ಸುಲಿಗೆ ಪ್ರಕರಣ :
ಜೇವರಗಿ
ಠಾಣೆ : ಶ್ರೀ ಪಂಚಾಕ್ಷರಯ್ಯಾ ತಂದೆ ಶಿವಯ್ಯಾ ಮಠ ಸಾಃ ರಮೇಶ ಕುಲಕರ್ಣಿ
ಲೇಔಟ ಜೇವರಗಿ ರವರು ದಿನಾಂಕ;
19/09/2019 ರಂದು ಸಾಯಂಕಾಲ 5.00 ಘಂಟೆಯ ಸುಮಾರಿಗೆ
ನಾನು ಮತ್ತು ನನ್ನ ಹೆಂಡತಿ ಗುರಮ್ಮ ಇಬ್ಬರೂ ಮನೆಯಲ್ಲಿ ಇದ್ದಾಗ ಒಬ್ಬ ಅಪರಿತ ವ್ಯಕ್ತಿ
ನಮ್ಮ ಮನೆಗೆ ಬಂದು ಕುಡಿಯಲು ನೀರು ಕೊಡಿರಿ ಎಂದು ಹೇಳಿದಾಗ ನಾನು ನೀರು ಕೊಟ್ಟೆನು ಅವನು
ನೀರು ಕುಡಿದು ಹೊದ ನಂತರ ಸಾಯಂಕಾಲ 7.30 ಗಂಟೆಯ ಸುಮಾರಿಗೆ ಇಬ್ಬರೂ ಅಪರಿತ ಮನುಷ್ಯರು ನಮ್ಮ ಮನೆಯೋಳಗೆ ಪ್ರವೇಶ ಮಾಡಿ
ತಮ್ಮ ಕೈಯಿಂದ ನನಗೆ ಹಿಡಿದು ಹೊರಗೆ ಎಳೆದಾಡಿಕೊಂಡು ತಂದು ಕೈ, ಕಾಲು,
ಕಟ್ಟಿ ಮನೆಯಲ್ಲಿ ಹಣ ಬಂಗಾರ ಎಲ್ಲಿವೆ ಹೆಳು ಎಂದು ಕೈಯಿಂದ
ನನಗೆ ಹೊಡೆದು ಕಾಲಿನಿಂದ ಒದ್ದು ಕೇಳುತ್ತಿದ್ದಾಗ ನಾನು ಅವರಿಗೆ ನಮ್ಮ ಹತ್ತಿರ ಹಣ ಇಲ್ಲಾ
ನನನ್ನು ಬಿಟ್ಟು ಬಿಡಿರಿ ಎಂದು ಪರಿಪರಿಯಾಗಿ ಕೇಳಿಕೊಂಡರು ಅವರು ನನಗೆ ಬಿಡದೆ ಕೈಯಿಂದ
ಹೊಡೆ ಬಡೆ ಮಾಡಿ ನನ್ನ ಬಾಯಿಯಲ್ಲಿ ಬಟ್ಟೆ ತುರುಕಿ ನನ್ನನು ಅಲ್ಲಿಯೇಕೇಡುವಿ ನಮ್ಮ
ಮನೆಯೊಳಗೆ ಹೋಗಿ ಮನೆಯಲ್ಲಿದ್ದ ನನ್ನ ಹೆಂಡತಿ ಗುರಮ್ಮ ಇವಳ ಮೈಮೇಲಿದ್ದ ಬಂಗಾರದ
ಆಭರಣಳನ್ನು ಮತ್ತು ಜಬರದಸ್ತಿಯಿಂದ ಕಿತ್ತುಕೊಂಡಿರುತ್ತಾರೆ. ಅಲ್ಲದೆ ಕಬ್ಬಿಣದ ಅಲಮಾರಿ
ಬಾಗೀಲು ತೆರೆದು ಅದರಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹೀಗೆ ಎಲ್ಲಾ ಸೇರಿ 87,500/-
ಕಿಮ್ಮತಿನಷ್ಟು ದೊಚಿಕೊಂಡು ಹೋಗಿರುತ್ತಾರೆ. ಅವರು ನೋಡಲು ಸುಮಾರು
ಐದರಿಂದ ಐದುವರೆ ಪೀಟ್ ಎತ್ತರ ಹೊಂದಿದ್ದು, ತಳ್ಳನೆ ಮೈಕಟ್ಟಿನವರಿದ್ದು, ಅಂದಾಜು ವಯಸ್ಸು 22
ರಿಂದ 26 ವರ್ಷ ವಯಸ್ಸಿನವರಾಗಿದ್ದರು.
ಅವರು ಕನ್ನಡ ಬಾಷೆಯಲ್ಲಿ ಮಾತನಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹೊಡೆ ಬಡೆ ಮಾಡಿದ ಪ್ರಕರಣ :
ವಾಡಿ
ಠಾಣೆ : ಶ್ರೀಮತಿ ಮಾಲಿನಿ ಗಂಡ ಸಂತೋಷ ಡೋಲಾರೆ ಸಾ:ಸೋನಾಬಾಯಿ ಏರಿಯಾ ವಾಡಿ ರವರು
10/02/2019 ರಂದು ಸಂತೋಷ ಇತನೊಂದಿಗೆ ಮದುವೆಯಾಗಿರುತ್ತದೆ.ನಮ್ಮ ತಂದೆ ತಾಯಿ ಅಕಾಲಿಕ ಮರಣ ಹೊಂದಿರುತ್ತಾರೆ.
ಮದುವೆಯಾದ ನಂತರ ನಾನು ನನ್ನ ಗಂಡ ಕೂಡಿ ಬಾಂಬೆಯ ಪನವೇಲದಲ್ಲಿ ವಾಸವಾಗಿದ್ದು ಅಲ್ಲಿ ನನ್ನ ಗಂಡನಿಗೆ
ನಮ್ಮ ಅತ್ತೆ ವಿಜಯಲಕ್ಷ್ಮೀ ಇವಳು ಫೋನ ಮಾಡಿ ನಿನ್ನ ಹೆಂಡತಿಗೆ ಹೊಡಿ, ಬಡಿ ಮಾಡು ತ್ರಾಸ ಕೊಡು ರಂಡಿಗೆ ಭೋಸಡಿಗೆ ಅಂತಾ ಹೇಳುತ್ತಿದ್ದನ್ನು ನನ್ನ ಗಂಡನು ಕೇಳಿಸಿಕೊಂಡು
ನನಗೆ ಕಿರಕುಳ ಕೊಡಲು ಪ್ರಾರಂಭಿಸಿದನು ಮತ್ತು ನಮ್ಮ ಅತ್ತೆಯ ಮಾತು ಕೇಳಿ ನನಗೆ ನನ್ನ ಗಂಡನು ಬಾಂಬೆಯಿಂದ
ಕರೆದುಕೊಂಡು ವಾಡಿ ಪಟ್ಟಣದ ಸೋನಾಬಾಯಿ ಏರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು ನನ್ನ ಗಂಡನು ಎಸಿಸಿ
ಕಂಪನಿಯಲ್ಲಿ ಕೂಲಿಕೆಲಸಕ್ಕೆ ಹೋಗುತ್ತಿದ್ದನು.ನನಗೆ ವಿನಾಕಾರಣ ನೀನು ಕಪ್ಪಾಗಿದ್ದಿ, ನಿನಗೆ ಮನೆಕೆಲಸ ಮಾಡಲು ಬರುವದಿಲ್ಲ, ನೀನು ನೋಡಲು ಸರಿಯಾಗಿಲ್ಲ ಅಂತಾ
ದಿನಾಲೂ ನನಗೆ ಹೊಡೆ ಬಡೆ ಮಾಡುತ್ತಿದ್ದನು. ಆಗ ನಾನು ನಮ್ಮ ಅತ್ತೆ ವಿಜಯಲಕ್ಷ್ಮೀ ಮತ್ತು ಭಾವ ಖಂಡು
ಇವರಿಗೆ ನಮ್ಮ ಮನೆಗೆ ಕರೆಯಿಸಿ ನನ್ನ ಗಂಡನಿಗೆ ಬುದ್ದಿ ಹೇಳಲು ಹೇಳಿದಾಗ ಅವರು ಸಹ ನನಗೆ ರಂಡಿ ಬೋಸಡಿ, ನೀನು ಛೀನಾಲಿ ಇದ್ದಿ,
ಬೇಡುಕೊಂಡು ತಿನ್ನುತ್ತಿ ಅಂತಾ ಬೈಯ್ದು ನನಗೆ ತ್ರಾಸ ಕೊಡುವಂತೆ ನನ್ನ
ಗಂಡನಿಗೆ ಹೇಳಿ ಹೋಗುತ್ತಿದ್ದರು.ಇಂದಿಲ್ಲಾ ನಾಳೆ ನನ್ನ ಗಂಡ ಸರಿ ದಾರಿಗೆ ಬರಬಹುದು ಅಂತಾ ನಾನು ನನ್ನ
ಗಂಡ ಕೊಟ್ಟ ತ್ರಾಸನ್ನು ಸಹಿಸಿಕೊಂಡು ನನ್ನ ಗಂಡನೊಂದಿಗೆ ವಾಸವಾಗಿದ್ದೆ. ಈ ವಿಷಯದಲ್ಲಿ ಬಳ್ಳಾರಿಯಲ್ಲಿರುವ
ನನ್ನ ಅಜ್ಜಿ ಮೀನಾಕ್ಷಿ ಇವರಿಗೆ ವಿಷಯ ತಿಳಿಸಿದಾಗ ಫೋನ ಮೂಲಕ ನನ್ನ ಗಂಡನಿಗೆ ಬುದ್ದಿವಾದ ಹೇಳಿದರು
ಸಹ ನನಗೆ ತ್ರಾಸ ಕೊಡುವದು ಮಾಡುತ್ತಿದ್ದನು. ನಂತರ ದಿನಾಂಕ 29/08/2019 ರಂದು ಬೆಳಗ್ಗೆ 10-00 ಗಂಟೆ
ಸುಮಾರು ನಾನು ಮನೆಯಲ್ಲಿ ಅಡುಗೆ ಮಾಡುತ್ತ ಇದ್ದಾಗ ನನ್ನ ಗಂಡ ಮನೆಯ ಹೊರಗಡೆ ಹೋದವನು ನಮ್ಮ ಅತ್ತೆ
ವಿಜಯಲಕ್ಷ್ಮೀ ಗಂಡ ರಾಮಲಿಂಗ,
ಭಾವ ಖಂಡು ತಂದೆ ರಾಮಲಿಂಗ ರವರಿಗೆ ಕರೆದುಕೊಂಡು ಮನೆಗೆ ಬಂದು ನನ್ನ ಗಂಡನು
ನನ್ನೊಂದಿಗೆ ಜಗಳ ತೆಗೆದು ‘’ರಂಡಿ ನೀನು ಈ ಮನೆಯಲ್ಲಿ ಇರಬೇಡಾ ಅಂತಾ ಜಗಳಕ್ಕೆ ಬಿದ್ದು ಕೈಯಿಂದ ಹೊಡೆ ಬಡೆ ಮಾಡ ಹತ್ತಿದನು
ಮತ್ತು ನಮ್ಮ ಅತ್ತೆ ಭಾವ ಖಂಡು ಇವರು ‘’ ಈ ರಂಡಿಗೆ ಬೀಡಬೇಡಾ ಹೊಡೆದು ಮನೆಯ
ಹೊರಗಡೆ ಹಾಕು ಅಂತಾ ಬೈಯುತ್ತಿದ್ದಾಗ ನಾನು ನನಗೆ ಏಕೆ ತ್ರಾಸ ಕೊಡುತ್ತಿರಿ ನಾನೇನು ಮಾಡಿದ್ದೆನೆ
ಅಂತಾ ಕೇಳಿದ್ದಕ್ಕೆ ನನ್ನ ಗಂಡನು ರಂಡಿ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ತಲೆ ಕೂದಲು ಹಿಡಿದು ನನಗೆ
ಮನೆಯ ಹೊರಗೆ ಹಾಕಿ ಇನ್ನೊಮ್ಮೆ ಈ ಮನೆಗೆ ಬಂದರೆ ನಿನಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ
ಹಾಕಿದ್ದು ಆಗ ದಾರಿಗೆ ಹೊರಟ ನನ್ನ ಪರಿಚಯದ ರಾಜು ಎನ್ನುವವರು ನೋಡಿ ಜಗಳವನ್ನು ಬಿಡಿಸಿದರು. ಆಗ ಸಮಯ
ಬೆಳಗ್ಗೆ 10-30 ಗಂಟೆಯಾಗಿತ್ತು. ನಂತರ ನಾನು ವಿಷಯ ನನ್ನ ಅಜ್ಜಿಗೆ ತಿಳಿಸಿ ನಾನು ಬಳ್ಳಾರಿಯ ನಮ್ಮ
ಅಜ್ಜಿಯ ಮನೆಗೆ ಹೋಗಿ ಅಲ್ಲಿ ಉಳಿದುಕೊಂಡೆನು. ನಂತರ ನನ್ನ ಗಂಡ ಸಂತೋಷ ಇತನು ಇಂದಿಲ್ಲಾ ನಾಳೆ ನನಗೆ
ಕರೆದುಕೊಂಡು ಹೋಗಲು ಬರಬಹುದು ಅಂತಾ ನಾನು ಅಜ್ಜಿಯ ಮನೆಯಲ್ಲಿ ಉಳಿದುಕೊಂಡೆನು. ನನ್ನ ಗಂಡನು ನನಗೆ
ಕರೆದುಕೊಂಡು ಹೋಗಲು ಬರಲಿಲ್ಲ. ನನ್ನ ಗಂಡ ಸಂತೋಷ,ಅತ್ತೆ ವಿಜಯಲಕ್ಷ್ಮೀ, ಭಾವ ಖಂಡು ರವರು ನನಗೆ ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರಕುಳ ನೀಡಿ ಜೀವದ ಬೆದರಿಕೆ
ಹಾಕಿ ಮನೆಯ ಹೊರಗಡೆ ಹಾಕಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಅಂಥಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.