Police Bhavan Kalaburagi

Police Bhavan Kalaburagi

Wednesday, February 12, 2020

BIDAR DISTRICT DAILY CRIME UPDATE 12-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-02-2020

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 01/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 11-02-2020 ರಂದು ಫಿರ್ಯಾದಿ ಪ್ರಶಾಂತಿ ಗಂಡ ಪ್ರಸಾದ ಹೆಬೆಟಮ್, ವಯ: 40 ವರ್ಷ, ಜಾತಿ: ಕೋಮಟಿ, ಸಾ: ಆರ್ಯ ಸಮಾಜ ಹತ್ತಿರ ಚಿಟಗುಪ್ಪಾ ರವರ ಗಂಡನಾದ ಪ್ರಸಾದ ತಂದೆ ಕೃಷ್ಣಾ ಹೆಬೆಟಮ್, ವಯ: 45 ವರ್ಷ ರವರಿಗೆ ಅಡತ್ ವ್ಯಾಪಾರದಲ್ಲಾದ ಹಾನಿಯಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ತಮ್ಮ ಅಮಗಡಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 15/2020, ಕಲಂ. 379 ಐಪಿಸಿ :-
ದಿನಾಂಕ 02-02-2020 ರಂದು 1900 ಗಂಟೆಯ ಸುಮಾರಿಗೆ ಫಿರ್ಯಾದಿ ಉತ್ತಮ ತಂದೆ ಉಮಾಜಿ ರಾಠೋಡ ವಯ: 42 ವರ್ಷ, ಜಾತಿ: ಲಮಾಣಿ, ಸಾ: ಮುರ್ಕಿ ತಾಂಡಾ ರವರು ಹೊಲದಿಂದ ತನ್ನ 2 ಎತ್ತುಗಳು, 2 ಆಕಳು ಮತ್ತು 4 ಆಕಳ ಕರುಗಳು, ಒಂದು ಎಮ್ಮೆ, 2 ಎಮ್ಮೆಯ ಕರುಗಳು, ಒಂದು ಹೊರಿ ಹೀಗೆ ಒಟ್ಟು 12 ಜಾನುವಾರುಗಳು ತಮ್ಮ ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ ಕಟ್ಟಿ ಅಂದಾಜು 2300 ಗಂಟೆಯವರೆಗೆ ಎಚ್ಚರ ಉಳಿದು ಮನೆಯ ಮುಂದೆ ಮೇವು ಹಾಕಿ ಮಲಗಿಕೊಂಡಿದ್ದು, ನಂತರ ಮರು ದಿವಸ ದಿನಾಂಕ 03-02-2020 ರಂದು 0445 ಗಂಟೆಗೆ ಎಚ್ಚರವಾಗಿ ಮನೆಯ ಮುಂದೆ ಕಟ್ಟಿದ ಜಾನುವಾರುಗಳಿಗೆ ನೋಡಲು ಅದರಲ್ಲಿದ್ದ ಕೆಂಪು ಬಿಳಿ ಮಿಶ್ರತ (ಹಾಂಡಾ ಬಾಂಡಾ) ಬಣ್ಣದ ಎತ್ತು  7 ವರ್ಷ ವಯಸ್ಸಿನ ಅ.ಕಿ 45,000/- ರೂಪಾಯಿಯಷ್ಟು ಎತ್ತು ಕಟ್ಟಿದ ಜಾಗದಲ್ಲಿ ಇರಲಿಲ್ಲಾ, ನಂತರ ಫಿರ್ಯಾದಿ ಮತ್ತು ಫಿರ್ಯಾದಿಯವರ ಮನೆಯವರು ಊರಲ್ಲಿ ಹಾಗು ಅಡವಿಯಲ್ಲಿ ಹುಡುಕಾಡಲು ಸಿಗಲಿಲ್ಲಾ, ಸದರಿ ಎತ್ತು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 19/2020, ಕಲಂ. 379 ಐಪಿಸಿ :-
ಯಾರೋ ಅಪರಿಚಿತ ಕಳ್ಳರು ದಿನಾಂಕ 31-01-2020 ರಂದು 1900 ಗಂಟೆಯಿಂದ ದಿನಾಂಕ 01-02-2020 ರಂದು 0700 ಗಂಟೆಯ ಅವಧಿಯಲ್ಲಿ ಫಿರ್ಯಾದಿ ವೀರಭದ್ರಪ್ಪಾ ತಂದೆ ಬಸವರಾಜ ವಯ: 32 ವರ್ಷ, ಜಾತಿ: ಎಸ್.ಸಿ, ಸಾ: ಹಾರೂರಗೇರಿ ಬೀದರ ರವರ ಟ್ರಾಲಿ ಸಂ. ಕೆ.-38/ಟಿ-4618, ಹಸಿರು ಬಣ್ಣದು, ಅ.ಕಿ 92,000/- ರೂಪಾಯಿ ನೇದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ, ಕಳುವಾದ ಟ್ರಾಲಿಯನ್ನು ನಾಗುರ, ಯಾಕತಪುರ, ಕೊತ್ತುರ ಗ್ರಾಮಗಳಲ್ಲಿ ಮತ್ತು ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವ ದೂರು ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 11-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ಗರ ಪೊಲೀಸ್ ಠಾಣೆ ಅಪರಾಧ ಸಂ. 20/2020, ಕಲಂ. 379 ಐಪಿಸಿ :-
ದಿನಾಂಕ 30-01-2020 ರಂದು 2300 ಗಂಟೆಯಿಂದ ದಿನಾಂಕ 31-01-2020 ರಂದು 0700 ಗಂಟೆಯ ಅವಧಿಯಲ್ಲಿ ಬೀದರ ಗರದ ನೌಬಾದನಲ್ಲಿರುವ ಫಿರ್ಯಾದಿ ರಾಮಲಿಂಗ ತಂದೆ ಪ್ರಭಾಕರ ಧರಣಿ ಸಾ: ಹಾಲಹಳ್ಳಿ, ತಾ: ಕಮಲನಗರ, ಸದ್ಯ: ರಾಮಚಂದ್ರ ನಗರ ನೌಬಾದ ಬೀದರ ರವರು ತನ್ನ ತಮ್ಮನ ಬಾಡಿಗೆ ನೆಯ ಮುಂದೆ ನಿಲ್ಲಿಸಿದ ಫಿರ್ಯಾದಿಯವರ ಹೀರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ ನಂ. ಕೆಎ-38/ಹೆಚ್-9190 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಹೀರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-38/ಹೆಚ್-9190, 2) ಚಾಸಿಸ್ ನಂ. 03.ಎಲ್.16.ಎಫ್.11191, 3) 03.ಎಲ್.15.ಇ.11464, 4) ಮಾಡಲ್ 2003, 5) ಬಣ್ಣ: ಸಿಲ್ವರ್ ಹಾಗೂ ಅ.ಕಿ 15,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 26/2020, ಕಲಂ. 379 ಐಪಿಸಿ :-
ದಿನಾಂಕ 24-01-2020 ರಂದು ಫಿರ್ಯಾದಿ ಸೈಯದ ಸಿದ್ದೀಕ ಪಟೆಲ್ ತಂದೆ ಸೈಯದ ನಸಿರೊದ್ದಿನ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ದಸ್ತಾಪೂರ, ತಾ: ಚಿಂಚೋಳಿ, ಜಿ: ಕಲಬುರ್ಗಿ ರವರು ತನ್ನ ಸ್ಪ್ಲೇಂಡರ ಪ್ರೊ ಮೊಟಾರ ಸೈಕಲ ನಂ. ಕೆಎ-32/ಈ.ಹೆಚ್-2290 ನೇದನ್ನು ತೆಗೆದುಕೊಂಡು ಬೀದರ ಜಿಲ್ಲೆಯ ಮರೂರ ಗ್ರಾಮಕ್ಕೆ ಮ್ಮ ಸಂಬಂಧಿ ಸೈಯದ ಅತೀಕ ರವರೊಂದಿಗೆ 2300 ಸುಮಾರಿಗೆ ಮರೂರ ಗ್ರಾಮದ ದರ್ಗಾಕ್ಕೆ ಬಂದು ಸದರಿ ಮೊಟಾರ ಸೈಕಲನ್ನು ದರ್ಗಾದ ಮುಂದೆ ನಿಲ್ಲಿಸಿ ಇಬ್ಬರು ದರ್ಗಾದಲ್ಲಿ ಉಳಿದುಕೊಂಡು, ನಂತರ ದಿನಾಂಕ 25-01-2020 ರಂದು 0400 ಗಂಟೆ ಸುಮಾರಿಗೆ ಎದ್ದು ನೋಡಲು ಸದರಿ ಮೊಟಾರ ಸೈಕಲ ಇರಲ್ಲಿಲ್ಲಾ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಮೋಟಾರ ಸೈಕಲ .ಕಿ 24000/- ರೂ. ಆಗಬಹುದು. ಕಳುವಾದ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-02-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಬೀದರ ನೂತನ ಗರ ಪೊಲೀಸ್ ಠಾಣೆ ಅಪರಾಧ ಸಂ. 18/2020, ಕಲಂ. 380 ಐಪಿಸಿ :-
ದಿನಾಂಕ 06-02-2020 ರಂದು 1030 ರಿಂದ 1100 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ನಿರ್ಮಲಾಬಾಯಿ ಗಂಡ ಕಾಳಿದಾಸ ಸಾ: ರಾಘವೆಂದ್ರ ಕಾಲೋನಿ, ಬೀದರ ರವರು ತಮ್ಮ ಮನೆಯಲ್ಲಿಟ್ಟಿರುವ 25 ಗ್ರಾಂ. ಬಂಗಾರದ ಆಭರಣಗಳು ಹಾಗೂ 500/- ರೂ. ನಗದು ಹಣ ಹೀಗೆ ಒಟ್ಟು 75,500/- ರೂ. ಬೆಲೆವುಳ್ಳದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗರ ಪೊಲೀಸ್ ಠಾಣೆ ಅಪರಾಧ ಸಂ. 18/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 11-02-2020 ರಂದು ಫಿರ್ಯಾದಿ ವಿಮಲಾಬಾಯಿ ಗಂಡ ಸುಧಕಾರ ಭೋಸ್ಲೆ ವಯ: 45 ವರ್ಷ, ಜಾತಿ: ಮರಾಠಾ, ಸಾ:ಖಾನಾಪೂರ [ಕೆ], ತಾ: ಬಸವಕಲ್ಯಾಣ ರವರ ಗಂಡ ಸುಧಕಾರ ತಂದೆ ರಘುರಾಮ ಬೋಸ್ಲೆ ವಯ: 59 ವರ್ಷ ರವರು ಬಸವಕಲ್ಯಾಣದಿಂದ ಹಾಲಿನ ಪಾಕೇಟ ತೆಗೆದುಕೊಂಡು ಬರಲು ಮೋಟರ ಸೈಕಲ್ ನಂ. ಕೆಎ-56/-8668 ನೇದ್ದನ್ನು ಚಲಾಯಿಸಿಕೊಂಡು ಮನೆಯಿಂದ ಹೋಗಿ ಮರಳಿ ಬರುವಾಗ ಬಸವಕಲ್ಯಾಣ-ಖಾನಾಪೂರ[ಕೆ] ರಸ್ತೆಯ ಮೇಲೆ  ಎದುರಿನಿಂದ ಆಟೋ ರಿಕ್ಷಾ ನಂ. ಕೆಎ-56/1813 ನೇದ್ದರ ಚಾಲಕನಾದ ಆರೋಪಿಯು ತಾನು ಚಲಾಯಿಸುತ್ತಿದ್ದ ಆಟೋರಿಕ್ಷಾವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಜೈ ಭವಾನಿ ಧಾಭಾ ಹತ್ತಿರ ಫಿರ್ಯಾದಿಯವರ ಗಮಡ ಸುಧಕಾರ ಬೋಸ್ಲೆ ರವರು ಚಲಾಯಿಸುತ್ತಿದ್ದ ಮೋಟರ ಸೈಕಲಗೆ ಡಿಕ್ಕಿ ಮಾಡಿ ಆಟೋ ರಿಕ್ಷಾ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಅವರಿಗೆ ಬಲಗಾಲಿನ ಮೋಳಕಾಲು ಹತ್ತಿರ ಭಾರಿ ಗುಪ್ತಗಾಯ ಮತ್ತು ಪಾದದ ಮೇಲೆ ರಕ್ತಗಾಯ ಹಾಗು ತಲೆಯ ಹಿಂದ ಗುಪ್ತಗಾಯವಾಗಿದ್ದರಿಂದ ಅವರಿಗೆ ಆಟೋರಿಕ್ಷಾದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದುರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 12/2020, ಕಲಂ. 323, 498(ಎ), 504, 506 ಜೊತೆ 149 ಐಪಿಸಿ ಮತ್ತು 3 & 4 ಡಿ.ಪಿ ಕಾಯ್ದೆ :-
ಫಿರ್ಯಾದಿ ಪೂಜಾ @ ಶಶೀಕಲಾ ಗಂಡ ಭೀಮರಾಯ ಹಂದರಕಿ ತಾ: ಸೇಡಂ, ಜಿಲ್ಲಾ: ಕಲಬುರ್ಗಿ, ಸದ್ಯ: ಖಟಕ ಚಿಂಚೋಳಿ ರವರ ಮದುವೆಯು ಭೀಮರಾಯ ತಂದೆ ರಾಮಾಂಜನೆಯ ಇತನ ಜೋತೆಗೆ ಫಿರ್ಯಾದಿಯವರ ತಂದೆ ತಾಯಿಯವರು ಹಿಂದೂ ಸಂಪ್ರದಾಯದಂತೆ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಗಂಡನ ಮನೆಯ ಮುಂದೆ ದಿನಾಂಕ 30-05-2019 ರಂದು ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಲ್ಲಿ ಗಂಡನಿಗೆ ವರದಕ್ಷಿಣೆಯಾಗಿ 2,00,000/- ರೂಪಾಯಿ ಮತ್ತು 6 ತೋಲೆ ಬಂಗಾರ ಮತ್ತು ಉಡುಗೊರೆಗಳನ್ನು ಕೊಟ್ಟು ಹೀಗೆ ಒಟ್ಟು 10,00,000/- ರೂಪಾಯಿಗಳು ಖರ್ಚು ಮಾಡಿ ಮದುವೆ ಮಾಡಿರುತ್ತಾರೆ, ಮದುವೆಯಾದ ನಂತರ 15 ದಿವಸಗಳವರೆಗೆ ಆರೋಪಿತರಾದ 1) ಭೀಮರಾಯ ತಂದೆ ರಾಮಾಂಜನೆಯ, 2) ವೇಂಕಟಮ್ಮಾ ಗಂಡ ರಾಮಾಂಜನೆಯ, 3) ರಾಮಾಂಜನೆಯ ಹಂದರಕಿ, 4) ಸಂಗೀತಾ ಗಂಡ ಹಣಮಂತ, 5) ಹಣಮಂತ ತಂದೆ ರಾಮಾಂಜನೆಯ, 6) ಜೈಶ್ರೀ ಗಂಡ ಅಯ್ಯಣ, 7) ಅಯ್ಯಣ ತಂದೆ ರಾಮಾಂಜನೆಯ, 8) ಮಂಜೂಳಾ ಗಂಡ ಚಂದ್ರಶೇಖರ ಸಾ: ಚಿತ್ತಾಪೂರ, 9) ಸಿದ್ದಮ್ಮಾ ಗಂಡ ಸಿದ್ದಲಿಂದ ಸಾ: ಮೋಟನಹಳ್ಳಿ, 10) ಅನ್ನಪೂರ್ಣ ತಂದೆ ರಾಮಾಂಜನೆಯ ಎಲ್ಲರೂ ಸಾ: ಕೋಡ್ಲಾ, ತಾ: ಸೇಡಂ, ಜಿಲ್ಲಾ: ಕಲಬುರ್ಗಿ ಇವರೆಲ್ಲರೂ ಫಿರ್ಯಾದಿಗೆ ಸರಿಯಾಗಿ ಇಟ್ಟುಕೊಂಡಿದ್ದು, ತದನಂತರ ಗಂಡ ಮದುವೆಯಲ್ಲಿ ಹಣ ಖರ್ಚಾಗಿ ಬಾಕಿಯಾಗಿದೆ ನನಗೆ ನಿನ್ನ ತವರು ಮನೆಯಿಂದ ರೂಪಾಯಿ ತಂದು ಕೋಡು ಎಂದು ಸರಾಯಿ ಕುಡಿದು ಮನಸ್ಸಿಗೆ ಬಂದ ಹಾಗೆ ಮಾನಸಿಕ ಮತ್ತು ದೈಹೀಕ ಕೀರುಕುಳ ಕೋಡುತ್ತಿದ್ದರಿಂದ ಫಿರ್ಯಾದಿಯವರ ತಂದೆ - ತಾಯಿಯವರು ಗಮಡನಿಗೆ ಸೆಪ್ಟೆಂಬರ 2019 ರಲ್ಲಿ 50,000/- ರೂಪಾಯಿ ಹಣ ಕೊಟ್ಟಿರುತ್ತಾರ, ನಂತರ ಸದರಿ ಆರೋಪಿತರು ಫಿರ್ಯಾದಿಗೆ 8 ದಿವಸ ಸರಿಯಾಗಿ ನಡೆದುಕೊಂಡು ನಂತರದ ದಿನಗಳಲ್ಲಿ ಗಂಡ ಫಿರ್ಯಾದಿಗೆ ನಿನಗೆ ಅಡುಗೆ ಮಾಡಲು ಬರುವುದಿಲ್ಲಾ, ನೀನು ನೋಡಲು ಸರಿಯಾಗಿಲ್ಲ, ನಿನಗೆ ಮನೆ ಕೆಲಸ ಬರುವುದಿಲ್ಲ, ನೀನು ನನಗೆ ವಿವಾಹ ವಿಚ್ಛೇದನೆ ಕೋಡು ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೆನೆಂದು ಸರಾಯಿ ಕುಡಿದು ಹೋಡೆ-ಬಡೆ ಮಾಡಿರುತ್ತಾರೆ ಮತ್ತು ಉಳಿದ ಆರೋಪಿತರು ನೀನು ನಮ್ಮ ಮನೆಯಲ್ಲಿ ಇರಬೇಡ ನೀನು ಮನೆ ಬಿಟ್ಟು ಹೋಗು ಎಂದು ಕಿರುಕುಳ ಕೋಡತ್ತಿದ್ದರು ಹಾಗೂ ನೀನು ನಮ್ಮ ಮನೆಗೆ ಸೋಸೆ ಅಂತಾ ಕರೆದುಕೊಂಡು ಬಂದಿಲ್ಲಾ ನಿನ್ನಗೆ ನೌಕರಿ ಆಳು ಅಂತಾ ತಿಳಿದು ಮನೆಯಲ್ಲಿ ಇಟ್ಟುಕೊಂಡಿರುತ್ತೇವೆ, ನೀನು ಮನೆಯಲ್ಲಿ ಕೇಲಸ ಮಾಡಬೇಕು ಅಷ್ಟೆ ಎಂದು ಹೀಯಾಳಿಸಿ ಮಾತನಾಡುತ್ತಿದ್ದರು, ಹೀಗಿರುವಾಗ ಗಂಡ ಫಿರ್ಯಾದಿಯ ಕೋರಳಿನಲ್ಲಿರುವ ತಾಳಿ ಹಾಗೂ ಕಾಲಿನಲ್ಲಿರುವ ಕಾಲುಂಗುರ ಮಾರಿ ಸರಾಯಿ ಕುಡಿದು ಹೋಡೆ-ಬಡೆ ಮಾಡಿ ಮಾನಸಿಕ ಮತ್ತು ದೈಹೀಕ ಕಿರುಕುಳ ಕೋಟ್ಟಿರುತ್ತಾನೆ, ನಂತರ ಗಮಡ ಅಂದಾಜೂ ಮೂರು ತಿಂಗಳ ಹಿಂದೆ ಕಲಬುರ್ಗಿಗೆ ಕರೆದುಕೊಂಡು ಬಂದು ಕಾಲಿನಲ್ಲಿರುವ ಚೈನ್ ಮಾರಿ ಬಸ್ಸ್ ಟಿಕೇಟ್ ಸಲುವಾಗಿ ಹಣ ಕೋಟ್ಟು ನಿನು ನಿನ್ನ ತಂದೆ-ತಾಯಿ ಮನೆಗೆ  ಹೋಗು ನನ್ನ ಜೋತೆ ಬರಬೇಡ ಎಂದು ಬೈದು ಹೋಗಿರುತ್ತಾನೆ, ನಂತರ ಫಿರ್ಯಾದಿಯು ತನ್ನ ತಂದೆ ತಾಯಿ ಮನೆಯಾದ ಖಟಕ ಚಿಂಚೋಳಿ ಗ್ರಾಮಕ್ಕೆ ಬಂದಿದ್ದು, ನಡೆದ ವಿಷಯವನ್ನು ತನ್ನ ತಂದೆ - ತಾಯಿಯವರಿಗೆ ಹೇಳಿರುತ್ತೆನೆ, ಇದಾದ ನಂತರ ಗಂಡನು 3 ತಿಂಗಳಿನಿಂದ ಫಿರ್ಯಾದಿಯ ಮೋಬೈಲ್ ನಂ. 7483570551 ನೇದಕ್ಕೆ ಅವನ ಮೊಬೈಲ್ ನಂ. 7022293716 ನೇದರಿಂದ ಕರೆ ಮಾಡಿ ನೀನು ನಿನ್ನ ತಂದೆ-ತಾಯಿಯವರ ಮನೆಯಲ್ಲಿಯೇ ವಾಸವಿರು ನಿನು ನನಗೆ ವಿವಾಹ ವಿಚ್ಛೇದನೆ ಕೋಡು ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆನೆ ಒಂದು ವೇಳೆ ನೀನು ನನಗೆ ವಿವಾಹ ವಿಚ್ಛೇದನೆ ಕೋಡಲಿಲ್ಲಾ ಅಂದರೆ ನಿನಗೆ ಹಾಗೂ ನಿನ್ನ ತಂದೆ ತಾಯಿಯವರಿಗೆ ಖತಂ ಮಾಡಿ ಬೇರೆ ಮದುವೆ ಮಾಡಿಕೊಳ್ಳುತ್ತೆನೆಂದು ಜೀವದ ಬೇದರಿಕೆ ಹಾಕಿರುತ್ತಾನೆಂದು ಕೊಟ್ಟ ಪಿರ್ಯಾದಿಯವರ ಲಿಖಿತ ದೂರಿನ ಸಾರಂಶದ ಮೇರೆಗೆ ದಿನಾಂಕ 11-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.