ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಸೈಯದ ಗುಲ್ಜರ ಶಾಹಾ ತಂದೆ ಸೈಯ್ಯದ ಉಸ್ಮಾನ್ ಶಾಹಾ ಸಾಃ ಹಜ್ ಕಮಿಟಿ ನಯಾಮೊಹಲ್ಲಾ ಕಲಬುರಗಿ, ರವರ ಮಗಳಾದ ರುಬಿನಾ ಬೇಗಂ ಇವಳನ್ನು ಇದೇ ವರ್ಷ ಎಪ್ರಿಲ್
ತಿಂಗಳಲ್ಲಿ ಗುರು ಹಿರಿಯರು ಸೇರಿ ಜೇವರಗಿ ತಾಲೂಕಿನ ಮದರಿ ಗ್ರಾಮದ ಯಾಕೂಬ ಶಾಹಾ ತಂದೆ ಮದರ ಶಾಹಾ
ಈತನನ್ನು ನೊಡಿ ನಿಶ್ಚಯ ಮಾಡಿದ್ದು ದಿ; 04.04.19 ರಂದು ಇದೇ ಕಲಬುರಗಿಯ ಮಿಲನ್
ಪಂಕ್ಷನ್ ಹಾಲ್ ಹಾಗರಗಾ ರೊಡದಲ್ಲಿ ಮಗಳ ಮದುವೆ ಮಾಡಿ ಕೊಟ್ಟಿರುತ್ತೇವೆ. ಮದುವೆಯಲ್ಲಿ ಅಳಿಯನಿಗೆ
3 ತೊಲಿ ಬಂಗಾರ, 51000 ರೂ ನಗದು, ಬಟ್ಟೆ ಬರೆ ಸಲುವಾಗಿ, ಹಾಗು 150000 ರೂ ಬೆಲೆ ಬಾಳುವ ಪಾತ್ರೆ
ಸಾಮಾನುಗಳು, ಅಲಮಾರಿ,
ಪಲ್ಲಂಗ್, ಇತ್ಯಾದಿ ಮನೆ ಸಾಮಾನುಗಳನ್ನು ಕೊಟ್ಟಿರುತ್ತೆವೆ.
ಮದುವೆ ಆದ ನಂತರ ಮಗಳು ಗಂಡನ ಮನೆಗೆ ನಡಿಯಲು ಹೋಗಿರುತ್ತಾಳೆ. ಗಂಡನ ಮನೆಯಲ್ಲಿ ಗಂಡ ಯಾಕುಬ್
ಶಾಹಾ ತಂದೆ ಮದರ ಶಾಹಾ ಈತನ ತಾಯಿ ಖುರ್ಶಿದ್ ಬೀ,
ನಾದನಿ ತಬಸುನ್ ಗಂಡ ಮೈಬೂಬ್ ಶಾಹಾ, ಸನ್ನಹಾ ಗಂಡ ರಪೀಕ್ ಶಾಹಾ ಹೀಗೆ
ಇರುತ್ತಿದ್ದರು. ಗಂಡ ಮೆಕಾನಿಕ್ ಕೆಲಸ ಮಾಡಿಕೊಂಡು ಇರುತ್ತಿದ್ದನು. ಎರಡು ತಿಂಗಳ ಕಳೆದ ಮೇಲೆ
ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ ಕೊಡಲು ಪ್ರಾರಂಬಿಸಿದ್ದು ಮಗಳಿಂದ ಗೊತ್ತಾಗಿತ್ತು. ಒಂದು ಸಲ
ಆಸ್ಪತ್ರೆಗ ತೊರಿಸಿಕೊಳ್ಳಲು ನಮ್ಮ ಹತ್ತಿರ ಬಂದಿದ್ದು ಆ ವೇಳೆಯಲ್ಲಿ ಮಗಳು ಕಣ್ಣೀರಿಟ್ಟು ಗಂಡನ
ಮನೆಯಲ್ಲಿ ಅವಳ ಗಂಡ, ಅತ್ತೆ,
ಇಬ್ಬರು ನಾದನಿಯರು ಸೇರಿ ಗ್ಯಾರೇಜ ಸಲುವಾಗಿ ಮಶೀನ್ ಖರಿದಿಸಲು ತವರಿಂದ 2,00,000/-
ರೂ ತೆಗೆದುಕೊಂಡು ಬಾ ಎಂದು ದಿನಾಲು ಮನೆಯಲ್ಲಿ ಅವಾಚ್ಯವಾಗಿ ಬೈದು ಹಲ್ಲೆ ಮಾಡುವದು ಮಾಡಿ
ಮಾನಸಿಕ ಕಿರುಕುಳ ಹಿಂಸೆ ನಿಡುತ್ತಿದ್ದಾರೆ ಎಂದು ತಿಳಿಸಿದಳು. ಇಂದಿಲ್ಲ ನಾಳೆ ಸರಿ ಹೋಗಬಹುದು
ತಾಳಿಕೊಂಡು ಸಂಸಾರ ಮಾಡು ಎಂದು ಮಗಳಿಗೆ ದೈರ್ಯ ತುಂಬಿದ್ದೇವು. ಆದರು ಕೂಡ ಮಗಳಿಗೆ ತವರಿಂದ ಹಣ
ತರದೆ ಹೋದಲ್ಲಿ ಜೀವಂತ ಬಿಡುವದಿಲ್ಲ ಎಂದು ಹೆದರಿಕೆ ಹಾಕಿದ್ದು ಮಗಳು ನಮಗೆ ವಿಷಯ
ತಿಳಿಸಬಹುದೆಂದು ಮೊಬೈಲ್ ಸಹ ಕೊಡುತ್ತಿರಲಿಲ್ಲ. ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ/ಹಿಂಸೆ
ಕೊಡುತ್ತಿರುವ ವಿಚಾರ ಅಕ್ಕ ಪಕ್ಕದ ಜನರಿಗು ಕೂಡ ಗೊತ್ತಿರುತ್ತದೆ. ದಿ; 16.09.19 ರಂದು ಸಂಜೆ 5-00 ಘಂಟೆಯ ಹೊತ್ತಿಗೆ ಅಳಿಯ
ಯಾಕೂಬ್ ಶಾಹಾ ಪೋನ್ ಮಾಡಿ ನಿನ್ನ ಮಗಳು ಉರುಲು ಹಾಕಿಕೊಂಡು ಸತ್ತಿರುತ್ತಾಳೆ ಎಂದು ತಿಳಿಸಿದ.
ಸುದ್ದಿ ಕೇಳಿ ನಾನು ಮತ್ತು ಮಹ್ಮದ್ ಗೌಸ್ ಅಹ್ಮದ್ ,
ಸೈಯದ್ ಜಾಫರ್ ಶಾಹಾ, ಸೈಯದ್ ಅಮೀರ ಶಾಹಾ , ರಶೀದಾಬೇಗಂ,
ಹಾಗು ಇತರರು ಕೂಡಿಕೊಂಡು ಮದರಿ ಗ್ರಾಮಕ್ಕೆ ರಾತ್ರಿ ಹೋಗಿ ಮಗಳ ರುಬಿನಾ ಬೇಗಂ ಇವಳ ಮೃತ ದೇಹ
ನೋಡಿದೇವು. ಮಗಳ ಗಂಡ, ಅತ್ತೆ, ನಾದನಿಯರು, ಯಾರೂ ಇರಲಿಲ್ಲ, ದಿನಾಂಕ;
16.09.19 ರಂದು ಹಗಲು ಹೊತ್ತಿನಲ್ಲಿ ತವರಿಂದ ಹಣ ತರುವಂತೆ ಬೇಡಿಕೆ ಇಟ್ಟು ಮಗಳಿಗೆ ಹೊಡೆ ಬಡೆ
ಮಾಡಿ ಮಾನಸಿಕ ಹಿಂಸೆ/ಕಿರುಕುಳ ನೀಡಿ ಕೊಲೆಗೈದು ಅವಳ ಶವವನ್ನು ಓಡಣಿಯಿಂದ ಬಿಗಿದು ಕೋಣೆಯ ಪೈಪಿಗೆ
ಸಿಗಿಸಿರುತ್ತಾರೆ. ಶವದ ಕಾಲುಗಳು ಪೂರ್ತಿ ನೆಲದ ಮೇಲೆ ಕುಳಿತಿರುತ್ತವೆ. ಆದ್ದರಿಂದ ಅಳಿಯ
ಯಾಕೂಬ್ ಶಾಹಾ, ಅತ್ತೆ ಖುರ್ಶಿದ ಬೀ, ನಾದನಿ ತಬಸುನ್ ಹಾಗು ಸನ್ನಹಾ ಇವರುಗಳ ವಿರುದ್ದ
ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು
ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾಂತಪ್ಪ ತಂದೆ ಯಶ್ವಂತ್ರಾಯ ಅಮ್ಮಣ್ಣಿ ಸಾ: ಘತ್ತರಗಿ ತಾ||ಅಫಜಲಪೂರ ರವರು ದಿನಾಂಕ :17/09/2019 ರಂದು ಪಾನ ಶಾಪ ಅಂಗಡಿಯಲ್ಲಿ ಕುಳಿತಿದ್ದಾಗ ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು 35 ವಯಸ್ಸಿನವನು ಸರಾಯಿ ಕುಡಿದ ಅಮಲಿನಲ್ಲಿ ನಮ್ಮ ಪಾನ ಶಾಪ ಮುಂದೆ ಬಂದು ನಮ್ಮ ಪಾನ ಶಾಪ್ ಮುಂದೆ ಹಾಕಿರುವ ಲೈಟಿನ ವಾಯರನ್ನು ಕೈಯಿಂದ ಹಿಡಿದು ಜಗ್ಗಿದನು ಆಗ ಸದರಿಯವನಿಗೆ ಒಮ್ಮೆಲೆ ವಿದ್ಯುತ ತಗುಲಿ ನೆಲಕ್ಕೆ ಬಿದ್ದನು ಆಗ ನಾನು ಮತ್ತು ನಮ್ಮ ಪಾನಶಾಪ್ ಹತ್ತೀರ ನನ್ನ ಜೋತೆ ಮಾತನಾಡುತ್ತಾ ನಿಂತಿದ್ದ ನನ್ನ ಸ್ನೇಹಿತರಾದ 1)ಹಣಮಂತರಾಯ ತಂದೆ ಅವಪ್ಪಗೌಡ ಪಾಟೀಲ 2)ಜಗದೇವಪ್ಪ ತಂದೆ ದತ್ತು ಲಾಳಸಂಗಿ ಮೂರು ಜನ ಹೋಗಿ ಹತ್ತೀರ ನೋಡಲಾಗಿ ಸ್ಥಳದಲ್ಲಿಯೆ ಮೃತಪಟ್ಟನು ಸದರಿ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ ಸದರಿಯವನು ಅಂದಾಜು 5 ರಿಂದ 5 ½ ಇಂಚು ಎತ್ತರ ಸದೃಡವಾದ ದೇಹ ಹೊಂದಿದ್ದು ಮೈಮೇಲೆ ಒಂದು ಬಿಳಿ ಟವಲ ಸುತ್ತಿಕೊಂಡಿದ್ದು ಯಾವುದೆ ಬಟ್ಟೆ ಉಟ್ಟಿರುವದಿಲ್ಲ ದುಂಡು ಮುಖ ಗೋದಿ ಬಣ್ಣ ಹೊಂದಿರುತ್ತಾನೆ. ಕಾರಣ ಸದರಿ ಅಪರಿಚಿತ ವ್ಯಕ್ತಿ ಅಂದಾಜು ವಯಸ್ಸು 35 ಈತನು ಕುಡಿದ ಅಮಲಿನಲ್ಲಿ ನಮ್ಮ ಪಾನ ಶಾಪ ಮುಂದೆ ಹಾಕಿರುವ ಲೈಟಿನ ವಾಯರ್ ಹಿಡಿದು ಎಳೆದಿದ್ದರಿಂದ ಸದರಿಯವನಿಗೆ ವಿದ್ಯುತ ತಗಲಿ ಆಕಸ್ಮೀಕವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.