Police Bhavan Kalaburagi

Police Bhavan Kalaburagi

Tuesday, April 30, 2019

KALABURAGI DISTRICT REPORTED CRIMES

ಕ್ರಿಕೇಟ ಬೆಟ್ಟಿಂಗ ದಂಧೆಕೋರನ ಬಂಧನ :
ಚೌಕ ಠಾಣೆ : ದಿನಾಂಕ.29.04.2019 ರಂದು ನೇಹರು ಗಂಜ್ ಗಾಂಧಿನಗರ ಕಮಾನ ಮುಂದೆ ಒಬ್ಬ ಮನುಷ್ಯನು ಐಪಿಎಲ್‌ ಕ್ರಿಕೇಟ ಮ್ಯಾಚ ಸನ್ ರೈಸರ್ ಹೈದ್ರಾಬಾದ ಮತ್ತು ಪಂಜಾಬ ಕಿಂಗ್ಸ ಲೆವನ್ ಟೀಮ್‌ಗಳ ಮದ್ಯ ನಡೆದಿರುವ ಮ್ಯಾಚ್‌‌ನಲ್ಲಿ ಕ್ರಿಕೇಟ ಬೆಟ್ಟಿಂಗ್‌ ದಂದೆ ನಡೆಸುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಐ. ಚೌಕ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಾಂಧಿನಗರ ಕಮಾನ ಸ್ವಲ್ಪ ದೂರದಲ್ಲಿರುವಂತೆ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಹೋಗಿ ಸ್ವಲ್ಪ ಹತ್ತಿರದಲ್ಲಿ ನಿಂತು ನೋಡಲು ಒಬ್ಬ ಮನುಷ್ಯನು ಗಾಂಧಿನಗರ ಕಮಾನ ಹತ್ತಿರ ರಸ್ತೆಯ ಮೇಲೆ ನಿಂತು ಮೊಬೈಲ್‌ ಫೋನ್‌ ಮುಖಾಂತರ ಐಪಿಎಲ್‌ ಕ್ರಿಕೇಟ ಮ್ಯಾಚನಲ್ಲಿನ ನಡೆಯುತ್ತಿರುವ ಒಂದು ಬಾಲಿಗೆ 6 ಹೊಡೆದರೆ  3000/-, 4 ಹೊಡೆದರೆ 2000/-ರೂ ಅಂತ ಮಾತನಾಡುವದನ್ನು ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಬೆಟ್ಟಿಂಗ್‌ ದಂದೆಕೊರನಿಗೆ ಹಿಡಿದು ಅವನ ಹೆಸರು ವಿಚಾರಿಸಲಾಗಿ ಅಬ್ರಾರಖಾನ್ ತಂದೆ ಅಬ್ದುಲ ಜಬ್ಬಾರಖಾನ್, ಸಾ: ಖಮರ ಕಾಲೂನಿ ಕಲಬುರಗಿ ಅಂತಾ ತಿಳಿಸಿದ್ದು, ಇತನಿಗೆ ಹಿಡಿದು ಅಂಗ ಶೋದನೆ ಮಾಡಲು ಸದರಿಯವನ ಹತ್ತಿರ ಕೃತ್ಯಕ್ಕೆ ಬಳಿಸಿದ 1) ಸ್ಯಾಮಸಂಗ್ ಮೊಬೈಲ್‌ ಫೊನ್‌ ಅ:ಕಿ:2,000/- ರೂ. ಮತ್ತು ಬೆಟ್ಟಿಂಗ ಜೂಜಾಟಕ್ಕೆ ಬಳಸಿದ ನಗದು ಹಣ 50,000/- ರೂಪಾಯಿಗಳನ್ನು ಹಾಗೂ ಬೆಟ್ಟಿಂಗ ಪಡೆದುಕೊಂಡು ಯಾರಿಗೆ ಕೊಡುತ್ತಿ ಅಂತ ವಿಚಾರಿಸಲು ಖಾಜಾ ಬಂದೇನವಾಜ ದರ್ಗಾ ಹತ್ತಿರದ ಗುಡ್ಡು ಎಂಬುವನಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆ ಹಾಜರುಪಡಿಸಿದ್ದು ಇರುತ್ತದೆ. ಸದರಿ ಆರೋಪಿತನು ಕ್ರಿಕೇಟ ಬೆಟ್ಟಿಂಗ ದಂದೆ ಮಾಡಿದ್ದು.  ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 29/04/2019 ರಂದು  ನರೋಣಾ  ಗ್ರಾಮದಲ್ಲಿರುವ  ಬಸ್‌ ನಿಲ್ದಾಣದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನರೋಣಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ನರೋಣಾ  ಗ್ರಾಮದಲ್ಲಿರುವ  