Police Bhavan Kalaburagi

Police Bhavan Kalaburagi

Sunday, August 1, 2021

BIDAR DISTRICT DAILY CRIME UPDATE 01-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-08-2021

 

ಬೀದರ ನಗರ ಪೊಲೀಸ ಪೊಲೀಸ್ ಠಾಣೆ ಅಪರಾಧ ಸಂ. 53/2021, ಕಲಂ. 302 ಐಪಿಸಿ :-

ದಿನಾಂಕ 30-07-2021 ರಂದು ಫಿರ್ಯಾದಿ ಲಲೀತಾ ಗಂಡ ಭರತ ಬೆಲ್ದಾರ ವಯ: 55 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಭೀಮ ನಗರ ಬೀದರ ರವರ ಮಗ ವೀರಣ್ಣಾ ತಮ್ಮ ಓಣಿಯಲ್ಲಿರುವ ಮರಗೇಮ್ಮಾ ದೇವಸ್ಥಾನದ ಖಾಂಡನ್ನು ಪ್ರತಿ ವರ್ಷ ಮಾಡುತ್ತಿದ್ದು ಅದಕ್ಕೆ ಹುಂಡಿ ಇಟ್ಟು ಬಂದ ಹಣವನ್ನು ಹುಂಡಿಯಲ್ಲಿಯೇ ಇಡುತ್ತಿದ್ದರು, ವರ್ಷ ಹುಂಡಿಯ ಕೀ ಯನ್ನು ವೀರಣ್ಣಾ ಮತ್ತು ಮೈದುನ ರಾಜಕುಮಾರ ತಂದೆ ಮುಲ್ತಾನಿ ಇವರ ಹತ್ತಿರ ಇರುತ್ತಿತ್ತು, ಆದರೆ ಆರೋಪಿ ಸುರೇಶ ತಂದೆ ಶಂಕರ ಲಕ್ಕಿ ಸಾ: ಭೀಮ ನಗರ ಬೀದರ ಇತನು ಮಗನಿಗೆ ಮರಗೇಮ್ಮಾ ದೇವಸ್ಥಾನದ ಹುಂಡಿಯ ಕೀ ಕೂಡು ಅಂತ ಜಗಳ ತೆಗೆದನು ಆಗ ಫಿರ್ಯಾದಿಯು ಆಸ್ಪತ್ರೆಯಿಂದ ಮನೆಗೆ ಬರುವಾಗ ಜಗಳ ಆಡುವುದನ್ನು ನೋಡಿ ತನ್ನ ಮಗ ವೀರಣ್ಣಾ ಇತನನ್ನು ಕರೆದುಕೊಂಡು ಮನೆಗೆ ಬಂದಿದ್ದು ಇರುತ್ತದೆ, ನಂತರ ಸುರೇಶ ಇತನು ಫಿರ್ಯಾದಯವರ ಮನೆಯವರೆಗೆ ಬಂದು ಮಗನನ್ನು ಕರೆದುಕೊಂಡು ಹೋಗಿ ಮನೆಯ ಮುಂದೆ ಇರುವ ರಸ್ತೆ ಆಚೆ ಇದ್ದ ರಾಜಕುಮಾರ ಕೀರಾಣಿ ಅಂಗಡಿ ಪಕ್ಕದಲ್ಲಿ ಸುರೇಶ ಇವನು ಮಗನಿಗೆ ಚಾಕುವಿನಿಂದ ಹೊಡೆದಿರುತ್ತಾನೆ, ಅವನ ಬಲಗೈಗೆ ಚಾಕು ಹತ್ತಿದ್ದು, ಅಲ್ಲಿಯೇ ಅವನು ಕೆಳಗೆ ಬಿದ್ದಿದ್ದು, ಆಗ ಫಿರ್ಯಾದಿಯ ನೇಗೆಣಿ ವಂದನಾ ಗಂಡ ರಾಜಕುಮಾರ ಇವರು ಬಂದು ಸುರೇಶ ಇತನಿಗೆ ನನ್ನ ಮಗನಿಗೆ ಏಕೆ? ಹೊಡೆಯುತ್ತಿದ್ದಿ ಎಂದು ಅಂದಾಗ ಅವನು ಬಿಟ್ಟು ಅಲ್ಲಿಂದ ಹೋಗಿ ನಂತರ ಮನೆಯಿಂದ ಸ್ವಲ್ಪ ಮುಂದೆ ನಿಜಪ್ಪಾ ರವರ ಮನೆಯ ಮುಂದೆ ಮಗನಿಗೆ ಸುರೇಶ ಇವನು ಬಂದು ಎದೆಗೆ ಹೊಡೆದಾಗ ಮಗ ಅಂಗಾತವಾಗಿ ರಸ್ತೆಯ ಮೇಲೆ ಬಿದ್ದನು, ಆಗ ಮಗನಿಗೆ ಫಿರ್ಯಾದಿಯು ತನ್ನ ಹಿರಿಯ ಮಗ ವಿನೋದ, ಸೋಸೆ ರೇಷ್ಮಾ, ನೆಗೇಣಿ ವಂದನಾ ರವರೆಲ್ಲರೂ ಕೂಡಿ ಮನೆಗೆ ತಂದಾಗ ಬೆಹೋಷ ಇದ್ದನು, ನಂತರ ಅವನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವೈದ್ಯರು ನೋಡಿ ಮೃತಪಟ್ಟಿರುವ ಬಗ್ಗೆ ತಿಳಿಸಿದರು, ಆಗ ಫಿರ್ಯಾದಿಯು ವೈದ್ಯರಿಗೆ ಹಾಗೂ ಪೊಲೀಸರಿಗೆ, ಭಯದಲ್ಲಿ ತನ್ನ ಮಗ ತಾನೇ ಬಿದ್ದಿದ್ದಾನೆ ಅಂತ ತಿಳಿಸಿದ್ದು, ಮಗನ ಶವ ಮನೆಗೆ ತಂದಿದ್ದು, ನಂತರ ಮನೆಯಲ್ಲಿ ತನ್ನ ಮಗಳು ಸುಳ್ಳು ಹೇಳುವುದು ಬೇಡ ಎಂದು ಕೇಸ ಮಾಡುಬೇಕೆಂದು ಅಂದಿದ್ದರಿಂದ ಫಿರ್ಯಾದಿಯು ಸದರಿ ಘಟನೆಯಿಂದ ತನ್ನ  ಮಗನ ಕೊಲೆ ಆಗಿರುತ್ತದೆ, ಮಗನಿಗೆ ಸುರೇಶ ಇವನು ನುಕಿಕೊಟ್ಟಿದರಿಂದ ಅಂಗಾತವಾಗಿ ರೋಡಿನ ಮೇಲೆ ಬಿದ್ದಿದ್ದರಿಂದ ತಲೆಯಲ್ಲಿ ಭಾರಿ ಗುಪ್ತಗಾಯವಾಗಿ ಅದೇ ಗಾಯದಿಂದ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 31-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 69/2021, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 30-07-2021 ರಂದು ಫಿರ್ಯಾದಿ ವೆಂಕಟ ತಂದೆ ನಾಗಪ್ಪಾ ಪಾಲಾಡಿ ವಯ: 58 ವರ್ಷ, ಜಾತಿ: ಯಾದವ ಗೊಲ್ಲಾ, ಸಾ: ಬಶಿರಾಪುರ ಗ್ರಾಮ, ತಾ: ಚಿಟಗುಪ್ಪಾ, ಜಿ: ಬೀದರ ರವರ ಸೋದÀ ಸೊಸೆ ಭಾಗ್ಯಶ್ರೀ ಇವಳು ಹೈದ್ರಾಬಾದದಿಂದ ಮುಂಬೈಗೆ ಹೋಗುತ್ತಿದ್ದ ಪ್ರಯುಕ್ತ ಮನ್ನಾಏಖೇಳ್ಳಿಯಲ್ಲಿ ಅವಳಿಗೆ ಭೇಟಿಯಾಗಿಯಾಗಲು ಫಿರ್ಯಾದಿಯ ತಮ್ಮ ಮಗನಾದ ಗೋಪಾಲ ತಂದೆ ನಾಗಪ್ಪಾ ಪಾಲಾಡಿ ವಯ: 40 ವರ್ಷ ಇತನು ಮನ್ನಾಏಖೇಳ್ಳಿಯಲ್ಲಿ ಸೊದರ ಸೊಸೆಗೆ ಮಾತನಾಡಿಕೊಂಡು ಮರಳಿ ಮ್ಮೂರ ಕಡೆಗೆ ತನ್ನ ರಾಯಲ್ ಎನಫೀಲ್ಡ್ ಮೊಟರ ಸೈಕಲ್ ನಂ. ಕೆಎ-39ರ್/ಕ್ಯೂ-4999 ನೇದರ ಮೇಲೆ ಬರುವಾಗ ಬಶಿರಾಪುರ-ಬೋರಾಳ ರೊಡಿನ ಮಧ್ಯದಲ್ಲಿರುವ ಬ್ರೀಡ್ಜ್ ಹತ್ತಿರ ಯಾವುದೋ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗೋಪಾಲ ಇತನ ಮೊಟರ ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಗೋಪಾಲ ಇತನಿಗೆ ತಲೆಯಲ್ಲಿ ಭಾರಿ ರಕ್ತಗಾಯ ಮತ್ತು ಬಲ ಮೇಲಕಿನ ಮೇಲೆ ಭಾರಿ ರಕ್ತಗಾಯಗಳಾಗಿ ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 31-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 72/2021, ಕಲಂ. 306 ಜೊತೆ 34 ಐಪಿಸಿ :-

