ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-02-2020
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 22/2020, ಕಲಂ. 279, 337, 338, 304 (ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 13-02-2020
ರಂದು ಫಿರ್ಯಾದಿ ಹಣಮಂತರೆಡ್ಡಿ ತಂದೆ ವಿಶ್ವನಾಥರೆಡ್ಡಿ ಉದಗಿರೆ ಸಾ: ಕವಡಿಯಾಳ, ತಾ: ಬಸವಕಲ್ಯಾಣ
ರವರ ಭಾವ ಸುಭಾಷರೆಡ್ಡಿ ತಂದೆ ಲಕ್ಷ್ಮಣರೆಡ್ಡಿ ಬೊರೆಡ್ಡಿ ಸಾ: ಚೀನಕೇರಾ ರವರು ರವರು ತನ್ನ
ದೊಡ್ಡಪ್ಪನ ಮಗನಾದ ಗೋಪಾಲರೆಡ್ಡಿ ತಂದೆ ಭರತರೆಡ್ಡಿ ಸಾ: ಚೀನಕೇರಾ ರವರು ಚಲಾಯಿಸುತ್ತಿದ್ದ
ಮೊಟಾರ್ ಸೈಕಲ್ ನಂ. ಕೆಎ-39/ಕ್ಯೂ-3790 ನೇದರ ಮೇಲೆ ಕವಡಿಯಾಳ ಗ್ರಾಮಕ್ಕೆ ಬಂದು ನಂತರ ದಿನಾಂಕ 14-02-2020
ರಂದು ಹಳ್ಳಿಖೇಡ(ಬಿ) ಸೀಮೆ ನಾಗಣ್ಣಾ ದೇವಸ್ಥಾನದಲ್ಲಿ ತಮ್ಮ ಸಂಬಂಧಿಕರ ಜವಳ ಕಾರ್ಯಕ್ರಮಕ್ಕೆ
ಹೋಗುವ ಪ್ರಯುಕ್ತ ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ ಮೇಲೆ ಅಕ್ಕ ಜಗದೇವಿ ಗಂಡ ಸುಭಾಷರೆಡ್ಡಿ
ಇವರಿಗೆ ಕೂಡಿಸಿಕೊಂಡಿದ್ದು, ಗೋಪಾಲರೆಡ್ಡಿ ಇವರು ತನ್ನ ಮೊಟಾರ್ ಸೈಕಲ್ ನಂ. ಕೆಎ-39/ಕ್ಯೂ-3790
ನೇದರ ಮೇಲೆ ಭಾವ ಸುಭಾಷರೆಡ್ಡಿ ಇವರಿಗೆ ಕೂಡಿಸಿಕೊಂಡು ಕವಡಿಯಾಳ ಗ್ರಾಮದಿಂದ ಹುಮನಾಬಾದ
ಮಾರ್ಗವಾಗಿ ಹಳ್ಳಿಖೇಡ(ಬಿ) ಸೀಮೆ ನಾಗಣ್ಣಾ ದೇವಸ್ಥಾನಕ್ಕೆ ಹೋಗುತ್ತಿರುವಾಗ ಧೂಮ್ಮನಸೂರ –
ಬಾಗನಗೌಡ ರವರ ಹೊಲದ ಹತ್ತಿರ ಬಂದಾಗ ರಾ.ಹೆ. ನಂ.
50 ಬೀದರ – ಹುಮನಾಬಾದ ರೋಡಿನ ಮೇಲೆ ಎದುರಿನಿಂದ ಅಂದರೆ ಬೀದರ ಕಡೆಯಿಂದ ಕ್ರೂಜರ್ ಜೀಪ ನಂ. ಕೆಎ-36/ಎಮ್-7784
ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು
ಬಂದು ಗೋಪಾಲರೆಡ್ಡಿ ರವರು ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಮಾಡಿ ನಂತರ ರೋಡಿನ
ಬದಿಯಲ್ಲಿರುವ ರೋಡ ಸೆಪ್ಟಿ ಸಿಮೆಂಟ್ ಕಂಬಗಳಿಗೆ ಡಿಕ್ಕಿ ಹೊಡೆದು ತನ್ನ ಕ್ರೂಸರ್ ಜೀಪನ್ನು
ರೋಡಿನ ಬದಿಯ ತಗ್ಗಿನಲ್ಲಿ ಪಲ್ಟಿ ಮಾಡಿ ತನ್ನ ಕ್ರೂಸರ್ ಜೀಪನ್ನು ಸ್ಥಳದಲ್ಲೇ ಬಿಟ್ಟು ಓಡಿ
ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಸುಭಾಷರೆಡ್ಡಿ ಇವರಿಗೆ ನೋಡಲಾಗಿ ಅವರಿಗೆ ಎದೆಗೆ ಗುಪ್ತಗಾಯ
ಮತ್ತು ಬಲಗಾಲಿಗೆ ತೀವ್ರ ರಕ್ತಗಾಯಗಳು ಆಗಿರುತ್ತವೆ, ನಂತರ ಗೋಪಾಲರೆಡ್ಡಿ ರವರಿಗೆ ನೋಡಲಾಗಿ ಅವರ
ಹಣೆಯ ಬಲಗಡೆಗೆ, ಬಲತೊಡೆಗೆ ತೀವ್ರ ರಕ್ತಗಾಯ ನಂತರ ಕ್ರೂಸರ್ ಜೀಪನಲ್ಲಿದ್ದ ಸುನಿಲಕುಮಾರ ತಂದೆ
ಬಸಪ್ಪಾ ಹಡಪದ ಸಾ: ಖಟಕಚಿಂಚೊಳಿ ರವರಿಗೆ ನೋಡಲಾಗಿ ಅವರ ತಲೆಗೆ ರಕ್ತಗಾಯ ಮತ್ತು ಬಲಭುಜಕ್ಕೆ
ತರಚಿದ ಗಾಯಗಳು ಆಗಿರುತ್ತವೆ, ಅನಿತಾ ಗಂಡ ಜಯರಾಜ ಸಾ: ಜೇವರ್ಗಿ ರವರಿಗೆ ಎಡಕೀವಿಗೆ ತೀವ್ರ
ರಕ್ತಗಾಯವಾಗಿರುತ್ತದೆ, ನಂತರ ಎಲ್ಲರಿಗು 108 ಅಮಬುಲೇನ್ಸನಲ್ಲಿ ಕೂಡಿಸಿಕೊಮಡು ಜಿಲ್ಲಾ ಸರ್ಕಾರಿ
ಆಸ್ಪತ್ರೆ ಬೀದರಗೆ ತೆಗೆದುಕೊಂಡು ಹೋಗುತ್ತಿರುವಾಗ ಗೋಪಾಲರೆಡ್ಡಿ ರವರು ದಾರಿಮದ್ಯ ಸಿಂದಬಂದಗಿ
ಗ್ರಾಮದ ಹತ್ತಿರ ಮ್ರತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಮೌಖಿಕ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ.
22/2020, ಕಲಂ. ಮಹಿಳೆ ಕಾಣೆ
:-
ಫಿರ್ಯಾದಿ ಸುರೇಶ ತಂದೆ ಅಮೃತಪ್ಪಾ ಪಾಪಡೆ, ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಕೊಳಾರ(ಕೆ) ರವರ ಶ್ವೇತಾ ವಯ: 21 ವರ್ಷ ಇವಳು ಡಿ-ಫಾರ್ಮಸಿ ವಿದ್ಯಾಭ್ಯಾಸವನ್ನು ಸುಮಾರು
6 ತಿಂಗಳ ಹಿಂದೆ ಮುಗಿಸಿದ್ದು, ಅಂದಿನಿಂದ ಅವಳು ಕೊಳಾರ(ಕೆ) ಗ್ರಾಮದ ಮನೆಯಲ್ಲಿ ವಾಸವಾಗಿದ್ದು, ಅವಳು
ಹೈ ಸ್ಕೂಲ ವಿದ್ಯಾಭ್ಯಾಸವನ್ನು ಮಿಲೆನಿಯಮ್ ಸ್ಕೂಲದಲ್ಲಿ ಮತ್ತು ಪಿ.ಯು.ಡಿ ಪ್ರಥಮ ಮತ್ತು
ದ್ವೀತಿಯ ವರ್ಷವನ್ನು ಮಾತೇ ಮಾಣಿಕೇಶ್ವರಿ ಕಾಲೇಜಿನಲ್ಲಿ ಅಭ್ಯಾಸ ಮಾಡಿರುತ್ತಾಳೆ, ಅವಳು
ಮಿಲೆನಿಯಮ್ ಸ್ಕೂಲದಲ್ಲಿ ಅಭ್ಯಾಸ ಮಾಡುತ್ತಿದ್ದ ಅವಧಿಯಲ್ಲಿ ಅವಳ ಕ್ಲಾಸ ಟೀಚರ್ ಎಂದು ಪ್ರದೀಪ
ಎಂಬುವವರು ಇದ್ದರೆಂದು ವಿಷಯ ಗೊತ್ತಿರುತ್ತದೆ, ಹೀಗಿರುವಾಗ ದಿನಾಂಕ 10-02-2020 ರಂದು ಶ್ವೇತಾ
ಇವಳಿಗೆ ಫಿರ್ಯಾದಿಯವರ ಅಕ್ಕಳಾದ ನಿರ್ಮಲಾ ರವರ ಬೀದರ ಶಿವನಗರ ದಕ್ಷಿಣದಲ್ಲಿನ ಮನೆಯಲ್ಲಿ ಬಿಟ್ಟು
ಹೋಗಿದ್ದು ಅವಳು ದಿನಾಂಕ 12-02-2020 ರಂದು 1100 ಗಂಟೆಗೆ ತಾನು ಕಾಲೇಜಿಗೆ ಹೋಗಿ
ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು ಇನ್ನು ಮರಳಿ ಮನೆಗೆ ಬಂದಿರುವುದಿಲ್ಲವೆಂದು ಅಕ್ಕ ತಿಳಿಸಿದ
ಮೇರೆಗೆ ಫಿರ್ಯಾದಿಯು ಅಕ್ಕಳ ಮನೆಗೆ ಬಂದು ವಿಚಾರಿಸಿ ನಂತರ ಅವಳು ಅಭ್ಯಾಸ ಮಾಡಿದ
ಪ್ರತಾಪನಗರದಲ್ಲಿನ ವಿದ್ಯಾವಿಕಾಸ ಕಾಲೇಜಿಗೆ ಹೋಗಿ ನೋಡಲಾಗಿ ಅವಳು ಅಲ್ಲಿಯೂ ಸಹ ಇರಲಿಲ್ಲ, ವಿಚಾರಿಸಲಾಗಿ
ಕಾಲೇಜಿನಲ್ಲಿ ಬಾಕಿ ಇದ್ದ 25,000/- ರೂ. ಶುಲ್ಕ ಯಾರೋ ಪ್ರದೀಪ ಎಂಬುವವರು ಕಟ್ಟಿರುತ್ತಾರೆಂದು
ಮತ್ತು ನಿಮ್ಮ ಮಗಳು ಕಾಲೇಜಿನಲ್ಲಿನ ಎಲ್ಲಾ ಡಾಕುಮೆಂಟಗಳನ್ನು ತೆಗೆದುಕೊಂಡು ಹೋಗಿರುತ್ತಾಳೆಂದು
ತಿಳಿಸಿದರು, ನಂತರ ಮಗಳು ಕಾಣೆಯಾದ ಬಗ್ಗೆ ತಮ್ಮ ಎಲ್ಲಾ ಸಂಬಂಧಿಕರಲ್ಲಿ ಹುಡುಕಾಡಿದ್ದು ಎಲ್ಲಿಯೂ
