Police Bhavan Kalaburagi

Police Bhavan Kalaburagi

Friday, December 6, 2019

KALABURAGI DISTRICT REPORTED CRIMES

ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ : 
ನರೋಣಾ ಠಾಣೆ : ದಿನಾಂಕ:05/12/2019 ರಂದು ಬೆಳಿಗ್ಗೆ 04-00 ಗಂಟೆಗೆ ನರೋಣಾ ಠಾಣಾ ವ್ಯಾಪ್ತಿಯ ಚಿಂಚನಸೂರ ಹಾಗೂ ಕಲ್ಲಹಂಗರಗಾ ರೋಡಿಗೆ ಇರುವ ಚಿಂಚನಸೂರ ಮಾಹಾಪೂರತಾಯಿ ದೇವಸ್ಥಾನಕ್ಕೆ ಹೋಗುವ ಕಮಾನ್ ಕ್ರಾಸ್ ಹತ್ತಿರ  ದರೋಡೆ ಮಾಡಲು ಹೊಂಚುಹಾಕಿ ಕುಳಿತಿದ್ದಾರೆ ಅಂತಾ ತಿಳಿದು ಬಂದ ಮೇರೆಗೆ ಪಿ.ಎಸ್.ಐ ನರೋಣಾ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು, ಬೆಳಿಗ್ಗೆ 5-30 ಗಂಟೆಗೆ ಚಿಂಚನಸೂರ ಹಾಗೂ ಕಲ್ಲಹಂಗರಗಾ ರೋಡಿಗೆ ಇರುವ ಚಿಂಚನಸೂರ ಮಾಹಾಪೂರತಾಯಿ ದೇವಸ್ಥಾನಕ್ಕೆ ಹೋಗುವ ಕಮಾನ್ ಕ್ರಾಸ್ ಹತ್ತಿರ ಸ್ವಲ್ಪ ದೂರದಲ್ಲಿ ನಮ್ಮ  ಜೀಪನ್ನು ನಿಲ್ಲಿಸಿ ನಮ್ಮ ವಾಹನದ ಲೈಟಿನ  ಬೆಳಕಿನಲ್ಲಿ ನೋಡಲಾಗಿ ಸುಮಾರು 7 ಜನರಿದ್ದು, ಅವರಲ್ಲಿ 2ಜನ ವ್ಯಕ್ತಿಗಳು ರೋಡಿನ ಆಚೆಗೊಬ್ಬ ಈಚೆಗೊಬ್ಬೆ ನಿಂತುಕೊಂಡು ತಮ್ಮ ಕೈಯಲ್ಲಿ ಒಂದು ಹಗ್ಗವನ್ನು ರೋಡಿಗೆ ಅಡ್ಡವಾಗಿ ಹಿಡಿದುಕೊಂಡಿದ್ದರು. ಎರಡೂ ಬದಿಯಲ್ಲಿ ನಿಂತು ಹಗ್ಗ ಹಿಡಿದ ವ್ಯಕ್ತಿಗಳ ಪಕ್ಕ ಒಂದುಕಡೆ 2ಜನ ಇನ್ನೊಂದು ಕಡೆ 3ಜನರು ತಮ್ಮ-ತಮ್ಮ ಕೈಯಲ್ಲಿ ಚಾಕು, ತಲವಾರ, ಹಿಡಿದುಕೊಂಡು ನಿಂತಿದ್ದು ಸದರಿಯವರು ರೋಡಿಗೆ ಹೋಗಿಬರುವ ವಾಹನಗಳಿಗಾಗಿ ಕಾಯುತ್ತಾ ನಿಂತಿದ್ದರು. ಆಗ ನಾವು ಸದರಿಯವರನ್ನು ಹಿಡಿಯಲು ಜೀಪಿನಿಂದ ಕೆಳಗೆ ಇಳಿದಾಗ ಸಮವಸ್ತ್ರದಲ್ಲಿದ್ದ ನಮಗೆ ನೋಡಿ ಎಲ್ಲರೂ ಓಡಲು ಪ್ರಾರಂಭಿಸಿದರು ಆಗ ನಾನು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ಬೆನ್ನುಹತ್ತಿ 4ಜನರನ್ನು ಹಿಡಿದಿದ್ದು, ನಮ್ಮ ಕೈಗೆ ಸಿಕ್ಕವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ 1)ಜೀವನ ತಂದೆ ಲಕ್ಷ್ಮಣ ಭಾವಿ, ಸಾ:ಚಿಂಚನಸೂರ ಗ್ರಾಮ, 2)ಮಾಪಣ್ಣಾ ತಂದೆ ಬಂಡೆಪ್ಪಾ ಮಾವಿನಕರ, ಸಾ:ಚಿಂಚನಸೂರ ಗ್ರಾಮ, 3)ದೇವಾ @ ದೇವಿಂದ್ರ ತಂದೆ ಲಕ್ಷ್ಮಣ ಮಾವಿನಕರ, ಸಾ:ಚಿಂಚನಸೂರ ಗ್ರಾಮ,  4)ಸನತ್ ತಂದೆ ರೇವಣಸಿದ್ದಪ್ಪಾ ಭಾವಿ, ಸಾ:ಚಿಂಚನಸೂರ ಗ್ರಾಮ, ಅಂತಾ ತಿಳಿಸಿರುತ್ತಾರೆ. ಓಡಿ ಹೋದವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಓಡಿ ಹೋದವರ ಹೆಸರು 5)ಸೋನಾಜಿ ತಂದೆ ಪ್ರಕಾಶ ಸಜ್ಜನ, 6)ರೋಹನ @ ಗುಂಡು ತಂದೆ ಪ್ರಕಾಶ ಕಾಂಬಳೆ, ಸಾ:ಎಲ್ಲರೂ ಚಿಂಚನಸೂರ ಗ್ರಾಮ, 7)ಶಿವು ತಂದೆ ಚಂದಪ್ಪಾ ವಾಗ್ದರ್ಗಿ, ಸಾ:ಮಡಕಿ ಗ್ರಾಮ ಅಂತಾ ತಿಳಿಸಿರುತ್ತಾರೆ. ವಶಕ್ಕೆ ಸಿಕ್ಕವರಿಗೆ ಪಂಚರ ಸಮಕ್ಷಮದಲ್ಲಿ ಅಂಗಶೋದನೆ ಮಾಡಿದಾಗ ಒಂದು ಬಟನ್ ಚಾಕು, ಒಂದು ಪಂಚ್‌, ಒಂದು ಪ್ಲಾಸ್ಟೀಕ್ ಕ್ಯಾರಿಬ್ಯಾಗದಲ್ಲಿ ಅಂದಾಜು ಅರ್ಧ ಕೀಲೊದಷ್ಟು ಖಾರದ ಪುಡಿ, ತಲವಾರ, ಒಂದು ಚಾಕು, ಒಂದು ಲಾಂಗ್, ಒಂದು ಬಿಳಿ ಬಣ್ಣದ ನೂಲಿನ ಹಗ್ಗ ಅಂದಾಜು 20 ಫೀಟ್ ಉದ್ದ ದೊರೆತಿರುತ್ತದೆ. ಹಾಗೂ ಸದರಿಯವರ ಹತ್ತಿರ 4 ಮೊಟಾರ್ ಸೈಕಲಗಳು ಇದ್ದು ಅವುಗಳನ್ನು ಪರಿಶೀಲಿಸಲಾಗಿ 1)ಒಂದು ಕಪ್ಪು ಬಣ್ಣದ ಹೊಂಡಾ ಶೈನ್, ಮೊ.ಸೈ ನಂ ಪರಿಶೀಲಿಸಲಾಗಿ ಅದರ ನಂಬರ್ ಪ್ಲೇಟ್ ಇರುವುದಿಲ್ಲ ಚೆಸ್ಸಿ ನಂ ಪರಿಶೀಲಿಸಲಾಗಿ. ME4JC651KFT134542      ಇದ್ದು ಅಂದಾಜ್ ಕಿಮ್ಮತ್ತು 30,000/- ರೂ, 2)ಒಂದು ಕಪ್ಪು ಮತ್ತು ನೀಲಿ ಬಣ್ಣದ ಹೊಂಡಾ ಸೀಡಿ ಡ್ರೀಮ್ 110 ನಂಬರ್ ಪರಿಶೀಲಿಸಲಾಗಿ ಅದರ ನಂಬರ್ ಕೆಎ28-ಇಎಸ್0729 ಇದ್ದು ಅದರ ಚೆಸ್ಸಿ ನಂ ಪರಿಶೀಲಿಸಲಾಗಿ ME4JC671GE8003786 ಅಂ.ಕಿ 25,000/- ಇರುತ್ತದೆ. 3)ಒಂದು ಕೆಂಪು ಮತ್ತು ಕಪ್ಪು ಬಣ್ಣದ ಪಲ್ಸರ್ 220F  ನಂಬರ್ ಪ್ಲೇಟ್ ಪರಿಶೀಲಿಸಲಾಗಿ ಎಂ.ಹೆಚ್03-ಸಿ.ಇ9269 ಚೆಸ್ಸಿ ನಂಬರ್ ಪರಿಶೀಲಿಸಿದಾಗ ME4JC65BGJ7072483 ಇದ್ದು ಅಂ.ಕಿ 45,000/- ರೂ ಇರುತ್ತದೆ. 4)ಒಂದು ಕೆಂಪು ಬಣ್ಣದ ಹೊಂಡಾಶೈನ್ ಮೊಟಾರ್ ಸೈಕಲ್ ನಂಬರ್ ಪ್ಲೇಟ್ ಇರುವುದಿಲ್ಲ ಚೆಸ್ಸಿ ನಂಬರ್ ಪರಿಶೀಲಿಸಿದಾಗ ME4JC65BGJ7072483 ಇದ್ದು ಅಂ.ಕಿ 30,000/- ರೂಪಾಯಿ ಇರುತ್ತದೆ. ಇವುಗಳ ಬಗ್ಗೆ ಆಪಾದೀತರಿಗೆ ವಿಚಾರಿಸಿದಾಗ ಸದರಿ ವಾಹನಗಳನ್ನು ಸುಮಾರು ಒಂದು ತಿಂಗಳ ಹಿಂದೆ ಎಲ್ಲರೂ ಸೇರಿ ಕಲಬುರಗಿ ನಗರದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ ಸದರಿಯವರು ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕಿ ಕುಳಿತುಕೊಂಡು ರೋಡಿಗೆ ಹೋಗಿಬರುವ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ ವಾಹನದಲ್ಲಿರುವ ಜನರ ಹತ್ತಿರ ಇರುವ ಹಣ, ಬಂಗಾರದ ಒಡವೆಗಳನ್ನು ಮತ್ತು ವಸ್ತುಗಳನ್ನು ಕಿತ್ತ್ತುಕೊಂಡು ದರೋಡೆ ಮಾಡಲು ಹೊಂಚುಹಾಕಿ ಕಾಯುತ್ತಿರುವುದು ಖಚಿತವಾಗಿದ್ದು ಇರುತ್ತದೆ. ಸದರಿಯರಿಂದ ಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಮೋದಿನ ತಂದೆ ಮೆಹಬೂಬಸಾಬ ಭಾಗವಾನ ಉ||ಕಂದಾಯ ನಿರೀಕ್ಷಕರು ಕರಜಗಿ ವಲಯ ಸಾ||ಉಸ್ಮಾನಿಯ ಕಾಲೋನಿ ಅಫಜಲಪೂರ ರವರು  ದಿನಾಂಕ 04/12/2019 ರಂದು ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಮೌಖಿಕ ಆದೇಶದ ಮೇರೆಗೆ ಅಕ್ರಮ ಮರಳು ಸಾಗಾಣಿಕ ತಡೆಗಟ್ಟುವ ಸಲುವಾಗಿ ನಮ್ಮ ಸಿಬ್ಬಂದಿರವರಾದ 