Police Bhavan Kalaburagi

Police Bhavan Kalaburagi

Thursday, April 9, 2020

BIDAR DISTRICT DAILY CRIME UPDATE 09-04-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-04-2020

ಕುಶನೂರ ಪೊಲೀಸ ಠಾಣೆ ಅಪರಾಧ ಸಂಖ್ಯೆ 29/2020 ಕಲಂ 279, 304(ಎ) ಐಪಿಸಿ :-
ದಿನಾಂಕ:08/04/2020 ರಂದು 1500 ಗಂಟೆಗೆ ಫಿರ್ಯಾದಿ ಶ್ರೀ ಅಮುಲ ತಂದೆ ಮಾಧವರಾವ ಸಾವರಗಕರ್ ಸಾ: ಮುಧೋಳ(ಬಿ) ಗ್ರಾಮ ರವರು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ತಮ್ಮ ಅವಿಲ್ ವ: 24 ವರ್ಷ ಇವನು ಚಾಲಕನಾಗಿದ್ದು ಅಲ್ಲದೇ ಕೂಲಿ ಕೆಲಸ ಕೂಡ ಮಾಡುತ್ತಾನೆ. ದಿನಾಂಕ:07/04/2020 ರಂದು ಫಿರ್ಯಾದಿ ತಮ್ಮ ಅವಿಲ್ ಮತ್ತು  ಗ್ರಾಮದ ಶಿವಾಜಿ ಕೋಳಿ, ಸುನೀಲ ಸಿಂಧೆ, ರಮೇಶ ಚಂದಾಪೂರೆ, ವೈಜಿನಾಥ ದೇಶಮುಖ, ಚಂದ್ರಕಾಂತ ವಲ್ಲೆಪೂರೆ ಇವರೆಲ್ಲರೂ ಗ್ರಾಮದ ಸಂತೋಷ ಹರಡಗೆ ಇವರ ಟ್ರ್ಯಾಕ್ಟರ್ ನಂ. ಕೆಎ 38 ಟಿ 3059 ನೇದ್ದರ ಮೇಲೆ ಕೆಲಸ ಮಾಡಲು  ಶಿವಾರದಲ್ಲಿ ಮುಂಜಾನೆ ಕೂಲಿಕೆಲಸಕ್ಕೆ ಹೋಗಿರುತ್ತಾರೆ. ದಿನಾಂಕ:07/04/2020 ರಂದು ಮಧ್ಯಾಹ್ನ ಫಿರ್ಯಾದಿ   ಮನೆಯಲ್ಲಿದ್ದಾಗ  ಓಣಿಯ ರಮೇಶ ತಂದೆ ವಿಶ್ವನಾಥ ಚಂದಾಪೂರೆ ಇವನು ಅಂದಾಜು 12.30 ಗಂಟೆ ಸುಮಾರಿಗೆ ಫೋನ್ ಮಾಡಿ ತಿಳಿಸಿದೇನೆಂದರೆ, ತಾನು ಮತ್ತು ನಿನ್ನ ತಮ್ಮ ಅವಿಲ್ ಇಬ್ಬರು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ನಮ್ಮೂರ ಶಿವಾರ ಕುರಣದಲ್ಲಿಂದ ಗೋಳಕಿ ಕಲ್ಲುಗಳನ್ನು ಟ್ರ್ಯಾಕ್ಟರದಲ್ಲಿ ಹಾಕಿಕೊಂಡು ತಾನು ಮತ್ತು ಅವಿಲ್ ಕಲ್ಲು ಖಾಲಿ ಮಾಡಲು ನಮ್ಮೂರ ರಮೇಶ ಹಲಗೆ ರವರ ಮನೆಗೆ ತೆಗೆದುಕೊಂಡು ಹೋಗಿ ಕಲ್ಲುಗಳು ಖಾಲಿ ಮಾಡಿ ಮರಳಿ ಕುರಣಕ್ಕೆ ಬರುತ್ತಿರುವಾಗ ಟ್ರ್ಯಾಕ್ಟರ್ ನಂಬರ ಕೆಎ 38 ಟಿ 3059 ಮತ್ತು ಅದರ ಟ್ರಾಲಿ ಅವಳವಡಿಸಿಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರನ್ನು ಅವಿಲ್ ಇವನು ಚಲಾಯಿಸುತ್ತಿದ್ದ, ಟ್ರ್ಯಾಕ್ಟರ್ ಮುಧೋಳ(ಬಿ) ಗ್ರಾಮದ ವಸಿರಾಮ ತಾಂಡೆಯ ಕ್ರಾಸ್ ಹತ್ತಿರ ಬಂದಾಗ ಚಾಲಕ ಅವಿಲ್ ಇವನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅತಿ ಜೋರಾಗಿ ಮತ್ತು ಅಜಾಗರೂಕತೆಯಿಂದ ನಡೆಸಿದ್ದರಿಂದ ವಾಹನ ಕಂಟ್ರೊಲ್ ಆಗದೇ ಕ್ರಾಸ್ ಹತ್ತಿರ ಪಲ್ಟಿ ಮಾಡಿದ್ದು ಫಿರ್ಯಾದಿಯು ವಾಹನದಿಂದ ಕೆಳಗೆ ಛೀಡಿದಿರುತ್ತೇನೆ. ಅವಿಲನು ಛೀಡಿದಿದ್ದು ಅವನ ಮೇಲೆ ಟ್ರ್ಯಾಲಿ ಬಿದ್ದಿದರಿಂದ ಅವನಿಗೆ ಭಾರೀ ಗಾಯವಾಗಿದ್ದು ಅವನಿಗೆ ಮುಧೋಳ ಆಸ್ಪತ್ರೆಗೆ ಸೇರಿಸಿದ್ದು ಫಿರ್ಯಾದಿ ಮತ್ತು ಇವರ ತಂದೆ ಮಾಧವರಾವ, ತಾಯಿ ಜನಾಬಾಯಿ ಎಲ್ಲರೂ ಕೂಡಿ ಆಸ್ಪತ್ರೆಗೆ ಬಂದು ನೋಡಲು ನನ್ನ ತಮ್ಮನಿಗೆ ಬಲಗಡೆ ಎದೆಗೆ, ಫಸಲಿಗೆ ಮತ್ತು ಹೊಟ್ಟೆಗೆ ಭಾರೀ ಗುಪ್ತಗಾಯವಾಗಿರುತ್ತದೆ ಈ ಘಟನೆ ದಿನಾಂಕ:07/04/2020 ರಂದು ಮಧ್ಯಾಹ್ನ 12 ಗಂಟೆಗೆ ಆಗಿರುತ್ತದೆ. ನಂತರ   ಹೆಚ್ಚಿನ ಉಪಚಾರ ಕುರಿತು  ಗ್ರಾಮದ ಶಿವಪುತ್ರ ಹರಡಗೆ ಇವರ ಕಾರಿನಲ್ಲಿ ಔರಾದ ಮತ್ತು ಬೀದರ ಸರಕಾರಿ ಆಸ್ಪತ್ರೆಗೆ ಒಯ್ದು ಅಲ್ಲಿಂದ ಇನ್ನೂ ಹೆಚ್ಚಿನ ಉಪಚಾರ ಕುರಿತು  ಹೈದ್ರಬಾದ ಉಸ್ಮಾನಿಯಾ ಆಸ್ಪತ್ರೆಗೆ ಒಯ್ದು ದಾಖಲಿಸಿದ್ದಾಗೆ ಚಿಕತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 
  
ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 39/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 07/04/2020 ರಂದು 1330 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿರುವಾಗ  ಖಚೀತ ಮಾಹಿತಿ ಬಂದಿದ್ದೇನೆಂಧರೆ, ತಳವಾಡ (ಕೆ)  ಗ್ರಾಮದ ಶಂಕರ ಪಾರಶೇಟ್ಟೆ  ರವರ ಹೊಲದ ಹತ್ತಿರ  ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ತಳವಾಢ (ಕೆ) ರೇಲ್ವೆ ಟ್ರ್ಯಾಕ ಹತ್ತಿರ 1400 ಗಂಟೆಗೆ  ಹೋಗಿ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ 15 ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಹಾರ ಎಂಬ ನಸಿಬಿನ ಜೂಜಾಟಾ ಆಡುತಿದ್ದ ವ್ಯಕ್ತಿಗಳ ಮೇಲೆ  ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 1415  ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಗಳಿಗೆ ಹಿಡಿದುಕೊಂಡು ಅವರ  ಹೆಸರು ಮತ್ತು ವಿಳಾಸ ವಿಚಾರಿಸಲು 1) ಬಸವರಾಜ ತಂದೆ ಅರ್ಜುನ ಅಂಬೆಸಾಂಗವೆ ವಯ 40 ವರ್ಷ ಜಾ; ಎಸ್.ಸಿ. ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ)  ಇವರ ಕೈಯಲ್ಲಿ ನಗದು ಹಣ 400 ರೂ, ಇದ್ದು 2) ಗಣಪತಿ ತಂದೆ ನಾಗಪ್ಪಾ ಸೈದನೂರ ವಯ 45 ವರ್ಷ ಜಾ; ಎಸ್.ಸಿ. ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ)  ಇವರ ಕೈಯಲ್ಲಿ ನಗದು  ಹಣ 450/- ರೂ ಇದ್ದು 3)  ಕಮಲಾಕರ ತಂದೆ ಶ್ರಾವಣ ವಯ 36 ವರ್ಷ ಜಾ; ಉಪಾರ ;;ಕೂಲಿ ಕೆಲಸ ಸಾ; ತಳವಾಢ (ಕೆ)  ಇವರ ಕೈಯಲ್ಲಿ ನಗದು ಹಣ 350/- ರೂ ಇದ್ದು 4) ಅಶೋಕ ತಂದೆ ಅರ್ಜುನ ಅಂಬೆಸಾಂಗವೆ ವಯ 48 ವರ್ಷ ಜಾ; ಎಸ್.ಸಿ.ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ)  ಇವರ ಕೈಯಲ್ಲಿ ನಗದು ಹಣ 300 ರೂ ಇದ್ದು 5) ಚಂದ್ರಕಾಂತ ತಂದೆ ಕಾಶಿನಾಥ ಸೈದನೂರ ವಯ 60 ವರ್ಷ ಜಾ; ಎಸ್.ಸಿ. ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ),  ಇವರ ಕೈಯಲ್ಲಿ ನಗದು ಹಣ 400/- ರೂ, 6) ಸುರೇಶ ತಂದೆ ವೈಜಿನಾಥ ಕಡಿಮನಿ ವಯ 36 ವರ್ಷ ಜಾ; ಎಸ.ಸಿ. ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ) ಇವರ ಕೈಯಲ್ಲಿ ನಗದು ಹಣ 350/-  ರೂ, 7) ಪ್ರವೀಣ ತಂದೆ ರಾಜಕುಮಾರ ಅತಿವಾಲೆ ವಯ 26 ವರ್ಷ ಜಾ; ಎಸ್.