ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-03-2021
ಗಾಂಧಿಗಂಜ ಪೊಲೀಸ ಠಾಣೆ ಬೀದರ ಅಪರಾಧ ಸಂ. 40/2021, ಕಲಂ. 279, 304(ಎ) ಐಪಿಸಿ :-
ದಿನಾಂಕ 08-03-2021 ರಂದು ಫಿರ್ಯಾದಿ ಸುನೀತಾ ಗಂಡ ಏಶೇಪ್ಪಾ ಎನ್ದೊಡ್ಡಿ ವಯ: 20 ವರ್ಷ, ಜಾತಿ: ಮಾದಿಗ, ಸಾ: ಚಿಟ್ಟಾ ಗ್ರಾಮ, ಬೀದರ ರವರ ಗಂಡ ಕೆಲಸ ಮಾಡುವ ಮಾಲಿಕರ ಮಗನಾದ ಆಸೀಫಖಾನ್ ಇವರು ಮನೆಗೆ ಬಂದು ತಿಳಿಸಿದ್ದೆನೆಂದರೆ, ನಮ್ಮ ಹೊಲದಲ್ಲಿ ಘಾಣಾಕ್ಕೆಂದು ಕಬ್ಬು ತುಂಬಿಕೊಂಡು ತರುತ್ತಿದ್ದ ಟ್ರಾಕ್ಟರ್ ನಂ. ಕೆಎ-38/ಟಿ-2863 ನೇದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಗಂಡ ಏಶಪ್ಪಾ ಇವರ ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಏಶಪ್ಪ ಇವರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ ಅಂತಾ ತಿಳಿಸಿದಾಗ ಫಿರ್ಯಾದಿಯವರು ಬೀದರ ಗುರುನಾನಕ ಆಸ್ಪತ್ರೆಗೆ ಬಂದು ನೋಡಲು ಗಂಡನ ಎಡಗಾಲು ಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯ ಮದ್ಯ ಸದಾಶೀವಪೇಟ್ ಹತ್ತಿರ ತನ್ನ ಗಂಡ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಖ 09-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 18/2021, ಕಲಂ. 279, 337, 338 ಐಪಿಸಿ :-
ದಿನಾಂಕ 09-03-2021 ರಂದು ಫಿರ್ಯಾದಿ ಆಕಾಶ ತಂದೆ ಬಸವರಾಜ ಪಾಪಣನೋರ ವಯ: 19 ವರ್ಷ, ಜಾತಿ: ಲಿಂಗಾಯತ, ಸಾ: ಮಾಳೆಗಾಂವ ಗ್ರಾಮ ರವರು ತನ್ನ ಮೊಟಾರ ಸೈಕಲ ಮೇಲೆ ತಮ್ಮೂರಿಂದ ಬೀದರಗೆ ಬಂದು ಚಹಾ ಹೊಟಲದಲ್ಲಿ ಕೆಲಸ ಮಾಡಿಕೊಂಡು 2200 ಗಂಟೆ ಸುಮಾರಿಗೆ ಬೀದರನಿಂದ ತನ್ನ ಮೊಟಾರ ಸೈಕಲ್ ಮೇಲೆ ತಮ್ಮೂರಿಗೆ ತಾಜಲಾಪೂರ ಮಾರ್ಗವಾಗಿ ಹೊಗುವಾಗ ತಾಜಲಾಪೂರ ಗ್ರಾಮ ದಾಟಿ ರಿಂಗ ರೋಡ ಹತ್ತಿರ ಹೋದಾಗ ಮುಂದೆ ಮುಂದೆ ಒಂದು ನಂಬರ ಪ್ಲೇಟ ಇಲ್ಲದ ಹೊಂಡಾ ಶೈನ್ ಮೊಟಾರ ಸೈಕಲ್ ಸವಾರನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೋಗುತ್ತಿದ್ದನು ಮತ್ತು ಎದುಗಡೆಯಿಂದ ಅಂದರೆ ಅಷ್ಟೂರ ಕ್ರಾಸ ಕಡೆಯಿಂದ ಒಂದು ಮೊಟಾರ ಸೈಕಲ್ ಸವಾರನು ತನ್ನ ಮೊಟಾರ ಸೈಕಲ್ ಮೇಲೆ ಒಬ್ಬ ವ್ಯಕ್ತಿಗೆ ಕೂಡಿಸಿಕೊಂಡು ಅವನು ಸಹ ತನ್ನ ಮೊಟಾರ ಸೈಕಲ್ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ರಿಂಗ ರೋಡಿನ ಹತ್ತಿರ ಹೊಸದಾಗಿ ನಿರ್ಮಾಣವಾಗುತ್ತಿದ್ದ ಬ್ರೀಜ್ ಹತ್ತಿರ ಒಬ್ಬರಿಗೊಬ್ಬರು ಮುಖಾ ಮುಖಿ ಡಿಕ್ಕಿ ಪಡಿಸಿಕೊಂಡ ಪರಿಣಾಮ ರೋಡಿನ ಮೇಲೆ ಬಿದ್ದರು, ಆಗ ಫಿರ್ಯಾದಿಯು ಅವರ ಹತ್ತಿರ ಹೋಗಿ ನೋಡಲು ಬೀದರ ಕಡೆಯಿಂದ ಹೊಗುತ್ತಿದ ಮೊಟಾರ ಸೈಕಲ್ ಸವಾರನು ಪರಿಚಯದ ಅಮದಲಪಾಡ ಗ್ರಾಮದ ಚಂದ್ರಕಾಂತ ತಂದೆ ಬಸವರಾಜ ವಯ: 18 ವರ್ಷ ಇದ್ದು ಸದರಿಯವನಿಗೆ ಮೇಲಿನ ತುಟಿಗೆ ಕಟ್ಟಾಗಿ ರಕ್ತಗಾಯ, ಬಲಗಡೆ ಹಣೆಯ ಮೇಲೆ ರಕ್ತಗಾಯ ಮತ್ತು ಎಡಗೈ ಭುಜಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಎದುರಿನಿಂದ ಬರುತ್ತಿದ್ದ ಮೊಟಾರ ಸೈಕಲ್ ಸವಾರನಿಗೆ ವಿಚಾರಿಸಲು ಅವನು ತನ್ನ ಹೆಸರು ಫಿರೋಜ್ ತಂದೆ ಸೈಯದ ರಫಿ ವಯ: 20 ವರ್ಷ, ಸಾ: ಅಮಲಾಪೂರ ಗ್ರಾಮ ಅಂತ ತಿಳಿಸಿದನು ಸದರಿಯವನಿಗೆ ಬಲಗಾಲ ಮೊಳಕಾಲ ಹತ್ತಿರ ರಕ್ತಗಾಯ ಮತ್ತು ಬಲಕೀವಿಯ ಹಿಂಭಾಗದಲ್ಲಿ ಕಟ್ಟಾಗಿ ರಕ್ತಗಾಯವಾಗಿರುತ್ತದೆ, ಮೊಟಾರ ಸೈಕಲ್ ಹಿಂದುಗಡೆ ಕುಳಿತು ಬರುತ್ತಿದ್ದ ಹುಡುಗನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಶೊಹೇಲ್ ಸಾ: ಮನಿಯಾರ ತಾಲೀಮ ಅಂತ ತಿಳಿಸಿದನು, ಸದರಿಯವನಿಗೆ ಯಾವುದೆ ಗಾಯ ಆಗಿರುವುದಿಲ್ಲ, ಸದರಿಯವರ ಮೊಟಾರ ಸೈಕಲ್ ನಂಬರ ನೋಡಲು ಹಿರೋ ಹೊಂಡಾ ಸಿಡಿ-100 ನಂ. ಕೆಎ-15/ವಾಯ್.ಇ-0007 ಇತ್ತು, ಅಷ್ಟರಲ್ಲಿ ಅಷ್ಟೂರ ಕಡೆಯಿಂದ ಆಟೋಗಳು ಬಂದಾಗ ಒಂದು ಆಟೋದಲ್ಲಿ ಚಂದ್ರಕಾಂತನಿಗೆ ಹಾಕಿಕೊಂಡು ಮತ್ತು ಇನ್ನೊಂದು ಆಟೋದಲ್ಲಿ ಫಿರೋಜನಿಗೆ ಶೋಹೇಲ್ ಇವನು ಕುಡಿಸಿಕೊಂಡು ಇಬ್ಬರಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 27/2021, ಕಲಂ. 279, 337, 338 ಐಪಿಸಿ :-
ದಿನಾಂಕ 09-03-2021 ರಂದು ಫಿರ್ಯಾದಿ ಸುಮಾವತಿ ಗಂಡ ಸಂಗ್ರಾಮ ಆಣದೂರೆ ಸಾ: ಸಿಂದಬಂದಗಿ ರವರು ದಿನನಿತ್ಯದಂತೆ ಹಳ್ಳಿಖೇಡ[ಬಿ] ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಅಡುಗೆ ಹೇಲ್ಪರ್ ಅಂತ ಕೆಲಸ ಮಾಡುವ ಕುರಿತು ಸಿಂದಬಂದಗಿ ಗ್ರಾಮದಿಂದ ಹಳ್ಳಿಖೇಡ[ಬಿ] ಪಟ್ಟಣಕ್ಕೆ ಬರುವ ಸಲುವಾಗಿ ಆಟೋ ನಂ. ಕೆಎ-38/ಎ-1517 ನೇದರಲ್ಲಿ ಕುಳಿತು ಹೋಗುವಾಗ ಹಳ್ಳಿಖೇಡ[ಬಿ] ಪಟ್ಟಣದ ಭೀಮರಡ್ಡಿ ಖೇಳಗಿ ರವರ ಮನೆಯ ಹತ್ತಿರ ರೋಡಿನ ಮೇಲೆ ಸದರಿ ಆಟೋ ಚಾಲಕನಾದ ಆರೋಪಿ ಸಚೀನ ತಂದೆ ಬಸವರಾಜ ಚಂದನ ಸಾ: ಸಿಂದಬಂದಿಗ ಇತನು ಸದರಿ ಆಟೋವನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬರುವಾಗ ಎದುರುಗಡೆಯಿಂದ ಬರುತ್ತಿದ್ದ ಯಾವುದೋ ಒಂದು ಮೊಟಾರ ಸೈಕಲಿಗೆ ಕಟ್ ಹೊಡೆಯಲು ಹೋಗಿ ಒಮ್ಮೇಲೆ ಹಿಡಿತ ತಪ್ಪಿ ರೋಡಿನ ಮೇಲೆ ಆಟೋ ಪಲ್ಟಿ ಮಾಡಿರುತ್ತಾನೆ, ಸದರಿ ಆಟೋ ಪಲ್ಟಿಯಾದ ಪರಿಣಾಮ ಆಟೋದಲ್ಲಿ ಕುಳಿತ ಫಿರ್ಯಾದಿಯ ಬಲಗೈ ರಟ್ಟೆಗೆ ಗುಪ್ತಗಾಯವಾಗಿರುತ್ತದೆ ಮತ್ತು ಆಟೋದಲ್ಲಿ ಕುಳಿತ ಮಹೇಶ ತಂದೆ ಸಂಜುರಡ್ಡಿ ಗಂಗಪನೋರ ಇವನಿಗೆ ಬಲಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ ಮತ್ತು ಬಲಗೈ ಮುಂಗೈ ಹೆಬ್ಬರಳ ಹತ್ತಿರ ತರಚಿದ ಗಾಯಗಳು ಆಗಿರುತ್ತವೆ, ಆಟೋದಲ್ಲಿದ್ದ ಮಹೇಶ ರವರ ತಂಗಿಯಾದ ಅಂಕಿತಾ ಇವಳಿಗೆ ಎಡಗಡೆ ಎದೆಗೆ ಮತ್ತು ಛಪ್ಪೆಗೆ ಗುಪ್ತಗಾಯಗಳು ಆಗಿರುತ್ತವೆ, ನಂತರ ಗಾಯಗೊಂಡವರಿಗೆ ಸದರಿ ಆರೋಪಿಯು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹಳ್ಳಿಖೇಡ[ಬಿ] ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 30/2021, ಕಲಂ. 379 ಐಪಿಸಿ :-
ದಿನಾಂಕ 08-03-2021 ರಂದು 2330 ಗಂಟೆಯಿಂದ ದಿನಾಂಕ 09-03-2021 ರಂದು 0700 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿಯವರ ಹೀರೋ ಹೊಂಡಾ ಸ್ಪ್ಲೇಂಡರ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-38/ಯು-9681, ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.ಆರ್.086.ಹೆಚ್.ಹೆಚ್.ಎಲ್.10600, ಇಂಜಿನ್ ನಂ. ಹೆಚ್.ಎ.10.ಎ.ಜಿ.ಹೆಚ್.ಹೆಚ್.ಎಲ್.ಎ.7980, ಬಣ್ಣ: ಕಪ್ಪು ಬಣ್ಣ, ಅ.ಕಿ 40,000/- ರೂ. ನೇದನ್ನು ಮನೆಯ ಗೆಟ ಒಳಗೆ ನಿಲ್ಲಿಸಿರುವುದನ್ನು ಯಾರೋ ಅಪರಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 31/2021, ಕಲಂ. 379 ಐಪಿಸಿ :-
ದಿನಾಂಕ 04-03-2021 ರಂದು ಫಿರ್ಯಾದಿ ವಿಜಯಕುಮಾರ ತಂದೆ ಮಾಧವರಾವ ಲೋಹಾರ ಸಾ: ಜನವಾಡಾ, ತಾ: ಬೀದರ ರವರು ತನ್ನ ಭಾವ ರಾಹುಲ ತಂದೆ ದತ್ತು ಇಬ್ಬರು ಚಾಹಾ ಕೂಡಿದು ಬರೋಣ ಅಂತ ತನ್ನ ಮೊಟಾರ ಸೈಕಲ ನಂ. ಕೆಎ-38/ಎಸ್-2317 ನೇದರ ಮೇಲೆ ಔರಾದ(ಬಿ) ಬಸ ನಿಲ್ದಾಣದ ಎದರುಗಡೆ ಎ1 ಜೂಸ್ ಸೆಂಟರ್ ಹತ್ತಿರ ಬಂದು ತನ್ನ ವಾಹನ ನಿಲ್ಲಿಸಿ ಚಾಹಾ ಕುಡಿಯಲು ಹೋಟಲನಲ್ಲಿ ಹೋಗಿ ಚಾಹಾ ಕುಡಿದು ಹೋರಗೆ ಬಂದು ನೋಡುವಷ್ಟರಲ್ಲಿ ಸರಿ ಮೊಟಾರ ಸೈಕಲ ಇರಲಿಲ್ಲ, ನಂತರ ಇಬ್ಬರೂ ಕೂಡಿ ಔರಾದ(ಬಿ) ಪಟ್ಟಣದಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಸ್ಪ್ಲೆಂಡರ್ ಪ್ಲಸ್ ಮೊಟಾರ ಸೈಕಲ ನಂ. ಕೆಎ-38/ಎಸ್-2317, 2) ಮಾಡಲ್ 2015, 3) ಇಂಜಿನ್ ನಂ. ಹೆಚ್.ಎ.10.ಇ.ಡಬ್ಲು.ಎಫ್.4.ಜಿ.05941, 4) ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.10.ಬಿ.ಡಬ್ಲು.ಎಫ್.4.ಜಿ.05961 ಹಾಗೂ 5) ಅ.ಕಿ 30,000/- ಆಗಬಹುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 32/2021, ಕಲಂ. 379 ಐಪಿಸಿ :-
ದಿನಾಂಕ 06-03-2021 ರಂದು ಫಿರ್ಯಾದಿ ವೈಜಿನಾಥ ತಂದೆ ರಾಮಣ್ಣ ಸಿಂದೆ ಸಾ: ಲಿಬೂಂಣಿ ಕಾಲೋನಿ, ಔರಾದ(ಬಿ) ರವರಿಗೆ ಔರಾದ ಎಸ್.ಬಿ.ಐ ಬ್ಯಾಂಕನಲ್ಲಿ ಕೆಲಸವಿದ್ದ ಪ್ರಯುಕ್ತ ತಮ್ಮ ಮೊಟಾರ ಸೈಕಲ ನಂ. ಕೆಎ-39/ಇ-8687 ನೇದರ ಮೇಲೆ ಬಂದು ಸದರಿ ಬ್ಯಾಂಕ ಮುಂದುಗಡೆ ಅಂದಾಜು 1630 ಗಂಟೆಗೆ ತನ್ನ ವಾಹನ ನಿಲ್ಲಿಸಿ ಬ್ಯಾಂಕ ಒಳಗೆ ಹೋಗಿ ತನ್ನ ಕೆಲಸ ಮುಗಿಸಿಕೊಂಡು ತಕ್ಷಣ ಹೋರಗೆ ಬಂದು ತನ್ನ ಮೊಟಾರ ಸೈಕಲ ಹತ್ತಿರ ಹೋಗಿ ನೋಡುವಷ್ಟರಲ್ಲಿ ಸದರಿ ಮೊಟಾರ ಸೈಕಲ ಕಾಣಲಿಲ್ಲ, ನಂತರ ತಕ್ಷಣ ಫಿರ್ಯಾದಿಯು ಎ.ಪಿ.ಎಮ್.ಸಿ ಕ್ರಾಸ ಬಸ್ ನಿಲ್ದಾಣ, ಮಿನಿ ವಿಧಾನ ಸೌಧದ ಮುಂದೆ ಹೋಗಿ ಹುಡುಕಾಡಲು ಎಲ್ಲಿಯೂ ಸದರಿ ವಾಹನ ಕಾಣಲಿಲ್ಲ, ಸದರಿ ವಾಹನವನ್ನು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಹಿರೋ ಹೊಂಡಾ ಸ್ಪ್ಲೆಂಡರ್ ಮೋಟಾರ ಸೈಕಲ ನಂ. ಕೆಎ-39/ಇ-8687, 2) ಮಾಡಲ್ 2003, 3) ಇಂಜಿನ್ ನಂ. 03618.ಇ.12332, 4) ಚಾಸಿಸ್ ನಂ. 03620.ಎಫ್.15709 ಹಾಗೂ 5) ಅ.ಕಿ 20,000/- ರೂ. ಆಗಬಹುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.