ಸಹ ಮಗಳು ಸಿಕ್ಕಿರುವುದಿಲ್ಲ, ಮಗಳಾದ ಶ್ವೇತಾ ವಯ 21 ವರ್ಷ ಇವಳು ದಿನಾಂಕ 12-02-2020 ರಂದು 1100
ಗಂಟೆಯಿಂದ ಬೀದರ ಶಿವನಗರ ದಕ್ಷಿಣದಲ್ಲಿನ ಫಿರ್ಯಾದಿಯವರ ಅಕ್ಕಳ ಮನೆಯಿಂದ ಕಾಣೆಯಾಗಿರುತ್ತಾಳೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ
ಪೊಲೀಸ್ ಠಾಣೆ ಅಪರಾಧ ಸಂ. 14/2020, ಕಲಂ. 279, 337, 338 ಐಪಿಸಿ :-
ದಿನಾಂಕ 14-02-2020 ರಂದು
ಫಿರ್ಯಾದಿ ಶ್ರೀನಿವಾಸ ತಂದೆ ಬಕಪ್ಪಾ ಸಿಂಧೆ ವಯ:
42 ವರ್ಷ, ಜಾತಿ: ಹೋಲೆಯ, ಸಾ: ಖಾಸೆಂಪೂರ (ಪಿ), ತಾ: ಜಿ: ಬೀದರ ರವರು ಹಾಗು ಸಂಜುಕುಮಾರ ತಂದೆ ಬಕ್ಕಪ್ಪಾ ಜ್ಯೋತಿ ವಯ: 40 ವರ್ಷ ಸಾ: ಖಾಸೆಂಪೂರ(ಪಿ) ಇಬ್ಬರೂ ಕೂಡಿಕೋಂಡು ಮೋಟಾರ
ಸೈಕಲ್ ನಂ. ಎಪಿ-29/ಎಡಿ-9975 ನೇದರ ಮೇಲೆ ಮುಸ್ತರಿ ಗ್ರಾಮದಲ್ಲಿ ತಮ್ಮ ಸಂಬಂಧಿಕರ ದೇವರ ಕಾರ್ಯಕ್ಕಾಗಿ ಹೊಗಿ, ದೇವರ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಬರುವ ಸಲುವಾಗಿ ಉಡಬಾಳ ಗ್ರಾಮದ ಮೂಲಕ ನಿರ್ಣಾ ಕಡೆಗೆ ಬರುತ್ತಿರುವಾಗ ಸಂಜುಕುಮಾರ ಇತನು ವಾಹನ ಚಲಾಯಿಸುತ್ತಿದ್ದು ನಿರ್ಣಾ ಗ್ರಾಮದ ಅಶೋಕ ರಡ್ಡಿ ಲಚ್ಚಣಗಾರ ರವರ ಹೊಲದ
ಹತ್ತಿರ ಬರುತ್ತಿರುವಾಗ ನಿರ್ಣಾ ಕಡೆಯಿಂದ ಒಂದು ಟಾಟಾ ಇಂಡಿಕಾ ಕಾರ ನಂ. ಕೆಎ-04/ಎಮ್.ಸಿ-3451
ನೇದರ ಚಾಲಕನಾದ ಆರೋಪಿ ಸಾಯಿನಾಥ ರಡ್ಡಿ ತಂದೆ ಸುಭಾಷ ರಡ್ಡಿ ಯಾಚೆ
ವಯ: 23 ವರ್ಷ, ಜಾತಿ: ರಡ್ಡಿ, ಸಾ: ಬೇಳ್ಳುರ, ತಾ: ಬೀದರ ಇತನು ತನ್ನ ಕಾರನ್ನು ಅತಿವೇಗ ಹಾಗು ನೀಷ್ಕಾಳಜಿತನದಿಂದ ಚಲಾಯಿಸಿಕೋಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ ಫಿರ್ಯಾದಿಯ ಮೂಗಿನ ಹತ್ತಿರ ತರಚಿದ ಗಾಯ, ಮುಖಕ್ಕೆ ತರಚಿದ ಗಾಯ ಮತ್ತು ಬಲಗಾಲ ಪಾದದ ಹತ್ತಿರ ಮತ್ತು
ಬೆರಳುಗಳಿಗೆ ತರಚಿದ ರಕ್ತ ಗಾಯವಾಗಿದ್ದು, ನಂತರ
ಸಂಜುಕುಮಾರ ಇತನಿಗೆ ನೋಡಲು