ಫಿರ್ಯಾದಿ ಪ್ರಕಾಶ ತಂದೆ ರಾಮಶೇಟ್ಟಿ ಕಾಳೆಕರ ವಯ: 55 ವರ್ಷ, ಜಾತಿ: ಎಸ್.ಸಿ, ಸಾ: ಹಲಬರ್ಗಾ ರವರ ಮಗನಾದ ಕಿರ್ತಿವರ್ಧನ ತಂದೆ ಪ್ರಕಾಶ ವಯ: 21 ವರ್ಷ ಇತನು ಸುಮಾರು ಒಂದು ವರ್ಷದಿಂದ ಬೀದರನ ನವಜೀವನ ಆಸ್ಪತ್ರೆಯಲ್ಲಿ ಸ್ಟಾಪನರ್ಸ ಆಗಿ ಕೆಲಸ ನಿರ್ವಹಿಸಿಕೊಂಡಿರುತ್ತಾನೆ, ಹೀಗಿರುವಾಗ ದಿನಾಂಕ 29-07-2021 ರಂದು ರಾತ್ರಿ ಪಾಳಿಯಲ್ಲಿ ನಮವಜೀನ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹೋಗಿರುತ್ತಾನೆ, ಕೆಲಸದ ಸಮಯದಲ್ಲಿ ಕೀರ್ತಿವರ್ಧನ ಇತನಿಗೆ ಅವರ ಸಿಬ್ಬಂದಿ ವರ್ಗದವರಾದ 1) ಗುರು ಮತ್ತು 2) ಅಖಿಲೇಶ ಇವರು ಮತ್ತು ಸಿಬ್ಬಂದಿ ವರ್ಗದವರು ಹಾಗು ನವಜೀವನ ಆಸ್ಪತ್ರೆಯ ಆಡಳಿತಾಧಿಕಾರಿಗಳು ಹಿಂಸೆ ಕೊಡುತ್ತಿದ್ದಾರೆ ಎಂದು ತಾಯಿಗೆ ಹೇಳಿರುತ್ತಾನೆ, ಸದರಿಯವರು ನೀಡಿದ ಮಾನಸಿಕ ಹಿಂಸೆ ಮತ್ತು ಕೀರುಕುಳ ತಾಳಲಾರದೆ ದಿನಾಂಕ ಕೀರ್ತಿವರ್ಧನ ಇತನು ದಿನಾಂಕ 30-01-2021 ರಂದು ನೇರವಾಗಿ ಹೊಲಕ್ಕೆ ಹೋಗಿ ಹೊಲದಲ್ಲಿನ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಆದಕಾರಣ ಫಿರ್ಯಾದಿಯವರ ಮಗನಾದ ಕೀರ್ತಿವರ್ಧನ ಇತನು ಆತ್ಮಹತ್ಯೆಗೆ ಸಿಬ್ಬಂದಿ ವರ್ಗದವರು ಹಾಗು ಆಡಳಿತ ಅಧಿಕಾರಿಗಳು ಇವರ ಸಂಪೂರ್ಣ ಹೊಣೆಗಾರರು ಅಂತ ಕೊಟ್ಟ ಫಿರ್ಯದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 31-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 66/2021, ಕಲಂ. 279, 338 ಐಪಿಸಿ :-

ಫಿರ್ಯಾದಿ ಗೌತಮ ತಂದೆ ಕಲ್ಲಪ್ಪಾ ಬೆಲ್ದಾರ ವಯ: 25 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಸಿದ್ದೇಶ್ವರ ಕಾಲೋನಿ ನೌಬಾದ ಬೀದರ ರವರ ತಮ್ಮನಾದ ಸಚೀನ ತಂದೆ ಕಲ್ಲಪ್ಪಾ ಬೆಲ್ದಾರ ವಯ: 20 ವರ್ಷ ಇತನು  ಮೊಟಾರ ಸೈಕಲ ನಂ. ಕೆಎ-38/ಎಕ್ಸ್-4069 ನೇದರ ಮೇಲೆ ಚಿದ್ರಿ ರಿಂಗ್ ರೋಡ್ ಕಡೆಯಿಂದ ಗಾಂಧಿಗಂಜ್ ಕಡೆಗೆ ಬರುವಾಗ ಸೆಂಟ್ರಲ್ ಸ್ಕೂಲ್ ಸಿಟಿ ಬಸ್ ನಿಲ್ದಾಣದ ಹತ್ತಿರ ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಸ್ಕೀಡ ಮಾಡಿಕೊಂಡು ಬಿದ್ದಿರುತ್ತಾನೆ, ಪರಿಣಾಮ ಸಚಿನ ಇತನ ತಲೆಗೆ ಭಾರಿ ಗುಪ್ತಗಾಯವಾಗಿ ಬಲ ಕಿವಿಯಿಂದ, ಮೂಗಿನಿಂದ, ಬಾಯಿಯಿಂದ ರಕ್ತ ಬಂದಿರುತ್ತದೆ, ಎಡಗಾಲ ಹಿಮ್ಮಡಿ ಹತ್ತಿರ, ಗಟಾಯಿ ಹತ್ತಿರ  ರಕ್ತಗಾಯವಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು 108 ಅಂಬುಲೇನ್ಸ್ ನಲ್ಲಿ ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೇಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ.38/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ 31-07-2021 ರಂದು ಹಲಸಿ ತೂಗಾಂವ ಕಡೆಯಿಂದ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡಲು ಸಾಗಿಸುತ್ತಿದ್ದಾನೆಂದು ವೀರಣ್ಣ ಎಸ.ದೊಡ್ಡಮನಿ ಸಿಪಿಐ ಗ್ರಾಮೀಣ ವೃತ್ತ ಭಾಲ್ಕಿ ರವರಿಗೆ ಖಚಿತ ಬಾತ್ಮಿ ಬಂದ ಕೂಡಲೇ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಹೋಗಿ ನೋಡಲು ಅಳವಾಯಿ ರೋಡಿಗೆ ತೂಗಾಂವ ಕ್ರಾಸ ಹತ್ತಿರ ರೋಡಿನ ಮೇಲೆ ಆರೋಪಿ ಮಾಧವ ತಂದೆ ಹರಿಬಾ ಕೋಟಮಾಳ ವಯ: 40 ವರ್ಷ, ಜಾತಿ: ಮರಾಠಾ, ಸಾ: ಅಳವಾಯಿ ಇತನು ಸಾರ್ವಜನಿಕ ಸ್ಥಳದಲ್ಲಿ ತನ್ನ ಹೆಗಲ ಮೇಲೆ ಪ್ಲಾಸ್ಟಿಕ ಚೀಲ ಇಟ್ಟುಕೊಂಡು ಬರುತ್ತಿದ್ದು ಪೊಲೀಸ ಜೀಪ ನೋಡಿ ಓಡಲು ಹತ್ತಿದ್ದನು ಆಗ ಸಿಪಿಐ ರವರು ಸಿಬ್ಬಂದಿಯವರ ಸಹಾಯದಿಂದ ಅವನ ಮೇಲೆ ದಾಳಿ ಮಾಡಿ ಅವನನ್ನು ಹಿಡಿದುಕೊಂಡು ಅವನ ಬಳಿ ಇರುವ ಪ್ಲಾಸ್ಟಿಕ ಚಿಲದಲ್ಲಿ ಏನಿದೆ? ಅಂತ ವಿಚಾರಿಸಲು ಅವನು ಸಾರಾಯಿ ಬಾಟಲಗಳು ಇರುತ್ತವೆ ಅಂತ ತಿಳಿಸಿರುತ್ತಾನೆ, ನಂತರ ಸದರಿ ಚೀಲಪರಿಶೀಲಿಸಲು ನೋಡಲು ಅದರಲ್ಲಿ 1) 90 ಎಮ್.ಎಲ್ ವುಳ್ಳ 33 ಯು.ಎಸ ವಿಸ್ಕಿ ಪ್ಲಾಸ್ಟಿಕ ಬಾಟಲಗಳು ಅ.ಕಿ 1159/- ರೂ., 2) 650 ಎಮ್.ಎಲ್ ವುಳ್ಳ 03 ನಾಕೌಟ ಬಿಯರ ಬಾಟಲಗಳು ಅ.ಕಿ 435/- ರೂ. ಹಾಗು 3) 330 ಎಮ್.ಎಲ್ ವುಳ್ಳ 24 ಕಿಂಗಫಿಶರ ಬಿಯರ ಬಾಟಲಗಳು ಅ.ಕಿ 2040/- ರೂ. ಇದ್ದು, ನಂತರ ಆರೋಪಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಿಸಲು ಸಂಬಂಧಿಸಿದ ಪ್ರಾಧಿಕಾರದಾಗಲಿ, ಇಲ್ಲವೇ ಸರಕಾರದ ಪರವಾನಿಗೆ ಇದೆಯಾ?  ಅಂತ ವಿಚಾರಿಸಲು ಅವನು ತನ್ನ  ಬಳಿ ಯಾವುದೇ ಸಾರಾಯಿ ಮಾರಾಟ ಸಂಬಂಧ ಯಾವುದೇ ಪರವಾನಿಗೆ ಇರುವುದಿಲ್ಲ ತಾನು ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲು ಸಾಗಿಸುತ್ತಿದ್ದೆನೆಂದು ತಿಳಿಸಿರುತ್ತಾನೆ, ನಂತರ ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.