Police Bhavan Kalaburagi

Police Bhavan Kalaburagi

Thursday, April 29, 2021

BIDAR DISTRICT DAILY CRIME UPDATE 29-04-2021

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-04-2021

 

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 49/2021 ಕಲಂ 18(ಸಿ) ಡ್ರಗ್ಸ್ ಮತ್ತು ಕಾಸ್ಮೆಟಿಕ್ ಕಾಯ್ದೆ 194 ಮತ್ತು ಕಲಂ 7 ಎಸೆನ್ಷಿಯಲ್ ಕಮಾಡಿಟಿಸ್ ಕಾಯ್ದೆ 1955 :-

ದಿನಾಂಕ 28/04/2021 ರಂದು 1210 ಗಂಟೆಗೆ ಶ್ರೀಸರಣಬಸಪ್ಪ ಹನುಮನಾಳ ಸಹಾಯಕ ಔಷಧನಿಯಂತ್ರಕಕರು ಬೀದರರವರು ಪೊಲೀಸ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ, ದಿನಾಂಕ 27/04/2021 ರಂದು 1343 ಗಂಟೆಯಿಂದ ಸುವರ್ಣನ್ಯೂಜ್ಚಾನೆಲನಲ್ಲಿ ಇನ್ನಿತರ 4 ವಿಡಿಯೊಗಳಜೊತೆಗೆ ಛಾಯಾಚಿತ್ರಗಳುವೈರಲಆಗುತ್ತಿದ್ದು ರಾಜುಪಾಂಡೆ ಬೀದರ ಈತನು ಕಾಳಸಂತೆಯಲ್ಲಿ ಚುಚ್ಚುಮದ್ದನ್ನು 27 ಸಾವಿರ, 30 ಸಾವಿರವರೆಗೆ ಮಾರಾಟಮಾಡುತ್ತಿರುವುದಾಗಿ ಮಾದ್ಯಮಗಳಿಂದ ಬೆಳಕಿಗೆಬಂದಿದೆ ಕುರಿತು ವಿಚಾರಿಸಲಾಗಿ ವಿಡಿಯೋದಲ್ಲಿರು  ವ್ಯೆಕ್ತಿಯು ನಮ್ಮ ಇಲಾಖೆಗೆ ಸಂಬಂಧ ಇಲ್ಲದಿರುವುದರಿಂದ ಈತನು ಬೀದರನ ಗುದಗೆ ಆದ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದುಬಂದಿರುತ್ತದೆ. ಮಾಧ್ಯಮಗಳ ಪ್ರಸಾರದಿಂದ ಜನಸಾಮಾನ್ಯರಲ್ಲಿ ನಕಾರಾತ್ಮಾಕ ಭಾವನೆ ಉಂಟಾಗುತ್ತಿದೆ ಇದರಿಂದ ಬೀದರನಗರದಲ್ಲಿ ಜನಸಾಮನ್ಯರು ಹಾಗೂ ಅಧಿಕಾರಿಳು ಗೊಂದಲಕ್ಕೆ ಈಡಾಗಿದ್ದು ವಿಡಿಯೊದಲ್ಲಿರುವ ರಾಜುಪಾಂಡೆರವರ ಕುರಿತು ತನಿಖೆ ನಡೆಯಿಸಿ ಅಂತಾ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 13/2021 ಕಲಂ  379 ಐಪಿಸಿ :-

 

ದಿನಾಂಕ 28-04-2021 ರಂದು 18;00 ಗಂಟೆಗೆ ಶ್ರೀ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೇಡ ವಯ 70 ವರ್ಷ ಸಾ ರಾಮಚಂದ್ರನಗರ ನೌಬಾದ ಬೀದರು ರವರು ಠಾಣೆಗೆ ಹಾಜರಾಗಿ ದೂರು ನೀಡಿದರ  ಸಾರಾಂಶವೆನೆಂದರೆ ನಿಶಾ ಕಂಪನಿಯಲ್ಲಿ ಸುಮಾರು 7 ವರ್ಷಗಳಿಂದ ಸೆಕ್ಯೂರಿಟಿ ಸುಪರವೈಜರ್ ಎಂದು ಬೀದರ ಜಿಲ್ಲೆಯಲ್ಲಿರುವ ಸುಮಾರು 270 ಗೋಪುರಗಳ ಪೇಟ್ರೊಲಿಂಗ್ ನೋಡಿಕೊಳ್ಳುತ್ತಿದ್ದು ಹೀಗಿರಲು ದಿನಾಂಕ 30-03-2021 ರಂದು ರಾತ್ರಿ 01:30 ಗಂಟೆಯ ಸುಮಾರಿಗೆ ಮನ್ನಳ್ಳಿ ಗ್ರಾಮದ ವಗದಾಳೆ ಪೇಟ್ರೊಲಿಂಗ್ ಪಂಪ್ ಹತ್ತಿರ ಅಳವಡಿಸಿರುವ ಯು.ಬಿ.ಡಿ.ಆರ್ 901- ಇನ್-1115044 ಕ್ಕೆ ಎರಟೆಲ್ ಗೋಪುರಕ್ಕೆ   ಹೋಗಿ ನೋಡಲಾಗಿ ಅದಕ್ಕೆ ಅಳವಡಿಸಿದಂತಹ ಅಮರ ರಾಜ ಕಂಪನಿಯ (2 ವೋಲ್ಟೇಜ್) 600 ಎ.ಹೆಚ್ 24 ಬ್ಯಾಟರಿಗಳು ಕಳುವಾಗಿರುತ್ತವೆ. ಇದನ್ನು ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಯಾವುದೇ ಸುಳಿವು ಸಿಗದೇ ಇದ್ದಾಗ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದಾಗ ಠಾಣೆಗೆ ದೂರು ಕೊಡಲು ತಿಳಿಸಿದಾಗ ಕಾರಣ ತಡವಾಗಿ ಬಂದು ದೂರು ಸಲ್ಲಿಸುತ್ತೇನೆ ಇವುಗಳ ಅಂದಾಜು ಕಿಮ್ಮತ್ತು 24,000/- ರೂ.ಗಳಾಗಬಹುದು ಸದರಿ ಗೋಪುರಕ್ಕೆ ಸಿ.ಸಿ ಕ್ಯಾಮರಾ ಅಳವಡಿಸಿದ್ದು ಅದಕ್ಕೆ ಟೇಪನಿಂದ ಕಳ್ಳರು ಸುತ್ತಿದ ಕಾರಣ ಯಾರ ಭಾವಚಿತ್ರಗಳು ಬಂದಿರೋದಿಲ್ಲ. ಸದರಿ ಬ್ಯಾಟರಿಗಳನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 30-03-2021 ರಂದು ರಾತ್ರಿ 01;000 ಗಂಟೆಯಿಂದ 01;30 ಗಂಟೆಯ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 25/2021 ಕಲಂ 15(ಎ), 32(3) ಕೆ.ಇ. ಕಾಯ್ದೆ :-

 

