Police Bhavan Kalaburagi

Police Bhavan Kalaburagi

Friday, May 26, 2017

Yadgir District Reported Crimes

                                                         Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 85/2017 ಕಲಂ. 78 (3) ಕೆ.ಪಿ. ಆಕ್ಗಟ;- ದಿನಾಂಕ:24/05/2017 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಯಾದಗಿರಿ ನಗರದ ಹಳೆಯ ಬಸ್ಸ್ಟ್ಯಾಂಡ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಯಾದಗಿರಿ ನಗರ ಠಾಣೆಗೆ ಬಂದು ಇಬ್ಬರೂ ಪಂಚರನ್ನು ಠಾಣೆಗೆ ಬರಮಾಡಿಕೊಂಡು ಸದರಿ ಪಂಚರು ಮತ್ತು ಯಾದಗಿರಿ ನಗರ ಠಾಣೆಯ ಶ್ರೀ ಸುನೀಲ್ ಮೂಲಿಮನಿ ಪಿ.ಎಸ್.ಐ(ಕಾ.ಸು) ಮತ್ತು ಸಿಬ್ಬಂದಿಯಾದ ಮತ್ತು ರವಿ ರಾಠೋಡ ಪಿ.ಸಿ 269 ಹಾಗೂ ಡಿ.ಸಿ.ಬಿ ಘಟಕದ ಸಿಬ್ಬಂದಿಯವರಾದ ಸೈಯದ ಶಫೀಯುದ್ದೀನ್ ಹೆಚ್.ಸಿ ನಂ 97, ಗುಂಡಪ್ಪ ಹೆಚ್.ಸಿ 115, ಶ್ರೀಮಂತ ಸಿಂಘೆ ಹೆಚ್.ಸಿ. 141, ಹರಿನಾಥರೆಡ್ಡಿ ಪಿಸಿ 267, ರವರಿಗೆ ಹಾಗೂ ಪಂಚರಿಗೆ ದಾಳಿ ಮಾಡುವ ಬಗ್ಗೆ ವಿಷಯ ತಿಳಿಸಿದೆನು. ನಂತರ ನಾನು ಎಲ್ಲರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 65 ನೇದ್ದರಲ್ಲಿ ದಾಳಿ ಕುರಿತು ಹೊರಟು 7-15 ಪಿಎಂಕ್ಕೆ ಸ್ಥಳಕ್ಕೆ ಹೋಗಿ ಹಳೆ ಬಸ್ ನಿಲ್ದಾಣದ ಹತ್ತಿರ ಐ.ಬಿಯ ಹತ್ತಿರ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು  ನಡೆದುಕೊಂಡು ಹೋಗಿ ಬಸ್ ನಿಲ್ದಾಣದ ಎದುರುಗಡೆ ಇದ್ದ ಒಂದು ಬೆಕರಿಯ ಹತ್ತಿರ ಮರೆಯಾಗಿ ನಿಂತು ನೋಡಿದಾಗ ಅಲ್ಲಿ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ 1=00 ರೂಪಾಯಿಗೆ 80=00 ರೂಪಾಯಿ ಗೆಲ್ಲಿರಿ ಮಟ್ಕಾ ಆಡಿರಿ ಎಂದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ತನ್ನ ಮೊಬೈಲದಲ್ಲಿ, ಹಾಗೂ ಚೀಟಿಯಲ್ಲಿ  ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಸದರಿಯವನಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು  ಸಿದ್ದಲಿಂಗಪ್ಪ ತಂ.ತಾಯಪ್ಪ ಮಡಿವಾಳ ವಃ 42 ಜಾಃ ಅಗಸರ ಉಃ ಕಿರಾಣಿ ವ್ಯಾಪಾರ ಮಟ್ಕಾ ಬರೆದುಕೊಳ್ಳುವುದು ಸಾ|| ಬೀರನಾಳ ತಾಃ ಶಹಾಪೂರ ಅಂತಾ ಹೇಳಿದ್ದು, ಸದರಿಯವನಿಂದ 1) ಮಟ್ಕಾ ಜೂಜಾಟದ 19,400=00 ರೂ. ನಗದು ಹಣ, 2) ಒಂದು ಮಟ್ಕಾ ನಂಬರ ಬರೆದ ಚೀಟಿ ಅ.ಕಿ.00-00 3) ಒಂದು ಬಾಲಪೆನ ಅ.ಕಿ.00-00 4) ಒಂದು ಎಲ್ಜಿ ಕಂಪನಿಯ ಮೊಬೈಲ್ (ಸ್ಕ್ರೀನ್ ಒಡೆದಿದ್ದು) ಅ:ಕಿ: 1000=00 ರೂ. 5) ಒಂದು ಲಾವಾ ಕಂಪನಿಯ ಮೋಬೈಲ್ ಅ.ಕಿ.500-00 ರೂ. ಈ ಮೋಬೈಲದಲ್ಲಿ ಮಟ್ಕಾ ಅಂಕಿ ಸಂಖ್ಯೆಗಳು ಇರುತ್ತವೆ. ಇವುಗಳನ್ನು ಜಪ್ತಿ ಮಾಡಿಕೊಂಡು 7-30 ಪಿಎಮ್ ದಿಂದ 8-30 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡಿದ್ದು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 25/05/2017 ರಂದು 8-50 ಎಎಂಕ್ಕೆ ಗುನ್ನೆ ನಂ.85/2017 ಕಲಂ.78(3)ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ 379 ಐ.ಪಿ.ಸಿ;- ದಿನಾಂಕ 25/05/2017 ರಂದು 10-30 ಎಎಂಕ್ಕೆ ಪಿರ್ಯಾದಿ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದರ ಸಾರಾಂಶವೆನೆಂದರೆ ನಾನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವಡಗೇರಾದಲ್ಲಿ ವ್ಯವಸ್ಥಾಪಕರು ಅಂತಾ ಕೆಲಸ ಮಾಡಿ, ದಿನಾಂಕ 31/01/2017 ರಂದು ನಾನು ಸೇವೆಯಿಂದ ನಿವೃತ್ತಿ ಹೊಂದಿರುತ್ತೇನೆ. ನನ್ನದೊಂದು ಸ್ವಂತ ಬಜಾಜ ಕಂಪನಿಯ ಕಪ್ಪು ಬಣ್ಣದ ಮೋಟರ್ ಸೈಕಲ್ ಇದ್ದು, ಮೋ.ಸೈಕಲ್ ನಂ ಏಂ 32 ಖ 5195, ಚೆಸ್ಸಿ ನಂ ಒಆ2ಆಆಆಗಚಚಒಘಏ69384, ಇಂಜಿನ್ ನಂ ಆಗಒಃಒಏ27487,ಅಂತಾ ಇರುತ್ತದೆ. ಸದರಿ ವಾಹನದ ಅ.ಕಿ 20,000=00 ರೂಪಾಯಿಗಳು. ನಮ್ಮ ಅಳಿಯ ಅಂದರೆ, ನಮ್ಮ ಸೋದರ ಅತ್ತೆಯ ಮಗಳ ಮಗನಾದ ದೇವಿಂದ್ರ ತಂದೆ ಶರಣಪ್ಪ ಮಣ್ಣೂರು ಸಾ|| ಬುಡಬುಡಕೆರ ಓಣಿ ಯಾದಗಿರಿ ಇವರು ಯಾದಗಿರಿಯಲ್ಲಿ ವಾಸವಾಗಿದ್ದರಿಂದ ಇವರ ಯೋಗ ಕ್ಷೇಮ ವಿಚಾರ ಮಾಡಲು ನಾನು ದಿನಾಂಕ 15/03/2017 ರಂದು ಯಾದಗಿರಿಗೆ ಬಂದಿದ್ದೆನು. ಯಾದಗಿರಿಗೆ ಬಂದು ದಿನಾಂಕ 15/03/2017 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ನಾನು ನನ್ನ ಮೋಟರ್ ಸೈಕಲ್ ನಂ. ಏಂ 32 ಖ 5195 ನೇದ್ದನ್ನು ತೆಗೆದುಕೊಂಡು ಯಾದಗಿರಿ ನಗರದ ಪೂಜಾ ಹೋಟೆಲ್ ಹತ್ತಿರ ನಿಲ್ಲಿಸಿ ಟೀ, ನಾಷ್ಟಾ ಮಾಡಲು ಹೋದೆನು. ನಂತರ ನಾನು 09-30 ಪಿ.ಎಂ ಸುಮಾರಿಗೆ ಮರಳಿ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ನಮ್ಮ ಅಳಿಯ ದೇವಿಂದ್ರ ತಂದೆ ಶರಣಪ್ಪ ಮಣ್ಣೂರು ಈತನಿಗೆ ಪೋನ್ ಮಾಡಿ ವಿಷಯ ತಿಳಿಸಿದೆನು. ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಇಬ್ಬರು ಕೂಡಿ ಸುತ್ತ ಮುತ್ತ ನೋಡಲಾಗಿ ನಮ್ಮ ಗಾಡಿ ಕಾಣಲಿಲ್ಲ. ಕಾರಣ ದಿನಾಂಕ 15/03/2017 ರಂದು ರಾತ್ರಿ 09 ಗಂಟೆಯಿಂದ, ಅಂದೇ ರಾತ್ರಿ 09-30 ಗಂಟೆಯ ಅವಧಿಯಲ್ಲಿ ಯಾದಗಿರಿ ನಗರದ ಪೂಜಾ ಹೊಟೆಲ್ ಮುಂದೆ ನಿಲ್ಲಿಸಿದಾಗ ನನ್ನ ಮೋಟರ್ ನಂ. ಏಂ 32 ಖ 5195 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಂಡು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕು. ನಾವು ಇಲ್ಲಿಯ ವರೆಗೆ ಅಲ್ಲಿ ಅಲ್ಲಿ ಹುಡುಕಾಡಲಾಗಿ ನಮ್ಮ ಮೋಟರ್ ಸೈಕಲ್ ಪತ್ತೆ ಯಾಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.86/2017 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ 279,338 ಐಪಿಸಿ  ಸಂ 187 ಐಎಮ್ವಿ ಎಕ್ಟ;- ದಿನಾಂಕ: 25/05/2017 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ.ಎಲ್.ಸಿ ಸ್ವಿಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗಡ್ಡೆಲಿಂಗಪ್ಪ ತಂದೆ ಬಸವರಾಜ ಸಂಗಣ್ಣೊರ ಸಾ:ಬೆಂಡೆಬೆಂಬಳ್ಳಿ ಇವರ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಾಂಶವೇನಂದರೆ ನಿನ್ನೆ ದಿನಾಂಕ: 24/05/2017 ರಂದು ನನ್ನ ಹೆಂಡತಿ ತವರೂರಾದ ತಿಪ್ಪನಳ್ಳಿಯಿಂದ ನಮ್ಮೂರಿಗೆ ಮೋಟರ್ ಸೈಕಲ್ ನಂ. ಕೆಎ 33 ಆರ್ 5662 ನೇದ್ದರ ಮೇಲೆ ಊರಿಗೆ ಬರುತ್ತಿದ್ದಾಗ ಬೆಳಗ್ಗೆ 7-30 ಗಂಟೆ ಸುಮಾರಿಗೆ ರಸ್ತೆ ಮೇಲೆ ತುಮಕೂರ ಕ್ರಾಸ ಹತ್ತಿರ ಮುಂದೆ ಒಂದು ಲಾರಿ ನಂ. ಕೆಎ 22 ಎ 3799 ನೇದ್ದು ಹೋಗುತ್ತಿತ್ತು. ನಾನು ಅದರ ಹಿಂದೆ ಹೋಗುತ್ತಿದ್ದಾಗ ಲಾರಿ ಚಾಲಕನು ನನಗೆ ಸೈಡ ಕೊಟ್ಟಂತೆ ಮಾಡಿದಾಗ ನಾನು ಸೈಡಿನಿಂದ ಹೋಗುತ್ತಿದ್ದಾಗ ಒಮ್ಮಲೇ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಲಗಡೆಯಿಂದ ಲಾರಿಯನ್ನು ಡಿಕ್ಕಿಪಡಿಸಿದ್ದರಿಂದ ನಾನು ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದಾಗ ನನ್ನ ಬಲಗಾಲ ಹೆಬ್ಬೆರಳಿಗೆ ಮತ್ತು ಪಾದಕ್ಕೆ ಭಾರಿ ರಕ್ತಗಾಯವಾಯಿತು. ಯಾರೋ ದಾರಿಯಲ್ಲಿ ಹೋಗುವವರು ನನಗೆ ಸೈದಾಪೂರಕ್ಕೆ ತಂದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿರುತ್ತಾರೆ. ನಂತರ ನಾನು ನಮ್ಮ ಮಾವ ಬಸವರಾಜಗೌಡ ಇವರಿಗೆ ಫೊನ ಮಾಡಿ ಹೇಳಿದಾಗ ಅವರು ಬಂದು ನನಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಸದರಿ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 73/2017 ಕಲಂ: 279,338 ಐಪಿಸಿ ಸಂ 187 ಐಎಮ್ವಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 173/2017.ಕಲಂಃ 143.147.148.323.324.504.506 ಸಂ149.ಐ.ಪಿ.ಸಿ.;- ದಿನಾಂಕ 25/05/2017 ರಂದು ಮದ್ಯಾಹ್ನ 12-30 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪಮಾಡಿಸಿದ ಅಜರ್ಿ ಅಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ನಿನ್ನೆ ದಿನಾಂಕ 24/05/2017 ರಂದು ಬೆಳಿಗ್ಗೆ 7-30 ಸುಮಾರಿಗೆ ಹೋಲದಲ್ಲಿ ಕಸ ತೆಗೆಯುತ್ತಿರುವಾಗ ನಮ್ಮ ಅಣ್ಣ ತಮಕಿಯವರಾದ 1] ಯಂಕಣ್ಣ ತಂದೆ ಚಂದ್ರಾಮಪ್ಪ 2] ನಿಂಗಣ್ಣ ತಂದೆ ಚಂದ್ರಾಮಪ್ಪ , 3] ಹಣಮಂತ್ರಾಯ ತಂದೆ ಬೈಲಪ್ಪ ಗೌಡಗೇರ , 4] ಬಸಮ್ಮ ಗಂಡ ಚಂದ್ರಾಮಪ್ಪ, 5] ಲಕ್ಷ್ಮೀ ಗಂಡ ಯಂಕಣ್ಣ, 6] ನಾಗಮ್ಮ ಗಂಡ ನಿಂಗಣ್ಣ 7} ಶರಣವಸವ ತಂದೆ ಯಂಕಣ್ಣ ಇವರೆಲ್ಲು ಕೂಡಿಕೊಂಡು ಕೈಯಲ್ಲಿ ಬಡಿಗೆ ಹಿಡಿದು ಕೂಡಿ ಬಂದವರೆ ಯಂಕಣ್ಣ ಇತನು ಲೇ ಚನ್ನಬಶ್ಯಾ ಸೂಳಿ ಮಗನೆ ಈ ಹೋಲದ ತಂಟೆಗೆ ಬರಬೆಡ,  ಕಸ ತೆಗೆಯ ಬೆಡ ಅಂತ ಹೇಳಿದರು ಬಂದಿರುವೆ ಸೂಳಿಮಗನೆ  ಇವತ್ತು ನಿನಗೆ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದವನೆ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಹಣಮಂತ್ರಾಯನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನಗೆ ಎಡಕಿಗೆ, ಬಲತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು, ನಿಂಗಣ್ಣನು ತನ್ನ ಕೈಯಲ್ಲಿದ್ದ ಬಡಿಗೆ ಯಿಂದ ವೆಂಕಟೇಶನ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು, ಯಂಕಣ್ಣನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಿಮ್ಮಣ್ಣನಿಗೆ ಹೆಡಕಿಗೆ  ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು ಶರಣಬಸವ ಇತನು ಕೈಯಿಂದ ತಿಮ್ಮನ್ನನಿಗೆ ತುಟಿಗೆ ಗುದ್ದಿದ್ದನು ಬಸಮ್ಮ ಕೈಯಿಂದ ಮಾನಮ್ಮಳಗೆ ಹಿಂದಿನ ಡುಬ್ಬಕ್ಕೆ ಹೊಡೆದಳು ನಾಗಮ್ಮ ತನ್ನ ಕೈಯಿಂದ ಮಾನಮ್ಮಳ ಎದೆಗೆ ಹೊಡೆದಳು ಲಕ್ಷ್ಮೀ ಇವಳು ಮಾನಮ್ಮಳ ಕೂದಲು ಹಿಡಿದು ಜಗ್ಗಾಡಿದಳು. ಆಗ ನಾವು ಚಿರ್ಯಾಡುವದನ್ನು ನೋಡಿ ನನ್ನ ತಾಯಿ ಬಸಮ್ಮ ನಮ್ಮ ಗ್ರಾಮದವರಾದ ವೆಂಕಟೇಶ ತಂದೆ ಯಂಕಣ್ಣ, ಭೀಮಣ್ಣ ತಂದೆ ಯಂಕಣ್ಣ ಇವರು ಬಂದು ಜಗಳವನ್ನು ಬಿಡಿಸಿದರು ನಂತರ ಎಲ್ಲರು ಇವತ್ತು ಉಳಿದುಕೊಂಡಿರಿ ಮಕ್ಕಳೆ ಇನ್ನೊಮ್ಮೆ ಹೊಲದ ತಂಟೆಗೆ ಬಂದರೆ ನಿಮ್ಮ ಜೀವ ತೆಗೆಯುತ್ತೆವೆ ಸೂಳೀಮಕ್ಕಳೆ ಅಂತ ಜೀವದ ಭಯ ಹಾಕಿ ಹೋದರು  ನಂತರ ನಾವೆಲ್ಲರು ಒಂದು ಆಟೊದಲ್ಲಿ ಕುಳಿತುಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಸೆರಿಕೆ ಯಾಗಿದ್ದೆವು. ಆಗ ನಮ್ಮ ಊರಿನ ಹಿರಿಯರ ಜೊತೆ ಮಾತನಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದು ಇರುತ್ತದೆ
  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 149/2017 ಕಲಂ 143, 147, 148, 341, 504, 506 ಸಂ 149 ಐಪಿಸಿ;- ದಿನಾಂಕ; 25/05/2017 ರಂದು 8.15 ಎ.ಎಂಕ್ಕೆ ಫಿಯರ್ಾದಿದಾರರಾದ ಶ್ರೀ ಶಿವ ಪ್ರಕಾಶ ದೇವರಾಜು. ಐ.ಪಿ.ಎಸ್, ಸಹಾಯಕ ಪೊಲೀಸ್ ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಸಲ್ಲಿಸಿದ್ದು, ಸದರಿ ಫಿಯರ್ಾದಿಯ ಸಾರಾಂಶವೇನೆಂದರೆ, ಇಂದು ದಿನಾಂಕ: 25/05/2017 ರಂದು ಬೆಳಿಗ್ಗೆ 6-30 ಗಂಟೆಗೆ ಜಾಗಿಂಗ್ ಕುರಿತು ನಾನು ಮತ್ತು ನಮ್ಮ ವಾಹನ ಚಾಲಕನಾದ ಲಕ್ಷ್ಮೀಕಾಂತ ಎ.ಪಿ.ಸಿ-135  ಇಬ್ಬರೂ ಕೂಡಿ ಕಛೇರಿಯಿಂದ ನಮ್ಮ ಸರಕಾರಿ ಜೀಪ್ ನಂ: ಕೆ.ಎ-33 ಜಿ-0163 ನೇದ್ದರಲ್ಲಿ ಬೆಳಿಗ್ಗೆ 06:45 ಗಂಟೆಗೆ ಸುರಪೂರ ಪಟ್ಟಣದಲ್ಲಿರುವ ಪ್ರಭು ಕಾಲೇಜ್ ಗ್ರೌಂಡಿಗೆ ಹೋಗಿ, ಇಬ್ಬರೂ ಗ್ರೌಂಡಿನಲ್ಲಿರುವ ರನ್ನಿಂಗ್ ಟ್ರ್ಯಾಕ್ ನಲ್ಲಿ ರನ್ನಿಂಗ್ ಮಾಡುತ್ತಿರುವಾಗ, ಸದರಿ ಗ್ರೌಂಡನಲ್ಲಿ ಆರ್.ಎಸ್.ಎಸ್ ನವರು ಬಿದುರಿನ ಬಡಿಗೆ ಹಿಡಿದುಕೊಂಡು ಕವಾಯಿತು ಮಾಡುತ್ತಿದ್ದದ್ದು ಇರುತ್ತದೆ. ನಮ್ಮ ಚಾಲಕನಾದ ಲಕ್ಷ್ಮೀಕಾಂತ ಇವನು ಮೈದಾನದ ಮೂಲೆಯಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಅವನಿಗೆ ಆರ್.ಎಸ್.ಎಸ್ ನವರು ನೀವು ಇಲ್ಲಿ ವ್ಯಾಯಾಮ ಮಾಡಬೇಡಿ ನಮ್ಮ ಹುಡುಗರು ನಿಮಗೆ ನೋಡುತ್ತಾರೆ ನೀವು ಆಕಡೆ ಹೋಗಿರಿ ಅಂತಾ ಬೆದರಿಸಿ ಕಳುಹಿಸಿದ್ದು ಇರುತ್ತದೆ. ಹೀಗಿದ್ದು 07:15 ಗಂಟೆ ಸುಮಾರಿಗೆ ನಾನು ರನ್ನಿಂಗ್ ಟ್ರ್ಯಾಕ್ ನಲ್ಲಿ ಓಡುತ್ತಿರುವಾಗ ಆರ್.ಎಸ್.ಎಸ್ ಲೀಡರ ಆದ ಹಣಮಂತಂತ್ರಾಯ ಪಾಟೀಲ್ ಇವರು ನನಗೆ ಇಲ್ಲಿ ಓಡಬೇಡಿರಿ ಅಂತಾ ಅಂದಾಗ ನಾನು ಅವರಿಗೆ ನಾನು ಎ.ಎಸ್.ಪಿ ಇದ್ದೇನೆ ಅಂತಾ ಅಂದಾಗ ನನಗೆ ಅವರು ನೀವು ಏನಾದರೂ ಇರಿ ನಮಗೇನು ಅಂತಾ ಅಂದಾಗ, ನಾನು ಮುಂದಕ್ಕೆ ಹೋಗುತ್ತಿದ್ದಾಗ ಆರ್.ಎಸ್.ಎಸ್ ನವನಾದ ಇನ್ನೋಬ್ಬ ವ್ಯಕ್ತಿಯು ನನ್ನ ಹತ್ತಿರ ಬಂದವನೇ ನನಗೆ ತಡೆದು ನಿಲ್ಲಿಸಿ, ನಮ್ಮ ಲೀಡರನಿಗೆ ಎದರು ಮಾತನಾಡುತ್ತಿ ಏನಲೇ ಅಂತಾ ಅವಾಚ್ಯವಾಗಿ ಬೈದು ಎದೆಯ ಮೇಲಿನ ಟಿ ಶರ್ಟ ಹಿಡಿದು ಎಳೆದಾಡಿದಾಗ, ಲಕ್ಷ್ಮೀಕಾಂತ ಇವನು ಬಿಡಿಸಲು ಬಂದಾಗ ಅವನಿಗೂ ಸಹ ಸದರಿ ವ್ಯಕ್ತಿಯೂ ಲಕ್ಷ್ಮೀಕಾಂತನ ಎದೆಯ ಮೇಲಿನ ಟಿ ಶರ್ಟ ಹಿಡಿದು ಎಳೆದಾಡಿದನು. ಆಗ ಹಣಮಂತ್ರಾಯ ಪಾಟೀಲ ಇವರು ಇವರಿಗೇ ಬಿಡಬೇಡಿರಿ ಹೊಡೆಯಿರಿ ಈ ಪೊಲೀಸರಿಗೆ ಅಂತಾ ಅನ್ನುತ್ತಿದ್ದಾಗ ಅಲ್ಲಿ ಕವಾಯಿತು ಮಾಡುತ್ತಿದ್ದ ಎಲ್ಲಾ ಹುಡುಗರು ಬಡಿಗೆಗಳನ್ನು ಹಿಡಿದುಕೊಂಡು ನಮಗೆ ಹೊಡೆಯಲು ಬಂದರು. ಆಗ ನಮ್ಮ ಚಾಲಕನಾದ ಲಕ್ಷ್ಮೀಕಾಂತನು ನನಗೆ ಕರೆದುಕೊಂಡು ವಾಹನದಲ್ಲಿ ಕುಡಿಸಿ ಕಛೇರಿಗೆ ಕರೆದುಕೊಂಡು ಬರುವಾಗ, ಸದರಿಯವರೆಲ್ಲರೂ ನಮಗೆ ಈ ಪೊಲೀಸನವರು ನಮಗೆ ಏನು ಮಾಡಿಕೊಳ್ಳುವುದಕ್ಕೆ ಆಗುವದಿಲ್ಲ, ಅವರು ಮುಂದೆ ನಮಗೆ ಏನಾದರೂ ಮಾಡಿದರೇ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿದರು.

BIDAR DISTRICT DAILY CRIME UPDATE 26-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-05-2017

ªÉÄúÀPÀgÀ ¥ÉưøÀ oÁuÉ UÀÄ£Éß £ÀA. 22/2017, PÀ®A. 32, 34 PÉ.E PÁAiÉÄÝ :-
¢£ÁAPÀ 25-05-2017 gÀAzÀÄ ²æêÀiÁ½ HgÀ°è ²ªÁf vÀAzÉ ©üêÀÄgÁªÀ ªÀiÁ¼ÀaªÀÄuÉ ªÀÄvÀÄÛ ¸ÀÄgÉñÀ vÀAzÉ ¥ÀævÁ¥À ¤qÀªÀAZÉ C£ÀÄߪÀªÀgÀÄ ²ªÁf ªÀiÁ¼ÀaªÀÄuÉ£À ªÀÄ£ÉAiÀÄ »A¨sÁUÀzÀ°è C£À¢üPÀÈvÀªÁV ªÀÄzÀåzÀ ¨Ál®UÀ¼ÀÄ ªÀiÁgÁl ªÀiÁqÀÄwÛzÁÝgÉ CAvÁ PÀıÁ®gÁªÀ J.J¸ï.L ªÉÄúÀPÀgÀ ¥ÉưøÀ oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É DgÉÆævÀgÁzÀ 1) ²ªÁf vÀAzÉ ©üêÀÄgÁªÀ ªÀiÁ¼ÀaªÀÄuÉ, 2) ¸ÀÄgÉñÀ vÀAzÉ ¥ÀævÁ¥À ¤qÀªÀAZÉ E§âgÀÄ ¸Á: ²æêÀiÁ½, vÁ: ¨sÁ°Ì EªÀj§âgÀ ªÉÄÃ¯É ªÉÄÃ¯É zÁ½ ªÀiÁqÀ®Ä ¸ÀzÀj DgÉÆævÀj§âgÀÆ ¥ÉưøÀgÀ£ÀÄß £ÉÆÃr PÀvÀÛ®°è Nr ºÉÆÃVzÀÄÝ, £ÀAvÀgÀ CªÀgÀ ªÀ±ÀzÀ°èzÀÝ ªÀÄvÀÄÛ C°è J¸ÉzÀÄ ºÉÆÃzÀ PÉÊ aî £ÉÆÃqÀ®Ä CzÀgÀ°è vÀ¯Á 90 JA.J¯ï. AiÀÄÄ.J¸ï «¹Ì MlÄÖ 32 ¥Áè¹ÖÃPÀ ¨Ál®UÀ½zÀÄÝ J¯Áè ¸ÉÃj MlÄÖ gÀÆ. 900/- gÀÆ., EzÀÄÝ, ¸ÀzÀj ¸ÀgÁ¬ÄAiÀÄ£ÀÄß d¦Û ªÀiÁrPÉÆAqÀÄ ¸ÀzÀj DgÉÆævÀgÀ «gÀÄzÀÞ ¢£ÁAPÀ 26-05-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 96/2017, ಕಲಂ. 279, 337, 338 ಐಪಿಸಿ :-