ಬಸ್‌ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಬಸ್ ನಿಲ್ದಾಣದ ಮುಂದಿನ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ದಾಳಿಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಸವರಾಜ ತಂದೆ ಮಾಳಪ್ಪಾ ಪೂಜಾರಿ, ಸಾ:ನರೋಣಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 730/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವಬೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ: 29/04/2019 ರಂದು ನರೋಣಾ  ಗ್ರಾಮದಲ್ಲಿರುವ  ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ನರೋಣಾ  ಗ್ರಾಮದಲ್ಲಿರುವ  ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವಸ್ಥಾನದ ಹತ್ತಿರ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅಣ್ಣಾರಾಯ ತಂದೆ ಅಂಬಾರಾಯ ಮಹಾಗಾಂವ, ಸಾ:ನರೋಣಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3)ನಗದು ಹಣ 820/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ: 29/04/2019 ರಂದು ನರೋಣಾ  ಗ್ರಾಮದಲ್ಲಿರುವ  ಸಿದ್ದಾರೂಢ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ  ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ನರೋಣಾ  ಗ್ರಾಮದಲ್ಲಿರುವ  ಸಿದ್ದಾರೂಢ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಿದ್ದಾರೂಢ ದೇವಸ್ಥಾನದ ಹತ್ತಿರ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಕ್ಷೇಮಲಿಂಗ ತಂದೆ ಸಾಯಬಣ್ಣಾ ವಗ್ಗೆ, ಸಾ ನರೋಣಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 1115/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶಿವಲೀಲಾ ಗಂಡ ಶ್ರಿಶೈಲ ಇಜೇರಿ ಸಾ; ಹರನಾಳ ಹಾಲಿವಸತಿ- ಕುಕನೂರ ಗ್ರಾಮ ರವರಿಗೆದಿನಾಂಕ 12-05-2014 ರಂದು ಹರನಾಳ ಗ್ರಾಮದ ಶ್ರೀಶೈಲ ತಂದೆ ಮಲ್ಲಿಕಾರ್ಜುನ ಇಜೇರಿ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ, ನಮ್ಮ ನಿಶ್ಚಿತಾರ್ಥವು ಕುಕನೂರ ಗ್ರಾಮದಲ್ಲಿ ನೆರವೇರಿದ್ದು, ಆ ಸಮಯದಲ್ಲಿ  ನಮ್ಮ ತಂದೆ ಮತ್ತು ನಮ್ಮ ಕಾಕಾ ಸಿದ್ರಾಮಪ್ಪ ತಂದೆ ಸಿದ್ದಪ್ಪ ಬಿರಾದಾರ, ಮಲ್ಲನಗೌಡ ತಂದೆ ಸಾಯಬಣ್ಣಗೌಡ ಪೊಲೀಸ ಪಾಟೀಲ, ಶಿವರಾಯಗೌಡ ತಂದೆ ಹಣಮಂತ್ರಾಯ ಸಾಹು, ಭೀಮಣ್ಣ ತಂದೆ ಗುರಪ್ಪ ರಬಗೊಂಡ, ಹಾಗು ಹರನಾಳ ಗ್ರಾಮದ ಬಸವರಾಜ ತಂದೆ ಭೀಮರಾಯ ಸಾಹು, ಕಲ್ಯಾಣರಾಯ ತಂದೆ ಶರಣಪ್ಪ ಸಾಹು, ಕೇಶವರಾಯ ತಂದೆ ಶಿವರಾಯ ಸಾಹು ಹಿಗೆಲ್ಲರ ಸಮಕ್ಷಮದಲ್ಲಿ ವರನ ಒತ್ತಾಯದ ಮೇರೆಗೆ ವರದಕ್ಷಣೆ ಮಾತನಾಡಿದ್ದು, ಮದುವೆ ಕಾಲಕ್ಕೆ 10 ತೊಲಿ ಬಂಬಗಾರ ಮತ್ತು ಒಂದು ಲಕ್ಷ ರೂಪಾಯಿ ನಗದು ಹಣ, ಕೈ ಗಡಿಯಾರ ಮತ್ತು 1,50,000/- ರೂ ಕಿಮ್ಮತ್ತಿನ ಗೃಹ ಬಳಕೆ ಸಾಮಾನುಗಳು ಕೊಡುವಂತೆ ಮಾತನಾಡಿದ್ದು ಇರುತ್ತದೆ, ಅದರಂತೆ ನಮ್ಮ ಮದುವೆಯು ವರನ ಮನೆಯ ಮುಂದೆ ಹರನಾಳ ಗ್ರಾಮದಲ್ಲಿ ನಡೆದಿದ್ದು ಇರುತ್ತದೆ, ಆ ಸಮಯದಲ್ಲಿ ಹಿರಿಯರ ಸಮಕ್ಷಮ 10 ತೊಲಿ ಬಂಗಾರದ 10 ಸುತ್ತುಂಗುರುಗಳು ಮತ್ತು 1 ಲಕ್ಷ ರೂಪಾಯಿ ನಗದು ಹಣ ಹಾಗು ಕೈ ಗಡಿಯಾರ ಮತ್ತು ಅಂದಾಜು 1,50,000/- ರೂ ಕಿಮ್ಮತ್ತಿನ ಸುರಗಿ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ 15-20 ದಿನ ಹರನಾಳ ಗ್ರಾಮದಲ್ಲೆ ಇದ್ದೇವು, ನನ್ನ ಗಂಡ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ನನ್ನ ಗಂಡ ನನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವು, ನಂತರ ನಾವಿಬ್ಬರು ಒಂದು ವರ್ಷ ಅನ್ನೊನ್ಯವಾಗಿದ್ದೇವು, ತದನಂತರ ನನ್ನ ಗಂಡ ನನಗೆ ಸರಿಯಾಗಿ ನೋಡಿಕೊಳ್ಳದೆ, ನಿನಗ ಮದುವೆ ಮಾಡಿಕೊಂಡಿದ್ದರಿಂದ ನನಗೆ ಸಾಲವಾಗಿದೆ ನಿಮ್ಮ ತವರು ಮನೆಯಿಂದ ಇನ್ನು 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಅನ್ನುತ್ತಾ ದಿನಾಲು ನನಗೆ ಕಿರುಕುಳ ಕೊಡುತ್ತಿದ್ದನು, ಈ ಬಗ್ಗೆ ನಾನು ನಮ್ಮ ತವರು ಮನೆಯವರಿಗೆ ಹೇಳುತ್ತಾ ಬಂದಿರುತ್ತೇನೆ, ನಂತರ ದಿನಾಂಕ 01-06-2016 ರಂದು ಸಾಯಂಕಾಲ ನನ್ನ ಗಂಡ ನನಗೆ ಬೆಂಗಳೂರಿನಿಂದ ಕರೆದುಕೊಂಡು ಹರನಾಳ ಗ್ರಾಮಕ್ಕೆ ಬಂದನು, ದಿನಾಂಕ 02-06-2016 ರಂದು ನಮ್ಮ ಅತ್ತೆ ಶಕುಂತಲಾ ಮತ್ತು ಮಾವ ಮಲ್ಲಿಕಾರ್ಜುನ ರವರು ನನ್ನ ಗಂಡನಿಗೆ ಈ ರಂಡಿಗಿ ಇಲ್ಲಿಗೆ ಯ್ಯಾಕೆ ತಂದಿದ್ದಿ, ಅಲ್ಲೇ ಏಲ್ಲಾದರು ಖಲಾಸ ಮಾಡಬೇಕಾಗಿತ್ತು, ಈ ರಂಡಿಯಿಂದ ನಿನ್ನ ಬಾಳು ಹಾಳಾಗಿದೆ ಅಂತಾ ಅಂದು ನನಗೆ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ, ನಂತರ ನಮ್ಮ ತಂದೆ ತಾಯಿಯವರು ಹರನಾಳ ಗ್ರಾಮಕ್ಕೆ ಬಂದು ನನ್ನ ಗಂಡನಿಗೆ ಮತ್ತು ಅತ್ತೆ ಮಾವನಿಗೆ ತಿಳವಳಿಕೆ ಹೇಳಿದರು ಕೇಳದೆ ನಿಮ್ಮ ಮಗಳು ನಮ್ಮ ಮನೆತನಕ್ಕೆ ಒಪ್ಪುವುದಿಲ್ಲಾ, ಮದುವೆ ಮಾಡಿ ನಮಗೆ ಸಾಲ ಆಗಿದೆ ಇನ್ನು 1 ಲಕ್ಷ ರೂಪಾಯಿ ವರದಕ್ಷಣೆ ಕೊಟ್ಟು ನಿಮ್ಮ ಮಗಳಿಗೆ ಇಲ್ಲೇ ಬಿಟ್ಟು ಹೋಗರಿ ಇಲ್ಲಾ ಅಂದರೆ ನಿಮ್ಮ ಮಗಳಿಗೆ ಕರೆದುಕೊಂಡು ಹೋಗರಿ ಅಂತಾ ಬೈದು ನನಗೆ ನಮ್ಮ ತಂದೆ ತಾಯಿಯೊಂದಿಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ, ನಂತರ ದಿನಾಂಕ 22-05-2017 ರಂದು ನಮ್ಮ ಅಣ್ಣ ಬಸವರಾಜನ ಮದುವೆ ಸಮಯದಲ್ಲಿ ನನ್ನ ಗಂಡ ಮುಂಚಿತವಾಗಿ 15 ದಿನ ನಮ್ಮ ಮನೆಗೆ ಬಂದು ನಮ್ಮ ಮನೆಯಲ್ಲೇ ಇದ್ದು, ನಮ್ಮ ತಂದೆ ತಾಯಿಗೆ ಮಾತನಾಡಿ ಕೆಲವು ದಿನ ಬಿಟ್ಟು ನನಗೆ ತನ್ನೊಂದಿಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿ ಹೋದನು, ನಂತರ ಮರಳಿ ನನಗೆ ಕರೆಯಲು ಬರಲಿಲ್ಲಾ, ನಂತರ ನಮ್ಮ ತಂದೆ ಮತ್ತು ನಮ್ಮ ಕಾಕಾ ಸಿದ್ರಾಮಪ್ಪ ತಂದೆ ಸಿದ್ದಪ್ಪ ಬಿರಾದಾರ, ಮಲ್ಲನಗೌಡ ತಂದೆ ಸಾಯಬಣ್ಣಗೌಡ ಪೊಲೀಸ ಪಾಟೀಲ, ಶಿವರಾಯಗೌಡ ತಂದೆ ಹಣಮಂತ್ರಾಯ ಸಾಹು, ಭೀಮಣ್ಣ ತಂದೆ ಗುರಪ್ಪ ರಬಗೊಂಡ ಹಿಗೆಲ್ಲರೂ ಕೂಡಿಕೋಂಡು ಹರನಾಳ ಗ್ರಾಮಕ್ಕೆ ಹೋಗಿ ನನ್ನ ಗಂಡ ಮತ್ತು ನಮ್ಮ ಅತ್ತೆ ಮಾವನಿಗೆ 1 ಲಕ್ಷ ರೂಪಾಯಿ ಕೊಡತಿವಿ, ಇನ್ನು ಮುಂದೆ ನಮ್ಮ ಮಗಳಿಗೆ ಸರಿಯಾಗಿ ನೋಡಿಕೊಳ್ಳಿ ಅಂತಾ ಹೇಳಿದಾಗ ಅವರು ಮೊದಲು 1 ಲಕ್ಷ ರೂಪಾಯಿ ಕೊಟ್ಟು ಮಾತನಾಡಿ ಸೂಳಿ ಮಕ್ಕಳ್ಯಾ ಇಲ್ಲಾ ಅಂದರ ಇಲ್ಲಿಂದ ಹೋಗರಿ ಅಂತಾ ಅಂದು ನಮಗೆ ಬೈದು ಮನೆಯಿಂದ ಹೊರಗೆ ಕಳುಹಿಸಿದರು, ನಿನ್ನೆ ದಿನಾಂಕ 28-04-2019 ರಂದು 5;00 ಪಿ.ಎಂ ಕ್ಕೆ ನಾನು ನಮ್ಮ ಅಣ್ಣ ಬಸವರಾಜ ರವರು ಕೂಡಿ ನನ್ನ ಗಂಡನ ಮನೆಗೆ ಹರನಾಳ ಗ್ರಾಮಕ್ಕೆ ಹೋಗಿದ್ದೇವು, ಮನೆಯಲ್ಲಿ ನಮ್ಮ ಅತ್ತೆ ಮತ್ತು ಮಾವನಿದ್ದು, ಅವರು ನನಗೆ ನಿನ್ನ ಗಂಡ ನಮ್ಮ ಮನೆಯಲ್ಲಿ ಇಲ್ಲಾ, ನಿನ್ನ ಗಂಡ ಇದ್ದಲ್ಲಿ ಹೋಗು ರಂಡಿ ಅಂತಾ ಅಂದು ನನಗೆ ಕೈಯಿಂದ ಹೊಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದರು, ಈ ಮೇಲ್ಕಂಡ ನನ್ನ ಗಂಡ ಮತ್ತು ಅತ್ತೆ ಶಕುಂತಲಾ ಹಾಗು ಮಾವ ಮಲ್ಲಿಕಾರ್ಜುನ ತಂದೆ ಚಂದ್ರಾಮಪ್ಪ ಇಜೇರಿ ರವರು ವರದಕ್ಷಣೆ ತರುವ ವರೆಗೆ ಮನೆಗೆ ಬರಬ್ಯಾಡ ಅಂತಾ ನನಗೆ ತಮ್ಮ ಮನೆಯಲ್ಲಿ ಕರೆದುಕೊಳ್ಳದೆ, ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ವರದಕ್ಷಣೆ ತರುವಂತೆ ಒತ್ತಾಯಿಸಿ ನನಗೆ ನಿರಂತರ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.