ದಿನಾಂಕ 28/04/2021 ರಂದು 1800 ಗಂಟೆಗೆ ಸುವರ್ಣಾ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಅಯಾಸಪೂರ ಕ್ರಾಸ ಹತ್ತಿರ   ಪೆಟ್ರೋಲಿಂಗ ಕರ್ತವ್ಯದ ಮೇಲೆ ಇದ್ದಾಗ  ಕಮಠಾಣಾ  ಗ್ರಾಮದ ಅಂಬೆಡ್ಕರ ಚೌಕ ಹತ್ತಿರ ನಾಗೇಶ ತಂದೆ ಗಣಪತಿ ಬಾವಗೆ  ಸಾ|| ಕಮಠಾಣಾ  ಇತನು ತನ್ನ ಹೊಟಲ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಸರಾಯಿ , ನೀರು  ಮತ್ತು ಗ್ಲಾಸ ಕೊಟ್ಟು ಸರಾಯಿ ಕುಡಿಯಲು ಅನುವು ಮಾಡಿಕೊಡುತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಕಮಠಾಣಾ ಗ್ರಾಮದ ಅಂಬೆಡ್ಕರ ಚೌಕ ಸಮೀಪ ಹೊಗಿ  ನಿಂತು ನೊಡಲಾಗಿ ಅಲ್ಲಿ ಹೋಟಲ ಮುಂದುಗಡೆ ಒಬ್ಬ ವ್ಯಕ್ತಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ  ಸರಾಯಿ , ನೀರು  ಮತ್ತು ಗ್ಲಾಸ ಕೊಟ್ಟು ಸರಾಯಿ ಕುಡಿಯಲು ಅನುವು  ಮಾಡಿಕೊಡುತಿದ್ದನ್ನು ನೋಡಿ ಖಾತ್ರಿ ಪಡಿಸಿಕೊಂಡು  ದಾಳಿ ಮಾಡಿ   ಹಿಡಿದು ವಿಚಾರಸಿಲು ಅವನು ತನ್ನ ಹೆಸರು ನಾಗೇಶ ತಂದೆ ಗಣಪತಿ ಬಾವಗೆ  ವಯ-21 ಜಾ|| ಗೋಂಡ ಎಸ್.ಟಿ ಉ|| ಕೂಲಿ  ಸಾ|| ಕಮಠಾಣಾ  ಅಂತ ತಿಳಿಸಿದನು.  ಅಲ್ಲಿ ಸ್ಥಳದಲ್ಲಿ ಒಂದು ಗೊಬ್ಬರ ಚೀಲ ಇದ್ದು ಅದನ್ನು ಪರೀಶಿಲಿಸಿ ನೋಡಲಾಗಿ ಇದರಲ್ಲಿ  ಔಡಿರಟಿಚಿಟ ಅಠಛಿಜ  ಅಂತ ಬರೆದಿದ್ದ ಸರಾಯಿ ತುಂಬಿದ ಟೆಟ್ರಾ ಪ್ಯಾಕೇಟಗಳು ಇರುತ್ತವೆ. ಸದರಿ ಸರಾಯಿ ಪ್ಯಾಕೇಟಗಳು  90 ಎಮ್ ಎಲ್ ವುಳ್ಳ ಇದ್ದು ಎಣಿಕೆ ಮಾಡಿ ನೋಡಲಾಗಿ ಒಟ್ಟು 22 ಟೆಟ್ರಾ ಸರಾಯಿ ತುಂಬಿದ ಪೌಚಗಳು ಇರುತ್ತವೆ. ಪ್ರತಿ ಪೌಚಗಳ  ಮೇಲೆ ರೂ 35.13 ಅಂತ ಬೆಲೆ ಬರೆದಿದು ಇದ್ದು ಅವುಗಳ ಒಟ್ಟು ಕಿಮ್ಮತ್ತು ರೂ 772/- ಆಗುತ್ತದೆ. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 73/2021 ಕಲಂ 269, 271 ಐಪಿಸಿ ಕರ್ನಾಟಕ ಎಪಿಡೆಮಿಕ್ ಡಿಸಿಸೆಸ್ ಕಾಯ್ದೆ 2020:-  

