Police Bhavan Kalaburagi

Police Bhavan Kalaburagi

Tuesday, July 21, 2020

BIDAR DISTRICT DAILY CRIME UPDATE 21-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-07-2020

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 20-07-2020 ರಂದು ಫಿರ್ಯಾದಿ ದಯಾನಂದ ತಂದೆ ಲಕ್ಷ್ಮಣರಾವ ಸೂರ್ಯವಂಶಿ ವಯ: 36 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ತಳವಾಡ (ಎಮ) ರವರ ರಿತೀಕ ವಯ: 12 ವರ್ಷ ಈತನು ತನ್ನ ಅಕ್ಕ ಸ್ನೆಹಾ ಈಕೆಯ ಜೋತೆ ಮನೆಯ ಹಿಂದೆ ಆಟ ಆಡಲು ಹೋದಾಗ ಮನೆಯ ತಗಡದ ಶೇಡ್ಡಿನ ವೈರಿಗೆ ಕೈಹಚ್ಚಿದ್ದರಿಂದ ರತೀಕ ಈತನಿಗೆ ಅಕಸ್ಮಿಕವಾಗಿ ವಿದ್ಯೂತ್ ಹತ್ತಿದ್ದರಿಂದ ಆತನಿಎಗ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿ ಮದ್ಯ ತೇಲಗಾಂವ ಗ್ರಾಮದ ಹತ್ತಿರ ರಿತೀಕ ಇತನು ಮ್ರತಪಟ್ಟಿರುತ್ತಾನೆ, ತನ್ನ ಮಗ ಅಕಸ್ಮಿಕವಾಗಿ ಕರೆಂಟ ತಗುಲಿ ಮ್ರತಪಟ್ಟಿರುತ್ತಾನೆ, ತನ್ನ ಮಗನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೆ ತರಹ ಸಂಶಯವಿರುವದಿಲ್ಲಾ ಅಂತ ಕೊಟ್ಟ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 52/2020, ಕಲಂ. 279, 337, 338, 304() ಐಪಿಸಿ :-
ದಿನಾಂಕ 20-07-2020 ರಂದು ಫಿರ್ಯಾದಿ ಮುಖಿಮ ತಂದೆ ಸಲಿಮೋದ್ದಿನ ಮೋಮಿನ ವಯ: 31 ವರ್ಷ, ಸಾ: ಹುಲಸೂರ ರವರು ತನ್ನ ಹತ್ತಿರ ಕೆಲಸ ಮಾಡುವ ಅಜರ ದಾವಲಾಜಿ ಮತ್ತು ಮಕ್ದುಮ ಮೋಮಿನ ಮೂವರು ನೂರ ಮೊಹ್ಮದ ತಂದೆ ಅಬ್ದುಲ್ ಸಮದ ದಾವಲಜಿ ವಯ: 26 ವರ್ಷ ಸಾ: ಹುಲಸೂರ ರವರ ಮಹಿಂದ್ರಾ ಗೂಡ್ಸ ವಾಹನ ಸಂ. ಕೆಎ-56/4078 ನೇದರಲ್ಲಿ ಬೀದರಗೆ ವಿದ್ಯೂತ್ ಮೀಟರ್ ಬಾಕ್ಸಗಳು ತೆಗೆದುಕೊಂಡು ಬರಲು ಬಂದು ಬೀದರದಲ್ಲಿ ವಿದ್ಯುತ್ ಮೀಟರ್ ಬಾಕ್ಸಗಳು ವಾಹನದಲ್ಲಿ ಲೋಡ್ ಮಾಡಿಕೊಂಡು ಮರಳಿ ಮ್ಮೂರಿಗೆ ಹುಲಸೂರಕ್ಕೆ ಭಾಲ್ಕಿ-ನಿಲಂಗಾ ರಾಷ್ಟ್ರೀಯ ಹೆದ್ದಾರಿ ಮುಖಾಂತರ ಬರುವಾಗ ಮಹಿಂದ್ರಾ ಗೂಡ್ಸ ವಾಹನ ಚಾಲಕನಾದ ಆರೋಪಿ ನೂರಮೊಹ್ಮದ ತಂದೆ ಅಬ್ದುಲ್ ಸಮದ ದಾವಲಜಿ ವಯ: 26 ವರ್ಷ, ಸಾ: ಹುಲಸೂರ ಇತನು ಸೋಲದಾಪಕಾ ಶಿವಾರದಲ್ಲಿ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಸೋದಾಪಕಾ ಶಿವಾರದ ಇಂದ್ರಜೀತ ತಂದೆ ಪಾಂಡುರಂಗ ಮಸಾಳೆ ರವರ ಹೊಲದ ಹತ್ತಿರ ತನ್ನ ವಾಹನ ನಿಯಂತ್ರಿಸಲು ಆಗದೆ ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ಸದರಿ ಗೂಡ್ಸ ವಾಹನವು ರಸ್ತೆಯ ಬದಿಯಲ್ಲಿರುವ ತಗ್ಗಿನಲ್ಲಿ ಪಲ್ಟಿಯಾಗಿರುತ್ತದೆ, ಪರಿಣಾಮ ಫಿರ್ಯಾದಿಯ ಎಡಭುಜಕ್ಕೆ, ಮೋಳಕಾಲ ಕೆಳಗೆ ಗುಪ್ತಗಾಯಗಳಾಗಿರುತ್ತವೆ, ಅಜರ ದಾವಲಜಿ ಈತನಿಗೆ ತಲೆಗೆ ಭಾರಿ ರಕ್ತಗಾಯ ಮತ್ತು ಕಿವಿಯಿಂದ ರಕ್ತಸ್ರಾವವಾಗಿರುತ್ತದೆ, ಮಕ್ದುಮ ಮೊಮಿನ್ ಈತನಿಗೆ ತಲೆಗೆ, ಬಲಗೈ ಭುಜಕ್ಕೆ, ಎದೆಗೆ ಗುಪ್ತಗಾಯಗಳಾಗಿರುತ್ತವೆ, ಆರೋಪಿಗೆ ಬಲಭುಜಕ್ಕೆ ಬಲಮೊಳಕಾಲ ಕೆಳಗೆ ಗುಪ್ತಗಾಯಗಳಾಗಿರುತ್ತವೆ, ನಂತರ ಗಾಯಗೊಂಡ ಲ್ಲರೂ ಒಂದು ಖಾಸಗಿ ವಾಹನದಲ್ಲಿ ಹುಲಸೂರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲಾದಾಗ ವೈದ್ಯಾಧಿಕಾರಿಗಳು ಅಜರ ದಾವಲಜಿ ಮತ್ತು ಮಕ್ದುಮ್ ಮೋಮಿನ್ ಇವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಮೇಲ್ದರ್ಜೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ತಿಳಿಸಿದಾಗ ಅವರ ಸಂಬಂಧಿಕರು ಇಬ್ಬರಿಗೆ ಬಸವಕಲ್ಯಾಣಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಅಜರ ತಂದೆ ಯುಸುಫ ದಾವಲಜಿ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಹುಲಸೂರ ಇತನು ಮೃತಪಟ್ಟಿರುತ್ತಾನೆ0ದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 107/2020, ಕಲಂ. 306 ಜೊತೆ 34 ಐಪಿಸಿ :-
ದಿನಾಂಕ 20-07-2020 ರಂದು ಫಿರ್ಯಾದಿ ಪಾರ್ವತಿ ಗಂಡ ಬಕ್ಕಾ ಸಿಂಧೆ ಸಾ: ಭಾಲ್ಕಿ ರವರ ಮಗಳಾದ ಬಾವನೇಶ್ವರಿ ಇವಳಿಗೆ ಬೀದರ ನಗರದ ಶಿವಶಂಕರ ತಂದೆ ತುಕಾರಾಮ ಕಾಂಬಳೆ ರವರೊಂದಿಗೆ ದಿನಾಂಕ 07-07-2017 ರಂದು ಮದುವೆ ಮಾಡಿ ಕೊಟ್ಟಿದ್ದು, ಮದುವೆಯಾದ ಒಂದು ತಿಂಗಳು ಅವರು ಸರಿಯಾಗಿದ್ದು ತದನಂತರ ದಿನೆ ದಿನೆ ವಿನಾಃ ಕಾರಣ ವರದಕ್ಷಿಣೆ ಕಡಿಮೆ ತಂದಿರುತ್ತಿ ನಿಮ್ಮ ತಾಯಿಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ದಿನನಿತ್ಯ ಮಗಳಿಗೆ ಕಿರಕುಳ ನೀಡುತ್ತಿದ್ದರು ಇದರಿಂದ ಬೇಸತ್ತ ಮಗಳು ಫಿರ್ಯಾದಿಯ ಮುಂದೆ ಹೇಳಿ ಅಳ ತೋಡಗಿದಳು, ದಾ ಮೇಲೆ 2 ತಿಂಗಳ ಹಿಂದೆ ಮಗಳು ಫಿರ್ಯಾದಿಗೆ ಕರೆ ಮುಖಾಂತರ ತಿಳಿಸಿದೆನೆಂದರೆ ಅಮ್ಮ ನನಗೆ ದಿನದಿಂದ ದಿನಕ್ಕೆ ಗಂಡ, ಮಾವನಾದ ತುಕರಾಮ, ಅತ್ತೆ ನಾಗಮ್ಮ, ಮೈದುಇಂದ್ರಜೀತ ಮತ್ತು ನಾದನಿಯಾದ ಉಮಾ ಇವರೆಲ್ಲರೂ ಕೂಡಿಕೊಂಡು ನನಗೆ ಮನಬಂದತೆ ಬೀದರದಲ್ಲಿ ಹೋಡೆದು ಬೈದಿರುತ್ತಾರೆ, ನೀನು ಎಲ್ಲಿಯವರೆಗೆ ನಮಗೆ ವರದಕ್ಷಿಣೆ ರೂಪಾಯಿ 2,50,000/- ಹಾಗೂ ಕಾರ ಬಂಗಾರ ಇವೆಲ್ಲವನ್ನು ಒಂದು ತಿಂಗಳ ಒಳಗಾಗಿ ತಂದು ಕೊಡಲಿಲ್ಲ ಅಂದರೆ ನಿನಗೆ ಇಲ್ಲೆ ಪಾಸಿ ಹಾಕಿ ಸಾಯಿಸಿ ಬಿಡುತ್ತೇವೆ ಎಂದು ಹೇಳಿ ತನ್ನ ದುಖವನ್ನು ಹೇಳಿಕೊಂಡಿರುತ್ತಾಳೆ, ನಂತರ ಫಿರ್ಯಾದಿಯು ಬೀದರಗೆ ಬಂದು ತನ್ನ ಮಗಳಿಗೆ ಕರೆದುಕೊಂಡು ಬೀದರನ ಮಹಿಳಾ ಪೊಲೀಸ ಠಾಣೆಯಲ್ಲಿ ಕೇಸ ದಾಖಲಿಸಿದ್ದು, ಅದಾದ ನಂತರ ದಿನಾಂಕ 20-07-2020 ರಂದು ಮಗಳು ಫಿರ್ಯಾದಿಗೆ ಕರೆ ಮಾಡಿ ಇವತ್ತು ಸಹ ನನ್ನ ಗಂಡ ಮನಸಿಗೆ ಬಂದಂತೆ ಹೋಡೆದಿರುತ್ತಾನೆ ಅವಾಚ್ಯ ಶಬ್ದಗಳಿಂದ ನಿಮ್ಮೆಲ್ಲರಿಗೂ ಸಹ ಬೈದಿರುತ್ತಾನೆ, ನೀನು ನಿನ್ನ ಮನೆಗೆ ಹೋಗಿ ವರದಕ್ಷಿಣೆ ತಂದುಕೊಡುವರೆಗೆ ನನ್ನ ಮನೆಗೆ ಬರಬೇಡ ಅಂತಾ ಹೇಳಿರುತ್ತಾನೆಂದು ಹೇಳಿ ಬಿಕ್ಕಿ ಬಿಕ್ಕಿ ಅಳುತ್ತಾ ತಿಳಿಸಿದ್ದು ಇರುತ್ತದೆ, ನಂತರ ದಿನಾಂಕ 20-07-2020 ರಂದು 1830 ಗಂಟೆಗೆ ಫಿರ್ಯಾದಿಯವರ ಭಾವನ ಮಗನಾದ ಅರುಣಕುಮಾರ ರವರಿಗೆ ಹುಮನಾಬಾದ ಪೊಲೀಸರು ಕರೆ ಮಾಡಿ ನಿಮ್ಮ ಮಗಳು ಮನೆಯಲ್ಲಿ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾಳೆ ಅಂತಾ ವಿಷಯ ತಿಳಿಸಿರುತ್ತಾರೆ, ಅದರಂತೆ ಫಿರ್ಯಾದಿಯು 2030 ಗಂಟೆ ಸುಮಾರಿಗೆ ಹುಮನಾಬಾದ ನಗರಸರಕಾರಿ ಆಸ್ಪತ್ರೆಯಲ್ಲಿ ಬಂದು ಮಗಳಿಗೆ ಶವಗಾರ ಕೋಣೆಯಲ್ಲಿ ಹಾಕಿದ್ದು ಕಂಡು ತನ್ನ ಮಗಳು ಬಹಳ ಸರಳ ಸ್ವಭಾವದವಳು ಅವಳು ಎಂದಿಗೂ ತರಹ ನೇಣು ಹಾಕಿಕೊಳ್ಳುವ ಧೈರ್ಯ ಮಾಡುವಳಲ್ಲ, ಅವಳಿಗೆ ಅವರ ಮನೆಯವರಾದ ಆರೋಪಿತರಾದ ಗಂಡ ಶಿವಶಂಕರ, ಮಾವ ತುಕಾರಾಮ, ಅತ್ತೆ ನಾಗಮ್ಮ, ಮೈದುನ ಇಂದ್ರಜೀತ ಮತ್ತು ನಾದಿನಿ ಉಮಾ ಇವರೆಲ್ಲರು ಸೇರಿ ಮಗಳಿಗೆ ದಿನನಿತ್ಯ ವರದಕ್ಷಿಣೆ ಕಿರಕುಳ ನೀಡುತ್ತಿರುವುದರಿಂದ ಅವಳು ಮರಣ ಹೊಂದಿರುತ್ತಾಳೆ, ಅವಳು ಮರಣಕ್ಕೆ ಸದರಿ ಆರೋಪಿತರೇ ಕಾರಣ ಎಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 86/2020, ಕಲಂ. 379 ಐಪಿಸಿ :-
ದಿನಾಂಕ 12-07-2020 ರಂದು 2200 ಗಂಟೆಯಿಂದ ದಿನಾಂಕ 13-07-2020 ರಂದು 0600 ಗಂಟೆಯ ಅವಧಿಯಲ್ಲಿ  ಬೀದರ ಕೆ.ಎಚ.ಬಿ. ಕಾಲೋನಿಯಲ್ಲಿರುವ ಫಿರ್ಯಾದಿ ಸಂತೋಷ ತಂದೆ ಸುಭಾಷ ಸೂರ್ಯವಂಶಿ ಸಾ: ನಿಜಾಂಪುರ, ತಾ: ಬೀದರ ರವರು ತಮ್ಮ ಭಾವ ರವರ ಮನೆಯ ಮುಂದೆ ನಿಲ್ಲಿಸಿದ ತನ್ನ ಬಜಾಜ ಪಲ್ಸರ್ ಮೋಟರ ಸೈಕಲ ನಂ. ಕೆಎ-38/ವಿ-6480 ನೇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಬಜಾಜ ಪಲ್ಸರ್ ಮೋಟರ ಸೈಕಲ ನಂ. ಕೆಎ-38/ವಿ-6480, 2) ಚಾಸಿಸ್ ನಂ. ಎಂ.ಡಿ.2..11.ಸಿ.ವಾಯ್.2.ಜೆ.ಸಿ..45121, 3) ಇಂಜಿನ್ ನಂ. ಡಿ.ಹೆಚ್.ವಾಯ್.ಸಿ.ಜೆ..48898, 4) ಮಾಡಲ್: 2018s, 5) ಬಣ್ಣ: ಕಪ್ಪು ಬಣ್ಣ ಹಾಗೂ 6) .ಕಿ 49,000/- ರೂ. ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-07-2020 ರಂದು ಪ್ರ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 30/2020, ಕಲಂ. 32, 34 ಕೆ. ಕಾಯ್ದೆ :-
ದಿನಾಂಕ 20-07-2020 ರಂದು ಆರೋಪಿ ಲೋಕೆಶ ತಂದೆ ಸಿದ್ದಪ್ಪಾ ರೊಡ್ಡಾನೋರ ವಯ: 25 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಮಠಾಣಾ ಇತನು ತನ್ನ ಶೆಡ್ಡಿನ ಹತ್ತಿರ ಕೋರೋನಾ ವೈರಸ್ ತಡೆಗಟ್ಟುವ ನಿಮಿತ್ಯ ಜಿಲ್ಲೆಯಲ್ಲಿ ಸರಾಯಿ ಮಾರಾಟ ನಿಷೇಧ ಇದ್ದರು ಸಹ ಅಕ್ರಮವಾಗಿ ಸರಾಯಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆಂದು ಸವಿತಾ ಪ್ರಿಯಂಕಾ ಪಿ.ಎಸ.ಐ ಬೀದರ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಸದರಿ ಆರೋಪಿತನ ಮೇಲೆ ದಾಳಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 98/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 20-07-2020 ರಂದು ಸುನಿಲಕುಮಾರ ಪಿ.ಎಸ್.(ಕಾ&ಸು) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಕೌಡಿಯಾಳ(ಎಸ್) ಗ್ರಾಮದ ಕನಕದುರ್ಗಾ ಧಾಬಾ ಹತ್ತಿರ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಸರಾಯಿವುಳ್ಳ ಬಾಟಲಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆಂದು ಕರೆ ಮುಖಾಂತರ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೌಡಿಯಾಳ(ಎಸ್) ಗ್ರಾಮದ ಕನಕದುರ್ಗಾ ಧಾಬಾದ ಹತ್ತಿರ ಹೋಗಿ ನೋಡಲು ಅಲ್ಲಿ ಆರೋಪಿ ವಿಲಾಸರೆಡ್ಡಿ ತಂದೆ ಶಿವರಾಜ ರೆಡ್ಡಿ ವಯ: 48 ವರ್ಷ, ಜಾತಿ: ರೆಡ್ಡಿ, ಸಾ: ಹಣಮಂತ ವಾಡಿ, ತಾ: ಬಸವಕಲ್ಯಾಣ ಇತನು ತನ್ನ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟೀಕ್ ಚೀಲವನ್ನು ಇಟ್ಟುಕೊಂಡು ಕುಳಿತಿರುವುದನ್ನು ನೋಡಿ ಸದರಿ ಆರೋಪಿತನ ಮೇಲೆ ಒಮ್ಮೆಲೆ ಎಲ್ಲರೂ ದಾಳಿ ಮಾಡಿ ಹಿಡಿದು ಆತನಿಗೆ ನಿನ್ನ ಹತ್ತಿರ ಇರುವ ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ ? ಎಂದು ವಿಚಾರಿಸಿದಾಗ ಅವನು ಸರಾಯಿವುಳ್ಳ ಬಾಟಲಗಳು ಮತ್ತು ಪೌಚಗಳು ಇವೆ ಎಂದು ತಿಳಿಸಿದಾಗ ನಿನ್ನ ಹತ್ತಿರ ಇರುವ ಸರಾಯಿವುಳ್ಳ ಬಾಟಲಗಳು ಮತ್ತು ಪೌಚಗಳು ಮಾರಾಟ ಮತ್ತು ಸಾಗಾಟ ಮಾಡುವ ಬಗ್ಗೆ ಯಾವುದೇ ರೀತಿ ಲೈಸನ್ಸ್ ಮತ್ತು ದಾಖಲಾತಿ ಇದ್ದರೆ ಹಾಜರ ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿದಾಗ ಅವನಿಗೆ ನೀನು ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳು ಮತ್ತು ಪೌಚಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಾಟ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ತಿಳಿಸಿ ಅವನ ಹತ್ತಿರ ಇದ್ದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 1) ಎಂ.ಸಿ ಡೊವೆಲ್ ಪ್ಲಾಟಿನಂ ಕ್ಲಾಸಿಕ್ ವಿಸ್ಕಿ 90 ಎಂ.ಎಲ್ ನ 74 ಬಾಟಲಗಳು ಅ.ಕಿ 8658/- ರೂ., ಓರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ 90 ಎಂ.ಎಲ್ ನ 36 ಪೌಚಗಳು ಅ.ಕಿ 1260/- ರೂ. 3) ಆಫಿಸರ್ ಚಾಯಿಸ್ ಸ್ಪೇಸಿಯಲ್ ವಿಸ್ಕಿ 180 ಎಂ.ಎಲ್ ನ 08 ಪೌಚಗಳು ಅ.ಕಿ 848/- ರೂ., 4) ಕಿಂಗ್ ಫಿಶರ್ ಸ್ಟ್ರಾಂಗ್ ಪ್ರಿಮೀಯಮ್ ಬಿಯರ್ 650 ಎಂ.ಎಲ್ ನ 10 ಬಾಟಲಗಳು ಅ.ಕಿ 1500/- ರೂ. ಹೀಗೆ ಎಲ್ಲಾ ಸರಾಯಿಯ ಒಟ್ಟು ಬೆಲೆ 12,266/- ರೂ. ಇದ್ದು, ನಂತರ ಸದರಿ ಸರಾಯಿಯನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 161/2020, ಕಲಂ. 78(6) ಕೆ.ಪಿ ಕಾಯ್ದೆ ಜೊತೆ 420 ಐಪಿಸಿ :-
