ಅಪಘಾತ
ಪ್ರಕರಣ :
ಆಳಂದ ಠಾಣೆ : ಶ್ರೀ ಇಕ್ಬಾಲ್
ತಂದೆ ಶಮಶುದ್ದಿನ್ ಬಿಲಗುಂದಿ ಸಾ: ಖಾಜಿಗಲ್ಲಿ ಆಳಂದ ರವರು ದಿನಾಂಕ;25/05/2017 ರಂದು ಸಾಯಂಕಾಲ ಉಮರ್ಗಾದಲ್ಲಿ ನಮ್ಮ ದೋಸ್ತ
ಸುನಿಲ್ ಈತನ ಮಗನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿದ್ದರಿಂದ ನಾನು ಮಾತಾಡಿಸಿಕೊಂಡು ಬರುವ
ಸಲುವಾಗಿ ಉಮರ್ಗಾಕ್ಕೆ ಹೋಗಬೇಕೆಂದು ಹೋಗುತ್ತಿದ್ದೇನು. ನನ್ನ ಮುಂದೆ ಒಬ್ಬ ಮೋಟಾರ ಸೈಕಲ್
ಚಲಾಯಿಸಿಕೊಂಡು ಉಮರ್ಗಾ ಕಡೆಗೆ ಹೋಗುತ್ತಿದ್ದನು. ನಾವು ಆಳಂದದಿಂದ ತಲೆಕುಣಿ ಚಡಾನದ ಹತ್ತಿರ
ಸಂದೀಪ್ ಢಗೆ ಇವರ ಹೊಲದ ಹತ್ತಿರ ಹೋಗುತ್ತಿದ್ದಾಗ ಸಾಯಂಕಾಲ ಎದುರಿನಿಂದ ಅಂದರೆ ಉಮರ್ಗಾ ಕಡೆಯಿಂದ
ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತಿ
ವೇಗವಾಗಿ ಮತ್ತು ಅಲಕ್ಷತನದಿಂದ ಓಡಿಸುತ್ತಾ ಬಂದವನೆ ನನ್ನ ಮುಂದೆ ಹೋಗುತ್ತಿದ್ದ ಒಬ್ಬ ಮೋಟಾರ
ಸೈಕಲ್ ಚಾಲಕನಿಗೆ ಎದುರಿನಿಂದ ಡಿಕ್ಕಿ ಪಡಿಸಿದರಿಂದ ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದನು. ಆಗ
ಲಾರಿ ಚಾಲಕನು ನಾನು ಕೈ ಮಾಡಿದರು ಕೂಡ ನಿಲ್ಲಿಸದೆ ಹಾಗೇ ವಾಹನ ಓಡಿಸಿಕೊಂಡು ಹೋದನು. ನಾನು
ಲಾರಿಯ ಹಿಂದಿನ ನಂಬರ ನೋಡಿ ಬರೆದುಕೊಂಡಿದ್ದು ಲಾರಿ ನಂಬರ್; ಎಮ್.ಹೆಚ್-12-ಹೆಚ್.ಡಿ
7707 ಇರುತ್ತದೆ. ನಂತರ ಅಪಘಾತವಾಗಿ ಬಿದ್ದಿದ್ದ ಮೋಟಾರ್ ಸೈಕಲ್ ಚಾಲಕನಿಗೆ ನೋಡಲಾಗಿ ಅವನಿಗೆ
ಎರಡು ಕಾಲು ಮೊಳಕಾಲ ಹತ್ತಿರ ಮುರಿದು ಮೂಳೆ ಹೊರ ಬಂದಿದ್ದು ತಲೆಗೆ ಕೈಗೆ ಭಾರಿ ರಕ್ತ
ಗಾಯವಾಗಿದ್ದು ಎದೆಗೆ ಗುಪ್ತ ಪೆಟ್ಟಾಗಿ ಬೇಹೋಷ ಆಗಿ ಬಿದ್ದಿದ್ದನು. ಅವನ ಹೆಸರು ವಿಳಾಸ
ಗೊತ್ತಾಗಿರುವದಿಲ್ಲ. ಅವನ ಪರಿಚಯ ಕೂಡ ಇರುವದಿಲ್ಲ ಅವನ ಅಂದಾಜು ವಯಸ್ಸು 30-35 ವರ್ಷ
ಇರುತ್ತದೆ. ನಂತರ ನಾನು ಮತ್ತು ರೋಡಿಗೆ ಹೋಗುವ ದಯಾನಂದ ತಂದೆ ಶಿವಕಾಂತ ಜಮದಾರ ಇವರು ಕೂಡಿ 108
ಅಂಬುಲೆನ್ಸ ಗೆ ಫೋನ್ ಮಾಡಿ ಕರೆಯಿಸಿದೇವು. ಅವರು ಬಂದು ಆಸ್ಪತ್ರೆಗೆ ಕರೆದುಕೊಂಡು
ಹೋಗಿರುತ್ತಾರೆ. ನಂತರ ಅಲ್ಲೆ ಬಿದ್ದಿದ್ದ ಮೋಟಾರ ಸೈಕಲ್ ನಂಬರ ನೋಡಲು ಕೆ.ಎ-50-ಹೆಚ್-3367
ಹಿರೋ ಹೊಂಡಾ ಸ್ಪ್ಲೇಂಡರ್ ಇರುತ್ತದೆ.ನಂತರ ಗೊತ್ತಾಗಿದ್ದೇನೆಂದರೆ ಲಾರಿ ಅಪಘಾತದಲ್ಲಿ ಘಾಯ
ಹೊಂದಿದ ಅಪರಿಚಿತ ಗಂಡು ಮನುಷ್ಯನು ಅಂಬುಲೆನ್ಸದಲ್ಲಿ ಆಳಂದ ಆಸ್ಪತ್ರೆಗೆ ಒಯ್ಯುವಾಗ ಮಾರ್ಗ
ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಪಹರಣ
ಮಾಡಿಕೊಂಡು ಹೋದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಪೀರಸ ಪಟೇಲ
ತಂದೆ ನಬೀ ಪಟೆಲ ಸಾ:ಮಯೂರ ತಾ:ಜೇವರ್ಗಿ ಇವರು ನಾಲ್ಕು
ಜನ ಗಂಡು ಮಕ್ಕಳು ಹಾಗೂ ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ.ಅದರಲ್ಲಿ ಗಂಡು ಮಕ್ಕಳಾದ ನಾಲ್ಕು ಜನ
ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗಿರುತ್ತಾರೆ .ಮತ್ತು ಇಬ್ಬರು ಹೆಣ್ಣು ಮಕ್ಕಳಲ್ಲಿ ದೊಡ್ಡವಳಾದ
ಜೈನಾಬಿ ಇವಳನ್ನು ಮದುವೆಮಾಡಿಕೊಟ್ಟಿದ್ದು ಸಣ್ಣವಳಾದ
ಶೈನಾಜಿ ಇವಳು ನಮ್ಮೊಂದಿಗೆ ಮನೆಗೆಲಸ ಮಾಡಿಕೊಂಡು ಇರುತ್ತಾಳೆ .ಹೀಗಿದ್ದು ದಿನಾಂಕ:22/05/2017 ರಂದು
ಬೆಳಿಗ್ಗೆ 5:00 ಗಂಟೆಗೆ ನನ್ನ ಮಗಳು ಬರ್ಹಿದೆಸೆಗೆ ಹೊಗಿದ್ದಳು ಬಹಳ ಹೊತ್ತಾದರು ಅವಳು ಮನೆಗೆ ವಾಪಸ ಆಗದಿದ್ದಾಗ ನಾವು ಗಾಬರಿಗೊಂಡು ಅವಳನ್ನು ಹುಡುಕಾಡತೋಡಗಿದೆವು
ಆಗ ನನ್ನ ಅಣ್ಣನಾದ ಶ್ರಿ ಚಾಂದ ಪಟೇಲ ನಮಗೆ ತೀಳೀಸಿದ್ದೆನೆಂದರೆ ಶೈನಾಜಿ ಇವಳು ಬರ್ಹಿದೆಸೆಯಿಂದ ವಾಪಸ
ಮನೆಗೆ ಬರುವಾಗ ಇವಳನ್ನು ನಮ್ಮೂರಿನ ರಾಜು ತಂದೆ ಶರಣಪ್ಪ ಹರಿಜನ ಈತನು ಒಂದು ಬೋಲೆರೋ ವಾಹನದಲ್ಲಿ ಅವಳನ್ನು ಬಲವಂತವಾಗಿ ಅಪಹರಿಸಿಕೊಂಡು
ಹೋಗುತ್ತಿದ್ದು ಅವನ ಜೊತೆಗೆ ಅಪಹರಣಕ್ಕೆ ಸಹಕರಿಸುತ್ತಿದ್ದ್ ನಮ್ಮುರಿನ ಬಸವರಾಜ ತಂದೆ ಕಾಶಪ್ಪ ,
ಶಿವುಕುಮಾರ ತಂದೆ ಶರಣಪ್ಪ ,ಚಂದ್ರಕಾಂತ ತಂದೆ ಶರಣಪ್ಪ ,ಖಾಜಪ್ಪ ತಂದೆ ಬೀಮಶ್ಯಾ ಇವರೆಲ್ಲರೂ ಅವಳನ್ನು
ಬಲವಂತವಾಗಿ ಬೋಲೆರೋ ವಾಹನದಲ್ಲಿ ರಾಜು ಎಂಬಾತ ಅಪಹರಿಸಿಕೊಂಡು ಹೋಗಿರುತ್ತಾನೆ.ಅಪಹರಿಸಿಕೊಂಡ ಹೋದ
ರಾಜು ತಂದೆ ಶರಣಪ್ಪ ಹಾಗೂ ಅಪಹರಣಕ್ಕೆ ಸಹಕರಿಸಿದವರ ಈ ನಾಲ್ಕು ಜನರ ಮೇಲೆ ಕಾನೂನು ರಿತ್ಯ ಕ್ರಮ ಕೈಕೊಳ್ಳಬೇಕು
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣಗಳು :
ಅಫಜಲಪೂರ ಠಾಣೆ : ಅಂತಾ 03 ಜನ ಅಣ್ಣ ತಮ್ಮರು ಇದ್ದು. ನಮಗೆಲ್ಲರಿಗೂ ತಲಾ 8 - 8
ಎಕರೆ ಜಮೀನು ಪಾಲಿಗೆ ಬಂದಿರುತ್ತದೆ. ನಾವೆಲ್ಲರೂ ಸುಮಾರು
20 ವರ್ಷಗಳ ಹಿಂದೆಯೆ ಬೇರೆಯಾಗಿರುತ್ತೇವೆ. ನನ್ನ ಪಾಲಿಗೆ
ಬಂದ ಹೊಲದ ಸರ್ವೆ ನಂ 120 ಇದ್ದು ಸದರಿ ಹೊಲದಲ್ಲಿ ಈಗ 4-5 ವರ್ಷಗಳ ಹಿಂದೆ 2 ಎಕರೆ ಜಮೀನು ಹೊಳೆಯಲ್ಲಿ ಹೋಗಿ ಮುಳುಗಡೆಯಾಗಿರುತ್ತದೆ.
ನನ್ನ ಹೊಲ ಮುಳುಗಡೆಯಾದ ಬಗ್ಗೆ ಈ ಹಿಂದೆ ಸರ್ಕಾರದಿಂದ 10 ಲಕ್ಷ ರೂಪಾಯಿ ಹಣ ಬಂದಿದ್ದು, ಸದರಿ ಹಣವನ್ನು ನಾನು ನಮ್ಮ ತಂದೆ
ತಾಯಿ ನನ್ನ ತಮ್ಮಂದಿರ ಹತ್ತಿರ ಇದ್ದಿದ್ದರಿಂದ ನಾನು ಆ ಹಣವನ್ನು ನನ್ನ ತಮ್ಮಂದಿರಿಗೆ ಕೊಟ್ಟಿರುತ್ತೇನೆ.
ಸದ್ಯ ನಮ್ಮ ತಂದೆ ತಾಯಿ ತೀರಿಕೊಂಡಿರುತ್ತಾರೆ. ಸದರಿ ನನ್ನ
ಹೊಲ ಮುಳುಗಡೆಯಾದ ಬಗ್ಗೆ ಸರ್ಕಾರದಿಂದ ಈಗ ಪುನ 7 ಲಕ್ಷ ರೂಪಾಯಿ ಹಣ ಬಂದಿದ್ದು,
ಸದರಿ ನನ್ನ ತಮ್ಮಂದಿರು ಬಂದ ಹಣದಲ್ಲಿ ನಮಗೂ ಪಾಲು ಕೊಡು ಅಂತಾ ನಮ್ಮೊಂದಿಗೆ ಜಗಳ
ತಗೆಯುತ್ತಿದ್ದು ದಿನಾಂಕ 25-05-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ
ಮಗನಾದ ಮಲ್ಲಿಕಾರ್ಜುನ ಇಬ್ಬರು ಶಿವೂರ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 120 ನೇದ್ದರಲ್ಲಿ ಕೆಲಸ ಮಾಡುತ್ತಿದ್ದಾಗ,
ನನ್ನ ತಮ್ಮನ ಮಕ್ಕಳಾದ ಸಚೀನ, ಸುನೀಲ,
ಅನೀಲ ಹಾಗೂ ನನ್ನ ತಮ್ಮಂದಿರಾದ ವಿಠೋಬಾ ಮತ್ತು ಸಿದ್ದಾರಾಮ ಎಲ್ಲರೂ ಕೂಡಿ ನಮ್ಮ
ಹೊಲದಲ್ಲಿ ಕೂಡಿಸಿದ ಮೊಟಾರ ಹತ್ತಿರ ಬಂದವರೆ, ಮೋಟಾರನ್ನು ನೋಡಿಕೊಂಡು ಬಂದು
ಏನೊ ಬೋಸಡಿ ಮಕ್ಕಳ್ಯಾ ನಮ್ಮ ಕರೆಂಟ ಮೋಟರ ವಾಯರ್ ಹರೀತಿರಿ ಅಂತಾ ಹೊಲಸು ಹೊಲಸು ಬೈಯುತ್ತಾ ಬಂದವರೆ,
ಸುನೀಲ ಈತನು ಕೊಡಲಿಯಿಂದ ನನ್ನ ಮಗ ಮಲ್ಲಿಕಾರ್ಜುನನ ಬಲಗಾಲು ಮೀನಗಂಡದ ಹತ್ತಿರ ಹೊಡೆದಿದ್ದು,
ತರಚಿದ ರಕ್ತಗಾಯ ಆಗಿರುತ್ತದೆ. ಹಾಗೂ ಸುನೀಲನು ಬಡಿಗೆಯಿಂದ
ಮತ್ತು ಅನೀಲನು ಕಲ್ಲಿನಿಂದ ಇಬ್ಬರು ನನ್ನ ಬೆನ್ನಿನ ಮೇಲೆ ಹಾಗೂ ಮೈ ಕೈಗೆ ಹೊಡೆದಿರುತ್ತಾರೆ.
ಹಾಗೂ ನನ್ನ ತಮ್ಮಂದಿರಾದ ವಿಠೋಬಾ ಮತ್ತು ಸಿದ್ದಾರಾಮ ಇವರಿಬ್ಬರು ನನಗೆ ಮತ್ತು ನನ್ನ
ಮಗ ಮಲ್ಲಿಕಾರರ್ಜುನನಿಗೆ ನೇಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿರುತ್ತಾರೆ,
ನಂತರ ಸದರಿ 05 ಜನರು ಕೂಡಿ ನನಗೆ ಮತ್ತು ನನ್ನ ಮಗನಿಗೆ
ಹೊಲದಿಂದ ಹೊಡೆಯುತ್ತಾ ಊರಿಗೆ ಕರೆದುಕೊಂಡು ಬಂದು ನಮ್ಮ ಮನೆಯ ಮುಂದೆ ಹೊಡೆಯುತ್ತಿದ್ದಾಗ,
ಸುನೀಲನು ಬಡಿಗೆಯಿಂದ ನನಗೆ ಹೊಡೆಯಲು ಬರುತ್ತಿದ್ದಾಗ ನನ್ನ ಹೆಂಡತಿ ಅಡ್ಡ ಬಂದಿದ್ದು,
ಆಗ ಸುನೀಲನು ಅದೆ ಬಡಿಗೆಯಿಂದ ನನ್ನ ಹೆಂಡತಿಯ ಹೆಡಕಿನ ಮೇಲೆ ಹೊಡೆದಿದು
ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ವಿಠೋಬಾ ತಂದೆ
ರಾಮಣ್ಣ ಪಟ್ನೆ ಸಾ|| ಶಿವೂರ ಇವರು ಮತ್ತು ಬಸವರಾಜ) ಸಿದ್ದಪ್ಪ @ ಸಿದ್ದಾರಾಮ ಈ ರೀತಿ ಒಟ್ಟು 03 ಜನ ಅಣ್ಣ ತಮ್ಮರು ಇದ್ದು.
ನಮಗೆಲ್ಲರಿಗೂ ತಲಾ 8 - 8 ಎಕರೆ ಜಮೀನು ಪಾಲಿಗೆ ಬಂದಿರುತ್ತದೆ.
ನಾವೆಲ್ಲರೂ ಸುಮಾರು 20 ವರ್ಷಗಳ ಹಿಂದೆಯೆ ಬೇರೆಯಾಗಿರುತ್ತೇವೆ.
ನಮ್ಮ ನಡುವೆ ಇದ್ದ ಹೊಲದಲ್ಲಿ ಈಗ 4-5 ವರ್ಷಗಳ ಹಿಂದೆ
2 ಎಕರೆ ಜಮೀನು ಹೊಳೆಯಲ್ಲಿ ಹೋಗಿ ಮುಳುಗಡೆಯಾಗಿರುತ್ತದೆ. ಹೊಲ ಮುಳುಗಡೆಯಾದ ಬಗ್ಗೆ ಸರ್ಕಾರದಿಂದ ಈಗ 7 ಲಕ್ಷ ರೂಪಾಯಿ ಹಣ
ಬಂದಿದ್ದು, ಸದರಿ ಹಣ ನಮ್ಮ ಅಣ್ಣನಾದ ಬಸವರಾಜ ಇತನು ತಗೆದುಕೊಂಡಿರುತ್ತಾನೆ
ಬಂದ ಹಣದಲ್ಲಿ ನಮಗೂ ಪಾಲು ಕೊಡು ಅಂತಾ ಕೇಳಿದರು ಕೊಟ್ಟಿರುವುದಿಲ್ಲ. ದಿನಾಂಕ
25-05-2017 ರಂದು ಬೆಳಿಗ್ಗೆ ನಾನು ನನ್ನ ತಮ್ಮನಾದ ಸಿದ್ದರಾಮ ಇಬ್ಬರು ಹೊಳೆಯಲಿದ್ದ
ನಮ್ಮ ಮೋಟಾರ ತಗೆದಿಡಲು ಶಿವೂರ ಸೀಮಾಂತರದಲ್ಲಿರುವ ನಮ್ಮ ಅಣ್ಣನ ಹೊಲ ಸರ್ವೆ ನಂ 120 ನೇದ್ದರಲ್ಲಿನಿಂದ ಹೋಗುತಿದ್ದಾಗ
ಅಲ್ಲೆ ಕೆಲಸ ಮಾಡುತಿದ್ದ ನಮ್ಮ ಅಣ್ಣನಾದ ಬಸವರಾಜ ತಂದೆ ರಾಮಣ್ಣ ಪಟ್ನೆ
ಅವರ ಹೆಂಡತಿಯಾದ ಮಹಾನಂದ ಗಂಡ ಬಸವರಾಜ ಮಗನಾದ ಮಲ್ಲಿಕಾರ್ಜುನ ತಂದೆ ಬಸವರಾಜ ಇವರು ನಮ್ಮ ಹತ್ತಿರ
ಬಂದವರೆ, ನನಗೆ ನಮ್ಮ ಅಣ್ಣ ತಡೆದು ನಿಲ್ಲಿಸಿ ಏನೊ ಬೋಸಡಿ ಮಕ್ಕಳ್ಯಾ ನನಗೆ
ಬಂದ ಹಣದಲ್ಲಿ ಪಾಲಾ ಕೇಳ್ತಿರಿ ಅಂತಾ ಹೊಲಸು ಹೊಲಸು ಬೈಯುತಿದ್ದಾಗ, ಮಲ್ಲಿಕಾರ್ಜುನ
ಈತನು ಅಲ್ಲೆ ಬಿದ್ದಿದ್ದ ಬಡಿಗೆಯನ್ನು ತಗೆದುಕೊಂಡು ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು.
ಸಿದ್ದರಾಮ ಇತನು ಬಿಡಿಸಲು ಬಂದಾಗ ಬಸವರಾಜನು ಮಲ್ಲಿಕಾರ್ಜುನ ಕೈಯಲ್ಲಿನ ಬಡಿಗೆ ತಗೆದುಕೊಂಡು
ಅದೇ ಬಡಿಗೆಯಿಂದ ಟೊಂಕದ
ಮೇಲೆ ಹೊಡೆದಿರುತ್ತಾನೆ. ಆಗ ಮಹಾನಂದ ಇವಳು ಈ ಹಾಟ್ಯಾಗಳಿಗೆ ಇವತ್ತ ಬಿಡಬ್ಯಾಡ್ರಿ
ಖಲಾಸ ಮಾಡ್ರಿ ಅಂತ ಅಂದಾಗ ನಮ್ಮ ಅಣ್ಣ ಹಾಗು ಮಲ್ಲಿಕಾರ್ಜುನ ಇವರಿಬ್ಬರು ನನಗೆ ಮತ್ತು ನನ್ನ ತಮ್ಮ
ಸಿದ್ದರಾಮ ಇಬ್ಬರಿಗೂ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿರುತ್ತಾರೆ,
ನಂತರ ಸದರಿ ಇಬ್ಬರು ಕೂಡಿ ನನಗೆ ಮತ್ತು ನನ್ನ ತಮ್ಮನಿಗೆ ಹೊಲದಿಂದ ಹೊಡೆಯುತ್ತಾ
ಊರಿಗೆ ಕರೆದುಕೊಂಡು ಬಂದಿರುತ್ತಾರೆ, ನಮಗೆ ಹೊಡೆದು
ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಹಣಮರೆಡ್ಡಿ ತಂದೆ ತಿಪ್ಪಾರೆಡ್ಡಿ ಪೊತುಲ್ ಸಾ : ಮಲ್ಕಾಪಲ್ಲಿ ತಾ :
ಸೇಡಂ ರವರೊಂದಿಗೆ ಶ್ರೀನಿವಾಸರೆಡ್ಡಿ ತಂದೆ ಸಿದ್ರಾಮರೆಡ್ಡಿ ಪೊತುಲ್ ಸಂಗಡ ಮೂರು ಜನರು ಸಾ :
ಮಲ್ಕಾಪಲ್ಲಿ ತಾ : ಸೇಡಂ ಸೇರಿಕೊಂಡು ತಮ್ಮ ಮನೆಯ ಹೆಣ್ಣುಮಗಳೊಂದಿಗೆ ಫಿರ್ಯಾದಾರನ ಮಗನು ಜಗಳಾ
ತೆಗೆದಿದ್ದರ ಅಂತಾ ವೈಮನಸ್ಸು ಮಾಡಿಕೊಂಡು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀನಿವಾಸರೆಡ್ಡಿ ತಂದೆ
ಸಿದ್ರಾಮರೆಡ್ಡಿ ಪೊತುಲ್ ಸಾ : ಮಲ್ಕಾಪಲ್ಲಿ ತಾ : ಸೇಡಂ ರವರೊಂದಿಗೆ ಶ್ರೀ ಹಣಮರೆಡ್ಡಿ ತಂದೆ ತಿಪ್ಪಾರೆಡ್ಡಿ ಪೊತುಲ್ ಸಂಗಡ ಮೂರು ಜನರು ಸಾ :
ಮಲ್ಕಾಪಲ್ಲಿ ತಾ : ಸೇಡಂ ಸೇರಿಕೊಂಡು ತಮ್ಮ ಸೇರಿಕೊಂಡು ತಮ್ಮ ಮನೆಯ ಹೆಣ್ಣುಮಗಳೊಂದಿಗೆ ಆರೋಪಿತರು
ಜಗಳಾ ತೆಗೆದಿದ್ದಾರೆ ಅಂತಾ ವೈಮನಸ್ಸು ಮಾಡಿಕೊಂಡು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ರಾಮರೆಡ್ಡಿ ತಂದೆ
ಆಶರೆಡ್ಡಿ ಸಾ : ತುನ್ನೂರ ಗ್ರಾಮ ರವರು ದಿನಾಂಕ 24-05-2015 ರಂದು ರಾತ್ರಿ ತುನ್ನೂರ ಗ್ರಾಮದ
ಹನುಮಾನ ಗುಡಿಯ ಹತ್ತಿರ ಇರುವ ಬೋರವೆಲ್ ಕೈಪಂಪನ್ನು ಜೋರಾಗಿ ಹೊಡೆಯುವಾಗ ಮಹಿಪಾಲ ತಂದೆ
ಭೀಮಶಪ್ಪಾ ಹರಿಜನ ಇವರಿಗೆ ಫಿರ್ಯಾದಿಯು ಜೋರಾಗಿ ಹೋಡೆಯಬೇಡಿರಿ ಅಂತಾ ಅಂದಿದ್ದಕ್ಕೆ ಮಹಿಪಾಲ
ತಂದೆ ಭೀಮಶಪ್ಪಾ ಹರಿಜನ ಸಂಗಡ 3 ಜನರು ಸಾ : ಎಲ್ಲರು ತುನ್ನೂರ ಗ್ರಾಮ ರವರು ಕುಡಿಕೊಂಡು ಹೊಡೆ
ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ
ಜಾತಿ ನಿಂದನೆ
ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ರವೀಂದ್ರ ತಂದೆ ಸಾಯಪ್ಪಾ ಕಾಂಬಳೆ
ಸಾ ತುನ್ನೂರ ಇವರು ದಿನಾಂಕ 24-05-2017 ರಂದು ರಾತ್ರಿ ತುನ್ನೂರ ಗ್ರಾಮದ ಹನುಮಾನ ಗುಡಿಯ
ಹತ್ತಿರ ಇರುವ ಬೋರವೆಲ್ ಗೆ ನೀರು ತರಲು ಹೋದಾಗ ರಾಮರೆಡ್ಡಿ ತಂದೆ ಆಶರೆಡ್ಡಿ ಸಂಗಡ 8 ಜನರು ಸಾ :
ಎಲ್ಲರು ತುನ್ನೂರ ಗ್ರಾಮ ರವರು ಸೇರಿಕೊಂಡು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ
ಹೊಡೆ ಬಡೆ ಮಾಡಿ ದೌರ್ಜನ್ಯ ಎಸಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment