಕಾರಿ ಆಸ್ಪತ್ರೇಯಲ್ಲಿ ಉಪಚಾರ ಕೊಡಿಸಿ ನಂತರ ನಮ್ಮ ತಂದಗೆ ಕಲಬುರ್ಗಿಗೆ ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಿ ಜಯದೇವ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿರುತ್ತೇವೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.