Police Bhavan Kalaburagi

Police Bhavan Kalaburagi

Monday, April 19, 2021

BIDAR DISTRICT DAILY CRIME UPDATE 19-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-04-2021

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 18-04-2021 ರಂದು ಫಿರ್ಯಾದಿ ಲಲಿತಾ ಗಂಡ ಬಂಡೆಪ್ಪಾ ಬಂಡೆ ಪಾಟೀಲ ಸಾ: ಕೊಸಮ, ತಾ: ಭಾಲ್ಕಿ ರವರ ಗಂಡನಾದ ಬಂಡೆಪ್ಪಾ ತಂದೆ ನಾಗಶೇಟ್ಟಿ ಬಂಡೆ ಪಾಟೀಲ ಬಂಡೆಪ್ಪಾ ರವರು ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡಿರುವ ಸಾಲವನ್ನು ಬೆಳೆ ಸರಿಯಾಗಿ ಬೆಳೆಯದ ಕಾರಣ ಮಾಡಿಕೊಂಡ ಸಾಲ ಮರು ಪಾವತಿ ಮಾಡಲು ಆಗದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 37/2021, ಕಲಂ. 279, 337, 338 ಐಪಿಸಿ :-

ದಿನಾಂಕ 18-04-2021 ರಂದು ಫಿರ್ಯಾದಿ ನಿಕೇತ ತಂದೆ ನಾಗನಾಥ ಜಮಾದಾರ, ವಯ: 24 ವರ್ಷ, ಜಾತಿ: ಕಬ್ಬಲಿಗ, ಸಾ: ನಾರಾಯಣಪೂರ ರವರ ತಂದೆಯವರು ಮನೆಯಿಂದ ತನ್ನ ಮೋಟರ ಸೈಕಲ ನಂ. ಕೆಎ-32/ಇ.ಜಿ-0366 ನೇದನ್ನು ಚಲಾಯಿಸಿಕೊಂಡು ರಾ.ಹೇದ್ದಾರಿ ನಂ. 65 ರೋಡಿನ ಮೂಖಾಂತರ ಬಂಗ್ಲಾ ಕಡೆಯಿಂದ ಹುಮನಾಬಾದ ಕಡೆಗೆ ಹೋಗುತ್ತಿರುವಾಗ ಹಣಮಂತವಾಡಿ ಗ್ರಾಮದ ಹತ್ತಿರ ಮೋಟರ ಸೈಕಲ ನಂ. ಕೆಎ-56/ಇ-6548 ನೇದರ ಚಾಲಕನಾದ ಮಾಣಿಕರಡ್ಡಿ ತಂದೆ ಜ್ಞಾನರಡ್ಡಿ ವಯ: 69 ವರ್ಷ, ಜಾತಿ: ರಡ್ಡಿ, ಸಾ: ಯರಬಾಗ, ತಾ: ಬಸವಕಲ್ಯಾಣ ಇತನು ಹಣಮಂತವಾಡಿ ಗ್ರಾಮದ ಕಡೆಯಿಂದ ರಾ.ಹೇದ್ದಾರಿ ನಂ. 65 ರೋಡಿನ ಕಡೆಗೆ ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ  ರೋಡಿನ ಮೇಲೆ ಬಂದು ಹುಮನಾಬಾದ ಕಡೆಗೆ ಹೋಗುತ್ತಿದ್ದ ಫಿರ್ಯಾದಿ ತಂದೆಯವರ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತಾನು ಸಹ ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಪಿರ್ಯಾದಿಯ ತಂದೆಯವರ ತಲೆಗೆ ಭಾರಿ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಬಂದಿರುತ್ತದೆ ಹಾಗೂ ಎಡಗಾಲಿನ ಪಾದಕ್ಕೆ ತರಚಿದ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಯ ಬಲಗಾಲಿನ ಮೊಳಕಾಲ ಹತ್ತಿರ ಪಾದಕ್ಕೆ ರಕ್ತಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಇಬ್ಬರಿಗೂ ಜಗನಾಥ ತಂದೆ ಶಾಮರಾವ ಅಯ್ಯಣ್ಣನವರ ಸಾ: ಹಣಮಂತವಾಡಿ ರವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 35/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 18-04-2021 ರಂದು ಬೀದರ-ಭಾಲ್ಕಿ ರಸ್ತೆಯ ಕೊನಮೆಳಕುಂದಾ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕ ಎದರುಗಡೆ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಚಿದಾನಂದ ಸೌದಿ ಪಿಎಸ್ಐ (ಕಾಸೂ) ಧನ್ನೂರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೊನಮೆಳಕುಂದಾ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕದಿಂದ ಸ್ವಲ್ಪ ಅಂತರದಲ್ಲಿ ಹೋಗಿ ಮರೆಯಾಗಿ ನಿಂತು ನೊಡಲು ಕೊನಮೆಳಕುಂದಾ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕ ಎದುರುಗಡೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿ ಪಂಡೀತ ತಂದೆ ಹಣಮಂತ  ಕೆಂಪೆ ವಯ: 50 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕೋನಮೇಳಕುಂದಾ ಇತನು ಸಾರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ನಂತರ ಆತನಿಗೆ ಸಾರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಕುರಿತು ಸರ್ಕಾರದಿಂದ ಪಡೆದಿರುವ ಯಾವುದಾದರೂ ಪರವಾನಿಗೆ ತೋರಿಸಲು ಕೇಳಿದಾಗ ಆತನು ತನ್ನ ಹತ್ತಿರ ಯಾವುದೇ ಪರನಾನಿಗೆ ಪತ್ರ ಇರುವುದಿಲ್ಲ ನಾನು ವಿವಿಧ ವೈನ್ ಶಾಪಗಳಿಂದ ಕುಡಿಯಲು ಅಂತ ಖರೀದಿ ಮಾಡಿಕೊಂಡು ಬಂದು ಅನಧೀಕ್ರತವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೆನೆ ಅಂತ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಆತನ ಹತ್ತಿರ ಇರುವ ಸರಾಯಿಯನ್ನು ಪರಿಶಿಲಿಸಿ ನೋಡಲು 1) ಓಲ್ಡ ಟಾವರ್ನ ವಿಸ್ಕಿ 180 ಎಂ.ಎಲ್ ನ 17 ಟೆಟ್ರಾ ಪ್ಯಾಕೇಟಗಳು ಅ.ಕಿ 1486/- ರೂ., 2) ಯು.ಎಸ್ ವಿಸ್ಕಿ 90 ಎಂ.ಎಲ್ ನ 13 ಬಾಟಲಗಳು ಅ.ಕಿ 455/- ರೂ. ಹಾಗೂ ಆರೋಪಿತನ ಹತ್ತಿರ ಇರುವ ನಗದು ಹಣ 500/- ರೂ. ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.