Police Bhavan Kalaburagi

Police Bhavan Kalaburagi

Saturday, January 16, 2021

BIDAR DISTRICT DAILY CRIME UPDATE 16-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-01-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 06/2021, ಕಲಂ. 420, 468, 471 ಐಪಿಸಿ :-

ಆರೋಪಿ ಅಬ್ದುಲ್ರಬ್ ಇವರು ಅನುಕಂಪದ ಆಧಾರದ ಮೇರೆಗೆ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲಿ್ಲ ಗಣತಿದಾರರ ವೃಂದದಲ್ಲಿ ದಿನಾಂಕ 01-02-2008 ರಂದು ನೇಮಕಾತಿ ಹೊಂದಿ ಸಾಂಖ್ಯಿಕ ನಿರೀಕ್ಷಕರು/ಸಹಾಯಕ ಸಾಂಖ್ಯಿಕ ಅಧಿಕಾರಿ ವೃಂದಕ್ಕೆ ಮುಂಬಡ್ತಿ ಹೊಂದಿ ಪ್ರಸ್ತುತ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ಬೀದರ ಜಿಲ್ಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಸದರಿ ನೌಕರರಿಗೆ ಸಾಂಖ್ಯಿಕ ನಿರೀಕ್ಷಕರ ವೃಂದದಿಂದ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಗೆ ಮುಂಬಡ್ತಿಗಾಗಿ ಪರಿಶೀಲಿಸಲು ಅವರು ಸೇವಾ ವಿವರಗಳೊಂದಿಗೆ ಪದವಿಯಲ್ಲಿ ತೇರ್ಗಡೆ ಹೊಂದಿದ ಬಗ್ಗೆ ಹಾಗೂ ಇತ್ಯಾದಿ ದಾಖಲಾತಿಗಳನ್ನು ಸಲ್ಲಿಸುವಂತೆ ಸೂಚಿಸಲಾದ ಮೇರೆಗೆ ಸದರಿಯವರು ಈಸ್ಟರ್ನ ಇನ್ಸಟುಟ್ ಫಾರ್ ಇಂಟಿಗ್ರೆಟೆಡ್ ಲರ್ನಿಂಗ್ ಇನ್ ಮ್ಯಾನೇಜಮೆಂಟ್ ಯುನಿವರ್ಸಿಟಿ ಸಿಕ್ಕಿಮ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವುದಾಗಿ ದೃಢಿಕೃತ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರವನ್ನು ಕಛೇರಿಯ ಮುಖ್ಯಸ್ಥರ ಮೂಲಕ ನಿದೇಶನಾಲಯಕ್ಕೆ ಸಲ್ಲಿಸಿರುತ್ತಾರೆ, ಶ್ರೀ ಬಿ. ಚಂದ್ರಶೇಖರಯ್ಯಾ ಅಧ್ಯಕ್ಷರು ಹಾಗೂ ಮುಂಬಡ್ತಿ ಸಮೀತಿ ಸಭೆಯ ಸದಸ್ಯರು ಕರ್ನಾಟಕ ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ನಿದೇಶನಾಲಯದ ಪರಿಶೀಷ್ಟ ಜಾತಿ/ಪರಿಶಿಷ್ಟ ಪಂಗಡದ ಅಧಿಕಾರಿ ಮತ್ತು ನೌಕರರ ಸಂಘ(ರಿ) ಇವರ ಪತ್ರ ದಿನಾಂಕ 21-10-2020 ರಲ್ಲಿ ಸದರಿ ನೌಕರರು ಸಲ್ಲಿಸಿರುವ ಪ್ರಮಾಣ ಪತ್ರವು ನಕಲಿ ಎಂದು ಮೇಲ್ನೋಟಕ್ಕೆ ಕಂಡುಬಂದಿ ಕಾರಣ ಸದರಿಯವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದ ಮೇರೆಗೆ ಈಸ್ಟರ್ನ ಇನ್ಸಟುಟ್ ಫಾರ್ ಇಂಟಿಗ್ರೆಟೆಡ್ ಲರ್ನಿಂಗ್ ಇನ್ ಮ್ಯಾನೇಜಮೆಂಟ್ ಯುನಿವರ್ಸಿಟಿ ಸಿಕ್ಕಿಮ್ ವಿಶ್ವವಿದ್ಯಾಲಯದ ಪದವಿ ಅಂಕಪಟ್ಟಿ ನೈಜತೆ ಕುರಿತು ಪರಿಶೀಲನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯಕ್ಕೆ ಪತ್ರ ವ್ಯವಹಾರ ಮಾಡಲಾಗಿದ್ದು ಅವರು Register (IC) EIILMU Sikkim/Deputy Director, Higher Education, Education Department, Government of Sikkim ಇವರ ಪತ್ರ ದಿನಾಂಕ  24-11-2020 ರಲ್ಲಿ “Bachelor of Arts & Bachelor of Arts (Economics) are not a UGC/DEC Recognised Course for EIILM University, Sikkim. As such the enclosed mark sheet copy of Md Abdul Rub bearing enrolment No, EIILMU/10/S/2158663 obtained from EIILM University Sikkim are not valid/genuine ಎಂದು ತಿಳಿಸಿರುತ್ತಾರೆ, ಮೇಲಿನ ಅಂಶಗಳನ್ನು ಪರಿಶೀಲಿಸಲಾಗಿ ಸದರಿಯವರು ನಿರ್ದೇಶನಾಲಯಕ್ಕೆ ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಮುಂಬಡ್ತಿ ಪಡೆದಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ ಹಾಗೂ ಸರ್ಕಾರಕ್ಕೆ/ಇಲಾಖೆಗೆ ವಂಚನೆ ಮಾಡಿ ಕಾನೂನು ಬಾಹೀರವಾಗಿ ಕರ್ತವ್ಯಲೋಪವೆಸಗಿ ಸರ್ಕಾರಿ ನೌಕರನೊಬ್ಬನಿಗೆ ಸಲ್ಲದ ರೀತಿಯಲ್ಲಿ ವರ್ತಿಸಿರುತ್ತಾರೆಂದು ಫಿರ್ಯಾದಿ ಎನ್. ಮಧುರಾವ ನಿರ್ದೇಶಕರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಬಹುಮಹಡಿ ಕಟ್ಟಡ ಡಾ|| ಬಿ.ಆರ್ ಅಂಬೇಡ್ಕರ ವಿಧಿ ಬೆಂಗಳೂರು ರವರು ಕೊಟ್ಟ ದೂರಿನ ಸಾರಾಂಶದ ಮೇರೆಗೆ ದಿನಾಂಕ 15-01-2021 ರಂದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 10/2012, ಕಲಂ. ಮಹಿಳೆ ಮತ್ತು ಮಕ್ಕಳು ಕಾಣೆ :-

ದಿನಾಂಕ 15-01-2021 ರಂದು 0200 ಗಂಟೆಯಿಂದ 0500 ಗಂಟೆ ಅವಧಿಯಲ್ಲಿ ಫಿರ್ಯಾದಿ ರಮೇಶ ತಂದೆ ಶಿವಪ್ಪಾ ಹಲಗಿ, ವಯ: 44 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಮದರಗಿ, ತಾ: ಚಿಟಗುಪ್ಪಾ ರವರ ಹೆಂಡತಿ ಅಂಬಿಕಾ ಜೊತೆಗೆಮ್ಮ ಮಕ್ಕಳಾದ ರೋಷನಿ ಹಾಗು ರೋಹನ ರವರನ್ನು ಕರೆದುಕೊಂಡು ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೋಗಿ ಕಾಣೆಯಾಗಿರುತ್ತಾರೆ, ಕಾಣೆಯಾದನ್ನ ಹೆಂಡತಿ ಮಕ್ಕಳ ವಿವರ ಹಾಗು ಚಹರೆ ಪಟ್ಟಿ 1) ಹೆಸರು : ಅಂಬಿಕಾ, ವಯ: 36 ವರ್ಷ, ಎತ್ತರ: 5’ 1’’, ಚಹರೆ ಪಟ್ಟಿ: ಧೃಡವಾದ ಮೈಕಟ್ಟು & ಗೊಧಿ ಬಣ್ಣ, ಧರಿಸಿದ ಬಟ್ಟೆಗಳು: ಹಸೀರು ನೀಲಿ ಬಣ್ಣದ ಸೀರೆ, ಭಾಷೆ: ಕನ್ನಡ ಮತ್ತು ಹಿಂದಿ, 2) ಹೆಸರು: ರೋಷನಿ, ವಯ: 13 ವರ್ಷ, ಎತ್ತರ : 4’ 6’’, ಚಹರೆ ಪಟ್ಟಿ: ಧೃಡವಾದ ಮೈಕಟ್ಟು & ಗೊಧಿ ಬಣ್ಣ, ಧರಿಸಿದ ಬಟ್ಟೆಗಳು: ಬೂದು ಬಣ್ಣದ ಟಿ-ಶರ್ಟ & ಜೀನ್ಸ ಪ್ಯಾಂಟ್, ಭಾಷೆ: ಕನ್ನಡ ಮತ್ತು ಹಿಂದಿ ಹಾಗೂ 3) ಹೆಸರು: ರೋಹನ, ವಯ: 06 ವರ್ಷ, ಎತ್ತರ: 3’ 0’’, ಚಹರೆ ಪಟ್ಟಿ: ಧೃಡವಾದ ಮೈಕಟ್ಟು & ಗೊಧಿ ಬಣ್ಣ, ಧರಿಸಿದ ಬಟ್ಟೆಗಳು: ಬಿಳಿ ಕಪ್ಪು ಪಟ್ಟೆಯುಳ್ಳ ಟಿ-ಶರ್ಟ & ನೀಲಿ ಜೀನ್ಸ ಪ್ಯಾಂಟ್, ಭಾಷೆ: ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 10/2021, ಕಲಂ. 363 ಐಪಿಸಿ :-

ದಿನಾಂಕ 13-0-2021 ರಂದು ಫಿರ್ಯಾದಿ ಕಾಶಿನಾಥ ತಂದೆ ಪಂಡರಿ ಅಕ್ರೆ, ವಯ: 45 ವರ್ಷ, ಜಾತಿ: ಮರಾಠಾ, ಸಾ: ಘಾಟಬೋರಳ, ತಾ: ಹುಮನಾಬಾದ ರವರ ಮಗನಾದ ಸುಮೀತ ತಂದೆ ಕಾಶಿನಾಥ ಅಕ್ರೆ, ವಯ: 17 ವರ್ಷ ಇತನು ತಮ್ಮೂರ ಶಿವಾರದಲ್ಲಿದ್ದ ತಮ್ಮ ಹೊಲಕ್ಕೆ ಹೋಗುತ್ತೇನೆ ಅಂತಾ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ, ಅವನಿಗೆ ಯಾರಾದರೂ ಅಪಹರಿಸಿಕೊಂಡು ಹೋಗಿರುಬಹುದೆಂದು ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.