ಫಿರ್ಯಾದಿ ನಾಗೇಶ ತಂದೆ ಕಲ್ಲಪ್ಪಾ ಬಿರಾದರ ವಯ: 18 ವರ್ಷ, ಜಾತಿ: ಲಿಂಗಾಯತ, ಸಾ: ಬಂಪಳ್ಳಿ, ತಾ: ಬೀದರ ರವರ ಗ್ರಾಮದಲ್ಲಿ ಫಿರ್ಯಾದಿಯ ಚಿಕ್ಕಪ್ಪನಾದ ಬಸವರಾಜ ತಂದೆ ಮಾರುತಪ್ಪಾ ಬಿರಾದರ  ವಯ: 36 ವರ್ಷ, ಸಾ: ಬಂಪಳ್ಳಿ, ತಾ: ಜಿಲ್ಲಾ: ಬೀದರ ರವರು ಹೊಸ ಮನೆ ಕಟ್ಟಿಸುತ್ತಿದ್ದು ಈ ಮನೆಗೆ ನಿಟ್ಟೂರ ಗ್ರಾಮದವರು ಉಪ್ಪಾರ ಕೆಲಸ ಮಾಡುತ್ತಿರುತ್ತಾರೆ, ಹೀಗಿರುವಲ್ಲಿ ದಿನಾಂಕ 24-05-2017 ರಂದು ಫಿರ್ಯಾದಿಯು ತನ್ನ ಚಿಕ್ಕಪ್ಪನ ಜೊತೆಯಲ್ಲಿ ಚಿಕ್ಕಪ್ಪನ ಕೆಂಪು ಪಲ್ಸರ ಮೊಟಾರ ಸೈಕಲ್ ನಂ:. ಕೆಎ-38/ಕ್ಯೂ-8986 ನೇದರ ಮೇಲೆ ಹಿಂದೆ ಕುಳಿತು ಹೊಗಿ ಕೂಲಿ ಕೆಲಸ ಮಾಡುವವರೊಂದಿಗೆ ಮಾತನಾಡಿಸಿ ಮರಳಿ ಊರಿಗೆ ಬರುವಾಗ ಚಿಕ್ಕಪ್ಪ ಮೋಟರ ಸೈಕಲ ನಡೆಸುತ್ತಿದ್ದರು, ಚಿಕ್ಕಪ್ಪ ಇತನು ತನ್ನ ಮೊಟರ ಸೈಕಲನ್ನು ಅತಿವೇಗ ಹಾಗೂ ನಿಷ್ಖಾಳಜಿತನದಿಂದ ನಡೆಸಿ ನಿಟ್ಟೂರ ಮತ್ತು ಕೊಟಗ್ಯಾಳ ರೊಡ ಮಧ್ಯ ರೊಡಿನ ಮೇಲೆ ಬಿಳಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಣ್ಣಿನ ಹತ್ತಿರ ತರಚಿದ ರಕ್ತಗಾಯ ಮತ್ತು ಬೆನ್ನಿನ ಮೇಲೆ ಗುಪ್ತಗಾಯವಾಗಿರುತ್ತದೆ. ಮತ್ತು ಚಿಕ್ಕಪ್ಪನ ಬಲಗಾಲಿನ ತೊಡೆಯಿಂದ ಪಾದದವರೆಗೆ ಭಾರಿ ರಕ್ತಗಾಯ, ಹಣೆಗೆ ತರಚಿದ ಗಾಯ ಮತ್ತು ಬಲಗೈ ಮುಂಗೈ ಬೆರಳುಗಳಿಗೆ ರಕ್ತಗಾಯವಾಗಿದ್ದು ಇರುತ್ತದೆ, ಸದರಿ ರೊಡಿನಲ್ಲಿ ರೊಡಿಗೆ ಹೊಗಿ ಬರುವವರು 108 ಅಂಬುಲೆನ್ಸಗೆ ಕರೆ ಮಾಡಿ ಚಿಕಿತ್ಸೆ ಕುರಿತು ಆರೊಗ್ಯ ಆಸ್ಪತ್ರೆ ಬೀದರನಲ್ಲಿ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-05-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 97/2017, ಕಲಂ. 279, 337, 338 ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-05-2017 ರಂದು ಫಿರ್ಯಾದಿ ಅಂಬರೀಶ ತಂದೆ ಬಸವಣ್ಣಪ್ಪಾ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಆಟೋನಗರ ನೌಬಾದ, ತಾ: ಬೀದರ ರವರ ಬಜಾಜ ಪ್ಲಾಟಿನಾ ಮೊಟಾರ ಸೈಕಲ್ ನಂ. ಕೆಎ-35/ಜೆ-9099 ನೇದ್ದರ ಮೇಲೆ ತನ್ನ ಹೆಂಡತಿಯನ್ನು ಹಾಲಹಳ್ಳಿ ಗ್ರಾಮದ ಸೈಲಾನಿ ಬಾಬಾ ದರ್ಗಾಕ್ಕೆ ಮರಳಿ ನೌಬಾದಗೆ ಹೋಗುವಾಗ ಹುಮನಾಬಾದ ಕಡೆಯಿಂದ ಕೆಂಪು ಬಣ್ಣದ ಸ್ವಿಫ್ಟ ಕಾರ ನಂ. ಎಪಿ 0894 ನೇದ್ದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ಕಾರನ್ನು ನಿಲ್ಲಿಸಲಾರದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗೈಯ ಕೆಳಭಾಗದಲ್ಲಿ ಮುರಿದಿರುತ್ತದೆ, ಎಡಗಾಲಿನ ಹಿಂಬಡಿಗೆ ತರಚಿದ ರಕ್ತಗಾಯವಾಗಿರುತ್ತದೆ, ಫಿರ್ಯಾದಿಯ ಹೆಂಡತಿಯಾದ ನಾಗಮ್ಮಾ ಇವಳಿಗೆ ತಲೆಯ ಹಿಂದುಗಡೆ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಇಬ್ಬರು ಚಿಕಿತ್ಸೆಗಾಗಿ ಬೀದರಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-05-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಇಕ್ಬಾಲ್‌ ತಂದೆ ಶಮಶುದ್ದಿನ್‌ ಬಿಲಗುಂದಿ ಸಾ: ಖಾಜಿಗಲ್ಲಿ ಆಳಂದ ರವರು ದಿನಾಂಕ;25/05/2017 ರಂದು ಸಾಯಂಕಾಲ ಉಮರ್ಗಾದಲ್ಲಿ ನಮ್ಮ ದೋಸ್ತ ಸುನಿಲ್‌ ಈತನ ಮಗನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿದ್ದರಿಂದ ನಾನು ಮಾತಾಡಿಸಿಕೊಂಡು ಬರುವ ಸಲುವಾಗಿ ಉಮರ್ಗಾಕ್ಕೆ ಹೋಗಬೇಕೆಂದು ಹೋಗುತ್ತಿದ್ದೇನು. ನನ್ನ ಮುಂದೆ ಒಬ್ಬ ಮೋಟಾರ ಸೈಕಲ್ ಚಲಾಯಿಸಿಕೊಂಡು ಉಮರ್ಗಾ ಕಡೆಗೆ ಹೋಗುತ್ತಿದ್ದನು. ನಾವು ಆಳಂದದಿಂದ ತಲೆಕುಣಿ ಚಡಾನದ ಹತ್ತಿರ ಸಂದೀಪ್ ಢಗೆ ಇವರ ಹೊಲದ ಹತ್ತಿರ ಹೋಗುತ್ತಿದ್ದಾಗ ಸಾಯಂಕಾಲ ಎದುರಿನಿಂದ ಅಂದರೆ ಉಮರ್ಗಾ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ಓಡಿಸುತ್ತಾ ಬಂದವನೆ ನನ್ನ ಮುಂದೆ ಹೋಗುತ್ತಿದ್ದ ಒಬ್ಬ ಮೋಟಾರ ಸೈಕಲ್ ಚಾಲಕನಿಗೆ ಎದುರಿನಿಂದ ಡಿಕ್ಕಿ ಪಡಿಸಿದರಿಂದ ಮೋಟಾರ ಸೈಕಲ್‌ ಸಮೇತ ಕೆಳಗಡೆ ಬಿದ್ದನು. ಆಗ ಲಾರಿ ಚಾಲಕನು ನಾನು ಕೈ ಮಾಡಿದರು ಕೂಡ ನಿಲ್ಲಿಸದೆ ಹಾಗೇ ವಾಹನ ಓಡಿಸಿಕೊಂಡು ಹೋದನು. ನಾನು ಲಾರಿಯ ಹಿಂದಿನ ನಂಬರ ನೋಡಿ ಬರೆದುಕೊಂಡಿದ್ದು ಲಾರಿ ನಂಬರ್‌; ಎಮ್‌.ಹೆಚ್‌-12-ಹೆಚ್‌.ಡಿ 7707 ಇರುತ್ತದೆ. ನಂತರ ಅಪಘಾತವಾಗಿ ಬಿದ್ದಿದ್ದ ಮೋಟಾರ್ ಸೈಕಲ್‌ ಚಾಲಕನಿಗೆ ನೋಡಲಾಗಿ ಅವನಿಗೆ ಎರಡು ಕಾಲು ಮೊಳಕಾಲ ಹತ್ತಿರ ಮುರಿದು ಮೂಳೆ ಹೊರ ಬಂದಿದ್ದು ತಲೆಗೆ ಕೈಗೆ ಭಾರಿ ರಕ್ತ ಗಾಯವಾಗಿದ್ದು ಎದೆಗೆ ಗುಪ್ತ ಪೆಟ್ಟಾಗಿ ಬೇಹೋಷ ಆಗಿ ಬಿದ್ದಿದ್ದನು. ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಅವನ ಪರಿಚಯ ಕೂಡ ಇರುವದಿಲ್ಲ ಅವನ ಅಂದಾಜು ವಯಸ್ಸು 30-35 ವರ್ಷ ಇರುತ್ತದೆ. ನಂತರ ನಾನು ಮತ್ತು ರೋಡಿಗೆ ಹೋಗುವ ದಯಾನಂದ ತಂದೆ ಶಿವಕಾಂತ ಜಮದಾರ ಇವರು ಕೂಡಿ 108 ಅಂಬುಲೆನ್ಸ ಗೆ ಫೋನ್‌ ಮಾಡಿ ಕರೆಯಿಸಿದೇವು. ಅವರು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ಅಲ್ಲೆ ಬಿದ್ದಿದ್ದ ಮೋಟಾರ ಸೈಕಲ್‌ ನಂಬರ ನೋಡಲು ಕೆ.ಎ-50-ಹೆಚ್‌-3367 ಹಿರೋ ಹೊಂಡಾ ಸ್ಪ್ಲೇಂಡರ್‌ ಇರುತ್ತದೆ.ನಂತರ ಗೊತ್ತಾಗಿದ್ದೇನೆಂದರೆ ಲಾರಿ ಅಪಘಾತದಲ್ಲಿ ಘಾಯ ಹೊಂದಿದ ಅಪರಿಚಿತ ಗಂಡು ಮನುಷ್ಯನು ಅಂಬುಲೆನ್ಸದಲ್ಲಿ ಆಳಂದ ಆಸ್ಪತ್ರೆಗೆ ಒಯ್ಯುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿಕೊಂಡು ಹೋದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಪೀರಸ ಪಟೇಲ ತಂದೆ ನಬೀ ಪಟೆಲ  ಸಾ:ಮಯೂರ ತಾ:ಜೇವರ್ಗಿ ಇವರು ನಾಲ್ಕು ಜನ ಗಂಡು ಮಕ್ಕಳು ಹಾಗೂ ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ.ಅದರಲ್ಲಿ ಗಂಡು ಮಕ್ಕಳಾದ ನಾಲ್ಕು ಜನ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗಿರುತ್ತಾರೆ .ಮತ್ತು ಇಬ್ಬರು ಹೆಣ್ಣು ಮಕ್ಕಳಲ್ಲಿ ದೊಡ್ಡವಳಾದ ಜೈನಾಬಿ ಇವಳನ್ನು ಮದುವೆಮಾಡಿಕೊಟ್ಟಿದ್ದು  ಸಣ್ಣವಳಾದ ಶೈನಾಜಿ ಇವಳು ನಮ್ಮೊಂದಿಗೆ ಮನೆಗೆಲಸ ಮಾಡಿಕೊಂಡು ಇರುತ್ತಾಳೆ .ಹೀಗಿದ್ದು ದಿನಾಂಕ:22/05/2017 ರಂದು ಬೆಳಿಗ್ಗೆ 5:00 ಗಂಟೆಗೆ ನನ್ನ ಮಗಳು ಬರ್ಹಿದೆಸೆಗೆ ಹೊಗಿದ್ದಳು ಬಹಳ ಹೊತ್ತಾದರು ಅವಳು  ಮನೆಗೆ ವಾಪಸ ಆಗದಿದ್ದಾಗ ನಾವು ಗಾಬರಿಗೊಂಡು ಅವಳನ್ನು ಹುಡುಕಾಡತೋಡಗಿದೆವು ಆಗ ನನ್ನ ಅಣ್ಣನಾದ ಶ್ರಿ ಚಾಂದ ಪಟೇಲ ನಮಗೆ ತೀಳೀಸಿದ್ದೆನೆಂದರೆ ಶೈನಾಜಿ ಇವಳು ಬರ್ಹಿದೆಸೆಯಿಂದ ವಾಪಸ ಮನೆಗೆ ಬರುವಾಗ ಇವಳನ್ನು ನಮ್ಮೂರಿನ ರಾಜು ತಂದೆ ಶರಣಪ್ಪ ಹರಿಜನ  ಈತನು ಒಂದು ಬೋಲೆರೋ ವಾಹನದಲ್ಲಿ ಅವಳನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗುತ್ತಿದ್ದು ಅವನ ಜೊತೆಗೆ ಅಪಹರಣಕ್ಕೆ ಸಹಕರಿಸುತ್ತಿದ್ದ್ ನಮ್ಮುರಿನ ಬಸವರಾಜ ತಂದೆ ಕಾಶಪ್ಪ , ಶಿವುಕುಮಾರ ತಂದೆ ಶರಣಪ್ಪ ,ಚಂದ್ರಕಾಂತ ತಂದೆ ಶರಣಪ್ಪ ,ಖಾಜಪ್ಪ ತಂದೆ ಬೀಮಶ್ಯಾ ಇವರೆಲ್ಲರೂ ಅವಳನ್ನು ಬಲವಂತವಾಗಿ ಬೋಲೆರೋ ವಾಹನದಲ್ಲಿ ರಾಜು ಎಂಬಾತ ಅಪಹರಿಸಿಕೊಂಡು ಹೋಗಿರುತ್ತಾನೆ.ಅಪಹರಿಸಿಕೊಂಡ ಹೋದ ರಾಜು ತಂದೆ ಶರಣಪ್ಪ ಹಾಗೂ ಅಪಹರಣಕ್ಕೆ ಸಹಕರಿಸಿದವರ ಈ ನಾಲ್ಕು ಜನರ ಮೇಲೆ ಕಾನೂನು ರಿತ್ಯ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಅಂತಾ 03 ಜನ ಅಣ್ಣ ತಮ್ಮರು ಇದ್ದು. ನಮಗೆಲ್ಲರಿಗೂ ತಲಾ 8 - 8 ಎಕರೆ ಜಮೀನು ಪಾಲಿಗೆ ಬಂದಿರುತ್ತದೆ. ನಾವೆಲ್ಲರೂ ಸುಮಾರು 20 ವರ್ಷಗಳ ಹಿಂದೆಯೆ ಬೇರೆಯಾಗಿರುತ್ತೇವೆ. ನನ್ನ ಪಾಲಿಗೆ ಬಂದ ಹೊಲದ ಸರ್ವೆ ನಂ 120 ಇದ್ದು ಸದರಿ ಹೊಲದಲ್ಲಿ ಈಗ 4-5 ವರ್ಷಗಳ ಹಿಂದೆ 2 ಎಕರೆ ಜಮೀನು ಹೊಳೆಯಲ್ಲಿ ಹೋಗಿ ಮುಳುಗಡೆಯಾಗಿರುತ್ತದೆ. ನನ್ನ ಹೊಲ ಮುಳುಗಡೆಯಾದ ಬಗ್ಗೆ ಈ ಹಿಂದೆ ಸರ್ಕಾರದಿಂದ 10 ಲಕ್ಷ ರೂಪಾಯಿ ಹಣ ಬಂದಿದ್ದು, ಸದರಿ ಹಣವನ್ನು ನಾನು ನಮ್ಮ ತಂದೆ ತಾಯಿ ನನ್ನ ತಮ್ಮಂದಿರ ಹತ್ತಿರ ಇದ್ದಿದ್ದರಿಂದ ನಾನು ಆ ಹಣವನ್ನು ನನ್ನ ತಮ್ಮಂದಿರಿಗೆ ಕೊಟ್ಟಿರುತ್ತೇನೆ. ಸದ್ಯ ನಮ್ಮ ತಂದೆ ತಾಯಿ ತೀರಿಕೊಂಡಿರುತ್ತಾರೆ. ಸದರಿ ನನ್ನ ಹೊಲ ಮುಳುಗಡೆಯಾದ ಬಗ್ಗೆ ಸರ್ಕಾರದಿಂದ ಈಗ ಪುನ 7 ಲಕ್ಷ ರೂಪಾಯಿ ಹಣ ಬಂದಿದ್ದು, ಸದರಿ ನನ್ನ ತಮ್ಮಂದಿರು ಬಂದ ಹಣದಲ್ಲಿ ನಮಗೂ ಪಾಲು ಕೊಡು ಅಂತಾ ನಮ್ಮೊಂದಿಗೆ ಜಗಳ ತಗೆಯುತ್ತಿದ್ದು ದಿನಾಂಕ 25-05-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಮಗನಾದ ಮಲ್ಲಿಕಾರ್ಜುನ ಇಬ್ಬರು ಶಿವೂರ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 120 ನೇದ್ದರಲ್ಲಿ ಕೆಲಸ ಮಾಡುತ್ತಿದ್ದಾಗನನ್ನ ತಮ್ಮನ ಮಕ್ಕಳಾದ ಸಚೀನ, ಸುನೀಲ, ಅನೀಲ ಹಾಗೂ ನನ್ನ ತಮ್ಮಂದಿರಾದ ವಿಠೋಬಾ ಮತ್ತು ಸಿದ್ದಾರಾಮ ಎಲ್ಲರೂ ಕೂಡಿ ನಮ್ಮ ಹೊಲದಲ್ಲಿ ಕೂಡಿಸಿದ ಮೊಟಾರ ಹತ್ತಿರ ಬಂದವರೆ, ಮೋಟಾರನ್ನು ನೋಡಿಕೊಂಡು ಬಂದು ಏನೊ ಬೋಸಡಿ ಮಕ್ಕಳ್ಯಾ ನಮ್ಮ ಕರೆಂಟ ಮೋಟರ ವಾಯರ್ ಹರೀತಿರಿ ಅಂತಾ ಹೊಲಸು ಹೊಲಸು ಬೈಯುತ್ತಾ ಬಂದವರೆ, ಸುನೀಲ ಈತನು ಕೊಡಲಿಯಿಂದ ನನ್ನ ಮಗ ಮಲ್ಲಿಕಾರ್ಜುನನ ಬಲಗಾಲು ಮೀನಗಂಡದ ಹತ್ತಿರ ಹೊಡೆದಿದ್ದು, ತರಚಿದ ರಕ್ತಗಾಯ ಆಗಿರುತ್ತದೆ. ಹಾಗೂ ಸುನೀಲನು ಬಡಿಗೆಯಿಂದ ಮತ್ತು ಅನೀಲನು ಕಲ್ಲಿನಿಂದ ಇಬ್ಬರು ನನ್ನ ಬೆನ್ನಿನ ಮೇಲೆ ಹಾಗೂ ಮೈ ಕೈಗೆ ಹೊಡೆದಿರುತ್ತಾರೆ. ಹಾಗೂ ನನ್ನ ತಮ್ಮಂದಿರಾದ ವಿಠೋಬಾ ಮತ್ತು ಸಿದ್ದಾರಾಮ ಇವರಿಬ್ಬರು ನನಗೆ ಮತ್ತು ನನ್ನ ಮಗ ಮಲ್ಲಿಕಾರರ್ಜುನನಿಗೆ ನೇಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿರುತ್ತಾರೆ, ನಂತರ ಸದರಿ 05 ಜನರು ಕೂಡಿ ನನಗೆ ಮತ್ತು ನನ್ನ ಮಗನಿಗೆ ಹೊಲದಿಂದ ಹೊಡೆಯುತ್ತಾ ಊರಿಗೆ ಕರೆದುಕೊಂಡು ಬಂದು ನಮ್ಮ ಮನೆಯ ಮುಂದೆ ಹೊಡೆಯುತ್ತಿದ್ದಾಗ, ಸುನೀಲನು ಬಡಿಗೆಯಿಂದ ನನಗೆ ಹೊಡೆಯಲು ಬರುತ್ತಿದ್ದಾಗ ನನ್ನ ಹೆಂಡತಿ ಅಡ್ಡ ಬಂದಿದ್ದು, ಆಗ ಸುನೀಲನು ಅದೆ ಬಡಿಗೆಯಿಂದ ನನ್ನ ಹೆಂಡತಿಯ ಹೆಡಕಿನ ಮೇಲೆ ಹೊಡೆದಿದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ವಿಠೋಬಾ ತಂದೆ ರಾಮಣ್ಣ ಪಟ್ನೆ ಸಾ|| ಶಿವೂರ ಇವರು ಮತ್ತು ಬಸವರಾಜ) ಸಿದ್ದಪ್ಪ @ ಸಿದ್ದಾರಾಮ ಈ ರೀತಿ ಒಟ್ಟು 03 ಜನ ಅಣ್ಣ ತಮ್ಮರು ಇದ್ದು. ನಮಗೆಲ್ಲರಿಗೂ ತಲಾ 8 - 8 ಎಕರೆ ಜಮೀನು ಪಾಲಿಗೆ ಬಂದಿರುತ್ತದೆ. ನಾವೆಲ್ಲರೂ ಸುಮಾರು 20 ವರ್ಷಗಳ ಹಿಂದೆಯೆ ಬೇರೆಯಾಗಿರುತ್ತೇವೆ. ನಮ್ಮ ನಡುವೆ ಇದ್ದ ಹೊಲದಲ್ಲಿ ಈಗ 4-5 ವರ್ಷಗಳ ಹಿಂದೆ 2 ಎಕರೆ ಜಮೀನು ಹೊಳೆಯಲ್ಲಿ ಹೋಗಿ ಮುಳುಗಡೆಯಾಗಿರುತ್ತದೆ. ಹೊಲ ಮುಳುಗಡೆಯಾದ ಬಗ್ಗೆ ಸರ್ಕಾರದಿಂದ ಈಗ 7 ಲಕ್ಷ ರೂಪಾಯಿ ಹಣ ಬಂದಿದ್ದು, ಸದರಿ ಹಣ ನಮ್ಮ ಅಣ್ಣನಾದ ಬಸವರಾಜ ಇತನು ತಗೆದುಕೊಂಡಿರುತ್ತಾನೆ ಬಂದ ಹಣದಲ್ಲಿ ನಮಗೂ ಪಾಲು ಕೊಡು ಅಂತಾ ಕೇಳಿದರು ಕೊಟ್ಟಿರುವುದಿಲ್ಲ. ದಿನಾಂಕ 25-05-2017 ರಂದು ಬೆಳಿಗ್ಗೆ ನಾನು ನನ್ನ ತಮ್ಮನಾದ ಸಿದ್ದರಾಮ ಇಬ್ಬರು ಹೊಳೆಯಲಿದ್ದ ನಮ್ಮ ಮೋಟಾರ ತಗೆದಿಡಲು ಶಿವೂರ ಸೀಮಾಂತರದಲ್ಲಿರುವ ನಮ್ಮ  ಅಣ್ಣನ ಹೊಲ ಸರ್ವೆ ನಂ 120 ನೇದ್ದರಲ್ಲಿನಿಂದ ಹೋಗುತಿದ್ದಾಗ  ಅಲ್ಲೆ ಕೆಲಸ ಮಾಡುತಿದ್ದ ನಮ್ಮ ಅಣ್ಣನಾದ ಬಸವರಾಜ ತಂದೆ ರಾಮಣ್ಣ ಪಟ್ನೆ ಅವರ ಹೆಂಡತಿಯಾದ ಮಹಾನಂದ ಗಂಡ ಬಸವರಾಜ ಮಗನಾದ ಮಲ್ಲಿಕಾರ್ಜುನ ತಂದೆ ಬಸವರಾಜ ಇವರು ನಮ್ಮ ಹತ್ತಿರ ಬಂದವರೆ, ನನಗೆ ನಮ್ಮ ಅಣ್ಣ ತಡೆದು ನಿಲ್ಲಿಸಿ ಏನೊ ಬೋಸಡಿ ಮಕ್ಕಳ್ಯಾ ನನಗೆ ಬಂದ ಹಣದಲ್ಲಿ ಪಾಲಾ ಕೇಳ್ತಿರಿ ಅಂತಾ ಹೊಲಸು ಹೊಲಸು ಬೈಯುತಿದ್ದಾಗ, ಮಲ್ಲಿಕಾರ್ಜುನ ಈತನು ಅಲ್ಲೆ ಬಿದ್ದಿದ್ದ ಬಡಿಗೆಯನ್ನು ತಗೆದುಕೊಂಡು ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಸಿದ್ದರಾಮ ಇತನು ಬಿಡಿಸಲು ಬಂದಾಗ ಬಸವರಾಜನು ಮಲ್ಲಿಕಾರ್ಜುನ ಕೈಯಲ್ಲಿನ ಬಡಿಗೆ ತಗೆದುಕೊಂಡು ಅದೇ ಬಡಿಗೆಯಿಂದ  ಟೊಂಕದ ಮೇಲೆ ಹೊಡೆದಿರುತ್ತಾನೆ. ಆಗ ಮಹಾನಂದ ಇವಳು ಈ ಹಾಟ್ಯಾಗಳಿಗೆ ಇವತ್ತ ಬಿಡಬ್ಯಾಡ್ರಿ ಖಲಾಸ ಮಾಡ್ರಿ ಅಂತ ಅಂದಾಗ ನಮ್ಮ ಅಣ್ಣ ಹಾಗು ಮಲ್ಲಿಕಾರ್ಜುನ ಇವರಿಬ್ಬರು ನನಗೆ ಮತ್ತು ನನ್ನ ತಮ್ಮ ಸಿದ್ದರಾಮ ಇಬ್ಬರಿಗೂ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿರುತ್ತಾರೆ, ನಂತರ ಸದರಿ ಇಬ್ಬರು ಕೂಡಿ ನನಗೆ ಮತ್ತು ನನ್ನ ತಮ್ಮನಿಗೆ ಹೊಲದಿಂದ ಹೊಡೆಯುತ್ತಾ ಊರಿಗೆ ಕರೆದುಕೊಂಡು ಬಂದಿರುತ್ತಾರೆ, ನಮಗೆ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಹಣಮರೆಡ್ಡಿ  ತಂದೆ ತಿಪ್ಪಾರೆಡ್ಡಿ ಪೊತುಲ್ ಸಾ : ಮಲ್ಕಾಪಲ್ಲಿ ತಾ : ಸೇಡಂ ರವರೊಂದಿಗೆ ಶ್ರೀನಿವಾಸರೆಡ್ಡಿ ತಂದೆ ಸಿದ್ರಾಮರೆಡ್ಡಿ ಪೊತುಲ್ ಸಂಗಡ ಮೂರು ಜನರು ಸಾ : ಮಲ್ಕಾಪಲ್ಲಿ ತಾ : ಸೇಡಂ ಸೇರಿಕೊಂಡು ತಮ್ಮ ಮನೆಯ ಹೆಣ್ಣುಮಗಳೊಂದಿಗೆ ಫಿರ್ಯಾದಾರನ ಮಗನು ಜಗಳಾ ತೆಗೆದಿದ್ದರ ಅಂತಾ ವೈಮನಸ್ಸು ಮಾಡಿಕೊಂಡು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀನಿವಾಸರೆಡ್ಡಿ ತಂದೆ ಸಿದ್ರಾಮರೆಡ್ಡಿ ಪೊತುಲ್ ಸಾ : ಮಲ್ಕಾಪಲ್ಲಿ ತಾ : ಸೇಡಂ ರವರೊಂದಿಗೆ ಶ್ರೀ ಹಣಮರೆಡ್ಡಿ  ತಂದೆ ತಿಪ್ಪಾರೆಡ್ಡಿ ಪೊತುಲ್ ಸಂಗಡ ಮೂರು ಜನರು ಸಾ : ಮಲ್ಕಾಪಲ್ಲಿ ತಾ : ಸೇಡಂ ಸೇರಿಕೊಂಡು ತಮ್ಮ ಸೇರಿಕೊಂಡು ತಮ್ಮ ಮನೆಯ ಹೆಣ್ಣುಮಗಳೊಂದಿಗೆ ಆರೋಪಿತರು ಜಗಳಾ ತೆಗೆದಿದ್ದಾರೆ ಅಂತಾ ವೈಮನಸ್ಸು ಮಾಡಿಕೊಂಡು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮುಧೋಳ ಠಾಣೆ : ಶ್ರೀ ರಾಮರೆಡ್ಡಿ ತಂದೆ ಆಶರೆಡ್ಡಿ ಸಾ : ತುನ್ನೂರ ಗ್ರಾಮ ರವರು ದಿನಾಂಕ 24-05-2015 ರಂದು ರಾತ್ರಿ ತುನ್ನೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಇರುವ ಬೋರವೆಲ್ ಕೈಪಂಪನ್ನು ಜೋರಾಗಿ ಹೊಡೆಯುವಾಗ ಮಹಿಪಾಲ ತಂದೆ ಭೀಮಶಪ್ಪಾ ಹರಿಜನ ಇವರಿಗೆ ಫಿರ್ಯಾದಿಯು ಜೋರಾಗಿ ಹೋಡೆಯಬೇಡಿರಿ ಅಂತಾ ಅಂದಿದ್ದಕ್ಕೆ ಮಹಿಪಾಲ ತಂದೆ ಭೀಮಶಪ್ಪಾ ಹರಿಜನ ಸಂಗಡ 3 ಜನರು ಸಾ : ಎಲ್ಲರು ತುನ್ನೂರ ಗ್ರಾಮ ರವರು ಕುಡಿಕೊಂಡು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ರವೀಂದ್ರ ತಂದೆ ಸಾಯಪ್ಪಾ ಕಾಂಬಳೆ ಸಾ ತುನ್ನೂರ ಇವರು ದಿನಾಂಕ 24-05-2017 ರಂದು ರಾತ್ರಿ ತುನ್ನೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಇರುವ ಬೋರವೆಲ್ ಗೆ ನೀರು ತರಲು  ಹೋದಾಗ  ರಾಮರೆಡ್ಡಿ ತಂದೆ ಆಶರೆಡ್ಡಿ ಸಂಗಡ 8 ಜನರು ಸಾ : ಎಲ್ಲರು ತುನ್ನೂರ ಗ್ರಾಮ ರವರು ಸೇರಿಕೊಂಡು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಹೊಡೆ ಬಡೆ ಮಾಡಿ ದೌರ್ಜನ್ಯ ಎಸಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.