ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-06-2021
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 105/2021, ಕಲಂ. 379 ಐಪಿಸಿ :-
ದಿನಾಂಕ 21-06-2021 ರಂದು 2000 ಗಂಟೆಯಿಂದ 2100 ಗಂಟೆಯ ಅವಧಿಯಲ್ಲಿ ಹುಮನಾಬಾದ ಪಟ್ಟಣದ ಪಕೀರ ಟೇಕಾಡದ ಫಿರ್ಯಾದಿ ಅಮರ ತಂದೆ ಚೆನ್ನಬಸಪ್ಪಾ ಪಾಟೀಲ ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಸಿಂಧನಕೇರಾ ರವರ ಗೆಳೆಯ ಶ್ರೀರಂಗರೆಡ್ಡಿ ರವರ ಮನೆಯ ಮುಂದೆ ನಿಲ್ಲಿಸಿದ ಫಿರ್ಯಾದಿಯವರ ಮೋಟಾರ ಸೈಕಲ ನಂ. ಕೆಎ-39/ಎಲ್-2933, ಅ.ಕಿ 30,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 58/2021, ಕಲಂ. 279, 338 ಐಪಿಸಿ :-
ದಿನಾಂಕ 23-06-2021 ರಂದು ಫಿರ್ಯಾದಿ ವಿಜಯಲಕ್ಷ್ಮಿ ಗಂಡ ವೈಜಿನಾಥ ಕಟ್ಟಿಮನಿ, ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಬಿಲಾಲ ಕಾಲೋನಿ ಬೀದರ ರವರ ತಮ್ಮನಾದ ಕರಣ ತಂದೆ ರೆವಣಪ್ಪಾ ಸೋನಿ, ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಹೊರ ಶಹಾಗಂಜ ಬೀದರ ಇತನು ಮೋಟಾರ್ ಸೈಕಲ ನಂ. ಕೆಎ-38/ಡಬ್ಲೂ-9259 ನೇದನ್ನು ಅಮಲಾಪೂರ ಕಡೆಯಿಂದ ಬೀದರ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿನತದಿಂದ ಚಲಾಯಿಸಿಕೊಂಡು ಬಂದು ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಅಮಲಾಪೂರ-ಬೀದರ ರೋಡ ಹೆಮರೆಡ್ಡಿ ಮಲ್ಲಮ್ಮಾ ಟೆಂಪಲ ಕ್ರಾಸ್ ಹತ್ತಿರ ಡಿವೈಡರಗೆ ಡಿಕ್ಕಿ ಮಾಡಿ ಬಿದ್ದಿರುತ್ತಾನೆ, ಪರಿಣಾಮ ಆತನ ತಲೆಗೆ ಭಾರಿ ಗುಪ್ತಗಾಯವಾಗಿ, ಎರಡು ಕಿವಿಯಿಂದ ರಕ್ತ ಬಂದಿರುತ್ತದೆ, ಎಡ ಭುಜದ ಹತ್ತಿರ ಭಾರಿ ಗುಪ್ತಗಾಯವಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು 108 ಅಂಬುಲೇನ್ಸ್ ನಲ್ಲಿ ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 121/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 23-06-2021 ರಂದು ದಿನನಿನಿತ್ಯದಂತೆ ಫಿರ್ಯಾದಿ ಜಾರ್ಜ ತಂದೆ ದಶರಥ ಜೂಯಲ್, ವಯ: 28 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಮಹಾದೇವಿ ಕಾಲೋನಿ ಚಿಟಗುಪ್ಪಾ ರವರ ತಂದೆಯಾದ ದಶರಥ ತಂದೆ ಕಲ್ಲಪ್ಪಾ ವಯ: 55 ವರ್ಷ ರವರು ಹಾಗು ಪುಟರಾಜ ರವರು ಮೋಟಾರ ಸೈಕಲ ನಂ ಕೆಎ-39/ಜೆ-3889 ನೇದರ ಮೇಲೆ ಕೊಡಂಬಲ ಗ್ರಾಮದಲ್ಲಿ ಬಸ್ ನಿಲ್ದಾಣದ ಕೆಡೆಗೆ ಹೋಗುವಾಗ ಕೂಡಂಬಲ ಗ್ರಾಮದ ಬಸವೇಶ್ವರ ವೃತ ಹತ್ತಿರ ಹಣಮಂತಪ್ಪಾ ಕಠಳಿ ರವರ ಅಂಗಡಿಯ ಎದರುಗಡೆ ಕೊಡಂಬಲ್ ಗ್ರಾಮದಿಂದ ಚಿಟಗುಪ್ಪಾ ಪಟ್ಟಣದ ಕಡೆಗೆ ಬರುತ್ತಿದ್ದ ಕಾರ ನಂ. ಎಮ್.ಹೆಚ್-12/ಜಿ.ಎಫ್- 2562 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೂಂಡು ಬಂದು ಫಿರ್ಯಾದಿಯವರ ತಂದೆಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ತಂದೆ ದಶರಥ ರವರಿಗೆ ಬಲ ಭುಜಕ್ಕೆ ಗುಪ್ತಗಾಯ, ಬಲಗೈ ಮೊಳಕಾಲ ಕೆಳಗೆ ರಕ್ತಗಾಯ ಹಾಗು ಎಡ ಮೋಳಕಾಲ ಕೆಳಗೆ ಮೂಳೆ ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ತನ್ನ ಕಾರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆಂದು ನಂತರ ಫಿರ್ಯಾದಿಯವರ ತಂದೆಗೆ 108 ಅಂಬುಲೇನ್ಸ್ ನಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 107/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 23-06-2021 ರಂದು ಬಸವಕಲ್ಯಾಣ ನಗರದ ಅಲ್ಲಾನಗರ ಓಣಿಯಲ್ಲಿರುವ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಅಮರ ಸಿ. ಕುಲಕರ್ಣಿ ಪಿ.ಎಸ್.ಐ [ಕಾ&ಸೂ] ಬಸವಕಲ್ಯಾಣ ನಗರ ಪೋಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಬಸವಕಲ್ಯಾಣ ನಗರದ ಅಲ್ಲಾನಗರ ಓಣಿಯಲ್ಲಿರುವ ಮಸೀದಿ ಹತ್ತಿರ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಭವಾನಿ ತಂದೆ ಧರ್ಮಾ ಸಕಟೆ ವಯ: 20 ವರ್ಷ, ಜಾತಿ: ಮಾಂಗರವಾಡಿ, ಸಾ: ಈಶ್ವರ ನಗರ ಬಸವಕಲ್ಯಾಣ, 2) ರಫೀಕ್ ತಂದೆ ಅಬ್ದುಲ್ ಮಾಜೀದ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ಅಲ್ಲಾ ನಗರ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೇಲೆ ಸದರಿ ಆರೋಪಿತರ ಮೇಲೆ ದಾಳಿ ಮಾಡಿದಾಗ ಆರೋಪಿ ಭವಾನಿ ಇತನು ಸಿಕ್ಕಿದ್ದು ಹಾಗೂ ಆರೋಪಿ ರಫೀಕ್ ಇತನು ಓಡಿ ಹೋಗಿರುತ್ತಾನೆ, ನಂತರ ಭವಾನಿ ಇತನಿಂದ 1) ನಗದು ಹಣ 2,050/- ರೂ., 2) 01 ಮಟಕಾ ಚೀಟಿ ಹಾಗು 3) ಒಂದು ಬಾಲ್ ಪೆನ್ ಸಿಕ್ಕಿದ್ದು, ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 120/2021, ಕಲಂ. 363 ಐಪಿಸಿ :-
ಫಿರ್ಯಾದಿ ಅಣ್ಣೆಪ್ಪಾ ತಂದೆ ಶಂಕರೆಪ್ಪಾ ಇಸ್ಲಾಂಪೂರ, ವಯ: 46 ವರ್ಷ, ಜಾತಿ: ಲಿಂಗಾಯತ, ಸಾ: ಇಟಗಾ, ಸದ್ಯ: ಆರ್ಯ ಸಮಾಜ ಹತ್ತಿರ ಚಿಟಗುಪ್ಪಾ ರವರ ಹಿರಿಯ ಮಗನಾದ ವಿಮರ್ಷ @ ಸಂಗಮೇಶ ವಯ: 16 ವರ್ಷ ಇತನು ಈ ವರ್ಷ 10ನೇ ತರಗತಿಯಲ್ಲಿ ರಾಮ & ರಾಜ ಪ್ರೌಡ ಶಾಲೆ ಹುಮನಾಬಾದನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ, ಸದ್ಯ ಕೊವೀಡ್-19 ರೋಗ ಬಂದಿದ್ದರಿಂದ ಈ ವರ್ಷ ಶಾಲೆಗೆ ಹೋಗದೇ ಮನೆಯಲ್ಲಿಯೇ ವಿಧ್ಯಾಭ್ಯಾಸ ಮಾಡಿಕೊಂಡಿರುತ್ತಾನೆ, ಹೀಗಿರುವಾಗ ದಿನಾಂಕ 22-06-2021 ರಂದು ಚಿಟಗುಪ್ಪಾದಲ್ಲಿರುವ ಫಿರ್ಯಾದಯವರ ಅಣ್ಣನ ಮನೆಗೆ ಸೇಟಲ್
ಕಾಕ್ ಆಟವಾಡಲು ವಿಮರ್ಷ ಇತನು ಹೋಗುತ್ತೇನೆಂದು ಹೇಳಿ ಮನೆಯಿಂದ ಹೋಗಿ ರಾತ್ರಿಯಾದರೂ ಮನೆಗೆ ಬರದ ಕಾರಣ ಎಲ್ಲರೂ ಕೂಡಿ ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ಹಾಗೂ ಮನ್ನಾಎಖೇಳ್ಳಿ, ಜಹೀರಾಬಾದ, ಬೀದರ, ಹುಮನಾಬಾದ ಹಾಗು ತಾಲೂಕಾ ಚಿಂಚೋಳಿ ಸುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಮಗ ವಿಮರ್ಷ
ಇತನು ದಿನಾಂಕ 22-06-2021 ರಂದು 1800 ಗಂಟೆಗೆ ಚಿಟಗುಪ್ಪಾದಲ್ಲಿರುವ ಬಾಡಿಗೆಯಿಂದ ವಾಸವಾಗಿರುವ ಮನೆಯಿಂದ ಸೇಟಲ್
ಕಾಕ್ ಆಟವಾಡಲು ಹೋಗಿ ಬರುತ್ತೇನೆಂದು ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ಮನೆಗೆ ಬರದೇ ಕಾಣೆಯಾಗಿರುತ್ತಾನೆ, ಕಾಣೆಯಾದ ತನ್ನ ಮಗನ ಚಹರೆ ಪಟ್ಟಿ 1) ವಿಮರ್ಷ ತಂದೆ ಅಣೇಪ್ಪಾ ಇಸ್ಲಾಂಪೂರ, ವಯ: 16 ವರ್ಷ, ಎತ್ತರ : 4’ 2’’, 2) ಚಹರೆ ಪಟ್ಟಿ : ಸಾಧರಣ ಮೈಕಟ್ಟು & ಗೋದಿ ಬಣ್ಣ, 3) ಧರಿಸಿದ ಬಟ್ಟೆಗಳು : ಬೂದಿ ಬಣ್ಣದ ಟಿ ಶರ್ಟ & ಕಂಪು ಪ್ಯಾಂಟ
ಹಾಗೂ 4) ಭಾಷೆ : ಕನ್ನಡ ಮತ್ತು ಹಿಂದಿ ಹಾಗು ಇಂಗ್ಲಿಷ
ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-06-2021 ರಂದು
ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.