 ದಿನಾಂಕ:27/04/2021 ರಂದು 1330 ಗಂಟೆಗೆ ಶ್ರೀ ಕೃಷ್ಣಕುಮಾರ ಪಾಟೀಲ ಪಿ.ಎಸ್.. (ಕಾ.ಸೂ) ಮತ್ತು ಜೊತೆಯಲ್ಲಿ  ಪ್ರೋ.ಪಿ.ಎಸ್.ಐ ಹಾಗೂ ಸಿಬ್ಬಂದಿಯವರೊಂದಿಗೆ  ಕೋವಿಡ್-19 2ನೇ ಅಲೆ ತಡೆಗಟ್ಟಲು ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರ ಆದೇಶ ಸಂಖ್ಯೆ:ಕಂ/ಎಮ್..ಜಿ/ ಸಿಆರ್-08/2021-22 ದಿನಾಂಕ:27/04/2021 ನೇದರಂತೆ ಬೀದರ ಜಿಲ್ಲೆಯಲ್ಲೆಯಾದ್ಯಂತ ಕರೋನಾ ವೈರಸ ಸೊಂಕು ಹರಡದಂತೆ ಸಾರ್ವಜನಿಕರ ರೋಗ್ಯ ಹಾಗು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ದಿನಾಂಕ:27-04-2021 ರಂದು ರಾತ್ರಿ 09.00 ಗಂಟೆಯಿಂದ ದಿನಾಂಕ:12/05/2021 ರಂದು ಬೆಳಿಗ್ಗೆ 06.00 ಗಂಟೆ ವರೆಗೆ ನಿಷಾಧಾಜ್ಞಾ ಜಾರಿಗೊಳಿಸಿ ಸಂಪೂರ್ಣ ಲಾಕಡೌನ ಆದೇಶ ಹೋರಡಿಸಿದ್ದು, ಸದರಿ ಆದೇಶದ ಅನುಪಾಲನೆ ಮಾಡಲು  ದಿನಾಂಕ:28/04/2021 ರಂದು 12.37 ಗಂಟೆಗೆ  ಪಟ್ರೋಲಿಂಗ ಮಾಡುತ್ತಾ ಚಿಟಗುಪ್ಪಾ ಪಟ್ಟಣದ ಗಾಂಧಿ ವೃತ್ತದ ಹತ್ತಿರ ಇರುವ ಪಾರಾ ಜಂಕ್ಷನ ಬಟ್ಟೆ ಅಂಗಡಿಯ ಮಾಲಿಕನು ತನ್ನ ಬಟ್ಟೆ ಅಂಗಡಯಲ್ಲಿ ಸಾರ್ವಜನಿಕರಿಗೆ ಬಟ್ಟೆ ಮಾರಾಟ ಮಾಡುತ್ತಿರುವಾಗ ಚೆಕ್ ಮಾಡಲು ಸದರಿ ಅಂಗಡಿಯಲ್ಲಿ ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 10-15 ಜನ ಸಾರ್ವಜನಿಕ ಗಿರಾಕಿಗಳಿಗೆ ಬಟ್ಟೆ ಮಾರಾಟ ಮಾಡುತ್ತಿರುವುದು ಧೃಡಪಟ್ಟಿದೆ. ಸದರಿ ಬಟ್ಟೆ ಅಂಗಡಿ ಮಾಲಿಕನಿಗೆ ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಸುನೀಲ ತಂದೆ ಸಂಗಣ್ಣ ಪಾರಾ ವಯ: 45 ವರ್ಷ ಸಾ/ ಚಿಟಗುಪ್ಪಾ ಅಂತಾ ತಿಳಿಸಿರುತ್ತಾನೆ. ಅಲ್ಲಿರುವವರ ಹೆಸರು ಮತ್ತು ವಿಳಾಸ ವಿಚಾರಿಸಲು 1] ವಿಜಯಕುಮಾರ ತಂದೆ ಚಂದ್ರಶೇಟ್ಟಿ ಕಂಚನಾಳ ವಯ: 40 ವರ್ಷ ಸಾ/ ಮುಸ್ತರಿ, 2] ಭೀಮರಾವ ತಂದೆ ಗುಂಡೆರಾವ ಚೌಹಾಣ, ವಯ: 60 ವರ್ಷ ಸಾ/ ಮಾರ್ಕಂಡೇಶ್ವರಗಲ್ಲಿ ಚಿಟಗುಪ್ಪಾ, 3] ಗೋಪಾಲ ತಂದೆ ಭೀಮರಾವ ಚೌಹಾಣ, ವಯ: 22 ವರ್ಷ ಸಾ/ ಮಾರ್ಕಂಡೇಶ್ವರಗಲ್ಲಿ ಚಿಟಗುಪ್ಪಾ, 4] ಮೀನಾಕ್ಷಿ ತಂದೆ ಮನೋಹರ ಬೇಳಮಗಿ, ವಯ: 19 ವರ್ಷ ಸಾ/ ಫಾತ್ಮಾಪೂರ ಅಂತಾ ತಿಳಿಸಿರುತ್ತಾರೆ. ಸದರಿ ಬಟ್ಟೆ ಅಂಗಡಿ ಮಾಲಿಕನಾದ ಸುನೀಲ ಈತನು ಸರಕಾರದ ಆದೇಶವನ್ನು ಉಲ್ಲಂಘಿಸಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ಗ್ರಾಮಿಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 50/2021 ಕಲಂ 302 ಐಪಿಸಿ :-