ದಿನಾಂಕ 20-07-2020 ರಂದು ಹಳೆ ಭಾಲ್ಕಿಯ ಚೌಡಿ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಕ್ರಿಕೇ ಬೆಟ್ಟಿಂಗ ನಡೆಸಿ ಜನರಿಗೆ ನಿಮ್ಮ ಅದೃಷ್ಟ ನೋಡಿಕೊಳ್ಳಿ ಅಂತ ಅವರಿಂದ ಹಣ ಪಡೆದು ಮೋಸ ಮಾಡಿ ಆಸ್ತಿ ಸಂಪಾದನೆ ಮಾಡುತ್ತಿರುವದರಿಂದ ಜನರು ಸಾಲ ಮಾಡಿ ಕಂಗಾಲಾಗಿ ಭಾಲ್ಕಿ ಬಿಟ್ಟು ಹೋಗುತ್ತಿದ್ದಾರೆ ಅವರ ಕುಟುಂಬದವರು ನಿರಾಶ್ರಿತರಾಗುತ್ತಿದ್ದಾರೆಂದು ಅಮರ ಕುಲಕರ್ಣಿ ಪಿ.ಎಸ್. (ಕಾ.ಸೂ) ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಭಾಲ್ಕಿಯ ಜಾಮಿಯಾ ಮಜ್ಜಿದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಚೌಡಿ ಎದುರಿಗೆ ಆರೋಪಿ ಮಹಾದೇವ ತಂದೆ ಶಿವರಾಜ ಭುರೆ, ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಭಾತಂಬ್ರಾ, ತಾ: ಭಾಲ್ಕಿ ಇತನು ಸಾರ್ವಜನಿಕರಿಗೆ ಕೂಗಿ ಕೂಗಿ ಕರೆದು ಇಂದು ನಡೆಯುತ್ತಿರುವ ಇಂಗ್ಲೆಂಡ ವೆಸ್ಟಇಂಡೀಸ ನಡುವೆ ನಡೆಯುತ್ತಿರುವ ಕ್ರಿಕೇ ಟೆಸ್ಟ ಪಂದ್ಯಾವಳಿಯಲ್ಲಿ ಯಾವ ತಂಡ ಜಯಗಳಿಸುತ್ತದೆ ಅಂತ ಹೇಳಿ ಅದರ ಮೇಲೆ ಬೆಟ್ಟಿಂಗ ಇಟ್ಟವರಿಗೆ ನಿಮ್ಮ ಅದೃಷ್ಟ ಇದ್ದರೆ ಒಂದಕ್ಕೆ ಹತ್ತು ಪಟ್ಟು ಹಣ ಕೊಡುತ್ತೇವೆ ಅಂತ ಹೇಳಿ ಜನರಿಂದ ಹಣ ಪಡೆಯುತ್ತಿರುವುದನ್ನು  ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 9000/- ರೂ. ಹಾಗೂ ಒಂದು ಮೊಬೈಲ ಸಿಕ್ಕಿದ್ದು, ನಂತರ ಸದರಿಯವನಿಗೆ ವಿಚಾರಿಸಲು ತಾನು ಜನರಿಂದ ಪಡೆದ ಹಣ ಜಮಾ ಮಾಡಿ 1) ಹೆಡಗಾಪುರ ಗ್ರಾಮದ ಅರವಿಂದ ತಂದೆ ಧನರಾಜ ಬೆಳಕುಣಿ, 2) ತಳವಾಡ(ಕೆ) ಗ್ರಾಮದ ಓಂಕಾರ ತಂದೆ ಘಾಳಪ್ಪಾ ಕನಶೆಟ್ಟೆ ಹಾಗೂ 3) ಭಾಲ್ಕಿ ಜನತಾ ಕಾಲೋನಿಯ ಚುವಾ@ಶೀವಕುಮಾರ ತಂದೆ ಗುರಪ್ಪಾ ಶಿಂಧೆ ಇವರುಗಳಿಗೆ ಕೊಡುತ್ತೇನೆ, ನನಗೆ ಅವರು ಶೇಕಡಾ 30 ರಷ್ಟು ಹಣ ಕೊಡುತ್ತಾರೆ, ಆಟದಲ್ಲಿ ಅರವಿಂದ, ಓಂಕಾರ ಹಾಗೂ ಚುವಾ@ಶಿವರಾಜ ಇವರು ಕೋಟಿಗಟ್ಟಲೆ ಆಸ್ತಿ ಗಳಿಸಿದ್ದು ನನಗೆ ಗೊತ್ತಿದೆ ಅಂತ ತಿಳಿಸಿದಾಗ ಪಂಚರ ಸಮಕ್ಷಮ ಸದರಿಯವನ ವಶದಲ್ಲಿದ್ದ ನಗದು ಹಣ, ಮೊಬೈಲ ಜಪ್ತಿ ಮಾಡಿಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.