ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-05-2021
ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 28/2021, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಇಂದುಮತಿ ಗಂಡ ಅಂಬಣ್ಣಾ ವಯ: 45 ವರ್ಷ, ಜಾತಿ: ಕೊಳಿ, ಸಾ: ಸಿರ್ಸಿ(ಎ), ತಾ: ಬೀದರ ರವರು ಕೆಲವು ದಿವಸಗಳ ಹಿಂದೆ ತನ್ನ ಎರಡನೆ ಅಕ್ಕಳಾದ ಸೂಗಮ್ಮ ಇವಳ ಮಗನ ಮದುವೆ ಸಮಾರಂಭದ ಕುರಿತು ದುಬಲಗುಂಡಿ ಗ್ರಾಮಕ್ಕೆ ಹೋಗಿದ್ದು ಅಲ್ಲಿಗೆ ದೊಡ್ಡಕ್ಕಳಾದ ಕಮಳಮ್ಮ ಮತ್ತು ಅವರ ಮಗಳಾದ ಸುನಿತಾ ಇಬ್ಬರೂ ಬಂದಿದ್ದು ಇರುತ್ತದೆ, ಮದುವೆ ಮುಗಿದ ನಂತರ ಫಿರ್ಯಾದಿಯವರ ಆರೋಗ್ಯ ಸರಿ ಇರಲಾರದ ಕಾರಣ ಆರೈಕೆ ಕುರಿತು ಅಕ್ಕಳ ಮಗಳಾದ ಸುನಿತಾ ಇವಳಿಗೆ ತನ್ನೊಂದಿಗೆ ಸಿರ್ಸಿ ಗ್ರಾಮಕಕೆ ದಿನಾಂಕ 07-05-2021 ರಂದು ಕರೆದುಕೋಂಡು ಬಂದಿದ್ದು, ಹೀಗಿರುವಾಗ ದಿನಾಂಕ-20-5-2021 ರಂದು 0800 ಗಂಟೆಗೆ ಫಿರ್ಯಾದಿಯು ತಮ್ಮೂರಿನ ಜನರೊಂದಿಗೆ ಹೊಲದಲ್ಲಿ ಕೋಯ್ಲು ಆಯುವ ಸಲುವಾಗಿ ಹೊಲಕ್ಕೆ ಹೋಗುವಾಗ ಅಕ್ಕನ ಮಗಳಾದ ಸುನಿತಾ ಇವಳಿಗೆ ಮನೆಯಲ್ಲಿ ಇರಲು ಹೇಳಿ ಹೋಗಿದ್ದು, ನಂತರ ಗಂಡನಾದ ಅಂಬಣ್ಣ ರವರು ಹೊಲಕ್ಕೆ ಬಂದು ಸುನಿತಾ ಇವಳು ಮನೆಯಲ್ಲಿ ಕಾಣುತ್ತಿಲ್ಲ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮನೆಗೆ ಬಂದು ನೋಡಲು ವಿಷಯ ನಿಜವಿದ್ದು, ನಂತರ ಆಕೆಯನ್ನು ಗ್ರಾಮದಲ್ಲಿ ಹಾಗೂ ಅಕ್ಕ ಕಮಳಮ್ಮ & ಸಂಬಂಧಿಕರಿಗೆ ಕರೆ ಮಡಿ ವಿಚಾರಿಸಲು ಸುನಿತಾ ಇವಳಿಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಸುನಿತಾ ಇವಳ ಚಹರೆ ಪಟ್ಟಿ 1) ಹೆಸರು: ಸುನಿತಾ ತಂದೆ ಶಿವರಾಜ, ವಯ 18 ವರ್ಷ 6 ತಿಂಗಳು, 3) ಎತ್ತರ 6 ಪೀಟ್, 4) ಮೈ ಬಣ್ಣ: ಬಿಳಿ ಮೈ ಬಣ್ಣ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕರಿಯ ಕೂದಲು 5) ಧರಿಸಿದ ಉಡುಪು: ಕರಿಯ ಬಣ್ಣದ ಲೆಗಿನ್ಸ್ ಹಾಗೂ ಹಳದಿ ಬಣ್ಣದ ಟಾಪ್ ಧರಿಸಿರುತ್ತಾಳೆ, ಹಾಗೂ 6) ಮಾತನಾಡವು ಭಾಷೆ: ಹಿಂದಿ, ತಲಗು & ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 48/2021, ಕಲಂ. 498(ಎ), 504, 506 ಐಪಿಸಿ :-
ಫಿರ್ಯಾದಿ ಜಗದೇವಿ ಗಂಡ ಲಕ್ಷ್ಮಣ ಹಳೆಮನಿ ವಯ: 42 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಬೋರಾಳ ಗ್ರಾಮ ರವರಿಗೆ ಸುಮಾರು 15 ವರ್ಷಗಳ ಹಿಂದೆ ತಮ್ಮ ಸಂಪ್ರಾದಾಯದಂತೆ ತಮ್ಮೂರ ಲಕ್ಷ್ಮಣ ಹಳೆಮನಿ ಎಂಬುವವರಿಗೆ ಕೊಟು್ಟ ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆಯಾಗಿ ಎರಡು ವರ್ಷ ಸಂಸಾರ ಮಾಡಿದ್ದು, ಆವಾಗಿನಿಂದ ಗಂಡ ಮನೆಗೆ ಬಂದು ದಿನಾಲು ಫಿರ್ಯಾದಿಯ ಶೀಲದ ಮೇಲೆ ಶಂಕಿಸಿ ನೀನು ಚೆನ್ನಾಗಿಲ್ಲಾ, ನಿನಗೆ ಕೆಲಸ ಮಾಡಲು ಬರುವುದಿಲ್ಲಾ ಮತ್ತು ನಿನಗೆ ಮಕ್ಕಳಾಗುವುದಿಲ್ಲಾ, ನೀನು ಗೊಡ್ಡ ಇದ್ದಿ, ನೀನು ನನ್ನ ಮನೆಯಲ್ಲಿರಬೇಡ, ನಿನ್ನ ತವರು ಮನೆಗೆ ಹೊಗು ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಾ, ಹೊಡೆ ಬಡೆ ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 25-05-2021 ರಂದು ಫಿರ್ಯಾದಿಯು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಗಂಡ ಮನೆಗೆ ಬಂದು ಇವತ್ತು ಊಟಕ್ಕೆ ಏನು ಮಾಡಲಿಲ್ಲಾ, ನೀನು ನಿನ್ನ ತವರು ಮನೆಗೆ ಹೊಗು ಅಂತ ಎಷ್ಟು ಹೇಳಿದರೂ ಇಲ್ಲಿಯೆ ಬಿದ್ದು ಸಾಯುತ್ತಿದ್ದಿ ಇವತ್ತು ನಿನ್ನ ತವರು ಮನೆಗೆ ಹೊಗದಿದ್ದರೆ ನಿನಗೆ ನಿನಗೆ ಜೀವ ಸಹೀತ ಬಿಡುವುದಿಲ್ಲಾ ಅಂತ ಹೇಳಿ ಜೀವದ ಬೇದರಿಕೆ ಹಾಕಿ ಕೈ ಹಿಡಿದು ಎಳೆದಾಡುತ್ತಾ ತವರು ಮನೆಗೆ ಕರೆದುಕೊಂಡು ಬಂದಾಗ ಮನೆಯಲ್ಲಿದ್ದ ತಾಯಿ ಸುಂದ್ರಮ್ಮಾ ರವರು ನೋಡಿ ಯಾಕೆ ಮಗಳೊಂದಿಗೆ ಹೀಗೆ ಜಗಳ ಮಾಡುತ್ತಿದ್ದಿ ನಮ್ಮ ಮನೆಗೆ ಯಾಕೆ ಕರೆದುಕೊಂಡು ಬಂದಿದ್ದಿ ಅಂತ ಕೇಳಲು ಗಂಡನು ತಾಯಿ ಸುಂದ್ರಮ್ಮಾ ಇವಳಿಗೆ ನಿನ್ನ ಮಗಳ ಜೊತೆ ನಾನು ಸಂಸಾರ ಮಾಡುವುದಿಲ್ಲಾ, ನಿನ್ನ ಮಗಳಿಗೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳು ಅಂತ ಅವಾಚ್ಯವಾಗಿ ಬೈದು ಹೋಗಿರುತ್ತಾನೆಂದು ಕೊಟಟ್ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 98/2021, ಕಲಂ. 379 ಐಪಿಸಿ :-
ದಿನಾಂಕ 21-05-2021 ರಂದು 1000 ಗಂಟೆಯಿಂದ ದಿನಾಂಕ 24-05-2021 ರಂದು 1330 ಗಂಟೆಯ ಮಧ್ಯದ ಅವಧಿಯಲ್ಲಿ ಬಸವಕಲ್ಯಾಣ ಸಿವೀಲ್ ನ್ಯಾಯಾಲಯದ ಆವರ್ಣದಲ್ಲಿ ಜನರೇಟರಗೆ ಅಳವಡಿಸಿದ 12 ಓಲ್ಟ್ (ಹೆಚ್.ಡಿ ಪವರ ಫ್ರೀಡಂ) ಕಂಪನಿಯ ಬ್ಯಾಟರಿ ಅ.ಕಿ 7,500/- ರೂಪಾಯಿ ಬೆಲೆ ಬಾಳುವ ಬ್ಯಾಟರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಸತೀಶಕುಮಾರ ತಂದೆ ಜಾನ್ ವಯ: 51 ವರ್ಷ, ಜಾತಿ: ಕ್ರಿಶ್ಚಿನ್, ಉ: ಬಸವಕಲ್ಯಾಣ ಸಿವೀಲ್ ನ್ಯಾಯಾಲಯದಲ್ಲಿ ಸಿ.ಎಂ.ಓ ಸಾ: ಮಂಗಲಪೇಟ ಬೀದರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 25-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment