Police Bhavan Kalaburagi

Police Bhavan Kalaburagi

Thursday, July 18, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಚಂದ್ರಕಾಂತ ತಂದೆ ಶಿವಪ್ಪಾ ರಾಗಿ ಸಾ: ನರೋಣಾ ರವರು ದಿನಾಂಕ 16/07/2019 ರಂದು ನನಗೆ ಚಿಂಚನಸೂರ ಗ್ರಾಮದಲ್ಲಿ ನನ್ನ ಖಾಸಗಿ ಕೆಲಸವಿದ್ದುದ್ದರಿಂದ ನಾನು ನನ್ನ ಮೋಟರ ಸೈಕಲ ಮೇಲೆ ನರೋಣಾ ಗ್ರಾಮದಿಂದ ಚಿಂಚನಸೂರ ಗ್ರಾಮದ ಕಡೆ ಹೋಗುವಾಗ ಮದ್ಯಾಹ್ನ 2 ಗಂಟೆಯ ಸುಮಾರಿಗೆ ನರೋಣಾ ಗ್ರಾಮದಿಂದ 1 ಕೀ, ಮಿ ಅಂತರದಲ್ಲಿ ಇರುವ ಎರುಡಿ ನಾಲದ ಹತ್ತಿರ ಮೂತ್ರ ವಿಸರ್ಜನೆ ಮಾಡುವ ಸಲೂವಾಗಿ ನನ್ನ ಮೊಟರ ಸೈಕಲನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿದೆನು. ನಾನು ಮೂತ್ರ ವಿಸರ್ಜನೆ ಮಾಡುವಾಗ ಆಕಸ್ಮಿಕವಾಗಿ ನಾನು ಫುಲ ಕೇಳಗೆ ಇರುವ ನಾಲದಲ್ಲಿ ನೋಡಿದಾಗ ಒಬ್ಬ ವ್ಯಕ್ತಿಯು ಬೊರಲು ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದರಿಂದ ನಾನು ಮೂತ್ರ ವಿಸರ್ಜನೆ ಮಾಡಿ ಹತ್ತಿರ ಹೋಗಿ ನೋಡಿದಾಗ ಒಬ್ಬ ವ್ಯಕ್ತಿಯು ಅಂದಾಜು 20 ರಿಂದ 25ವರ್ಷದ ಅಂದಾಜು 5', 5'' ಎತ್ತರದ ಸಾದಾರಣ ಮೈಕಟ್ಟುನವನಿದ್ದು ಸದರಿಯವನು ಬೋರಲು ಬಿದ್ದಿದ್ದು ಆತನ ತಲೆ ಸಂಪೂರ್ಣವಾಗಿ ಜಜ್ಜಿದ್ದು ತಲೆಯ ಮೇಲಿನ ಮಾಂಸ ಖಂಡ ಇರುವದಿಲ್ಲಾ, ತಲೆ ಬುರುಡೆ ಹೊರಬಿದ್ದಿರುತ್ತದೆ. ತಲೆಗೂದಲು ಅಲ್ಲಲ್ಲಿ ಮೆತ್ತಿದಂತೆ ಕಂಡುಬಂದಿರುತ್ತದೆ. ಸದರಿಯವನ ಎಡಗೈಯ ಮಣಿಕಟ್ಟು ಹಾಗು ಮುಂಗೈ ಮದ್ಯೆ ಭಾರಿ ಗಾಯ ಕಂಡುಬಂದಿರುತ್ತದೆ. ಮೈಮೇಲೆ ಒಂದು ಹಳದಿ ಬಣ್ಣದ ಪ್ಲೆನ ಶರ್ಟ ಉದ್ದ ತೊಳಿನದ್ದು, ಮೊಣಕೈವರೆಗೆ ಮಡಚಿರುತ್ತಾನೆ. ಒಂದು ಕಂದು ಬಣ್ಣದ ನೀಲಿ ಪ್ಯಾಂಟ ಧರಿಸಿದ್ದಾನೆ. ಸೊಂಟದಲ್ಲಿ ಒಂದು ಕೆಂಪು ನೈಲನ ಬೆಲ್ಟ, ಹಾಗು ಬಾಕ್ಲೆಟ ಬಣ್ಣದ ಕಂಪನಿ ಅಂಡರವೇರ ಧರಿಸಿದ್ದಾನೆ. ಸದರಿಯವನ ಶವ ಬಿದ್ದ ಸ್ಥಳದಲ್ಲಿಯೇ ಶವದ ಸಮೀಪ ದೊಡ್ಡ ಗಾತ್ರದ ಸಿಮೆಂಟ ಕಾಂಕ್ರಿಟ್ ತುಕಡಿ ಇದ್ದು ಅದಕ್ಕೆ ಭಾರಿ ರಕ್ತ ಹತ್ತಿದ್ದು ಹಾಗು ಅದರ ಪಕ್ಕವೆ ಬಹಳಷ್ಟು ರಕ್ತ ಚೆಲ್ಲಿದಂತೆ ಕಂಡುಬಂದಿರುತ್ತದೆ. ಸದರಿಯವನು ಎಡಗೈ ಮಣಿಕಟ್ಟಿನ ಹಿಂಭಾಗ GS ಅಂತಾ ಹಚ್ಚೆ ಗುರುತು ಹಾಕಿಸಿಕೊಂಡಿದ್ದಾನೆ. ಬಲಗೈ ಮಣಿಕಟ್ಟಿಗೆ ಒಂದು ಬೆಳ್ಳಿ ನಮೂನೆಯ ಖಡೆ, ಒಂದು ಕಪ್ಪು ಬಣ್ಣದ ಕಾಶೀದಾರ ಹಾಗು ಇನ್ನೊಂದು ಕೆಂಪು ಹಾಗು ಬಂಗಾರ ಬಣ್ಣದ ಮಿಶ್ರಿತ ಕಾಶಿದಾರ ಕಟ್ಟಿಕೊಂಡಿರುತ್ತಾನೆ. ಸದರಿಯವನ ಮೈಬಣ್ಣ ಕಂದುಬಣ್ಣಕ್ಕೆ ತಿರುಗಿರುತ್ತದೆ. ಸದರಿಯವನಿಗೆ ಅಂದಾಜು ದಿನಾಂಕ 15/07/2019 ರಂದು ರಾತ್ರಿ 8 ಗಂಟೆಯಿಂದ ಅಂದಾಜು ರಾತ್ರಿ 9 ಗಂಟೆಯ ಅವಧಿಯಲ್ಲಿ ಯಾರೊ ಯಾವುದೋ ದುರುದ್ದೇಶದಿಂದ ದೊಡ್ಡ ಗಾತ್ರದ ಸಿಮೆಂಟ ತುಕಡಿಯಿಂದ ತಲೆಗೆ ಜಜ್ಜಿ ಜಜ್ಜಿ ಕೋಲೆಮಾಡಿ ಸತ್ತ ವ್ಯಕ್ತಿಯ ಗುರ್ತು ಸಿಗದಂತೆ ಮಾಡಿರುತ್ತಾರೆ. ಇದನ್ನು ನೋಡಿ ನಾನು ರೋಡಿನ ಮೇಲೆ ಬಂದು ರೊಡಿನ ಗುಂಟಾ ಮೊಟರ ಸೈಕಲ ಮೇಲೆ ಹೊರಟಂತಾ ಶ್ರೀ ಪ್ರಹ್ಲಾದ ತಂದೆ ಮಾಪಣ್ಣಾ ಸಂಗೊಳಗಿ ಸಾ: ಸಂಗೊಳಗಿ(ಸಿ), ದೇವಿಂದ್ರ ತಂದೆ ರಾಮಚಂದ್ರ ದೊಡ್ಡಮನಿ ಸಾ: ಸಂಗೊಳಗಿ(ಸಿ), ಮಲ್ಲಿಕಾರ್ಜುನ ಮದಲಿ ಸಾ: ನರೋಣಾ, ಬಾಬು ಬಿಲ್ ಕಲೆಕ್ಟರ ಸಾ: ಕುಶಪ್ಪನ ತಾಂಡಾ ಇವರೆಲ್ಲರಿಗೆ ತಿಳಿಸಿದ್ದರಿಂದ ಸದರಿಯವರು ಕೂಡಾ ನೋಡಿದ್ದು ಸತ್ತ ವ್ಯಕ್ತಿಯ ಗುರ್ತು ಸಿಕ್ಕಿರುವದಿಲ್ಲಾ. ಕಾರಣ ತಾವು ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕೋಲೆ ಮಾಡಿದವರನ್ನು ಪತ್ತೆ ಹಚ್ಚಲು ಹೇಳಿ ಬರೆಸಿದ ಫಿರ್ಯಾದಿ ನೀಜ ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲೆ ನರೋಣಾ ಠಾಣೆ ಗುನ್ನೆ ನಂ 99/2019 ಕಲಂ 302 201 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ:17/07/2019  ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಇಂಗಳಗಿ ಗ್ರಾಮದ ಬಸಸ್ಟ್ಯಾಂಡ ಹತ್ತಿರ ರೊಡಿಗೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು ನಿಂತು ಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂ ಗೆಲ್ಲಿರಿ ಅಂತಾ ಕೂಗಾಡುತ್ತಾ ಜನರಿಗೆ ಮೋಸ ಮಾಡಿ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ವಾಡಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿಎಸ್.ಪಿ ಸಾಹೇಬರು ಶಹಾಬಾದ ಉಪ ವಿಭಾಗ ಹಾಗೂ ಮಾನ್ಯ ಸಿಪಿಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ಹೊರಟು ಇಂಗಳಗಿ ಗ್ರಾಮದ ಬಸಸ್ಟ್ಯಾಂಡ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಕೆಳಗಡೆ ಇಳಿದು ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಸದರಿಯವರು ಮಟಕಾ ಅಂಕಿ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ಮಟಾಕಾ ನಂಬರ ಬರೆಸುತ್ತಿದ್ದವರು ನಮ್ಮ ಪೊಲೀಸ ಸಮವಸ್ತ್ರ ನೋಡಿ ಓಡಿ ಹೋಗಿದ್ದು  ಸಿಬ್ಬಂದಿಯವರ ಸಹಾಯದಿಂದ ಒಬ್ಬ ವ್ಯಕ್ತಿಯನ್ನು ಹಿಡಿದುಕೊಂಡು ಆತನಿಗೆ ಅವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಪೀರಮಹ್ಮದ ತಂದೆ ಅಕ್ಬರ್ ಅನ್ಸಾರಿ ಸಾ:ಮಹೇಬುಬಸುಬಾನಿ ಏರಿಯಾ ದರ್ಗಾ ಹತ್ತಿರ ವಾಡಿ ಅಂತಾ ತಿಳಿಸಿದ್ದು ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ನಗದು ಹಣ 1850/- ರೂಪಾಯಿ, ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ಜಪ್ತು ಪಡಿಸಿಕೊಂಡು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು  ಠಾಣೆ ಗುನ್ನೆ ನಂಬರ 78/2019 ಕಲಂ:78(3) ಕೆ.ಪಿ ಕಾಯ್ದೆ ಸಂಗಡ 420 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟಿಪ್ಪರ ಮತ್ತು ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 16-07-2019 ರಂದು  ಅಫಜಲಪೂರ ಠಾಣಾ ವ್ಯಾಪ್ತಿಯ  ಸೋನ್ನ ಗ್ರಾಮದ ಭೀಮಾನದಿಯಿಂದ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹೋಸ ಸೋನ್ನ ಗ್ರಾಮದ ಹತ್ತೀರ ಹೋಗುತ್ತಿದ್ದಂತೆ  ಎದುರುಗಡೆ ಒಂದು ಟ್ರ್ಯಾಕ್ಟರ ಬರುವದನ್ನು ನಮ್ಮ ಜೀಪಿನ ಲೈಟಿನಲ್ಲಿ ಕಂಡು ಬಂತು ಆಗ ನಾವು ನಮ್ಮ ಜೀಪ ನಿಲ್ಲಿಸಿ ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿದ್ದು ನಾವು ಟ್ರ್ಯಾಕ್ಟರ ಹತ್ತೀರ ಹೋಗುತ್ತೀರುವದನ್ನು ಕಂಡು ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು ಟ್ಯಾಕ್ಟರ ಚಾಲಕನನ್ನು ಸುತ್ತ ಮುತ್ತಲು ನೋಡಲು ಪರಾರಿ ಆಗಿದ್ದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಅರ್ಜುನ ಮಹೆಂದ್ರಾ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರ, CH NO:- MBNBEBBBAJZJ01355 ENG NO:-ZJJ2TAP3789 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಹಾಕಿರುವುದಿಲ್ಲ. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳೂ ತುಂಬಿದ್ದು ಸದರಿ ಮರುಳಿನ ಅಂದಾಜು ಕಿಮ್ಮತ್ತು 3,000/- ರೂ ಇರಬಹುದು ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುಕೊಂಡು ಬರುತ್ತಿದ್ದ ಟ್ರ್ಯಾಕ್ಟರ ಚಾಲಕ & ಮಾಲಿಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವರದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 123/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 14-07-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಘತ್ತರಗಾ ಗ್ರಾಮದ ಭೀಮಾನದಿಯಲ್ಲಿ ಟಿಪ್ಪರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಘತ್ತರಗಾ ಗ್ರಾಮದ ಅಂಬೇಡ್ಕರ ನಗರದ ಕಡೆಗೆ ಹೋಗುತ್ತಿದ್ದಾಗ ಘತ್ತರಗಾ ಭೀಮಾ ನದಿಯ ಕಡೆಯಿಂದ ಒಂದು ಟಿಪ್ಪರ ಬರುತ್ತಿದ್ದು, ಸದರಿ ಟಿಪ್ಪರನ್ನು ನಿಲ್ಲಿಸಿ ಚೆಕ್ ಮಾಡಬೆಕೆಂದು ಟಿಪ್ಪರ ಚಾಲಕನಿಗೆ ಟಿಪ್ಪರ ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟಾಗ, ಸದರಿ ಟಿಪ್ಪರ ಚಾಲಕ ತನ್ನ ಟಿಪ್ಪರ ಹೆಡ್ ಲೈಟ ಬೆಳಕಿನಲ್ಲಿ ನಮ್ಮ ಪೊಲೀಸ್ ಜೀಪನ್ನು ನೋಡಿ ಟಿಪ್ಪರನ್ನು ದೇಸಾಯಿ ಕಲ್ಲೂರ ರೋಡಿನಿಂದ ಭಾಗ್ಯವಂತಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ನಿಲ್ಲಿಸಿ ಕತ್ತಲಲ್ಲಿ ಓಡಿ ಹೋದನು.  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಸಿ-6779 ಇರುತ್ತದೆ. ಸದರಿ ಟಿಪ್ಪರ .ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ .ಕಿ 10.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ  ಬಂದು  ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಟಿಪ್ಪರ ಚಾಲಕ & ಟಿಪ್ಪರ ಮಾಲಿಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವರದಿ ನೀಡಿದರ ಸಾರಂಶದ ಮೇಲಿಂದ ಠಾಣೆಯ ಗುನ್ನೆ ಸಂ 120/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮಂತ ತಂದೆ ತೇಜಪ್ಪ ಸಾಲೋಟಗಿ ಸಾ: ಭೂಯ್ಯಾರ ತಾ:ಇಂಡಿ ರವರು ಅಫಜಲಪೂರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ನಮ್ಮ ಸಂಭಂದಿಕರೊಬ್ಬರಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಮಾತನಾಡಿಸಲು ಹೋಗಿ ಬರುತ್ತೇವೆ ಅಂತ ನನ್ನ ಹೆಂಡತಿಯಾದ ಮಾಯವ್ವ ಇವಳು ಹೇಳಿದ್ದರಿಂದ ದಿನಾಂಕ:30/06/2019 ರಂದು ಬೆಳಿಗ್ಗೆ ನಮ್ಮ ಗ್ರಾಮದ ಚನ್ನಪ್ಪ ತಂದೆ ಹಣಮಂತ ನಾಟಿಕಾರ ರವರ ಜೀಪ ನಂಬರ ಕೆ,-17 ಎಮ್-3796 ನೇದ್ದನ್ನು ತಯಾರು ಮಾಡಿ ಅದರಲ್ಲಿ ನನ್ನ ಹೆಂಡತಿ ಮಾಯವ್ವ ಹಾಗೂ ನನ್ನ ತಾಯಿಯಾದ ಪುತಳಾಬಾಯಿ ಮತ್ತು ನನ್ನ ಅಣ್ಣತಮ್ಮಕಿಯ ಗಂಗವ್ವ ಗಂಡ ಶೀವಯೋಗೆಪ್ಪ ನಮ್ಮ ಸಂಬಂಧಿಕರಾದ ಶಾಂತವ್ವ ಗಂಡ ಭೀಮಣ್ಣ ತಡಲಗಿ  ರವರೆಲ್ಲರಿಗೂ ತಯಾರು ಮಾಡಿ ಜೀಪನಲ್ಲಿ ಕೂಡಿಸಿ ನಮ್ಮ ಗ್ರಾಮದಿಂದ 8-30 ,ಎಮ್.ಕ್ಕೆ ಕಳೂಹಿಸಿಕೊಟ್ಟಿರುತ್ತೇನೆ ಸದರಿ ಜೀಪನ್ನು ಅದರ ಚಾಲಕನಾದ ನಮ್ಮ ಗ್ರಾಮದ ಸೈಬಣ್ಣ ತಂದೆ ಜೀವಪ್ಪ ನಾಟಿಕಾರ ಈತನು ನಮ್ಮ ಗ್ರಾಮದಿಂದ ತಗೆದುಕೊಂಡು ಬಂದಿರುತ್ತಾನೆ ನಂತರ ನನಗೆ 9-40 ,ಎಮ್,ಸುಮಾರಿಗೆ ನಮ್ಮ ಗ್ರಾಮದಲ್ಲಿ ಮಾತನಾಡುವದನ್ನು ಕೇಳಿ ಗೋತ್ತಾಗಿದ್ದೆನಂದರೆ ಸದರಿ ಜೀಪನ ಚಾಲಕನಾದ ಸೈಬಣ್ಣ ಈತನು 9-30 ,ಎಮ್,ಸುಮಾರಿಗೆ ಜೀಪನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿ ಮಣ್ಣೂರದಿಂದ ಕರಜಗಿ ಹೋಗುವ ಮುಖ್ಯೆ ರಸ್ತೆ ಪಕ್ಕ ಶೀವೂರ ಕ್ರಾಸ ಸ್ವಲ್ಪ ಮುಂದೆ ಇರುವಾಗ ರೋಡ ಪಕ್ಕ ಪಲ್ಟಿಮಾಡಿರುತ್ತಾನೆ ಅಂತ ಗೊತ್ತಾಯಿತು ಆಗ ನಾನು ಮತ್ತು ನನ್ನ ತಮ್ಮನಾದ ಸಿದ್ದಾರಾಮ ಇಬ್ಬರು ಮೋಟಾರ ಸೈಕಲ ಮೇಲೆ ನಮ್ಮೂರಿನಿಂದ ಜೀಪ ಪಲ್ಟಿಯಾದ ಜಾಗಕ್ಕೆ ಬಂದು ನೋಡಲಾಗಿ ಜೀಪ ರೋಡಿನ ಪಕ್ಕ ಪಲ್ಟಿಯಾಗಿ ಬಿದ್ದಿತ್ತು ಮತ್ತು ಅದರಲ್ಲಿದ್ದ ನನ್ನ ಹೆಂಡತಿಗೆ ತಲೆಗೆ ಬಾರಿ ಪೆಟ್ಟು,ಬಲಗಡೆ ಮುಂಡಾಕ್ಕೆ ಭಾರಿ ಒಳಪೆಟ್ಟು,ಬೆನ್ನಿಗೆ ಹರಿದ ಗಾಯಗಳಾಗಿರುವದು ಕಂಡು ಬಂತು ನನ್ನ ತಾಯಿಗೆ ಬೆನ್ನಿಗೆ ಮತ್ತು ಸೊಂಟಕ್ಕೆ ಒಳಪೆಟ್ಟು ಆಗಿರುವದು ಕಂಡು ಬಂತು ಮತ್ತು ಗಂಗವ್ವ ಈವಳಿಗೆ ಬೆನ್ನಿಗೆ ಒಳಪೆಟ್ಟು ಮತ್ತು ಅಲ್ಲಲ್ಲಿ ಗಾಯಗಳು,ಶಾಂತವ್ವ ರವರಿಗೆ ಕಾಲಿಗೆ ಮತ್ತು ಕೈಗೆ ಗಾಯಗಳಾಗಿರುವದು ಕಂಡು ಬಂತು ನಂತರ ನನ್ನ ತಾಯಿಗೆ ಗಂಗವ್ವಳಿಗೆ,ಶಾಂತವ್ವಳಿಗೆ, ಖಾಸಗಿ ವಾಹನದಲ್ಲಿ ಕರಜಗಿ ಗ್ರಾಮದ ಖಾಸಗಿ ಆಸ್ಪತ್ರೇಗೆ ನನ್ನ ತಮ್ಮನೊಂದಿಗೆ ಕಳೂಹಿಸಿಕೊಟ್ಟು ನನ್ನ ಹೆಂಡತಿಗೆ ನಾನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೋಲಾಪೂರದ ಮುದಕಣ್ಣ ಆಸ್ಪತ್ರೇಗೆ ಸೇರಿಕೆ ಮಾಡಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ  ಠಾಣೆಯ ಗುನ್ನೆ ನಂ 121/2019 ಕಲಂ 279, 337, 338 ಐಪಿಸಿ ನೇದ್ದರ ಪ್ರಕರಣ ದಾಖಲಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ರವರ  ತವರು ಮನೆ ಹಂದರಕಿ ಗ್ರಾಮವಿದ್ದು ನಾನು 16 ವರ್ಷದ ಅಪ್ರಾಪ್ತ ವಯಸ್ಕಳಿರುವಾಗಲೆ ನಮ್ಮೂರ ಸತೀಶಕುಮಾರ ತಂದೆ ಶರಣಪ್ಪ ಇತನು ನನಗೆ ಮದುವೆಯಾಗುವದಾಗಿ ನಂಬಿಸಿ 4 ವರ್ಷಗಳಿಂದ ಆಗಾಗ ನನಗೆ ಲೈಗಿಂಕ ದೌರ್ಜನ್ಯ ಮಾಡುತ್ತಾ ಬಂದಿದ್ದು ಈ ವಿಷಯವು ನಮ್ಮ ಮನೆಯಲ್ಲಿಗೋತ್ತಾಗಿ ಆತನಿಗೆ ನಮ್ಮ ಮನೆಯವರು ಮದುವೆ ಮಾಡಿಕೋ ಅಂತಾ ಹೇಳಿದಕ್ಕೆ ಆತನು ನನಗೆ ಮದುವೆ ಮಾಡಿಕೊಳ್ಳಲು ತಿರಸ್ಕರಿಸಿದ್ದು, ನಮ್ಮ ಮನೆಯವರು ಮರ್ಯಾದೆಗೆ ಅಂಜಿ ನನಗೆ ದಿನಾಂಕ: 09-06-2019 ರಂದು ಚಿಂಚೋಳಿ ತಾಲೂಕಿನ ವಜ್ಜರಗಾಂವ ಗ್ರಾಮದ ಧರ್ಮರಾಜ ಇವರೊಂದಿಗೆ ಮದುವೆ ಮಾಡಿದ್ದು ನಾನು ಮದುವೆಯಾದ ನಂತರ ಈಗ 15 ದಿವಸಗಳ ಹಿಂದೆ ತವರು ಮನೆಗೆ ಬಂದಾಗ ಸತೀಷಕುಮಾರ ಈತನು ನಾನು ಊರಿಗೆ ಬಂದಿದ್ದುಗೋತ್ತಾಗಿ ದಿನಾಂಕ: 04-07-19 ರಂದು ರಾತ್ರಿ 02-00 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ನನಗೆ ಮನೆಯಿಂದ ಕರೆದುಕೊಂಡು ಹೋಗಿ ನಮ್ಮ ಓಣಿಯ ಅಂಬೇಡ್ಕರ ಭವನದ ಹತ್ತಿರ ನಿಲ್ಲಿಸಿದ ತನ್ನಕ್ರೂಜರ್ ವಾಹನದಲ್ಲಿ ನನಗೆ ಲೈಗಿಂಕ ದೌರ್ಜನ್ಯ ಮಾಡಿದ್ದು ಈ ವಿಷಯವು ನಮ್ಮ ಮನೆಯವರಿಗೆ ಗೋತ್ತಾಗಿ ನನಗೆ ನನ್ನ ಗಂಡನು ಬಿಟ್ಟುಕೊಟ್ಟಿದ್ದು ನಿನ್ನೆ ಬೆಳಗ್ಗೆ ನಮ್ಮ ಮನೆಯವರು ಸತೀಶಕುಮಾರ ಇವರ ಮನೆಗೆ ಕೇಳಲು ಹೋಗಿದ್ದಕ್ಕೆ ಸತೀಶಕುಮಾರ ಹಾಗು ಅವರ ತಂದೆ ಶರಣಪ್ಪ ಹಾಗು ಅವರ ಅಣ್ಣತಮ್ಮಂದಿರು ಕೂಡಿಕೊಂಡು ನನಗೆ ಹಾಗು ನಮ್ಮ ಮನೆಯವರಿಗೆ ಜಗಳಾ ತೆಗೆದು ಹಲ್ಲೆ ಮಾಡಲು ಬಂದಿದ್ದು ಅಲ್ಲದೆ ಕೊಲೆ ಮಾಡುವದಾಗಿ ಜೀವಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯ ಗುನ್ನೆ ನಂ. 118/2019 ಕಲಂ 376(2) (ಎನ್) 504, 506 ಸಂ 149 ಐ.ಪಿ.ಸಿ & ಕಲಂ 6 ಪೊಕ್ಸೊ ಕಾಯ್ದೆ-2012 ನೆದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಈರಮ್ಮಾ ಗಂಡ ಮಲ್ಲಯ್ಯಾ ಮಟಪತಿ ಸಾ : ಉಚಿತನವಾದಗಿ ರವರು  ದಿನಾಂಕ 17-07-2019 ರಂದು ಬೆಳಿಗ್ಗೆ 09:00 ಗಂಟೆಗೆ ನಾನು ಮತ್ತು ನನ್ನ ಗಂಡ ಇಬ್ಬರು ಹಳ್ಯಾಳದಲ್ಲಿರುವ ನಮ್ಮ ಹೊಲವನ್ನು ಸಾಗುವಳಿ ಮಾಡಬೆಕೆಂದು ಅಫಜಲಪೂರದ ಹಣಮಂತ ವಡ್ಡರ ಎಂಬುವವರ ಟ್ಯಾಕ್ಟರ ತಗೆದುಕೊಂಡು ಹೊಲದಲ್ಲಿ ಸಾಗುವಳಿ ಮಾಡಿಸುತ್ತಿದ್ದಾಗ ನಮ್ಮ ಭಾವನಾದ 1) ಬಸಯ್ಯ ತಂದೆ ಚನ್ನಬಸಯ್ಯ ಮಠಪತಿ ಸಾ|| ಉಚಿತನವಾದಗಿ ಹಾ|| || ಜಯ ನಗರ ಕಲಬುರಗಿ ಹಾಗೂ ನನ್ನ ಗಂಡನ ಅಕ್ಕನ ಗಂಡನಾದ 2) ಶಿವಲಿಂಗಯ್ಯ ತಂದೆ ಈರಯ್ಯ ಹಿರೇಮಠ ಸಾ|| ಹಳ್ಯಾಳ, ಹಾಗೂ ಅವರ ಹೆಂಡತಿಯಾದ 3) ಈರಮ್ಮ ಗಂಡ ಶಿವಲಿಂಗಯ್ಯ ಹಿರೇಮಠ, ಹಾಗೂ ಮಗನಾದ 4) ಧಾನಯ್ಯ ತಂದೆ ಶಿವಲಿಂಗಯ್ಯ ಹಿರೇಮಠ ಸಾ|| ಹಳ್ಯಾಳ ಮೂರು ಜನರು ನಮ್ಮ ಹತ್ತಿರ ಬಂದು ಏನೊ ಬೋಸಡಿ ಮಗನೆ ನಮಗೆ ಹೊಲದಲ್ಲಿ ಪಾಲು ಕೇಳುತ್ತಿ ಮರೂ ಜನರು ನನ್ನ ಗಂಡನೊಂದಿಗೆ ಜಗಳ ತಗೆದು ನನ್ನ ಗಂಡನಿಗೆ ಕೈಯಿಂದ ಹೊಡೆಯುತ್ತಿದ್ದಾಗ ನಾನು ಬಿಡಿಸಲು ಹೋದಾಗ ನನ್ನ ಭಾವ ಮತ್ತು ಶಿವಲಿಂಗಯ್ಯ ಇಬ್ಬರೂ ನನಗೆ ರಂಡಿ ಬೋಸಡಿ ಎಂದು ಬೈದು ನನ್ನ ಸೀರೆ ಹಿಡಿದು ಏಳದು ನನ್ನನ್ನು ನೆಲಕ್ಕೆ ಕೆಡವಿ ನನ್ನ ಮಾನಹಾನಿ ಮಾಡಿರುತ್ತಾರೆ. ನಂತರ ಬಸಯ್ಯ ಈತನು ಕಲ್ಲು ತಗೆದುಕೊಂಡು ನನ್ನ ಗಂಡನ ಎದೆಗೆ ಹೊಡೆದನು. ಧಾನಯ್ಯ ಮತ್ತು ಶಿವಲಿಂಗಯ್ಯ ಇಬ್ಬರು ನನ್ನ ಗಂಡನಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ಮತ್ತು ಟ್ಯಾಕ್ಟರ ಚಾಲಕ ಹಣಮಂತ ವಡ್ಡರ ಹಾಗೂ ದಾರಿ ಹೋಗುತ್ತಿದ್ದ ಯಾರೊ ಅಪರಿಚಿತರು ಬಂದು ನನ್ನ ಗಂಡನಿಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ, ಸದರಿಯವರು ಹೊಡೆದರಿಂದ ನನಗೆ ಯಾವುದೆ ಗಾಯಗಳು ಆಗಿರುವುದಿಲ್ಲ. ನನ್ನ ಗಂಡನಿಗೆ ಎದೆಗೆ ಮತ್ತು ಮೈಕೈಗೆ ಒಳಪೆಟ್ಟುಗಳು ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ 124/2019 ಕಲಂ:- 323. 324. 354 (ಬಿ). 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಇಟಾಬಾಯಿ ಗಂಡ ಮಲ್ಲಪ್ಪ ಶಿರನಾಳ ಸಾ: ಶೇಷಗಿರಿ ತಾ||ಅಫಜಲಪೂರ ಗಂಡನು ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ.ಶೇಷಗಿರಿ ಗ್ರಾಮದಲ್ಲಿ ನಮ್ಮ ಮನೆಯು ಹೊಲದಲ್ಲಿ ಇರುತ್ತದೆ ನಮ್ಮಂತೆ ನಮ್ಮ ಅಣ್ಣ ತಮ್ಮಕಿಯ ಶಂಕ್ರೆಪ್ಪ ತಂದೆ ಅಂಬಣ್ಣ ಶಿರನಾಳ ಈವರ ಮನೆ ಕೂಡ ನಮ್ಮ ಪಕ್ಕ ಇರುವ ಅವರ ಹೊಲದಲ್ಲಿ ಮನೆ ಇರುತ್ತದೆ.ನಮ್ಮ ಮದ್ಯೆ ಮತ್ತು ಅವರ ಕುಟಂಬ ಮಧ್ಯ ದಾರಿ ಸಲುವಾಗಿ ಹಿಂದೆ ತಕರಾರು ಆಗಿದ್ದು ಅಲ್ಲಿಂದ ಇಲ್ಲಿಯವರೆಗೆ ನಮ್ಮ ಮೇಲೆ ಶಂಕ್ರೆಪ್ಪ ಮತ್ತು ಅವರ ಕುಟುಂಬ ಸದಸ್ಯರುಗಳು ಹಗೆತನ ಸಾದಿಸಿಕೊಂಡು ಬಂದಿರುತ್ತಾರೆ.ಹೀಗಿದ್ದು ಈಗ ಎರಡು ಮೂರು ದಿನದ ಹಿಂದೆ ಅವರ ಕುಟುಂಬದವರು ನನಗೆ ನೀನ್ನ ನಡತೆ ಸರಿ ಇರುವದಿಲ್ಲ ನೀನು ಹಾಗೆ ಹೀಗೆ ಇದ್ದಿಯಾ ಅಂತ ಅಂದಾಡಿದ್ದರಿಂದ ನಾನು ಇಂದು ಬೇಳಿಗ್ಗೆ 11-00 ,ಎಮ್, ಸುಮಾರಿಗೆ ನಮ್ಮ ತವರೂರಿನಿಂದ ನನ್ನ ತಂದೆಯಾದ ಬಸವರಾಜ ಮತ್ತು ನನ್ನ ಅಣ್ಣನಾದ ಸಂತೋಷ ಮತ್ತು ನಮ್ಮ  ಅಣ್ಣ ತಮ್ಮಕಿಯವರಾದ ಶರಣು ತಂದೆ ದತ್ತು ಶೀವೂರ,ರವರುಗಳಿಗೆ ಶೇ಼ಷಗಿರಿ ಗ್ರಾಮಕ್ಕೆ ಕರೆಯಿಸಿರುತ್ತೇನೆ. ನಾನು ಕರೆಸಿರುವದು ಗೊತ್ತಾಗಿ ಇಂದು ಮಧ್ಯಾಹ್ನ 1 ಪಿ,ಎಮ್,ಸುಮಾರಿಗೆ ನಮ್ಮ ಮನೆಯ ಮುಂದೆ ನಾನು ಮತ್ತು ನನ್ನ ತಂದೆ ನನ್ನ ಅಣ್ಣಹಾಗೂ ನಮ್ಮ ಅಣ್ಣ ತಮ್ಮಕೀಯ ಶರಣು ಕಾಕಾ ರವರು ನಿಂತಿದ್ದಾಗ 1)ಶಂಕ್ರೆಪ್ಪ ಮತ್ತು ಅವನ ಮಕ್ಕಳಾದ 2)ಸುರೇಶ 3)ರಮೇಶ 4)ಹಣಮಂತ 5)ರವಿ 6)ಅಂಬಣ್ಣ 7)ಪರಮೇಶ್ವರ 8)ಪವೀತ್ರ ಹಾಗೂ ಸೋಸೆಯಂದಿರಾದ 9)ವಿಧ್ಯಾ ಗಂಡ ಸುರೇಶ 10)ಭಾಗ್ಯ ಗಂಡ ರವಿ 11)ಸುನಂದ ಗಂಡ ಅಂಬಣ್ಣ 12)ಪಾರ್ವತಿ ಗಂಡ ಪರಮೇಶ್ವ್ರ 13)ಶಿಲ್ಪಾ ಗಂಡ ರಮೇಶ 14)ಲಕ್ಷ್ಮೀ ಗಂಡ ಹಣಮಂತ ರವರೆಲ್ಲರೂ ಕೂಡಿಕೊಂಡು ಬಂದು ಅದರಲ್ಲಿ ಸುರೇಶ ನನ್ನ ಹತ್ತೀರ ಬಂದು ನನಗೆ ದಂಗಾಮುಸ್ತಿ ಮಾಡಿ ನನ್ನ ಸಿರೆ ಹಿಡಿದು ಎಳೆದಾಡಿದನು ಹಣಮಂತ ಈತನು ರಂಡಿ ನಿನು ಊರ ತುಂಬಾ ಹಾದರತನ ಮಾಡಿ ಮತ್ತೆ ನಿನ್ನ ತವರು ಮನೆಯವರಿಗಿ ಇಲ್ಲಿಗಿ ಕರೆಯಿಸಿದಿ  ಅಂತ ಅವಾಚ್ಯವಾಗಿ ಬೈದನು ರಮೇಶ ಈತನು ನನ್ನ ಎದೆಯ ಮೇಲೆನ ಜಂಪರಗೆ ಕೈಹಾಕಿ ಜಂಪರ ಹರಿದನು ಮತ್ತು ಪರಮೇಶ್ವ್ರನು ನನ್ನ ಜೋತೆ ನಿನಗ ತೊಂಡು ಮಲ್ಕೋತಿನಿ ರಂಡಿ ಅಂತ ಬೈದನು ಆಗ ಹಣಮಂತ ಮತ್ತು ರವಿ ಇಬ್ಬರು ನನ್ನ ಅಣ್ಣನಿಗೆ ಎರಡು ಕೈಗಳು ಒತ್ತಿಯಾಗಿ ಹಿಡಿದರು ಪರಮೇಶ್ವುರ ಈತನು ಅಲ್ಲೆ ಇದ್ದ ಒಂದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು ಶಂಕ್ರೆಪ್ಪ ಈತನು ನನ್ನ ಅಣ್ಣನಿಗೆ ಕಣ್ಣಲ್ಲಿ ಖಾರದ ಪುಡಿ ಎಸೆದನು ಹಾಗೂ ಪವೀತ್ರಾ ಈವಳು ನನ್ನ ಕೂದಲನ್ನು ಗಟ್ಟಿಯಾಗಿ ಹಿಡಿದಳು ಶೀಲ್ಪಾ ಇವಳು ನನ್ನ ಹತ್ತೀರ ಬಂದು ತನ್ನ ಕೈಯಲ್ಲಿದ್ದ ಖಾರದ ಪುಡಿಯನ್ನು ನನ್ನ ಎಡಗಣ್ಣಿಗೆ ಎಸೆದಳೂ  ವಿಧ್ಯಾ ಇವಳು ನನ್ನ ಕೊರಳಲ್ಲಿದ್ದ 35 ಗ್ರಾಂ ಚೈನ ತಾಳಿ ಹರಿದಳೂ ಮತ್ತು ಎಲ್ಲರು ಕೂಡಿ ಅಲ್ಲೆ ಬಿದ್ದ ಕಲ್ಲುಗಳನ್ನು ತಗೆದುಕೊಂಡು ನಮ್ಮ ಮೇಲೆ ಮತ್ತು ನಮ್ಮ ಮನೆಯ ಕಿಡಕಿಯ ಬಾಗಿಲುಗಳ ಮೇಲೆ ಕಲ್ಲೂ ತೂರಾಡಿ ಕೀಡಕಿ ಗ್ಲಾಸುಗಳನ್ನು ಒಡೆದಿರುತ್ತಾರೆ ನಂತರ ಜಗಳ ನಡೆದಿರುವದನ್ನು ನೋಡಿ ಬಂದ ನಮ್ಮ ಗ್ರಾಮದ ರೇವಪ್ಪ ತಂದೆ ಮಾಳಪ್ಪ ಪೂಜಾರಿ,ಜಗದೇವಪ್ಪ ತಂದೆ ವಿಠೋಬಾ ಹಿಳ್ಳಿ   ರವರು ಬಂದು ಜಗಳ ಬಿಡಿಸಿರುತ್ತಾರೆ ಆಗ ಎಲ್ಲರು ಕೂಡಿ ಕೊಂಡು ಹೋಗುವಾಗ ರಮೇಶ ಈತನು ನಮ್ಮ ತಂದೆಯವರಿಗೆ ಇನ್ನೋಮ್ಮೆ ನಿಮ್ಮ ಮಗಳ ಮಾತು ಕೇಳಿ  ಬಂದರೆ ನಿನ್ನ ಜೀವ ಸಹಿತ ಬೀಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ 122/2019 ಕಲಂ 143, 147, 323, 324, 354 (ಬಿ), 504, 506, ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ಶ್ರೀ ಪ್ರವೀಣ ತಂದೆ ಜನಾರ್ಧನರಾವ ಕುಲಕರ್ಣಿ ಸಾ:ರಾವೂರ ರವರು ದಿನಾಂಕ 14/07/2019 ರಂದು ಮದ್ಯಾಹ್ನ ಕಲಬುರಗಿಯ ಮನೆಯಲ್ಲಿದ್ದಾಗ ನನ್ನ ಮೊಬೈಲ ನಂಬರಗೆ ರಾಘವೇಂದ್ರ ಸಗರ ಫೋನ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಲ ಸರ್ವೆ ನಂಬರ 85 ನೇದ್ದರ ಹೊಲದಲ್ಲಿ ಫೆನ್ಸಿಂಗ ಪೊಲಗಳನ್ನು ಏಕೆ ಹಾಕಿದ್ದಿ ಸೂಳೇ ಮಗನೆ ಅಂತಾ ಆವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೇ ಊರಿಗೆ ಬಾ ಮಗನೇ ನಿನ್ನನ್ನು ನೋಡಿಕೊಳ್ಳುತ್ತೆನೆ ಅಂತಾ ಬೈದಿದ್ದರಿಂದ ನಾನು ಪೊಲೀಸ ಠಾಣೆಗೆ ಹೋಗಿ ದೂರು ಕೊಟ್ಟು ಕಾರಿನಲ್ಲಿ ಕಲಬುರಗಿಗೆ ಹೋಗುವ ಕಾಲಕ್ಕೆ ನನಗೆ ನೋಡಿ ಪೋನ  ಮಾಡಿ ರಂಡಿ ಮಗನೇ ನೀನು ಇಲ್ಲಿ ಇದ್ದರೆ ಬಿಡುವದಿಲ್ಲ ಅಂತಾ ಬೈದಿದ್ದು ಇದಕ್ಕೆ ನನ್ನ ತಮ್ಮ ಪ್ರದೀಪ ಕುಲಕರ್ಣಿ ಕುಮ್ಮಕ್ಕು ನೀಡಿದ್ದು ಅಲ್ಲದೇ ಇಂದು ಮುಂಜಾನೆ ನನ್ನ ಪಾಲಕಾರನಿಗೆ ಪೋನ ಮಾಡಿ ಕೇಳಿದಾಗ ಫೆನ್ಸಿಂಗ ಪೊಲಗಳನ್ನು ಮುರಿದು ಹಾಕಿರುತ್ತಾನೆ ಈ ಬಗ್ಗೆ ಮೊಬೈಲದಲ್ಲಿ ಪೋಟು ಸಹ ಅರ್ಜಿಯೊಂದಿಗೆ ಲಗತ್ತಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯ ಗುನ್ನೆ ನಂ  77/2019 ಕಲಂ:504,109,427 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.