ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-06-2021
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 22/2021, ಕಲಂ. 498(ಎ), 323, 504 ಜೊತೆ 34 ಐಪಿಸಿ ಮತ್ತು ಕಲಂ. 3 & 4 ಡಿ.ಪಿ ಕಾಯ್ದೆ :-
ಫಿರ್ಯಾದಿ ಮಹೇಶ್ವರಿ ಗಂಡ ಶ್ರೀನಿವಾಸ ವಯ: 23 ವರ್ಷ, ಜಾತಿ: ಲಿಂಗಾಯತ, ಸಾ: ಅಗ್ರಹಾರ, ತಾ: ಬೀದರ ರವರು ಶ್ರೀನಿವಾಸ ತಡಗೋರೆ ಇತನಿಗೆ ಪ್ರೀತಿಸಿ ದಿನಾಂಕ 18-10-2020 ರಂದು ರಜಿಸ್ಟರ್ ಮದುವೆಯಾಗಿದ್ದು, ಮದುವೆಯಾದ ನಂತರ ಗಂಡ ಶ್ರೀನಿವಾಸ ಹಾಗೂ ಅತ್ತೆಯಾದ ಇಂದಿರಾಬಾಯಿ ರವರು ಒಂದು ತಿಂಗಳು ಮಾತ್ರ ಚೆನ್ನಾಗಿ ನೋಡಿಕೊಂಡಿರುತ್ತಾರೆ, ನಂತರ ಗಂಡ ಸರಾಯಿ ಕುಡಿಯುವ ಚಟಕ್ಕೆ ಬಿದ್ದು, ನಿಮ್ಮ ತಂದೆ, ತಾಯಿ ನನಗೆ ಏನು ಕೊಟ್ಟಿರುವದಿಲ್ಲ ನಾನು ಬೇರೆ ಹುಡುಗಿಗೆ ಮದುವೆ ಮಾಡಿಕೊಂಡಿದ್ದರೆ ಹಣ ಕೊಡುತ್ತಿದ್ದರು, ನಿನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಅವಾಚ್ಯ ಶಬ್ದಗಳಿಂದ ಮನಸ್ಸಿಗೆ ಹತ್ತುವ ಹಾಗೆ ಬೈಯುವುದು, ಸಂಶಯ ಪಡುವÅದು ಮಾಡುತ್ತಾ ಕೈಯಿಂದ ಹೊಡೆ-ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಸದರಿ ವಿಷಯ ತನ್ನ ತಂದೆ, ತಾಯಿ, ಅಕ್ಕ ಹಾಗೂ ಪರಿಚಯವಿರುವ ಪರಮೇಶ ತಂದೆ ಶಿವರಾಜ, ಮಲ್ಲಿಕಾರ್ಜುನ ತಂದೆ ಶರಣಪ್ಪಾ ರವರಿಗೂ ಸಹ ತಿಳಿಸಿದಾಗ ಅವರೆಲ್ಲರೂ ಕೂಡಿ ಗಂಡ ಮತ್ತು ಅತ್ತೆಗೆ 2-3 ಸಾರಿ ಬುದ್ದಿವಾದ ಹೇಳಿದರೂ ಸಹ ಅವರು ಅದೇ ರೀತಿ ಹೊಡೆ-ಬಡೆ ಮಾಡುತ್ತಾ ಬಂದಿರುತ್ತಾರೆ, ಹೀಗಿರುವಾಗ ದಿನಾಂಕ 10-06-2021 ರಂದು ಆರೋಪಿತರಾದ ಗಂಡ 1) ಶ್ರೀನಿವಾಸ ತಂದೆ ದಿಗಂಬರ್ ತಡಗೊರೆ ವಯ: 26 ವರ್ಷ, ಅತ್ತೆ 2) ಇಂದಿರಾಬಾಯಿ ಗಂಡ ದಿಗಂಬರ್ ತಡಗೊರೆ ವಯ: 55 ವರ್ಷ, ಇಬ್ಬರು ಸಾ: ಅಗ್ರಹಾರ ಗ್ರಾಮ, ತಾ: ಬೀದರ ಇವರಿಬ್ಬರು ಫಿರ್ಯಾದಿಯ ಜೊತೆಯಲ್ಲಿ ಜಗಳ ತೆಗೆದು ನಿನು ನಿನ್ನ ತವರು ಮನೆಗೆ ಹೋಗು ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೆನೆ ನನಗೆ ಹೆಚ್ಚಿನ ಹಣ ಬರುತ್ತದೆ, ನೀನು ಏನು ತಂದಿರುವದಿಲ್ಲ ಅಂತ ಬೈದು ಕೂದಲು ಹಿಡಿದು ಎಳೆದು ಕೈಯಿಂದ ತಲೆಯ ಮೇಲೆ, ಬೆನ್ನಿನ ಮೇಲೆ ಹೋಡೆದಿರುತ್ತಾನೆ, ಗಂಡ ಹೊಡೆ-ಬಡೆ ಮಾಡುವಾಗ ಅತ್ತೆ ಸಹ ಕೂದಲು ಹಿಡಿದು ಇನ್ನೂ ಹಣ ತೆಗೆದುಕೊಂಡು ಬಾ ಅಂತ ಮನೆಯಿಂದ ಹೊರಗೆ ಹಾಕಿರುತ್ತಾರೆ, ಸದರಿ ಘಟನೆಯನ್ನು ಪಕ್ಕದ ಮನೆಯ ಗುಂಡಮ್ಮಾ ಹಾಗೂ ಮಹಾದೇವಿ ರವರು ನೋಡಿರುತ್ತಾರೆ, ಅದೇ ದಿವಸ ಫಿರ್ಯಾದಿಯು ತನ್ನ ತಂದೆ-ತಾಯಿಯ ಮನೆಗೆ ಬಂದು ಸದರಿ ವಿಷಯವನ್ನೆಲ್ಲಾ ಅವರಿಗೆ ತಿಳಿಸಿ ತವರು ಮನೆಯಲ್ಲಿಯೇ ವಾಸವಾಗಿದ್ದು ಇರುತ್ತದೆ ಹಾಗೂ ದಿನಾಂಕ 14-06-2021 ರಂದು ಫಿರ್ಯಾದಿಗೆ ತಲೆಯಲ್ಲಿ ನೋವು ಜಾಸ್ತಿಯಾಗಿದ್ದರಿಂದ ತಂದೆ-ತಾಯಿಯವರು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 26/2021, ಕಲಂ. 498(ಎ), 323, 504, 506 ಜೊತೆ 149 ಐಪಿಸಿ :-
ಫಿರ್ಯಾದಿ ಫರಿನ್ ಗಂಡ ಸಲ್ಲಾವುದ್ದಿನ ಶೇಖ್ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಭಂಡಾರ ಕಮಠಾ ರವರಿಗೆ 2005 ನೇ ಸಾಲಿನಲ್ಲಿ ಭಂಡಾರ ಕಮಠಾ ಗ್ರಾಮದ ಸಲ್ಲಾವುದ್ದಿನ ತಂದೆ ಇಸಾಮೊದ್ದಿನ ಶೇಖ್ ಇವರೊಂದಿಗೆ ವಿಧಿ ವಿಧಾನದಂತೆ ಲಗ್ನ ಮಾಡಿಕೊಟ್ಟಿರುತ್ತಾರೆ, ಫಿರ್ಯಾದಿಗೆ 5 ಗಂಡು ಮಕ್ಕಳಿರುತ್ತಾರೆ, ಮದುವೆಯಾದ ನಂತರ ಗಂಡ 4-5 ವರ್ಷಗಳು ಚೆನ್ನಾಗಿ ನೊಡಿಕೊಂಡು ನಂತರ ಆರೋಪಿತರಾದ ಗಂಡ ಸಲ್ಲಾವುದ್ದಿನ, ಮಾವ ಇಸಾಮೊದ್ದಿನ ತಂದೆ ತಾಜೋದ್ದಿನ ಶೇಖ್, ಭಾವ ಇಕ್ರಾಮೊದ್ದಿನ ತಂದೆ ಇಸಾಮೊದ್ದಿನ ಶೇಖ್, ಮೈದುನ ಹಿಮಾಯುದ್ದಿನ ತಂದೆ ಇಸಾಮೊದ್ದಿನ ಶೇಖ್, ನೆಗೆಣಿ ಆಫೀನ್ ಗಂಡ ಇಕ್ರಾಮೊದ್ದಿನ ಶೇಖ್ ಹಾಗು ನಾದಣಿ ತೈಸಿಮ್ ಗಂಡ ಮೊಬಾರಕ್ ರವರೆಲ್ಲರೂ ಕೂಡಿ ಫಿರ್ಯಾದಿಗೆ ನೀನು ನೊಡಲು ಸರಿಯಾಗಿಲ್ಲ, ನೀನಗೆ ಮನೆ-ಹೊಲ ಕೆಲಸ ಮಾಡಲು ಬರುವುದಿಲ್ಲಾ, ನೀನು ನಮ್ಮ ಮನೆಯಲ್ಲಿ ಇರಬೇಡ ಅಂತ ಜಗಳ ತಕರಾರು ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿರುತ್ತಾರೆ, ನಂತರ ಸುಮಾರು 2 ತಿಂಗಳ ಹಿಂದೆ ಗಂಡ ಸಲ್ಲಾವುದ್ದಿನ ಇತನು ಸರಾಯಿ ಕುಡಿದು ಮನೆಗೆ ಬಂದು ನೀನು ನಿಮ್ಮ ಅಣ್ಣ ತಮ್ಮಂದಿರ ಹತ್ತಿರ ಹೋಗಿ ಖರ್ಚಿಗೆ ಹಣ ತೆಗೆದುಕೊಂಡು ಬಾ ಅಂತ ಅಂದಾಗ ಫಿರ್ಯದಿಯು ತನ್ನ ಗಂಡನಿಗೆ ಏಕೆ? ಬೈಯುತ್ತಿದ್ದಿರಿ ಅಂತ ಕೇಳಿದಾಗ ಗಂಡ ಕೈಯಿಂದ ಮುಖದ ಮೇಲೆ ಹಾಗೂ ಬೆನ್ನಲ್ಲಿ ಹೊಡೆದಿರುತ್ತಾನೆ, ನಂತರ ಫಿರ್ಯಾದಿಯು ತನ್ನ ಮಕ್ಕಳಿಗೆ ಗಂಡನ ಮನೆಯಲ್ಲಿ ಬಿಟ್ಟು ತನ್ನ ತವರು ಮನೆಗೆ ಹೊಗಿದ್ದು ಇರುತ್ತದೆ, ಹೀಗಿರುವಲ್ಲಿ ದಿನಾಂಕ 15-06-2021 ರಂದು ಫಿರ್ಯಾದಿಯು ತನ್ನ ಗಂಡನ ಮನೆಗೆ ಭಂಡಾರ ಕಮಠಾ ಗ್ರಾಮಕ್ಕೆ ಬಂದಾಗ ಸದರಿ ಆರೋಪಿತರೆಲ್ಲರೂ ಕೂಡಿ ಫಿರ್ಯಾದಿಗೆ ನೀನು ನ್ಮ ಮನೆಗೆ ಏಲೆ? ಬಂದಿರುವೆ ಅಂತ ಅವಾಚ್ಯವಾಗಿ ಬೈದು ಮನೆಯಿಂದ ಹೊರಗೆ ತಳ್ಳಿರುತ್ತಾರೆ, ನೀನು ಇಷ್ಟು ದಿವಸ ಯಾರ ಜೊತೆ ಹೊಗಿರುವೆ ಅಂತ ಅವಾಚ್ಯವಾಗಿ ಬೈದಿರುತ್ತಾರೆ, ನೀನು ಮನೆಯಲ್ಲಿ ಕಾಲು ಇಟ್ಟರೆ ನೀನಗೆ ಜೀವದಿಂದ ಹೊಡೆದು ಹಾಕುತ್ತೆನೆ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ, ಕೂದಲು ಹಿಡಿದು ಜಿಂಝಾ ಮುಷ್ಟಿ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 37/2021, ಕಲಂ. ಮಹಿಳೆ ಕಾಣೆ :-
ದಿನಾಂಕ 31-05-2021 ರಂದು ಫಿರ್ಯಾದಿ ಶೋಭಾ ಗಂಡ ಸುನೀಲ ಗಡಕರ ವಯ: 38 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಬಗದುರಿ, ತಾ: ಬಸವಕಲ್ಯಾಣ ರವರ ಮಗಳಾದ ಸ್ವಾತಿ ಇವಳು ಬಹಿರ್ದೆಸೆಗೆ ಹೋಗಿ ಬರುವುದಾಗಿ ಡಬ್ಬಿ ಹಿಡಿದುಕೊಂಡು ಮನೆಯಿಂದ ಹೋಗಿ ಬಹಳ ಹೊತ್ತಾದರು ಮನೆಗೆ ಬರದ ಕಾರಣ ಫಿರ್ಯಾದಿಯು ಗ್ರಾಮದಲ್ಲಿ ಮತ್ತು ಪರಿಚಯ ಇರುವ ಎಲ್ಲಾ ಕಡೆ ಹುಡುಕಾಡಿ ನೋಡಲಾಗಿ ಮಗಳು ಪತ್ತೆಯಾಗಿರುವುದಿಲ್ಲಾ, ಅವಳು ಕಾಣೆಯಾಗಿರುತ್ತಾಳೆ, ಮಗಳು ಮನೆಯಿಂದ ಹೋಗುವಾಗ ಅವಳ ಮೈಮೇಲೆ 1) ಪಿಂಕ್ ಬಣ್ಣದ ಟಾಪ, 2) ಕಪ್ಪು ಬಣ್ಣದ ಲೆಗಿನ್ಸ್, 3) ಎಡಕೈಯಲ್ಲಿ ಬೆಳ್ಳಿ ಕಡಗಾ ಇರುತ್ತವೆ, 4) 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿರುತ್ತಾಲೆ, 5) ಕನ್ನಡ ಮಾತಾನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 55/2021, ಕಲಂ. 427 ಐಪಿಸಿ ಜೊತೆ 2(ಎ) Karnataka Prevention of Distruction & Loss of Property Act 1981 :-
ಯಾರೋ ಕೀಡಿಗೇಡಿಗಳು ದಿನಾಂಕ 31-05-2021 ರಂದು 1000 ಗಂಟೆಯಿಂದ ದಿನಾಂಕ 15-06-2021 ರಂದು 1000 ಗಂಟೆಯ ಮಧ್ಯದ ಅವಧಿಯಲ್ಲಿ ಸರಕಾರಿ ಕರ್ನಾಟಕ ಪಬ್ಲಿಕ ಶಾಲೆ ಮಂಠಾಳ ಗ್ರಾಮದ ಶಾಲೆಯ ತರಗತಿಯ ಕೊಣೆಯಲ್ಲಿ ಹೋಗಿ ಕೊಣೆಯಲ್ಲಿದ್ದ ಪಿಠೋಪಕರಣಗಳು ಧ್ವಂಸ ಮಾಡಿರುತ್ತಾರೆ, ಪಿಠೋಪಕರಣಗಳ ಅಂದಾಜು ಕಿಮ್ಮತ್ತು ಈ ಕೆಳಗಿನಂತೆ ಇರುತ್ತದೆ. 1) ಪ್ಲಾಸ್ಟೀಕ್ ಕುರ್ಚಿಗಳು 6 ಅ.ಕಿ 3,000/- ರೂ., 2) ಡ್ಯೂಲ್ ಡೇಸ್ಕಗಳು 8 ಅ.ಕಿ 16,000/- ರೂ., 3) ಸೀಲಿಂಗ ಫ್ಯಾನ 7 ಅ.ಕಿ 5,500/- ರೂ., 4) ಗ್ರೀನ ಬೋರ್ಡ 3 ಅ.ಕಿ 33,000/- ರೂ., 5) ವಿದ್ಯೂತ ಬೋರ್ಡ 3 ಅ.ಕಿ 15,000/- ರೂ., 6) ಟೇಬಲ್ 3 ಅ.ಕಿ 4,500/- ರೂ., 7) ಲಾಕ್ 3 ಅ.ಕಿ 300/- ರೂ. ಹೀಗೆ ಒಟ್ಟು 77,300/- ರೂಪಾಯಿ ಬೆಲೆಬಾಳುವ ಪಿಠೋಪಕರಣಗಳು ಹಾನಿಯಾಗಿರುತ್ತವೆ ಅಂತ ಫಿರ್ಯಾದಿ ಪ್ರವೀಣಕುಮಾರ ತಂದೆ ಜವಾಹರಲಾಲ ಗುಜರ ವಯ: 43 ವರ್ಷ, ಉ: ಮುಖ್ಯೋಪಾದಯರು ಸರಕಾರಿ ಕರ್ನಾಟಕ ಪಬ್ಲಿಕ ಶಾಲೆ ಮಂಠಾಳ ಗ್ರಾಮ, ಸಾ: ಬಸವಕಲ್ಯಾಣ ರವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 104/2021, ಕಲಂ. 457, 380 ಐಪಿಸಿ :-
ದಿನಾಂಕ 27-04-2021 ರಂದು 1100 ಗಂಟೆಯಿಂದ ದಿನಾಂಕ 11-06-2021 ರಂದು 1300 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಭಾಲ್ಕಿ ನೇದರ ಸ್ಟೋರ ರೂಮ ಕೀಲಿ ಮುರಿದು ಅದರಲ್ಲಿನ ಭಾರತ ಗ್ಯಾಸ ಕಂಪನಿಯ 14 ಕೆ.ಜಿ ತೂಕದ ವುಳ್ಳ 3 ಎಲ.ಪಿ.ಜಿ ಸಿಲಿಂಡರಗಳು ಅ.ಕಿ 8200/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 54/2021, ಕಲಂ. 279, 337, 338 ಐಪಿಸಿ :-
ದಿನಾಂಕ 15-06-2021 ರಂದು ಫಿರ್ಯಾದಿ ರಾಜಪ್ಪಾ ತಂದೆ ಮಲ್ಲಪ್ಪಾ ಶಿವಪ್ಪನೋರ ವಯ: 36 ವರ್ಷ, ಜಾತಿ: ಎಸ್.ಟಿ ಕುರುಬ, ಸಾ: ಇಂದಿರಾ ಕಾಲೋನಿ ಮಂಠಾಳ, ತಾ: ಬಸವಕಲ್ಯಾಣ ರವರು ತಳಭೋಗ ಗ್ರಾಮದ ಸಂಬಂಧಿಯಾದ ಮಲ್ಲಪಾ್ಪ ತಂದೆ ಮಾರುತಿ ಮೇತ್ರೆ ವಯ: 25 ವರ್ಷ ಇಬ್ಬರು ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ ನಂ. ಕೆಎ-56/ಇ-5717 ನೇದರ ಮೇಲೆ ಮಂಠಾಳ ಗ್ರಾಮದಿಂದ ಉರ್ಕಿ ಟಾರ ರೋಡ ಮುಖಾಂತರ ಚಿಂಚನಸೂರ ಗ್ರಾಮದ ದೇವರ ದರ್ಶನಕ್ಕೆ ಹೋಗುತ್ತಿರುವಾಗ ಸದರಿ ಮೋಟಾರ್ ಸೈಕಲ ಫಿರ್ಯಾದಿ ಚಲಾಯಿಸುತ್ತಿದ್ದು, ಮಂಠಾಳ ಗ್ರಾಮದ ಪುಜಾ ಪೆಟ್ರೋಲ ಪಂಪ ದಾಟಿ ಉರ್ಕಿ ಗ್ರಾಮದ ಕಡೆಗೆ ಹೋಗುತ್ತಿರುವಾಗ ತುಕಾರಾಮ ಕಾವಳೆ ರವರ ಹೊಲದ ಹತ್ತಿರ ಎದುರಿನಿಂದ ಹಿರೋ ಹೊಂಡಾ ಫ್ಯಾಶನ್ ಮೋಟಾರ್ ಸೈಕಲ ನಂ. ಎಮ್.ಹೆಚ್-02/ಎ.ಜಿ-8945 ನೇದರ ಚಾಲಕನಾದ ಆರೋಪಿ ಗಣೇಶ ತಂದೆ ನಾಮದೇವ ರಾಠೋಡ ವಯ: 32 ವರ್ಷ, ಜಾತಿ: ಲಂಬಾಣಿ, ಸಾ: ಚಿಟ್ಟ(ಕೆ) ತಾಂಡಾ ಇತನು ತನ್ನ ವಾಹನದ ಮೇಲೆ ಅರವಿಂದ ಸಾ: ಚಿಟ್ಟ(ಕೆ) ತಾಂಡಾ ಇತನಿಗೆ ಕೂಡಿಸಿಕೊಂಡು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಅತವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅದರ ಮೇಲಿನ ನಿಯಂತ್ರಣ ಕಳೆದುಕೊಂಡು ಒಮ್ಮೆಲೆ ಫಿರ್ಯಾದಿಯ ಮೋಟಾರ್ ಸೈಕಲಗೆ ಜೋರಾಗಿ ಎದುರಿನಿಂದ ಡಿಕ್ಕಿ ಮಾಡಿದ್ದು ಇರುತ್ತದೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲು ಪಾದದ ಮಣಕಟ್ಟು ಹತ್ತಿರ ಭಾರಿ ಗುಪ್ತಗಾಯ ಮತ್ತು ಬಲ ಮೋಳಕಾಲಿಗೆ ರಕ್ತಗಾಯ, ಎಡಕಿವಿಗೆ ರಕ್ತಗಾಯ, ಎಡಭುಜಕ್ಕೆ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯ ಹಿಂದೆ ಕುಳಿತ್ತಿದ್ದ ಸಂಬಂಧಿ ಮಲ್ಲಪ್ಪಾ ಇವನಿಗೆ ಬಲಗಾಲು ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಗೆ ಎದೆಯ ಎಡಭಾಗಕ್ಕೆ ಮತ್ತು ಬಲ ಮೋಳಕಾಲಿಗೆ ಹಾಗೂ ಎಡ ಭುಜಕ್ಕೆ ಗುಪ್ತಗಾಯವಾಗಿರುತ್ತದೆ ಹಾಗೂ ಅರವಿಂದನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ, ನಂತರ ಫಿರ್ಯಾದಿಯು ತಮ್ಮೂರ ಚವರಂಗ ತಂದೆ ಬೀರಪ್ಪಾ ಗುಂಜೋಟೆ ಇವನಿಗೆ ಕರೆ ಮಾಡಿ ಡಿಕ್ಕಿಯಾದ ವಿಷಯ ತಿಳಿಸಿದಾಗ ಅವನು ಮತ್ತು ಭಾಗಾದಿ ಮಂಜುನಾಥ ತಂದೆ ಮಲ್ಲಪ್ಪಾ ಶಿವಪ್ಪನೋರ ಇವರಿಬ್ಬರು ಕೂಡಿ ಒಂದು ಖಾಸಗಿ ವಾಹನ ತಗೆದುಕೊಂಡು ಬಂದು ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಮಂಠಾಳ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 15-06-2021 ರಂದು ಉಡುಮನಳ್ಳಿ ಗ್ರಾಮದ ಬಸ್ ನಿಲ್ದಾಣದ ಎದುರಿಗೆ ಬೇಮಳಖೇಡಾ-ಕರಕನಳ್ಳಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟ ನಡೆಸುತ್ತಿದ್ದಾನೆ ಅಂತಾ ಗಂಗಮ್ಮಾ ಪಿಎಸ್ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಉಡುಮನಳ್ಳಿ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಸುನೀಲ ತಂದೆ ರಾಮಣ್ಣಾ ರಂಜೋಳಕರ ವಯ: 33 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಉಡುಮನಳ್ಳಿ ಇತನು ಬೆಮಳಖೇಡಾ-ಕರಕನಳ್ಳಿ ರೋಡಿನ ಮೇಲೆ ಬಸ್ ನಿಲ್ದಾಣದ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂಪಾಯಿಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಜೊತೆಯಲ್ಲಿ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 1) ನಗದು ಹಣ 2870/- ರೂ., 2) 2 ಮಟಕಾ ಚೀಟಿಗಳು ಹಾಗು 3) ಒಂದು ಬಾಲ ಪೆನ್ನು ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 56/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 15-06-2021 ರಂದು ಹತ್ತರ್ಗಾ (ಎಸ್) ಗ್ರಾಮದ ಬಸವೇಶ್ವರ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್.ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ, ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹತ್ತರ್ಗಾ(ಎಸ್) ಗ್ರಾಮಕ್ಕೆ ಹೋಗಿ ಅಲ್ಲಿ ಹತ್ತರ್ಗಾ (ಎಸ್) ಗ್ರಾಮದ ಬಸನಿಲ್ದಾಣದ ಹತ್ತಿರ ರೋಡಿನ ಪಕ್ಕದಲ್ಲಿ ಹೋಗಿ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಹತ್ತರ್ಗಾ(ಎಸ್) ಗ್ರಾಮದ ಬಸವೇಶ್ವರ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಶಾಂತ ತಂದೆ ರಾಜೇಂದ್ರ ಪಾಟೀಲ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಹತ್ತರ್ಗಾ(ಎಸ್) ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಹಣ ಕೊಟ್ಟು ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿತನಿಗೆ ಇಲ್ಲಿ ನೀನು ಏನು ಬರೆದುಕೊಳ್ಳುತಿರುವೆ ಎಂದು ವಿಚಾರಿಸಿಸಲು ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದೆನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 920/- ರೂಪಾಯಿ, 2) ಎರಡು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 57/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 15-06-2021 ರಂದು ವೀರಣ್ಣ ಎಸ್ ದೊಡ್ಡಮನಿ ಸಿಪಿಐ ಭಾಲ್ಕಿ ಗ್ರಾಮಿಣ ವೃತ್ತ ರವರು ಬಂದು ತಿಳಿಸಿದ್ದೆನೆಂದರೆ ಕೆಲವು ಜನರು ಮೊಟಾರ ಸೈಕಲ ಮೆಲೆ ಸಾರಾಯಿ ಇಟ್ಟುಕೊಂಡು ಹಾಲಹಳ್ಳಿ ಕಡೆಯಿಂದ ಮಳಚಾಪೂರ ಗ್ರಾಮದ ಕಡೆಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆಂದು ಖಚಿತವಾದ ಬಾತ್ಮಿ ಬಂದಿರುತ್ತದೆ, ಅವರ ಮೆಲೆ ದಾಳಿ ಮಾಡಲು ಹೋಗಬೇಕಾಗಿದೆ ಅಂತ ಚಿದಾನಂದ ಸೌದಿ ಪಿಎಸ್ಐ [ಕಾಸೂ] ಧನ್ನೂರ ಪೊಲೀಸ ಠಾಣೆ ರವರಿಗೆ ತಿಳಿಸಿದಾಗ ಪಿಎಸ್ಐ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೀದರ-ಹುಮನಾಬಾದ ರಸ್ತೆಯ ಹಾಲಹಳ್ಳಿ ಗ್ರಾಮ ಶಿವಾರದ ಪಿ.ಜಿ ಸೇಂಟರ ಹತ್ತಿರ ಇರುವ ಹಾಲಹಳ್ಳಿ ತಾಂಡಾ ಕ್ರಾಸ್ ಹತ್ತಿರ ಹೊಗಿ ಮರೆಯಾಗಿ ನಿಂತು ಹಾಲಹಳ್ಳಿ ಗ್ರಾಮದ ಕಡೆಯಿಂದ ಬರುವ ವಾಹನಗಳನ್ನು ನೊಡುತ್ತಾ ನಿಂತಾಗ ಆರೋಪಿತರಾದ 1) ಅಶೋಕ ತಂದೆ ಗಣಪತಿ ಖಾಶೆಂಪೂರ ವಯ: 27 ವರ್ಷ, ಜಾತಿ: ಕಬ್ಬಲಿಗ, ಸಾ: ಹಾಲಹಳ್ಳಿ ಮತ್ತು 2) ನಿರ್ಮಲಕಾಂತ ತಂದೆ ಸಂಗಪ್ಪಾ ಮಂಗಲಗಿ ವಯ: 51 ವರ್ಷ, ಜಾತಿ: ಲಿಂಗಾಯತ, ಸಾ: ಕಟ್ಟಿತುಗಾಂವ(ಸಿ) ಇವರಿಬ್ಬರು ಮೊಟಾರ ಸೈಕಲ ಮೇಲೆ ಸಾರಾಯಿ ಕಾಟನಗಳು ಇಟ್ಟುಕೊಂಡು ಬರುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಇಬ್ಬರಿಗೂ ಹಿಡಿದುಕೊಂಡು ಮೊಟಾರ ಸೈಕಲ ಮೇಲಿರುವ ಕಾಟನದಲ್ಲಿ ಏನಿದೆ? ಮತ್ತು ಎಲ್ಲಿಗೆ ತೆಗೆದುಕೊಂಡು ಹೊಗುತ್ತಿದ್ದಿರಿ ಅಂತ ವಿಚಾರಣೆ ಮಾಡಲು ಸದರಿ ಕಾಟನಗಳಲ್ಲಿ ಸಾರಾಯಿಯ ಬಾಟಲಗಳು ಇದ್ದು ಅದನ್ನು ನಾವು ಮಳಚಾಪೂರ ಗ್ರಾಮದಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದೆವೆ ಅಂತ ತಿಳಿಸಿರುತ್ತಾರೆ, ನಂತರ ಸಾರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಕುರಿತು ಸರ್ಕಾರದಿಂದ ಪಡೆದಿರುವ ಯಾವುದಾದರು ಪರವಾನಿಗೆ ತೊರಿಸಲು ಕೇಳಿದಾಗ ನಮ್ಮ ಹತ್ತಿರ ಯಾವುದೆ ಪರವಾನಿಗೆ ಪತ್ರ ಇರುವುದಿಲ್ಲ, ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದೆವೆ ಅಂತ ತಿಳಿಸಿರುತ್ತಾರೆ, ನಂತರ ಸದರಿ ಕಾಟನ್ ಸಾರಾಯಿ ಪರೀಶಿಲಿಸಿ ನೋಡಲು ಓರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ 90 ಎಂ.ಎಲ್ ವುಳ್ಳ 05 ಕಾಟನಗಳು, ಒಂದು ಕಾಟನದಲ್ಲಿ 96 ಟೆಟ್ರಾ ಪಾಕೇಟಗಳು ಇರುತ್ತವೆ ಮತ್ತು ಒಂದು ಕಾಟನ ಸಾರಾಯಿಯ ಬೇಲೆ 3,360/- ರೂಪಾಯಿ, ಒಟ್ಟು 5 ಕಾಟನ ಸಾರಾಯಿ ಬೆಲೆ 16,800/- ರೂಪಾಯಿ ಇರುತ್ತದೆ ಹಾಗು ಮೊಟಾರ ಸೈಕಲ ಪರೀಶಿಲಿಸಿ ನೊಡಲು ಅದು ಹೊಂಡಾ ಶೈನ್ ಮೊಟಾರ ಸೈಕಲ ನಂ. ಎಪಿ-29/ಎ.ಎಫ್-6594 ಅ.ಕಿ 10,000/- ರೂಪಾಯಿ ಇರುತ್ತದೆ, ನಂತರ ಪಂಚರ ಸಮಕ್ಷಮ ಸದರಿ ಸರಾಯಿ ಜಪ್ತಿ ಮಾಡಿಕೋಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.