ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-05-2021
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 22/2021, ಕಲಂ. 498(ಎ), 323, 504, 506 ಜೊತೆ 34 IPಅ ಮತ್ತು 3 & 4 ಡಿ.ಪಿ ಕಾಯ್ದೆ :-
ದಿನಾಂಕ 28-05-2021 ರಂದು ಫಿರ್ಯಾದಿ ಮಮಿತಾ ಗಂಡ ಗೌತಮಶೀಲ ಅಗಸಿ ವಯ: 21 ವರ್ಷ, ಜಾತಿ: ದಲಿತ, ಸಾ: ಚಾಂಗಲೇರಾ ರವರಿಗೆ ಕಳೆದ 3 ವರ್ಷವಳ ಹಿಂದೆ ಗ್ರಾಮದ ಗೌತಮಶೀಲ ಇತನೊಂದಿಗೆ ತಮ್ಮ ಸಾಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಲ್ಲಿ ತಂದೆ ತಾಯಿಯವರು ಗಂಡನ ಮನೆಯವರಿಗೆ 25 ಗ್ರಾಂ ಬಂಗಾರ ಮತ್ತು ನಗದು ಹಣ 50,000/- ರೂಪಾಯಿ ವರದಕ್ಷಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಗಂಡ ಹೆಂಡತಿ 5-6 ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದು ನಂತರ ಆರೋಪಿತರಾದ ಗಂಡ, ಅತ್ತೆ ಮತ್ತು ನಾದುನಿ ಮೂವರು ಫಿರ್ಯಾದಿಯ ಮೇಲೆ ಸಂಶಯ ಮಾಡಿ ನೀನು ಯಾರನ್ನು ನೋಡುತ್ತಿದ್ದಿ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಆಗಾಗ ಬೈಯುತ್ತಿದ್ದರು ಮತ್ತು ತಂದೆ ತಾಯಿವರಿಂದ ಇನ್ನೂ ವರದಕ್ಷಣೆ ತಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನಿಡುತ್ತಿದ್ದರು ಅದರಂತೆ ಫಿರ್ಯಾದಿಯು ತಂದೆ ತಾಯಿಯವರಿಂದ ಒಂದು ಸಾರಿ 50,000/- ರೂ. ಮತ್ತೊಮ್ಮೆ 40,000/- ರೂ ಮತ್ತು ಇನ್ನೊಮ್ಮೆ 30,000/- ರೂ ತಗೆದುಕೊಂಡು ಬಂದು ತನ್ನ ಗಂಡ ಮತ್ತು ಅತ್ತೆಗೆ ಕೊಟ್ಟಿದ್ದು ಇರುತ್ತದೆ ಮತ್ತು ಫಿರ್ಯಾದಿಗೆ ಒಬ್ಬ ಗಂಡು ಮಗ ಹುಟ್ಟಿದ್ದು ಇರುತ್ತದೆ, ಈಗ ಸದ್ಯ 6 ತಿಂಗಳ ಗರ್ಭಿಣಿಯಾಗಿದ್ದು, ಹೀಗಿರುವಾಗ ದಿನಾಂಕ 26-05-2021 ರಂದು ಗಂಡ ಗೌತಮಶೀಲ ಇತನು ಹೋರಗಡೆಯಿಂದ ಮನೆಗೆ ಬಂದಾಗ ಫಿರ್ಯಾದಿಯು ಆತನಿಗೆ ಇಲ್ಲಿಯವರೆಗೆ ನೀನು ಎಲ್ಲಿಗೆ ಹೋಗಿರುವೆ ಅಂತಾ ಕೇಳಿದಾಗ ಗಂಡ ಅದನ್ನು ಕೇಳುವವಳು ನೀನು ಯಾರು ಅಂತಾ ಬೈದು ಕೈಯಿಂದ ಬಾಯಿ ಮೇಲೆ ಹೋಡೆದಿರುತ್ತಾನೆ ಮತ್ತು ಅತ್ತೆ ಘಾಳೇಮ್ಮಾ ಇವಳು ಕೈ ಹಿಡಿದು ನೀನು ಅವನಿಗೆ ಏನು ಕೇಳುವೆ ಅವನು ಕೆಲಸ ಮಾಡಿ ಮನೆಗೆ ಬರುತ್ತಾನೆ ನಿಮು ಸೂಮ್ಮನೆ ಇರು ಅಂತಾ ಕೈ ಹಿಡಿದು ಎಳೆದಾಡಿರುತ್ತಾಳೆ ಮತ್ತು ನಾದನಿ ಜೈಶ್ರೀ ಇವಳು ಈಕೆಗೆ ಮನೆಯಲ್ಲಿ ಇಟ್ಟುಕೊಳ್ಳ ಬಾರದು ಅಂತಾ ಅವಾಚ್ಯವಾಗಿ ಬೈದಿರುತ್ತಾಳೆ ಮತ್ತು ಮೂವರು ಸೇರಿ ನೀನು ನಮ್ಮ ಮನೆ ಬಿಟ್ಟು ನಿನ್ನ ತವರು ಮನೆಗೆ ಹೋಗಿ 30,000/- ರೂ ಹಣ ತಗೆದುಕೊಡು ಬಾ ಇಲ್ಲದಿದ್ದರೆ ನಿನಗೆ ಸೀಮೆಎಣ್ಣೆ ಹಾಕಿ ಸುಟ್ಟು ಹಾಕುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ, ನಂತರ ಸದರಿ ಜಗಳದ ಗುಲ್ಲು ಕೇಳಿ ತಾಯಿ ತುಳಸೆಮ್ಮಾ ಮತ್ತು ಅಜ್ಜಿ ಸುಭದ್ರಮ್ಮಾ ಇವರು ಬಂದು ಜಗಳ ಬಿಡಿಸಿ ಫಿರ್ಯಾದಿಗೆ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 25/2021,ಕಲಂ. 379 ಐಪಿಸಿ :-
ದಿನಾಂಕ 27-05-2021 ರಂದು ಫಿರ್ಯಾದಿ ಅನಸರ ತಂದೆ ಮೈನೋದ್ದಿನ ಗೋರ್ಟೆ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ವಾಂಜರಖೇಡ ತನ್ನ ಹಿರೋ ಸ್ಪ್ಲೆಂಡರ್ ಪ್ಲಸ ಮೋಟಾರ್ ಸೈಕಲ್ ನಂ. ಕೆಎ-39/ಆರ-9771 ನೆದರ ಮೇಲೆ ಶಹಾಜಾನಿ ಔರಾದದ ತನ್ನ ಅಂಗಡಿಗೆ ಹೋಗಿ ಮರಳಿ 2130 ಗಂಟೆಗೆ ಮನೆಗೆ ಬಂದು ಸದರಿ ವಾಹನವನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ಮಲಗಿ ನಂತರ ದಿನಾಂಕ 28-05-2021 ರಂದು 500 ಗಂಟೆಗೆ ಎದ್ದು ವಾಯು ವಿಹಾರಕ್ಕೆ ಹೋಗಲೆಂದು ಮನೆಯ ಹೊರಗೆ ಬಂದಾಗ ರಾತ್ರಿ ತಮ್ಮ ಮನೆಯ ಮುಂದೆ ನಿಲ್ಲಿಸಿದ ಸದರಿ ವಾಹನ ಇರಲಿಲ್ಲ, ಸದರಿ ವಾಹನವನ್ನು ದಿನಾಂಕ 27-05-2021 2130 ಗಂಟೆಯಿಂದ ದಿನಾಂಕ 28-05-2021 ರಂದು 0500 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 59/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 28-05-2021 ರಂದು ವಳಸಂಗ ಗ್ರಾಮದ ಶಿವಾರದಲ್ಲಿ
ಬಸವರಾಜ ಬಿರಾದಾರ ರವರ ಹೊಲದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂದು
ಮಹೇಂದ್ರಕುಮಾರ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ
ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ
ಸಿಬ್ಬಂದಿಯವರೊಡನೆ ವಳಸಂಗ ಗ್ರಾಮದ ಬಸವರಾಜ ಬಿರಾದಾರ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು
ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ವಿನೋದ ತಂದೆ ಜನಾರ್ಧನ ಬಿರಾದಾರ ವಯ:
43
ವರ್ಷ, ಜಾತಿ: ಮರಾಠಾ, 2) ಮಂಜುನಾಥ ತಂದೆ ವಿಶ್ವನಾಥ
ವಾಲದೊಡ್ಡೆ ವಯ: 30
ವರ್ಷ, ಜಾತಿ:
ಲಿಂಗಾಯತ, 3) ರಾಜಕುಮಾರ ತಂದೆ ನರಸಿಂಗ ಗಾಯಕವಾಡ ವಯ: 30 ವರ್ಷ, ಜಾತಿ: ಎಸ.ಸಿ ಹೊಲಿಯಾ, 4) ವಸಂತ ತಂದೆ ಮಾರುತಿರಾವ ಬಿರಾದಾರ ವಯ:
43
ವರ್ಷ, ಜಾತಿ:
ಮರಾಠಾ, 5)
ಅಜಂ ತಂದೆ
ರಸೂಲಸಾಬ ಪಟೇಲ ವಯ: 31
ವರ್ಷ, ಜಾತಿ: ಮುಸ್ಲಿಂ, 6) ಸುದಾಕರ ತಂದೆ ಪಾಂಡುರಂಗ ದೊಂಡಗೆ ವಯ: 45 ವರ್ಷ, ಜಾತಿ: ಮರಾಠಾ, 7) ವಿಶಂಬರ ತಂದೆ ಶ್ರೀಹರಿ ಬಂದ್ರೆ ವಯ:
35
ವರ್ಷ, ಜಾತಿ: ಮರಾಠಾ ಹಾಗೂ 8) ಸಲೌದ್ದಿನ ತಂದೆ ಅಜೀಜ ಪಟೇಲ್ ವಯ: 34 ವರ್ಷ, ಜಾತಿ: ಮುಸ್ಲಿಂ, ಎಲ್ಲರೂ ಸಾ: ವಳಸಂಗ,
ತಾ: ಭಾಲ್ಕಿ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟ ಆಡುತ್ತಿರುವಾಗ
ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ
ಪಂಚರ ಸಮಕ್ಷಮ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು, ಅವರಿಂದ 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 9650/- ರೂ. ಜಪ್ತಿ ಮಾಡಿಕೊಂಡ, ಸದರಿ
ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment