Police Bhavan Kalaburagi

Police Bhavan Kalaburagi

Thursday, January 25, 2018

BIDAR DISTRICT DAILY CRIME UPDATE : 25/01/2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-01-2018

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 16/2018, PÀ®A. 323, 326, 504, 506, 448 L¦¹ :-
ದಿನಾಂಕ 24-01-2018 ರಂದು ಫಿರ್ಯಾಧಿ ಅಂಬದಾಸ ತಂದೆ ಶಿವರಾಮ ಸಿಂಧೆ ವಯ: 24 ವರ್ಷ, ಜಾತಿ: ಸಮಗಾರ, ಸಾ: ರಾಚಪ್ಪ ಗೌಡಗಾಂವ ರವರು ತಮ್ಮೂರ ದಲಿತ ಕಾಲೋನಿ ಪ್ರಕಾಶ ರವರ ಮನೆಯ ಕಡೆಗೆ ಖಾಸಗಿ ಕೆಲಸದ ನಿಮಿತ್ಯ ಹೋದಾಗ ಪ್ರಕಾಶ ಈತನು ನಮ್ಮ ಮನೆಯ ಕಡೆಗೆ ಏಕೆ ಬಂದಿರುತ್ತಿ ಅಂತ ಫಿರ್ಯಾದಿಗೆ ಬೈದಿದ್ದು ಇಬ್ಬರ ನಡುವೆ ಬಾಯಿ ಮಾತಿನ ತಕರಾರು ಆಗಿದ್ದು, ನಂತರ ಫಿರ್ಯಾದಿಯು ತನ್ನ ಮನೆಗೆ ಬಂದು ತಮ್ಮ ಮನೆಯ ಪಡಸಾಲೆಯಲ್ಲಿ ಕುಳಿತಾಗ ಪ್ರಕಾಶ ಇವರ ಮಗನಾದ ಆರೋಪಿ ವಿಶಾಲ ತಂದೆ ಪ್ರಕಾಶ ಸಾ: ರಾಚಪ್ಪ ಗೌಡಗಾಂವ ಇತನು ಫಿರ್ಯಾದಿಯವರ ಮನೆಗೆ ಬಂದವನೇ ಪಡಸಾಲೆಯಲ್ಲಿ ಬಂದು ಫಿರ್ಯಾದಿಗೆ ನೀನು ನನ್ನ ತಂದೆಯ ಜೊತೆಗೆ ಜಗಳ ಮಾಡುತ್ತಿ ಎಂದು ಅವಾಚ್ಯವಾಗಿ ಬೈದು ಒಂದು ಕಲ್ಲು ತೆಗೆದುಕೊಂಡು ತಲೆಯಲ್ಲಿ ಹೊಡೆದಿದ್ದು ಇದರಿಂದ ಫಿರ್ಯಾದಿಯ ತಲೆಯು ಒಡೆದು ಭಾರಿ ರಕ್ತಗಾಯವಾಗಿದ್ದು, ನಂತರ ಕಾಲಿನಿಂದ ಎದೆಯಲ್ಲಿ ಮತ್ತು ಬೆನ್ನಲ್ಲಿ ಒದ್ದಿರುತ್ತಾನೆ, ಆಗ ಸದರಿ ಜಗಳ ನೋಡಿದ ಫಿರ್ಯಾದಿಯ ಚಿಕ್ಕಪ್ಪ ನರಸಿಂಗ ಮತ್ತು ಮನೆಯ ಪಕ್ಕದವರಾದ ಮಂಜು ತಂದೆ ಫತ್ರುಸಾಬ ಇವರು ಜಗಳ ಬಿಡಿಸಿದ್ದು, ಸದರಿ ವಿಶಾಲ ಇವನು ಹೋಗುವಾಗ ಇನ್ನೊಂದು ಸಲ ನನ್ನ ತಂಟೆಗೆ ಬಂದರೇ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ, ನಂತರ ಜಗಳದ ಗುಲ್ಲು ಕೇಳಿ ಊರಿನ ಜನರೆಲ್ಲ ಬಂದು 108 ಅಂಬುಲೇನ್ಸಗೆ ಕರೆಯಿಸಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಭಾಲ್ಕಿಗೆ ತಂದಿರುತ್ತಾರೆಂದು ಕೊಟ್ಟ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES


ಕಳವು ಪ್ರಕರಣಗಳೂ :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ವೈ. ಅರುಂಧತಿ ಗಂಡ ನಾಗಮೂರ್ತಿ ಶೀಲವಂತ ಸಾ: ಮನೆ ನಂ. 175/ಬಿ ಎಮ್.ಐ.ಜಿ ಕೆ.ಎಚ್.ಬಿ ಕಾಲೋನಿ ಗಾರ್ಡನ ಹತ್ತಿರ ಕಲಬುರಗಿ ರವರು ದಿನಾಂಕ 24/01/2018 ರಂದು 9-15 ಎ.ಎಂ.ಕ್ಕೆ ನನ್ನ ಗಂಡನಾದ ನಾಗಮೂರ್ತಿ ರವರು ಕೆಲಸಕ್ಕೆ ಹೋಗಿರುತ್ತಾರೆ. ನಾನು ನನ್ನ ಮನೆಯಲ್ಲಿ ಕೆಲಸ ಮುಗಿಸಿಕೊಂಡು 12 ಪಿ.ಎಂ ಸುಮಾರಿಗೆ ನ್ಯಾಯಾಲಯ ಕೆಲಸ ಕುರಿತು ಹೋಗುವಾಗ ನನ್ನ ತಮ್ಮನಾದ ಚಿದಾನಂದ ತಂದೆ ಯಲ್ಲಪ್ಪ ಇತನಿಗೆ ಮನೆಯಲ್ಲಿ ಬಿಟ್ಟು ಹೋಗಿರುತ್ತೇನೆ. ನನ್ನ ತಮ್ಮನಾದ ಚಿದಾನಂದ ಇತನು ನನ್ನ ಮಕ್ಕಳನ್ನು ಕರೆದುಕೊಂಡು ಬರಲು 3 ಪಿ.ಎಂ.ಕ್ಕೆ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ನನ್ನ ಗಂಡ ಕೆಲಸ ಮಾಡುವ ಪಿಡಬ್ಲೂಡಿ ಕಚೇರಿ ಹೋಗಿ ಗಂಡನ ಹತ್ತಿರ ಕಾರ ತೆಗೆದುಕೊಂಡು ಸ್ಕೂಲಿಗೆ ಹೋಗಿ ನನ್ನ ಮಕ್ಕಳನ್ನು ಕರೆದುಕೊಂಡು 4:30 ಪಿ.ಎಂ.ಕ್ಕೆ ಮನೆಗೆ ಬಂದು ನೋಡಿ ವಿಷಯ ತಿಳಿಸಿದ್ದೇನೆಂದರೆ ಮನೆ ಬಾಗಿಲಿಗೆ ಹಾಕಿದ ಕೀಲಿ ಮುರಿದು ಯಾರೋ ಕಳ್ಳರು ಪ್ರವೇಶ ಮಾಡಿ ಮನೆಯಲ್ಲಿರುವ ಅಲಮಾರಿ ಒಡೆದು ಅದರಲ್ಲಿನ ಸಾಮಾನುಗಳನ್ನು ಚೆಲ್ಲಾಪಿಲ್ಲಾ ಮಾಡಿರುತ್ತಾರೆ. ಅಂತಾ ತಿಳಿಸಿದಾಗ ನಂತರ ನನ್ನ ತಮ್ಮನು ನನ್ನ ಗಂಡನಿಗೆ ತಿಳಿಸಿದಾಗ ನನ್ನ ಗಂಡನು ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೀಲಿ ಮುರಿದಿದ್ದು ಅಷ್ಟರಲ್ಲಿ ನನಗೆ ಪೋನ ವಿಷಯ ತಿಳಿಸಿದಾಗ ನಾನು ಕೂಡಾ ಮನೆಗೆ ಬಂದು ನೋಡಲಾಗಿ ಮನೆಯ ಅಲಮಾರಿಯಲ್ಲಿಟ್ಟಿರುವ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ವಾಚ ಮತ್ತು ನಗದು ಹಣ  ಹೀಗೆ ಒಟ್ಟು 6,81,000/- ರೂ ನೇದ್ದವುಗಳನ್ನು  ಯಾರೋ ಕಳ್ಳರು ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ನಿಜಲಿಂಗಪ್ಪ ತಂದೆ ಶರಣಪ್ಪ ಹಳಿಮನಿ ಸಾ: ಜೆ.ಆರ್. ನಗರ ಜಿಡಿಎ ಕಾಲೋನಿ ಪ್ಲಾಟ ನಂ 31 ಶೇಖ ರೋಜಾ ಕಲಬುರಗಿ ಇವರು  ದಿನಾಂಕ 24.01.2018 ರಂದು ಕಾಲೇಜಗೆ ರಜೆ ಹಾಕಿ ನಾನು ನಮ್ಮ  ಸ್ವಂತ ಗ್ರಾಮವಾದ ನಿಂಬರ್ಗಾಕ್ಕೆ ಬೆಳ್ಳಿಗ್ಗೆ 11:00 ಗಂಟೆಗೆ ಹೋಗಿದ್ದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಾನು ನಮ್ಮ ಗ್ರಾಮ ಬಿಟ್ಟು ಮರಳಿ ಕಲಬುರಗಿ ಕಡೆಗೆ ಬರುತ್ತಿದ್ದು ನಾನು ಮಾರ್ಗ ಮಧ್ಯದಲ್ಲಿದ್ದಾಗ ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದವರಾದ ಶ್ರೀ ಮಹಾಂತೇಶ ಸಂಗೋಳಗಿ ಇವರು ನನಗೆ ಪೋನ ಮಾಡಿ ನಿಮ್ಮ ಮನೆ ಕಳ್ಳತನವಾಗಿದೆ ಅಂತ ತಿಳಿಸಿದ್ದು ಆಗ ನಾನು ಗಾಬರಿಗೊಂಡು ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಮುಖ್ಯ ಬಾಗೀಲ ಕೊಂಡಿ ಮೂರಿದಿದ್ದು ಮನೆಯಲ್ಲಿದ್ದ ನನ್ನ ಹೆಂಡತಿಗೆ ವಿಚಾರಿಸಲು ಅವಳು ನನಗೆ ತಿಳಿಸಿದ್ದೆನೆಂದರೆ, ಮಧ್ಯಾನ 1:30 ಗಂಟೆಯ ಸುಮಾರಿಗೆ ಮನೆಯ ಬಾಗೀಲ ಬಂದ ಮಾಡಿ ಕೀಲಿ ಹಾಕಿಕೊಂಡು ಪಕ್ಕದಲ್ಲಿರುವ ತಂಗಿಯಾದ ಬಸಮ್ಮ ಗಂಡ ಬಾಬುರಾವ ಇವರ ಮನೆಗೆ ಹೋಗಿದ್ದು ಸಾಯಂಕಾಲ 4 ಗಂಟೆಯ ಸುಮಾರಿಗೆ ಬಂದು ನೋಡಲು ಮನೆಯ ಬಾಗಿಲಗೆ ಹಾಕಿದ ಕೀಲಿ ಹಾಗೇ ಇದ್ದು ಬಾಗಿಲ ಕೊಂಡಿ ಮುರಿದ್ದು ಗಾಬರಿಗೊಂಡು ಮನೆಯ ಒಳಗೆ ಹೋಗಿ ನೋಡಲು ಒಳಮನೆಯಲಿದ್ದ ಅಲಮಾರ ಕೀಲಿ ಮುರಿದಿದ್ದು ಅಲಮಾರಿಯಲ್ಲಿದ್ದ 1ಬಂಗಾರದ ಬೆಳ್ಳಿಯ ಆಭರಣಗಳು ಮತ್ತು  ನಗದು ಹಣ ಹೀಗೆ ಒಟ್ಟು 1 ಲಕ್ಷ 77 ಸಾವೀರ ರೂಪಾಯಿಯ ಬಂಗಾರದ ಆಭರಣ, ದಿನಾಂಕ 24.01.2018 ರಂದು ಮಧ್ಯಾನ 1:30 ಗಂಟೆಯಿಂದ ಸಾಯಂಕಾಲ 4 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗೀಲ ಕೊಂಡಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರಿ ಕೀಲಿ ಅಲಮಾರಿಯಲ್ಲಿ  ಇಟ್ಟಿದ 1 ಲಕ್ಷ 77 ಸಾವೀರ ರೂಪಾಯಿಯ ಬಂಗಾರದ ಆಭರಣ, ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ  ಶಿವಾನಂದ ತಂದೆ ಶಂಕರ ಇರಗೊಂಡ ಸಾ|| ಮಾಶಾಳ ಇವರು ದಿನಾಂಕ 14-01-2018 ರಂದು ನನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ರಾತ್ರಿ 9:00 ಗಂಟೆಗೆ ಊಟ ಮಾಡಿ ನಾನು ಮತ್ತು ನನ್ನ ತಾಯಿ ಹಾಗೂ ನನ್ನ ಮಗಳು ಮೂರು ಜನರು ನಮ್ಮ ಮನೆಯಲ್ಲಿ ಮೇಲಿನ ಅಂತಸ್ತಿನಲ್ಲಿ ಮಲಗಿಕೊಂಡಿರುತ್ತೇವೆ. ಎಂದಿನಂತೆ ಬೆಳಿಗ್ಗೆ 06:00 ಗಂಟೆಗೆ ಎದ್ದು ಕೆಳಗೆ ಬರಲಾಗಿ ನಮ್ಮ ಮನೆಯ ಬಾಗಿಲು ತೆರೆದಿದ್ದು, ಮನೆಯ ಕೋಣೆಯಲ್ಲಿದ್ದ ಟ್ರಜರಿಯ ಬಾಗಿಲು ಸಹ ತೆರೆದಿದ್ದು, ಟ್ರಜರಿಯಲ್ಲಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿದ್ದವು. ಆಗ ನಾವು ಟ್ರಜರಿಯನ್ನು ಚೆಕ್ ಮಾಡಲಾಗಿ ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 1,85,000/- ರೂ ಕಿಮ್ಮತ್ತಿನವುಗಳನ್ನು ದಿನಾಂಕ 14-01-2018 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 15-01-2018 ರಂದು ಬೆಳಿಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಕಳ್ಳರು ಮಾಶಾಳ ಗ್ರಾಮದಲ್ಲಿರುವ ನಮ್ಮ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಒಳಗೆ ಬಂದು, ಮನೆಯ ಕೋಣೆಯಲ್ಲಿ ಇಟ್ಟಿದ್ದ ಟ್ರಜರಿಯ ಬಾಗಿಲನ್ನು ಬೆಂಡ್ ಮಾಡಿ, ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಮುಧೋಳ ಠಾಣೆ : ಮುಧೋಳ ಠಾಣೆ : ಶ್ರೀ  ಸಯ್ಯದ್ ಯುನಸ್ ತಂದೆ ಯದುಲ್ಲಾ ಹುಸೇನ ಸಯ್ಯದ ಸಾ|| ಪರಿಗಿ ತಾ|| ಪರಿಗಿ ಜೀ|| ವಿಕರಾಬಾದ ರಾಜ್ಯ ತೆಲಂಗಾಣ ಇವರು ಸುಮಾರು 15-20 ವರ್ಷಳಿಂದ ಲಾರಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು ಈಗ ಸುಮಾರು 2 ವರ್ಷಗಳಿಂದ ಚಿತ್ತಪೂರದ ಓರಿಯಂಟಲ ಸಿಮೇಂಟ ಕಂಪನಿಯಲ್ಲಿ ನನ್ನ ಲಾರಿಯನ್ನು ಬಿಟ್ಟಿದ್ದು, ದಿನಾಲು ಅಲ್ಲಿಂದ ಸಿಮೆಂಟನ್ನು ಲೋಡ ಮಾಡಿಕೊಂಡು ಹೈದ್ರಾಬಾದಕ್ಕೆ ಹೋಗಿ ಅಲ್ಲಿ ಖಾಲಿ ಮಾಡಿ, ಅಲ್ಲಿಂದ ಬರುವಾಗ ಮಣ್ಣನ್ನು ತುಂಬಿಕೊಂಡು ಓರಿಯಂಟಲ ಕಂಪನಿಯಲ್ಲಿ ಖಾಲಿ ಮಾಡುತ್ತೇವೆ. ಎಂದಿನಂತೆ ದಿನಾಂಕ 19-01-2018 ರಂದು ಬೆಳಗ್ಗೆ 1-30 ಗಂಟೆಯ ಸುಮಾರಿಗೆ ನನ್ನ ಲಾರಿಯಲ್ಲಿ ಓರಿಯಂಟಲ್ ಸಿಮೇಂಟ ಕಂಪನಿಯಿಂದ ಸಿಮೇಂಟ ಚೀಲಗಳನ್ನು ತುಂಬಿಕೊಂಡು ಹೈದ್ರಾಬಾದಕ್ಕೆ ಹೊರಟಿದ್ದು, ಲಾರಿಯನ್ನು ನಾನು ನಡೆಸುತ್ತಿದ್ದು ಕ್ಲೀನರ ಆಗಿ ಸದರಿ ಇರ್ಫಾನ ಇದ್ದನು. ನಾನು ನನ್ನ ಸಿಮೇಂಟ ತುಂಬಿದ ಲಾರಿಯನ್ನು ಚಲಾಯಿಸಿಕೊಂಡು ಸೇಡಂ,ಕೊಡಂಗಲ ಮಾರ್ಗವಾಗಿ ಹೈದ್ರಾಬಾದಕ್ಕೆ ಹೋಗುತ್ತಿದ್ದಾಗ ಬೆಳಗ್ಗಿನ ಜಾವ 3-00 ಗಂಟೆಯ ಸುಮಾರಿಗೆ ಮುಧೋಳ ಮೇನ ಗೇಟ ಹತ್ತೀರ ಮುಖ್ಯರಸ್ತೆಯ ಮೇಲೆ ರೋಡ ಹಂಪ್ಸ ಹಾಕಿದ್ದು ನಾನು ನನ್ನ ಲಾರಿಯನ್ನು ನಿಧಾನಮಾಡಿದಾಗ ನಮ್ಮ ಲಾರಿಯ ಹಿಂದಿನಿಂದ ಒಂದು ಮೋಟಾರ ಸೈಕಲ ಮೇಲೆ 4 ಜನರು ಬಂದು ನಮ್ಮ ಲಾರಿಯ ಮುಂದೆ ನಿಲ್ಲಿಸಿ ಅದರಲ್ಲಿ ಇಬ್ಬರೂ ನನ್ನ ಕಡೆಯಿಂದ ಮತ್ತೇ ಒಬ್ಬನೂ ಕ್ಲೀನರ ಕಡೆಯಿಂದ ಲಾರಿಯನ್ನು ಏರಿದ್ದು, ಇನ್ನೋಬ್ಬನು ತಾವು ತಂದ ಮೋಟಾರ ಸೈಕಲ್ಲ ಮೇಲೆ ಕುಳಿತು ಅದನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೊಗಿದ್ದು, ಲಾರಿಯಲ್ಲಿ ಏರಿದ 3 ಜನರು ತಮ್ಮಲ್ಲಿದ್ದ ಚಾಕುಗಳನ್ನು ತೆಗೆದುಕೊಂಡು ನನಗೆ ಮತ್ತು ನಮ್ಮ ಲಾರಿ ಕ್ಲೀನರ ಇರ್ಫಾನನ ಕುತ್ತಿಗೆಯ ಹತ್ತೀರ ಹಿಡಿದುಕೊಂಡು ಹಿಂದಿ ಭಾಷೆಯಲ್ಲಿ, ಅವಾಜ್ ಮಾಡಿದರೇ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಹೇಳುತ್ತಾ, ನಿಮ್ಮಲ್ಲಿದ್ದ ಎಲ್ಲಾ ಹಣವನ್ನು ಕೋಡಿರಿ, ಇಲ್ಲಾ ಅಂದರೇ ನಿಮಗೆ ಜೀವ ಸಹೀತ ಬಿಡುವದಿಲ್ಲಾ ಅಂತಾ ಹೆದರಿಸಿ ಒಬ್ಬ ವ್ಯಕ್ತಿಯು ತನ್ನಲ್ಲಿದ್ದ ಚಾಕುವಿನಿಂದ ನನ್ನ ಎಡಗೈ ಮುಂಗೈ ಹತ್ತೀರ ಕುಯಿದಿದ್ದರಿಂದ ನನ್ನ ಎಡಗೈಗೆ ಸ್ವಲ್ಪ ರಕ್ತಗಾಯವಾಗಿದ್ದು, ನಂತರ ಅವರುಗಳು ನನ್ನ ಜೇಬಿನಲ್ಲಿದ್ದ  4000 ರೂ ನಗದು ಹಣ ಮತ್ತು ಒಂದು ಒಪ್ಪೋ ಕಂಪನಿಯ ಮೋಬೈಲನ್ನು ಕಸಿದುಕೊಂಡಿದ್ದು ಇರುತ್ತದೆ. ನಂತರ ನಮ್ಮ ಕ್ಲೀನರ ಹತ್ತೀರ ಅವರುಗಳು ಚೆಕ್ ಮಾಡಿ ಅವನ ಹತ್ತೀರ ಇದ್ದ ಒಂದು ಸ್ಯಾಮಸಾಂಗ ಕಂಪನಿಯ ಮೋಬೈಲನ್ನು ಕಸೀದುಕೊಂಡು ನಂತರ ಅದರಲ್ಲಿ ಒಬ್ಬ ವ್ಯಕ್ತಿಯು ನಮ್ಮ ಲಾರಿಯನ್ನು ಚಲಾಯಿಸಿಕೊಂಡು ಸುಮಾರು 20 ಮೀಟರ ದೂರ ಹೋಗಿ ರಸ್ತೇಯ ಬದಿಯಲ್ಲಿ ನಿಲ್ಲಿಸಿ ಅವರುಗಳು ನಮ್ಮ ಲಾರಿಯಿಂದ ಕೆಳಗಡೆ ಇಳಿದು ತಾವು ತೆಗೆದುಕೊಂಡು ಬಂದ ಮೊಟಾರ ಸೈಕಲ್ಲ ಮೇಲೆ ವಾಪಾಸ ಸೇಡಂ ಕಡೆಗೆ ನಾಲ್ಕು ಜನರು ಹೋಗಿದ್ದು ಇರುತ್ತದೆ. ಸದರಿಯವರು ಹಿಂದಿ ಬಾಷೆಯನ್ನು ಮಾತನಾಡುತ್ತಿದ್ದು ಅವರ ಹೆಸರು ಹೆಸರು ವಿಳಾಸ ಗೊತ್ತಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ನಾಗರಡ್ಡಿ ತಂದೆ ನರಸರಡ್ಡಿ ಹಾ:ವ: ಕಲಬುರಗಿ ರವರು ದಿನಾಂಕ: 17/01/2018 ರಂದು ಮದ್ಯಾಹ್ನ 1-   ಗಂಟೆಗೆ ತನ್ನ ಮೋಟಾರ ಸೈಕಲ ನಂಬರ ಕೆ.ಎ. 39 ಕ್ಯೂ 3010 ನೇದ್ದರ ಮೇಲೆ ತನ್ನ ಗೆಳೆಯನಾದ ರಾಮರಡ್ಡಿ ಇತನಿಗೆ ಕೂಡಿಕೊಂಡು ನಂದೂರ ಹತ್ತಿರ ಸೈಟಿಗೆ ಬಂದು ನಂತರ ಮರತೂರ ಗ್ರಾಮದ ವಿಜ್ಞಾನೇಶ್ವರ ಗುಡಿ ನೋಡಲು ಬಂದು ಮೋಟಾರ ಸೈಕಲ ನಿಲ್ಲಿಸಿ ಗುಡಿಯೊಳಗೆ ಹೋಗಿ ಮರಳಿ ಮದ್ಯಾಹ್ನ 2- 00 ಗಂಟೆಗೆ ಬಂದು ನೋಡಲಾಗಿ ನಾನು ನಿಲ್ಲಿಸಿದ ಮೋಟಾರ ಸೈಕಲ ಇರಲಿಲ್ಲಾ ಗಾಬರಿಯಾಗಿ ಎಲ್ಲಾ ಕಡೆಗೆ ಹುಡುಕಾಡಿದರೂ ಯಾರೋ ಕಳ್ಳರು ನನ್ನ ಮೊಟಾರ ಸೈಕಲ ನಂಬರ ಕೆ.ಎ. 39 ಕ್ಯೂ 3010 ಅ.ಕಿ 35000-  ರೂ ಕಿಮ್ಮಿತ್ತಿನ ಮೋಟಾರ ಸೈಕಲ ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.