ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-05-2021
ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 26-05-2021 ರಂದು ಫಿರ್ಯಾದಿ ಮಹಾದೇವಿ ಗಂಡ ಗೋವಿಂದ ವಿದ್ಯಾಂತ ವಯ: 33 ವರ್ಷ, ಜಾತಿ: ಕುಂಬಾರ, ಸಾ: ಚಿಮೆಗಾಂವ, ತಾ: ಔರಾದ(ಬಿ) ರವರ ಗಂಡ ಗೋವಿಂದ ತಂದೆ ವಿಠಲ ವಿದ್ಯಾವಂತ ವಯ: 36 ವರ್ಷ ರವರು ತಮ್ಮೂರಿನ ರಾಮೇಶ್ವರ ತಂದೆ ದೌಲತರಾವ ನಿಡಬನೆ ರವರ ಜೊತೆಯಲ್ಲಿ ಮೊಟಾರ ಸೈಕಲ ನಂ. ಕೆಎ-38/ಎಸ್-7112 ನೇದರ ಮೇಲೆ ಔರಾದ ಉದಗೀರ ರೋಡ ತಮ್ಮೂರ ಭಾಗವತ ತಂದೆ ಗೋಪಿನಾಥ ಮುರ್ಕಿ ರವರ ಹೊಲದ ಹತ್ತಿರ ರೋಡಿನ ಬದಿಗೆ ಮೊಟಾರ ಸೈಕಲ ನಿಲ್ಲಿಸಿ ರಾಮೇಶ್ವರ ರವರು ಮಲ ವಿಸರ್ಜನೆ ಮಾಡಲು ಹೊಲದಲ್ಲಿ ಹೋದಾಗ ಗೋವಿಂದ ಇತನು ಮೊಟಾರ ಸೈಕಲ ಹತ್ತಿರ ನಿಂತಿರುವಾಗ ಉದಗೀರ ಕಡೆಯಿಂದ ಕಾರ ನಂ. ಕೆಎ-36/ಎನ್-4683 ನೇದರ ಚಾಲಕನಾದ ಆರೋಪಿ ರಾಜೇಂದ್ರ ತಂದೆ ಲಕ್ಷ್ಮಣ ಜಾಧವ ಸಾ: ಕೇಶವ ನಾಯಕ ತಾಂಡಾ ಲಿಂಗಿ, ತಾ: ಔರಾದ(ಬೀ0 ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡ ಬದಿಗೆ ಮೊಟಾರ ಸೈಕಲ ಹತ್ತಿರ ನಿಂತ ಗೋವಿಂದ ಇತನಿಗೆ ಡಿಕ್ಕಿ ಮಾಡಿ ಆರೋಪಿಯು ತನ್ನ ಕಾರನ್ನು ನಿಲ್ಲಿಸದೇ ಓಡುವಾಗ ಎದುರಿನಿಂದ ಬರುತ್ತಿದ್ದ ತಮ್ಮೂರ ಭರತ ತಂದೆ ರಘುನಾಥ ಮೂಳೆ ಈತನು ಕಾರ ಚಾಲಕನಿಗೆ ಅಡ್ಡಗಟ್ಟಿ ನಿಲ್ಲಿಸಿದಾಗ ಆರೋಪಿಯು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಗಂಡನಿಗೆ ಬಲಗಾಲ ಮೊಳಕಾಲ ಕೆಳಗೆ ಪೆಟ್ಟಾಗಿ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ, ತಲೆಗೆ ಭಾರಿ ರಕ್ತಗಾಯ, ಎಡ ಮೊಳಕಾಲಿಗೆ ರಕ್ತಗಾಯ, ಎಡಗಾಲು ತೊಡೆಗೆ ಗುಪ್ತಗಾಯವಾಗಿರುತ್ತದೆ, ನಂತರ ತನ್ನ ಗಂಡನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ವೈದ್ಯರು ನೋಡಿ ಗಂಡ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 42/2021, ಕಲಂ. ಮನುಷ್ಯ ಕಾಣೆ :-