 

ದಿನಾಂಕ: 28/04/2021 ರಂದು 1215 ಗಂಟೆಗೆ ಶ್ರೀ ಸುನೀಲ ತಂದೆ ರಾಮ ಕಾಂಬಳೆ ಸಾ; ಭಾಟಸಾಂಗವಿ ತಾ; ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ಇವರ ತಮ್ಮ   ಅನೀಲ ತಂದೆ ರಾಮ ಕಾಂಬಳೆ ಸಾ; ಭಾಟಸಾಂಗವಿ ಇವನಿಗೆ ದಿನಾಂಕ 27/04/2021 ರಂದು ಸಾಯಂಕಾಲ 7 ಗಂಟಗೆ ಕುಲದೀಪ ತಂದೆ ದಿಲೀಪ ಸೂರ್ಯವಂಶಿ ಸಾ; ಕಾಸರತುಗಾಂವ ಇವನು ಮನೆಗೆ ಬಂದು ಜಬರದಸ್ತಿಯಿಂದ ಮೋಟಾರ ಸೈಕಲ ಮೇಲೆ ಕರೆದುಕೊಂಡು ಶಿವಣಿ ಕ್ರಾಸಗೆ ಕರೆದುಕೊಂಡು ಹೋಗಿ ಅಲ್ಲಿ ಆತನ ಕೆಲವು ಗೆಳೆಯರಿಗೆ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಮತ್ತು ನಮಗೆ ಅಪಘಾತ ಆಗಿರುತ್ತದೆ ಅಂತ ಹೇಳಿ ಓಡಿ ಹೋಗಿರುತ್ತಾನೆ. ಆದ್ದರಿಂದ   ಈ ಕೊಲೆ ಮಾಡಿದ ಬಗ್ಗೆ ವಿಚಾರಣೆ ಮಾಡಿ ಆತನಿಗೆ ಕಠಿನ ಶಿಕ್ಷೆ ಕೊಡಬೇಕಾಗಿ ತಮ್ಮಲ್ಲಿ ವಿನಂತಿ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 28/2021 ಕಲಂ 269, 271 ಐಪಿಸಿ ಮತ್ತು 5(4) ಕರ್ನಾಟಕ ಸಾಕ್ರಮಿಕ ರೋಗಗಳ ಆದೇಶ ಕಾಯ್ದೆ 2020 :- 

 ದಿನಾಂಕ:28/04/2021 ರಂದು ಕೀರಣ ಪಿಎಸ್ಐ (ಕಾಸು) ಕುಶನೂರ ಪೊಲೀಸ್ ಠಾಣೆ ರವರು  ಸಾಯಂಕಾಲ ಸಿಬ್ಬಂದಿಯೊಂದಿಗೆ   ಕೋವಿಡ್ 19 ಕಾಯಿಲೆ ನಿಮಿತ್ಯ ಲಾಕ್ ಡೌನ್ ಇದ್ದುದರಿಂದ ಏರಿಯಾದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ ಲಾಕ್ಡೌನ್ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರು ಹೊರಡಿಸಿರುವ ಆದೇಶದನ್ವಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾ ರಾತ್ರಿ 1915 ಗಂಟೆಗೆ ಕುಶನೂರ ಗ್ರಾಮದ ಗಣೇಶ ಕಾಂಪ್ಲೇಕ್ಸ್ ಹತ್ತಿರ ಹೋದಾಗ ಎದುರುಗಡೆಯ ಪೊದ್ದಾರ ಕಾಂಪ್ಲೇಕ್ಸ್ನಲ್ಲಿರುವ ಬಸವೇಶ್ವರ ಆಯಿಲ್ ಮೀಲ್ನ ಮಾಲೀಕ ತನ್ನ ಆಯಿಲ್ ಮೀಲ್ ಅಂಗಡಿಯನ್ನು ತೆಗೆದುಟ್ಟುಕೊಂಡು ಆಯಿಲ್ ಮಷೀನ್ ಚಾಲನೆಯಲ್ಲಿಟ್ಟುಕೊಂಡು ಗಿರಾಕಿಗಳಿಗೆ ದವಸಧಾನ್ಯಗಳಿಂದ ಎಣ್ಣೆ ತೆಗೆದುಕೊಡುತ್ತಿದ್ದನು. ಪೊಲೀಸ್ ವಾಹನವನ್ನು ನೋಡಿ ಅಂಗಡಿಯ ಹತ್ತಿರ ಸೇರಿದ ಗಿರಾಕಿಗಳು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಅಂಗಡಿಯ ಮಾಲೀಕನಿಗೆ ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಬಾಬುರಾವ ತಂದೆ ಜಿರ್ಗೆ : 56 ವರ್ಷ : ವ್ಯಾಪಾರ ಜಾ:ಲಿಂಗಾಯತ ಸಾ: ಠಾಣಾ ಕುಶನೂರ ಗ್ರಾಮ ತಾ: ಕಮಲನಗರ ಅಂತ ತಿಳಿಸಿರುತ್ತಾನೆ. ಸದರಿಯವನು ಸರಕಾರವು ಕೋವಿಡ್ 19(ಕರೋನಾ) ರೋಗವನ್ನು ಸಾಂಕ್ರಾಮಿಕ ರೋಗ ಎಂದು ಪರಿಗಣಿಸಿ ಹೊರಡಿಸಿದ ಲಾಕ್ಡೌನ್ ಆದೇಶ ಉಲ್ಲಂಘಿನೆ ಮಾಡಿ ತನ್ನ ಅಂಗಡಿಯನ್ನು ತೆಗೆದಿಟ್ಟು ಸಾರ್ವಜನಿಕರಿಗೆ ಎಣ್ಣೆ ಮಾರಾಟ ಮಾಡುತ್ತಾ ಸಾರ್ವಜನಿಕರು ಒಂದೇಡೆ ಸೇರುವಂತೆ ಅನುವು ಮಾಡಿಕೊಟ್ಟಿರುತ್ತಾನೆ. ಇದರಿಂದ ಕೋವಿಡ್ 19 ಸಾಂಕ್ರಾಮಿಕ ರೋಗವು ಒಬ್ಬರಿಂದೊಬ್ಬರಿಗೆ ಸೊಂಕು ಹರಡುವ ಸಾಧ್ಯತೆ ಇರುತ್ತದೆಂದು ಗೋತ್ತಿದ್ದು ಸಹ, ಇದರಿಂದ ತಮ್ಮ ಹಾಗು ಇತರರ ಪ್ರಾಣಕ್ಕೆ ಅಪಾಯಕಾರಿ ಸೊಂಕನ್ನು ಹರಡುವ ಸಂಭವ ಇದ್ದರೂ ಕೂಡ ನಿರ್ಲಕ್ಷ್ಯ ವಹಿಸಿ ತನ್ನ ಅಂಗಡಿಯನ್ನು ತೆರೆದಿಟ್ಟು ಅದೇಶ ಉಲ್ಲಂಘನೆ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.