ಸಿ. ಮಾದಿಗಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ)ಇವರ ಕೈಯಲ್ಲಿ ನಗದು ಹಣ 250/- ರೂ, 8) ಖುದಬೋದ್ದಿನ ತಂದೆ ಶಮಶೋದ್ದಿನ ವಯ 50 ವರ್ಷ ಜಾ; ಮುಸ್ಲಿಂ,; ಕೂಲಿ ಕೆಲಸ ಸಾ; ತಳವಾಡ (ಕೆ)  ಇವರ ಕೈಯಲ್ಲಿ ನಗದು ಹಣ 350/- ರೂ, 9) ಜಗನ್ನಾಥ ತಂದೆ ಬಾಬುರಾವ ವೀರಶೇಟ್ಟೆ ವಯ 32 ವರ್ಷ ಜಾ; ಲಿಂಗಾಯತ ;; ಕೂಲಿ ಕೆಲಸ ಸಾ; ತಳವಾಡ (ಕೆ), ಇವರ ಕೈಯಲ್ಲಿ ನಗದು ಹಣ 450/- ರೂ, 10) ರವಿ ತಂದೆ ಬಾಬುರಾವ ಸೂರ್ಯವಂಶಿ ವಯ 34 ವರ್ಷ ಜಾ; ಮರಾಠಾ ಉ;ಮೇಕಾನಿಕ ಸಾ;ತಳವಾಡ (ಕೆ) ಇವರ ಕೈಯಲ್ಲಿ ನಗದು ಹಣ 250/- ರೂ, 11) ಪರಮೇಶ್ವರ ತಂದೆ ರಾಮಣ್ಣಾ ಸಿಂದೆ ವಯ 28 ವರ್ಷ ಜಾ; ಎಸ್.ಸಿ. ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ), ಇವರ ಕೈಯಲ್ಲಿ ನಗದು ಹಣ 300/- ರೂ,12) ವಿಜಯಕುಮಾರ ತಂದೆ ಗುಂಡಪ್ಪಾ ನಡವಿನದೊಡ್ಡಿ ವಯ 32 ವರ್ಷ ಜಾ; ಎಸ್.. ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ), ಇವರ ಕೈಯಲ್ಲಿ ನಗದು ಹಣ 450/- ರೂ,  13) ಸುಬಾಷ ತಂದೆ ಶಂಕರ ಗಾಯಕವಾಡ ವಯ 45 ವರ್ಷ ಜಾ; ಎಸ್.ಸಿ. ಹೊಲಿಯಾ ಉ;ಕೂಲಿ ಕೆಲಸ ಸಾ; ತಳವಾಡ (ಕೆ) ಇವರ ಕೈಯಲ್ಲಿ ನಗದು ಹಣ 420/- ರೂ, 14) ಕಲ್ಲಪ್ಪಾ ತಂದೆ ಪ್ರಭು ಹಲಗೆ ವಯ 30 ವರ್ಷ ಜಾ; ಕ್ರಿಶ್ಚನ ;: ಕೂಲಿ ಕೆಲಸ ಸಾ; ತಳವಾಡ (ಕೆ), ಇವರ ಕೈಯಲ್ಲಿ ನಗದು ಹಣ 480/- ರೂ. 15) ಶಂಕರ ತಂದೆ ರಾಜೇಪ್ಪಾ ಸಗರ ವಯ 25 ವರ್ಷ ಜಾ;ಉಪಾರ ;; ಕೂಲಿ ಕೆಲಸ ಸಾ; ತಳವಾಡ (ಕೆ), ಇವರ ಕೈಯಲ್ಲಿ ನಗದು ಹಣ 500/- ರೂ, ಹೀಗೆ ಎಲ್ಲರ ಕೈಯಲ್ಲಿದ್ದ ಒಟ್ಟು  ನಗದು ಹಣ 6,200 ರೂ ಇದ್ದು, ಹಾಗೂ ಎಲ್ಲರ ಮಧ್ಯ ನಗದು ಹಣ 1600 ರೂ ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು 7300/- ರೂ ನಗದು ಹಣ  ಹಾಗೂ ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 40/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 08/04/2020 ರಂದು 1900 ಗಂಟೆಗೆ  ಶ್ರೀ ಮಹೇಂದ್ರ ಕುಮಾರ ಪಿ ಎಸ  (ಅ ವಿ) ರವರು  ಠಾಣೆಯಲ್ಲಿರುವಾಗ  ಖಚೀತ ಬಾತ್ಮಿ ಬಂದಿದ್ದೆನೆಂದರೆ ಮೇಥಿ ಮೇಳಕುಂದಾ  ಗ್ರಾಮದ ನಾಮದೇವರಾವ ಬಿರಾದಾರ  ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪರೇಲ  ಎಂಬ ನಸಿಬೀನ ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಮೇಥಿಮೇಳಕುಂದಾ ಗ್ರಾಮದ ಶಿವಾರದಲ್ಲಿ  ನಾಮದೇವರಾವ ಬಿರಾದಾರ ರವರ ಹೊಲದ ಹತ್ತಿರ ಸ್ವಲ್ಪ ದೂರುದಲ್ಲಿ 1645  ಗಂಟೆಗೆ ಹೋಗಿ ಜೀಪ ಮರೆಯಾಗಿ ನಿಲ್ಲಿಸಿ ನಾವು ಎಲ್ಲರು ಜೀಪಿನಿಂದ ಕೆಳಗೆ ಇಳಿದು  ನಡೆದುಕೊಂಡು  ನಾಮದೇವರಾವ ಬಿರಾದಾರ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಹೊಲದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ 11 ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟಾ ಆಡುತಿದ್ದ ವ್ಯಕ್ತಿಗಳ ಮೇಲೆ  ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 1700 ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಗಳಿಗೆ ಹಿಡಿದುಕೊಂಡು ಅವರ  ಹೆಸರು ಮತ್ತು ವಿಳಾಸ ವಿಚಾರಿಸಲು 1) ರಮೇಶ ತಂದೆ ವಿಠ್ಠಲರಾವ ಮೋರೆ ವಯ 30 ಜಾತಿ ಮರಾಠಾಉ, ಒಕ್ಕಲುತನ ಸಾ/ ಮೇಥಿಮೇಳಕುಂದಾ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ಅವರ ಮುಂದೆ ನಗದು ಹಣ 700 ರೂ, ಇದ್ದು 2) ಸಂತೊಷ ತಂದೆ ಚಂದ್ರಪ್ಪಾ ಪಂಚಾಳ ವಯ 37 ವರ್ಷ ಜಾತಿ ಪಂಚಾಳ ಸಾ/ ಮೇಥಿಮೇಳಕುಂದಾ ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗು ನಗದು  ಹಣ 800/- ರೂ ಇದ್ದು 3)  ರಾಮಲಿಂಗ ತಂದೆ ಗುರನಾಥ ಸ್ವಾಮಿ  ವಯ 30 ಜಾತಿ ಸ್ವಾಮಿ ಉ, ಒಕ್ಕಲುತನ ಸಾ/ ಮೇಥಿಮೇಳಕುಂದಾ ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗೂ ನಗದು ಹಣ 800/- ರೂ ಇದ್ದು 4)ಲಿಂಗಯ್ಯಾ ತಂದೆ ಬಸಯ್ಯಾ ಸ್ವಾಮಿ ವಯ 33 ಜಾತಿ ಸ್ವಾಮಿ ಉ, ಒಕ್ಕಲುತನ ಸಾ/ ಮೇಥಿಮೇಳಕುಂದಾ .   ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗು ನಗದು ಹಣ 700/- ರೂ ಇದ್ದುಸಿದ್ದಲಿಂಗ ತಂದೆ ಗುರನಾಥ ಸ್ವಾಮಿ 39 ವರ್ಷ ಜಾತಿ ಸ್ವಾಮಿ , ಒಕ್ಕಲುತನ ಸಾ/ ಮೇಥಿಮೇಳಕುಂದಾ . ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗೂ ನಗದು ಹಣ 800/- ರೂ, 6) ನಾಗಮುರ್ತಿ ತಂದೆದೇವಿಂದ್ರ  ಪಾಂಚಾಳ ವಯ  35 ವರ್ಷ ಜಾತಿ ಪಂಚಾಳ , ಒಕ್ಕಲುತನ ಸಾ ಮೇಥಿಮೇಳಕುಂದಾ ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ನಗದು ಹಣ 500 ರೂ, 7) ದಿಗಂಬರ ತಂದೆ ಕಾಶಿನಾಥ ಪಾಂಚಾಳ ವಯ 35 ವರ್ಷ ಜಾತಿ ಬಡಿಗೆ ಉ, ಒಕ್ಕಲುತನ ಸಾ/ ಮೇಥಿಮೇಳಕುಂದಾ ಇವರ ಕೈಯಲ್ಲಿ 3ಇಸ್ಪೀಟ ಎಲೇಗಳು ಹಾಗೂ ನಗದು ಹಣ 500/- ರೂ  8) ಸಿದ್ರಾಮ ತಂದೆ ವೈಜಿನಾಥ ಮಾನಾಜಿ ವಯ 35 ವರ್ಷ ಜಾತಿ ಮರಾಠಾ ಉ, ಒಕ್ಕಲುತನ ಸಾ/ ಮೆಥಿಮೇಳಕುಂದಾ ಇತನ ಕೈಯಲ್ಲಿ 3 ಇಸ್ಪಟ ಲೆಗಳು ನಗದು ಹಣ 800 ರೂ ಇರುತ್ತವೆ 9) ರಾಜಕುಮಾರ ತಂದೆ ಚಂದ್ರಕಾಂತ ಪಂಚಾಳ ವಯ 35 ವರ್ಷ ಜಾತಿ ಪಂಚಾಳ , ಒಕ್ಕಲುತನ ಸಾ/ ಮೇಥಿಮೇಳಕುಂದಾ ಇತನ ಕೈಯಲ್ಲಿ 3 ಇಸ್ಪಟ ಲೆಗಳು ನಗದು ಹಣ 800 ರೂ ಇರುತ್ತವೆ  10) ಎಕನಾಥ ತಂದೆ ವೆಂಕಟರಾವ ಬಿರಾದಾರ ವಯ 40 ವರ್ಷ ಜಾತಿ ಮರಾಠಾ ಉ, ಒಕ್ಕಲುತನ ಸಾ/ ಮೇಥಿಮೇಳಕುಂದಾ  ಇವರ ಕೈಯಲ್ಲಿ 3 ಇಸ್ಪಟ ಎಲೆಗಳು ನಗದು ಹಣ 500 ರೂ ಇರುತ್ತವೆ 11) ಅಮರ ತಂದೆ ಮಲ್ಲಿಕಾರ್ಜುನ ಗುಡೆ ವಯ 36 ವರ್ಷ ಜಾತಿ ಲಿಂಗಾಯತ , ಒಕ್ಕಲುತನ ಸಾ/ ಮೇಥಿಮೇಳಕುಂದಾ ಇವರ ಕೈಯಲ್ಲಿ 3 ಇಸ್ಪಟ  ಲೆಗಳು ನಗದು ಹಣ 500 ರೂ ಇರುತ್ತವೆ  ಹೀಗೆ ಎಲ್ಲರ ಕೈಯಲ್ಲಿದ್ದ ಒಟ್ಟು  33 ಇಸ್ಪೀಟ ಎಲೆಗಳು ಹಾಗೂ ನಗದು ಹಣ 7400/- ರೂ ಇದ್ದು, ಹಾಗೂ ಎಲ್ಲರ ಮಧ್ಯ ನಗದು ಹಣ 8000/- ರೂ ಹಾಗೂ 19 ಇಸ್ಪೀಟ  ಎಲೆಗಳು ಇದ್ದು ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು 16000/- ರೂ ನಗದು ಹಣ  ಹಾಗೂ ಇಸ್ಪೀಟ ಎಲೆಗಳನ್ನು ಪಂಚರು ಸಮಕ್ಷಮ ಜಪ್ತಿ ಮಾಡಿ ಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.