ದಿನಾಂಕ 21-05-2021 ರಂದು 0600 ಗಂಟೆಯ ಸುಮಾರಿಗೆ ಫಿರ್ಯಾದಿ ಕೈಲಾಸ ತಂದೆ ಅಶೋಕ ಅಂಬುಲಗೆ ವಯ: 28 ವರ್ಷ, ಜಾತಿ: ಕುರುಬ, ಸಾ: ಭಾಗ್ಯ ನಗರ ರವರ ತಂದೆಯವರಾದ ಅಶೋಕ ಅಂಬುಲಗೆ ರವರು ತಮ್ಮ ಹೊಲದಲ್ಲಿ ನೌಕರಿ ಮಾಡುವ ಕುರುಬಖೇಳಗಿ ಗ್ರಾಮದ ಪಾಡುರಂಗ ತಂದೆ ಗುಂಡಪ್ಪ ಹಂದಿಕೆರ ಇತನಿಗೆ ಕರೆದುಕೊಂಡು ಬರುತ್ತೆನೆ ಅಂತ ಹೆಳಿ ಮನೆಯಲ್ಲಿನ ತಮ್ಮ ಟಿ.ವ್ಹಿ.ಎಸ್ ಎಕ್ಸ.ಎಲ್ ಮೊಟಾರ ಸೈಕಲ್ ನಂ. ಕೆಎ-39/ಎಲ್-7050 ನೇದನ್ನು ತೆಗೆದುಕೊಂಡು ಮನೆಯಿಂದ ಹೋಗಿ 1000 ಗಂಟೆಯಾದರು ತಂದೆ ಅಶೋಕ ರವರು ಮರಳಿ ಮನೆಗೆ ಬರಲಿಲ್ಲ, ಕಾರಣ ಅವರನ್ನು ಕುರುಬಖೇಳಗಿ ಗ್ರಾಮದ ತಮ್ಮ ಸಂಬಂಧಿಕರಿಗೆ ಹಾಗೂ ಪರಿಚಯವರಿಗೆ ಕರೆ ಮಾಡಿ ವಿಚಾರಿಸಲು ಅವರಿಂದ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ನಂತರ ಫಿರ್ಯಾದಿ ಹಾಗೂ ತಮ್ಮ ಅಂಕುಶ ರವರುಗಳು ಕೂಡಿ ತಮ್ಮ ಸಂಬಂಧಿಕರ ಊರುಗಳಾದ ಬಸವಕಲ್ಯಾಣ, ಘಾಟಬೋರಾಳ, ನಾರಾಯಣಪೂರ ವಾಡಿ ಹಾಗೂ ಇತರೆ ಗ್ರಾಮಗಳಿಗೆ ಹೋಗಿ ಸೂಮಾರು 3-4 ದಿನಗಳ ಕಾಲ ತಂದೆ ಅಶೋಕ ರವರಿಗೆ ಹುಡುಕಾಡಿದರು ಅಲ್ಲಿಯು ಸಹಃ ತಂದೆಯವರ ರವರ ಇರುವಿಕೆಯ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಅವರು ಕಾಣೆಯಾಗಿರುತ್ತಾರೆ, ತಂದೆ ಅಶೋಕ ರವರು ಮನೆಯಿಂದ ಹೋಗುವಾಗ ತಿಳಿ ನೀಲಿ ಬಣ್ಣದ ಪೂಲ್ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ ಹಾಗೂ ಅವರು ತೆಳ್ಳನೆಯ ಮೈಕಟ್ಟು, ಗೋದಿ ಮೈ ಬಣ್ಣ, 5.5 ಫೀಟ್ ಎತ್ತರವನ್ನು ಹೊಂದಿದ್ದು, ಕನ್ನಡ, ಮರಾಠಿ ಹಾಗೂ ತೆಲಗು ಭಾಷೆಗಳನ್ನು ಮಾತನಾಡುತ್ತಾರೆ ಮತ್ತು ಅವರ ಹತ್ತಿರ ಯಾವುದೇ ಮೋಬೈಲ್ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ದಿನಾಂಕ 26-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment