ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-05-2021
ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 31/2021, ಕಲಂ. 20(ಬಿ) 2(ಎ) ಎನ್.ಡಿ.ಪಿ.ಎಸ್ ಕಾಯ್ದೆ :-
ದಿನಾಂಕ 27-05-2021 ರಂದು ಇಂದಿರಾಬಾಯಿ ಪಾಟೀಲ ಪಿ.ಎಸ್.ಐ ಬಗದಲ್ ಪೊಲೀಸ್ ಠಾಣೆ ರರಿಗೆ ಬಂದ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು, ಪತ್ರಾಂಕಿತ ಅಧಿಕಾರಿ ಮತ್ತು ತೂಕ ಮಾಡುವವರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯರೊಡನೆ ಬಗದಲ ಮೀನಕೇರಾ ಕ್ರಾಸ್ ಹತ್ತಿರ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಹೊರಟ ಆಟೋ ನಂ. ಕೆಎ-38/ಎ-0245 ನೇದನ್ನು ನಿಲ್ಲಿಸಿದ್ದಾಗ ಅದರಲ್ಲಿಂದ ಓಡಿ ಹೊಗುತ್ತಿರುವ ಇಬ್ಬರು ಹೆಣ್ಣ ಮಕ್ಕಳನ್ನು ಮಹಿಳಾ ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಫಿಜಾ ಗಂಡ ಜಾಫರ ಇರಾನಿ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಸಹ್ಯಾದ್ರಿ ಬಿಲ್ಡಿಂಗ ಪಾಟೀಲ ನಗರ ಭಾಷ್ಕರ ಶಾಲೆ ಹತ್ತಿರ ಅಂಬಾವಾಲಿ ಪಶ್ಚಿಮ ಕಲ್ಯಾಣ ಥಾಣೆ ಮೋಹನ ಮಹಾರಾಷ್ಟ್ರ, 2) ಕುಲಸುಮಾ ತಂದೆ ಮಜುಲಮ ಅಫಜಲಖಾನ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಗಲ್ಲಿ ನಂ. 05 ಇಂದಿರಾ ನಗರ ಅಂಬಾವಾಲೆ ಸ್ಟೇಷನ ಹತ್ತಿರ ಪಾಟೀಲ ನಗರ ಅತಾಲಿ ಅಂಬೇವಾಲಿ ಥಾಣೆ ಮಹಾರಾಷ್ಟ್ರ ಅಂತ ತಿಳಿಸಿದ್ದು, ನಂತರ ಅವರಿಗೆ ಏಕೆ? ಓಡಿ ಹೋಗುತ್ತಿದ್ದಿರಿ ಅಂತ ಕೇಳಲಾಗಿ ನಾವು ನಮ್ಮ ಬ್ಯಾಗಗಳಲ್ಲಿ ಗಾಂಜಾ ಇರುವುದರಿಂದ ನಾವು ಓಡಿ ಹೋಗಿರುತ್ತೇವೆ ಅಂತ ತಿಳಿಸಿದ ಮೇರೆಗೆ ಆಟೋ ಚಾಲಕನಿಗೆ ವಿಚಾರಿಸಲು ಆತನ ತನ್ನ ಹೆಸರು 3) ಎಂಡಿ ಇಸ್ಮಾಯಿಲ ತಂದೆ ಎಂಡಿ ಗಫರ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಕುತ್ತಾಬಾದ, ಬೀದರ ಹಾಗೂ ಅವನ ಪಕ್ಕದಲ್ಲಿ ಕುಳಿತ 4) ಎಂಡಿ ಸಮೀರ ತಂದೆ ಎಂಡಿ ಬಾಬ, ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಕುತ್ತಾಬಾದ, ಬೀದರ ಅಂತ ತಿಳಿಸಿ ನಂತರ ನಾವು ಇಬ್ಬರು ಹೆಣ್ಣು ಮಕ್ಕಳನ್ನು ಬಾಡಿಗೆ ಮೇಲೆ ಮನ್ನಾಏಖೇಳಿ ವರಗೆ ಬಾಡಿಗೆ ಮೇಲೆ ಬಿಡಲು ಬಂದಿರುತ್ತೇವೆ ಇಷ್ಟು ಬಿಟ್ಟು ನಮಗೆ ಮತ್ತೇನು ಗೊತ್ತಿರುವುದಿಲ್ಲ ಅಂತ ತಿಳಿಸಿರುತ್ತಾರೆ, ತದನಂತರ ಫಿಜಾ ಮತ್ತು ಕುಲಸುಮ ರವರ ಬ್ಯಾಗಳಿಂದ 10 ಪ್ಯಾಕೇಟ ಗಾಂಜಾವನ್ನು ಮತ್ತು 2000/- ರೂ. ನಗದು ಹಣ ಮತ್ತು ಇಬ್ಬರು ಆಪಾದಿತರನ್ನು ಗಾಂಜಾ ಸಾಗಿಸಲು ಬಳಸಿದ್ದ ಆಟೋ ನಂ. ಕೆಎ-38/ಎ0-245 ಅ.ಕಿ 50,000/- ರೂ. ನೇದನ್ನು ವಶಪಡಿಸಿಕೊಂಡು, ಸಿಬ್ಬಂದಿಯವರ ಸಹಾಯದಿಂದ ತೂಕ ಮಾಡಿ ನೋಡಲು 20 ಕೆಜಿ ಗಾಂಜಾ ಅ.ಕಿ 2,00,000/- ರೂಪಾಯಿ ಬೆಲೆ ಬಾಳುವುದು ಹೀಗೆ ಹೀಗೆ ಒಟ್ಟು 2,52,000/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 47/2021, ಕಲಂ. 279, 338 ಐಪಿಸಿ :-
ದಿನಾಂಕ 26-05-2021 ರಂದು ಫಿರ್ಯಾದಿ ಮೌಲಾಲಿ ತಂದೆ ಅಲಿಬಾಗ್ ಕಮಾನ ದರವಾಜಾ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ನೌಕಾಡ ಗಲ್ಲಿ ಆಳಂದ, ಜಿ: ಕಲಬುರಗಿ ರವರು ಲಾರಿ ನಂ. ಎಂ.ಹೆಚ್-12/ಎಲ್.ಟಿ-1773 ನೇದರಲ್ಲಿ ಸೇಂಡದಿಂದ ಸಿಮೇಂಟ ಲೋಡ ಮಾಡಿಕೊಂಡು ಬಸವಕಲ್ಯಾಣದಲ್ಲಿ ಕೆಲಸವಿದ್ದ ಕಾರಣ ಬಸವಕಲ್ಯಾಣಕ್ಕೆ ಬಂದು ಕೆಲಸ ಮುಗಿಸಿಕೊಂಡು ದಿನಾಂಕ 27-05-2021 ರಂದು ಮುಂಬೈಗೆ ಸಿಮೇಂಟ ಲೋಡ್ ತೆಗೆದುಕೊಂಡು ರಾ.ಹೇ ನಂ. 65 ರ ಮುಖಾಂತರ ಮುಂಬೈ ಕಡೆಗೆ ಹೋಗುವಾಗ, ಹಳ್ಳಿ ಗ್ರಾಮದ ಸಮೀಪ ತನ್ನ ಲಾರಿಯ ಹಿಂದಿನ ಒಂದು ಟೈರ್ ಪಂಚರ್ ಆದ ಕಾರಣ ಲಾರಿಯನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ಮುನ್ಸೂಚನೆ ಕುರಿತು ಇಂಡಿಕೇಟರ ಹಾಕಿ ಲಾರಿಯಿಂದ ಕೆಳಗೆ ಇಳಿದು ನಿಂತಿರುವಾಗ ಬಂಗ್ಲಾ ಕಡೆಯಿಂದ ಐಚರ್ ವಾಹನ ಸಂ. ಜಿ.ಜೆ-03/ಬಿ.ಡಬ್ಲು-5944 ನೇದರ ಚಾಲಕನಾದ ಆರೋಪಿ ಅಜಯ ತಂದೆ ರೇವಾಭಾಯಿ ವಯ: 28 ವರ್ಷ, ಸಾ: ರಾಜಕೋಟ ಗುಜರಾತ ಇತನು ತನ್ನ ವಾಹನವನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಲಾರಿಗೆ ಹಿಂಭಾಗ ಡಿಕ್ಕಿ ಮಾಡಿದನು, ಸದರಿ ಅಪಘಾತದಿಂದ ಆರೋಪಿಯು ತನ್ನ ವಾಹನದಲ್ಲೆ ಸಿಕ್ಕಿ ಹಾಕಿಕೊಂಡಿದ್ದು, ನಂತರ ಜನರ ಸಹಾಯದಿಂದ ಆರೋಪಿಗೆ ಹೊರಗೆ ತೆಗೆದು ನೋಡಲು ಆತನ ಬಲಗಣ್ಣಿನ ಮೇಲೆ ರಕ್ತಗಾಯ, ಮೂಗಿನ ಹತ್ತಿರ ರಕ್ತಗಾಯ, ಎಡಗಾಲು ತೊಡೆಗೆ ಭಾರಿ ಗಾಯವಾಗಿದ್ದರಿಂದ
ಆತನಿಗೆ ಅಂಬುಲೇನ್ಸ್ ನಲ್ಲಿ ಹಾಕಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment