Police Bhavan Kalaburagi

Police Bhavan Kalaburagi

Friday, July 21, 2017

Yadgir District Reported Crimes


                                  Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 148/2017 ಕಲಂ: 279, 337, 304(ಎ) ಐಪಿಸಿ ;- ದಿನಾಂಕ 19/07/2017 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ಮೃತನಾದ ಶರಣಬಸಪ್ಪಗೌಡ ತಂದೆ ಚಂದ್ರಶೇಖರ ಲಕ್ಷ್ಮಣಗೌಡರ ಮತ್ತು ಇನ್ನು ಇಬ್ಬರೂ ಕೂಡಿಕೊಂಡು ಆರೋಪಿ ಗಣೇಶ ಇತನ ಕಾರ ನಂ ಕೆ.ಎ-33-ಎಮ್-5828 ನೇದ್ದರಲ್ಲಿ ಕೂಳಿತುಕೊಂಡು ಭೀಮರಾಯನ ಗುಡಿಯಿಂದ ಕೊಡ್ಲಾ ಗ್ರಾಮಕ್ಕೆ ಹೋಗಿ ಇಬ್ಬರನ್ನು ಅಲ್ಲಿ ಇಳಿಸಿ ಮತ್ತೆ ಭೀಮರಾಯನ ಗುಡಿಗೆ ಕೊಡಲಾದಿಂದ ಬರುವಾಗ ಮಾರ್ಗಮಧ್ಯ ಹತ್ತಿಕುಣಿ-ಭೀಮನಳ್ಳಿ ರೋಡಿನ ಮೇಲೆ ಆರೋಪಿತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಹೋಗಿ ರೋಡಿನ ತಿರುವಿನಲ್ಲಿ ಬ್ರೀಡ್ಜ ಹತ್ತಿರ ಪಲ್ಟಿ ಮಾಡಿದಾಗ ಕಾರಿನಲ್ಲಿದ್ದ ಮೃತ ಶರಣಬಸಪ್ಪಗೌಡ ಇತನ ತಲೆಯ ಮುಂಬಾಗಕ್ಕೆ ಮತ್ತು ಹಿಂಭಾಗಕ್ಕೆ ಭಾರಿ ರಕ್ತಗಾಯ ಮತ್ತು ಎದೆಗೆ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿರುತ್ತಾನೆ, ಚಾಲಕನಿಗೆ ಸಣ್ಣಪುಟ್ಟ ಗಾಯಗಳು ಆಗಿರುತ್ತವೆ,  ಅಂತಾ ಪ್ರಕರಣ ದಾಖಲು ಆಗಿರುತ್ತದೆ.

 ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 149/2017 ಕಲಂ: 279, 337, 338, ಐಪಿಸಿ;- ದಿನಾಂಕ 20/07/2017 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾಧಿ ಮತ್ತು ಇತರರು ಕೂಡಿಕೊಂಡು ತಮ್ಮ ವೈಯಕ್ತಿಕ ಕೆಲಸಯಿದ್ದ ಪ್ರಯುಕ್ತ ಯಾದಗಿರಿಗೆ ಹೋಗುವ ಕುರಿತು ಆರೋಪಿತನ ಟಂ.ಟಂ. ಅಟೋ ನಂ ಕೆ-33-ಎ-1037 ನೆದ್ದರಲ್ಲಿ ಕುಳಿತುಕೊಂಡು ಯಾದಗಿರಿಗೆ ಹೋಗುವಾಗ ಮಾರ್ಗಮಧ್ಯ ರಾಮಸಮುದ್ರ ಗ್ರಾಮ ದಾಟಿದ ನಂತರ ಮುಂಡರಗಿ-ರಾಮಸಮುದ್ರ ರೋಡಿನ ಮೇಲೆ ಹೋಗುವಾಗ ಆರೋಪಿತನು ತನ್ನ ಟಂ.ಟಂ. ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ನಾಯಿ ಅಡ್ಡ ಬಂದುದ್ದರಿಂದ ಒಮ್ಮೆಲೆ ಬ್ರೇಕ್ ಹಾಕಿದಾಗ ಟಂ.ಟಂ. ಪಲ್ಟಿಯಾಗಿ ಆಗಿ ಅಪಘಾತ ಮಾಡಿದ್ದರಿಂದ ಫಿರ್ಯಾಧಿಗೆ, ಇತರರಿಗೆ ಮತ್ತು ಆರೋಪಿತನಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆದ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 137/2017 ಕಲಂ. 193 ಐಪಿಸಿ;- ದಿನಾಂಕ 20/07/2017 ರಂದು 3-45 ಪಿಎಂಕ್ಕೆ ಶ್ರೀ ನಿಂಗಪ್ಪ ಪಿಸಿ-260 ಕೊಡೆಕಲ್ ಠಾಣೆ ರವರು ಒಂದು ಅಜಿಯನ್ನು ತಂದು ಹಾಜರಪಡಿಸಿದ್ದು ಸದರಿ ಅಜರ್ಿಯು ಅಸಂಜ್ಞೆಯ ಅಪರಾದವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿಕೊಂಡಿದ್ದು  ಸದರಿ ಅಜರ್ಿಯ ಸಾರಾಂಶವೆನೆಂದರೆ ಕೊಡೆಕಲ್ ಠಾಣೆ ಗುನ್ನೆ ನಂ,67/2014 ಸ್ಪೆಷಲ್ ಕೆಸ್ ನಂ.(ಎ)02/2015 ನೇದ್ದರಲ್ಲಿ ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯ ಯಾದಗಿರದಲ್ಲಿ ಪಿಡಬ್ಲೂ-1, ಪಿಡಬ್ಲೂ- 4, ರವರುಗಳು ಈ ಮೊದಲು ದಿನಾಂಕ 27/06/2017 ರಂದು ಮಾನ್ಯ ಘನ ನ್ಯಾಯಾಲಯದಲ್ಲಿ ಪಿರ್ಯಾದಿ ಪಿಡಬ್ಲೂ-1, ಚಂದ್ರಶೇಖರ ತಂ. ಮರೆಪ್ಪ ಚಲುವಾದಿ ವಃ34 ಜಾಃ ಚಲುವಾದಿ(ಪ.ಜಾತಿ) ಉಃ ಕೂಲಿಕೆಲಸ ಸಾಃಬೂದಿಹಾಳ ತಾಃ ಸುರಪೂರ ಮತ್ತು ಪಿಡಬ್ಲೂ- 4 ಮಹೇಶ ತಂ. ಮರೆಪ್ಪ ಚಲುವಾದಿ ವಃ 26 ಜಾಃ ಚಲುವಾದಿ(ಪ.ಜಾತಿ) ಉಃ ಕೂಲಿಕೆಲಸ ಸಾಃಬೂದಿಹಾಳ ತಾಃ ಸುರಪೂರ ರವರು ಸಾಕ್ಷಿ ಸಮಯದಲ್ಲಿ ಪಿರ್ಯಾದಿಯ ಅನುಸಾರವಾಗಿ ತಮ್ಮ ಸಾಕ್ಷಿಗಳನ್ನು ನುಡಿದಿರುತ್ತಾರೆ. ಇಂದು ದಿನಾಂಕ 20/07/2017 ರಂದು ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸದರಿ ಸ್ಪೆಷಲ್ ಕೆಸ್ ನಂ.(ಎ)02/2015 ರಲ್ಲಿ ಸಾಕ್ಷಿದಾರರಾದ 1) ಪಿಡಬ್ಲೂ-1, ಚಂದ್ರಶೇಖರ ತಂ. ಮರೆಪ್ಪ ಚಲುವಾದಿ ವಃ34 ಜಾಃ ಚಲುವಾದಿ(ಪ.ಜಾತಿ) ಉಃ ಕೂಲಿಕೆಲಸ ಸಾಃಬೂದಿಹಾಳ ತಾಃ ಸುರಪೂರ ಮತ್ತು 2) ಪಿಡಬ್ಲೂ- 4 ಮಹೇಶ ತಂ. ಮರೆಪ್ಪ ಚಲುವಾದಿ ವಃ 26 ಜಾಃ ಚಲುವಾದಿ(ಪ.ಜಾತಿ) ಉಃ ಕೂಲಿಕೆಲಸ ಸಾಃಬೂದಿಹಾಳ ತಾಃ ಸುರಪೂರ 3) ಪಿಡಬ್ಲೂಡಿ 2 ದರ್ಮಣ್ಣ ತಂ. ಪಿರಪ್ಪ ಚಲುವಾದಿ ಸಾಃ ಹಗರಟಗಿ ತಾಃ ಸುರಪೂರ 4) ಪಿ.ಡಬ್ಲೂ-5 ಪ್ರಭು ತಂ. ರಾಮಪ್ಪ ಚಲುವಾದಿ ಸಾಃ ಬೂದಿಹಾಳ ತಾಃ ಸುರಪೂರ ಇವರುಗಳ ಸಾಕ್ಷಿಗಳಿದ್ದು ಸಾಕ್ಷಿ ನುಡಿಯುವ ಸಮಯದಲ್ಲಿ ಪಿಡಬ್ಲೂ-2- ಮತ್ತು ಪಿಡಬ್ಲೂ-5 ರವರು ತಮ್ಮ ಸಾಕ್ಷಿಗನುಸಾರವಾಗಿ ಸಾಕ್ಷಿಗಳುನ್ನು ನುಡಿದಿರುತ್ತಾರೆ. ಆದರೆ  ಪಿಡಬ್ಲೂ-1 ಚಂದ್ರಶೇಖರ ತಂ. ಮರೆಪ್ಪ, ಮತ್ತು ಪಿಡಬ್ಲೂ-4 ಮಹೇಶ ತಂ. ಮರೆಪ್ಪ ರವರು ಮದ್ಯಾಹ್ನ 12-30 ಗಂಟೆ ಸುಮಾರಿಗೆ  ನ್ಯಾಯಾಂಗದ ವಿಚಾರಣೆ ಕಾಲಕ್ಕೆ ಇಬ್ಬರು ಈ ಮೊದಲು ಸಾಕ್ಷಿಯ ಕಾಲಕ್ಕೆ ನ್ಯಾಯಾಲಯದಲ್ಲಿ ನುಡಿದ ಹೇಳಿಕೆಯ ವಿರುದ್ದವಾಗಿ ಸುಳ್ಳು ಸಾಕ್ಷಿಯನ್ನು ನುಡಿದಿರುತ್ತಾರೆ. ಸುಳ್ಳು ಸಾಕ್ಷಿ ನುಡಿದಿದ್ದರಿಂದ ಮಾನ್ಯ ನ್ಯಾಯಾಲಯದ ನ್ಯಾಯಾಧಿಶರ ಮೌಖಿಕ ಆಧೇಶದ ಪ್ರಕಾರ ಸದರಿಯವರ ಮೇಲೆ ಕ್ರಮ ಕೈಕೊಳ್ಳುವಂತೆ ನನಗೆ ಆಧೇಶ ನೀಡಿದ್ದರಿಂದ ಸದರಿಯವರ ಮೇಲೆ ಮುಂದಿನ ಸೂಕ್ತ ಕ್ರಮಕ್ಕಾಗಿ ಆರೋಪಿತರ ಸಮೇತ ಠಾಣೆಗೆ ಬಂದಿದ್ದು ಸದರಿಯವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಮಾನ್ಯರವರಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಸಾರಾಂಶದ ಮೇಲಿಂದ 6-00 ಪಿಎಂಕ್ಕೆ ಶ್ರೀ ಅನಂರೆಡ್ಡಿ ಪಿಸಿ-168 ಯಾದಗಿರಿ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಹಾಜರಪಡಿಸಿದ್ದು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.137/2017 ಕಲಂ. 193 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ: 504,324,323,506 ಸಂ 34 ಐಪಿಸಿ;- ದಿನಾಂಕ: 20/07/2017 ರಂದು 1-30 ಪಿಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ವಿಚಾರಣೆ ಕುರಿತು ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಗಾಯಾಳು ಶರಣಪ್ಪ ತಂದೆ ಶಾಂತಪ್ಪ ಪೂಜಾರಿ ಸಾ:ಮನಗನಾಳ ಈತನು ಹೇಳಿಕೆ ಫಿರ್ಯಾಧಿ ಕೊಟ್ಟಿದ್ದನಂದರೆ ತನಗೆ ಮತ್ತು ತನ್ನ ಮಲತಾಯಿ ಮಕ್ಕಳಾದ ಹಣಮಂತ ಹಾಗೂ ಅಶೋಕ ಇವರ ಮಧ್ಯ ಆಸ್ತಿ ಜಮೀನು ಹಂಚಿಕೆ ಸಂಬಂಧ ತಕರಾರು ಇದ್ದು, ಇಂದು ದಿನಾಂಕ: 20/07/2017 ರಂದು ಬೆಳಗ್ಗೆ 11-30 ಗಂಟೆ ಸುಮಾರಿಗೆ ಖಾನಾಪೂರದ ವೆಂಕಟೇಶ್ವರ ಚೌಕದಲ್ಲಿ ಮಾತಾಡುತ್ತಾ ನಿಂತುಕೊಂಡಾಗ ಹಣಮಂತ ತಂದೆ ಶಾಂತಪ್ಪ ಪೂಜಾರಿ, ಅಶೋಕ ತಂದೆ ಶಾಂತಪ್ಪ ಪೂಜಾರಿ ಮತ್ತು ಸಣ್ಣ ಭೀಮವ್ವ ಗಂಡ ಶಾಂತಪ್ಪ ಪೂಜಾರಿ ಮೂರು ಜನರು ಸೇರಿ ಬಂದು ಜಮೀನು ಪೂತರ್ಿ ಬಿಡು ಎಂದರೆ ಬಿಡುತ್ತಿಲ್ಲವೆಂದು ಜಗಳ ತೆಗೆದವರೆ ಅಶೋಕನು ನನಗೆ ಹಿಡಿದುಕೊಂಡಾಗ ಹಣಮಂತನು ಅಲ್ಲೆ ಬಿದ್ದ ಇಟ್ಟಂಗಿ ಎಳ್ಳೆಯಿಂದ ತೆಲೆ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು, ಅಶೋಕನು ಜಾಡಿಸಿ ನುಗ್ಗಿಸಿಕೊಟ್ಟಿದ್ದರಿಂದ ಎಡಮೊಳಕೈಗೆ ತರಚಿದ ಗಾಯವಾಗಿದ್ದು, ಸಣ್ಣ ಭೀಮವ್ವಳು ಜೀವ ಬೆದರಿಕೆ ಹಾಕಿರುತ್ತಾಳೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 106/2017 ಕಲಂ: 504,324,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 107/2017 ಕಲಂ: 504,341,323 ಸಂ 149 ಐಪಿಸಿ;-ದಿನಾಂಕ: 20/07/2017 ರಂದು 12-30 ಪಿಎಮ್ ಸುಮಾರಿಗೆ ಪೆಟ್ರೋಲಿಂಗನಲ್ಲಿದ್ದಾಗ ಜಿಜಿಹೆಚ್ ಯಾದಗಿರಿಯಿಂದ ಎಮ್.ಎಲ್.ಸಿ ಮಾಹಿತಿ ನೀಡಿದ ಮೇರೆಗೆ ವಿಚಾರಣೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಶ್ರೀ ಹಣಮಂತ ತಂದೆ ಶಾಂತಪ್ಪ ಪೂಜಾರಿ ಸಾ:ಖಾನಾಪೂರ ಇವರು ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೆನಂದರೆ ನಮ್ಮ ತಂದೆಗೆ ನಮ್ಮ ತಾಯಿ ಸಣ್ಣ ಭೀಮವ್ವ ಮತ್ತು ದೊಡ್ಡ ಭಿಮವ್ವ ಎಂದು ಇಬ್ಬರು ಹೆಂಡಂದಿರಿದ್ದು, ದೊಡ್ಡ ಭೀಮವ್ವಳ ಮಗ ಶರಣಪ್ಪ ಮತ್ತು ನಮ್ಮ ಮದ್ಯ ಜಮೀನು ಹಂಚಿಕೆ ಸಂಬಂಧ ತಕರಾರು ಇದ್ದು, ನಮ್ಮ ತಂದೆ ನಮ್ಮ ಹೆಸರಿನಲ್ಲಿ ಮೃತ್ಯು ಪತ್ರ ಬರೆದರು ಕೂಡ ಶರಣಪ್ಪನು ನಮಗೆ ಜಮೀನು ಕೊಡುವುದಿಲ್ಲವೆಂದು ಜಗಳಾಡುತ್ತಾ ಬರುತ್ತಿದ್ದಾನೆ. ಇಂದು ದಿನಾಂಕ: 20/07/2017 ರಂದು ಬೆಳಗ್ಗೆ 11-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಮ್ಮ ಅಶೋಕ ಹಾಗೂ ನಮ್ಮ ತಾಯಿ ಸಣ್ಣ ಭೀಮವ್ವ ಮೂರು ಜನರೂ ನಮ್ಮೂರು ವೆಂಕಟೇಶ್ವರ ಚೌಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಶರಣಪ್ಪ ತಂದೆ ಶಾಂತಪ್ಪ ಪೂಜಾರಿ ಸಾ:ಮನಗನಾಳ ಈತನು ತನ್ನೊಂದಿಗೆ 4-5 ಜನರನ್ನು ಕರೆದುಕೊಂಡು ಬಂದು ನಮಗೆ ತಡೆದು ನಿಲ್ಲಿಸಿ, ಮಕ್ಕಳೆ ನಿಮಗೆ ಜಮೀನು ಕೊಡುವುದಿಲ್ಲವೆಂದರು ಗಳೆ ಹೊಡೆಯುತ್ತಿರಿ ಎಂದು ಜಗಳ ತೆಗೆದವನೆ ನನ್ನ ಎದೆ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ಬಿಡಿಸಲು ಬಂದ ನಮ್ಮ ತಾಯಿಗೆ ಎಡಗೈ ಹಿಡಿದು ಎಳೆದನು. ನನ್ನ ತಮ್ಮ ಅಶೋಕನಿಗೆ ಕೈಯಿಂದ ಎದೆಗೆ ಹೊಡೆದನು. ಆಗ ನಮ್ಮೂರ ಬಸಪ್ಪ ಮತ್ತು ರಾಮಕೃಷ್ಣ ಇವರು ಬಿಡಿಸಲು ಬಂದಾಗ ನಮಗೆ ಹೊಡೆಯುವುದು ಬಿಟ್ಟು ಒಂದು ಬೊಲೆರೋದಲ್ಲಿ ಅಲ್ಲಿಂದ ಹೋದರು. ಅವನೊಂದಿಗೆ ಬಂದ 4-5 ಜನರಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ 5-30 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಗುನ್ನೆ ನಂ. 107/2017 ಕಲಂ: 504,341,323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ ಕಲಂ, 87 ಕೆ.ಪಿ.ಆ್ಯಕ್ಟ್ ;- ದಿನಾಂಕ: 20/07/2017 ರಂದು 1-50 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು 05 ಜನ ಆರೋಪಿತರ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 20/07/2017 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 11-30 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಕೊಡಮನಳ್ಳಿ ಗ್ರಾಮದ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 12-15 ಪಿಎಮ್ ಕ್ಕೆ  ದಾಳಿ ಮಾಡಿ ದಾಳಿಯಲ್ಲಿ 05 ಜನ ಆರೋಪಿತರು ಮತ್ತು ಒಟ್ಟು 760=00 ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 12-20 ಪಿಎಮ್ ದಿಂದ 1-20 ಪಿಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 1-50 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು  ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 3-15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 111/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ ಕಲಂ, 392 ಐಪಿಸಿ;-ದಿನಾಂಕ: 20/07/2017  ರಂದು 5-30 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀ ಸಿಕಂದರ್ ತಂದೆ ಇಸ್ಮಾಯಿಲ್ ಶೇಖ್ ಸಾ|| ಡಬರಾಬಾದ್ ಕಲಬುರಗಿ ಇವರು ಠಾಣೆಗೆ ಬಂದು ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಅಜರ್ಿದಾರನು ಬಾಬು ತಂದೆ ಶೇಷಪ್ಪ ವಾಡೇದವರ್ ಸಾ|| ಕಲಬುರಗಿ ಇವರ ಹಾಲಿನ ಗಾಡಿ ನಂ: ಕೆಎ-38 6338 ನೇದ್ದರ ಮೇಲೆ ಸುಮಾರು 15 ದಿವಸಗಳಿಂದ ಚಾಲಕ ಅಂತಾ ಕೆಲಸ ಮಾಡುತ್ತಿದ್ದು ಎರಡು ಮೂರು ದಿವಸ ಊರಿಗೆ ಹೋಗಿ ಮರಳಿ ನಿನ್ನೆ ದಿನಾಂಕ: 19/07/2017 ರಂದು ಕಲಬುರಗಿಗೆ ಬಂದು ಮಾಲೀಕರ ಹಾಲಿನ ಗಾಡಿಯನ್ನು ರಾತ್ರಿ 8-15 ಪಿಎಮ್ ಸುಮಾರಿಗೆ ತೆಗೆದುಕೊಂಡು ಜೊತೆಗೆ ಕಿನ್ನರನಾದ ಅರುಣಕುಮಾರ ತಂದೆ ಪರಮೇಶ್ವರ ಹೊನಗುಂಟಾ ಇವನೊಂದಿಗೆ ಎಂದಿನಂತೆ ರೂಟಾದ ಜೇವಗರ್ಿ ಮೇಲಿಂದ ಸಾಥಖೇಡ, ಕೆಂಬಾವಿ, ಹುಣಸಗಿ, ಕೊಡೆಕಲ್, ನಾರಾಯಣಪುರ ವರೆಗೆ ನಂದಿನಿ ಹಾಲಿನ ಪಾಕೀಟ್ ಗಳನ್ನು ಪಾಯಿಂಟಗಳಿಗೆ ಇಳಿಸುತ್ತಾ ಹೋಗಿ ಮರಳಿ ಬರುವಾಗ ಪಾಯಿಂಟ್ ಗಳಿಂದ ಹಣವನ್ನು ಪಡೆದುಕೊಂಡು ಚಾಮನಾಳವರೆಗೆ ಹಣ ವಸೂಲಿ ಮಾಡಿಕೊಂಡು ಬಂದ 47,000=00 ರೂ. ನಗದು ಹಣವನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಬ್ಯಾಗವನ್ನು ಹಾಲಿನ ಗಾಡಿಯಲ್ಲಿ ನನ್ನ ಮತ್ತು ಕಿನ್ನರ್ ಮದ್ಯದಲ್ಲಿ ಹಾಸಿಗೆ ಕೆಳಗೆ ಇಟ್ಟುಕೊಂಡು ಗೋಗಿ, ಕಂಚಲಕವಿ, ಕೊಡಮನಳ್ಳಿ ಮೂಲಕ ಕಲಬುರಗಿಗೆ ಹೋಗುವಾಗ ಕೊಡಮನಳ್ಳಿ ಸಮೀಪ ರೋಡಿನ ತಿರುವಿನಲ್ಲಿ ವಾಹನವನ್ನು ನಿಧಾನವಾಗಿ ಚಲಿಸುತ್ತಿದ್ದು ಅದೇ ಸಮಯಕ್ಕೆ ಅಂದರೆ ಇಂದು ದಿನಾಂಕ: 20/07/2017 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಹೋಗುತ್ತಿರುವಾಗ ನಮ್ಮ ವಾಹನದ ಹಿಂದಿನಿಂದ ನಮಗೆ ಸೈಡು ಹೊಡೆದು ಒಂದು ಪಲ್ಸರ್ ಕಪ್ಪು ಬಣ್ಣದ ಮೋಟಾರ್ ಸೈಕಲ್ ಮೇಲೆ ಮೂರು ಜನರು ಬಂದು ನಮ್ಮ ವಾಹನಕ್ಕೆ ಮೋಟಾರ್ ಸೈಕಲ್ ಅಡ್ಡಗಟ್ಟಿ ನಿಲ್ಲಿಸಿ  ಅದರಲ್ಲಿ ಒಬ್ಬ ಹೆಲ್ಮೆಟ್ ಹಾಕಿಕೊಂಡಿದ್ದು ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ ಇನ್ನಿಬ್ಬರೂ ಮುಖಕ್ಕೆ ದಸ್ತಿ ಕಟ್ಟಿಕೊಂಡು ಒಮ್ಮೆಲೇ ನಮ್ಮ ವಾಹನದ ಎರಡು ಸೈಡು ಡೋರ್ ಕಡೆಗೆ ಒಬ್ಬೊಬ್ಬರು ಬಂದು ನನಗೆ ಮತ್ತು ನಮ್ಮ ಕ್ಲೀನರ್ ಗೆ ಚಾಕು ತೋರಿಸಿ ಹಣ ಎಲ್ಲಿದೆ ಅಂತಾ ಕೇಳಿದರು ಆಗ ನಾವು ಗಾಬರಿಯಾಗಿ ತಡಬಡಿಸಿದಾಗ ನನಗೆ ಚಾಕು ಹಿಡಿದ ವ್ಯಕ್ತಿ ನಮ್ಮ ಗೂಡ್ಸ ವಾಹನದ ಚಾವಿಯನ್ನು ತೆಗೆದು ಪಕ್ಕದ ಹೊಲದಲ್ಲಿ ಎಸೆದನು.  ಆಗ ಕ್ಲೀನರ್ ಅರುಣಕುಮಾರ ಈತನಿಗೆ ಚಾಕು ಹಿಡಿದ ವ್ಯಕ್ತಿ ಆತನ ಹತ್ತಿರವಿದ್ದ ಮೊಬೈಲ್ ಕಿತ್ತಿಕೊಂಡನು. ನನಗೆ ಚಾಕು ಹಿಡಿದ ವ್ಯಕ್ತಿ ನನಗೆ ಮುಂದೆ ದಬ್ಬಿ ಬಾಜು ಇಟ್ಟಿದ್ದ ಹಾಸಿಗೆ ಎತ್ತಿ ಹಾಕಿ ಅದರ ಕೆಳಗೆ ಇದ್ದ ಬ್ಯಾಗ್ ಎತ್ತಿಕೊಂಡ ಆಗ ನಾನು ತಡೆಯಲು ಹೋದಾಗ ಚಾಕು ತೋರಿಸಿ ಬ್ಯಾಗ್ ಹಿಡಿದ ಕೈಯ ಮುಂಗೈಯಿಂದ ಬೆನ್ನಿಗೆ ಗುದ್ದಿ ಬ್ಯಾಗ್ ತೆಗೆದುಕೊಂಡು ಅವರು ತಂದಿದ್ದ ಪಲ್ಸರ್ ಸೈಕಲ್ ಮೋಟಾರ್ ಮೇಲೆ ಮುಂದೆ ಕಲಬುರಗಿ ಮೇನ್ ರೋಡ್ ಕಡೆಗೆ ಹೋದರು. ಅವರು ಮುಖಕ್ಕೆ ದಸ್ತಿ ಕಟ್ಟಿದ್ದರಿಂದ ಮತ್ತು ಗಾಬರಿಯಲ್ಲಿ ಮುಖ ನೋಡಿರುವುದಿಲ್ಲಾ ದೇಹದ ಆಕಾರ ನೋಡಿರುತ್ತೇನೆ. ನನಗೆ ಚಾಕು ಹಿಡಿದ ವ್ಯಕ್ತಿಯು ಕನ್ನಡದಲ್ಲಿ ಮಾತನಾಡುತ್ತಿದ್ದ ಕ್ಲೀನರ್ ಕಡೆಗೆ ಇದ್ದ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಿದ್ದ.   ಆಗ ಹಿಂದಿನಿಂದ ಯಾವುದೋ ಒಂದು ಮೋಟಾರ್ ಸೈಕಲ್ ಮೋಟಾರ್ ಬಂದಿದ್ದು ಅವರ ಕಡೆಯಿಂದ ನಮ್ಮ ಮಾಲೀಕರಾದ ಬಾಬು ತಂದೆ ಶೇಷಪ್ಪ ವಾಡೇದವರ್ ಸಾ|| ಕಲಬುರಗಿ ರವರಿಗೆ ಪೋನ್ ಮಾಡಿ ವಿಷಯ ತಿಳಿಸಿದೆವು.  ನಂತರ ನಮ್ಮ ಮಾಲೀಕರು ಬರುವವರೆಗೆ ಹೊಲದಲ್ಲಿ ಒಗೆದ ವಾಹನದ ಚಾವಿ ಹುಡುಕಾಡಿ ನಮ್ಮ ಮಾಲೀಕರು ತಮ್ಮ ಗೆಳೆಯರಾದ ರಾಜಕುಮಾರ ಡಿಗ್ಗಿ, ಮಲ್ಲಿಕಾಜರ್ುನ ರಸ್ತಾಪೂರ ಮತ್ತು ನಾಗರಾಜ ಬನ್ನೂರ ಇವರೊಂದಿಗೆ ಬಂದಿದ್ದು ಸದರಿಯವರೊಂದಿಗೆ ನಾವು ಕೂಡಿ ನಮ್ಮ ಹಣದ ಬ್ಯಾಗ್ ತೆಗೆದುಕೊಂಡು ಹೋದವರ ಬಗ್ಗೆ ನಮ್ಮ ವಾಹನದಲ್ಲಿ ತಿರುಗಾಡಿ ಸುತ್ತಾಡಿ ಹುಡುಕಾಡಲಾಗಿ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ. ನಮ್ಮ ಮಾಲೀಕರಿಗೆ ವಿಚಾರ ಮಾಡಿ ಈಗ ಅಂದರೆ 5-30 ಪಿಎಮ್ ಕ್ಕೆ ಠಾಣೆಗೆ ಬಂದು ಅಜರ್ಿ ನೀಡಿದ್ದು ಸದರಿ ನಮಗೆ ಚಾಕು ತೋರಿಸಿ 47,000=00 ರೂ ಹಣ ಇದ್ದ ಬ್ಯಾಗ್ ತೆಗೆದುಕೊಂಡು ಹೋದ ಮೂವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 112/2017 ಕಲಂ, 392 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 202/2017 ಕಲಂಃ  323 504 506 ಐ.ಪಿ.ಸಿ ಮತ್ತು 3 (1) (ಆರ್), 3 (1) (ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989;- ದಿನಾಂಕಃ 20/07/2017 ರಂದು 8-15 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀ ಬನ್ನಪ್ಪ ತಂದೆ ಹಣಮಂತ ಬುಂಕಲದೊಡ್ಡಿ ಸಾ|| ಕೋನ್ಹಾಳ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ : 17-07-2017 ರಂದು ಮದ್ಯಾಹ್ನ 4-30 ಗಂಟೆ ಸುಮಾರಿಗೆ ನಾನು ನಮ್ಮ ಗ್ರಾಮದಲ್ಲಿ ನನ್ನ ಮನೆಯ ಪಕ್ಕದಲ್ಲಿರುವ ಪ್ಲಾಟಿನಲ್ಲಿ ಮಣ್ಣು ತಗೆಯುತ್ತಿರುವಾಗ ನಮ್ಮ ಗ್ರಾಮದವನಾದ ಶೇಖಣಗೌಡ ತಂದೆ ಶಾಂತಗೌಡ ಹೊಸ್ಮನಿ ಜಾತಿ: ಲಿಂಗಾಯತ ಈತನು ಬಂದು ಲೇ ಭೋಸಡಿ ಮಗನೇ ರೋಡಿನ ಬದಿಗೆ ಮಣ್ಣು ತಂದು ಹಾಕುವದಕ್ಕೆ ನಿಮ್ಮ ಅವ್ವನ ಮಿಂಡಾಗಾರನದು ಇದೆ ಬೋಸುಡಿ ಹೊಲೆ ಸೂಳಿ ಮಗನೆ ಅನ್ನುತ್ತಲೆ ಬಲವಾಗಿ ಕೈಯಿಂದ ಕಪಾಳಕ್ಕೆ ಹೊಡೆದನು. ನಾನು ಯಾಕರ್ರಿ ಗೌಡ್ರೆ ನನಗೆ ಹೊಡೆಯುತ್ತೀರಿ, ನಾನು ರಸ್ತೆಯ ಮೇಲೆ ಹಾಕುವದಿಲ್ಲ, ಮಣ್ಣು ತಗೆದುಕೊಳ್ಳುತ್ತೇನೆ. ನೀವು ಈ ರೀತಿ ಯಾಕೆ ಹೊಡೆಯುತ್ತೀರಿ  ಅಂತಾ ಅಂಗಲಾಚಿ ಬೇಡಿಕೊಂಡರೂ ಸುಮ್ಮನಿರದೆ ಲೇ ಬೋಸುಡಿ ಮಗನೇ ನಿನ್ನದು ಬಹಳವಾಗಿದೆ ನನಗೆ ಎದುರಾಡುತ್ತಿ, ನಾನೊಬ್ಬ ಊರ ಗೌಡ ನನ್ನ ಎದರುಗಡೆ ಕೀಳ ಜಾತಿಯವನಾದ ನೀನು ತಿರುಗಿ ಮಾತನಾಡುತ್ತೀಯಾ ಅಂತಾ ಕಾಲಿನಿಂದ ಒದ್ದನು. ಅಷ್ಟರಲ್ಲಿ ನಮ್ಮ ಅಜ್ಜಿಯವರಾದ ಮರೆಮ್ಮ ಗಂಡ ಮುದರಂಗಪ್ಪ ಇವರು ಚೀರಾಡುತ್ತ ಬಂದು ಗೌಡ್ರೆ ನನ್ನ ಮೊಮ್ಮನಿಗೆ ಹೊಡೆಯ ಬೇಡ್ರಿ ಅಂತಾ ಕಾಲಿಗೆ ಬಿದ್ದು ಬೇಡಿಕೊಂಡಾಗ ಬಿಟ್ಟು, ಆ ಮೇಲೆ ನನಗೆ ಇಷ್ಟಕ್ಕೆ ಬಿಟ್ಟಿದ್ದಿನಿ ಮುಂದೆ ಎಲ್ಲಿಗೆ ಆದರೂ ಹೋದರೆ ಸಣ್ಣಗೆ ಕಡಿಯುತ್ತೇನೆ ಅಂತಾ ನನಗೆ ಬಾಯಿಗೆ ಬಂದಂತೆ ಬೈದು ಹೋದನು. ಈ ಘಟನೆಯನ್ನು ನಮ್ಮೂರಿನ ಶೇಖಪ್ಪ ತಂದೆ ಸಾಯಬಣ್ಣ ಭಂಡಾರಿ ಇವರು ಸಹ ನೋಡಿ ಬಿಡಿಸಿರುತ್ತಾರೆ. ನಾನು ಈ ಬಗ್ಗೆ ನಮ್ಮ ಮನೆಯಲ್ಲಿ ಹಾಗು ಸಮಾಜದ ಹಿರಿಯರಲ್ಲಿ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದಿರುತ್ತೇನೆ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 202/17 ಕಲಂಃ  323 504 506 ಐ.ಪಿ.ಸಿ ಮತ್ತು 3 (1) (ಆರ್), 3 (1) (ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 168/2017 ಕಲಂ 279, 337, 338 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ;- ದಿನಾಂಕ 20.07.2017 ರಂದು ರಾತ್ರಿ 9 ಗಂಟೆಗೆ  ಫಿರ್ಯಾದಿ ಕಾಳಪ್ಪ ತಂದೆ ನಾಗಪ್ಪ ಬಡೆಗೇರ ಸಾ|| ಕರಣಗಿ ಗ್ರಾಮ ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕೋಟ್ಟ ಹೇಳಿಕೆ ಫಿಯರ್ಾದಿ ಎನಂದರೆ  ತಮ್ಮ ಆಣ್ಣತಮ್ಮಂದಿಯರ ಮಧ್ಯ ಆಸ್ತಿ ವಿಷಯದಲ್ಲಿ ತಕರಾರು ಇದ್ದ ಪ್ರಯುಕ್ತ ದಿನಾಂಕ: 20.07.2017 ರಂದು ಗುರುಮಠಕಲ್ ತಸೀಲ್ದಾರ ಕಾಯರ್ಾಲಯಕ್ಕೆ ಬಂದಿದ್ದು ಇತ್ತು. ಕೆಲಸ ಮುಗಿದ ನಂತರ ಮರಳಿ ತಮ್ಮ ಊರಿಗೆ ಹೋಗುವಾಗ ಮಾರ್ಗ ಮಧ್ಯ ತಮ್ಮ ಮನೆಯವರು ಮತ್ತು ಊರಿನವರು ಕುಳಿತು ಹೋಗುತ್ತಿರುವ ಆಟೋದ ಎದುರುಗಡೆ ಇಂದ ಬಂದ ಟ್ರ್ಯಾಕ್ಟರ ನಂಬರ ಎಪಿ 22-ಕ್ಯೂ-7673 ನೇದರ ಚಾಲಕ ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಆಟೋ ನಂಬರ ಕೆಎ-33-ಎ-0187 ನೇದ್ದರ  ಡಿಕ್ಕಿ ಪಡೆಸಿರುತ್ತಾನೆ. ಸದರಿ ಘಟನೆಯಲ್ಲಿ ವೀರಭದ್ರಪ್ಪ ತಂದೆ ನಾಗಪ್ಪ ಈತನು ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಲ್ಲದೇ ಇನ್ನೂ  7 ಜನರು ಗಾಯಗೊಂಡಿರುತ್ತಾರೆ ಅಂತಾ ವಗೈರೆ ಫಿಯರ್ಾದಿ.
 

BIDAR DISTRICT DAILY CRIME UPDATE 21-07-2017¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-07-2017

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 172/2017, PÀ®A. 379 L¦¹ :-
ಫಿರ್ಯಾದಿ ಶಿವಕುಮಾರ ತಂದೆ ವಿಶ್ವನಾಥ ತಮಸಂಗೆ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ದಾಡಗಿ, ತಾ: ಭಾಲ್ಕಿ ರವರ ಮದುವೆ 12 ವರ್ಷಗಳ ಹಿಂದೆ ಸಿದ್ದೇಶ್ವರ ಗ್ರಾಮದ ಚಿನ್ನಮ್ಮ ಇವಳೊಂದಿಗೆ ಆಗಿದ್ದು, ಮದುವೆಯಾದ ನಂತರ 2 ತಿಂಗಳವರೆಗೆ ಫಿರ್ಯಾದಿಯ ಜೋತೆ ಸರಿಯಾಗಿ ಸಂಸಾರ ಮಾಡಿ ನಂತರ ಜಗಳ ಮಾಡಿ ತನ್ನ ತವರಿಗೆ ಹೋರಟು ಹೋಗಿ ಅಲ್ಲಿಯೆ ಉಳಿದು ಫಿರ್ಯಾದಿಯ ಮೇಲೆ ಜೀವನಾಂಶ ಕೇಸನ್ನು ಹಾಕಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಹೆಂಡತಿಗೆ ಪ್ರತಿ ತಿಂಗಳು 2000/- ರೂ. ಕೊಡುವಂತೆ ಆದೇಶ ಮಾಡಿರುವದರಿಂದ 14 ತಿಂಗಳವರೆಗೆ ಫಿರ್ಯಾದಿಯು ತನ್ನ ಹೆಂಡತಿಗೆ ಜೀವನಾಂಶಕ್ಕಾಗಿ ಪ್ರತಿ ತಿಂಗಳು 2000/- ರೂ. ಕೊಡುತ್ತಾ ಬಂದಿದ್ದರು ಕೂಡ ಹೆಂಡತಿಯು ತನಗೆ ಹೋಡೆ ಬಡೆ ಮಾಡಿರುತ್ತಾನೆಂದು ಫಿರ್ಯಾದಿಯ ಮೇಲೆ ಸುಳ್ಳು ಕೇಸ ಮಾಡಿರುತ್ತಾಳೆ, ಜಿವನಾಂಶ ಕೇಸಿನಲ್ಲಿ ಫಿರ್ಯಾದಿಯ ಮೇಲೆ ವಾರಂಟ ಆಗಿರುವದರಿಂದ ದಿನಾಂಕ 15-07-2017 ರಂದು ಪೊಲೀಸರು ಫಿರ್ಯಾದಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಫಿರ್ಯಾದಿಯು ತನ್ನ ಟಿ.ವಿ.ಎಸ್ ನಂ. ಕೆ.ಎ-39/ಎಚ್-7804 ನೇದ್ದರ ಮೇಲೆ ನ್ಯಾಯಾಲಯಕ್ಕೆ ಬಂದು ನ್ಯಾಯಾಲಯದ ಆವರಣದಲ್ಲಿ ತನ್ನ ಟಿ.ವಿ.ಎಸ್ ನಿಲ್ಲಿಸಿ ಫಿರ್ಯಾದಿಗೆ ಪ್ರಕರಣದ ಕರೆ ಆದಾಗ ಫಿರ್ಯಾದಿಯು ನ್ಯಾಯಾಲಯದಲ್ಲಿ ಹೋಗಿ ಹೋರಗೆ ಬರುವಷ್ಟರಲ್ಲಿ ಟಿ.ವಿ.ಎಸ್ ಇರಲಿಲ್ಲ, ಫಿರ್ಯಾದಿಯು ನ್ಯಾಯಾಲಯದಲ್ಲಿ ಹೋಗುವದನ್ನು ನೋಡಿ ಆರೋಪಿತರಾದ 1) ಚಿನ್ನಮ್ಮ  UÀAqÀ ಶಿವಕುಮಾರ ತಮಸಂಗೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ದಾಡಗಿ, ತಾ: ಭಾಲ್ಕಿ (ಹೆಂಡತಿ), 2) ಪ್ರಭು ತಂದೆ ಬಂಡೇಪ್ಪಾ ಭೀಮಸೆ ಸಾ: ಸಿದ್ದೇಶ್ವರ, ತಾ: ಭಾಲ್ಕಿ (ಭಾವ) ಇವರಿಬ್ಬರು ಕೂಡಿ ಫಿರ್ಯಾದಿಯವರ ಸದರಿ ಟಿ.ವಿ.ಎಸ್ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-07-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉÆ°¸À oÁuÉ ©ÃzÀgÀ UÀÄ£Éß £ÀA. 144/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 20-07-2017 gÀAzÀÄ DmÉÆà £ÀA. n.J¸À-15/n.DgÀ-2338 £ÉÃzÀgÀ°è ¦üAiÀiÁð¢ CgÀÄtPÀĪÀiÁgÀ vÀAzÉ AiÉÄñÀ¥Áà ªÀAiÀÄ: 20 ªÀµÀð, eÁw: J¸ï.¹ ªÀiÁ¢UÀ, ¸Á: qÀªÀÇgÀ UÁæªÀÄ, vÁ: £ÁgÁAiÀÄtSÉÃqÀ, f: ¸ÀAUÁgÉrØ gÀªÀgÀÄ d»gÁ¨ÁzÀ¢AzÀ ©ÃzÀgÀ £ÀgÀ¹AºÀ gÀhÄgÀ£ÁPÉÌ ºÉÆÃUÀĪÁUÀÀ ©ÃzÀgÀ ªÀįÁÌ¥ÀÆgÀ gÉÆÃrUÉ JzÀÄj¤AzÀ AiÀiÁªÀÅzÉÆà MAzÀÄ ªÁºÀ£ÀzÀ ZÁ®PÀ vÀ£Àß ªÁºÀ£À CwêÉÃUÀ ºÁUÀÆ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽvÀÄ §gÀÄwÛgÀĪÀ DmÉÆà jPÁëPÉÌ rQÌ ºÉÆqÉzÀÄ ªÁºÀ£À ¸ÀªÉÄÃvÀ Nr ºÉÆÃVgÀÄvÁÛ£É, ¸ÀzÀj rQ̬ÄAzÁV ¦üAiÀiÁð¢AiÀÄ §® ºÀÄ©âUÉ, §®¨sÀÄdPÉÌ, PÀÄwÛUÉ »A¨sÁUÀPÉÌ  gÀPÀÛUÁAiÀÄ  UÀÄ¥ÀÛUÁAiÀĪÁVgÀÄvÀÛzÉ, DmÉÆà ZÁ®PÀ ¸ÀÄzsÁPÀgÀ EvÀ£À vÀÄnUÉ, ºÀuÉUÉ, vÀ¯ÉUÉ, ¨sÀPÀ½UÉ, §®¨sÀÄdPÉÌ JzÉUÉ, JqÀ Q«UÉ, ¨É¤ßUÉ, ªÉÆtPÁ°UÉ gÀPÀÛUÁAiÀÄ UÀÄ¥ÀÛUÁAiÀĪÁVzÀÄÝ, JqÀPÁ®Ä ¦Aræ ºÀwÛgÀ ªÀÄÄj¢gÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 20/07/2017 ರಂದು  ಕಡಗಂಚಿ ಗ್ರಾಮದ ಹನುಮಾನ ದೇವಸ್ಥಾನದ ಮುಂದಿನ ರಸ್ತೆಯ ಪಕ್ಕದಲ್ಲಿ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ  ಹಾಗು ಸಿಇಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ಕಡಗಂಚಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಮುಂದಿನ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿ ಸಲಾಗಿ ಬಸವರಾಜ ತಂದೆ ಶಾಂತಪ್ಪ ಪೊಲೀಸ್ ಪಾಟೀಲ್, ಸಾ:ಕಡಗಂಚಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3) ನಗದು ಹಣ 890/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಚಿತ್ರಪಟಗಳನ್ನು ತೋರಿಸಿ ಜೂಜಾಟವಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-07-2017 ರಂದು ಅಫಜಲಪೂರ ಪಟ್ಟಣದ ಶಾಸಕರ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯೆಕ್ತಿಗಳು 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತಮ್ಮ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದಾರೆ, ಅಂತಾ ಬೀಟ್ ಕರ್ತವ್ಯಕ್ಕೆ ಹೋದ ಚಿದಾನಂದ ಸಿಪಿಸಿ-1225 ರವರು ಮಾಹಿತಿ ತಿಳಿಸಿದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ  ಸ್ಥಳಕ್ಕೆ ಹೋದಾಗ ಮಾಹಿತಿ ನೀಡಿದ ನಮ್ಮ ಠಾಣೆಯ ಪಿಸಿ-1225 ಚಿದಾನಂದ ಇವರು ಜೂಜಾಡುತ್ತಿದ್ದ ವ್ಯೆಕ್ತಿಗಳನ್ನು ತೋರಿಸಿದ ಮೇರೆಗೆ, ಸದರಿ ಜೂಜಾಡುತ್ತಿದ್ದ ವ್ಯೆಕ್ತಿಗಳನ್ನು ನೋಡಲಾಗಿ, ಸದರಿ ವ್ಯೆಕ್ತಿಗಳು 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತಮ್ಮ ಹತ್ತಿರ ಇದ್ದ ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತಿದ್ದನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ, 1) ಚನ್ನು @ ಚನ್ನಪ್ಪ ತಂದೆ ಅರ್ಜುನ ಪರೀಟ್ ಸಾ|| ಸಿದ್ದರಾಮೇಶ್ವರ ಗುಡಿ ಹತ್ತಿರ ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನ ಹತ್ತಿರ ಜೂಜಾಟವಾಡುತ್ತಿದ್ದ ಒಂದು ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಒಂದು ಜೂಜಾಟದ ಪೇಪರ ಹಾಗೂ ಜೂಜಾಟಕ್ಕೆ ಸಂಬಂಧ ಪಟ್ಟ 270/- ರೂಪಾಯಿ ನಗದು ಹಣ ದೊರೆತವು, 2) ಶಂಖರ ತಂದೆ ಶ್ಯಾಮರಾವ ಪೋದ್ದಾರ ಸಾ|| ಅಕ್ಕಮಹಾಧೇವಿ ನಗರ ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನ ಹತ್ತಿರ ಜೂಜಾಟವಾಡುತ್ತಿದ್ದ ಒಂದು ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಒಂದು ಜೂಜಾಟದ ಪೇಪರ ಹಾಗೂ ಜೂಜಾಟಕ್ಕೆ ಸಂಬಂಧ ಪಟ್ಟ 430/- ರೂಪಾಯಿ ನಗದು ಹಣ ದೊರೆತವು, ಹೀಗೆ ಒಟ್ಟು 700 ನಗದು ಹಣ ಹಾಗೂ 2 ಪ್ಲೇಯಿಂಗ ಕಾರ್ಡಗಳನ್ನು ಅಕಿ-00 ಇವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 20-07-2017 ರಂದು ಗಸ್ತು ಸಂಖ್ಯೆ 5 ರ ಭೀಟ್ ಅಧಿಕಾರಿ ಆದ ಚಂದ್ರಶಾ ಹೆಚ್.ಸಿ-529 ರವರು ನನಗೆ ದೂರವಾಣಿ ಕರೆ ಮಾಡಿ, ಸ್ಥಳಿಯ ಅಫಜಲಪೂರ ಪಟ್ಟಣದ ವೆಂಕಟೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದಾನೆ, ಅಂತಾ ನನಗೆ ಮಾಹಿತಿ ತಿಳಿಸಿದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ  ಸ್ಥಳಕ್ಕೆ ಹೋದಾಗ ಮಾಹಿತಿ ನೀಡಿದ ನಮ್ಮ ಠಾಣೆಯ ಚಂದ್ರಶಾ ಹೆಚ್.ಸಿ-529 ಇವರು ಜೂಜಾಡುತ್ತಿದ್ದ ವ್ಯೆಕ್ತಿಯನ್ನು ತೋರಿಸಿದ ಮೇರೆಗೆ, ಸದರಿ ಜೂಜಾಡುತ್ತಿದ್ದ ವ್ಯೆಕ್ತಿಯನ್ನು  ನೋಡಲಾಗಿ, ಸದರಿ ವ್ಯೆಕ್ತಿ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ, ಸುರೇಶ ತಂದೆ ತಮ್ಮಣ್ಣ ಗಾಡಿವಡ್ಡರ ಸಾ|| ವೆಂಕಟೇಶ್ವರ ನಗರ ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನ ಹತ್ತಿರ ಜೂಜಾಟವಾಡುತ್ತಿದ್ದ ಒಂದು ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಒಂದು ಜೂಜಾಟದ ಪೇಪರ ಹಾಗೂ ಜೂಜಾಟಕ್ಕೆ ಸಂಬಂಧ ಪಟ್ಟ 410/- ರೂಪಾಯಿ ನಗದು ಹಣ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ. ಹೇಮಾವತಿ ಗಂಡ ದಯಾನಂದ ಕಮ್ಮನ ಸಾ:ಜವಳಗಾ (ಬಿ)  ತಾ:ಆಳಂದ ಜಿ:ಕಲಬುರಗಿ  ಹಾಲಿ ವಸತಿ ಕೃಷ್ಣಾ ಕಾಲೋನಿ ಪಿಲ್ಟರ ಬೇಡ್ ಕಲಬುರಗಿ ಇವರು ದಿನಾಂಕ 20/07/2017 ರಂದು ಬೆಳಿಗ್ಗೆ 07.00 ಗಂಟೆ ಸುಮಾರಿಗೆ ಊಟ ಮಾಡಿ ಕೂಲಿ ಕೆಲಸಕ್ಕೆ ಹೋಗುತ್ತೆನೆಂದು ಮನೆಯಿಂದ ಆಳಂದ ಚೆಕ್ಕಪೋಷ್ಟಕಡೆಗೆ  ಹೋದನು ನಂತರ 08.30 ಎಎಮ್ ದ ಸುಮಾರಿಗೆ ಅನೀಲಕುಮಾರ ಎಲಿಂತ್ರಿ ಎಂಬುವರು ನಮಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನನ್ನ ಗಂಡ ದಯಾನಂದ ಇತನು ಆಳಂದ ಚೆಕ್ಕ ಪೋಷ್ಟದಿಂದ ಹುಮನಾಬಾದ ರಿಂಗರೋಡ ಕಡೆಗೆ ಬರುವ ರಿಂಗರೋಡನ 300 ಮೀಟರ್ ಅಂತರದಲ್ಲಿ ದಯಾನಂದನು ರಿಂಗರೋಡ ಮಧ್ಯದ  ಡಿವೈಡರಅನ್ನು ದಾಟುವಾಗ ಅದೇ ವೇಳೆಗೆ ಆಳಂದ ಚೆಕ್ಕಪೋಷ್ಟ ಕಡೆಯಿಂದ  ಒಂದು ಸ್ಕೂಲ್ ಬಸ್ ಚಾಲಕನು ತನ್ನ ಸ್ಕೂಲ್ ಬಸನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ದಯಾನಂದಗೆ ಜೋರಾಗಿ ಡಿಕ್ಕಿ ಹೊಡೆದಿದ್ದು ಆಗ ದಯಾನಂದ ಕೆಳಗೆ ಬಿದ್ದಾಗ ರೋಡಿಗೆ ಹೋಗುತ್ತಿದ್ದ ನಾನು ಮತ್ತು ನನ್ನ ಗೆಳೆಯ ಅಜೇಯಕುಮಾರ ಸಿಂಗೆ ಇಬ್ಬರೂ ಕೂಡಿಕೊಂಡು ದಯಾನಂದನಿಗೆ ನೋಡಲಾಗಿ ಆತನ ಎಡಬಾಗದಲ್ಲಿ ಕೀವಿಯ ಹತ್ತೀರ ಭಾರಿ ರಕ್ತಗಾಯವಾಗಿರುತ್ತದೆ.  ನಾವು ಸರ್ಕಾರಿ ಆಸ್ಪತ್ರೇಗೆ ಅಟೋದಲ್ಲಿ ತೆಗೆದುಕೊಂಡು ಹೋಗಿರುತ್ತೇವೆ ಆಸ್ಪತ್ರಗೆ ಬರಲು ತಿಳಿಸಿದರು. ಆಗ ನಾನು ಮತ್ತು ನಮ್ಮ ಮನೆಯ ಪಕ್ಕಾದ ಶ್ರೀದೇವಿ ಚವ್ಹಾಣ ಕೂಡಿಕೊಂಡು ಒಂದು ಆಟೋದಲ್ಲಿ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವೈಧ್ಯರು ತಿಳಿಸಿದ್ದೇನೆಂದರೆ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು ನನ್ನ ಗಂಡನನ್ನು ನೋಡಲಾಗಿ ಆತನ ತಲೆಯ ಎಡಗಡೆ  ಭಾರಿ ಪೆಟ್ಟಾಗಿರುತ್ತದೆ ಮತ್ತು ಎಡ ಕಪಾಳಕ್ಕೆ ಎಡ , ಕಿವಿಯ ಹತ್ತೀರ ಭಾರಿ ರಕ್ತಗಾಯವಾಗಿ ಚಪ್ಪಟೆಯಾದಂತೆ ಆಗಿತ್ತು . ಬಲಕಿವಿಯಿಂದ ರಕ್ತ ಸ್ರಾವವಾಗಿರುತ್ತದೆ  ಹಾಗೂ ಎಡಗಣ್ಣಿನ ಕೆಳಗೆ ರಕ್ತಗಾಯ ಹಾಗೂ ಎಡಗಾಲು ಮೋಳಕಾಲಿಗೆ ತರಚಿದ ಗಾಯಗಳಾಗಿದ್ದು ಆಗ ಅಲ್ಲಿಯೇ ಇದ್ದ ಅನೀಲಕುಮಾರನಿಗೆ ವಿಚಾರಿಸಲಾಗಿ ಮುಂಜಾನೆ 08.25 ಗಂಟೆಗೆ ನನ್ನ ಗಂಡ ರೋಡ ಕ್ರಾಸ ಮಾಡುವಾಗ ಒಂದು ಸ್ಕೂಲ ಬಸ್ ನಂಬರ ಕೆಎ-32-ಬಿ-0491 ಇದ್ದು ಅದರ ಚಾಲಕನ ಹೆಸರು ಕೇಳಿ ಗೊತ್ತಾದ ಸಂತೋಷ ಸಿಂಗ ಠಾಕೂರ ಸಾ:ಬ್ರಹ್ಮಪೂರ ಎಂಬುವನು ತನ್ನ ಬಸ್ಸನ್ನು ಅತೀ-ವೇಗ ಮತ್ತು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ದಯಾನಂದನಿಗೆ ಡಿಕ್ಕಿ ಹೊಡೆದಿರತ್ತಾನೆ . ಸದರಿ ಬಸ್ ರೋಡಿನ ಪಕ್ಕದಲ್ಲಿ ನಿಂತಿರುತ್ತದೆ ಅಂತ ತಿಳಿಸಿದನು. ಆದ್ದರಿಂದ ಸದರಿ ಸ್ಕೂಲ ಬಸ್ ನಂ.ಕೆಎ-32-ಬಿ-0491 ನೇದ್ದರ ಚಾಲಕ ಸಂತೋಷ ಸಿಂಗ ಠಾಕೂರ ಇತನ ಮೇಲೆ ಕಾನೂನು ಕ್ರಮ ಜರಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ಶ್ರೀ ಅನುರಾಜ ತಂದೆ ಬಂಡೆಪ್ಪಾ ಮೇತ್ರೆ ಸಾಃ ಬೀದರ ಇವರು ದಿನಾಂಕ 04/07/2017 ರಂದು ಮಧ್ಯಾಹ್ನ ಕಲಬುರಗಿ ಕೊರ್ಟ ಆವರಣದಲ್ಲಿ ಮೆಂಟೆನೆನ್ಸ ಕಟ್ಟಿ ಬರುವಾಗ ಏಕಾ ಏಕಿ ತನ್ನ ಮಾವನಾದ ಬಾಬುರಾವ ಬಾಜಿ ರವರು ತಡೆದು ಹಲ್ಲೆ ನಡೆಸಿ ಜೀವದ ಬೆದರಿಕೆ ಹಾಕಿದ್ದು ಇದೆ. ತರುವಾಯ ಜಿಲ್ಲಾ ಆಸ್ಪತ್ರೆಗೆ ನಾನು ಪ್ರಥಮ ಚಿಕಿತ್ಸೆ ಪಡೆದಿರುತ್ತೇನೆ. ಎದೆಯ ಮೇಲೆ ಗುದ್ದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.       
ಶಾಹಾಬಾದ ನಗರ ಠಾಣೆ : ಫಿರ್ಯಾದಿಯ ತಂಗಿಯಾದ ಸೈಯದಾ ರುಬೀನಾ ಇವಳಿಗೆ ಅವಳ ಗಂಡ ಮತ್ತು ಗಂಡನ  ಮನೆಯವರು ದಿನಾಂಕ: 18/05/2017 ರಂದು ಉಮರ ಫಾರೂಖ ಕಾಲೋನಿಯಲ್ಲಿ ರುಬಿನಾಳನ್ನು ಅವರ ಅತ್ತೆ , ಭಾವ , ಭಾವನ ಹೆಂಡತಿ ಮತ್ತು ನಾದನಿಯಂದಿರು ಕೋಲೆ ಮಾಡಿದ್ದು ಇರುತ್ತದೆ. ಈಗ ರುಬಿನಾಳ ಕೋಲೆಯಾದ ನಂತರ ಪ್ರಕರಣದಾಖಲಾಗಿರುತ್ತದೆ. ಆದರೆ ರುಬಿನಾಳ ಗಂಡನ ಮನೆಯವರು ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ನಮ್ಮ ಮನೆಯಲ್ಲಿ ನಾನು ಯಾಸ್ಮಿನ ಬಾನು ನನ್ನ ತಾಯಿ ಸೈಯದಾ ಮೆಹೆರುನಿಸಾ ನನ್ನ ಮಗ ಸೈಯದ ಅಫತಾಬ ಅಲಿ & ರುಬಿನಾಳ ಮಗಳು ಸೈಯದಾ ಫಬೆಹಾಉಫಖ ರಜ್ವಿ ಇರುತ್ತಾರೆ ಮತ್ತು ನನ್ನ ಇನ್ನೋರವ ತಂಗಿಯಾದ ಮತ್ತಿನ ಅವರ ನಾಲ್ಕು ಜನ ಮಕ್ಕಳು ಮತ್ತು ಅವಳ ಗಂಡ ಇವರೆಲ್ಲರ ಮತ್ತು ಶಬಾನಾ ಅವಳ 2 ಮಕ್ಕಳು ಮತ್ತು ಗಂಡ ಇವರೆಲ್ಲರ ಮೇಲೆ ಜೀವ ಬೆದರಿಕೆ ಹಾಕುತ್ತಿದ್ದಾರೆ  ಈ ಮೇಲೆ ನಮೂದಿಸಿದ ಎಲ್ಲರ ಜೀವಕ್ಕೆ ಏನಾದರೂ ಆದರೆ ರುಬಿನಾಳ ಗಂಡನ ಮನೆಯವರೆ ಕಾರಣರಾಗಿರುತ್ತಾರೆ.  ಮತ್ತು ನಮ್ಮ ತಂದೆಯವರಿಗೂ ಕೂಡ ಬೆದರಿಸುತ್ತಿದ್ದಾರೆ ರುಬಿನಾಳ ಗಂಡ ಹೊರ ದೇಶದಲ್ಲಿದ್ದು ಅಲ್ಲಿಂದ ಕರೆ ಮಾಡಿ ಕೇಸ ವಾಪಸ ತೆಗೆದುಕೊಳ್ಳಿ ಇಲ್ಲವಾದರೆ ನಿಮ್ಮನ್ನು ಬಿಡುವುದಿಲ್ಲಾ ವೆಂದು ಬೆದರಿಸುತ್ತಿದ್ದಾರೆ ಮೇಲೆ ಹೇಳಿದ ಯೋರೋಬರಿಗೂ ಏನಾದರೂ ಆದರೆ ರುಬಿನಾಳ ಗಂಡನ ಮನೆಯವರೆ ಕಾರಣರಾಗಿರುತ್ತಾರೆ ತಾವು ಇವರೆಲ್ಲಾರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಅಂತಾ ಶ್ರೀಮತಿ ಯಾಸ್ಮಿನ ಬಾನು ಗಂಡ ಸೈಯದ ನಯಿಮೋದ್ದಿನ ಸಾ: ಶಾಂತನಗರ ಭಂಕೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.