Police Bhavan Kalaburagi

Police Bhavan Kalaburagi

Thursday, November 5, 2020

BIDAR DISTRICT DAILY CRIME UPDATE 05--11-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 05-11-2020

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 153/2020 ಕಲಂ ಮನುಷ್ಯಕಾಣೆ :-

 ದಿನಾಂಕ: 04/11/2020 ರಂದು 1500 ಗಂಟೆಗೆ ಫಿರ್ಯಾದಿ ರೇಷ್ಮಾ ಗಂಡ ಗುಂಡಪ್ಪಾ ಬಾವಿಕಟ್ಟಿ ವಯ: 27 ಸಾ/ ರಾಂಪೂರ ತಾ/ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಗೆ ಅಪ್ಪು ವರ್ಷ : 02 ವರ್ಷ, & ಆರ್ಯನ ವಯ: 04 ತಿಂಗಳು ಎಂಬ ಎರಡು ಗಂಡು ಮಕ್ಕಳಿರುತ್ತವೆ. ಫೀರ್ಯಾದಿಯ ಪತಿಯು ಪ್ಲಾಸ್ಟರ ಕೆಲಸ ಮಾಡಿಕೊಂಡಿರುತ್ತಾರೆ.  ಇವರ ಪತಿಗೆ ಸುಮಾರು 2 ವರ್ಷಗಳಿಂದ ಆಗಾಗ ಆರಾಮ ಇಲ್ಲದ ಕಾರಣ   ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು ಕೋರಗುತ್ತಿದ್ದರು. ಹೀಗಿರುವಾಗ ದಿನಾಂಕ:01/11/2020 ರಂದು ರಾತ್ರಿ  ಇವರ ಪತಿಯು ಕೆಲಸದಿಂದ ಬಂದ ನಂತರ ಇಬ್ಬರೂ ಊಟ ಮಾಡಿ ರಾತ್ರಿ 2200 ಗಂಟೆ ಸುಮಾರಿಗೆ ಮಲಗಿದ್ದು, ಬೆಳಿಗ್ಗೆ 02-03 ಗಂಟೆ ಸುಮಾರಿಗೆ ಇವರ ಚಿಕ್ಕ ಮಗು ಎದ್ದು ಅಳುತ್ತಿದ್ದು ನಾನು ಸಮಾಧಾನ ಪಡಸಿ ಮಲಗಿರುತ್ತೇನೆ. ಬೆಳಿಗ್ಗೆ 05.00 ಗಂಟೆಗೆ ಫಿರ್ಯಾದಿಯು ಎದ್ದು ನೋಡಲು ಇವರ ಪತಿಯು ಹಾಸಿಗೆಯಿಂದ ಎದ್ದು ಹೋಗಿದ್ದು ನೈಸರ್ಗಿಕ ಕ್ರಿಯೆಗೆ ಹೋಗಿರಬೇಕೆಂದು ತಿಳಿದು ಬೆಳಗಾದ ನಂತರ ನಮ್ಮ ಅತ್ತೆ ಕಮಳಾಬಾಗೆ ವಿಚಾರಿಸಲು ಅವರೂ ಸಹ ನೋಡಿಲ್ಲವೆಂದು ತಿಳಿಸಿದರು. ಮಧ್ಯಾನವಾಗಿ ಸಾಯಂಕಾಲವಾದರೂ  ಇವರ ಪತಿಯು ಮನಗೆ ಮರಳಿ ಬರದಿದ್ದಾಗ ನನ್ನ ಗಂಡನಿಗೆ ನಮ್ಮ ಭಾವಂದಿರಾದ ಚಂದ್ರಕಾಂತ ಹಾಗು ಸುರೇಶ ರವರು ನನ್ನ ಗಂಡನಿಗೆ ರಾಮಪೂರ ಹಾಗು ನನ್ನ ಗಂಡ ಕೆಲಸ ಮಾಡುವ ವಳಕಿಂಡಿಗೆಗೆ, ನಾದನಿಯ ಊರಾದ ಹಸರಗುಂಡಗಿಯಲ್ಲಿ ಹುಡಿಕಾಡಿದರೂ ಸಿಕ್ಕಿರುವುದಿಲ್ಲ. ಇವರ ಪತಿ ಗುಂಡಪ್ಪ ರವರು ದಿನಾಂಕ:03/11/2020 ರಂದು ನಸುಕಿನ ಜಾವ 03.00 .ಎಮ್. ಗಂಟೆಯಿಂದ 05.00 .ಎಮ್. ಗಂಟೆ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋದವರು ಮರಳಿ ಬರದೇ ಕಾಣೆಯಾಗಿರುತ್ತಾರೆ. ಹೆಸರು : ಗುಂಡಪ್ಪಾ, ತಂದೆ : ಪ್ರಭು ಭಾವಿಕಟ್ಟಿ, ಲಿಂಗ : ಗಂಡು, ವಯಸ್ಸು : 27 ವರ್ಷ, ಎತ್ತರ : 5’ 2’’, ಚಹರೆ ಪಟ್ಟಿ : ಸಾಧಾರಣ ಮೈಕಟ್ಟು & ಗೋಧಿ ವರ್ಣ, ಧರಿಸಿದ ಬಟ್ಟೆಗಳು : ಕೆಂಪುಬಣ್ಣದ ಟೀ-ಶರ್ಟ ಹಾಗು ಕಪ್ಪು ಪ್ಯಾಂಟ, ಭಾಷೆ : ಕನ್ನಡ, ಹಿಂದಿ ಹಾಗು ಮರಾಠಿ  ಕಾಣೆಯಾದ ನನ್ನ ಗಂಡನ್ನು ಹುಡುಕಾಡಿ ಠಾಣೆಗೆ ಬರಲು ತಡವಾಗಿರುತ್ತದೆ. ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ  ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 11/2020 ಕಲಂ 174 (ಸಿ) ಸಿಆರ್.ಪಿ.ಸಿ. :-

 

ದಿನಾಂಕ: 04-11-2020 ರಂದು 1000 ಗಂಟೆಗೆ ಶ್ರೀ ನಿಖಿಲ್ ತಂದೆ ಬಾಬುರಾವ ಪರಶೆಟ್ಟಿ 20 ವರ್ಷ   ಸಾ: ಶಿವಣಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ, ಇವರು ಇಬ್ಬರು ಸಹೊದರರಿದ್ದು ಇವರ ತಾಯಿ ಸುನೀತಾ ಮತ್ತು  ತಂಗಿ ನಿಕಿತಾ ಇವರು ಫಿರ್ಯಾದಿ ಅಜ್ಜನಾದ ನೀಲಕಂಡ ನಾಗಶಂಕರ ಇವರ ಗ್ರಾಮವಾದ ಕಾಸರ ತೂಗಾಂವ ಗ್ರಾಮದ ಅವರ ಮನೆಯಲ್ಲಿ ವಾಸವಾಗಿರುತ್ತಾರೆ. ಫಿರ್ಯಾದಿ ಮತ್ತು ಇವರ ಅಣ್ಣ ಶಿವಕುಮಾರ ತಂದೆಯ ಜೊತೆಯಲ್ಲಿ ಶಿವಣಿ ಗ್ರಾಮದಲ್ಲಿ ವಾಸವಾಗಿರುತ್ತಾರೆ ಇವರ ತಾಯಿ ಸುನೀತಾ ಇವರು 2015 ನೇ ಸಾಲಿನಲ್ಲಿ  ತಂದೆಗೆ ಬಿಟ್ಟು ಕಾಸರತೂಗಾಂವ ಗ್ರಾಮಕ್ಕೆ ಹೋಗಿ  ಅಜ್ಜನ ಹತ್ತಿರ ಅಲ್ಲಿಯೇ ಉಳಿದಿರುತ್ತಾರೆ ಹೀಗಿರಲು ದಿನಾಂಕ:02-11-2020 ರಂದು 1000 ಗಂಟೆಗೆ ಫಿರ್ಯಾದಿ ತಂದೆ ಬಾಬುರಾವ ಇವರು ಫಿರ್ಯಾದಿಯ ತಾಯಿಯ ಹತ್ತಿರ ಕಾಸರತೂಗಾಂವ ಗ್ರಾಮಕ್ಕೆ ಹೋಗಿ ಬರುತ್ತೇನೆಂದು   ಹೇಳಿ ಕಾಸರತೂಗಾಂವ ಗ್ರಾಮಕ್ಕೆ ಹೋಗಿರುತ್ತಾರೆ.  ಇವರ ತಂಗಿ ನಿಕಿತಾ ಇವಳು ನನಗೆ ಫೋನ ಮಾಡಿ ತಂದೆ ಕಾಸರತೂಗಾಂವ ಗ್ರಾಮಕ್ಕೆ ಬಂದಿರುತ್ತಾರೆ ಅಂತ ತಿಳಿಸಿರುತ್ತಾಳೆ ನಂತರ ಸಾಯಂಕಾಲ 5:00 ಗಂಟೆಗೆ ತಂದೆಯವರು ಮನೆಯಿಂದ ಬಿಟ್ಟಿರುತ್ತಾರೆ ಅಂತ ತಿಳಿಸಿರುತ್ತಾಳೆ ಆದರೆ ಇವರ ತಂದೆ ಶಿವಣಿ ಗ್ರಾಮಕ್ಕೆ ಬಂದಿರುವುದಿಲ್ಲ ಕಾಸರತೂಗಾಂವ ಗ್ರಾಮದ ನಮ್ಮ ತಾಯಿಯ ಮನೆಯ ಕಕಡೆಗೂ ಹೋಗಿರುವುದಿಲ್ಲ ಅಂದಿನಿಂದ ಎಲ್ಲಾ ಕಡೆಗೂ ಹುಡುಕಾಡಿದರೂ  ತಂದೆ ಸಿಕ್ಕಿರುವುದಿಲ್ಲ ನಂತರ ದಿನಾಂಕ:04-11-2020 ರಂದು 0800 ಗಂಟೆಗೆ ಫಿರ್ಯಾದಿ ಮತ್ತು ಸಂಜೀವಕುಮಾರ ಪರಶೆಟ್ಟಿ, ಗಣಪತಿ ಪಾರಶೆಟ್ಟಿ ಅವರೆಲ್ಲರೂ ತಂದೆಗೆ ಹುಡುಕುತ್ತಾ ಕಾಸರತೂಗಾಂವ ಗ್ರಾಮದ ನದಿಯ  ಕಡೆಗೆ ಹೋದಾಗ ನದಿಯಲ್ಲಿ ಮೃತಪಟ್ಟ ಮೃತ ದೇಹ ಇರುತ್ತದೆ. ಇವರ ತಂದೆಯವರು ಜೀವನದಲ್ಲಿ ಜಿಗಪ್ಸೆ ಹೊಂದಿ ಸತ್ತಿರುತ್ತಾರೆ   ಯಾರ ಮೇಲೆ ಯಾವುದೇ ತರಹದ ದೂರು ವಗೈರೆ ಇರುವುದಿಲ್ಲ ಮೃತಪಟ್ಟ ಬಗ್ಗೆ ಸಂಶಯ ಇರುತ್ತದೆ. ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ   ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.