ಆತನ ತುಟಿಯ ಮೇಲೆ ತರಚಿದ ಗಾಯ ಹಾಗು ಎಡಗಾಲಿನ ಪಾದದ
ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಸದರಿ
ಘಟನೆ ಸಮಯದಲ್ಲಿ ಹಾಜರಿದ್ದ ಸುಂದರ ತಂದೆ ಕೀಶೋರ ಭಾವಿಕಟ್ಟಿ ಸಾ: ಬಕಚೌಡಿ ಹಾಗು ರಾಜು ತಂದೆ ಮಾರುತರಾವ ಗುಬ್ಬಿ ಸಾ: ಬಕಚೌಡಿ ರವರ ಸÀಹಾಯದಿಂದ ಒಂದು ವಾಹನದಲ್ಲಿ ಇಬ್ಬರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 25/2020, ಕಲಂ. 279,
337, 338 ಐಪಿಸಿ :-
ದಿನಾಂಕ 14-02-2020 ರಂದು ಫಿರ್ಯಾದಿ ಶೇಖ ಉಮರ
ಪಾರೂಖ್ ತಂದೆ ಶೇಕ ಮೆಹಬೂಬ, ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಚಿಕ್ಕಪೇಟ, ತಾ: ಬೀದರ ರವರ
ತಂದೆಯವರು ಬೀದರ ಕಡೆಯಿಂದ ಚಿಕ್ಕಪೇಟ ಕಡೆಗೆ ನಡೆದುಕೊಂಡು ಚಿಕ್ಕಪೇಟ ಹತ್ತಿರ ಇರುವ ಜೈಭವಾನಿ
ಆಟೋ ಮೊಬೈಲ್ ಅಂಗಡಿ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಬೀದರ ಕಡೆಯಿಂದ ಮೊಟಾರ ಸೈಕಲ ನಂ. ಕೆಎ-32/ಎಸ್02193
ನೇದ್ದರ ಸವಾರನಾದ ಆರೋಪಿ ಕಲ್ಯಾಣರಾವ ತಂದೆ ಹಣಮಂತರಾವ ಹಳ್ಳಿಖೇಡ, ವಯ: 36 ವರ್ಷ, ಜಾತಿ: ಲಿಂಗಾಯತ,
ಸಾ: ಹಿಲಾಲಪೂರ, ತಾ: ಬೀದರ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ತಂದೆಗೆ ಡಿಕ್ಕಿ ಮಾಡಿ ತಾನು ಮೊಟಾರ ಸೈಕಲ ಸಮೇತ
ಬಿದ್ದಿರುತ್ತಾನೆ, ಪರಿಣಾಮ ತಂದೆಗೆ ತಲೆಯಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ, ಆರೋಪಿಗೆ ಮುಖದ
ಮೇಲೆ ರಕ್ತಗಾಯ ಮತ್ತು ಬಲಗಾಲ ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಮಹ್ಮದ ಸಾಜೀದ
ತಂದೆ ಜಾಫರಮಿಯಾ, ವಯ: 36 ವರ್ಷ, ಜಾತಿ: ಮುಸ್ಲಿಂ, ಸಾ: ಚಿಕ್ಕಪೇಟ, ಬೀದರ ರವರು ಇಬ್ಬರಿಗೂ ಚಿಕಿತ್ಸೆ ಕುರಿತು
ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.