Police Bhavan Kalaburagi

Police Bhavan Kalaburagi

Monday, May 11, 2020

BIDAR DISTRICT DAILY CRIME UPDATE 11-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-05-2020

ಜನವಾಡಾ ಪೊಲೀಸ್ ಠಾಣೆ  ಯು.ಡಿ.ಆರ್. ನಂ. 06/2020 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 10/05/2020 ರಂದು ಗಂಟೆಗೆ 1730 ಗಂಟೆಗೆ ಶ್ರೀ ಎಮ್ ಡಿ ಯಾದುಲ್ಲಾ ತಂದೆ ಇಸ್ಮಾಯಿಲ್ ಸಾಬ ಕಾರೆಮಂಗೆ ಸಾ|| ಚಿಲ್ಲರ್ಗಿ ಗ್ರಾಮ ತಾ|| ಜಿ|| ಬೀದರ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 10/05/2020 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ಇವರ ಮಗ ಎಮ್ ಡಿ ಇರಫಾನ ಈತನು ತನ್ನ ಗೆಳೆಯರಾದ ಗ್ರಾಮದ ಇರಫಾನ್   ಮತ್ತು ಮುಜಾಮಲ್   ರವರೊಂದಿಗೆ ಚಿಲ್ಲರ್ಗಿ ಗ್ರಾಮದ ಶಿವಾರದಲ್ಲಿರುವ   ಬಾಬುಮೀಯಾ ಜಾಗಿರದಾರ ಹೊಲದ ಹತ್ತಿರ ಮಾಂಜ್ರಾ ನದಿಗೆ ಈಜಲು ಹೋಗಿರುತ್ತಾನೆ. ನಂತರ ಮದ್ಯಾಹ್ನ 3: 30 ಗಂಟೆಯ ಸುಮಾರಿಗೆ ಇರಫಾನ್ ಹೊಕರಾಣೆ ಈತನು   ಫೋನ್ ಮಾಡಿ ನಾನು ಮತ್ತು ನಿಮ್ಮ ಮಗ ಎಮ್ ಡಿ ಇರಫಾನ್ ಮಾಂಜ್ರಾ ನದಿಯ ನಿರಿನಲ್ಲಿ ಈಜುತ್ತಿರುವಾಗ ಇರಫಾನ್ ಈತನು ನಿರಿನಲ್ಲಿ ಮುಳುಗಿ ಮೇಲಕ್ಕೆ ಬಂದಿರುವುದಿಲ್ಲ. ಅಂತಾ ತಿಳಿಸಿದ ತಕ್ಷಣ   ಮಾಂಜ್ರಾ ನದಿಯಲ್ಲಿ ಹೋಗಿ ನೋಡಲು ಇರಫಾನ್ ಹೊಕರಾಣಿ, ಎಮ್ ಡಿ ಖಿಜಾರ ಮತ್ತು ಮುಜಾವಿಲ್ ರವರಿದ್ದು ನನ್ನ ತಮ್ಮ ಮತ್ತು ನಾನು ಸೇರಿ ನದಿಯ ನೀರಿನಲ್ಲಿ ಜೀಗಿದು ನಿರಿನಲ್ಲಿ ಹುಡುಕಾಡಿ ನನ್ನ ಮಗ ಎಮ್ ಡಿ ಇರಫಾನ್ ಈತನಿಗೆ ನದಿಯ ನಿರಿನಿಂದ ಮೇಲಕ್ಕೆ 4: 30 ಗಂಟೆಯ ಸುಮಾರಿಗೆ ತಂದು ನೋಡಲು ಎಮ್ ಡಿ ಇರಫಾನ್ ಈತನು ಮೃತಪಟ್ಟಿರುತ್ತಾನೆ. ಅಲ್ಲೆ ಇದ್ದ ಇರಫಾನ್ ಹೊಕರಾಣಿ ಈತನಿಗೆ ಈ ಘಟನೆ ಬಗ್ಗೆ ವಿಚಾರಿಸಲು ಆತನು ಇಂದು ಮದ್ಯಹ್ನ ನಾನು ಮತ್ತು ನಿಮ್ಮ ಮಗ ನಿರಿನಲ್ಲಿ ಮಾಂಜ್ರಾ ನದಿಯ ನಿರಿನಲ್ಲಿ ಈಜತ್ತಿರುವಾಗ ನಿಮ್ಮ ಮಗ ನಿರಿನಲ್ಲಿ ಮುಳುಗಿದಾಗ ಗಾಬರಿಗೊಂಡ ನಾವು ನದಿ ನಿರಿನಿಂದ ಮೇಲಕ್ಕೆ ಬಂದು ಸ್ವಲ್ಪ ಸಮದಯ ವರೆಗೆ ನೊಡಿದರು ನಿಮ್ಮ ಮಗ ನಿರಿನಿಂದ ಮೇಲಕ್ಕೆ ಬರದೆ ಇದ್ದಾಗ ಗಾಬರಿಗೊಂಡ ನಾವು ನಿಮಗೆ ಫೋನ್ ಮಾಡಿ ವಿಷಯ ತಿಳಿಸಿರುತ್ತೆವೆ ಅಂತಾ ತಿಳಿಸಿದನು.  ನನ್ನ ಮಗ ಎಮ್ ಡಿ ಇರಫಾನ್ ವಯ|| 18 ವರ್ಷ ಈತನು ಇಂದು ತನ್ನ ಗೆಳೆಯರೊಂದಿಗೆ ಮಾಂಜ್ರಾ ನದಿಯಲ್ಲಿ ಈಜಲು ಹೊಗಿ ಮದ್ಯಹ್ನ 3: 30 ಗಂಟೆಯಿಂದ 4: 45 ಗಂಟೆಯ ಮದ್ಯದ ಅವಧಿಯಲ್ಲಿ ನಿರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ. ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೋಲೀಸ್ ಠಾಣೆ ಯು.ಡಿ.ಆರ್. ನಂ. 4/2020 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ: 10-05-2020 ರಂದು 0815 ಗಂಟೆಗೆ ಬ್ಯಾಲಹಳ್ಳಿ ಗ್ರಾಮದಲ್ಲಿ ಫಿರ್ಯಾದಿ ಇಸ್ಮಾಯಿಲ ತಂದೆ ಹುಸೇನಸಾಬ ಜಹಿರಾಬಾದ ವಯ 50 ಜಾ. ಮುಸ್ಲಿಂ ಉ. ಕೂಲಿ ಕೆಲಸ ಸಾ. ಹಳ್ಳೀಖೇಡ (ಬಿ) ಸಧ್ಯ ಬ್ಯಾಲಹಳ್ಳಿ   ರವರ ಮಗ ಅಮೀರ ತಂದೆ ಇಸ್ಮಾಯಿಲ ಜಹಿರಾಬಾದ ವಯ : 13 ವರ್ಷ ಇತನು ಬೆಳ್ಳಿಗ್ಗೆ 0700 ಗಂಟೆಗೆ  ಮಲವಿಸರ್ಜನೆಗೆ ಹೋದಾಗ ಆಕಸ್ಮಿಕವಾಗಿ ಸಿಡಿಲು ಬಡಿದ್ದರಿಂದ ಎದೆಯ ಮೇಲೆ ಕಂದು ಗಟ್ಟಿದ (ಸುಟ್ಟಿದ್ದ ಗಾಯ) ಗಾಯವಾಗಿದ್ದರಿಂದ  ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯಾಧಿಕಾರಿಯವರು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ  ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇರೆಗೆ ಠಾಣೆ ಯುಡಿಆರ  ಪ್ರಕರಣ ದಾಖಲಿಸಿ ತನಿಕೆ ಕೈಗೊಳ್ಳಲಾಗಿದೆ.  

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 37/2020 ಕಲಂ 188, 273 ಐಪಿಸಿ 6 ಕೋಟ್ಪಾ ಕಾಯ್ದೆ :-

  ದಿನಾಂಕ: 10-05-2020  ರಂದು 1715 ಗಂಟೆಗೆ ಶ್ರೀ ಅಹ್ಮದಸಾಬ ಮುಲ್ಲಾ ಗ್ರಾಮಲೆಕ್ಕಾಧಿಕಾರಿ ಮಾಣಿಕೇಶ್ವರ ರವರು ಠಾಣೆಗೆ ಹಾಜರಾಗಿ ಒಂದು ಅರ್ಜಿಯೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಮತ್ತು ಆರೋಪಿತನಿಗೆ ಹಾಜರು ಪಡೆಸಿದ್ದು ಸ್ವೀಕರಿಸಿಕೊಂಡು ಪರಿಶೀಲಿಸಿ ನೋಡಲು ಸಾರಾಂಶವೆನೆಂದರೆ, ದಿನಾಂಕ: 10-05-2020 ರಂದು 1430 ಗಂಟೆಗೆ ಫರ್ಯಾದಿ ರವರು ಮಾಣಿಕೇಶ್ವರದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಬಾತ್ಮಿ ಬಂದಿದೇನೆಂದ್ದರೆ, ಮಾಣಿಕೇಶ್ವರ ಗ್ರಾಮದ ವಿಠಲ ರುಕ್ಮೀಣಿ ಮಂದಿರ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಾನ್ಯ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಿ ಪಾನಮಸಾಲಾ ಮತ್ತು ತಂಬಾಕು ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಸ್ವೀಕರಿಸಿಕೊಂಡು ಕೂಡಲೇ ಕಂದಾಯ ನಿರೀಕ್ಷಕರಾದ ಬಸವರಾಜ   ಹಾಗು ಖಾಸಿಂ ಗ್ರಾಮ ಸೇವಕ ಇಬ್ಬರೂನ್ನು ಕರೆಯಿಸಿ ವಿಷಯ ತಿಳಿಸಿ ಪಂಚರೊಂದಿಗೆ ಹೊದಾಗ ಸಾರ್ವಜನಿಕ ರೋಡಿನ ಮೇಲೆ ಪಾನಮಸಾಲಾ ಮತ್ತು ತಂಬಾಕು ಚೀಲಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನು. ಇದನ್ನು ಖಚಿತ ಪಡಿಸಿಕೊಂಡ ಮೇಲೆ ಫಿರ್ಯಾದಿ ಮತ್ತು ನಮ್ಮ ಸಿಬ್ಬಂದಿಯವರು ಪಂಚರ  ಸಮಕ್ಷಮ ಅವನ ಮೇಲೆ 1530 ಗಂಟೆಗೆ ದಾಳಿ ಮಾಡಿ ಸಚೀನ ತಂದೆ  ಜ್ಞಾನೋಬಾ ಮಾನೆ ವಯ: 24 ವರ್ಷ ಜಾ: ಮರಾಠಾ ಉ: ಕಿರಣಾ ಅಂಗಡಿ ಸಾ: ಮಾಣಿಕೇಶ್ವರ ಅಂತ ತಿಳಿಸಿದನು. ನಂತರ ಅವನ ಹತ್ತಿರ ಪ್ಲಾಸ್ಟಿಕ ಚೀಲಗಳು ಚೆಕ ಮಾಡಲುಅವನ ಬಳಿ ಒಟ್ಟು 06 ಪ್ಲಾಸ್ಟಿಕ ಚೀಲಗಳಿದ್ದು, ಅವುಗಳಲ್ಲಿ   ಮೂರು ಚೀಲಗಳಲ್ಲಿ ತೆರೆದಾಗ  ಪ್ರತಿಯೊಂದರಲ್ಲಿ ನಾಲ್ಕು ಸಣ್ಣ ಚೀಲಗಳಿದ್ದು ಪ್ರತಿಯೊಂದರಲ್ಲಿ ತಲಾ ಒಂದು ಚೀಲದಲ್ಲಿ ಗೀತಾಂಜಲಿ ಪಾನ ಮಸಾಲಾ 5000  ಹೆಸರಿನ  55 ಪ್ಲಾಸ್ಟಿಕ  ಪಾಕೆಟ ಇದ್ದು,  ಇವು ಒಂದು ಪಾಕೆಟ ನಲ್ಲಿ 30 ಗೀತಾಂಜಲಿ 5000 ಪಾನ ಮಸಾಲಾ ಪೌಚಗಳು ಇದ್ದುವು. ಇದರ ಒಂದು ಪೌಚನ ಅ; ಕಿ: 4/- ರೂ ಹಾಗು ಒಂದು ಪಾಕೆಟ  ಬೆಲೆ 120/- ರೂ ಇರುತ್ತದೆ. ಹೀಗೆ ಒಟ್ಟು ಮೂರು ಚೀಲದಲ್ಲಿನ 660  ಗೀತಾಂಜಲಿ ಪಾನ ಮಸಾಲಾ 5000 ಹೆಸರಿನ ಪಾಕೆಟಗಳು ಆಗುತ್ತವೆ. ಇವುಗಳ ಅ: ಕಿ: 79,200/- ರೂ ಆಗುತ್ತದೆ. ಹಾಗೂ ಇವುಗಳಲ್ಲದೆ ಇನ್ನು  ಮೂರು ಪ್ಲಾಸ್ಟಿಕ ಚೀಲದಲ್ಲಿ ಪ್ರತಿಯೊಂದರಲ್ಲಿ ನಾಲ್ಕು ಸಣ್ಣ ಪ್ಲಾಸ್ಟಿಕ ಚೀಲಗಳಿದ್ದು, ಅವುಗಳಲ್ಲಿ ತಲಾ ಒಂದರಲ್ಲಿ 55 ಜಿ-1 ತಂಬಾಕು 5000 ಹೆಸರಿನ 55 ಪ್ಲಾಸ್ಟಿಕ ಪಾಕೆಟಗಳು ಇದ್ದು, ಒಂದು ಪಾಕೆಟನಲ್ಲಿ  30    ಜಿ-1 ತಂಬಾಕು 5000 ಹೆಸರಿನ ಪೌಚಗಳಿದ್ದು ಅದರ ಪ್ರತಿಯೊಂದ ರ ಬೆಲೆ 1/- ರೂ ಇದ್ದು, ಒಂದು ಪಾಕೆಟನ ಬೆಲೆ 30/- ರೂ ಇದ್ದು ಒಟ್ಟು ಮೂರು ಚೀಲದಲ್ಲಿ ಸೇರಿ 660 ಪ್ಲಾಸ್ಟಿಕ ಜಿ-1 ತಂಬಾಕು 5000 ಹೆಸರಿನ ಪಾಕೆಟಗಳು ಇದ್ದು ಇವುಗಳ ಅ: ಕಿ: 19800/- ರೂ ಆಗುತ್ತದೆ. ಇವಗಳಲ್ಲಿ ಒಟ್ಟು ಆರುಚೀದಲ್ಲಿ ಮೂರು ಚೀಲದಲ್ಲಿ ಪ್ರತಿ ಮೂರು ಚೀಲದಲ್ಲಿ  ಗೀತಾಂಜಲಿ ಪಾನ ಮಸಾಲಾ 5000   ಹೆಸರಿನ ಪಾನಮಸಾಲಾ ಪಾಕೆಟಗಳಿದ್ದು, ಇವುಗಳ ಬಗ್ಗೆ   ಸಚೀನ ಈತನಿಗೆ ಇವುಗಳ ಖರೀದಿ ರಶೀದಿ ಮತ್ತು ಪರವಾನಿಗೆ ಕೇಳಲು ಅವನು ತನ್ನ ಹತ್ತಿರ ಯಾವುದೇ ಪರವಾನಿಗೆ ಮತ್ತು ರಶೀದಿ ಇರುವುದಿಲ್ಲ ಅಂತ ತಿಳಿಸಿರುತ್ತಾನೆ. ಇವನು ಆರೂಗ್ಯಕ್ಕೆ ಹಾನಿಕಾರವಾದ ತಂಬಾಕು ಮಾರುತ್ತಿದ್ದರಿಂದ ನಂತರ ನಾನು  ಸಚೀನ ಈತನನ್ನು ಸಹ ವಶಕ್ಕೆ ಪಡೆದುಕೊಂಡು ಮೂಲ ಜಪ್ತ ಪಂಚನಾಮೆ, ಈ ಬಗ್ಗೆ ಅರ್ಜಿ ಹಾಗೂ ಮುದ್ದೆಮಾಲು  ಹಾಗು ಆರೋಪಿ ಸಮೇತ ತಮ್ಮ ಮುಂದೆ ಹಾಜರು ಪಡೆಸಿದ್ದು ಮಾನ್ಯರು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.