Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 206/2017 ಕಲಂ: 143.147,148,323,324,504,506 ಸಂ.149 ಐಪಿಸಿ;- ದಿನಾಂಕ: 23-07-2017 ರಂದು 5-30 ಪಿ.ಎಂ. ಸುಮಾರಿಗೆ ಪಿಯರ್ಾದಿದಾರರಾದ ಶ್ರೀ ಹಣಮಂತ ತಂದೆ ಗೋಪಾಲ ಅಗಸಿಮನಿ ವಯಾ: 45 ವರ್ಷ ಉ: ಕೂಲಿ ಜಾತಿ: ಮಾದಿಗ ಸಾ:ವಾಗಣಗೇರಾ ಇವರು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ:22/07/2017 ರಂದು 6 ಪಿ.ಎಂ. ಸುಮಾರಿಗೆ ನನ್ನ ಹೆಂಡತಿಯಾದ ಲಕ್ಷ್ಮಿ ಮಗಳಾದ ಕೆಂಚಮ್ಮ ಇಬ್ಬರು ನಮ್ಮೂರ ಬಸ್ಸ ನಿಲ್ದಾಣದ ಪಕ್ಕದಲ್ಲಿರುವ ನಳಕ್ಕೆ ನೀರು ತರಲು ಹೋದಾಗ ಅದೇ ಸಮಯಕ್ಕೆ ನೀರು ತರಲು ಬಂದ ನಮ್ಮೂರ ಮಾನಪ್ಪ ತಂದೆ ಹಣಮಂತ ಚಿಂಚೊಳಿ ಇವರ ಮಗಳಾದ ನಾಗಮ್ಮ ಇವಳು ನನ್ನ ಮಗಳಾದ ಕೆಂಚಮ್ಮ ಇವಳೊಂದಿಗೆ ನೀರು ತುಂಬುವ ಸಲುವಾಗಿ ತಕರಾರು ಮಾಡಿ ಜಗಳ ಮಾಡಿ ಹೊಡೆ ಬಡೆ ಮಾಡಿದ್ದು ಅದೆ ವಿಷಯವಾಗಿ ನಾನು ನನ್ನ ಹೆಂಡತಿಯಾದ ಲಕ್ಷ್ಮಿ ಮಗಳಾದ ಕೆಂಚಮ್ಮ ಮೂವರು ಮಾನಪ್ಪ ತಂದೆ ಹಣಮಂತ ಚಿಂಚೊಳ್ಳಿ ಇವರ ಮನೆಗೆ ಹೋಗಿ ವಿಚಾರ ಮಾಡಿದಾಗ ಮಾನಪ್ಪ ತಂದೆ ಹಣಮಂತ ಚಿಂಚೊಳ್ಳಿ, ಅವನ ಹೆಂಡತಿಯಾದ ಕೆಂಚಮ್ಮ ಗಂಡ ಮಾನಪ್ಪ ಚಿಂಚೊಳ್ಳಿ, ಮಾನಪ್ಪನ ಮಗನಾದ ದೇವೆಂದ್ರಪ್ಪ, ಹೆಣ್ಣು ಮಕ್ಕಳಾದ ದೊಡ್ಡ ಮರೆಮ್ಮ ಗಂಡ ಬಾಲಪ್ಪ ಕಟ್ಟಿಮನಿ, ಸಣ್ಣ ಮರೆಮ್ಮ ಗಂಡ ಮಲ್ಲಪ್ಪ ಸಾ: ಜೇವರಗಿ, ಸೀರೆವ್ವ ತಂದೆ ಮಾನಪ್ಪ ಚಿಂಚೊಳ್ಳಿ, ನಾಗಮ್ಮ ತಂದೆ ಮಾನಪ್ಪ ಚಿಂಚೊಳ್ಳಿ, ರೇಣುಕಾ ತಂದೆ ಮಾನಪ್ಪ ಚಿಂಚೊಳ್ಳಿ ಎಲ್ಲರೂ ಕೂಡಿ ಬಂದವರೆ ಅದರಲ್ಲಿಯ ಮಾನಪ್ಪ ಅವರ ಮಗನಾದ ದೇವೆಂದ್ರಪ್ಪ ಇಬ್ಬರು ಎಲೇ ಬೋಸಡಿ ಮಕ್ಕಳೆ ನಮ್ಮ ಮಗಳ ಸಂಗಡವೆ ಜಗಳ ತಗೆದು ನಮಗೆ ಕೇಳಲು ಬಂದಿದ್ದಿರಾ ಅಂತಾ ಅವಾಚ್ಯ ಶಬ್ದಗಳಿಂದ ಬೈದವರೆ ನನ್ನನ್ನು ತೆಕ್ಕೆಯಲ್ಲಿ ಹಿಡಿದು ಹೊಡೆಯಲು ಬಂದಾಗ ಬಿಡಿಸಲು ಬಂದ ಹೆಂಡತಿ ಲಕ್ಷ್ಮಿ ಇವಳಿಗೆ ಮಾನಪ್ಪನ ಹೆಂಡತಿ ಕೆಂಚಮ್ಮ ಇವಳು ಅಲ್ಲೆ ಬಿದ್ದ ಒಂದು ಬಿಡಿಗೆಯಿಂದ ಹೊಟ್ಟೆಗೆ ಹೊಡೆದು ಒಳಪೆಟ್ಟು ಪಡಿಸಿದಳು, ಮಗಳಾದ ಬಸಮ್ಮ ಇವಳಿಗೆ ದೊಡ್ಡ ಮರೆಮ್ಮ ಇವಳು ಬಸಮ್ಮಳ ಕೊರಳಲ್ಲಿದ್ದ ಮಣಿ ದಾರ ಹಿಡಿದು ಜಗ್ಗಿದಾಗ ಬಸಮ್ಮ ಇವಳ ಕೊರಳಿಗೆ ರಕ್ತಗಾಯವಾಗಿದ್ದು ಇರುತ್ತದೆ. ಸಣ್ಣ ಮರೆಮ್ಮ ಗಂಡ ಮಲ್ಲಪ್ಪ, ಸೀರೆವ್ವ ತಂದೆ ಮಾನಪ್ಪ ಚಿಂಚೊಳ್ಳಿ, ನಾಗಮ್ಮ ತಂದೆ ಮಾನಪ್ಪ ಚಿಂಚೊಳ್ಳಿ, ರೇಣುಕಾ ತಂದೆ ಮಾನಪ್ಪ ಚಿಂಚೊಳ್ಳಿ ಇವರೆಲ್ಲರೂ ಜಗಳ ಬಿಡಿಸಲು ಬಂದ ಮಗಳಾದ ಕೆಂಚಮ್ಮ ಗಂಡ ಕಲ್ಲಪ್ಪ ಇವಳ ಎಡಗಾಲ ಮೊಳಕಾಲಿಗೆ, ಸಿರೆಮ್ಮ ಗಂಡ ಪರಶುರಾಮ ಇವಳ ಬಲಗಾಲಿಗೆ ರೇಣುಕಾ ಗಂಡ ಶರಣಪ್ಪ ಅಗಸಿಮನಿ ಇವಳ ಹೊಟ್ಟೆಗೆ ಬಡಿಗೆಯಿಂದ ಹೊಡೆ ಬಡೆ ಮಾಡುತ್ತಿರುವಾಗ ನಾವೆಲ್ಲರೂ ಚಿರಾಡುತ್ತಿರುವಾಗ ಗ್ರಾಮದ ರಾಜಪ್ಪ ತಂದೆ ಬೈಲಪ್ಪ ಕಟ್ಟಿಮನಿ, ಚನ್ನಪ್ಪ ತಂದೆ ಬೀಮಪ್ಪ ಮಾರಲಬಾಯಿ ಇವರು ಜಗಳವನ್ನು ನೋಡಿ ಬಿಡಿಸಿದ್ದು ಇರುತ್ತದೆ. ನಂತರ ಅವರು ಇವತ್ತು ಉಳದಿರೆ ಮಕ್ಕಳೆ ಇನ್ನೊಮ್ಮೆ ಸಿಕ್ಕರೆ ಖಲಾಸ ಮಾಡದೆ ಬಿಡುವದಿಲ್ಲ ಅಂತಾ ಜೀವ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ. ಅಂತಾ ಪಿಯರ್ಾದಿ ಸಾರಾಂಶವಿರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 207/2017 ಕಲಂಃ 279 337 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್;- ಯುನೈಟೆಡ್ ಆಸ್ಪತ್ರೆ ಕಲಬುರಗಿಯಿಂದ ಎಮ್.ಎಲ್.ಸಿ ತಿಳಿಸಿದರಿಂದ ಇಂದು ದಿಃ 24/07/2017 ರಂದು ಮುಂಜಾನೆ 8-30 ಎ.ಎಮ್ ಕ್ಕೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯ ಹೊಂದಿರುವ ಗಾಯಾಳುಗಳು ಹೇಳಿಕೆ ಕೊಡುವ ಸ್ಥಿತಿಯಲ್ಲಿರಲಾರದ ಕಾರಣ ಅವರ ಜೊತೆಗಿದ್ದ ಶ್ರೀ ಮಲ್ಕಪ್ಪ ತಂದೆ ಮರೆಪ್ಪ ಮಕಾಶಿ ಸಾಃ ಸತ್ಯಂಪೇಟ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ದಿಃ 22/07/2017 ರಂದು ರಾತ್ರಿ 7-45 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗನಾದ ದೇವಪ್ಪ ಇಬ್ಬರೂ ನಮ್ಮ ಮನೆಯ ಮುಂದೆ ಮಾತನಾಡುತ್ತ ಕುಳಿತಿದ್ದಾಗ, ನನ್ನ ಅಣ್ಣನ ಮಗನಾದ ಗುಂಡಪ್ಪ ತಂದೆ ಲಾಲಸಾಬ ಮಕಾಶಿ ಇತನು ಬಂದು ನನ್ನ ಮಗನಿಗೆ ಅಣ್ಣ ಅಜ್ಜಿಯ ಸಲುವಾಗಿ ಸುರಪೂರ ಮೇಡಿಕಲ್ಗೆ ಹೋಗಿ ಮುಲಾಮು ಹಾಗು ಮಾತ್ರೆಗಳನ್ನು ತರಬೇಕಾಗಿದೆ, ಹೋಗಿ ಬರೋಣಾವೆಂದು ಹೇಳಿ ಇಬ್ಬರೂ ಮೋಟರ ಸೈಕಲ್ ನಂ: ಕೆ.ಎ 33 ಎಸ್ 1149 ನೇದ್ದರ ಮೆಲೆ ಸುರಪುರಕ್ಕೆ ಹೋಗಿ ಅಲ್ಲಿಂದ ಮರಳಿ ಬರುವಾಗ 8 ಪಿ.ಎಮ್ ಸುಮಾರಿಗೆ ಮದನಸಾವಲಿ ದಗರ್ಾದ ಹತ್ತಿರ ಎದರುಗಡೆಯಿಂದ ಮೋ.ಸೈಕಲ್ ನಂಬರ ಕೆ.ಎ 33 ಕ್ಯೂ 7535 ನೇದ್ದರ ಚಾಲಕನು ತನ್ನ ಹಿಂದೆ ಮಹ್ಮದ ತಕೀಂ ತಂದೆ ಅಬ್ದುಲ್ ಜಬ್ಬಾರ ಎಂಬಾತನಿಗೆ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿಕೊಂಡು ಬಂದು ಫಿಯರ್ಾದಿಯ ಮಗನು ನಡೆಸಿಕೊಂಡು ಹೊರಟಿದ್ದ ಮೋ.ಸೈಕಲಗೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಫಿಯರ್ಾದಿಯ ಮಗ ದೇವಪ್ಪ, ಆತನ ಅಣ್ಣನ ಮಗ ಗುಂಡಪ್ಪ ಹಾಗು ಆರೋಪಿತನ ಹಿಂದೆ ಕುಳಿತಿದ್ದ ಮಹ್ಮದ ತಕೀಂ ಮೂವರಿಗೆ ಸಾದಾ ಹಾಗು ಭಾರಿ ರಕ್ತಗಾಯಗಳಾಗಿದ್ದು, ಆರೋಪತನು ಸ್ಥಳದಿಂದ ಓಡಿ ಹೋಗಿರುತ್ತಾನೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 207/2017 ಕಲಂ: 279 337 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 303/2017 ಕಲಂ 279. 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ;- ದಿನಾಂಕ: 23/07/2017 ರಂದು 11.30 ಎ.ಎಂ.ಕ್ಕೆ ಠಾಣೆಗೆ ಫಿಯರ್ಾದಿ ಆನಂದ ತಂ/ ಚನ್ನಬಸಪ್ಪ ದೊಡ್ಡಮನಿ ಸಾ|| ಕನ್ನೊಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಸಾರಾಂಶವೇನೆಂದರೆ, ಫಿಯರ್ಾದಿ ಮತ್ತು ಗೊಲ್ಲಾಳಪ್ಪ ಕುಂಬಾರ, ಮಡಿವಾಳಪ್ಪ ಸಾರಂಗಮಠ, ಶಿವನಂದ ಗೋಡಕರ್, ನರಸಪ್ಪ ಹವಳಗಿ, ಚನ್ನಪ್ಪ ಇಜೇರಿ 6 ಜನರು ಒಂದೊಂದು ಮೋಟರ ಸೈಕದಲ್ಲಿ ಇಬ್ಬರಂತೆ ಕುಳಿತುಕೊಂಡು ಯಾದಗಿರಿಯ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬೆಳಿಗ್ಗೆ 7.00 ಗಂಟೆಗೆ ಕನ್ನೊಳ್ಳಿಯಿಂದ ಹೊರಟಿದ್ದು, ಗೊಲ್ಲಾಳಪ್ಪ, ಮಡಿವಾಳಪ್ಪ ಇಬ್ಬರು ಮೋ./ಸೈ.ನಂ. ಕೆಎ-28 ಇಪಿ-6688 ನೇದ್ದರಲ್ಲಿ ಹೊರಟಿದ್ದು, ಗೊಲ್ಲಾಳಪ್ಪನು ಮೋ/ಸೈ ನ್ನು ನಡೆಸುತ್ತಿದ್ದನು. ಫಿಯರ್ಾದಿ ಮತ್ತು ಚನ್ನಪ್ಪ ಇಜೇರಿ ಒಂದು ಮೋಟರ ಸೈಕಲ್ ಮತ್ತು ಶಿವಾನಂದ ಗೋಡ್ಕರ್ ಹಾಗೂ ನರಸಪ್ಪ ಹವಳಿಗಿ ಇವರು ಇನ್ನೊಂದು ಮೋಟರ ಸೈಕಲದಲ್ಲಿ ಹೊರಟಿದ್ದರು. ಅಂದಾಜು 10.00 ಎ.ಎಂ ಸುಮಾರಿಗೆ ಶಹಾಪೂರ-ಯಾದಗಿರಿ ಮುಖ್ಯ ರಸ್ತೆಯ ಬೇವಿನಳ್ಳಿ ಮುರಾಜರ್ಿ ವಸತಿಶಾಲೆ ದಾಟಿ ಅಂದಾಜು 500 ಮೀಟರ ಅಂತರದಲ್ಲಿ ಇರುವ ಮೇನ್ ಕೆನಾಲ ಹತ್ತಿರ ದೋರನಳ್ಳಿ ಕಡೆಗೆ ಹೊರಟಿದ್ದಾಗ ಗೊಲ್ಲಾಳಪ್ಪನು ನಮ್ಮ ಮುಂದೆ ಇದ್ದು, ಇನ್ನುಳಿದವರು ಸ್ವಲ್ಪ ಹಿಂದೆ ಹೊರಟಿದ್ದರು ಆಗ ಎದುರಿನಿಂದ ಅಂದರೆ ಯಾದಗಿರಿ ಕಡೆಯಿಂದ ಒಂದು ಟ್ರಾಕ್ಟರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಟ್ರಾಕ್ಟರನ್ನು ನಡೆಸಿಕೊಂಡು ಬರುತ್ತಾ ಒಮ್ಮೆಲೆ ರೋಡಿನ ಬಲಕ್ಕೆ ಕಟ್ ಮಾಡಿ ರೋಡಿನ ಎಡ ಸೈಡಿನಲ್ಲಿ ಹೊರಿಟಿದ್ದ ಗೊಲ್ಲಾಳಪ್ಪನ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ್ದರಿಂದ ಗೊಲಾಳಪ್ಪ ಮತ್ತು ಮಡಿವಾಳಪ್ಪ ಇಬ್ಬರಿಗೆ ಭಾರೀ ಗಾಯಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಟ್ರಾಕ್ಟರ ನಂ. ನೋಡಲಾಗಿ ಕೆಎ-33 ಟಿಎ-5614 ಇದ್ದು ಅದರ ಟ್ರಾಲಿ ನಂಬರ ಇರುವುದಿಲ್ಲ ಅದರ ಚೆಸ್ಸಿ.ನಂ.04/2015 ಅಂತಾ ಇದ್ದು, ಟ್ರಾಕ್ಟರ ಚಾಲಕನನ್ನು ನೋಡಿದಲ್ಲಿ ಗುರುತ್ತಿಸುತ್ತೇನೆ ಕಾರಣ ಅಪಘಾತಪಡಿಸಿದ ಟ್ರಾಕ್ಟರ ನಂ.ಕೆಎ-33 ಟಿಎ-5614 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 303/2017 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 141/2017 ಕಲಂ 454, 380 ಐ.ಪಿ.ಸಿ;- ದಿನಾಂಕ 23/07/2017 ರಂದು ಮಧ್ಯಾಹ್ನ 01-00 ಗಂಟೆಗೆ ಫಿಯರ್ಾಧಿ ಶ್ರೀ ಶಿವಲಿಂಗರೆಡ್ಡಿ ತಂದೆ ಬಸರೆಡ್ಡಿ ಮಾಲಿ ಪಾಟೀಲ್ ವಯಾ 49 ವರ್ಷ, ಜಾ|| ರೆಡ್ಡಿ ಉ|| ಸಕರ್ಾರಿ ನೌಕರ (ತಾಲ್ಲೂಕ ಆರೋಗ್ಯ ಅಧಿಕಾರಿಯ ವಾಹನ ಚಾಲಕ) ಸಾ|| ಗಾಜರಕೋಟ ಹಾ|| ವ|| ಮನೆ ನಂ 34/2 ಪಿ.ಡ.ಬ್ಯೂ.ಡಿ ಕ್ವಾಟರ್ಸ್ ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ದೂರು ನೀಡಿದ್ದರ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ಇಂದ್ರಮ್ಮ ಗಂಡ ಶಿವಲಿಂಗರೆಡ್ಡಿ ಇಬ್ಬರು ವಾಸವಾಗಿರುತ್ತೇವೆ. ನಮ್ಮ ಇಬ್ಬರು ಮಕ್ಕಳಾದ ಬಸರೆಡ್ಡಿ, & ವಿಶ್ವನಾಥರೆಡ್ಡಿ ಇವರು ಬೆಂಗಳೂರ ನಗರದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಅಲ್ಲೆ ಇರುತ್ತಾರೆ. ಹೀಗಿದ್ದು ಇಂದು ದಿನಾಂಕ 23/07/2017 ರಂದು ಶ್ರಾವಣ ಅಮವಾಸ್ಯೆ ಇದ್ದುದ್ದರಿಂದ ನನ್ನ ಹೆಂಡತಿ ಇಂದ್ರಮ್ಮ ಇವಳು ದಂಡಗುಂಡ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಇಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಹೋದರು. ಇಂದು ಅಮವಾಸ್ಯೆ ಇದ್ದುದ್ದರಿಂದ ನಾನು ಚಲಾಯಿಸುತ್ತಿದ್ದ ನಮ್ಮ ಇಲಾಖೆಯ ಟವೇರಾ ವಾಹನವನ್ನು ವಾಟರ್ ಸವರ್ಿಸಿಂಗ್ ಮಾಡಿಕೊಂಡು ಬರೋಣ ಅಂತಾ ನಮ್ಮ ಮನೆಯ ಹಿಂದಿನ ಬಾಗಿಲು ಒಳಗಡೆ ಚಿಲಕ ಹಾಕಿ ಮನೆಯ ಮುಂದಿನ ಬಾಗಿಲು ಕೀಲಿ ಹಾಕಿಕೊಂಡು ಇಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ನಾನು ನಮ್ಮ ಇಲಾಖೆ ವಾಹನ ನಿಲ್ಲಿಸಿದ ನಮ್ಮ ಕಛೇರಿಗೆ ಹೋದೆನು. ನಂತರ ವಾಹನವನ್ನು ತೆಗೆದುಕೊಂಡು ಸಕರ್ಾರಿ ಆಸ್ಪತ್ರೆ ಮುಂದುಗಡೆ ಇರುವ ಸವರ್ಿಸಿಂಗ್ ಸೆಂಟರದಲ್ಲಿ ವಾಟರ್ ಸವರ್ಿಸಿಂಗ್ ಮಾಡಿಸಿ ಹೂ. ಕಾಯಿ ತಂದರಾಯಿತು ಅಂತಾ ಚಿತ್ತಾಪೂರ ರಸ್ತೆಗೆ ಹೋಗಿ ಹೂ.ಕಾಯಿ ತೆಗೆದುಕೊಂಡು ಮರಳಿ ಇಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು ಕೀಲಿ ತೆಗೆದು ಒಳಗಡೆ ಹೋಗಿ ನೋಡಲಾಗಿ, ನಮ್ಮ ಹಿಂದಿನ ಬಾಗಿಲು ತೆರೆದಿತ್ತು. ಮನೆಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದದವು. ದೇವರ ಕೋಣೆಯಲ್ಲಿ ನೋಡಲು ಅಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದದ್ದದಿದ್ದು, ಆಲಮಾರಿಯ ಮೇಲೆ, ಕಬ್ಬಿಣ ಪೆಟ್ಟಿಗೆಯಲ್ಲಿಟ್ಟಿದ್ದ ತಲಾ ಒಂದು ತೊಲೆಯ ಬಂಗಾರದ 03 ಸುತ್ತುಂಗರಗಳು, ಅ.ಕಿ 75,000/- ರೂ|| ಮತ್ತು ಅಲ್ಲಿಯೇ ಗೋಡೆಯ ಅಲಮಾರಿಯಲ್ಲಿದ್ದ, ಅಂದಾಜು 02 ತೊಲೆಯ ಬಂಗಾರದ ಎರಡೆಳೆಯ ಸರ, ಅ.ಕಿ 50,000/- ರೂಪಾಯಿ ಬೆಲೆಬಾಳುವ ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 141/2017 ಕಲಂ 454, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.