Police Bhavan Kalaburagi

Police Bhavan Kalaburagi

Wednesday, May 26, 2021

BIDAR DISTRICT DAILY CRIME UPDATE 26-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-05-2021

 

ಬಗದಲ ಪೊಲೀಸ್ ಠಾಣೆ  ಅಪರಾಧ ಸಂ. 28/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಇಂದುಮತಿ ಗಂಡ  ಅಂಬಣ್ಣಾ ವಯ: 45 ವರ್ಷ, ಜಾತಿ: ಕೊಳಿ, ಸಾ: ಸಿರ್ಸಿ(ಎ), ತಾ: ಬೀದರ ರವರು ಕೆಲವು ದಿವಸಗಳ ಹಿಂದೆ ತನ್ನ ಎರಡನೆ ಅಕ್ಕಳಾದ ಸೂಗಮ್ಮ ಇವಳ ಮಗನ ಮದುವೆ ಸಮಾರಂಭದ ಕುರಿತು ದುಬಲಗುಂಡಿ ಗ್ರಾಮಕ್ಕೆ ಹೋಗಿದ್ದು ಅಲ್ಲಿಗೆ ದೊಡ್ಡಕ್ಕಳಾದ ಕಮಳಮ್ಮ ಮತ್ತು ಅವರ ಮಗಳಾದ ಸುನಿತಾ ಇಬ್ಬರೂ ಬಂದಿದ್ದು ಇರುತ್ತದೆ, ಮದುವೆ ಮುಗಿದ ನಂತರ ಫಿರ್ಯಾದಿಯವರ ಆರೋಗ್ಯ ಸರಿ ಇರಲಾರದ ಕಾರಣ ಆರೈಕೆ ಕುರಿತು ಅಕ್ಕಳ ಮಗಳಾದ ಸುನಿತಾ ಇವಳಿಗೆ ತನ್ನೊಂದಿಗೆ ಸಿರ್ಸಿ ಗ್ರಾಮಕಕೆ ದಿನಾಂಕ 07-05-2021 ರಂದು ಕರೆದುಕೋಂಡು ಬಂದಿದ್ದು, ಹೀಗಿರುವಾಗ ದಿನಾಂಕ-20-5-2021 ರಂದು 0800 ಗಂಟೆಗೆ ಫಿರ್ಯಾದಿಯು ತಮ್ಮೂರಿನ ಜನರೊಂದಿಗೆ ಹೊಲದಲ್ಲಿ ಕೋಯ್ಲು ಆಯುವ ಸಲುವಾಗಿ ಹೊಲಕ್ಕೆ ಹೋಗುವಾಗ ಅಕ್ಕನ ಮಗಳಾದ ಸುನಿತಾ ಇವಳಿಗೆ ಮನೆಯಲ್ಲಿ ಇರಲು ಹೇಳಿ ಹೋಗಿದ್ದು, ನಂತರ ಗಂಡನಾದ ಅಂಬಣ್ಣ ರವರು ಹೊಲಕ್ಕೆ ಬಂದು ಸುನಿತಾ ಇವಳು ಮನೆಯಲ್ಲಿ ಕಾಣುತ್ತಿಲ್ಲ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮನೆಗೆ ಬಂದು ನೋಡಲು ವಿಷಯ ನಿಜವಿದ್ದು, ನಂತರ ಆಕೆಯನ್ನು ಗ್ರಾಮದಲ್ಲಿ ಹಾಗೂ ಅಕ್ಕ ಕಮಳಮ್ಮ & ಸಂಬಂಧಿಕರಿಗೆ ಕರೆ ಮಡಿ ವಿಚಾರಿಸಲು ಸುನಿತಾ ಇವಳಿಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಸುನಿತಾ ಇವಳ ಚಹರೆ ಪಟ್ಟಿ 1) ಹೆಸರು: ಸುನಿತಾ ತಂದೆ ಶಿವರಾಜ, ವಯ 18 ವರ್ಷ 6 ತಿಂಗಳು, 3) ಎತ್ತರ 6 ಪೀಟ್, 4) ಮೈ ಬಣ್ಣ: ಬಿಳಿ ಮೈ ಬಣ್ಣ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕರಿಯ ಕೂದಲು 5) ಧರಿಸಿದ ಉಡುಪು: ಕರಿಯ ಬಣ್ಣದ ಲೆಗಿನ್ಸ್ ಹಾಗೂ ಹಳದಿ ಬಣ್ಣದ ಟಾಪ್ ಧರಿಸಿರುತ್ತಾಳೆ, ಹಾಗೂ 6) ಮಾತನಾಡವು ಭಾಷೆ: ಹಿಂದಿ, ತಲಗು & ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 48/2021, ಕಲಂ. 498(), 504, 506 ಐಪಿಸಿ :-

ಫಿರ್ಯಾದಿ ಜಗದೇವಿ ಗಂಡ ಲಕ್ಷ್ಮಣ ಹಳೆಮನಿ ವಯ: 42 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಬೋರಾಳ ಗ್ರಾಮ ರವರಿಗೆ ಸುಮಾರು 15 ವರ್ಷಗಳ ಹಿಂದೆ ಮ್ಮ ಸಂಪ್ರಾದಾಯದಂತೆ ಮ್ಮೂರ ಲಕ್ಷ್ಮಣ ಹಳೆಮನಿ ಎಂಬುವವರಿಗೆ ಕೊಟು್ಟ ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆಯಾಗಿ ಎರಡು ವರ್ಷ ಸಂಸಾರ ಮಾಡಿದ್ದು, ವಾಗಿನಿಂದ ಗಂಡ ಮನೆಗೆ ಬಂದು ದಿನಾಲು ಫಿರ್ಯಾದಿಯ ಶೀಲದ ಮೇಲೆ ಶಂಕಿಸಿ ನೀನು ಚೆನ್ನಾಗಿಲ್ಲಾ, ನಿನಗೆ ಕೆಲಸ ಮಾಡಲು ಬರುವುದಿಲ್ಲಾ ಮತ್ತು ನಿನಗೆ ಮಕ್ಕಳಾಗುವುದಿಲ್ಲಾ, ನೀನು ಗೊಡ್ಡ ಇದ್ದಿ, ನೀನು ನನ್ನ ಮನೆಯಲ್ಲಿರಬೇಡ, ನಿನ್ನ ತವರು ಮನೆಗೆ ಹೊಗು ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಾ, ಹೊಡೆ ಬಡೆ ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 25-05-2021 ರಂದು ಫಿರ್ಯಾದಿಯು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಗಂಡ ಮನೆಗೆ ಬಂದು ಇವತ್ತು ಊಟಕ್ಕೆ ಏನು ಮಾಡಲಿಲ್ಲಾ, ನೀನು ನಿನ್ನ ತವರು ಮನೆಗೆ ಹೊಗು ಅಂತ ಎಷ್ಟು ಹೇಳಿದರೂ ಇಲ್ಲಿಯೆ ಬಿದ್ದು ಸಾಯುತ್ತಿದ್ದಿ ಇವತ್ತು ನಿನ್ನ ತವರು ಮನೆಗೆ ಹೊಗದಿದ್ದರೆ ನಿನಗೆ ನಿನಗೆ ಜೀವ ಸಹೀತ ಬಿಡುವುದಿಲ್ಲಾ ಅಂತ ಹೇಳಿ ಜೀವದ ಬೇದರಿಕೆ ಹಾಕಿ ಕೈ ಹಿಡಿದು ಎಳೆದಾಡುತ್ತಾ ತವರು ಮನೆಗೆ ಕರೆದುಕೊಂಡು ಬಂದಾಗ  ಮನೆಯಲ್ಲಿದ್ದ ತಾಯಿ ಸುಂದ್ರಮ್ಮಾ ರವರು ನೋಡಿ ಯಾಕೆ ಮಗಳೊಂದಿಗೆ ಹೀಗೆ ಜಗಳ ಮಾಡುತ್ತಿದ್ದಿ ನಮ್ಮ ಮನೆಗೆ ಯಾಕೆ ಕರೆದುಕೊಂಡು ಬಂದಿದ್ದಿ ಅಂತ ಕೇಳಲು ಗಂಡನು ತಾಯಿ ಸುಂದ್ರಮ್ಮಾ ಇವಳಿಗೆ ನಿನ್ನ ಮಗಳ ಜೊತೆ ನಾನು ಸಂಸಾರ ಮಾಡುವುದಿಲ್ಲಾ, ನಿನ್ನ ಮಗಳಿಗೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳು ಅಂತ ಅವಾಚ್ಯವಾಗಿ ಬೈದು ಹೋಗಿರುತ್ತಾನೆಂದು ಕೊಟಟ್ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 98/2021, ಕಲಂ. 379 ಐಪಿಸಿ :-

ದಿನಾಂಕ 21-05-2021 ರಂದು 1000 ಗಂಟೆಯಿಂದ ದಿನಾಂಕ 24-05-2021 ರಂದು 1330 ಗಂಟೆಯ ಮಧ್ಯದ ಅವಧಿಯಲ್ಲಿ ಬಸವಕಲ್ಯಾಣ ಸಿವೀಲ್ ನ್ಯಾಯಾಲಯದ ಆವರ್ಣದಲ್ಲಿ ಜನರೇಟರಗೆ ಅಳವಡಿಸಿದ 12 ಓಲ್ಟ್ (ಹೆಚ್.ಡಿ ಪವರ ಫ್ರೀಡಂ) ಕಂಪನಿಯ ಬ್ಯಾಟರಿ ಅ.ಕಿ 7,500/- ರೂಪಾಯಿ ಬೆಲೆ ಬಾಳುವ ಬ್ಯಾಟರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಸತೀಶಕುಮಾರ ತಂದೆ ಜಾನ್ ವಯ: 51 ವರ್ಷ, ಜಾತಿ: ಕ್ರಿಶ್ಚಿನ್, ಉ: ಬಸವಕಲ್ಯಾಣ ಸಿವೀಲ್ ನ್ಯಾಯಾಲಯದಲ್ಲಿ ಸಿ.ಎಂ. ಸಾ: ಮಂಗಲಪೇಟ ಬೀದರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 25-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

BIDAR DISTRICT DAILY CRIME UPDATE 25-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-05-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 80/2021, ಕಲಂ. 379 ಐಪಿಸಿ :-

ದಿನಾಂಕ 19-04-2021 ರಂದು ಫಿರ್ಯಾದಿ ರಾಜು ತಂದೆ ಪ್ರಭು ವಯ: 47 ವರ್ಷ, ಜಾತಿ: ಕ್ರೀಶ್ಚನ, ಸಾ: ಶಾಹಪೂರ ಗೇಟ ಬೀದರ ರವರು ಮತ್ತು ಜಗದೀಶ ಶಹಪೂರ ಗೇಟ ಇಬ್ಬರು ಸೆಂಟ ಎನ್ಸ ಸೋಸೈಟಿಯ ಹಿರೊ ಮೈಸ್ಟ್ರೋ ವಾಹನ ಸಂ. ಕೆಎ-38/ವಿ-7430 ನೇದರ ಮೇಲೆ ಬೀದರ ಗಾಂಧಿಗಂಜದಲ್ಲಿರುವ ಕೃಷ್ಣಾ ಜನರಲ ಸ್ಟೋರ ಅಂಗಡಿಗೆ ಸೆಂಟ ಎನ್ಸ ಸೋಸೈಟಿಯ ಸಾಮಾನು ತರಲು ಬಂದು 1900 ಗಂಟೆಗೆ ಸದರಿ ವಾಹನ ಅಂಗಡಿಯ ಮುಂದೆ ಕೀಲಿ ಹಾಕಿ ನಿಲ್ಲಿಸಿ ಅಂಗಡಿಗೆ ಹೋಗಿ 1930 ಗಂಟೆಗೆ ಮರಳಿ ಬಂದು ನೋಡಲಾಗಿ ಫಿರ್ಯಾದಿಯವರು ನಿಲ್ಲಿಸಿದ ಸ್ಕೂಟರ ಇರಲಿಲ್ಲಾ, ಅಕ್ಕಪಕ್ಕದ ಜನರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವದಿಲ್ಲಾ, ನಂತರ ಫಿರ್ಯಾದಿಯು ತನ್ನ ಸ್ನೇಹಿತರ ಜೊತೆ ಕೂಡಿ ಎಲ್ಲಾ ಕಡೆ  ಹುಡುಕಾಡಿದರೂ ಸಹ ಸ್ಕೂಟರ ಪತ್ತೆಯಾಗಿರುವುದಿಲ್ಲಾ, ಕಾರಣ 1) ಹಿರೊ ಮೈಸ್ಟ್ರೋ ಸ್ಕೂಟರ ವಾಹನ ನಂ. ಕೆಎ-38/ವಿ-7430, ) Engine No. JF33ABJ4J21243, 3) Chassis No. MBLJFW013J4J18598, ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 100/2021, ಕಲಂ. 380 ಐಪಿಸಿ :-

ದಿನಾಂಕ 23-05-2021 ರಂದು 1030 ಗಂಟೆಯಿಂದ 1530 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಪೌಲ ಆಂಟೋನಿ ತಂದೆ ಸಾಮಸನ್ ಕೇರುರಕರ, ವಯ: 28 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಹೂಗಾರ ಲೇಔಟ ಕ್ರೀಶ್ಚಿಯನ ಗಲ್ಲಿ ಚಿಟಗುಪ್ಪಾ ರವರ ಮನೆ ಬಾಗಿಲು ತರೆದಿರುವಾಗ ಮನೆಯ ಬೇಡ ರೂಮಿನಲ್ಲಿದ್ದ 1) ನಗದು ಹಣ 3300/- ರೂ., 2) ಡ್ರೈಸಿಂಗ ಟೇಬಲನಲ್ಲಿದ್ದ ಹೆಂಡತಿಯ 3 ತೊಲೆ 3 ಗ್ರಾಂ. ನ ಬಂಗಾರದ ಗಂಟನ್  ಸರ  ಅ.ಕಿ 1,32,000/- ರೂ., ಹಾಗೂ 3) 2 ತೊಲೆ ಬಂಗಾದರ ಲಾಕೇಟ ಸರ್ ಅ.ಕಿ 69,300/- ರೂ. ಹೀಗೆ ಒಟ್ಟು 2,01,300/- ರೂಪಾಯಿ ಬೆಲೆಬಾಳುವ ಬಂಗಾರಆಭರಣ ಹಾಗು ನಗದು ಹಣ ನೇದವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 97/2021, ಕಲಂ. 4(1ಎ), 21 ಎಮ್.ಎಮ್.ಆರ್.ಡಿ ಕಾಯ್ದೆ 1957  ಜೋತೆ 379 ಐಪಿಸಿ :-

ದಿನಾಂಕ 24-05-2021 ರಂದು ಜಿ.ಎಂ.ಪಾಟೀಲ ಪಿಎಸ್ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರು ಬಸವಕಲ್ಯಾಣ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತ ಅಂಬೇಡ್ಕರ ಚೌಕ ಹತ್ತಿರ ಹೋದಾಗ ಎದುರಿನಿಂದ ಹರಳಯ್ಯಾ ಚೌಕ ಕಡೆಯಿಂದ ರೇತಿ (ಬಿಳಿ ಉಸುಕು) ಲೋಡ ವುಳ್ಳ ಅಶೋಕ ಲಿಲ್ಯಾಂಡ ಲಾರಿ ಬರುವುದನ್ನು ನೋಡಿ ಅದನ್ನು ನಿಲ್ಲಿಸಿ ಚಾಲಕನಿಗೆ ಹೆಸರು ವಿಚಾರಿಸಲು ಆತನು ನಾಗೇಂದ್ರಪ್ಪಾ ಪೂಜಾರಿ ವಯ: 42 ವರ್ಷ, ಜಾತಿ: ಕುರುಬ, ಸಾ: ಕಲಬುರಗಿ ಎಂದು ತಿಳಿಸಿದಾಗ ಲಾರಿಯಲ್ಲಿ ಎನಿದೆ? ಎಂದು ವಿಚಾರಿಸಲು ನಾಗೇಂದ್ರಪ್ಪಾ ಇತನು ರೇತಿ (ಬಿಳಿ ಉಸುಕು) ಲೋಡ ಇದೆ ಎಂದು ತಿಳಿಸಿದಾಗ ಇದನ್ನು ಎಲ್ಲಿಗೆ ತಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಕಲಬುರಿಗಿ ಜಿಲ್ಲೆಯ ಶಾಹಪೂರದಲ್ಲಿ ಲೋಡ ಮಾಡಿಕೊಂಡು ಬಸವಕಲ್ಯಾಣ ಪಟ್ಟಣದಲ್ಲಿ ಮಾರಾಟ ಮಾಡುವ ಕುರಿತು ತೆಗೆದುಕೊಂಡು ಬಂದಿರುತ್ತೆನೆ ಎಂದು ತಿಳಿಸಿದಾಗ ಆತನಿಗೆ ನಿನ್ನ ಹತ್ತಿರ ಲಾರಿಯಲ್ಲಿ ರೇತಿ (ಬಿಳಿ ಉಸುಕು) ಲೋಡ ಮಾಡಿಕೊಂಡು ಗ್ರಾಹಕರಿಗೆ ಮಾರಾಟ ಮಾಡುವ ಬಗ್ಗೆ ಲೈಸೆನ್ಸ ವಗೈರೆ ಇದ್ದರೆ ಹಾಜರ ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ತರಹದ ಲೈಸೆನ್ಸ ಇರುವುದಿಲ್ಲ ಎಂದು ತಿಳಿಸಿರುತ್ತಾನೆ, ಕಾರಣ ಆರೋಪಿ ನಾಗೇಂದ್ರಪ್ಪ ಇತನು ಅನಧಿಕೃತವಾಗಿ ಶೋಕ ಲೀಲ್ಯಾಂಡ ಲಾರಿ ನಂ. ಕೆಎ-32/ಡಿ-3559 ನೇದರಲ್ಲಿ ರೇತಿ (ಬಿಳಿ ಉಸುಕು) ಲೋಡ ಮಾಡಿಕೊಂಡು ಗ್ರಾಹಕರಿಗೆ ಮರಾಟ ಮಾಡುವ ಕುರಿತು ಬಸವಕಲ್ಯಾಣ ನಗರದಲ್ಲಿ ತೆಗೆದುಕೊಂಡು ಬಂದಿರುತ್ತಾನೆಂದು ಕೊಟ್ಟ ಸಾರಾಂಶದ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 44/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 24-05-2021 ರಂದು ಮದನೂರ ಗ್ರಾಮದ ಅಪ್ಪಾರಾವ ಬಳತೆರವರ ಕೊಟ್ಟಿಗೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗೋಲಾಗಿ ಕುಳಿತು ಪರೇಲ ಎಂಬ ನಸಿಬಿನ ಜೂಜಾಟ ಹಣ ಹಚ್ಚಿ ಪಣ ತೊಟ್ಟು ಆಡುತ್ತಿದ್ದಾರೆಂದು ಪಾಲಾಕ್ಷಯ್ಯಾ ಎಮ್.ಹಿರೇಮಠ ಸಿ.ಪಿ.ಐ ಕಮಲನಗರ ವೃತ್ತ ಕಛೇರಿ, ಕಮಲನಗರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮದನೂರ ಗ್ರಾಮಕ್ಕೆ ಹೋಗಿ ನೋಡಲು ಅಪ್ಪಾರಾವ ಬಳತೆರವರ ಕೊಟ್ಟಿಗೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸಿದ್ರಾಮ ತಂದೆ ಕಾಶಿನಾಥ ರೊಟ್ಟೆ, 2) ಹಾವಗೆಪ್ಪಾ ತಂದೆ ರಾಮಶೆಟ್ಟೆ ವಾಡೆ, 3) ಶಿವಕಾಂತ ತಂದೆ ಗುಣವಂತರಾವ ವಾಡೆ, 4) ಬಾಪೂರಾವ ತಂದೆ ನಾಗಶೆಟ್ಟಿ ಬಲ್ಲೆ, 5) ರಾಜಕುಮಾರ ತಂದೆ ದೆವರಾವ ಪಾಟೀಲ, 6) ವೈಜಿನಾಥ ತಂದೆ ಮಾರುತಿ ದಾಬಕೆ, 7) ಪಟ್ನಾಯಕ ತಂದೆ ಸಂಗ್ರಾಮ ಕೊಳಿ, 8) ಪಂಡಿತ ತಂದೆ ತ್ರಿಂಬಕ ಕೊಳಿ, 9) ಸುನೀಲ ತಂದೆ ಶಾಂತಪ್ಪಾ ಬೆಲ್ಲೆ, ಎಲ್ಲರೂ ಸಾ: ಮದನೂರ ಇವರೆಲ್ಲರೂ ಗೋಲಾಕಾರವಾಗಿ ಪರೇಲ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಂದ ಒಟ್ಟು ನಗದು ಹಣ 2410/- ರೂಪಾಯಿ ಹಾಗೂ 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.