£ÀgÉÆÃuÁ oÁuÉ : ದಿನಾಂಕ:- 24/07/2017 ರಂದು ಬೆಳಿಗ್ಗೆ 11:00
ಗಂಟೆಗೆ ಶ್ರೀ ಆನಂದ ಪಿಸಿ-1258 ನರೋಣಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ದೇಗಾಂವ ಗ್ರಾಮದ
ಸೀಮಾಂತರದಲ್ಲಿ ಪಿ.ಎಸ್.ಐ ಸಾಹೇಬರು ಸ್ವೀಕೃತ ಮಾಡಿಕೊಂಡ ಲಿಖಿತ ದೂರನ್ನು ಸದರಿ ಆನಂದ ಪಿಸಿ
ರವರು ಹಾಜರು ಪಡಿಸಿದ್ದು ಸದರಿ ಲಿಖಿತ ದೂರಿನ ಸಾರಾಂಶವೇನೆಂದರೆ ಶಿವರಾಜ ತಂದೆ ಸೈಬಣ್ಣ ಮಾಲಿ
ಪಾಟೀಲ್ ವ: 50ವರ್ಷ, ಉ: ಒಕ್ಕಲುತನ, ಜಾ: ಲಿಂಗಾಯತ ಸಾ: ದೇಗಾಂವ ತಾ: ಆಳಂದ ಜಿ; ಕಲಬುರಗಿ ಇದ್ದು. ಈ ಮೂಲಕ ತಮ್ಮಲ್ಲಿ ದೂರು
ಸಲ್ಲಿಸುವುದೇನೆಂದರೆ ಇಂದು ದಿನಾಂಕ:- 24/07/2017 ರಂದು
ಮುಂಜಾನೆ 08:00
ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ
ಗ್ರಾಮದ ಲಿಂಗರಾಜ @ ಚನ್ನಬಸವ
ತಂದೆ ಶಿವಣ್ಣಾ ಸಾಹು, ಶಮಶೋದ್ದಿನ
ತಂದೆ ಸರದಾರಸಾಬ ಮುಲ್ಲಾ ರವರುಗಳು ಕೂಡಿಕೊಂಡು ಮಾತನಾಡುತ್ತಾ ಹನುಮಾನ ದೇವಸ್ಥಾನದ ಹತ್ತಿರ
ನಿಂತಿರುವಾಗ ನಮ್ಮೂರಿನ ಸಿದ್ದಪ್ಪ ತಂದೆ ಮಹಾಲಿಂಗ ಪೂಜಾರಿ ಈತನು ಬಂದು ನಮ್ಮ ತಮ್ಮನಾದ ದಿಲೀಪ
ಈತನ ಪಾಲಿಗೆ ಬಂದಿರುವ ಬಸವನ ಸಂಗೋಳಗಿ ರಸ್ತೆಯ ಪಕ್ಕದಲ್ಲಿರುವ ಮಸಗುರ್ತಿ ಹೊಲದ ಪಕ್ಕದಲ್ಲಿ
ಒಬ್ಬ ಗಂಡು ಮನುಷ್ಯನ ಶವಕ್ಕೆ ಬೆಂಕಿ ಹತ್ತಿ ಉರಿಯುತ್ತಿದೆ ಎಂದು ತಿಳಿಸಿದ ಮೇರೆಗೆ ನಾವೆಲ್ಲರು
ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮ ದಿಲೀಪನ ಹೊಲದ ಪಕ್ಕದಲ್ಲಿ ಸುಮಾರು 20 ರಿಂದ 22 ವಯಸ್ಸಿನ ಗಂಡು ಮನುಷ್ಯನ ಮೃತ ದೇಹಕ್ಕೆ ಬೆಂಕಿ ಹತ್ತಿ
ಉರಿಯುತ್ತಿದ್ದು ಸದರಿ ವ್ಯಕ್ತಿಗೆ ಯಾರೋ ಯಾವುದೋ ದುರುದ್ದೇಶದಿಂದ ಕೊಲೆ ಮಾಡಿ ಅವನ ಶವವನ್ನು
ಒಂದು ಚೀಲದಲ್ಲಿ ಹಾಕಿಕೊಂಡು ಬಂದು ಗುರುತು ಸಿಗಬಾರದೆಂದು ಶವದ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ
ಹಚ್ಚಿರುತ್ತಾರೆ ಅವನ ದೇಹವು ಪೂರ್ತಿ ಸುಟ್ಟಿದ್ದು ಸೊಂಟದ ಭಾಗದಲ್ಲಿ ಸ್ವಲ್ಪ ಪ್ಯಾಂಟ್ ಮಾತ್ರ
ಅರ್ಧ ಮರ್ದ ಸುಟ್ಟ ಸ್ಥಿತಿಯಲ್ಲಿ ಇರುತ್ತದೆ. ದಿನಾಂಕ:- 24/07/2017 ರಂದು 02:00 ರಿಂದ 06:00 ಮದ್ಯದ ಅವಧಿಯಲ್ಲಿ ಯಾರೋ ಸದರಿ ಅಪರಿಚಿತ ಗಂಡು
ಮನುಷ್ಯನನ್ನು ಯಾವುದೋ ದುರುದ್ದೇಶದಿಂದ ಕೊಲೆ ಮಾಡಿ ಸಾಕ್ಷಿ ನಾಶಪಡಿಸಬೇಕೆಂದು ಅವನ ಶವವನ್ನು
ನನ್ನ ತಮ್ಮನ ಹೊಲದಲ್ಲಿ ಪಕ್ಕದಲ್ಲಿ ಬಿಸಾಕಿ ಮೈ ಮೇಲೆ ಸೀಮೆ ಎಣ್ಣೆ ಸುರಿದು ದೇಹಕ್ಕೆ ಬೆಂಕಿ
ಹಚ್ಚಿರುತ್ತಾರೆ. ಈ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತ
ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.
±ÀºÁ¨ÁzÀ £ÀUÀgÀ oÁuÉ : ದಿನಾಂಕಃ 24/07/2017 ರ ಮದ್ಯಾಹ್ನ 3-00 ಕ್ಕೆ
ಗಂಟೆಗೆ ದೇವನ ತೆಗನೂರ, ಶಾಂತ ನಗರ
ಕಡೆಗೆ ಹೋದಾಗ ಪೊಲೀಸ ಬಾತ್ಮಿದಾರರಿಂದ ತಿಳಿದು ಬಂದಿದ್ದೇನೆಂದರೆ ಠಾಣೆಯ ರೌಡಿ
ಶೀಟರಗಳಾಧ 1) ಇಬ್ರಾಹಿಂ ತಂದೆ ಅಬ್ದುಲಸಾಬ ಕೊಟನೂರ ಸಾ: ದೇವನ ತೆಗನೂರ 2) ಮಹ್ಮದ ರೀಯಾಜ ತಂದೆ
ಹಾಜಿ ಕರೀಮ ಶೇಖ ಸಾ: ಶಾಂತ ನಗರ ಭಂಕೂರ ಇವರು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ನಿಲ್ಲುವದು, ಏರಿಯಾದಲ್ಲಿ ಗುಂಪುಗಾರಿಕೆ
ಮಾಡಿಕೊಂಡು ತಿರುಗಾಡುತ್ತಿದ್ದು, ಸದರಿಯವರು ಗಲಭೆ ಮಾಡಿ ಸಾರ್ವಜನಿಕ ಶಾಂತತಾ
ಭಂಗವನ್ನುಂಟು ಮಾಡಿ, ಸಾರ್ವಜನಿಕ
ಆಸ್ತಿಗೆ ಹಾನಿಯನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ, ಸದರಿಯವರ ವಿರುದ್ದ ಮುಂಜಾಗ್ರತಾ
ಕ್ರಮ ಪ್ರಕರಣ ದಾಖಲಿಸಿಕೊಂಡು
ಬಗ್ಗೆ ವರದಿ.
No comments:
Post a Comment