1)ನೀಲಪ್ಪ ತಂದೆ ಶೇಟ್ಟೆಪ್ಪ ಜಮಾದಾರ ಗ್ರಾಮ ಸಹಾಯಕ ಶಿವೂರ 2)ದರಸ ಮಹ್ಮದ ತಂದೆ ಖಾದಿರಸಾಬ ಮುಲ್ಲಾ ಗ್ರಾಮ ಲೇಕ್ಕಿಗರು ಶಿವೂರ ರವರೊಂದಿಗೆ  ಗಸ್ತು ಕರ್ತವ್ಯದಲ್ಲಿದ್ದಾಗ ರಾತ್ರಿ 11.30 ಗಂಟೆಗೆ ಕರಜಗಿ- ಮಣ್ಣೂರ ಮುಖ್ಯ ರೋಡಿಗೆ ಇರುವ ಶಿವೂರ ಕ್ರಾಸ್ ಹತ್ತಿರ ಇದ್ದಾಗ ಶಿವೂರ ಗ್ರಾಮದ ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ್ ಬಂದಿದ್ದು ಅದರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಆತನು ಟ್ರ್ಯಾಕ್ಟರ ನಿಲ್ಲಿಸಿದ್ದು ನಾವು ಹತ್ತಿರ ಹೋಗುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕ ನಮ್ಮನ್ನು ನೋಡಿ ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರ್ ನೋಡಲಾಗಿ ಸೋನಾಲಿಕ ಕಂಪನಿಯ ಟ್ರ್ಯಾಕ್ಟರ್ ಇದ್ದು ಅದಕ್ಕೆ ನೋದಣಿ ಸಂಖ್ಯೆ ಹಾಕಿರುವುದಿಲ್ಲಾ ಅದರ ಚೆಸ್ಸಿ ನಂ ನೋಡಲಾಗಿ  AZVSG72243853 ಮತ್ತು ಇಂಜಿನ್ ನಂಬರ  3105ELU83C714712F20 ನೇದ್ದು ಇದ್ದು ಸದರಿ ಟ್ರ್ಯಾಕ್ಟರ್ ಅಂದಾಜು ಕಿಮ್ಮತ್ತು 5,00,000/- ರೂಪಾಯಿ ಇರಬಹುದು ಅದರಲ್ಲಿರುವ ಮರಳಿನ ಅಂದಾಜು ಕಿಮ್ಮತ್ತು 3000/- ರೂಪಾಯಿ ಇರಬಹುದು ನಂತರ ನನ್ನ ಜೊತೆ ಇದ್ದ ಸಿಬ್ಬಂದಿಯ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಟ್ರ್ಯಾಕ್ಟರನ್ನು ಜಪ್ತಿ ಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಧನರಾಜ ತಂದೆ ನಾರಾಯಣ ಮಾಶಾಳೆ ಸಾ|| ಖಸಗಿವಾಡಿ ತಾ|| ಉಮರ್ಗಾ ಜಿ||ಉಸ್ಮಾನಬಾದ ರವರ ಹಿರಿಯ ಮಗಳಾದ ಲಕ್ಷ್ಮೀ ಇವಳಿಗೆ 2014 ನೇ ಸಾಲಿನಲ್ಲಿ ಅಫಜಲಪೂರ ತಾಲೂಕಿನ ಉಡಚಾಣ ಹಟ್ಟಿ ಗ್ರಾಮದ ಜಗದೀಶ ತಂದೆ ಸಿದ್ದು ಬಂಡಗಾರ ಈತನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತೇವೆ. ನನ್ನ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ ಮಾವಂದಿರರು ಚನ್ನಾಗಿ ನೋಡಿಕೊಂಡಿರುತ್ತಾರೆ. ದಿನಾಂಕ 30-11-2019 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಉಡಚಾಣ ಹಟ್ಟಿ ಗ್ರಾಮದಿಂದ ನನ್ನ ಸಂಭಂದಿಕರು ನನಗೆ ಪೋನ್ ಮಾಡಿ, ಈಗ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಿಮ್ಮ ಮಗಳು ಲಕ್ಷ್ಮೀ ಇವಳು ವಿಷ ಕುಡಿದಿರುತ್ತಾಳೆ ಲಕ್ಷ್ಮೀಯನ್ನು ಆಕೇಯ ನಾದನಿಯ ಗಂಡನಾದ ರಮೇಶ ಸಿಂದೆ ಇವನು ಸೋಲ್ಲಾಪೂರಕ್ಕೆ ಕರೆದುಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದರು. ಆಗ ರಮೇಶನಿಗೆ ನಾವು ಪೋನ್ ಮಾಡಿ ವಿಚಾರಿಸಿಕೊಂಡು ನಾನು ಮತ್ತು ನನ್ನ ಹೆಂಡತಿ ಇಬ್ಬರು ಸೋಲ್ಲಾಪೂರದ ಲೈಫಲೈನ್ ಆಸ್ಪತ್ರೆಗೆ ಹೋಗಿ ನನ್ನ ಮಗಳಿಗೆ ಹೋಗಿ ನೋಡಲಾಗಿ, ನನ್ನ ಮಗಳೂ ಮಾತನಾಡುವ ಸ್ಥೀತಿಯಲ್ಲಿ ಇರಲಿಲ್ಲ. ನನ್ನ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ಚಿಕಿತ್ಸೆ ಫಲಿಸದೆ ದಿನಾಂಕ 02-12-2019 ರಂದು 03:30 ಎ ಎಮ್ ಕ್ಕೆ ಮೃತಪಟ್ಟಿರುತ್ತಾಳೆ. ನನ್ನ ಮಗಳು ಮೃತ ಪಟ್ಟ ಬಗ್ಗೆ ಸೋಲ್ಲಾಪೂರದ ಸದರ ಬಜಾರ ಪೊಲೀಸ ಠಾಣೆಯ ಪೊಲೀಸರು ಆಸ್ಪತ್ರೆಗೆ ಬಂದು, ನನ್ನ ಮಗಳ ಶವವನ್ನು ಸಿವಿಲ್ ಆಸ್ಪತ್ರೆಗೆ ತಂದು, ಅಲ್ಲಿ ನನ್ನ ಹೇಳಿಕೆಯನ್ನು ಪಡೆದುಕೊಂಡು ನನ್ನ ಮಗಳು ಮೃತಪಟ್ಟ ಬಗ್ಗೆ ಕಾನೂನು ಕ್ರಮ ಕೈಕೊಂಡಿರುತ್ತಾರೆ. ನನ್ನ ಮಗಳ ಮೃತ ದೇಹದ ಪಿ.ಎಮ್.ಇ ಆದ ನಂತರ ಶವವನ್ನು ಉಡಚಾಣ ಹಟ್ಟಿ ಗ್ರಾಮಕ್ಕೆ ತಂದು ಶವ ಸಂಸ್ಕಾರ ಮಾಡಿರುತ್ತೇವೆ.ನಾನು ನನ್ನ ಮಗಳ ಪಿ,ಎಮ್,ಈ.ಕಾಲಕ್ಕೆ ಸೋಲಾಪೂರದ ಸದರ ಬಜಾರ ಪೊಲೀಸರ ಮುಂದೆ ನನ್ನ ಮಗಳು ಸತ್ತ ದುಖ:ದಲ್ಲಿ ನನ್ನ ಮಗಳಿಗೆ ಆಕೆಯ ಗಂಡನ ಮನೆಯವರು ತ್ರಾಸ ಕೊಟ್ಟಿರಬಹುದು, ಅದರಿಂದ ನನ್ನ ಮಗಳು ವಿಷ ಕುಡಿದಿರುತ್ತಾಳೆ ಎಂದು ಹೇಳಿಕೆ ಕೊಟ್ಟಿರುತ್ತೇನೆ. ಆದರೆ ನೀಜ ವಿಷಯವೆನಂದರೆ ನನ್ನ ಮಗಳು ನನ್ನ ಅಳಿಯ ಜಗದೀಶನಿಗೆ ನಾವು ಬೇರೆ ಮನೆ ಮಾಡಿಕೊಂಡು ಇರೊಣ ಅಂತ ನನ್ನ ಅಳಿಯನೊಂದಿಗೆ ಕಿರಿಕಿರಿ ಮಾಡಿ ಅವನಿಗೆ ಹೆದರಿಸಲು ಹೋಗಿ ಹತ್ತಿ ಬೆಳೆಗೆ ಹೊಡೆಯವ ಔಷದಿ ಕುಡಿದಿರುತ್ತಾಳೆ. ಸದರಿ ಘಟನೆ ಬಗ್ಗೆ ನನ್ನ ಮಗಳ ಗಂಡನ ಮನೆಯವರ ಮೇಲೆ ಆಗಲಿ ಅಥವಾ ಇತರರ ಮೇಲೆ ಆಗಲಿ ಯಾವುದೆ ಪಿರ್ಯಾದಿ ವಗೈರೆ ಇರುವದಿಲ್ಲ ಮತ್ತು ಅವಳ ಸಾವಿನ ಬಗ್ಗೆ ಯಾವದೆ ಸಂಶಯವಿರುವದಿಲ್ಲ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ರೇವೂರ ಠಾಣೆ : ಶ್ರೀ ಮೌಲಾಲಿ ತಂದೆ ಲಾಡ್ಲೇಸಾಬ ಭಾಗವಾನ ಸಾ||ಅತನೂರ ರವರು ನಮ್ಮ ಗ್ರಾಮದ ಮುಖ್ಯ ರಸ್ತೆಯ ಆಜು ಬಾಜು ಅಂದಾಜು 55 ರಿಂದ 60 ವರ್ಷದ ಒಬ್ಬಳು ಮಾನಸಿಕ ಅಸ್ವಸ್ಥೆ ಹೆಣ್ಣು ಮಗಳು ಕೇಲವು ದಿನಗಳಿಂದ ದಿನಾಲು ಅಲ್ಲೆ ತಿರುಗಾಡುವದು ರಸ್ತೆಯ ಬಾಜು ಮಲಗುವದು ಮಾಡುತಿದ್ದಳು ಅವಳ ಹೆಸರು ವಿಳಾಸ ನನಗೆ ಹಾಗು ನಮ್ಮ ಗ್ರಾಮದವರಿಗೆ ಗೊತ್ತಿರುವುದಿಲ್ಲ.ದಿನಾಂಕ 03/12/2019 ರಂದು ರಾತ್ರಿ 10.30 ಪಿಎಮ್ ಸುಮಾರಿಗೆ ನಮ್ಮ ಗ್ರಾಮದ ಬಸ್ಸನಿಲ್ದಾಣದ ಹತ್ತಿರ ರೋಡಿನ ಬಾಜು ತಿರುಗಾಡುತ್ತಿರುವುದನ್ನು ನಾನು ಕಂಡಿದ್ದು ದಿನಾಂಕ 04/12/2019 ರಂದು ಬೆಳಿಗ್ಗೆ 6.30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಗ್ರಾಮದ ಮಲ್ಲಿಕಾರ್ಜುನ ಗೋಳಸಾರ, ಸಂತೋಷ ಹುಲಿ ಮೂರು ಜನರು ಎಂದಿನಂತೆ ವಾಕಿಂಗ ಮಾಡಿಕೊಂಡು ಮುಖ್ಯರಸ್ತೆಯ ಬದಿ ಭೋಗನಳ್ಳಿ ಕ್ರಾಸ ಕಡೆ ನಡೆದುಕೊಂಡು ಹೋಗುತಿದ್ದಾಗ ನಮ್ಮ ಗ್ರಾಮದ ಪ್ರವೀಣ ತಂದೆ ಶಿವಯ್ಯ ಗುತ್ತೇದಾರ ರವರ ಹೊಲದ ಹತ್ತಿರ ರಾಷ್ಠ್ರಿಯ ಹೆದ್ದಾರಿ ಮುಖ್ಯ ರಸ್ತೆಯ ಮೇಲೆ ಒಂದು ಹೆಣ್ಣು ಮಗಳು ಮಲಗಿದಂತೆ ಕಂಡು ನಾವು ಸಮೀಪ ಹೋಗಿ ನೋಡಲಾಗಿ ಹಳದಿ ಬಣ್ಣದ ಸೀರೆ ಇರುವ ಹೆಣ್ಣುಮಗಳ ಮೃತದೇಹ ಕಂಡಿದ್ದು ಸದರಿ ಮೃತ ದೇಹವು ನಮ್ಮ ಗ್ರಾಮದ ಮುಖ್ಯ ರಸ್ತೆಯ ಆಜು ಬಾಜು ತಿರುಗಾಡುತಿದ್ದ  ಅಂದಾಜು 55 ರಿಂದ 60 ವರ್ಷದ ಮಾನಸಿಕ ಅಸ್ವಸ್ಥೆ ಹೆಣ್ಣು ಮಗಳ ದೇಹ ಇದ್ದು ಅವಳ ದೇಹ ರಸ್ತೆ ಅಫಘಾತದಲ್ಲಿ ಸಂಪೂರ್ಣವಾಗಿ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುತ್ತದೆ. ಕಾರಣ ಯಾವುದೋ ಅಪರಿಚಿತ ವಾಹನದ ಚಾಲಕ ಅತಿವೇಗ ಹಾಗು ನಿಸ್ಕಾಳಜಿತದಿಂದ ವಾಹನ ಚಲಾಯಿಸಿ ದಿನಾಂಕ 03/12/2019 ರಂದು ರಾತ್ರಿ 11.00 ಪಿಎಮ್ ದಿಂದ ದಿನಾಂಕ 04/12/2019 ರ 6.00 ಎಎಮ್ ಮದ್ಯದ ಅವದಿಯಲ್ಲಿ ಮಾನಸಿಕ ಅಸ್ವಸ್ಥೆಯಾದ ಅಂದಾಜು 55-60 ವರ್ಷದ ಅಫರಿಚಿತ  ಹೆಣ್ಣುಗಳ ಮೇಲೆ ವಾಹನ ಚಲಾಯಿಸಿ ತನ್ನ ವಾಹನದ ಸಮೇತ ಓಡಿ ಹೋದ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 06-12-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-12-2019

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 107/2019, ಕಲಂ. 379 ಐಪಿಸಿ :-
ದಿನಾಂಕ 04-12-2019 ರಂದು ಫಿರ್ಯಾದಿ ಶೇಕ ಮಹೆಬೂಬು ತಂದೆ ಶೇಕ ಮಹೆತಾಬ ವಯ: 80 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 17-2-177 ಗಾಂಧಿ ನಗರ ಕಾಲೋನಿ, ಮೈಲೂರ ಬೀದರ ರವರು ಎಸ್.ಬಿ. ಬ್ಯಾಂಕಿಗೆ ಹೋಗಿ ನ್ನ ಖಾತೆಯಿಂದ 20,000/- ರೂ ಹಣ ಡ್ರಾ ಮಾಡಿ ತಾನು ಧರಿಸಿದ ಕುರ್ತಾ ಪೈಜಮಾಕ್ಕೆ ಇರುವ ಕೆಳಗಿನ ಜೇಬನಲ್ಲಿಟ್ಟುಕೊಂಡು ಅಲ್ಲಿಂದ ಬೀದರ ನಗರದ ಅಂಬೇಡ್ಕರ ವೃತ್ತದ ಹತ್ತಿರ ಇರುವ ಸಪಾರೆ ಮೇಡಿಕಲ್ ಅಂಗಡಿಗೆ ಬಂದು ಮೇಡಿಕಲ್ ಅಂಗಡಿಯಲ್ಲಿ ಗುಳಿಗೆ ಔಷಧಿ ಖರೀದಿಸಿ ತನ್ನ ಜೇಬನಲ್ಲಿರುವ ಹಣ ನೋಡಲಾಗಿ, ಸದರಿ ಹಣ ಇರಲಿಲ್ಲಾ, ಸದರಿ 20,000/- ರೂ ಹಣ ಯಾರೋ ಅಪರಿಚಿತ ಕಳ್ಳರು ಬೀದರ ನಗರದ ಅಂಬೇಡ್ಕರ ವೃತ್ತದ ಬಳಿ ಇರುವ ಸಪಾರೆ ಮೇಡಿಕಲ್ ಅಂಗಡಿ ಹತ್ತಿರ ಫಿರ್ಯಾದಿಗೆ ಗೋತ್ತಿಲ್ಲದಂತೆ ತೆಗೆದುಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 202/2019, ಕಲಂ. 454, 380 ಐಪಿಸಿ :-
ದಿನಾಂಕ 05-12-2019 ರಂದು ಫಿರ್ಯಾದಿ ಶಾಂತಕುಮಾರ ತಂದೆ ವಿಜಯಕುಮಾರ ಪಾಟೀಲ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಮಹೇಶ ಬೀದರ ರವರ ತಾಯಿ ಹಾಗೂ ಅಕ್ಕ ಇಬ್ಬರು ತನ್ನ ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಮುಂದಿನ ಬಾಗಿಲಿನ ಕೀಲಿ ಮುರಿದು ಮನೆಯ ಒಳಗೆ ಹೋಗಿ ಮನೆಯಲ್ಲಿ ಅಲಮಾರಿಯಲ್ಲಿಟ್ಟ ಬಂಗಾರದ ಅಭರಣಗಳಾದ 1) ಪಾಟ್ಲಿ 50 ಗ್ರಾಂ. .ಕಿ. 1,75,000/- ರೂ., 2) ಚೈನ್ ಸರ 40 ಗ್ರಾಂ. .ಕಿ. 1,40,000/- ರೂ., 3) ನಾನ್ ಪದಕ 30 ಗ್ರಾಂ. .ಕಿ 1,05,000/- ರೂ., 4) ಎಕ್ಸರ ಗುಂಡಾ 10 ಗ್ರಾಂ. .ಕಿ. 35,000/- ರೂ., 5) 3 ಉಂಗುರಗಳು 15 ಗ್ರಾಂ. .ಕಿ. 52,500/- ರೂ., 6) ಚೈನ್ 5 ಗ್ರಾಂ. .ಕಿ. 17,500/- ರೂ., 7) ಕೀವಿ ಓಲೆ 3 ಜೊಡಿ 15 ಗ್ರಾಂ. .ಕಿ. 52,500/- ರೂ., 8) ನಗದು ಹಣ 25,000/- ರೂ. ಹೀಗೆ ಬಂಗಾರದ ಒಡುವೆ ಮತ್ತು ನಗದು ಹಣ ಒಟ್ಟು 6,02,500/- ರೂ. ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.